Monday, September 8, 2014

ಸೋಲೆ ಗೆಲುವಿನ ಮೆಟ್ಟಿಲು : ನಿ.ಪ್ರಾಂಶುಪಾಲ ಎ.ಎನ್.ವಿಶ್ವೇಶ್ವರಯ್ಯ
ಚಿಕ್ಕನಾಯಕನಹಳ್ಳಿ : ಶ್ರೇಷ್ಠ ಸಾಧಕರನೇಕರು ಹಲವು ಸೋಲುಗಳನ್ನು ಕಂಡಿದ್ದರೂ ಎಡಬಿಡದೆ ಸಾಧನೆಯ ಬೆನ್ನು ಹತ್ತಿದ್ದರಿಂದಾಗಿ ಇಂದು ಸಾಧಕರೆನಿಸಿಕೊಂಡಿದ್ದಾರೆ, ಹಾಗೆಯೇ ವಿದ್ಯಾಥರ್ಿಗಳಾದ ನೀವು ಸೋಲಿಗೆ ಅಂಜದೆ ಮುನ್ನಡೆದರೆ ನೀವು ಸಾಧಕರನೆಸಿಕೊಳ್ಳಬಹುದು ಎಂದು  ಪ್ರಥಮ ದಜರ್ೆ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಎ.ಎನ್.ವಿಶ್ವೇಶ್ವರಯ್ಯ ಹೇಳಿದರು.
ಪಟ್ಟಣದ ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನ 2014-15ನೇ ಸಾಲಿನ ಕ್ರೀಡಾ, ಸಾಂಸ್ಕೃತಿಕ, ಎನ್.ಎಸ್.ಎಸ್, ರೆಡ್ ಕ್ರಾಸ್, ಸ್ಕೌಟ್ಸ್ ಮತ್ತು ಗೈಡ್ಸ್ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ವಿದ್ಯುತ್ ಬಲ್ಪ್ ಕಂಡು ಹಿಡಿದ ಥಾಮಸ್ ಆಲ್ವ ಎಡಿಸನ್ ಅಂಗವಿಕಲನಾದರೂ ಶ್ರೇಷ್ಠ ಸಾಧನೆ ಮಾಡಿದವರು  ಅಮೆರಿಕಾದಲ್ಲಿ ಮೂರು ಬಾರಿ ಅಧ್ಯಕ್ಷರಾಗಿದ್ದ ರೂಸ್ವೆಲ್ಟ್, ರಾಷ್ಟ್ರಪತಿಯಾಗಿದ್ದ ಎ.ಪಿ.ಜೆ ಡಾ.ಅಬ್ದುಲ್ಕಲಾಂ ಹಾಗೂ ಇನ್ನಿತರ ಹಲವು ಸಾಧಕರು ಸೋಲುಗಳ ನಂತರ ಗೆಲುವು ಪಡೆದವರಾಗಿದ್ದು, ಜೀವನದಲ್ಲಿ ಸೋಲನ್ನು ಅನುಭವಿಸಿದೆ ಎಂದು ಹಿಂಜರಿಯುವುದಕ್ಕಿಂತ ಸೋಲೇ ಗೆಲುವಿನ ಮೆಟ್ಟಿಲು ಎಂದು ಭಾವಿಸಿದರೆ ನೀವೂ ಸಾಧಕರ ಸಾಲಿನಲ್ಲಿ ನಿಲ್ಲುತ್ತೀರ ಎಂದರಲ್ಲದೆ, ರಾಷ್ಟ್ರ, ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿರುವ ಹಲವರು ತಮ್ಮ ಸಾಧನೆಗಾಗಿ ಶ್ರಮ ಪಟ್ಟಿದ್ದಾರೆ, ಆ ಸಮಯದಲ್ಲಿ ಸಾಧಕರಿಗೆ ಎದುರಾಗುವ ಹಲವು ತೊಂದರೆಗಳನ್ನು ಧೈರ್ಯ, ಶ್ರಧ್ದೆ, ಆಸಕ್ತಿ ಮೂಲಕ ಸಾಧಿಸುವ ಛಲ ಹೊಂದಿದ್ದರಿಂದಲೇ ಅವರ ಹೆಸರು ನಾವು ಇಂದು ಬಳಸುತ್ತಿರುವುದು, ಆ ಸಾಧಕರಂತೆ ಮನಸ್ಸಿದ್ದರೆ ಮಾರ್ಗದ ದಾರಿಯಲ್ಲಿ ಮುಂದಾಗಬೇಕು ಆಗಲೇ ತಮ್ಮ ಸಾಧನೆಗೆ ಯಾವ ತೊಂದರೆ ಎದುರಾದರೂ ಗೆಲುವು ನಮ್ಮದಾಗುತ್ತದೆ ಎಂದರು.
ಯಾವುದೇ ವಿಷಯದಲ್ಲಿ ಗೆಲುವು ಸಾಧಿಸಲು ಶ್ರದ್ದೆ, ಆಸಕ್ತಿ ಬಹಳ ಮುಖ್ಯವಾಗಿದೆ, ಶ್ರದ್ಧೆಯಿದ್ದರೆ ಗೆದ್ದೆ ಇಲ್ಲದಿದ್ದರೆ ಬಿದ್ದೆ ಎಂದು ಭಾವಿಸಿಕೊಂಡು ಇಡುವ ಪ್ರತಿ ಹೆಜ್ಜೆಯಲ್ಲೂ ಶ್ರದ್ದೆಗೆ ಪ್ರಾಮುಖ್ಯತೆ ನೀಡಿ ಎಂದು ಸಲಹೆ ನೀಡಿದ ಅವರು, ಹೂವು ಅರಳಿ ಒಂದೇ ದಿನದಲ್ಲಿ ತನ್ನ ಸೇವೆಯನ್ನೂ ಎಲ್ಲರಿಗೂ ನೀಡುತ್ತದೆ ನಾವು ಹುಟ್ಟಿದ ಮೇಲೆ ಎಂದಾದರೂ ಮಣ್ಣಾಗಲೇ ಬೇಕು ಆ ಮಧ್ಯದಲ್ಲಿ ಏನಾದರೂ ಸಾಧಿಸಬೇಕು ಛಲ ಹೊಂದಬೇಕು ಎಂದರು.
ಪ್ರಾಂಶುಪಾಲ ವಿ.ವರದರಾಜು ಮಾತನಾಡಿ ಮನುಷ್ಯನ ದೇಹ ಹಾಗೂ ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಂಡಾಗ ಮಾತ್ರ ನಾವು ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಲು ಸಾಧ್ಯ ಎಂದರು.
ಕಾಂಗ್ರೆಸ್ ಮುಖಂಡ ಸೀಮೆಎಣ್ಣೆ ಕೃಷ್ಣಯ್ಯ ಮಾತನಾಡಿ ಕೇರಳದಲ್ಲಿ ಹುಟ್ಟಿದ ಗ್ರಾಮೀಣ ಭಾಗದ ಹುಡುಗಿ ಪಿ.ಟಿ.ಉಷಾ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿ ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಪುರಸಭಾ ಉಪಾಧ್ಯಕ್ಷೆ ನೇತ್ರಾವತಿ, ಅಭಿವೃದ್ದಿ ಸಮಿತಿಯ ಧನಪಾಲ್, ಟಿ.ಆರ್.ವಾಸುದೇವ್, ಪ್ರಥಮ ದಜರ್ೆ ಸಹಾಯಕ ಬಸವರಾಜ್ ಉಪಸ್ಥಿತರಿದ್ದರು.
  ಕಾರ್ಯಕ್ರಮದಲ್ಲಿ ಉಪನ್ಯಾಸಕ ಪ್ರಸನ್ನ ನಿರೂಪಿಸಿದರೆ, ಶಿವರಾಮಯ್ಯ ಸ್ವಾಗತಿಸಿದರು.