Saturday, August 13, 2011



ಸಂಘಟನೆ ಹಿಂದುಳಿವಿಕೆಗೆ ಸಂಘಟನೆಯ ಮುಖಂಡರೇ ಕಾರಣಚಿಕ್ಕನಾಯಕನಹಳ್ಳಿ,ಆ.13 :

ಪ್ರತಿಯೊಂದು ಸಮಾಜದಲ್ಲೂ ಸಂಘಟನೆ ಬೆಳೆದಿದೆ ಆದರೆ ಸಂಘಟನೆಯಲ್ಲಿನ ಮುಖಂಡರು ತಮ್ಮ ಸ್ವಾರ್ಥಕ್ಕಾಗಿ ತಳ ಮಟ್ಟದಲ್ಲಿ ಸಂಘಟನೆ ಬೆಳೆಸುತ್ತಿಲ್ಲ ಎಂದು ಕನಕ ಗುರು ಪೀಠದ ಈಶ್ವರಾನಂದಪುರಿ ಸ್ವಾಮೀಜಿ ವಿಷಾಧಿಸಿದರು. ಪಟ್ಟಣದ ಕನಕ ಭವನದಲ್ಲಿ ನಡೆದ ಕನಕ ಭವನದ ಮೊದಲನೇ ಹಂತದ ಕಾಮಗಾರಿ ಚಾಲನಾ ಸಮಾರಂಭ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ 215ನೇ ಜಯಂತ್ಯೋತ್ಸವ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ಸಂಘಟನೆಯ ಮೇಲ್ವಿಚಾರಣೆ ವಹಿಸಿಕೊಳ್ಳುವವರು, ಸಂಘಟನೆಯ ನಿರ್ವಹಣೆ ನೆರವೇರಿಸುವವರು ಸ್ವಾರ್ಥವನ್ನು ಬಿಟ್ಟು ಸಮಾಜದ ಸಂಘಟನೆಗಾಗಿ ಶ್ರಮಿಸಿದರೆ ಸಂಘಟನೆ ತಾನಾಗಿಯೇ ಒಗ್ಗೂಡುತ್ತದೆ, ಅವರು ಅಸೂಹೆ, ದ್ವೇಷ, ಕೆಡುಕುಗಳನ್ನು ಬಿಡಬೇಕು ಎಂದರಲ್ಲದೆ, ಸ್ವಾಥರ್ಿಗಳು ಹೆಚ್ಚಾಗಿ ಕೆಡುಕುಗಳನ್ನು ಉಂಟು ಮಾಡುತ್ತಾರೆ ಅವರು ಸರಿದಾರಿಯಲ್ಲಿ ನಡೆದರೆ ಸಂಘಟನೆಯು ಸಮಾಜದ ಎಲ್ಲರೊಂದಿಗೆ ಬೆರೆಯುತ್ತದೆ ಎಂದ ಅವರು ಕನಕ ಭವನವು ತಾಲ್ಲೂಕಿನಲ್ಲಿ ಬಿಟ್ಟರೆ ಜಿಲ್ಲೆಯ ಬೇರೆ ಯಾವ ಭಾಗದಲ್ಲೂ ಇಲ್ಲದಿರುವುದು ತಾಲ್ಲೂಕುಗಳಲ್ಲಿನ ಸಂಘಟನೆಯ ಕೊರತೆಯನ್ನು ಎತ್ತಿತೋರುತ್ತದೆ ಎಂದು ವಿಷಾದಿಸಿದರು. ಸಂಸದ ಜಿ.ಎಸ್.ಬಸವರಾಜು ಮಾತನಾಡಿ ಸಂಗೊಳ್ಳಿರಾಯಣ್ಣನು ಸ್ವಾಮಿನಿಷ್ಠೆ, ದೇಶಭಿಮಾನದಿಂದ ಸ್ವಾತಂತ್ರಕ್ಕಾಗಿ ದುಡಿದವರು, ರಾಯಣ್ಣ ಸ್ವಾರ್ಥವನ್ನು ಮೈಗೂಡಿಸಿಕೊಳ್ಳದೆ ತಮ್ಮ ಸ್ವಂತ ಛಲ, ನಂಬಿಕೆಯಿಂದ ಹೋರಾಡಿದವರು, ಅವರಂತೆ ಆತ್ಮಸ್ಥೈರ್ಯದಿಂದ ದುಡಿದಾಗಲೇ ಶ್ರಮಕ್ಕೆ ತಕ್ಕ ಪ್ರತಿಫಲ ದೊರಕಿ ವ್ಯಕ್ತಿ ಏಳಿಗೆ ಕಾಣಲು ಸಾಧ್ಯ ಎಂದ ಅವರು ಕನಕ ಭವನದ ಕಾಮಗಾರಿಗೆ 5 ಲಕ್ಷ ರೂಗಳನ್ನು ಕೊಡುವುದಾಗಿ ತಿಳಿಸಿದ ಅವರು, ಮೊದಲ ಕಂತಿನಲ್ಲಿ 3 ಲಕ್ಷ ರೂ ಹಾಗೂ ಡಿಸಂಬರ್ ನಂತರ 2 ಲಕ್ಷ ರೂಗಳನ್ನು ಕೊಡುವುದಾಗಿ ತಿಳಿಸಿದರು. ವಿಧಾನ ಪರಿಷತ್ ಸದಸ್ಯ ಡಾ.ಎಂ.ಆರ್.ಹುಲಿನಾಯ್ಕರ್ ಮಾತನಾಡಿ ಜವಳಿ ಉದ್ಯಮದಲ್ಲಿ ಬಟ್ಟೆಗೆ ಸಿಗುವ ಬೆಲೆಯಂತೆ ಉಣ್ಣಗೆ ಸಿಗುತ್ತಿಲ್ಲ ಇದರಿಂದ ಉಣ್ಣೆ ಉತ್ಪಾದನೆ ಮಾಡುವವರು ಆಥರ್ಿಕ ಸಬಲತೆಯಿಂದ ದೂರವಿದ್ದಾರೆ, ನೇಕಾರರು ತಮ್ಮ ಏಳಿಗೆಗಾಗಿ ಸಂಘಟನೆಯ ಮೂಲಕ ಹೋರಾಡಬೇಕು ಎಂದರು. ಪ್ರಜಾಪ್ರಗತಿ ಪತ್ರಿಕೆ ಸಂಪಾದಕ ಎಸ್.ನಾಗಣ್ಣ ಮಾತನಾಡಿ ಸಮಾಜದಲ್ಲಿ ಸಂಘಟನೆ ಹಿಂದುಳಿದಿರುವುದಕ್ಕೆ ಮುಖ್ಯ ಕಾರಣ ಕೀಳರಿಮೆ, ಹಿಂಜರಿತನ ಇವುಗಳನ್ನು ಮೀರಿ ನಮ್ಮನ್ನು ನಾವು ಮೇಲು ಎಂದು ಭಾವಿಸಿದಾಗಲೇ ಸಂಘಟನೆ ಬೆಳೆಯುತ್ತದೆ ಎಂದ ಅವರು ತಾಲ್ಲೂಕಿನಲ್ಲಿ ಸಾಂಘಿಕ ಚಟುವಟಿಕೆಗಳು ನಡೆಯುತ್ತಿದ್ದರೂ ಜಾತಿ ವಿಷಯಗಳು ಬಂದಾಗ ಸಂಘಟನೆ ಹಿಂದುಳಿಯುತ್ತದೆ ಎಂದ ಅವರು, ಜಾತಿ ಸಂಘಟನೆ ಮಾಡಬೇಕೆಂದಾಗ ಬೇರೆ ಜಾತಿಯನ್ನು ಹಿಂದಿಕ್ಕಬೇಕು ಎಂಬ ಭಾವನೆ ಬರಬಾರದು ಬೇರೆ ಜಾತಿಯ ಜೊತೆಗೆ ಅವರವರ ಜಾತಿಯನ್ನು ಮುಖ್ಯವಾಹಿನಿಗೆ ತರುವ ಮಾರ್ಗಗಳನ್ನು ಸಂಘಟನೆಯ ಮೂಲಕ ಬೆಳಸಬೇಕು ಎಂದರು. ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ ಸಂಘಟನೆ ಎಂದ ಮೇಲೆ ಸಮಾಜದ ಎಲ್ಲರೂ ಒಗ್ಗಟ್ಟಾಗಿ ಕಾರ್ಯನಿರ್ವಹಿಸಿ ಅಭಿವೃದ್ದಿಯತ್ತ ಕೊಂಡೊಯ್ಯಬೇಕಾಗಿದೆ, ಕನಕ ಭವನದ ಕಾಮಗಾರಿಗಾಗಿ ತಮ್ಮ ಅನುದಾನದಲ್ಲಿ 10 ಲಕ್ಷ ರೂಗಳನ್ನು ನೀಡುವುದಾಗಿ ತಿಳಿಸಿದರು. ಸಮಾರಂಭದಲ್ಲಿ ಮಾಜಿ ಶಾಸಕ ಬಿ.ಲಕ್ಕಪ್ಪ, ಕನ್ನಡ ಸಂಘದ ಅಧ್ಯಕ್ಷ ಸೀಮೆಎಣ್ಣೆ ಕೃಷ್ಣಯ್ಯ, ಕಂಬಳಿ ಸೊಸೈಟಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ಮಾತನಾಡಿದರು. ಸಮಾರಂಭದಲ್ಲಿ ಪುರಸಭಾಧ್ಯಕ್ಷ ಸಿ.ಎಲ್.ದೊಡ್ಡಯ್ಯ, ತಾ.ಭಾಜಪ ಅಧ್ಯಕ್ಷ ಶಿವಣ್ಣ(ಮಿಲ್ಟ್ರಿ), ಜಿ.ಪ್ರಾ.ಶಾ.ಶಿ ಸಂಘದ ಅಧ್ಯಕ್ಷ ಆರ್.ಪರಶಿವಮೂತರ್ಿ, ಭೈರವ ಮೈನ್ಸ್ ಮಾಲೀಕ ಸಿ.ಡಿ.ಸುರೇಶ್, ಬಿ.ಎನ್.ಶಿವಪ್ರಕಾಶ್, ಪುರಸಭಾ ಸದಸ್ಯರಾದ ದೊರೆಮುದ್ದಯ್ಯ, ರಾಜಣ್ಣ, ರಂಗಸ್ವಾಮಯ್ಯ , ರೇವಣ್ಣ ಒಡೆಯರ್ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಪಲ್ಲಕ್ಕಿ ಬಸವರಾಜು ಸ್ವಾಗತಿಸಿದರೆ, ರವಿಕುಮಾರ್ ನಿರೂಪಿಸಿ, ವಂದಿಸಿದರು.