Monday, August 4, 2014


ಸ್ವಂತಕ್ಕಾಗಿ ಸ್ವಲ್ಪ, ಸಮಾಜಕ್ಕಾಗಿ ಸರ್ವಸ್ವ ತತ್ವದಿಂದ ಬಾಳಿ : ಹೊಸೂರಪ್ಪ
ಚಿಕ್ಕನಾಯಕನಹಳ್ಳಿ,ಆ.04 : ಸ್ವಂತಕ್ಕಾಗಿ ಸ್ವಲ್ಪ, ಸಮಾಕ್ಕಾಗಿ ಸರ್ವಸ್ವ ಎಂಬ ತತ್ವದಡಿ ಬಾಳಿದರೆ ಬಡವರಿಗೆ ಸಹಾಯದ ಹಸ್ತ ನೀಡುವ ಜೊತೆಯಲ್ಲಿ ನೆರವಾದವರಿಗೆ ತೃಪ್ತಿಯೂ ದೊರಕುತ್ತದೆ ಎಂದು ಶಾಲಾ ಹಿರಿಯ ವಿದ್ಯಾಥರ್ಿ  ಹೊಸೂರಪ್ಪ ಹೇಳಿದರು.
ಪಟ್ಟಣದ ಕುರುಬರಶ್ರೇಣಿ ಶಾಲೆಯಲ್ಲಿ ಶಾಲಾ ಮಕ್ಕಳಿಗೆ ನೋಟ್ ಪುಸ್ತಕಗಳನ್ನು ವಿತರಿಸಿ ಮಾತನಾಡಿದ ಅವರು, ನಮ್ಮ ತಾಯಿಯ ನೆನಪಿನಲ್ಲಿ ಪ್ರತಿ ವರ್ಷವೂ ಶಾಲಾ ಮಕ್ಕಳಿಗೆ ನೋಟ್ ಪುಸ್ತಕಗಳನ್ನು ನೀಡುತ್ತಿದ್ದು ಪ್ರತಿ ವರ್ಷ ಇದೇ ಮಾದರಿಯಲ್ಲಿ ನಿರಂತರವಾಗಿ ಸೇವೆ ಮಾಡುವ ಉದ್ದೇಶ ಹೊಂದಿದ್ದೇನೆ ಎಂದರಲ್ಲದೆ, ನಾನೂ ಕೂಡ ಶಾಲೆಯೊಂದರ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದು ನಮ್ಮ ಶಾಲೆಯಲ್ಲಿ ಮಕ್ಕಳಿಗೆ ಸಂಜೆ 6ರವರಗೆ ಬೋಧನೆ ಮಾಡಿದರ ಪರಿಣಾಮ ಇಂದು ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ನಮ್ಮ ಶಾಲೆ ಪ್ರಥಮ ಸ್ಥಾನದಲ್ಲಿದೆ, ಕೆಲವು ಕಂಪನಿಗಳಲ್ಲಿ ಸೇವೆ ಸಲ್ಲಿಸುತ್ತಿರುವ ಇಂಜನಿಯರ್ಗಳು ನಮ್ಮ ಶಾಲೆಗೆ ಪ್ರತಿ ಶನಿವಾರ, ಭಾನುವಾರ ಆಗಮಿಸಿ ಇಂಗ್ಲಿಷ್ ಭಾಷೆಯನ್ನು ಮಕ್ಕಳಿಗೆ ಕಲಿಸುತ್ತಿದ್ದಾರೆ ಈ ರೀತಿ ಹಣ ನಿರೀಕ್ಷಿಸದಂತಹ ದಾನಿಗಳು ಸೇವೆ ಸಲ್ಲಿಸಿದಾಗ ನಿಜವಾದ ಸೇವೆಯಾಗುತ್ತದೆ ಎಂದರು.
ಶಾಲೆಯ ಮುಖ್ಯೋಪಾಧ್ಯಯ ತಿಮ್ಮಾಭೋವಿ ಮಾತನಾಡಿ ಮನೆಯಲ್ಲಿ ಹಿರಿಯರು ಹೊಂದುವ ಆಲೋಚನೆಗಳನ್ನು ಮಕ್ಕಳು ಮಾದರಿ ಮಾಡಿಕೊಳ್ಳುತ್ತಾರೆ, ಉತ್ತಮ ಮೌಲ್ಯಗಳನ್ನು ಮೈಗೂಡಿಸಿಕೊಂಡು ಬಾಳಿದರೆ ಮಕ್ಕಳು ಅದನ್ನೇ ಅನುಸರಿಸಿ ಇತರರಿಗೆ ಮಾದರಿಯಾದಾಗ ಸೇವೆ ಮಾಡಿದ ಉದ್ದೇಶ ಸಫಲವಾಗುತ್ತದೆ ಎಂದು ಅಭಿಪ್ರಾಯಪಟ್ಟರು. 
ಸಮಾರಂಭದಲ್ಲಿ ಶಾಲಾ ಹಿರಿಯ ವಿದ್ಯಾಥರ್ಿ ಬಿ.ಎಂ. ಪ್ರಸಾದ್, ಎಸ್.ಆರ್.ಪೂಜಾ, ಎಸ್.ಡಿ.ಎಂ.ಸಿ ಅಧ್ಯಕ್ಷ ಎ.ಎಸ್.ರಾಜೇಶ್, ಶಿಕ್ಷಕರುಗಳಾದ ಶಿವಕುಮಾರ್, ಶಾಂತಮ್ಮ, ಸಾಕಮ್ಮ, ಸರ್ವಮಂಗಳ ಮುಂತಾದವರು ಉಪಸ್ಥಿತರಿದ್ದರು.


ಅತ್ಯಾಚಾರದ ವಿರುದ್ದ ಪ್ರತಿಭಟನೆ
ಚಿಕ್ಕನಾಯಕನಹಳ್ಳಿ : ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಪ್ರಕರಣಗಳು ಜಾಸ್ತಿಯಾಗುತ್ತಿದ್ದು ರಾಜ್ಯ ಜಾಗತಿಕ ಮಟ್ಟದಲ್ಲಿ ತಲೆ ತಗ್ಗಿಸುವಂತಾಗಿದೆ, ರಾಜ್ಯಕ್ಕೆ ಹೊರ ರಾಜ್ಯಗಳಿಂದ ಉದ್ಯೋಗ ಹರಸಿಕೊಂಡು ಬರುವ ಸಾವಿರಾರು ಜನ ಬೆಂಗಳೂರಿನಲ್ಲಿ ನೆಲಸಿದ್ದು ಅವರಲ್ಲಿ ಕೆಲವರು ಕಾನೂನು ವಿರೋಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಅವರ ಮೇಲೆ ಪೊಲೀಸರು ತೀವ್ರ ನಿಗಾವಹಿಸಬೇಕು ಎಂದು ರೈತ ಸಂಘದ ಸಂಘಟನಾ ಕಾರ್ಯದಶರ್ಿ ಕೆಂಕೆರೆ ಸತೀಶ್ ಸಕರ್ಾರವನ್ನು ಒತ್ತಾಯಿಸಿದರು.
ಪಟ್ಟಣದ ನೆಹರು ವೃತ್ತದಲ್ಲಿ ಜಾಗೃತಿ ಸೇನೆ, ರಾಜ್ಯ ರೈತ ಸಂಘ, ಜಯಕನರ್ಾಟಕ ಸಂಘದ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಮಾತನಾಡಿ, ರಾಜ್ಯದಲ್ಲಿ ದಿನೇ ದಿನೇ ಅತ್ಯಾಚಾರದ ಪ್ರಕರಣಗಳು ಹೆಚ್ಚಾಗುತ್ತಿದ್ದು ಸಕರ್ಾರ ಅತ್ಯಾಚಾರಿಗಳ ವಿರುದ್ದ ಗೂಂಡಾ ಕಾಯ್ದೆಯನ್ನು ಜಾರಿಗೆ ತಂದು ಬಂಧಿಸಬೇಕೆಂದರಲ್ಲದೆ, ಗೃಹ ಇಲಾಖೆ ಸಮಾಜದಲ್ಲಿನ ದುಷ್ಟಶಕ್ತಿಗಳ ವಿರುದ್ದ ಕ್ರಮ ಕೈಗೊಳ್ಳವಲ್ಲಿ ಗೃಹ ಸಚಿವರು ತಮ್ಮ ಖಾತೆಯನ್ನು ಸರಿಯಾಗಿ ನಿರ್ವಹಿಸಲು ವಿಫಲರಾಗಿದ್ದಾರೆ, ರಾಜ್ಯದ ಗಡಿ ಭಾಗಗಳಲ್ಲಿ ಅಕ್ರಮವಾಗಿ ಎಂ.ಇ.ಎಸ್ ಗುಂಡಾಗಳು ಕನ್ನಡ ನಾಮ ಫಲಕವನ್ನು ಹೊಡೆದು ಹಾಕಿದ್ದರೂ ಪೋಲಿಸ್ ಇಲಾಖೆ ಎಂ.ಇ.ಎಸ್ ವಿರುದ್ದ ಕ್ರಮ ಕೈಗೊಳ್ಳದೆ ಕನ್ನಡ ನೆಲ, ಜಲ ರಕ್ಷಣೆಗೆ ಹೋದ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರನ್ನು ಬಂಧಿಸಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು ಅತ್ಯಾಚಾರಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಸಕರ್ಾರವನ್ನು ಒತ್ತಾಯಿಸಿದ್ದಾರೆ.
ಪ್ರತಿಭಟನೆಯಲ್ಲಿ ಶಾಲಾ ಮಕ್ಕಳು ಸೇರಿದಂತೆ ನೂರಾರು ನಾಗರೀಕರು ಭಾಗವಹಿಸಿದ್ದರು. ನಾಡ ಜಾಗೃತಿ ಸೇನೆಯ ರಾಜ್ಯಾಧ್ಯಾಕ್ಷ ಎಸ್.ಆನಂದ್, ಜಿಲ್ಲಾಧ್ಯಕ್ಷ ಎಸ್.ಎಮ್.ನಿಂಗರಾಜು, ಉಪಾಧ್ಯಕ್ಷ ಸುರೇಶ್, ಜಯ ಕನರ್ಾಟಕ ಸಂಘಟನೆಯ ಅಧ್ಯಕ್ಷ ವೆಂಕಟೇಶ್ ರೈತ ಸಂಘದ ಮಲ್ಲಿಕಾಜರ್ುನಯ್ಯ ಭಾಗವಹಿಸಿದ್ದರು.
ನೆಹರು ವೃತ್ತದಿಂದ ಹೊರಟ ಮೆರವಣಿಗೆ ಹೊಸ ಬಸ್ ನಿಲ್ದಾಣ,  ಬಿ.ಹೆಚ್.ರಸ್ತೆ ಮೂಲಕ ತಹಶೀಲ್ದಾರ್ ಕಛೇರಿಗೆ ತೆರಳಿ ಉಪತಹಶೀಲ್ದಾರ್ ದೊಡ್ಡಮಾರಯ್ಯವರಿಗೆ ಮನವಿ ಅಪರ್ಿಸಿದರು.

ಮಹಿಳೆಯರಿಗೆ ಸಾಮಾಜಿಕ ಭದ್ರತೆ ನೀಡಲು ಸೃಜನ ಸಂಘಟನೆ ಒತ್ತಾಯ
ಚಿಕ್ಕನಾಯಕನಹಳ್ಳಿ : ಇತ್ತೀಚೆಗೆ ರಾಜ್ಯದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ಪ್ರಕರಣ, ಮಹಿಳಾ ದೌರ್ಜನ್ಯ, ಲೈಂಗಿಕ ಹಿಂಸೆ,  ಮಾನಸಿಕ ಉಪಟಳ, ದೈಹಿಕ ಶೋಷಣೆ ಹೆಚ್ಚಾಗುತ್ತಿದ್ದು ಈ ಬಗ್ಗೆ ಸಾಮಾಜಿಕ ಭದ್ರತೆಗಾಗಿ ಎಚ್ಚರಿಸಲು ಅತ್ಯಾಚಾರಿಗಳಿಗೆ ಮರಣದಂಡನೆಯಂತಹ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿ ತಾಲ್ಲೂಕು ಸೃಜನ ಮಹಿಳಾ ಸಂಘಟನೆ ಒತ್ತಾಯಿಸಿತು.
ಹೆಣ್ಣು ಮಕ್ಕಳ ಮೇಲೆ ಅವ್ಯಾಹಿತವಾಗಿ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳು ನಾಗರೀಕ ಸಮಾಜವನ್ನು ತಲೆ ತಗ್ಗಿಸುವಂತೆ ಮಾಡಿದೆ, ಅತ್ಯಾಚಾರದಲ್ಲಿ ಭಾರತ ವಿಶ್ವದಲ್ಲೇ 2ನೇ ಸ್ಥಾನ ಪಡೆದಿದೆಯೆಂದರೆ ನಮ್ಮ ಸಮಾಜ ನೈತಿಕ ಅಧಃಪತನದತ್ತ ಸಾಗುತ್ತಿದೆ ಎಂಬುದು ಅರ್ಥವಾಗುತ್ತದೆ, ಹೆಣ್ಣು ಮಕ್ಕಳ ಮತ್ತು ಮಹಿಳೆಯರ ಭದ್ರತೆಯ ಬಗ್ಗೆ ಮತ್ತು ಅವರ ಮುಂದಿನ ಭವಿಷ್ಯದ ಬಗ್ಗೆ ಆತಂಕವಾಗುತ್ತಿದ್ದು ಮಹಿಳೆಯರ ಮೇಲೆ ಅತ್ಯಾಚಾರವೆಸಗುವ ಅಪರಾಧಿಗಳಿಗೆ ಮರಣದಂಡನೆಯಂತಹ ಘೋರ ಶಿಕ್ಷೆಯನ್ನು ವಿಧಿಸಬೇಕೆಂದು ಸೃಜನ ಮಹಿಳಾ ಸಂಘಟನೆ ಉಪ ತಹಶೀಲ್ದಾರ್ರವರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ಒತ್ತಾಯಿಸಿದೆ.
ಈ ಸಂದರ್ಭದಲ್ಲಿ ಸೃಜನ ಸಂಘಟನೆಯ ಎನ್.ಇಂದಿರಮ್ಮ,  ಎ.ಎಸ್.ಕವಿತ,  ಕವಿತಾ ಚನ್ನಬಸವಯ್ಯ, ಶಶಿಕಲಾ, ಗೌರಮ್ಮ, ಬಿ.ಎಸ್.ಅನ್ನಪೂರ್ಣ, ಎಸ್.ರುದ್ರಮ್ಮ, ಕೆ.ಎನ್.ಯಶೋಧ  ವಿಜ್ಞಾನ ಕೇಂದ್ರದ ರಾಮಕೃಷ್ಣಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಹಿರಿಯ ನಾಗರೀಕರಿಗಾಗಿ ವಿವಿಧ ಸ್ಪಧರ್ೆಗಳು


ಚಿಕ್ಕನಾಯಕನಹಳ್ಳಿ : ಸ್ವತಂತ್ರ ದಿನಾಚಾರಣೆ ಅಂಗವಾಗಿ ನಡೆದ ಹಿರಿಯ ನಾಗರೀಕರ ಕ್ರೀಡಾಕೂಟದಲ್ಲಿ ವಿಜೇತರಾದ ಕ್ರೀಡಾಪಟುಗಳು.
ಪುರಷರ ವಿಭಾಗದಲ್ಲಿ - 60ರಿಂದ 70 ವರ್ಷ ವಯಸ್ಸಿನ 50.ಮೀಟರ್ ನಡಿಗೆಯಲ್ಲಿ ಕೃಷ್ಣಪ್ಪ ಪ್ರಥಮ ,  ಸಂಜೀವಯ್ಯ ದ್ವಿತೀಯ, ರಾಜಪ್ಪ ತೃತೀಯ ಬಹುಮಾನ ಪಡೆದರು.
70ರಿಂದ 80 ವಯಸ್ಸಿನ ವಿಭಾಗದಲ್ಲಿ ವರದರಾಜಶೆಟ್ಟಿ ಪ್ರಥಮ, ಸತ್ಯನಾರಾಯಣ ದ್ವಿತೀಯ, ರಾಮರಾಜು ತೃತೀಯ ಬಹುಮಾನ ಪಡೆದರು.
ನಾಣ್ಯ ಸಂಖ್ಯೆ ಹೇಳುವ ಸ್ಪದರ್ೆ- ಶ್ರೀರಂಗಾಚಾರ್ಯ ಪ್ರಥಮ, ಎಂ.ವಿ.ನಾಗರಾಜ್ರಾವ್ ದ್ವಿತಿಯ, ವರದರಾಜಶೆಟ್ಟಿ ತೃತಿಯ ಬಹುಮಾನ.
ಮಡಿಕೆ ಒಡೆಯುವ ಸ್ಫದರ್ೆಯಲ್ಲಿ : ಹನುಮಂತಯ್ಯ ಪ್ರಥಮ, ಸತ್ಯನಾರಾಯಣ ದ್ವಿತಿಯ, ಚಂದ್ರಶೇಖರ್ಶೆಟ್ಟಿ ತೃತಿಯ ಬಹುಮಾನ ಪಡೆದರು.
ಚಕ್ರ ಎಸೆಯುವ ಸ್ಪಧರ್ೆಯಲ್ಲಿ : ಕೆ.ಎಂ.ನಾಗರಾಜು ಪ್ರಥಮ, ಕೃಷ್ಣಪ್ಪ ದ್ವಿತಿಯ, ರಾಜಪ್ಪ ತೃತಿಯ ಬಹುಮಾನ.
ಬಕೆಟ್ಗೆ ರಿಂಗ್ ಹಾಕುವ ಸ್ಫದರ್ೆ : ಸಿ.ಎಸ್.ಸತ್ಯನಾರಾಯಣ ಪ್ರಥಮ, ಹೆಚ್.ಆರ್.ಸತ್ಯನಾರಾಯಣ ದ್ವಿತಿಯ, ಹನುಮಂತಯ್ಯ ತೃತಿಯ ಬಹುಮಾನ ಪಡೆದರು.
ಮಹಿಳಾ ವಿಭಾಗದಲ್ಲಿ
ಮಡಿಕೆ ಹೊಡೆಯುವುದು : ಜಯಮ್ಮ ಪ್ರಥಮ, ನಾಗರತ್ನಮ್ಮ ದ್ವಿತಿಯ, ಕಮಲಮ್ಮ ತೃತಿಯ ಬಹುಮಾನ ಪಡೆದರು
50ಮೀ.ನಡಿಗೆ ಸ್ಪಧರ್ೆ : ರಾಜೇಶ್ವರಿ ಪ್ರಥಮ, ರುದ್ರಾಕ್ಷಮ್ಮ ದ್ವಿತಿಯ, ಶಶಿರೇಖಾ ತೃತಿಯ ಬಹುಮಾನ
ನಾಣ್ಯ ಸಂಖ್ಯೆ ಹೇಳುವ ಸ್ಪಧರ್ೆ : ರಾಜೇಶ್ವರಿ ಪ್ರಥಮ, ರುದ್ರಾಕ್ಷಮ್ಮ ದ್ವಿತಿಯ, ಕಮಲಮ್ಮ ತೃತಿಯ ಬಹುಮಾನ ಪಡೆದರು.
ಬಕೆಟ್ಗೆ ರಿಂಗ್ ಹಾಕುವ ಸ್ಫದರ್ೆ : ಕೆ.ಎನ್.ಶಶಿರೇಖಾ ಪ್ರಥಮ, ಎಸ್.ಬಿ.ಸೌಭಾಗ್ಯಲಿಂಗರಾಜು ದ್ವಿತಿಯ, ಪ್ರಭಾವತಿ ನರಸಿಂಹಯ್ಯ ತೃತಿಯ, 
ಚಕ್ರ ಎಸೆತ ಸ್ಪದರ್ೆ : ರುದಾಕ್ಷಮ್ಮ ಪ್ರಥಮ, ಪ್ರಭಾವತಿ ನರಸಿಂಹಯ್ಯ ದ್ವಿತಿಯ, ಟಿ.ಎಸ್.ರಾಜೇಶ್ವರಿ ತೃತಿಯ ಬಹುಮಾನ.
ಆದರ್ಶ ದಂಪತಿಗಳ ಸ್ಪಧರ್ೆ : ನಾಗರಾಜ್ಅರಸ್ ಸುನಂದ್ ಪ್ರಥಮ, ಲಿಂಗರಾಜು ಸೌಭಾಗ್ಯಮ್ಮ ದ್ವಿತಿಯ, ರಾಮಯ್ಯ ಜಯಮ್ಮ ತೃತಿಯ ಬಹುಮಾನ ಪಡೆದರು.