Monday, January 31, 2011

ಬಡವರ್ಗದ ಜನರಿಗೆ ಉಚಿತ ಕಾನೂನು ನೆರವು ಮಾಹಿತಿ: ಜಿ.ಎಂ.ಶೀನಪ್ಪ
ಚಿಕ್ಕನಾಯಕನಹಳ್ಳಿ,ಜ.31: 50 ಸಾವಿರಕ್ಕಿಂತ ಕಡಿಮೆ ಆದಾಯವಿರುವಂತಹ ಸಾರ್ವಜನಿಕರು ಕಾನೂನು ಅಧಿಕಾರದ ಪ್ರಾಧಿಕಾರಕ್ಕೆ ಅಜರ್ಿ ಸಲ್ಲಿಸಿ ಉಚಿತ ಕಾನೂನು ನೆರವು ಪಡೆಯಬಹುದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಜಿ.ಎಂ. ಸೀನಪ್ಪ ತಿಳಿಸಿದರು.
ನಗರದ ಸಿ.ಡಿ.ಪಿ.ಒ. ಕಛೇರಿ ಆವರಣದಲ್ಲಿ ನಡೆದ ಕೌಟುಂಬಿಕ ಮಹಿಳಾ ಸಂರಕ್ಷಣಾ ಕಾನೂನು ಅರಿವು ಕಾರ್ಯಗಾರವನ್ನು ಉದ್ಗಾಟಿಸಿ ಮಾತನಾಡಿದ ಅವರು ಇತ್ತೀಚಿನ ದಿನಗಳಲ್ಲಿ ನಗರ ಪ್ರದೇಶಗಳಿಗಿಂತ ಗ್ರಾಮೀಣ ಪ್ರದೇಶಗಳಲ್ಲಿ ವಿವಾಹ ವಿಚ್ಛೇದನ ಜಾಸ್ತಿಯಾಗುತ್ತಿದೆ ನ್ಯಾಯಾಲಯಕ್ಕೆ ಅಜರ್ಿ ಸಲ್ಲಿಸುವ ಮುಂಚಿತವಾಗಿ ಇಂತಹ ಪ್ರಕರಣಗಳನ್ನು ರಾಜಿ ಸಂಧಾನ ಮುಖಾಂತರ ಬಗೆಹರಿಸಿಕೊಂಡು ಸುಖ ನೆಮ್ಮದಿಯಿಂದ ಬಾಳಬೇಕೆಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಸಿ.ಡಿ.ಪಿ.ಒ ಅನಿಸ್ ಖೈಸರ್, ಕರುಣೆ ಇರುವ ಕಡೆ ಜೀವನದಲ್ಲಿ ಸ್ವರ್ಗವನ್ನು ಕಾಣಬಹುದಾಗಿದೆ ಎಂದರು. ಭಾಗ್ಯ ಲಕ್ಷ್ಮಿ ಯೋಜನೆಯಲ್ಲಿ ಸಕರ್ಾರದಿಂದ ನಿಗದಿಪಡಿಸಿರುವ ದಾಖಲಾತಿಗಳನ್ನು ಸಕಾಲಕ್ಕೆ ಸಕರ್ಾರಕ್ಕೆ ಸಲ್ಲಿಸಿ ಯೋಜನೆಯ ಸೌಲಭ್ಯಗಳನ್ನು ಪಡೆಯಲು ತಿಳಿಸಿದರಲ್ಲದೆ ಆಧಾರ್ ಯೋಜನೆಯಡಿಯಲ್ಲಿ ಭಾಗ್ಯಲಕ್ಷ್ಮಿ ಬಾಂಡಿನಲ್ಲಿರುವ ಠೇವಣಿ ಸಂಖ್ಯೆಯನ್ನು ಪೋಷಕರು ನಮೂದಿ ಮಾಡಿಸದೇ ಇದ್ದಲ್ಲಿ ಯೋಜನೆಯ ಸೌಲಭ್ಯ ವಂಚಿತರಾಗಬೇಕಾಗುತ್ತದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ನ್ಯಾಯಾಧೀಶರಾದ ಎನ್.ಶೀಲಾ, ಎ.ಜಿ.ಶಿಲ್ಪ, ಸಕರ್ಾರಿ ವಕೀಲರಾದ ಆಶಾ ಮಾತನಾಡಿದರು.
ಸಮಾರಂಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಗೋಪಾಲಕೃಷ್ಣ, ವಕೀಲರಾದ ಮಹಾಲಿಂಗಯ್ಯ, ಎನ್.ಎನ್. ಶ್ರೀಧರ್, ಪಿ.ಎಲ್.ಡಿ. ಬ್ಯಾಂಕ್ನ ಅಧ್ಯಕ್ಷ ನಾಗರಾಜು ಉಪಸ್ಥಿತರಿದ್ದರು.
ಅಂಗನವಾಡಿ ಕಾರ್ಯಕತರ್ೆ ಸಾವಿತ್ರಮ್ಮ ಪ್ರಾರ್ಥಸಿ , ವಕೀಲ ಆದಶರ್್ ಸ್ವಾಗತಿಸಿ, ಪರಮೇಶ್ವರಪ್ಪ ನಿರೂಪಿಸಿದರು.

ಗಳಿಕೆ ರಜೆಯನ್ನು ನಗಧೀಕರಿಸಲು ಸಹಕರಿಸಿದ ಬಿ.ಇ.ಓರವರಿಗೆ ಶಿಕ್ಷಕರ ಸಂಘದ ವತಿಯಿಂದ ಅಭಿನಂದನೆ
ಚಿಕ್ಕನಾಯಕನಹಳ್ಳಿ,ಜ.31: ತಾಲೂಕಿನ 640ಕ್ಕೂ ಹೆಚ್ಚಿನ ಶಿಕ್ಷಕ ಬಂಧುಗಳಿಗೆ ಪಾರದರ್ಶಕವಾಗಿ ಗಳಿಕೆ ರಜೆಯನ್ನು ನಗದೀಕರಿಸಿಕೊಡಲು ಸಹಕರಿಸಿದ ಬಿ.ಇ.ಓ ಸಾ.ಚಿ.ನಾಗೇಶ್ರವರಿಗೆ ಪ್ರಾಥಮಿಕ ಶಾಲಾ ಶಿಕ್ಷಕ-ಶಿಕ್ಷಕಿಯರ ಸಂಘದ ವತಿಯಿಂದ ಅಭಿನಂದನೆ ಸಲ್ಲಿಸಿದ್ದ.
ಇದೇ ಸಂದರ್ಭದಲ್ಲಿ ಅಂತರ ಜಿಲ್ಲೆಯಿಂದ ವಗರ್ಾವಣೆಗೊಂಡ ಶಿಕ್ಷಕರಿಗೆ 10.15. ವರ್ಷದ ಕಾಲಮಿತಿ ಬಡ್ತಿಯನ್ನು ಮಂಜೂರು ಮಾಡಿದ ಶಿಕ್ಷಣ ಸಚಿವರನ್ನು ಅಬಿನಂದಿಸಿದ್ದಾರೆ.


Sunday, January 30, 2011

Saturday, January 29, 2011

ತಾಲೂಕಿನ ಕೆಲವು ಗ್ರಾಮಗಳಿಗೆ ಸುವರ್ಣ ಗ್ರಾಮೋದಯ ಯೋಜನೆಯ ಅನುದಾನ
ಚಿಕ್ಕನಾಯಕನಹಳ್ಳಿ,ಜ.29: ಬರಸಿಡ್ಲಹಳ್ಳಿ, ದೊಡ್ಡರಾಂಪುರ, ಗೊಲ್ಲರಹಟ್ಟಿ, ಭಾಗಗಳಲ್ಲಿ ಸುವರ್ಣ ಗ್ರಾಮೋದಯ ಯೋಜನೆ ಅಡಿಯಲ್ಲಿ 77ಲಕ್ಷ ರೂ, ತೀರ್ಥಪುರ ಸಕರ್ಾರಿ ಪ್ರೌಡಶಾಲೆಗೆ 25ಲಕ್ಷ ರೂ ಸಕರ್ಾರ ಬಿಡುಗಡೆ ಮಡಿದ್ದು ಬಸವ ಇಂದಿರಾ ಅವಾಜ್ ಯೋಜನೆ ಅಡಿಯಲ್ಲಿ 1000 ಮನೆ ನಿಮರ್ಿಸಲು ಮಂಜೂರಾತಿ ನೀಡಿದೆ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಹೇಳಿದರು.
ತಾಲೂಕಿನ ಕಾತ್ರಿಕೆಹಾಳ್ನಲ್ಲಿ ಜಿ.ಪಂ. ತಾ.ಪಂ. ಲೋಕೋಪಯೋಗಿ,ಸಾರ್ವಜನಿಕ ಶಿಕ್ಷಣ ಇಲಾಖೆ, ಜಲಾನಯನ ಇಲಾಖೆ ವತಿಯಿಂದ ನಡೆದ ವಿವಿಧ ಅಭಿವೃದ್ದಿ ಕಾಮಗಾರಿಗಳ ಹಾಗೂ ಶಂಕುಸ್ಥಾಪನೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತೀರ್ಥಪುರ ಗ್ರಾಮ ವ್ಯಾಪ್ತಿಯ ನಿವೇಶನ ರಹಿತರಿಗೆ 1200 ನಿವೇಶನ ನೀಡಲು ತೀಮರ್ಾನಿಸಿದ್ದೇವೆ, ಕಾತ್ರಿಕೆಹಾಳ್, ತೀರ್ಥಪುರ, ಹಾಗಲವಾಡಿ, ಡಾಂಬರು ನಿಮರ್ಿಸಲು 78ಲಕ್ಷ ಬಿಡುಗಡೆಯಾಗಿದ್ದು ಶೀಘ್ರ ಟೆಂಡರ್ ಕರೆಯಲಾಗುವುದು ಎಂದರಲ್ಲದೆ, ಹಲವು ದಿನಗಳಿಂದ ನೆನೆಗುದಿಗೆ ಬಿದ್ದಿರುವ ಜಾಣೆಹಾರ್, ಕಾತ್ರಿಕೆಹಾಳ್ ಮಧ್ಯ ಇರುವ ಸೇತುವೆಯು ಮಾಚರ್್ ಒಳಗೆ ಪೂರ್ಣಗೊಳಿಸಲಾಗುವುದು ಎಂದರು.
ತಾ.ಪಂ.ಅಧ್ಯಕ್ಷ ಕೆ.ಜಿ.ಮಲ್ಲಿಕಾಜರ್ುನಯ್ಯ ಮಾತನಾಡಿ ಹಳ್ಳಿಗಳು ದೇಶದ ಬೆನ್ನೆಲುಬು, ಹಳ್ಳಿಗಳ ಸವರ್ಾಂಗೀಣ ಅಭಿವೃದ್ದಿಯಾದರೆ ಮಾತ್ರ ದೇಶ ಅಭಿವೃದ್ದಿಯಾಗುವುದು ಖಂಡಿತ, ಮಹಾತ್ಮಾಗಾಂಧೀಜಿಯವರು ಕಂಡಂತಹ ರಾಮರಾಜ್ಯ ನನಸು ಮಾಡಲು ಯುವ ಜನತೆ ಮುಂದೆ ಬರಬೇಕಾಗಿದೆ ಎಂದ ಅವರು, ಅತಿ ಹಿಂದುಳಿದ ಪ್ರದೇಶವಾದ ತೀರ್ಥಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಸಕರ್ಾರ ಅನೇಕ ಯೋಜನೆ ಹಾಕಿಕೊಂಡು ಶಿಕ್ಷಣ, ರಸ್ತೆ ಅಭಿವೃದ್ದಿ, ಸಮುದಾಯಭವನ, ಪದವಿ ಪೂರ್ವ ಕಟ್ಟಡ ನಿಮರ್ಿಸಿ ಈ ಭಾಗದಲ್ಲಿ ಅಭಿವೃದ್ದಿ ಕಾರ್ಯಗಳು ನಡೆಯುತ್ತಿವೆ ಎಂದರು.
ಜಿ.ಪಂ.ಸದಸ್ಯೆ ಲೋಹಿತಾಬಾಯಿ ಮಾತನಾಡಿ, ಗುಡ್ಡಗಾಡು ಪ್ರದೇಶವಾದ ತೀರ್ಥಪುರ ಗ್ರಾಮ ಪಂಚಾಯ್ತಿ ಭಾಗದಲ್ಲಿ ವಾಹನ ಸೌಕರ್ಯವಿಲ್ಲದೆ ವಿದ್ಯಾಥರ್ಿಗಳು ವಿದ್ಯೆಯಿಂದ ವಂಚಿತರಾಗುತ್ತಿದ್ದು ಈ ಸ್ಥಳದಲಿ ಪದವಿ ಪೂರ್ವ ಕಾಲೇಜು ಸ್ಥಾಪಿಸಿ ಹೆಣ್ಣುಮಕ್ಕಳು ಕ್ರಿಯಾಶೀಲರಾಗಲು ಮತ್ತು ಆಥರ್ಿಕ, ಸಾಮಾಜಿಕ, ಶೈಕ್ಷಣಿಕವಾಗಿ ಮುಂದೆ ಬರಲು ಅನೇಕ ಯೋಜನೆಗಳನ್ನು ಹಾಕಿಕೊಂಡು ಸಕರ್ಾರ ಸ್ಪಂದಿಸುತ್ತಿದೆ ಎಂದರು.
ಮಹಿಳೆಯರಿಗೆ

ಜನಗಣತಿ ಕಾರ್ಯಕ್ರಮದ ನಿಮಿತ್ತ ಸಕರ್ಾರಿ ಪ್ರಥಮ ದಜರ್ೆ ಕಾಲೇಜಿಗೆ ರಜೆ
ಚಿಕ್ಕನಾಯಕನಹಳ್ಳಿ,ಜ.29: ತಾಲೂಕಿನ ಸಕರ್ಾರಿ ಪ್ರಥಮ ದಜರ್ೆ ಕಾಲೇಜನಲ್ಲಿ ಇದೇ ಜನವರಿ 31ರ ಸೋಮವಾರ ದಂದು ಜನಗಣತಿ ಕಾರ್ಯಕ್ರಮವನ್ನು ಏರ್ಪಡಿಸಿರುವುದರಿಂದ ಅಂದು ಕಾಲೇಜಿಗೆ ರಜೆ ಘೋಷಿಸಲಾಗಿದೆ ಎಂದು ಪ್ರಾಂಶುಪಾಲ ಎ.ಎನ್.ವಿಶ್ವೇಶ್ವರಯ್ಯ ತಿಳಿಸಿದ್ದಾರೆ.
ಜನಗಣತಿ ಕಾರ್ಯಕ್ರಮವು ರಾಷ್ಟ್ರೀಯ ಕಾರ್ಯಕ್ರಮವಾದ್ದರಿಂದ ಕಾರ್ಯಕ್ರಮಕ್ಕೆ ಯಾವುದೇ ತೊಂದರೆಯಾಗದಿರಲು ಸಕರ್ಾರಿ ಪ್ರಥಮ ದಜರ್ೆ ಕಾಲೇಜಿನ ಕೊಠಡಿಗಳನ್ನು ಜನಗಣತಿ ಕಾರ್ಯಕ್ಕೆ ಬಿಟ್ಟುಕೊಡಲಾಗಿದ್ದು ಅಂದು ವಿದ್ಯಾಥರ್ಿಗಳ ತರಗತಿಗಳಿಗೆ ಅಡಚಣೆ ಉಂಟಾಗುತ್ತದೆ ಎಂಬ ಮುಂದಾಲೋಚನೆಯಿಂದ ತರಗತಿಗಳನ್ನು ರದ್ದುಪಡಿಸಲಾಗಿದೆ ಎಂದು ತಿಳಿಸಿದ್ದಾರೆ.

ದೇಶದ ಅಭಿವೃದ್ದಿಗೆ ಜನಗಣತಿಯ ಆಧಾರ ಮುಖ್ಯ: ಡಿ.ಡಿ.ಪಿ.ಐ ಮೋಹನ್ಕುಮಾರ್
ಚಿಕ್ಕನಾಯಕನಹಳ್ಳಿ,ಜ.29: ಒಂದು ದೇಶ ಅಭಿವೃದ್ದಿಯಾಗ ಬೇಕಾದರೆ ಅದು ದೇಶದ ಜನಗಣತಿಯ ಆಧಾರದ ಮೇಲೆ ದೇಶದ ಯೋಜನೆಗಳು ರೂಪುಗೊಳ್ಳುತ್ತದೆ ಎಂದು ಡಿ.ಡಿ.ಪಿ.ಈ ಮೋಹನ್ಕುಮಾರ್ ಹೇಳಿದರು.
ಶನಿವಾರ ಪಟ್ಟಣದ ಸಕರ್ಾರಿ ಪದವಿ ಕಾಲೇಜನಿಲ್ಲಿ ನಡೆದ 2010-11ನೇ ಸಾಲಿನ 3ದಿನದ ಜನಗಣತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಒಂದು ದೇಶದ ರಾಜ್ಯ,ಜಿಲ್ಲೆ ತಾಲೂಕು ಅಭಿವೃದ್ದಿಯಾಗಬೇಕದಾರರೆ ಜನಗಣತಿಯ ಆಧಾರದ ಮೇಲೆ ಪಂಚವಾಷರ್ಿಕ ಯೋಜನೆಗಳನ್ನು ಸಕರ್ಾರ ರೂಪಿಸುತ್ತದೆ. ಆಥರ್ಿಕ, ಶೈಕ್ಷಣಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ಯಶಸ್ವಿಯಾಗ ಬೇಕಾದರೆ ಜನಗಣತಿ ಅಗತ್ಯ ಎಂದರು.
ಸರ್ವ ಶಿಕ್ಷಣ ಅಭಿಯಾನದ ಹಾಗೆ ಪ್ರೌಡಶಾಲೆಗಗಳಿಗೆ ಆರ್.ಎಮ್.ಇ.ಸಿ ಯೋಜನೆಯಡಿಯಲ್ಲಿ ಸಕರ್ಾರಿ ಪ್ರೌಡಶಾಲೆಗಳ ಅಭಿವೃದ್ದಿಗೆ 25ರಿಂದ 40ಸಾವಿರ ರೂಪಾಯಿಗಳನ್ನು ಪ್ರೌಡಶಾಲಾ ಮುಖ್ಯೋಪಾಧ್ಯಾರ ಖಾತೆಗೆ ಜಮಾ ಮಡಲಾಗಿದ್ದು ಈ ಹಣವನ್ನು ಶಾಲೆಗಳ ಮೂಲಭೂತ ಸೌಕರ್ಯಗಳಿಗೆ ವಿನಿಯೋಗಿಸಲು ತಿಳಿಸಿದರು.
ತಹಶೀಲ್ದಾರ್ ಟಿ.ಸಿ.ಕಾಂತರಾಜು ಮಾತನಾಡಿ 10ವರ್ಷಕ್ಕೊಮ್ಮೆ ಒಮ್ಮೆ ನಡೆಯುವ ಜನಗಣತಿಯ ಕಾರ್ಯಕ್ರಮದಲ್ಲಿ ಶಿಕ್ಷಕರು ವ್ಯವಸ್ಥಿತವಾಗಿ ಜನಗಣತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮುಂದಿನ ಭಾರತದ ಸಕರ್ಾರಿ ಯೋಜನೆಗಳ ಶೈಕ್ಷಣಿಕವಾಗಿ ಆಥರ್ಿಕ ಸಾಮಾಜಿಕ ವೈಜ್ಞಾನಿಕವಾಗಿ ಕ್ಷೇತ್ರಗಳಲ್ಲಿ ಹಾಗೂ ವಸತಿ ರಹಿತರಿಗೆ ಶೌಚಾಲಯ ಹಾಗೂ ಮಕ್ಕಳ ಶೈಕ್ಷಣಿಕ ಮೂಲಭೂತ ಸೌಕರ್ಯಕ್ಕೆ ಒತ್ತು ನೀಡಲು ಜನಗಣತಿ ಆಧಾರದ ಮೇಲೆ ನಿಂತಿದೆ ಎಂದ ಅವರು ಎರಡನೇ ಹಂತದ ಜನಗಣತಿ ಕಾರ್ಯಕ್ರಮ ಫೆಬ್ರವರಿ 6ರಿಂದ 28ರವರಗೆ ನಡೆಯಲಿದೆ ಜನಗಣತಿ ಕಾರ್ಯಕ್ರಮದಲ್ಲಿ ಶಿಕ್ಷಕರು ನಿಷ್ಠೆಯಿಂದ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿಬೇಕು ಎಂದರು.
ಕಾರ್ಯಕ್ರಮದಲ್ಲಿ ತಾ.ಪಂ.ಕಾರ್ಯನಿರ್ವಹಣಾಧಿಕಾರಿ ದಯಾನಂದ್, ಸಿ.ಡಿ.ಪಿ.ಓ ಅನೀಸ್ಖೈಸರ್, ಬಿ.ಇ.ಓ ಸಾ.ಚಿ.ನಾಗೇಶ್, ಪುರಸಭಾ ಮುಖ್ಯಾಧಿಕಾರಿ ಹೊನ್ನಪ್ಪ, ಸಮಾಜ ಕಲ್ಯಾಣಅಧಿಕಾರಿ ಸಯದ್ಮುನೀರ್ ಹಾಜರಿದ್ದರು
ಗಣತಿ ಕಾರ್ಯಕ್ಕೆ ಗೈರಾದರೆ ಶಿಸ್ತು ಕ್ರಮ: ತಹಶೀಲ್ದಾರ್
ಚಿಕ್ಕನಾಯಕನಹಳ್ಳಿ,ಜ.29: ತಾಲೂಕಿನ ಜನಗಣತಿಯ ಗಣತಿ ಕಾರ್ಯಕ್ರಮವು ಇದೇ 29ರಿಂದ 31ರವರಗೆ ನಡೆಯಲಿದ್ದು ಈ ಕಾರ್ಯಕ್ರಮಕ್ಕೆ ನೇಮಕಗೊಂಡಿರುವ ಮೇಲ್ವಿಚಾರಕರು ಗಣತಿ ಕಾರ್ಯಕ್ಕೆ ಹಾಜರಾಗದಿದ್ದಲ್ಲಿ ನೇಮಕಗೊಂಡಿರುವವರ ಮೇಲೆ ನಿದರ್ಾಕ್ಷಿಣ್ಯವಾಗಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ ಟಿ.ಸಿ.ಕಾಂತರಾಜು ತಿಳಿಸಿದರು.
ಪಟ್ಟಣದ ತಾಲೂಕು ಕಛೇರಿಯಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಗಣತಿ ಕಾರ್ಯವು ರೋಟರಿ ಶಾಲಾ ಆವರಣದಲ್ಲಿ ನಡೆಯಲಿದೆ, ಜನಗಣತಿ ಕಾರ್ಯಕ್ರಮವು ರಾಷ್ಟ್ರೀಯ ಕಾರ್ಯಕ್ರಮವಾದ್ದರಿಂದ ಪ್ರತಿಯೊಬ್ಬ ನಾಗರೀಕರು ಗಣತಿದಾರರಿಗೆ ಸಹಕರಿಸಿ ಅವರಿಗೆ ಆಗಿರುವ ತೊಂದರೆಯನ್ನು ಮುಚ್ಚು ಮರೆಯಿಲ್ಲದೆ ಮಾಹಿತಿ ನೀಡಿ ಸಹಕರಿಸಬೇಕು ಎಂದ ಅವರು ಫೆಬ್ರವರಿ 9ರಿಂದ 28ರವರಗೆ ನಡೆಯುವ ಭಾರತದ ಜನಗಣತಿ ಕಾರ್ಯದಲ್ಲಿ ಅಗತ್ಯ ಮಾಹಿತಿ ನೀಡಿ ದೇಶದ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು ಎಂದ ಅವರು ಜನಗಣತಿ ಕಾರ್ಯದಲ್ಲಿ ಶಿಕ್ಷಕರು ಬೆಳಗ್ಗೆ 11ಗಂಟೆ ವೇಳೆಗೆ ಮುಗಿಸಿ ಶಿಕ್ಷಣ ಕಾರ್ಯಕ್ಕೆ ತೊಂದರೆಯಾಗದಂತೆ

Friday, January 28, 2011

ಕುಷ್ಠ ರೋಗದ ನಿಮರ್ೂಲನೆಗೆ ಸಹಕರಿಸಿ
ಚಿಕ್ಕನಾಯಕನಹಳ್ಳಿ,ಜ.28: ಕುಷ್ಠರೋಗದ ಲಕ್ಷಣಗಳು ಕಂಡ ಬಂದ ಮೇಲೆಯೂ ರೋಗಿ ಶೀಘ್ರ ಚಿಕಿತ್ಸೆ ಪಡೆಯದೇ ರೋಗದ ಬಗ್ಗೆ ನಿಗಾವಹಿಸದಿದ್ದಲ್ಲಿ ರೋಗಿಯು ಅಂಗವಿಕಲತೆಗೆ ತುತ್ತಾಗುತ್ತಾನೆ ಎಂದು ಆರೋಗ್ಯಾಧಿಕಾರಿ ಶಿವಕುಮಾರ್ ಹೇಳಿದರು.
ಪಟ್ಟಣದ ಜ್ಞಾನಪೀಠ ಪ್ರೌಡಶಾಲಾ ಆವರಣದಲ್ಲಿ ರೋಟರಿ ಕ್ಚಬ್ ಹಾಗೂ ಸಾರ್ವಜನಿಕ ಆಸ್ಪತ್ರೆ ವತಿಯಿಂದ ನಡೆದ ರಾಷ್ಟ್ರೀಯ ಕುಷ್ಠರೋಗ ನಿವಾರಣಾ ಮಾಸಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕುಷ್ಠರೋಗವನ್ನು ಸಾರ್ವಜನಿಕರು ತಮ್ಮ ನೆರಹೊರೆಯವರಲ್ಲಿ ಅರಿವು ಮೂಡಿಸಿ ಕುಷ್ಠರೋಗ ನಿಮರ್ೂಲನೆ ಮಾಡಬೇಕು ಎಂದರು.
ರೋಟರಿ ಅಧ್ಯಕ್ಷ ಎನ್.ಶ್ರೀಕಂಠಯ್ಯ ಕಾರ್ಯದಶರ್ಿ ಅಶ್ವತ್ಥ್ನಾರಾಯಣ್ ಮಾತನಾಡಿದರು.
ಸಮಾರಂಭದಲ್ಲಿ ರೋಟರಿ ಸಂಸ್ಥೆಯಿಂದ ಕುಷ್ಠರೋಗಿಗಳಿಗೆ ಕಂಬಳಿ ವಿತರಿಸಲಾಯಿತು.
ಸಮಾರಂಭದಲ್ಲಿ ಮುಖ್ಯೋಪಾಧ್ಯಾಯ ಗೋವಿಂದರಾಜ್, ಆರೋಗ್ಯ ಕಾರ್ಯಕರ್ತರಾದ ರೇಣುಕಾರಾಧ್ಯ, ರಂಗನಾಥ್, ಶಂಕರ್ ಉಪಸ್ಥಿತರಿದ್ದರು. ಜನಗಣತಿ ಕಾರ್ಯಕ್ಕೆ ಗೈರು ಹಾಜರಾಗುವ ನೌಕರರ ಮೇಲೆ ನಿದ್ಯರ್ಾಕ್ಷಣ್ಯ ಕ್ರಮ
ಚಿಕ್ಕನಾಯಕನಹಳ್ಳಿ,ಜ.28: ತಾಲೂಕಿನ ಜನಗಣತಿಯ ಗಣತಿ ಕಾರ್ಯದ ತರಬೇತಿ ಇದೇ 29ರಿಂದ 31ರವರಗೆ ನಡೆಯಲಿದ್ದು ಈ ಕಾರ್ಯಕ್ಕೆ ನೇಮಕಗೊಂಡಿರುವ ಮೇಲ್ವಿಚಾರಕರು ಗಣತಿ ಕಾರ್ಯಕ್ಕೆ ಹಾಜರಾಗದಿದ್ದಲ್ಲಿ ನೇಮಕಗೊಂಡಿರುವವರ ಮೇಲೆ ನಿದರ್ಾಕ್ಷಣ್ಯವಾಗಿ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ ಟಿ.ಸಿ.ಕಾಂತರಾಜು ತಿಳಿಸಿದರು.
ಪಟ್ಟಣದ ತಾಲೂಕು ಕಛೇರಿಯಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಗಣತಿ ಕಾರ್ಯವು ರೋಟರಿ ಶಾಲಾ ಆವರಣದಲ್ಲಿ ನಡೆಯಲಿದೆ, ಜನಗಣತಿ ಕಾರ್ಯಕ್ರಮವು ರಾಷ್ಟ್ರೀಯ ಕಾರ್ಯಕ್ರಮವಾದ್ದರಿಂದ ಪ್ರತಿಯೊಬ್ಬ ನಾಗರೀಕರು ಗಣತಿದಾರರಿಗೆ ಸಹಕರಿಸಿ ಅವರಿಗೆ ಮುಚ್ಚು ಮರೆಯಿಲ್ಲದೆ ಮಾಹಿತಿ ನೀಡಿ ಸಹಕರಿಸಬೇಕು ಎಂದ ಅವರು, ಫೆಬ್ರವರಿ 9ರಿಂದ 28ರವರಗೆ ನಡೆಯುವ ಭಾರತದ ಜನಗಣತಿ ಕಾರ್ಯದಲ್ಲಿ ಅಗತ್ಯ ಮಾಹಿತಿ ನೀಡಿ ದೇಶದ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು ಎಂದರು ಜನಗಣತಿ ಕಾರ್ಯದಲ್ಲಿ ಶಿಕ್ಷಕರು ಬೆಳಗ್ಗೆ 8ಕ್ಕೆ ಆರಂಭಿಸಿ 11ಗಂಟೆ ವೇಳೆಗೆ ಮುಗಿಸಿ ಶಾಲೆಗಳಿಗೆ ಹಾಜರಾಗಬೇಕು ಶಿಕ್ಷಣ ಕಾರ್ಯಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದರು.
ಸ್ತ್ರೀಶಕ್ತಿ ಭವನವನ್ನು ಮಹಿಳೆಯರ ಅಭಿವೃದ್ದಿಗಾಗಿ ಬಳಸಿ
ಚಿಕ್ಕನಾಯಕನಹಳ್ಳಿ,ಜ.28: ಸ್ತ್ರೀಯರ ಮೇಲಿನ ನಂಬಿಕೆಯಿಂದ ಸ್ತ್ರಿ ಶಕ್ತಿ ಸಂಘಗಳಿಗೆ, ಸಹಕಾರ ಸಂಘಗಳು ಸೇರಿದಂತೆ ಬ್ಯಾಂಕುಗಳು ಸಾಲವನ್ನು ನೀಡಿ ಅವರಿಗೆ ಆಥರ್ಿಕವಾಗಿ ಸಹಕರಿಸಿತ್ತಿರುವುದರ ಜೊತೆಗೆ ಬೇರೊಂದು ರೀತಿಯಲ್ಲಿ ನಮ್ಮ ಬೆಂಬಲ ಮಹಿಳೆಯರಿಗೆ ನಿರಂತರವಾಗಿರುತ್ತದೆ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ತಿಳಿಸಿದರು.
ಪಟ್ಟಣದ ಸ್ತ್ರೀ ಶಕ್ತಿಭವನದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆಥರ್ಿಕ ಸಂಸ್ಥೆಗಳು ನೀಡಿದ ಹಣವನ್ನು ಸರಿಯಾದ ಸಮಯಕ್ಕೆ ಪಾವತಿಸಿ ಪುನಃ ಮತ್ತೊಬ್ಬರಿಗೆ ಹಣದ ನೆರವು ನೀಡಲು ಮಹಿಳೆಯರು ಸಹಕರಿಸಿ, ನೀಡಿದ ಹಣವನ್ನು ಒಳ್ಳೆ ರೀತಿಯ ಕೆಲಸ ಕಾರ್ಯಗಳಿಗೆ ಬಳಸಿ ಉತ್ತಮ ಲಾಭವನ್ನು ಪಡೆಯಬೇಕು ಎಂದ ಅವರು, ತಾಲೂಕಿನಲ್ಲಿ 1035 ಸ್ತ್ರೀ ಶಕ್ತಿ ಸಂಘಗಳಿದ್ದು ಈ ಸಂಘಗಳ ಬೆಳವಣಿಗೆಯಿಂದಲೇ ಮಹಿಳೆಯರು ರಾಜಕೀಯವಾಗಿ, ಸಾಮಾಜಿಕವಾಗಿ ಪ್ರೇರಿತರಾಗಿ ಉನ್ನತ ಹುದ್ದೆಗಳನ್ನು ಅಲಂಕರಿಸುತ್ತಿದ್ದಾರೆ ಎಂದರು. ಮುಂದಿನ ಫೆಬ್ರವರಿ 16ರಂದು ನಗರದಲ್ಲಿ ಉದ್ಯೋಗ ಮೇಳ ಹಮ್ಮಿಕೊಂಡಿದ್ದು 7ನೇ ತರಗತಿಯಿಂದ ಪದವಿ ವರೆಗೆ ಓದಿರುವ 3000 ವಿದ್ಯಾಥರ್ಿಗಳಿಗೆ ಉದ್ಯೋಗವನ್ನು ವಿವಿಧ ಕಂಪನಿಗಳಿಂದ ಕೊಡಿಸುವ ನಿರೀಕ್ಷೆ ವ್ಯಕ್ತಪಡಿಸಿದರು, ಆದಿಚುಂನಚಗಿರಿಯ ವೈದ್ಯಕೀಯ ಕಾಲೇಜಿನ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗುವುದು ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ಟಿ.ರಾಮು ಮಾತನಾಡಿ, ಸ್ತ್ರೀಯರು ಜೀವನದ ಮುಂದಿನ ರೂಪುರೇಷೆಗಾಗಿ ಮಿತಿವಾಗಿ ಹಣವನ್ನು ಬಳಸಿ, ಉಳಿಸಿದ ಹಣವನ್ನು ಸದ್ಬಳಕೆಗೆ ಉಪಯೋಗಿಸಿ ಜೀವನ ನಿರ್ವಹಣೆಯನ್ನು ಸುಗಮಗೊಳಿಸಬೇಕು ಎಂದರು. ಸ್ತ್ರೀ ಶಕ್ತಿ ಭವನವು ಸ್ತ್ರೀಯರಿಗಾಗಿದ್ದು ಅವರ ವಿಶ್ರಾಂತಿ, ಉದ್ಯೋಗ ಇನ್ನೂ ಹಲವಾರು ಉಪಯೋಗಕ್ಕಾಗಿ ಬಳಸಿಕೊಳ್ಳಬಹುದು ಎಂದರು.
ಸಮಾರಂಭದಲ್ಲಿ ತಹಶೀಲ್ದಾರ್ ಟಿ.ಸಿ.ಕಾಂತರಾಜು, ತಾ.ಪಂ.ಅಧ್ಯಕ್ಷ ಕೆ.ಜಿ.ಮಲ್ಲಿಕಾಜರ್ುನಯ್ಯ, ಪುರಸಭಾ ಉಪಾದ್ಯಕ್ಷೆ ಕವಿತಾಚನ್ನಬಸವಯ್ಯ, ಅಂಬಿಕಾ ಮಲ್ಲಿಕಾಜರ್ುನಯ್ಯ ಮಾತನಾಡಿದರು.
ಸಮಾರಂಭದಲ್ಲಿ ಪುರಸಭಾ ಅಧ್ಯಕ್ಷ ರಾಜಣ್ಣ, ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜು, ತಾ.ಪಂ.ಸದಸ್ಯರಾದ ಲತಾ, ಚೇತನ, ಉಮಾದೇವಿ, ಇ.ಓ ದಯಾನಂದ್, ಪುರಸಭಾ ಸದಸ್ಯರಾದ ಎಂ.ಎನ್.ಸುರೇಶ್, ದೊರೆಮುದ್ದಯ್ಯ, ರುಕ್ಮಿಣಮ್ಮ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಸಿ.ಡಿ.ಪಿ.ಓ ಅನೀಸ್ಖೈಸರ್ ಪ್ರಾಸ್ತಾವಿಕ ಮಾತನಾಡಿ, ಪರಮೇಶ್ವರಪ್ಪ ಸ್ವಾಗತಿಸಿ ವಂದಿಸಿದರು.Thursday, January 27, 2011


ಚಿಕ್ಕನಾಯಕನಹಳ್ಳಿ,ಜ.27: ಹಿಂದುಳಿದ ವರ್ಗಗಳ ಸಮಾಜದಲ್ಲಿ ತಲೆ ಎತ್ತಿ ನಿಲ್ಲಬೇಕೆಂದರೆ ಮೊದಲು ಸಂಘಟಿತರಾಗಬೇಕೆಂದು ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಟಿ.ಎಂ.ನಂಜರಾಜು ತಿಳಿಸಿದರು.
ಪಟ್ಟಣದ ಶ್ರೀ ರೇವಣ ಸಿದ್ದೇಶ್ವರ ಉಣ್ಣೆ ಮತ್ತು ಕಂಬಳಿ ಉತ್ಪಾದನಾ ಸಹಕಾರ ಸಂಘದಲ್ಲಿ ಕನರ್ಾಟಕ ರಕ್ಷಣಾ ವೇದಿಕೆ ಹಾಗೂ ರೋಟರಿ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿದ್ದ ಸಂಗೊಳ್ಳಿರಾಯಣ್ಣನ 180ನೇ ಪುಣ್ಯಸ್ಮರಣೆ ಜಿ.ಪಂ. ಹಾಗೂ ತಾ.ಪಂನಲ್ಲಿ ಜಯಗಳಿಸಿದ ತಾಲೂಕಿನ ನೇಕಾರ ಸಮಾಜದ ಜನಪ್ರತಿನಿಧಿಗಳಿಗೆ ಸನ್ಮಾನ, ನೇಕಾರರಿಗೆ ಗುರುತು ಪತ್ರ ವಿತರಣೆ ಹಾಗೂ ಷೇರು ಪತ್ರಗಳ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಹಿಂದುಳಿದ ವರ್ಗಗಳು ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ಮುಖ್ಯವಾಹಿನಿಗೆ ಬರಬೇಕೆಂದರೆ ಮೊದಲು ತಮ್ಮೊಳಗಿನ ಭಿನ್ನಭೇದಬಿಟ್ಟು ಎಲ್ಲರೂ ಒಂದು ಎಂಬ ಮನೋಭಾವ ಬೆಳಸಿಕೊಂಡು ಅಸಾಹಯಕರನ್ನು ಮೇಲುತ್ತುವ ಕೆಲಸ ಮಾಡಬೇಕೆಂದರು.
ಕಾಳಿದಾಸ ಬ್ಯಾಂಕ್, ಕಾಳಿದಾಸ ವಿದ್ಯಾವರ್ದಕ ಸಂಘಗಳನ್ನು ಸ್ಥಾಪಿಸುವ ಮೂಲಕ ಸಮಾಜದಲ್ಲಿನ ದುರ್ಬಲವರ್ಗದವರಿಗೆ ಆಥರ್ಿಕವಾಗಿ ಹಾಗೂ ಶೈಕ್ಷಣಿಕವಾಗಿ ನೆರವು ನೀಡಿದ ಎನ್ ಮಲ್ಲಪ್ಪನವರು ನಮ್ಮ ತಂದೆ ಎಂಬುದು ಹೆಮ್ಮೆಯ ವಿಷಯ ಎಂದ ಅವರು, ಕೇಂದ್ರ ಉಣ್ಣೆ ಸಂಘದ ಅಧ್ಯಕ್ಷರಾಗಿದ್ದ ಕಾಲದಲ್ಲಿ ರಾಜ್ಯದಲ್ಲಿ ಹಲವು ಉಣ್ಣೆ ಸಂಘಗಳ ಸ್ಥಾಪನೆಗೆ ಪ್ರೇಕರಕರಾಗಿದ್ದರು, ಅವರ ಶತಮಾನೋತ್ಸವದ ವಷರ್ಾಚರಣೆಯ ಸಂದರ್ಭದಲ್ಲಿ ಈ ವೇದಿಕೆಗೆ ನಮ್ಮ ತಂದೆಯ ಹೆಸರನ್ನಿಟ್ಟಿರುವುದು ಹರ್ಷ ತಂದಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಸಂಗೊಳ್ಳಿರಾಯಣ್ಣನ 180ನೇ ಪುಣ್ಯ ಸ್ಮರಣೆಯನ್ನು ಆಚರಿಸುತ್ತಿರುವ ಈ ಹೊತ್ತಿನಲ್ಲಿ ಬೆಳಗಾಂ ಜಿಲ್ಲೆಯ ನಂದಗಡದಲ್ಲಿರುವ ಅವರ ಸಮಾಧಿಯನ್ನು ಅಭಿವೃದ್ದಿ ಪಡಿಸಬೇಕೆಬುದು ನಮ್ಮ ಒತ್ತಾಯ, ಈ ಬಗ್ಗೆ ಸಕರ್ಾರಕ್ಕೆ ಹಲವು ಬಾರಿ ಒತ್ತಾಯಿಸಿದ್ದೇವೆ ಎಂದರಲ್ಲದೆ, ಈ ಬಜೆಟ್ನ ಮಂಡನೆಯ ಈ ಸಂದರ್ಭದಲ್ಲಾದರೂ ರಾಯಣ್ಣನ ಸಮಾಧಿ ಅಭಿವೃದ್ದಿಗೆ ಹಣವನ್ನು ಮೀಸಲಿಡಬೇಕೆಂದು ಒತ್ತಾಯಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಂಬಳಿ ಸೊಸೈಟಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್, ನಮ್ಮ ತಾಲೂಕಿನ ಗುಡ್ಡಗಾಡು ಪ್ರದೇಶದಲ್ಲಿನ ಅಮಾಮ್ ಕೋಮಿನ ಜನರಿಗೆ ತಮಾಮ್ ಆಗಿ ಜಮೀನು ಹಂಚಿದವರು ಮಲ್ಲಪ್ಪನವರು, ಅವರು ಅಧಿಕಾರದಲ್ಲಿದ್ದಾಗ ಈ ಭಾಗದ ಜನರಿಗೆ ಸಾಕಷ್ಟು ಅನುಕೂಲ ಮಡಿಕೊಟ್ಟರು ಎಂದರು.
ಇತ್ತೀಚಿಗೆ ಸಕರ್ಾರ ನೇಕಾರರ ನೆರವಿಗೆ ಬರುವಂತಹ ಯೋಜನೆಯನ್ನು ರೂಪಿಸುತ್ತಿದ್ದು ಕ್ಲಷ್ಟರ್ ಯೋಜನೆಯಲ್ಲಿ 5ವರ್ಷಗಳ ಅವಧಿಗೆ 50 ಲಕ್ಷರೂಗಳನ್ನು ನಮ್ಮ ಸೊಸೈಟಿಗೆ ನೀಡಿದೆ ಎಂದರಲ್ಲದೆ, ಉಣ್ಣೆಯಲ್ಲಿ ಮೌಲ್ಯವಧರ್ಿತ ಉತ್ಪನ್ನಗಳ ತರಬೇತಿಗೆ ಪುರಸಭೆಯವರು ಹಣ ಮೀಸಲಿಟ್ಟಿರುವುದು ನೇಕಾರಿಕೆಯಲ್ಲಿ ನವೀನ ರೀತಿಯ ವಸ್ತುಗಳ ಉತ್ಪಾದನಾ ತರಬೇತಿಗೆ ಅನುಕೂಲಕರವಾಗಲಿದೆ ಎಂದರು.
ಕಂಬಳಿಗೆ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ಸಕರ್ಾರ ಮುಂದಾಗಬೇಕು ಅದಕ್ಕಾಗಿ ಎಲ್ಲಾ ಸಕರ್ಾರಿ ಆಸ್ಪತ್ರೆ ಹಾಗೂ ಹಾಸ್ಟಲ್ಗಳಿಗೆ ಬೆಡ್ಶೀಟ್ ಬದಲಾಗಿ ಕಂಬಳಿಗಳನ್ನು ವಿತರಿಸಬೇಕೆಂದರು.
ಬಿ.ಸಿ.ಎಂ ಇಲಖೆಯಲ್ಲಿ ನಮ್ಮ ಸೊಸೈಟಿಯ ಕಟ್ಟಡದಕ್ಕಾಗಿ 5ಲಕ್ಷರೂ ಅನುದಾನ ನೀಡಲು ಅವಕಾಶವಿದ್ದು ಈ ಹಣವನ್ನು ಪಡೆಯುವುದಕ್ಕೆ ನಮ್ಮ ಸೊಸೈಟಿಯ 5ಲಕ್ಷ ರೂಗಳನ್ನು ತುಂಬಿದರೆ 10ಲಕ್ಷ ರೂಗಳಲ್ಲಿ ಕಟ್ಟಡವನ್ನು ಕಟ್ಟಲು ಅವಕಾಶವಿದೆ, ಈ ನಿಟ್ಟಿನಲ್ಲಿ ನಮ್ಮ ಸೊಸೈಟಿ ಕಾಯರ್ೋನ್ಮುಕವಾಗಿದೆ ಎಂದರು.
ಸಮಾರಂಭದಲ್ಲಿ ಜಿಲ್ಲಾ ಕೈಗಾರಿಕಾ ಇಲಾಖೆಯ ಉಪನಿದರ್ೇಶಕ ಕುಮಾರಸ್ವಾಮಿ, ಕ.ಸಾ.ಪ ಕಾರ್ಯದಶರ್ಿ ಸಿ.ಗುರುಮೂತರ್ಿ, ರೋಟರಿ ಅಧ್ಯಕ್ಷ ಎನ್.ಶ್ರೀಕಂಠಯ್ಯ, ತಾಲೂಕು ಬಿ.ಜೆ.ಪಿ. ಅಧ್ಯಕ್ಷ ಶಿವಣ್ಣ, ಅಹಿಂದ ರಾಜ್ಯ ಸಂಚಾಲಕ ಚಿ.ಲಿಂ.ರವಿಕುಮಾರ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಸೊಸೈಟಿ ಕಾರ್ಯದಶರ್ಿ ಸಿ.ಪಿ.ಗಿರೀಶ್ ಸ್ವಾಗತಿಸಿದರೆ, ಶಿಕ್ಷಕ ದೇವರಾಜು ನಿರೂಪಿಸಿದರು, ಸಿ.ಎಚ್.ಗಂಗಾಧರ್ ವಂದಿಸಿದರು.

Tuesday, January 25, 2011ಮತದಾರರು ಚುನಾವಣಾ ಘನತೆಯನ್ನು ಎತ್ತಿಹಿಡಿಯಬೇಕು: ತಹಶೀಲ್ದಾರ್
ಚಿಕ್ಕನಾಯಕನಹಳ್ಳಿ,ಜ.25: ಪ್ರಜಾಪ್ರಭುತ್ವದಲ್ಲಿ ದೃಢವಿಶ್ವಾಸವುಳ್ಳ ಭಾರತದ ಪೌರರಾದ ನಾವು ನಮ್ಮ ದೇಶದ ಪ್ರಜಾಸತ್ತಾತ್ಮಕ ಸಂಪ್ರದಾಯಗಳು ಮತ್ತು ಮುಕ್ತ ನ್ಯಾಯಸಮ್ಮತ ಮತ್ತು ಶಾಂತಿಯುತ ಚುನಾವಣೆಗಳ ಘನತೆಯನ್ನು ಎತ್ತಿಹಿಡಿಯಬೇಕು ಎಂದು ತಹಶೀಲ್ದಾರ್ ಟಿ.ಸಿ.ಕಾಂತರಾಜು ತಿಳಿಸಿದರು.
ಪಟ್ಟಣದ ತಾಲೂಕು ಕಛೇರಿ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಮತದಾರರ ದಿನಾಚರಣೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮತದಾರರು ಪ್ರತಿಯೊಂದು ಚುನಾವಣೆಯಲ್ಲಿ ನಿಭರ್ೀತರಾಗಿ ಮತ್ತು ಧರ್ಮ, ಜನಾಂಗ, ಜಾತಿ, ಮತಭಾಷೆಗಳ ಯಾವುದೇ ಪ್ರೇರೇಪಣೆಗಳಿಂದ ದೂರವಿದ್ದು, ದಾಕ್ಷಿಣ್ಯಗಳಿಂದ ಪ್ರಭಾವಿತರಾಗದೆ ಮತ ಚಲಾಯಿಸಬೇಕೆಂದು ತಮ್ಮ ಪ್ರತಿಜ್ಷಾ ವಿಧಿಯಲ್ಲಿ ತಿಳಿಸಿದರು.
ಸಿ.ಡಿ.ಪಿ.ಓ ಅನೀಸ್ ಖೈಸರ್ ಮಾತನಾಡಿ, ಪ್ರಜಾಪ್ರಭುತ್ವವನ್ನು ಬಲಪಡಿಸಲು, ಚುನಾವಣಾ ಪ್ರಕ್ರಿಯೆಗಳಲ್ಲಿ ಯುವ ಜನತೆ ತೊಡಗಿಸಿಕೊಳ್ಳಲು ಚುನಾವಣಾ ಗುರುತಿನ ಚೀಟಿ ಮುಖ್ಯವಾಗಿದೆ ಎಂದರಲ್ಲದೆ, ಚುನಾವಣೆಯ ಸಂದರ್ಭದಲ್ಲಿ ಮತ ಪಟ್ಟಿಯಲ್ಲಿ ಮತದಾರರ ಹೆಸರು ಇಲ್ಲದಿದ್ದಾಗ ಮತದಾರರಿಗೆ ಆಗುವ ಅನ್ಯಾಯವನ್ನು ಸರಿಪಡಿಸಲು ಯೋಜನೆ ರೂಪಿಸಲಾಗಿದೆ ಎಂದರು. 18ವರ್ಷ ವಯಸ್ಸಿನ ಎಲ್ಲಾ ವಯಸ್ಕರಿಗೂ ಮತದಾರರ ಗುರುತಿನ ಚೀಟಿ ಪಡೆಯ ಬೇಕೆಂದರು.
ಸಮಾರಂಭದಲ್ಲಿ ತಾಪಂ,ಇ.ಓ. ಎನ್.ಎಂ.ದಯಾನಂದ್, ಪುರಸಭಾ ಉಪಾಧ್ಯಕ್ಷೆ ಕವಿತಾಚನ್ನಬಸವಯ್ಯ, ಬಿ.ಇ.ಓ ಸಾ.ಚಿ.ನಾಗೇಶ್, ಪುರಸಭೆ ಮುಖ್ಯಾಧಿಕಾರಿ ಹೊನ್ನಪ್ಪ ಉಪಸ್ಥಿತರಿದ್ದರು.
ಲೋಕ ಶಿಕ್ಷಣ ಕೇಂದ್ರಗಳು, ಗ್ರಾಮದ ಮಾಹಿತಿ ಕೇಂದ್ರಗಳು
ಚಿಕ್ಕನಾಯಕನಹಳ್ಳಿ,ಜ.25: ಗ್ರಾಮಗಳ ಅಭಿವೃದ್ದಿಗಾಗಿ ಗ್ರಾಮಗಳ ವಯಸ್ಕರಿಗೆ ಸಾಕ್ಷರತೆ ಮತ್ತು ಕೌಶಲ್ಯಾಭಿವೃದ್ದಿ ಶಿಕ್ಷಣವನ್ನು ಒದಗಿಸುವ ನಿಟ್ಟಿನಲ್ಲಿ ಭಾರತ ಸಕರ್ಾರ ಸಾಕ್ಷರ್ ಭಾರತ್ ಎಂಬ ಕಾರ್ಯಕ್ರಮ ಏರ್ಪಡಿಸಿದೆ ಎಂದು ಜಿಲ್ಲಾ ವಯಸ್ಕ ಶಿಕ್ಷಣಾಧಿಕಾರಿ ರಾಜ್ಕುಮಾರ್ ಹೇಳಿದರು.
ಪಟ್ಟಣದ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಸಾಕ್ಷರ್ ಭಾರತ್ 2012 ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಕಾರ್ಯಕ್ರಮದಲ್ಲಿ ಲೋಕ ಶಿಕ್ಷಣ ಕೇಂದ್ರವನ್ನು ಸ್ಥಾಪಿಸಲಾಗಿದ್ದು ಪುಸ್ತಕಗಳು, ದಿನಪತ್ರಿಕೆಗಳು, ನಿಯತಕಾಲಿಕೆಗಳು ಹಾಗೂ ಮಾಹಿತಿ ಪತ್ರ ಮುಂತಾದವುಗಳನ್ನೊಳಗೊಂಡ ಗ್ರಂಥಾಲಯವನ್ನು ತೆರೆಯಲಾಗಿದ್ದು ಆಧುನಿಕ ಸೌಲಭ್ಯಗಳನ್ನು ಸುಸಜ್ಜಿತಗೊಳಿಸಲಾಗುತ್ತದೆ ಎಂದರು.
ತಾ.ಪಂ.ಅಧ್ಯಕ್ಷ ಕೆ.ಜಿ.ಮಲ್ಲಿಕಾಜರ್ುನಯ್ಯ ಮಾತನಾಡಿ ಗ್ರಾಮಗಳಲ್ಲಿರುವ ಜನರು ತಮ್ಮ ಹಳ್ಳಿಗಳಲ್ಲಿನ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ, ಪಂಚಾಯ್ತಿ ವ್ಯಾಪ್ತಿಯಲ್ಲಿ ಸಾಕ್ಷರರಾಗಲು ತಿಳಿಸಿದ ಅವರು ದೇಶ ಪ್ರಗತಿ ಹೊಂದಲು ಸಹಕರಿಸಬೇಕು ಎಂದರು.
ಸಮಾರಂಭದಲ್ಲಿ ತಹಶೀಲ್ದಾರ್ ಟಿ.ಸಿ.ಕಾಂತರಾಜು, ತಾ.ಪಂ,ಇ.ಓ. ಎನ್.ಎಂ.ದಯಾನಂದ್, ಬಿ.ಇ.ಓ ಸಾ.ಚಿ.ನಾಗೇಶ್ ಸಿ.ಡಿ.ಪಿ.ಓ ಅನೀಸ್ಖೈಸರ್ ಉಪಸ್ಥಿತರಿದ್ದರು.

Sunday, January 23, 2011

ಸಂಗೊಳ್ಳಿರಾಯಣ್ಣ ಹುತಾತ್ಮ ದಿನದ ನೆನಪಿಗಾಗಿ ನೇಕಾರರಿಗೆ ಸವಲತ್ತು ವಿತರಣೆ ಕಾರ್ಯಕ್ರಮ
ಚಿಕ್ಕನಾಯಕನಹಳ್ಳಿ,ಜ.23: ಸಂಗೊಳ್ಳಿರಾಯಣ್ಣ ಹುತಾತ್ಮ ದಿನದ ನೆನಪಿನ ಅಂಗವಾಗಿ ನೇಕಾರರಿಗೆ ವಿವಿಧ ಸವಲತ್ತುಗಳ ವಿತರಣೆ ಮತ್ತು ಚುನಾಯಿತ ಪ್ರತಿನಿಧಿಗಳಿಗೆ ಸನ್ಮಾನ ಸಮಾರಂಭವನ್ನು ಇದೇ 26ರ ಮಧ್ಯಾಹ್ನ 3ಕ್ಕೆ ಏರ್ಪಡಿಸಲಾಗಿದೆ.
ಸಮಾರಂಭವನ್ನು ರೇವಣಸಿದ್ದೇಶ್ವರ ಕಂಬಳಿ ಸೊಸೈಟಿಯಲ್ಲಿ ಹಮ್ಮಿಕೊಂಡಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಉದ್ಘಾಟನೆ ನೆರವೇರಿಸಲಿದ್ದು ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಟಿ.ಎಂ.ನಂಜರಾಜು ಚುನಾಯಿತರಿಗೆ ಸನ್ಮಾನಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ವ್ಯವಸ್ಥಾಪಕ ಕುಮಾರಸ್ವಾಮಿ ನೇಕಾರರ ಗುತರ್ಿನ ಚೀಟಿ ವಿತರಿಸಲಿದ್ದು ಕಂಬಳಿ ಸೊಸೈಟಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ಅಧ್ಯಕ್ಷತೆ ವಹಿಸಲಿದ್ದಾರೆ.
ಕಸಾಪ ಕಾರ್ಯದಶರ್ಿ ಸಿ.ಗುರುಮೂತರ್ಿ ನುಡಿ ನಮನ ಮಾಡಲಿದ್ದು ಪುರಸಭಾಧ್ಯಕ್ಷ ರಾಜಣ್ಣ ಷೇರು ಪತ್ರ ವಿತರಿಸಲಿದ್ದು ರೋಟರಿ ಕ್ಲಬ್ ಅಧ್ಯಕ್ಷ ಎನ್.ಶ್ರೀಕಂಠಯ್ಯ ನೋಟ್ ಪುಸ್ತಕ ವಿತರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ತಾ.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಬಸವರಾಜು, ಬಿ.ಜೆ.ಪಿ ಅಧ್ಯಕ್ಷ ಮಿಲ್ಟ್ರೀ ಶಿವಣ್ಣ, ಅಹಿಂದ ರಾಜ್ಯ ಸಂಚಾಲಕ ಚಿ.ಲಿಂ.ರವಿಕುಮಾರ್, ತಾ.ಪ.ಕಾ.ನಿ. ಸಂಘದ ಕಾರ್ಯದಶರ್ಿ ಸಿ.ಹೆಚ್.ಚಿದಾನಂದ್, ಜಿಲ್ಲಾ,ಕ.ರ.ವೇ ಕಾರ್ಯದಶರ್ಿ ಟಿ.ಈ.ರಘುರಾಮ್, ತಾ.ಕ.ರ.ವೇ ಅಧ್ಯಕ್ಷ ಸಿ.ಟಿ.ಗುರುಮೂತರ್ಿ, ಸ.ನೌ.ಸಂ.ಅಧ್ಯಕ್ಷ ಪರಶಿವಮೂತರ್ಿ, ಕ.ಭ.ಸಮಿತಿ ಅಧ್ಯಕ್ಷ ಸಿ.ಎಸ್.ಬಸವರಾಜು, ಕ.ಯು.ಕ್ರೀ.ಕ.ಸಂಘದ ಅಧ್ಯಕ್ಷ ಸಿ.ಬಿ.ಲೋಕೇಶ್, ಕಂಬಳಿ ಸೊಸೈಟಿ ಉಪಾಧ್ಯಕ್ಷ ಸಿ.ಕೆ.ಲೋಕೇಶ್, ನಿದರ್ೇಶಕರುಗಳಾದ ಸಿ.ಹೆಚ್.ಅಳವೀರಯ್ಯ, ಸಿ.ಎಂ.ಬೀರಲಿಂಗಯ್ಯ, ಸಿ.ಎನ್.ವಿಜಯ್ಕುಮಾರ್, ಆರ್.ಜಿ.ಗಂಗಾಧರಯ್ಯ, ಗೋವಿಂದಯ್ಯ, ಭಾರತಿ ಉಪಸ್ಥಿತರಿರುವರು.
ಇದೇ ಸಂದರ್ಭದಲ್ಲಿ ನೇಕಾರ ಸಮಾಜದ ಪ್ರತಿನಿಧಿಗಳಾದ ಜಿ.ಪಂ.ಸದಸ್ಯೆ ಎನ್.ಜಿ.ಮಂಜುಳ, ತಾ.ಪಂ.ಸದಸ್ಯರುಗಾಳದ ಡಿ.ಶಿವರಾಜು, ಎ.ಬಿ.ರಮೇಶ್ಕುಮಾರ್, ಉಮಾದೇವಿ, ಜಯಲಕ್ಷಮ್ಮ ರವರಿಗೆ ಸನ್ಮಾನಿಸಲಾಗುವುದು.
ಜಿಲ್ಲಾ ಮಟ್ಟದ ಜಾನಪದ, ಭಾವಗೀತೆ ಹಾಗೂ ಚಲನಚಿತ್ರ ಗೀತೆ ಸ್ಪಧರ್ೆ
ಚಿಕ್ಕನಾಯಕನಹಳ್ಳಿ,ಜ.22: ಜಿಲ್ಲಾ ಮಟ್ಟದ ಜಾನಪದ ಗೀತೆ, ಭಾವಗೀತೆ ಮತ್ತು ಚಲನಚಿತ್ರ ಗೀತೆ ಸ್ಪಧರ್ೆಯನ್ನು ಇದೇ 26ರ ಬುಧವಾರ ಸಂಜೆ 4ಗಂಟೆಗೆ ಏರ್ಪಡಿಸಲಾಗಿದೆ.
62ನೇ ಗಣರಾಜ್ಯೋತ್ಸವದ ಅಂಗವಾಗಿ ಹಾಗೂ ಭುವನೇಶ್ವರ ಯುವಕ ಸಂಘದ 30ನೇ ವರ್ಷದ ವಾಷರ್ಿಕೋತ್ಸವದ ಸವಿನೆನಪಿಗಾಗಿ ಸ್ಪಧರ್ೆಗಳನ್ನು ಏರ್ಪಡಿಸಿದ್ದು ಜಾನಪದ ಗೀತೆ 1ರಿಂದ 7ನೇ ತರಗತಿ, ಭಾವಗೀತೆ ಸ್ಪಧರ್ೆ 8ರಿಂದ 10ನೇ ತರಗತಿ ಮತ್ತು ಚಲನಚಿತ್ರಗೀತೆ ಸ್ಪಧರ್ೆಯನ್ನು ಪದವಿ ಪೂರ್ವ ಕಾಲೇಜು ವಿದ್ಯಾಥರ್ಿಗಳಿಗೆ ಏರ್ಪಡಿಸಿದ್ದು ಆಸಕ್ತರು 9980163152 ನಂ.ಗೆ ಸಂಪಕರ್ಿಸಬಹುದು ಎಂದು ಕೋರಿದ್ದಾರೆ.Saturday, January 22, 2011ಚಿ.ನಾ.ಹಳ್ಳಿ ಬಂದ್ ಯಶಸ್ವಿ: ಜನ ಸಾಮಾನ್ಯರ ಪರದಾಟ
ಚಿಕ್ಕನಾಯಕನಹಳ್ಳಿ,ಜ.22: ರಾಜ್ಯದ ಬಿ.ಜೆ.ಪಿ ನೀಡಿದ್ದ ದಿಢೀರ್ ಬಂದ್ನಿಂದಾಗಿ ಕಾರ್ಯಕರ್ತರು ರೊಚಿಗೆದ್ದು ಬಸ್ ಒಂದಕ್ಕೆ ಕಲ್ಲು ಹೊಡೆದೆದ್ದಲ್ಲದೆ, ಆರು ಆಟೋಗಳಿಗೆ ಹಾನಿ ಮಾಡಿದ್ದಾರೆ, ವ್ಯಾಪಾರಸ್ಥರಿಗೆ, ಶಾಲಾ-ಕಾಲೇಜು ಮಕ್ಕಳಿಗೆ, ವಿವಿಧ ಕ್ಷೇತ್ರದ ನೌಕರರಿಗೆ ತೊಂದರೆಯಾಗಿರುವುದಲ್ಲದೆ ಬಂದ್ನ ವಿಷಯ ತಿಳಿಯದ ವಾಹನ ಚಾಲಕರು ಜನರನ್ನು ಪ್ರಾಯಣದ ಮಧ್ಯೆದಲ್ಲಿ ಇಳಿಸಿ ಪ್ರಯಾಣಿಕರು ತಿಂಡಿ ಊಟಕ್ಕೆ ಪರದಾಡುವಂತಹ ಸ್ಥಿತಿ ನಿಮರ್ಾಣವಾಯಿತು.
ಮುಂಜಾನೆಯಿಂದ ಆರಂಭಗೊಂಡ ಬಂದ್ನಿಂದ ಬಿ.ಜೆ.ಪಿ. ಕಾರ್ಯಕರ್ತರು ಬಿ.ಎಚ್.ರಸ್ತೆಯಲ್ಲಿ ಒಂದು ಸುತ್ತು ಪ್ರದಕ್ಷಣೆ ಬಂದು, ಹೊಟೇಲ್, ಪೆಟ್ಟಿಗೆ ಅಂಗಡಿಗಳನ್ನು ಬಂದ್ ಮಾಡಿಸಿದರು. ನಂತರ ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ ನೇತೃತ್ವದಲ್ಲಿ ಬಿ.ಜೆ.ಪಿ. ಮಂಡಲ ಅಧ್ಯಕ್ಷ ಶಿವಣ್ಣ ಮಿಲ್ಟ್ರಿ, ಕಾರ್ಯದಶರ್ಿ ಸುರೇಶ್ ಹಳೇಮನೆ, ಜಿ.ಪಂ.ಸದಸ್ಯ ಪಂಚಾಕ್ಷರಯ್ಯ ಮಾಜಿ ಅಧ್ಯಕ್ಷರುಗಳಾದ ರಾಜಣ್ಣ, ಶ್ರೀನಿವಾಸಮೂತರ್ಿ ಹಾಗೂ ಬಿ.ಜೆ.ಪಿ ಮುಖಂಡರುಗಳಾದ ಮೈಸೂರಪ್ಪ, ತಮ್ಮಡಿಹಳ್ಳಿ ಸೋಮಶೇಖರ್ ಸೇರಿದಂತೆ ಹಲವರು ಮೆರವಣಿಗೆ ನಡೆಸಿದರು.
ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ಮಾತನಾಡಿ, ರಾಜ್ಯ ಪಾಲರು ಸಕರ್ಾರದ ಪ್ರತಿನಿಧಿಯಂತೆ ನಡೆಯಬೇಕಾಗಿತ್ತು ಆದರೆ ದುರಾದೃಷ್ಟವಶಾತ್ ವಿರೋಧ ಪಕ್ಷದ ನಾಯಕರಂತೆ ವತರ್ಿಸುತ್ತಿರುವುದು ಸಂವಿಧಾನಕ್ಕೆ ಅಪಮಾನವೆಸಗಿದಂತೆ ಎಂದರಲ್ಲದೆ, ರಾಜ್ಯಪಾಲರಾದ ಹಂಸರಾಜ್ ಭಾರಧ್ವಜ್ ಹಂಸದ ರೀತಿ ಒಳ್ಳೆಯದನ್ನು ತೆಗೆದುಕೊಳ್ಳಬೇಕು, ತಮ್ಮ ವರ್ತನೆಯನ್ನು ಬದಲಿಸಿಕೊಳ್ಳಬೇಕು ಇಲ್ಲದಿದ್ದರೆ ನಮ್ಮ ಹೋರಾಟ ಇನ್ನೂ ತೀವ್ರಗೊಳ್ಳುತ್ತದೆ ಎಂದರು.
ಬಂದ್ನಿಂದ ಪರದಾಡಿದ ಜನ ಸಾಮಾನ್ಯರ ಅಳಲು: ಬೆಳಗ್ಗೆ ದಿಡೀರ್ ಬಂದ್ನಿಂದ ಹಲವು ಊರುಗಳಿಂದ ತಮ್ಮ ಕೆಲಸ ಕಾರ್ಯಗಳಿಗೆ ಬಂದಿದ್ದ ಜನಸಾಮಾನ್ಯರು ವಾಹನಗಳಿಗಾಗಿ ಕಾಯುತ್ತಾ ಬಸ್ಸ್ಟಾಪ್ನಲ್ಲೇ ಕುಳಿತರು. ತಮ್ಮ ಊರುಗಳಿಗೆ ವಾಪಾಸ್ ಆಗಲು ಆಗದೆ ಪರದಾಡುತ್ತಿದ್ದ ಜನರನ್ನು ಪತ್ರಿಕೆ ಸಂದಶರ್ಿಸಿದಾಗ ಇವರ ಕುಚರ್ಿ ಉಳಿಸಿಕೊಳ್ಳುವುದಕ್ಕಾಗಿ ಬಂದ್ನ ನೆಪವೊಡ್ಡಿ ಜನರಿಗೆ ಸಮಸ್ಯೆಗಳನ್ನು ಹೆಚ್ಚಿಸುತ್ತಿದ್ದಾರೆ'. ತಮ್ಮ ಸಂಬಂಧಿಕರೊಬ್ಬರ ತಿಥಿಗಾಗಿ ಧವಸ ದಾನ್ಯಗಳನ್ನು ಬೇರೊಂದು ಸ್ಥಳಕ್ಕೆ ಕೊಂಡೊಯ್ಯಬೇಕಿತ್ತು ಆದರೆ ಬಂದ್ನಿಂದಾಗಿ ಇಲ್ಲೇ ವಾಸ್ತವ್ಯ ಹೂಡಬೇಕಾಗಿದೆ, ಇದರಿಂದ ನನ್ನ ಬರುವಿಕೆಗಾಗಿ ಕಾಯುತ್ತಿರುವ ಸಂಬಂದಿಕರು ತಿಥಿಗಾಗಿ ಪರದಾಡುತ್ತಿದ್ದಾರೆ ಎಂದು ರಂಗನಾಥ್ ಎಂಬ ವ್ಯಕ್ತಿ ಹೇಳಿದರೆ, ಸೊಪ್ಪನ್ನು ಮಾರಲು ಪಟ್ಟಣಕ್ಕೆ ಹೋಗಬೇಕಾಗಿತ್ತು ಆದರೆ ಬಂದ್ ನಿಂದ ಇಲ್ಲೇ ವಾಸ್ತವ್ಯ ಹೂಡಿದ್ದು ಸೊಪ್ಪ ಸಂಜೆ ವೇಳೆಗೆ ಒಣಗುತ್ತದೆ ನಮ್ಮ ಜೀವನ ನಡೆಯುವುದೇ ಈ ಸೊಪ್ಪಿನಿಂದ ಇದಕ್ಕೆಲ್ಲ ಯಾರು ಹೊಣೆಗಾರರೆಂದು ಮೊಹಬೂಬಿರವರು ಪ್ರಶ್ನಿಸಿದರು.
ಇದೇ ಸಮಯದಲ್ಲಿ ಬಂದ್ನ ವಿಷಯ ತಿಳಿಯದ ಆಟೋ ಚಾಲಕನೊಬ್ಬ ರೋಗಿಯನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಕಿಡಿಗೇಡಿಗಳು ಆಟೋವನ್ನು ಜಖಂಗೊಳಿಸಿದ್ದಾರೆ. ಇದರ ವಿರುದ್ದ ಆಟೋ ಚಾಲಕರ ಸಂಘದ ಅಧ್ಯಕ್ಷ ಮಂಜುನಾಥ್ ಮತ್ತು ಕನರ್ಾಟಕ ರಕ್ಷಣಾ ವೇದಿಕೆ ಸಂಘದ ಅಧ್ಯಕ್ಷ ಸಿ.ಟಿ.ಗುರುಮೂತರ್ಿ ತೀವ್ರ ಆಕ್ರೋಶ ವ್ಯಕ್ತ ಪಡಿಸಿ ಸಾರ್ವಜನಿಕರಿಗೆ ಬಂದ್ನ ಬಗ್ಗೆ ಮುಂಚಿತವಾಗಿ ಸರಿಯಾದ ಮಾಹಿತಿ ನೀಡದೆ ಏಕಾಏಕಿ ಬಂದ್ ಏರ್ಪಡಿಸಿದ್ದಾರೆ, ಇದರಿಂದ, ಸಾರ್ವಜನಿಕ ಆಸ್ತಿಯ ನಷ್ಠಕ್ಕೆ ಯಾರು ಜವಾಬ್ದಾರಿಯಾಗುತ್ತಾರೆಂದು ಸಕರ್ಾರದ ವಿರುದ್ದ ಕಿಡಿಕಾರಿದರು.

ಮಹಿಳೆಯರು ಕೌಟಂಬಿಕವಾಗಿ ನೆಮ್ಮದಿಯಿಂದಿದ್ದರೆ ಜೀವನ ಮೌಲ್ಯ ಅರ್ಥ ಪೂರ್ಣ
ಚಿಕ್ಕನಾಯಕನಹಳ್ಳಿ,ಜ.22: ಮಹಿಳೆಯರು ಸಾಮಾಜಿಕವಾಗಿ ಕುಟುಂಬಗಳಲ್ಲಿ ಶಾಂತಿ ಮತ್ತು ನೆಮ್ಮದಿ ಜೀವನ ಹೊಂದಿದಾಗ ಮಾತ್ರ ಜೀವನದ ಮೌಲ್ಯ ಅರ್ಥಪೂರ್ಣವಾಗುತ್ತದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಜಿ.ಎಂ.ಶೀನಪ್ಪ ಹೇಳಿದರು.
ತಾಲೂಕಿನ ಶೆಟ್ಟಿಕೆರೆ ಗ್ರಾಮದಲ್ಲಿ ನಡೆದ ಮಹಿಳೆಯರ ಕೌಂಟುಂಬಿಕ ದೌರ್ಜನ್ಯ ಸಂರಕ್ಷಣಾ ಕಾಯ್ದೆಯ ಕಾನೂನು ಅರಿವು ನೆರವು ಕಾರ್ಯಗಾವನ್ನು ಉದ್ದೇಶಿಸಿ ಮಾತನಾಡಿದ ಅವರು ಮಹಿಳೆಯರ ಮೇಲೆ ನಡೆಯುತ್ತಿರುವ ಕೌಟುಂಬಿಕ ಹಿಂಸೆ ತಡೆಯಲು ಮಹಿಳೆಯರು ಕಾನೂನಿನ ಅರಿವು ತಿಳಿಯುವುದು ಒಳಿತು ಎಂದರು.
ತಹಶೀಲ್ದಾರ್ ಟಿ.ಸಿ.ಕಾಂತರಾಜು ಮಾತನಾಡಿ ಮಹಿಳೆಯರು ಕಾನೂನು ಅರಿವು ಪಡೆಯುವುದು ಬಹುಮುಖ್ಯ ಕುಟುಂಬದಲ್ಲಿ ಮಹಿಳೆಯರ ಪಾತ್ರ ಜವಾಬ್ದಾರಿಯುತವಾಗಿದ್ದು ಸಮಾಜದ ಪಿಡುಗುಗಳಾದ ವರದಕ್ಷಿಣೆ, ಬಾಲ ಕಾಮರ್ಿಕತೆ, ಬಾಲ್ಯ ವಿವಾಹ, ಹೆಣ್ಣು ಭ್ರೂಣ ಹತ್ಯೆ ಮುಂತಾದ ಮೂಡನಂಭಿಕೆಯನ್ನು ತೊರೆದು ಕಾನೂನಿನ ಅರಿವು ಪಡೆಯಲು ತಿಳಿಸಿದರು.
ಶಿಶು ಅಭಿವೃದ್ದಿ ಯೋಜನಾಧಿಕಾರಿ ಅನೀಸ್ ಕೈಸರ್ ಮಾತನಾಡಿ ಜೀವನದಲ್ಲಿ ಸಮಸ್ಯೆಗಳು ಎದುರಾದಾಗ ಯಾರು ಸಹಾ ಸಮಸ್ಯೆಗೆ ಹೆದರದೇ ಸಮಸ್ಯೆಯನ್ನು ಹೆದರಿಸಿ ಬದುಕಬೇಕು ಎಂದ ಅವರು ಕಾನೂನಿನ ಅರಿವನ್ನು ಪ್ರತಿಯೊಬ್ಬರು ತಿಳಿದುಕೊಳ್ಳುವಂತೆ ಹೇಳಿದರು.
ಸಮಾರಂಭದಲ್ಲಿ ನ್ಯಾಯಾಧೀಶರಾದ ಎ.ಜಿ.ಶಿಲ್ಪ, ಎನ್.ಶೀಲ, ವಕೀಲರಾದ ಗೋಪಾಲಕೃಷ್ಣ, ಮಹಾಲಿಂಗಯ್ಯ, ಹೆಚ್.ಎಸ್.ಚಂದ್ರಶೇಖರಯ್ಯ, ಶಿಶು ಅಭಿವೃದ್ದಿ ಯೋಜನಾಧಿಕಾರಿ ಪರಮೇಶ್ವರಪ್ಪ, ಟಿ.ದಯಾನಂದ್, ಕೆ.ಎಲ್.ಭಾಗ್ಯಲಕ್ಷ್ಮೀ, ನಾರಾಯಣರಾಜು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಎಂ.ಎಸ್.ಮಹದೇವಮ್ಮ ಪ್ರಾಥರ್ಿಸಿದರೆ,ಕೆ.ಎಂ.ರಾಜಶೇಖರಪ್ಪ ಸ್ವಾಗತಿಸಿ, ಕೆ.ಎಂ.ಷಡಾಕ್ಷರಿ ನಿರೂಪಿಸಿ, ಕೆ.ಸಿ.ವಿಶ್ವನಾಥ್ ವಂದಿಸಿದರು.

ಮಹಿಳೆಯರನ್ನು ಕೆ.ಕೆ.ಜಿ.ಬ್ಯಾಂಕ್ ಆಥರ್ಿಕವಾಗಿ ಸಬಲಗೊಳಿಸುತ್ತಿದೆ
ಚಿಕ್ಕನಾಯಕನಹಳ್ಳಿ,ಜ.22: ಮಹಿಳೆ ಸಾಮಾಜಿಕ, ಆಥರ್ಿಕ ಹಾಗೂ ರಾಜಕೀಯದ ಎಲ್ಲಾ ಕ್ಷೇತ್ರಗಳಲ್ಲಿ ಪುರಷರಿಗಿಂತ ಮೇಲುಗೈ ಸಾಧಿಸುತ್ತಿದ್ದು ಮಹಿಳೆಯರು ಸಬಲೆಯಾಗಿ ಪ್ರತಿ ಕ್ಷೇತ್ರದಲ್ಲೂ ಮುನ್ನುಗುತ್ತಾ ತಮ್ಮ ಜೀವನವನ್ನು ನಡೆಸುತ್ತಿದ್ದಾರೆ ಎಂದು ಮಹಿಳಾ ಮತ್ತು ಕಲ್ಯಾಣ ಇಲಾಖೆಯ ಉಪನಿದರ್ೇಶಕರಾದ ಚಿದಾನಂದ್ ತಿಳಿಸಿದರು.
ತಾಲೂಕಿನ ಕಂದಿಕೆರೆಯ ಕಾವೇರಿ ಕಲ್ಪತರು ಗ್ರಾಮೀಣ ಬ್ಯಾಂಕ್ನ ನೂತನ ಕಟ್ಟಡದ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಮಹಿಳೆಯರು ತಯಾರಿಸಿದ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ ಮಾಡುವ ಸಲುವಾಗಿ ನಮ್ಮ ಇಲಾಖೆ ಸ್ತ್ರೀ ಶಕ್ತಿ ಭವನವನ್ನು ಎಲ್ಲಾ ತಾಲೂಕುಗಳಲ್ಲಿ ಸ್ಥಾಪಿಸಲಾಗಿದೆ ಎಂದರು.
ನಬಾಡರ್್ನ ಸಹಾಯಕ ವ್ಯವಸ್ಥಾಪಕ ಜಿ.ಅನಂತಕೃಷ್ಣ ಮಾತನಾಡಿ ಕೋರ್ ಬ್ಯಾಂಕಿಂಗ್ನ ಅನುಕೂಲಗಳ ಬಗ್ಗೆ ಮಾತನಾಡುತ್ತ ಕಾವೇರಿ ಕಲ್ಪತರು ಗ್ರಾಮೀಣ ಬ್ಯಾಂಕ್ ಸಾಲ ಸೌಲಭ್ಯ ನೀಡುವಲ್ಲಿ ನಮ್ಮ ಜಿಲ್ಲೆಗೆ ಎರಡನೇ ಸ್ಥಾನದಲ್ಲಿದೆ ಎಂದರು.
ಜಿಲ್ಲಾ ಪಂಚಾಯ್ತಿ ಸದಸ್ಯೆ ಲೋಹಿತಬಾಹಿ ಮಾತನಾಡಿ ಬ್ಯಾಂಕ್ ಸ್ವಸಹಾಯ ಮತ್ತು ಸ್ತ್ರೀ ಶಕ್ತಿ ಸಂಘಗಳಿಗೆ ಸಾಕಷ್ಟು ಸಾಲ ಸೌಲಭ್ಯ ನೀಡಿದೆ ಆದರೆ ಖಾತೆದಾರರು ಸರಿಯಾದ ವೇಳೆಗೆ ನೀಡಿರುವ ಸಾಲವನ್ನು ಮರುಪಾವತಿ ಮಾಡಬೇಕೆಂದು ಕೋರಿದರು.
ಕಾವೇರಿ ಕಲ್ಪತರು ಬ್ಯಾಂಕ್ ಮ್ಯಾನೇಜರ್ ಪಿ.ಎನ್.ಸ್ವಾಮಿ ಮಾತನಾಡಿ ಕಂದಿಕೆರೆಯ 180ಕ್ಕೂ ಹೆಚ್ಚು ಸ್ವಸಹಾಯ ಸಂಘಗಳಿಗೆ ಬ್ಯಾಂಕ್ 2.50ಕೋಟಿಗೂ ಹೆಚ್ಚು ಸಾಲ ನೀಡಿದ್ದು ಗ್ರಾಮೀಣ ಮಹಿಳೆಯರ ಆಶೋತ್ತರಗಳನ್ನು ಈಡೇರಿಸುವಲ್ಲಿ ಸಫಲವಾಗಿದೆ ಎಂದರು.
ಸಮಾರಂಭದಲ್ಲಿ ತಾ.ಪಂ.ಸದಸ್ಯೆ ಉಮಾದೇವಿ, ಗ್ರಾ.ಪಂ.ಅಧ್ಯಕ್ಷೆ ಲಕ್ಷ್ಮೀದೇವಮ್ಮ, ಉಪಾಧ್ಯಕ್ಷ ಜಯಣ್ಣ, ತಾ.ಪಂ.ಮೇನೇಜರ್ ನರಸಿಂಹಯ್ಯ, ಪಿಡಿ.ಓ ಶಿವಕುಮಾರ್, ವ್ಯವಸ್ಥಾಪಕ ಆರ್.ಎಮ್.ಕುಮಾರಸ್ವಾಮಿ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಕೆ.ಮಾಧವ್ ಸ್ವಾಗತಿಸಿ, ಕೆ.ಜಿ.ಪ್ರಭಾಕರ್ ನಿರೂಪಿಸಿ, ಚಂದ್ರಶೇಖರ್ ವಂದಿಸಿದರು.

ನವಚೇತನ ಪತ್ತಿನ ಸಹಕಾರ ಸಂಘದ ದಶಮಾನೋತ್ಸವ ಸಮಾರಂಭ
ಚಿಕ್ಕನಾಯಕನಹಳ್ಳಿ,ಜ.22: ನವಚೇತನ ಪತ್ತಿನ ಸಹಕಾರ ಸಂಘದ ದಶಮಾನೋತ್ಸವ ಸಮಾರಂಭವನ್ನು ಇದೇ 24ರ ಸೋಮವಾರ ಬೆಳಗ್ಗೆ 11ಗಂಟೆಗೆ ಏರ್ಪಡಿಸಲಾಗಿದೆ ಎಂದು ಸಮಿತಿಯ ಸಂಚಾಲಕ ಕ್ಯಾಪ್ಟನ್ ಸೋಮಶೇಖರ್ ತಿಳಿಸಿದ್ದಾರೆ.
ಸಮಾರಂಭವನ್ನು ಸಂಘದ ಕಛೇರಿ ಆವರಣದಲ್ಲಿ ಹಮ್ಮಿಕೊಂಡಿದ್ದು ಮಾಜಿ ಸಚಿವ ಹೆಚ್.ಎಂ.ರೇವಣ್ಣ ಸಮಾರಂಭದ ಉದ್ಘಾಟನೆ ನೆರವೇರಿಸಲಿದ್ದು ನ.ಪ.ಸ.ಸಂ.ಅಧ್ಯಕ್ಷ ಸಿ.ಪಿ.ಮಹೇಶ್ ಅಧ್ಯಕ್ಷತೆ ವಹಿಸಲಿದ್ದಾರೆ.
ಜಿ.ಕೇ.ಸ.ಬ್ಯಾಂಕ್ನ ಅಧ್ಯಕ್ಷ ಕೆ.ಎನ್.ರಾಜಣ್ಣ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಡಾ.ಬಿ.ಕೆ.ರವಿ ಸಹಾಕರ ಸಂಘಗಳ ಉಪನಿದರ್ೇಶಕ ರಂಗಸ್ವಾಮಿ, ನವಚೇತನ ಪ.ಸ.ಸಂ. ಮಾಜಿ ಅಧ್ಯಕ್ಷರಾದ ಸಿ.ಎಸ್.ರಾಜಣ್ಣ, ಚಿ.ನಿ.ಪುರಷೋತ್ತಮ್ ಉಪಸ್ಥಿತರಿರುವರು.

Friday, January 21, 2011

ದಾಸ್ಯ ಗುಲಾಮಗಿರಿಯ ಬದ್ದ ವೈರಿ ವಿವೇಕಾನಂದ
ಚಿಕ್ಕನಾಯಕನಹಳ್ಳಿ,ಜ.21: ಕಾಲೇಜು ಮಟ್ಟದಲ್ಲಿನ ಯುವಕರ ಚಲ, ಹುಮ್ಮಸ್ಸಿನ ಹೋರಾಟವನ್ನು ನಮ್ಮ ದೇಶವನ್ನು ಕಟ್ಟುವುದಕ್ಕಾಗಿ ಉಪಯೋಗಿಸಬೇಕು ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಯುವಕರಿಗೆ ಕರೆ ನೀಡಿದರು.
ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ನಡೆದ ಸ್ವಾಮಿ ವಿವೇಕಾನಂದರ ಜಯಂತ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು ಕೇವಲ ಮಾತಿನಿಂದ ಈಡೀ ವಿಶ್ವವನ್ನೇ ಗೆದ್ದ ಸ್ವಾಮಿ ವಿವೇಕಾನಂದರು, ಮೊದಲು ತಮ್ಮನ್ನು ತಾನು ಗೆಲ್ಲುತ್ತಿದ್ದರು ಈ ರೀತಿ ಯುವಕರು ತಮ್ಮ ಸ್ವಂತಿಕೆ ಗೆಲ್ಲಲು ಮುಂದಾಗಬೇಕು ಯುವಕರು ಮುಂದಿನ ಗುರಿಗಾಗಿ ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಪಾಲಿಸಬೇಕು ಎಂದ ಅವರು ಅಭಾವಿಪ ದೇಶ ಭಕ್ತ ವಿದ್ಯಾಥರ್ಿ ಸಂಘಟನೆಯಾಗಿದ್ದು ಸಂಘಟನೆಯ ಶಿಸ್ತು ಉತ್ತಮ ಕೆಲಸಕ್ಕೆ ಉಪಯೋಗವಾಗುತ್ತಿದೆ ಎಂದರು
ಉಪನ್ಯಾಸಕ ರವೀಶ್ ಮಾತನಾಡಿ ಕೇವಲ ಪರೀಕ್ಷೆಗಳ ಅಂಕಗಳಿಗಾಗಿ ಮಾತ್ರ ಶಿಕ್ಷಣವಲ್ಲ, ಸಮಾಜ ಅಭಿವೃದ್ದಿಗೆ ಪೂರಕವಾಗುವಂತಹ ಶಿಕ್ಷಣವನ್ನು ವಿದ್ಯಾಥರ್ಿಗಳು ಪಡೆಯಬೇಕು ಎಂದ ಅವರು, ಭಯೋತ್ಪಾದನೆಯಂತಹ ಹೀನ ಕೃತ್ಯಗಳಿಗೆ ಯುವಕರು ಒಳಗಾಗಿ ತಮ್ಮ ಭವಿಷ್ಯವನ್ನು ತಾವೇ ಹಾಳು ಮಡಿಕೊಳ್ಳುತ್ತಿದ್ದಾರೆ ಇದರಿಂದ ದೇಶದ ಕೀತರ್ಿ, ಸಾಂಸ್ಕೃತಿಕತೆ ಹಾಳಾಗುವುದಲ್ಲದೆ ದೇಶದ ಕೀತರ್ಿಗೂ ಮಂಕು ಬಳಿದಂತಾಗುತ್ತದೆ ಎಂದರು. ವಿವೇಕಾನಂದರಂತಹ ಮಹಾನ್ ದಾರ್ಶನಿಕರು ಮತ್ತೊಮ್ಮೆ ಹುಟ್ಟಿ ಬರಬೇಕೆಂದ ಅವರು, ಭಾರತವನ್ನು ಎಲ್ಲಾ ದೇಶಗಳು ಕೀಳರಿಮೆಯಿಂದ ಕಾಣುತ್ತಿದ್ದ ಸಮಯದಲ್ಲಿ ತನ್ನ ಜಾಣ್ಮೆಯಿಂದಲೇ ದೇಶದ ಕೀತರ್ಿಯನ್ನು ಬೆಳಗುತ್ತಿದ್ದರು ಎಂದರು. ವಿವೇಕಾನಂದರು ದಾಸ್ಯ, ಗುಲಾಮಗಿರಿಯನ್ನು ಕಿತ್ತೊಗೆಯಲು ಸ್ವತಂತ್ರಕ್ಕಾಗಿ ಹೋರಾಡುವ ವ್ಯಕ್ತಿಯನ್ನು ತಯಾರಿ ಮಾಡುಲು ಹಂಬಲಿಸುತ್ತಿದ್ದರು ಎಂದರು.
ನಗರ ಪ್ರಮುಖ ಬೀದಿಗಳಲ್ಲಿ ಸ್ವಾಮಿ ವಿವೇಕಾನಂದರ ಭಾವಚಿತ್ರದೊಂದಿಗೆ ಸಾವಿರಾರು ವಿದ್ಯಾಥರ್ಿಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಸಮಾರಂಭದಲ್ಲಿ ತು.ಹಾ.ಒ.ಅಧ್ಯಕ್ಷ ಶಿವನಂಜಪ್ಪ ಹಳೇಮನೆ, ಜಿ.ಪಂ.ಸದಸ್ಯ ಹೆಚ್.ಬಿ.ಪಂಚಾಕ್ಷರಯ್ಯ. ಅಭಾವಿಪ ತಾಲೂಕು ಪ್ರಮುಖ್ ಚೇತನ್ಪ್ರಸಾದ್, ಪ್ರಾಂಶುಪಾಲ ಶಿವಕುಮಾರ್ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಅಭಾವಿಪ ಕಾರ್ಯಕರ್ತರಾದ ನಗರ ಸಹ ಕಾರ್ಯದಶರ್ಿ ದಿಲೀಪ್ ಸ್ವಾಗತಿಸಿದರೆ, ವಿಜಯ್ ನಿರೂಪಿಸಿ, ಮನೋಹರ್ ವಂದಿಸಿ, ಕಾರ್ಯರ್ತರಾದ ರವಿ, ಮಧು, ಜಯರಾಜ್, ನವೀನ್, ಗುರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪ್ರೌಢಶಾಲಾ ವಿದ್ಯಾಥರ್ಿಗಳಿಗೆ ರಸಪ್ರಶ್ನೆ ಕಾರ್ಯಕ್ರಮ
ಚಿಕ್ಕನಾಯಕನಹಳ್ಳಿ,ಜ.21: 2010-11ನೇ ಸಾಲಿನ ಸಕರ್ಾರಿ, ಖಾಸಗಿ, ಅನುದಾನ, ಅನುದಾನ ರಹಿತ ಪ್ರೌಡಶಾಲಾ ವಿದ್ಯಾಥರ್ಿಗಳಿಗೆ ವಿಜ್ಞಾನ ರಸಪ್ರಶ್ನೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಬಿ.ಇ.ಓ ಸಾ.ಚಿ.ನಾಗೇಶ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರತಿ ಶಾಲೆಯಿಂದಾ 2 ವಿದ್ಯಾಥರ್ಿಗಳ 1 ತಂಡ ಈ ಪರೀಕ್ಷೆಗೆ ಕಡ್ಡಾಯವಾಗಿ ಹಾಜರಾಗುವುದು ಹಾಗೂ ಈ ಪರೀಕ್ಷಾ ಕಾರ್ಯಕ್ಕೆ ಒಬ್ಬರು ಶಿಕ್ಷಕರನ್ನು ಮಾರ್ಗದರ್ಶಕರನ್ನಾಗಿ ನಿಯೋಜಿಸಲು ಎಲ್ಲಾ ಪ್ರೌಡಶಾಲೆಗಳ ಮುಖ್ಯ ಶಿಕ್ಷಕರಿಗೆ ತಿಳಿಸಿದ್ದಾರೆ.
ಸಾಕ್ಷಾರ ಮಿತ್ರರಿಗೆ ತರಬೇತಿ
ಚಿಕ್ಕನಾಯಕನಹಳ್ಳಿ,ಜ.21: ತಾಲೂಕಿನಲ್ಲಿರವ ಅನಕ್ಷರಸ್ಥರನ್ನು ಸಾಕ್ಷರರನ್ನಾಗಿ ಮಾಡುವ ನಿಟ್ಟಿನಲ್ಲಿ ಸಾಕ್ಷರ ಭಾರತ್ 2012ನ್ನು ಅನುಷ್ಠಾನ ಗೊಳಿಸಲು ಇದೇ 25ರಂದು ಬೆಳಗ್ಗೆ 10 ಗಂಟೆಗೆ ತಾಲೂಕು ಪಂಚಾಯ್ತಿ ಸಭಾ ಭವನದಲ್ಲಿ ತರಬೇತಿ ಶಿಬಿರವನ್ನು ಏರ್ಪಡಿಲಾಗಿದೆ ಎಂದು ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಎನ್.ಎಂ.ದಯಾನಂದ್ ತಿಳಿಸಿದ್ದಾರೆ.
ಜಿಲ್ಲಾ ಲೋಕ ಶಿಕ್ಷಣ ಸಮಿತಿ ಮತ್ತು ತಾಲೂಕು ಲೋಕ ಶಿಕ್ಷಣ ಸಮಿತಿಯವರ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದು ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯ್ತಿ ಮತ್ತು ತಾಲೂಕು ಪಂಚಾಯ್ತಿ ಅಧ್ಯಕ್ಷರುಗಳು ಶಿಬಿರದಲ್ಲಿ ಭಾಹವಹಿಸಲು ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.
ಚಿ.ತಾ.ಮೂ.ಗೆಳೆಯರ ಒಕ್ಕೂಟದ ಕಾರ್ಯಕ್ರಮ
ಚಿಕ್ಕನಾಯಕನಹಳ್ಳಿ,ಜ.21: ಬೆಂಗಳೂರಿನ ಚಿಕ್ಕನಾಯಕನಹಳ್ಳಿ ತಾಲೂಕು ಮೂಲದ ಗೆಳೆಯರ ಒಕ್ಕೂಟ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಇದೇ 23ರ ಭಾನುವಾರ ಬೆಳಗ್ಗೆ 10.30ಕ್ಕೆ ಏರ್ಪಡಿಸಲಾಗಿದೆ.
ಸಮಾರಂಭವನ್ನು ಬೆಂಗಳೂರಿನ ಜೆ.ಸಿ.ರಸ್ತೆಯ ನಯನ ಸಭಾಂಗಣದ ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದು ಬಿ.ಬಿ.ಎಂ.ಪಿ ಸೂಪರಿಟೆಂಡೆಂಟ್ ಎಂಜಿನಿಯರ್ ಆರ್.ಎಲ್.ಪರಮೇಶ್ವರಯ್ಯ ಸಮಾರಂಭ ಉದ್ಘಾಟಿಸಿಲಿದ್ದು ಚಿ.ನಾ.ಹಳ್ಳಿ ತಾ.ಮೂ.ಗೆ.ಬಳಗದ ಅಧ್ಯಕ್ಷ ಸಿ.ಎಂ.ಹೊಸೂರಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರಿನ್ಸಿಪಾಲ್ ಪ್ರೊ.ಸುಜಯ ಮಹಲಿಂಗಪ್ಪ, ವಕೀಲ ಎಸ್.ಹನುಮಂತಯ್ಯ, ಸಾಹಿತಿಗಳಾದ ಎಂ.ವಿ.ನಾಗರಾಜ್ರಾವ್. ಎಚ್.ಎಸ್.ಶಿವಲಿಂಗಯ್ಯ, ಕ.ಪ್ರ.ಜನತಾದಳ ಕಾರ್ಯದಶರ್ಿ ರಮೇಶ್ಬಾಬು, ಚಾಟರ್್ರ್ಡ್ ಅಕೌಂಟೆಂಟ್ ಹೆಚ್.ಸಿ.ಗುರುದತ್, ಸಿವಿಲ್ ಗುತ್ತಿಗೆದಾರ ಸಿ.ಎನ್.ಎಸ್.ಮೂತರ್ಿ, ಸಬ್ರಿಜಿಸ್ಟಾರ್ ಶ್ರೀದೇವಿರಾಮಯ್ಯ, ಆಕರ್ಿಟೆಕ್ಟ್ ಉದಯ್ಕುಮಾರ್, ವಿಜ್ಞಾನಿ ಎಸ್.ಎನ್.ರಾಮಯ್ಯ ಉಪಸ್ಥಿತರಿರುವರು.
ಕುಷ್ಠರೋಗ ಕಂಡುಬಂದರೆ ಉಚಿತ ಚಿಕಿತ್ಸೆಗಾಗಿ ಆರೋಗ್ಯಾಧಿಕಾರಿಗಳನ್ನು ಸಂಪಕರ್ಿಸಲು ಮನವಿ
ಚಿಕ್ಕನಾಯಕನಹಳ್ಳಿ.ಜ.21: ಕುಷ್ಠರೋಗವು ಒಂದು ಸಾಂಕ್ರಾಮಿಕ ರೋಗ ಇದು ಸ್ಪರ್ಶ ಜ್ಞಾನವಿಲ್ಲದ ತಿಳಿಬಿಳಿ ತಾಮ್ರವರ್ಣದ ಕಡಿತ, ನವೆ ಇಲ್ಲದ ಮಚ್ಚೆಗಳೇ ಕುಷ್ಠರೋಗ ಇರಬಹುದು. ಇದು ಮೈಕೋ ಬ್ಯಾಕ್ಟೀರಿಯಂ ಲೆಪ್ರೇ ಎಂಬ ಕ್ರಿಮಿಯಿಂದ ಬರುತ್ತದೆ. ಇದು ಪಾಪಕರ್ಮಗಳಿಂದ ಬರುವುದಿಲ್ಲ ಮತ್ತು ವಂಶ ಪಾರಂಪರ್ಯವಲ್ಲ, ಜನ್ಮತ ಯಾರೂ ಕುಷ್ಟರೋಗಿಗಳಾಗಿ ಹುಟ್ಟುವುದಿಲ್ಲ. ಈ ರೋಗವು ಯಾರಿಗಾದರೂ ಯಾವ ವಯಸ್ಸಿನಲ್ಲಾದರೂ ಬರಬಹುದು. ಕುಷ್ಠರೋಗದ ಲಕ್ಷಣಗಳು ಕಂಡು ಬಂದ ಮೇಲೆಯಾದರೂ ಚಿಕಿತ್ಸೆ ಪಡೆಯದೇ ಹೋದಲ್ಲಿ ಅಂಗವಿಕಲತೆ ಉಂಟಾಗಬಹುದೇ ಹೊರತು ರೋಗದಿಂದ ಅಂಗವಿಕಲತೆ ಬರುವುದಿಲ್ಲ ಕುಷ್ಠರೋಗದ ಬಗ್ಗೆ ಸಲಹೆ ಮತ್ತು ಉಚಿತ ಚಿಕಿತ್ಸೆಗಾಗಿ ನಿಮ್ಮ ಹತ್ತಿರದ ಸಕರ್ಾರಿ ಆಸ್ಪತ್ರೆಗಳಲ್ಲಿ ಮತ್ತು ಸಿಬ್ಬಂದಿ ವರ್ಗದವರನ್ನು ಸಂಪಕರ್ಿಸಬಹದು ಎಂದು ತಾಲೂಕು ಆರೋಗ್ಯಾಧಿಕಾರಿಗಳ ಸಂಪಕರ್ಿಸಲು ಸಾರ್ವಜನಿಕರಲ್ಲಿ ಮನವಿ ಮಾಡಿ ಕೊಂಡಿರುತ್ತಾರೆ.

Thursday, January 20, 2011

ಪುರಸಭಾ ಆಡಳಿತ ಪಕ್ಷದ ಸದಸ್ಯನಿಗೆ ಕಪಾಳ ಮೋಕ್ಷ
ಚಿಕ್ಕನಾಯಕನಹಳ್ಳಿ,ಜ.19: ಇಲ್ಲಿನ ವಿರೋಧ ಪಕ್ಷದ ಸದಸ್ಯರೊಬ್ಬರು ಆಡಳಿತ ಪಕ್ಷದ ಸದಸ್ಯರಿಗೆ ಕಪಾಳ ಮೋಕ್ಷ ಮಾಡಿದ ಪೂರ್ಣ ಸರಿಹೊಂದಿಸುಅಪರೂಪದ ಘಟನೆ ನಡೆಯಿತು.
ಪುರಸಭಾ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಇಂತಹ ಅಪರೂಪದ ಘಟನೆ ಕಪ್ಪು ಚುಕ್ಕಿಯಾಗಿ ಉಳಿಯಿತು. ಸಭೆಯ ಅಜಾಂಡಾದಲ್ಲಿ ಸೇರ್ಪಡೆಯಾಗದಿರುವ ಆಶ್ರಯದ ಸಮಿತಿಯ ಹಕ್ಕು ಮತ್ತು ಜವಬ್ದಾರಿಯ ಬಗ್ಗೆ ಬಂದ ವಿಷಯದ ಮೇಲೆ ವಿರೋಧ ಪಕ್ಷವಾದ ಕಾಂಗ್ರೆಸ್ನ ಸಿ.ಬಸವರಾಜು ಮಾತನಾಡುತ್ತಾ, ನಾವು ಚುನಾಯಿತರಾಗುವ ಮುನ್ನ ಜನರಿಗೆ ಸೈಟ್ ಕೊಡಿಸುತ್ತೇವೆ, ಮನೆ ಕೊಡಿಸುತ್ತೇವೆ ಎಂದೆಲ್ಲಾ ಭರವಸೆ ನೀಡಿ ಗೆದ್ದು ಬಂದಿರುತ್ತೇವೆ. ಅವರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳಬೇಕಾದ ಜವಬ್ದಾರಿ ನಮ್ಮದು, ಆದರೆ ಆಶ್ರಯ ಸಮಿತಿಯಲ್ಲಿ ನಮ್ಮ ಮಾತು ನಡೆಯದಿದ್ದರೆ ಹೇಗೆ ?. ಆ ಸಮಿತಿಯಲ್ಲಿ ಶಾಸಕರು ತಹಶೀಲ್ದಾರ್ ಪುರಸಭಾ ಅಧ್ಯಕ್ಷರು ಅಷ್ಟೇ ಜನರು ನಿಧರ್ಾರ ತೆಗೆದುಕೊಂಡರೆ ಹೇಗೆ ನಮ್ಮ ಮಾತಿಗೂ ಅಲ್ಲಿ ಬೆಲೆ ಇರಬೇಕು, ಆಗಾಗಿ ಆಶ್ರಯ ಸಮಿತಿ ಸಭೆ ಸೇರುವುದಕ್ಕಿಂತ ಮೊದಲು ಶಾಸಕರು ಮತ್ತು ಪುರಸಭಾ ಅಧ್ಯಕ್ಷರು ಸದಸೆರೆಲ್ಲರ ಸಭೆ ಕರೆದು ಸಭೆಯಲ್ಲಿ ಪ್ರತಿ ವಾಡರ್್ಗೆ ಇಂತಿಷ್ಟು ಸೈಟ್ಗಳೆಂದು ಎತ್ತಿಡಿ, ನಾವು ಫಲಾನುಭವಿಗಳ ಪಟ್ಟಿ ಕೊಡುತ್ತೇವೆ, ನಮ್ಮ ಈ ಸಭೆಯಲ್ಲಿ ಸಿದ್ದ ಪಡಿಸಿದ ಪಟ್ಟಿಯನ್ನು ಪುರಸಭಾಧ್ಯಕ್ಷರು ಆಶ್ರಯ ಸಮಿತಿಯ ಸಭೆಯಲ್ಲಿ ಮಂಡಿಸಲಿ ಸಭೆ ಅದಕ್ಕೆ ಅನುಮೋದನೆ ನೀಡಿದರೆ ನಾವು ಜನರಿಗೆ ಕೊಟ್ಟ ಮಾತು ಉಳಿಸಿಕೊಂಡಂತಾಗುತ್ತದೆ ಎಂದು ಕಾಂಗ್ರೆಸ್ನ ಸದಸ್ಯ ಸಿ.ಬಸವರಾಜು ಪ್ರಸ್ತಾಪಿಸಿದರು. ಈ ಸಂದರ್ಭದಲ್ಲಿ ಪುರಸಭಾ ಅಧ್ಯಕ್ಷ ರಾಜಣ್ಣ ಹಾಗೂ ಕೆಲವು ಆಡಳಿತ ಪಕ್ಷದ ಸದಸ್ಯರು ಸಭೆಯ ಗಮನಕ್ಕೆ ತಂದರು ಈ ಸಂದರ್ಭದಲ್ಲಿ ಜೆ.ಡಿ.ಯುನ ಸದಸ್ಯ ಸಿ.ಡಿ.ಚಂದ್ರಶೇಖರ್ ತನ್ನ ಕುಚರ್ಿಯಿಂದ ಎದ್ದು ಬಂದು ನೇರ ಅಧಿಕಾರಿ ವರ್ಗ ದಾಖಲೆಗಳನ್ನು ಇಟ್ಟುಕೊಂಡು ಕುಳಿತಿದ್ದ ಟೇಬಲ್ ಬಳಿ ಬಂದು, ಎಲ್ರಿ ಕೊಡ್ರಿ ಇಲ್ಲಿ ಆಶ್ರಯ ಸಮಿತಿ ನಡಾವಳಿ ಪುಸ್ತಕವನ್ನು ಎನ್ನುತ್ತಲೆ ಪುಸ್ತಕವನ್ನು ತೆಗೆದು ಎತ್ತಿ ತೋರಿಸಿದರು. ಮತ್ತೋರ್ವ ಕಾಂಗ್ರೆಸ್ ಸದಸ್ಯ ಸಿ.ಪಿ ಮಹೇಶ್ ಈ ಪುಸ್ತಕದಲ್ಲಿ ಸಮಿತಿಯಲ್ಲಿದ್ದವರ್ಯಾರು ಸಹಿಯನ್ನೇ ಹಾಕಿಲ್ಲ ನೋಡಿ ಎಂದು ತೋರಿಸಿದರು.
ಈ ಸಮಯಕ್ಕೆ ಸರಿಯಾಗಿ ಅಧ್ಯಕ್ಷರ ಟೇಬಲ್ ಬಳಿ ಇದ್ದ ಇನ್ನೊಂದು ನಡಾವಳಿ ಪುಸ್ತಕವನ್ನು ಕೈಗೆತ್ತಿಕೊಂಡ ಆಡಳಿತ ಪಕ್ಷದ ಸದಸ್ಯ ಎಂ.ಎನ್.ಸುರೇಶ್ ಈ ಪುಸ್ತಕದಲ್ಲಿ ಸಹಿ ಇದೆ ನೋಡಿ ಎನ್ನುತ್ತಾ ಇನ್ನೊಂದು ಪುಸ್ತಕವನ್ನು ಎತ್ತಿ ತೋರಿಸುತ್ತಾ ರೀ ಅಧ್ಯಕ್ಷಕರೆ ಸದಸ್ಯರಿಗೆ ಸರಿಯಾಗಿ ಮಾಹಿತಿ ಕೊಡಿ ಎನ್ನುವ ಮಾತು ಪ್ರೆಸ್ ಗ್ಯಾಲರಿಯಲ್ಲಿ ಕುಳಿತಿದ್ದ ಪತ್ರಕರ್ತರಾದಿಯಾಗಿ ಮುಂದೆ ಕುಳಿತಿದ್ದವರಿಗೆ ಕೇಳಿಸಿದ ಮಾತು.
ಆದರೆ ವಿರೋಧ ಪಕ್ಷದವರ ಕಡೆ ಕುಳಿತಿದ್ದ ನಾಮಿನಿ ಸದಸ್ಯರೊಬ್ಬರು ಕುರಿ ಕಾಯೋರಿಗೆ ಅಧ್ಯಕ್ಷಗಿರಿ ಕೊಟ್ರೆ ಹೀಗೆ ಎಂದು, ಸುರೇಶ್ ಹೇಳಿದರು ಎಂದು ಚಿತಾವಣೆ ಮಾಡಿ ಸಿ.ಬಸವರಾಜು ಸಿಟ್ಟಿಗೇಳುವಂತೆ ಮಾಡಿದರು. ಈ ಹಂತದಲ್ಲಿ ಕುಪಿತರಾದ ಸಿ.ಬಸವರಾಜು ನಿನ್ನ ಅಧ್ಯಕ್ಷ ಮಾಡಿದವರು ಕುರಿಕಾಯೋರು ಗೊತ್ತಾ! ನಮಗೆ ಆದೇಶ ನೀಡಲು ಬರುತ್ತೀಯ ಎನ್ನುತ್ತಲೇ ಸುರೇಶ್ ಮೇಲೆ ಎರಗಿ ಕಪಾಳಕ್ಕೆ ಒಂದು ತಟ್ಟೆ ಬಿಟ್ರು, ಈ ಸಂದರ್ಭದಲ್ಲಿ ಆಡಳಿತ ಪಕ್ಷ ವಿರೋಧ ಪಕ್ಷದವರು ಕೆಲಕಾಲ ವಾದ ವಿವಾದ ನಡೆಸಿದರು. ಈ ಸಂದರ್ಭದಲ್ಲಿ ಅಧ್ಯಕ್ಷರು ಎರಡೂ ಪಕ್ಷದವರನ್ನು ಸಮಾಧಾನ ಪಡಿಸಿದರು. ಈ ಸಭೆಯ ಅಜಾಂಡದಲ್ಲಿ ಇಲ್ಲದ ವಿಷಯ ಚಚರ್ಿಸೋದು ಬೇಡ ಮುಂದಿನ ದಿನ ಈ ವಿಷಯವಾಗಿ ಚಚರ್ಿಸೋಣ ಎಂದು ಎಲ್ಲರನ್ನು ಸಮಾಧಾನಿಸಿ ಸಭೆ ನಡೆಸಿದರು.
ಸಭೆಯಲ್ಲಿ ಉಪಾಧ್ಯಕ್ಷೆ ಕವಿತಾ ಚನ್ನಬಸವಯ್ಯ, ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಎಸ್.ರಮೇಶ್ ವಿರೋಧ ಪಕ್ಷದ ಬಾಬು ಸಾಹೇಬ್, ನಾಮಿನಿ ಸದಸ್ಯರುಗಳು ಇಂತಹ ದುರ್ಘಟನೆಗೆ ಸಾಕ್ಷಿಯಾಗಿದ್ದರು.


Tuesday, January 18, 2011

Monday, January 17, 2011

ಕುವೆಂಪುರವರಿಗೆ ಶಿಕ್ಷಣ, ವಿವಾಹ, ಕೆಲಸ, ಎಲ್ಲವನ್ನು ನೀಡಿದ್ದು ರಾಮಕೃಷ್ಣಾಶ್ರಮ: ವಿರೇಶನಂದಜೀ.
ಚಿಕ್ಕನಾಯಕನಹಳ್ಳಿ,ಜ.17: ರಾಷ್ಟ್ರ ಕವಿ ಕು.ವೆಂ.ಪು.ರವರಿಗೆ ವಿದ್ಯಾಭ್ಯಾಸವನ್ನು ಕೊಡಿಸಿ, ಕೆಲಸಕ್ಕೆ ಸೇರಿಸಿದ್ದು, ಅವರ ವಿವಾಹವನ್ನು ಮಾಡಿಸಿದ್ದು ಮೈಸೂರಿನ ರಾಮಕೃಷ್ಣಾಶ್ರಮದ ಸ್ವಾಮಿ ಸಿದ್ದೇಶ್ವರಾನಂದರು ಎಂದು ತುಮಕೂರಿನ ರಾಮಕೃಷ್ಣಾಶ್ರಮದ ಸ್ವಾಮಿ ವಿರೇಶನಂದಜೀರವರು ತಿಳಿಸಿದರು.
ಪಟ್ಟಣದ ಬಿ.ಆರ್.ಸಿ. ಸಭಾಂಗಣದಲ್ಲಿ ತಾಲೂಕು ಕಾಸಾಪ, ಪತ್ರಕರ್ತರ ಸಂಘ ಮತ್ತು ಮಲ್ಲಿಕಾಜರ್ುನ ಡಿ.ಇಡಿ ಕಾಲೇಜು ವತಿಯಿಂದ ನಡೆದ ರಾಷ್ಟ್ರಕವಿ ಕುವೆಂಪು-ಸ್ವಾಮಿ ವಿವೇಕಾನಂದರ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಕುವೆಂಪು ಕಂಡಂತೆ ರಾಮಕೃಷ್ಣ ವಿವೇಕನಂದರು ಎಂಬ ವಿಷಯವಾಗಿ ಮಾತನಾಡಿದರು.
ಕುಪ್ಪಳಿಯಿಂದ ಮೈಸೂರಿಗೆ ವಿದ್ಯಾಭ್ಯಾಸದ ಸಲುವಾಗಿ ಬಂದ ಪುಟ್ಟಪ್ಪ ಎಂಬ ಬಾಲಕನ ಮೈತುಂಬಾ ಗಾಯಗಳೆದ್ದು ವ್ರಣವಾಗಿದ್ದು, ದೇಹಕ್ಕೆ ಆರೈಕೆ ನೀಡಿ, ಅವರ ವ್ಯಕ್ತಿತ್ವವನ್ನು ರೂಪಿಸಿ ಕೊನೆಗೆ ಸ್ವಾಮಿಜಿಗಳೇ ತಮ್ಮ ಭಕ್ತರ ಮನೆಯ ಮಗಳೊಂದಿಗೆ ಮದುವೆ ಮಾಡಿಸಿದ್ದು ಸ್ವಾಮಿ ಸಿದ್ದೇಶ್ವರನಂದರು ಎಂದರು, ರಾಮಕೃಷ್ಣಾಶ್ರಮ ಧರ್ಮವನ್ನು ಬೋಧಿಸುತ್ತದೆ ಹೊರತು ಮತವನ್ನಲ್ಲ ಎಂದ ಅವರು, ಧರ್ಮದ ಹೆಸರಿನಲ್ಲಿ ಮೋಸವಾಗಿದೆಯೇ ಹೊರತು ಧರ್ಮವೇ ಮೋಸವಲ್ಲ, ಧರ್ಮವು ಬುದ್ದಿ ಹಾಗೂ ಹೃದಯದ ಸಂಸ್ಕಾರಕ್ಕೆ ಹೆಸರಾಗಿದೆ.
ಭಾರತೀಯರು ಸರ್ವಧರ್ಮ ಸಮನ್ವತೆಯಿಂದ ಕೂಡಿದ್ದು ಅವರ ಆಧ್ಮಾತ್ಮಿಕ ಸಂಸ್ಕೃತಿಯನ್ನು ಬೇರ್ಪಡಿವುದು ಅಸಾಧ್ಯವಾಗಿದೆ, ಅಮೇರಿಕ, ಜಪಾನ್ ವಾಣಿಜ್ಯ ಮತ್ತು ತಾಂತ್ರಿಕತೆಯನ್ನು ಬಿಡುವುದಿಲ್ಲವೋ, ಭಾರತ ಧರ್ಮದ ಸಂಸ್ಕೃತಿಯನ್ನು ಮರೆತು ದೂರವಾಗುವುದಿಲ್ಲ ಎಂದರು. ಕುವೆಂಪುರವರು ವಿವೇಕಾನಂದರ ಬಗ್ಗೆ ತಿಳಿಸಿದಂತೆ ಕಷ್ಟಗಳೇ ನಮ್ಮನ್ನು ರೂಪಿಸುವುದು, ಕೇವಲ ಮೋಜಿಗಾಗಿ, ಶೋಕಿಗಾಗಿ ನೈತಿಕ ಮಟ್ಟದಿಂದ ಕುಸಿಯುತ್ತಿರುವ ಯುವಕರು ವೈಚಾರಿಕತೆ, ಆದರ್ಶಗಳನ್ನು ರೂಪಿಸಿಕೊಂಡು ಸ್ವಪ್ರಯತ್ನದಿಂದ ಹೋರಾಡುವ ಮನೋಭಾವ ಬೆಳಸಿಕೊಳ್ಳಬೇಕೆಂದರು.
ಎಲ್ಲಿ ಅಪಾರವಾದ ಪ್ರೀತಿ ಇರುತ್ತದೆಯೋ ಅಲ್ಲಿ ಉತ್ಸಾಹದ ಮನಸ್ಸಿರುತ್ತದೆ ಇದು ರಾಮಕೃಷ್ಣರು ವಿವೇಕಾನಂದರಿಗೆ ನೀಡಿ ಅವರ ಗುರಿಗೆ ದಾರಿಯಾಗಲು ಮುಖ್ಯ ಕಾರಣ ಎಂದರು.
ಬಿ.ಇ.ಓ ಸಾ.ಚಿ.ನಾಗೇಶ್ ಮಾತನಾಡಿ ರಾಮಕೃಷ್ಣ ಆಶ್ರಮದಲ್ಲಿನ ಸಮಯ ಪ್ರಜ್ಞೆ ಹಾಗೂ ಆಧ್ಮಾತ್ಮಿಕ ವಾತಾವರಣ ಅನುಕರಣೀಯ ಮಠದ ಒಡನಾಟ ಇಟ್ಟು ಕೊಂಡವರ ಜೀವನ ಶೈಲಿ ವಿಶೇಷವಾಗಿರುತ್ತದೆ ಎಂದ ಅವರು, ವಿವೇಕಾನಂದರ ಆದರ್ಶಗಳು ಇಂದಿನ ಯುವಕರಿಗೆ ಮಾರ್ಗದರ್ಶನವಾಗಬೇಕು, ಉತ್ತಮ ರಾಷ್ಟ್ರ ನಿಮರ್ಾಣದ ಅನುಷ್ಠಾನಕ್ಕಾಗಿ ವಿವೇಕಾನಂದರು ಸಾಕಷ್ಟು ಶ್ರಮಿಸಿದರು. ಯುವಕರ ಪಡೆಯನ್ನು ಕಟ್ಟಿ ಉತ್ತಮ ದೇಶ ನಿಮರ್ಾಣದ ಗುರಿ ಹೊಂದಿದವರು ವಿವೇಕಾನಂದರು ಅವರ ಆದರ್ಶವನ್ನು ಮೈಗೂಡಿಸಿಕೊಂಡ ಕುವೆಂಪುರವರು ರಾಷ್ಟ್ರಕವಿಯ ಹಿರಿಮೆಗೆ ಪಾತ್ರರಾದರು ಎಂದರು.
ಸಮಾರಂಭದಲ್ಲಿ ಕಸಾಪ ಅಧ್ಯಕ್ಷ ಎಂ.ವಿ.ನಾಗರಾಜ್ರಾವ್, ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಜಿ.ರಾಜೀವಲೋಚನ, ಮಲ್ಲಿಕಾಜರ್ುನ ಡಿ.ಇಡಿ ಪ್ರಾಂಶುಪಾಲ ಎಂ.ವಿ.ರಾಜ್ಕುಮಾರ್, ಬಿ.ಆರ್.ಸಿ ಎನ್.ಎಸ್.ಸುಧಾಕರ್ ಮಾತನಾಡಿದರು.
ಸಮಾರಂಭದಲ್ಲಿ ತಾಲೂಕಿನ ಕೀರ್ತಯನ್ನು ಬೆಳಗಿಸಿದ ಪ್ರತಿಭಾವಂತ ವಿದ್ಯಾಥರ್ಿನಿಯರಾದ ಆರ್.ಭವ್ಯ, ಜ್ಯೋತಿ, ಆರ್.ವೀಣಾ, ಕರಣಾರವರನ್ನು ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಕ.ಸಾ.ಪ.ಕಾರ್ಯದಶರ್ಿ ಸಿ.ಗುರುಮೂತರ್ಿ ಕೊಟಿಗೆಮನೆ ಸ್ವಾಗತಿಸಿದರೆ, ಲಿಂಗರಾಜು ನಿರೂಪಿಸಿ, ಚಿದಾನಂದ್ ವಂದಿಸಿದರು.

ಅಧಿಕಾರಿಗಳ ಅಜ್ಞಾನದಿಂದ ನೂರಾರು ಯುವಕರು ಉದ್ಯೋಗದಿಂದ ವಂಚಿತ
ಚಿಕ್ಕನಾಯಕನಹಳ್ಳಿ,ಜ.17: ಅಧಿಕಾರಿಗಳ ಅಜ್ಞಾನದಿಂದ ಪಟ್ಟಣದ ನೂರಾರು ವಿದ್ಯಾಥರ್ಿಗಳು ಗ್ರಾಮೀಣ ಖೋಟಾದಡಿ ಉದ್ಯೊಗ ಅವಕಾಶದಿಂದ ವಂಚಿತವಾಗುತ್ತಿರುವ ಅಂಶ ಕಳೆದ 10 ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದೆ.
ಚಿಕ್ಕನಾಯಕನಹಳ್ಳಿಪಟ್ಟಣದಲ್ಲಿ 1995-96ರವರೆಗೆ ಎಸ್.ಎಸ್.ಎಲ್.ಸಿ. ವಿದ್ಯಾಭ್ಯಾಸ ಮಾಡಿದ ಎಲ್ಲಾ ವಿದ್ಯಾಥರ್ಿಗಳಿಗೂ ಗ್ರಾಮೀಣ ಖೋಟಾದ ಸವಲತ್ತು ಸಿಗುತ್ತದೆ, ಆದರೆ 1996ರ ನಂತರ ಇಲ್ಲಿ ವಿದ್ಯಾಭ್ಯಾಸ ಮಾಡಿದವರಿಗೆ ಈ ಸವಲತ್ತು ಸಿಗುವುದಿಲ್ಲ ಕಾರಣ ಚಿಕ್ಕನಾಯಕನಹಳ್ಳಿಯನ್ನು ನಗರ ಪ್ರದೇಶವೆಂದು ಸಕರ್ಾರ ಘೋಷಣೆ ಮಾಡಿದೆ. ಆದರೆ ಕೆಲವು ಅಧಿಕಾರಿಗಳು ಈ ಆದೇಶವನ್ನು ತಪ್ಪಾಗಿ ಅಥರ್ೈಸಿಕೊಂಡು ಕಳೆದ 10 ವರ್ಷಗಳಿಂದ ಗ್ರಾಮೀಣ ವಿದ್ಯಾಥರ್ಿ ಖೋಟಾವನ್ನು ಇಲ್ಲಿಯ ವಿದ್ಯಾಥರ್ಿಗಳಿಗೆ ದೊರಕದಂತೆ ಮಾಡಿದ್ದಾರೆ.
ಚಿಕ್ಕನಾಯಕನಹಳ್ಳಿ ಪಟ್ಟಣದ ನಗರ ಪ್ರದೇಶವೆಂದು 1995ರಲ್ಲಿ ಘೋಷಣೆಯಾಗಿದೆ ಆದ್ದರಿಂದ ನಿಮಗೆ ಗ್ರಾಮೀಣ ಪ್ರದೇಶವೆಂದು ಕೊಡಲು ಬರುವುದಿಲ್ಲವೆಂದು ಹೇಳಿ ನೂರಾರು ವಿದ್ಯಾಥರ್ಿಗಳಿಗೆ ಅನ್ಯಾಯವೆಸಗಿದ್ದಾರೆ.
ಎಷ್ಟೋ ವಿದ್ಯಾಥರ್ಿಗಳು ಈ ಬಗ್ಗೆ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡುವ ಉದ್ದೇಶದಿಂದ ನಾವು 1995ಕ್ಕಿಂತ ಹಿಂದೆ ಇಲ್ಲಿ ಓದಿದವರು, ನಮಗೆ ಈ ಆದೇಶ ಅನ್ವಯವಾಗುವುದಿಲ್ಲವೆಂದು ತಿಳಿಸಿದರೂ ಅಥೈಸಿಕೊಳ್ಳದ ಅಧಿಕಾರಿಗಳು ಬೇಜವಬ್ದಾರಿಯಿಂದ ವತರ್ಿಸಿ ಉದ್ಯೋಗಾಂಕ್ಷಿಗಳಿಗೆ ಉತ್ಸಾಹಕ್ಕೆ ತಣ್ಣೀರ್ರೆಚಿದ್ದಾರೆ.
ಈ ವಿಷಯವನ್ನು ಜಿ.ಆರ್.ಶ್ರೀನಿವಾಸ ಎಂಬವರು ಹೈಕೋಟರ್್ನಲ್ಲಿ ಪ್ರಶ್ನಿಸಿದ್ದರಿಂದ, ಹೈಕೋಟರ್್ನ ನ್ಯಾಯ ಮೂತರ್ಿ ಎನ್.ಕುಮಾರ್ ಈ ವಿಷಯವಾಗಿ ತೀಪರ್ುನೀಡಿ, 1995-96ಕ್ಕಿಂತ ಹಿಂದೆ ಒಂದರಿಂದ ಹತ್ತನೇ ತರಗತಿಯವರೆಗೆ ಚಿಕ್ಕನಾಯಕನಹಳ್ಳಿಯಲ್ಲಿ ಓದಿದ್ದರೆ ಅವರಿಗೆ ಗ್ರಾಮೀಣ ವಿದ್ಯಾಥರ್ಿ ಖೋಟಾ ನೀಡಬಹುದೆಂದು ಕಳೆದ ಡಿಸೆಂಬರ್6 ರಂದು ಆದೇಶ ನೀಡಿದ್ದಾರೆ.
ಈ ಆದೇಶ ಈಗಿನ ಉದ್ಯೋಗಾಕ್ಷಿಗಳಿಗೆ ಅನುಕೂಲವಾಗುತ್ತದೆ, ಆದರೆ ಇಲ್ಲಿಯವರೆಗೆ ಇದರಿಂದ ನೊಂದವರಿಗೆ ಅಧಿಕಾರಿಗಳು ಏನು ಪರಿಹಾರ ನೀಡುತ್ತಾರೆ. . . .?
30 ವರ್ಷಗಳಿಂದ ರಾತ್ರಿ ಸಮಯದಲ್ಲಿ ಬೆಳಕನ್ನೇಕಾಣದ ಬೀದಿ ಇಲ್ಲಿದೆ.
ಚಿಕ್ಕನಾಯಕನಹಳ್ಳಿ,ಜ.17: ಪಟ್ಟಣದ ಎಸ್.ಬಿ.ಎಂ. ಕಟ್ಟಡದ ಪಕ್ಕದ ಬೀದಿಯಲ್ಲಿ ಕಳೆದ 30 ವರ್ಷಗಳಿಂದ ಬೀದಿ ದೀಪದ ವ್ಯವಸ್ಥೆಯೇ ಇಲ್ಲವೆಂದರೆ, ಇದು ಪುರಸಭೆಯವರಿಗೆ ನಾಚಿಕೆಯಾಗಬೇಕಾದ ವಿಷಯ.
ಇಲ್ಲಿಯ ನಿವಾಸಿಗಳು ಕಳೆದ 30 ವರ್ಷಗಳಿಂದ ಮನೆ ಕಟ್ಟಿಕೊಂಡು ವಾಸಿಸುತ್ತಿದ್ದಾರೆ, ಈ ರಸ್ತೆ ಪಟ್ಟಣದ ಹೃದಯದ ಭಾಗದಲ್ಲಿದೆ, ಅಷ್ಟೇ ಅಲ್ಲ ನಿಮರ್ಾಣ ಹಂತದಲ್ಲಿರುವ ತಾಲೂಕು ಕ್ರೀಡಾಂಗಣಕ್ಕೆ ಕೂಗಳತೆಯಷ್ಟು ದೂರು, ಪಟ್ಟಣದ ಹೆಸರಾಂತ ಅಭಿಯಂತರ ದೊರೆಸ್ವಾಮಿ ಇಲ್ಲಿಯ ನಿವಾಸಿ, ತಿಪಟೂರು ಉಪವಿಭಾಗಾಧಿಕಾರಿಗಳ ಕಛೇರಿಯಲ್ಲಿ ಕೀ ಪೋಸ್ಟ್ನಲ್ಲಿರುವ ಲಕ್ಷ್ಮಣಪ್ಪ ಕಳೆದ ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಇಲ್ಲಿಯ ನಿವಾಸಿ. ಇವರೆಲ್ಲಾ ಹತ್ತಾರು ಭಾರಿ ಈ ವಿಷಯವನ್ನು ಪುರಸಭೆಯವರ ಗಮನಕ್ಕೆ ತಂದರು ಇಲ್ಲಿಗೆ ಬೀದಿ ದೀಪದ ವ್ಯವಸ್ಥೆ ಆಗಿಲ್ಲ, ಇನ್ನೊಂದು ವಿಶೇಷವೆಂದರೆ ಈ ವಾಡರ್್ನ ಸದಸ್ಯೆ ಈಗಿನ ಪುರಸಭಾ ಉಪಾಧ್ಯಕ್ಷೆ, ಅವರಿಗೂ ಇಲ್ಲಿಯ ಜನ ತಮ್ಮ ಬೇಡಿಕೆಯನ್ನು ಅನೇಕ ಭಾರಿ ಸಲ್ಲಿಸಿದರೂ ಇದುವರೆಗೆ ಪ್ರಯೋಜನವಾಗಿಲ್ಲವೆಂಬುದು ಖೇದಕರ.
ಈ ಬೀದಿಯ ಹಿಂಬದಿಯ ಬೀದಿ, ಇತ್ತೀಚೆಗೆ ನಿಮರ್ಾಣಗೊಂಡದ್ದು. ಕಳೆದ 10 ವರ್ಷಗಳ ಹಿಂದೆ ಈ ಪ್ರದೇಶ ಜನ ನಿಭೀಡ ಪ್ರದೇಶ. ಇತ್ತೀಚೆಗಷ್ಟೇ ಇಲ್ಲಿ ಹೊಸ ಮನೆಗಳು ನಿಮರ್ಾಣವಾಗಿದ್ದು ಇವರಿಗೆ ಬೀದಿ ದೀಪದ ವ್ಯವಸ್ಥೆ ದೊರೆತಿದೆ, ಆದರೆ ಕಳೆದ 30 ವರ್ಷಗಳಿಂದ ವಾಸ ಮಾಡುತ್ತಿರುವ ದೊರೆಸ್ವಾಮಿಯವರ ಬೀದಿಗೆ ದೀಪದ ವ್ಯವಸ್ಥೆ ಇಲ್ಲವೆಂಬುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಪುರಸಭೆಯವರು ತಕ್ಷಣವೇ ಅಲ್ಲಿಗೆ ಬೀದಿ ದೀಪ ಅಳವಡಿಸಿ ತಮ್ಮ ಮಯರ್ಾದೆಯನ್ನು ಕಾಪಾಡಿಕೊಳ್ಳುವರೇ ? ಕಾದು ನೋಡಬೇಕು.Friday, January 14, 2011

ಪಲ್ಸ್ ಪೊಲೀಯೊ ಯಶಸ್ವಿಗೆ ಸಕಲ ಸಿದ್ದತೆ: ತಹಶೀಲ್ದಾರ್
ಚಿಕ್ಕನಾಯಕನಹಳ್ಳಿ.ಜ.14: ಇದೇ 23 ಹಾಗೂ ಫೆಬ್ರವರಿ 27 ಈ ಎರಡು ದಿನಗಳು ಪೊಲೀಯೋ ಲಸಿಕೆಯನ್ನು ಮಕ್ಕಳಿಗೆ ಹಾಕಲಾಗುವುದು, ಈ ಪಲ್ಸ್ ಪೋಲಿಯೋ ರಾಷ್ಟ್ರೀಯ ಕಾರ್ಯಕ್ರಮವಾಗಿದ್ದು ಇದರ ಯಶಸ್ವಿಗೆ ಸಾರ್ವಜನಿಕರು, ಸಕರ್ಾರಿ ಇಲಾಖೆಗಳು, ಸಂಘಸಂಸ್ಥೆಗಳು ಸೇರಿದಂತೆ ಎಲ್ಲರೂ ಕೈಜೋಡಿಸಬೇಕೆಂದು ತಹಶೀಲ್ದಾರ್ ಟಿ.ಸಿ.ಕಾಂತರಾಜು ಕೋರಿದರು.
ಪಲ್ಸ್ಪೋಲಿಯೋ ಕಾರ್ಯಕ್ರಮದ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ನೂರಕ್ಕೆ ನೂರರಷ್ಟು ಪೋಲಿಯೋ ಹನಿಯನ್ನು ಹಾಕಿಸಲು ಎಲ್ಲಾ ಅಧಿಕಾರಿಗಳು ಸಿಬ್ಬಂದಿಗಳು, ಎಲ್ಲಾ ಸಂಘ ಸಂಸ್ಥೆಗಳ ಅಧ್ಯಕ್ಷರು ಹಾಗೂ ನಾಗರೀಕರು ಸಹಕರಿಸಬೇಕೆಂದು ಕೋರಿದ ಅವರು, ಅಂಗನವಾಡಿ ಕೇಂದ್ರದ ಸಿಬ್ಬಂದಿ, ಬೆಸ್ಕಾಂನವರು ಹಾಗೂ ಲಸಿಕೆಗೆ ಸರಬರಾಜು ಮಾಡುವ ಆರೋಗ್ಯ ಇಲಾಖೆಯವರು, ವಾಕ್ಸನ್ ಮತ್ತು ಅದಕ್ಕೆ ಬೇಕಾದ ಪರಿಕರಗಳನ್ನು ತಲುಪಿಸುವ ಜವಾಬ್ದಾರಿಯನ್ನು ನಿರ್ವಹಿಸುವಂತೆ ವಾಹನಗಳನ್ನು ಹೊಂದಿರುವ ಎಲ್ಲಾ ಇಲಾಖೆಯ ಅಧಿಕಾರಿಗಳಿಗೆ ಸಹಕಾರ ನೀಡುವಂತೆ ಕೋರಲಾಯಿತು. ವಾಹನಗಳು 22ರ ಸಂಜೆಯೇ ತಾಲೂಕು ಆರೋಗ್ಯಾಧಿಕಾರಿಗಳ ಬಳಿ ಹಾಜರಾಗುವಂತೆ ತಿಳಿಸಲಾಯಿತು.
ಯಾವ ಅಂಗನವಾಡಿ ಕೇಂದ್ರಗಳಲ್ಲಿ ಪಲ್ಸ್ ಪೋಲಿಯೋ ಬೂತ್ಗಳನ್ನು ಸ್ಥಾಪಿಸಲಾಗುವುದೋ ಅಂತಹ ಕೇಂದ್ರಗಳಲ್ಲಿ ಅಂಗನವಾಡಿ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತರು ಹಾಗೂ ಆರೋಗ್ಯ ಇಲಾಖೆಯ ಒಬ್ಬರು ಖಡ್ಡಾಯವಾಗಿ ಹಾಜರಿದ್ದರು ಪಲ್ಸ್ ಪೋಲಿಯೋ ಕಾರ್ಯಕ್ರಮವನ್ನು ನಡೆಸಬೇಕೆಂದು ಸಭೆಯಲ್ಲಿ ತೀಮರ್ಾನಿಸಲಾಯಿತು.
ತಾ.ಪಂ. ಇ.ಓ, ನಡೆಯುವ ಪಲ್ಸ್ ಪೋಲಿಯೋ ಬೂತ್ಗಳಲ್ಲಿ ಕೆಲಸ ನಿರ್ವಹಿಸುವ ನೌಕರರಿಗೆ ಊಟದ ತೊಂದರೆಯಾಗುವುದರಿಂದ ಗ್ರಾಮ ಪಂಚಾಯತಿಯವರು ಈ ಜವಬ್ಚಾರಿಯನ್ನು ಹೊತ್ತು ಆಹಾರ ಸರಬರಾಜು ಮಾಡುವಂತೆ ತೀಮರ್ಾನಿಸಲಾಯಿತು.
ಬೂತ್ ಹಾಗೂ ಮನೆಗಳ ಸವರ್ೆ ಕಾರ್ಯ ನಿರ್ವಹಣೆಯಲ್ಲಿ ಅಂಗನವಾಡಿ ಕಾರ್ಯಕತರ್ೆಯರು ಹಾಗೂ ಆಶಾ ಕಾರ್ಯಕತರ್ೆಯರ ನಿಯೋಜನೆಯಲ್ಲಿ ಉಂಟಾಗಿರುವ ಸಮಸ್ಯೆ ನಿವಾರಣೆ ಬಗ್ಗೆ ತಾಲೂಕು ಆರೋಗ್ಯಾಧಿಕಾರಿಗಳು ಮತ್ತು ಶಿಶು ಅಭಿವೃದ್ದಿ ಅಧಿಕಾರಿಗಳು ಚಚರ್ಿಸಿ ತೀಮರ್ಾನ ತೆಗೆದುಕೊಳ್ಳಲು ಸಭೆಯಲ್ಲಿ ನಿರ್ಧರಿಸಲಾಯಿತು.
ಶಾಲೆಯ ಮಕ್ಕಳನ್ನು ಸೇರಿಸಿ ಪಲ್ಸ್ ಪೋಲಿಯೋ ಬಗ್ಗೆ ಜಾಗೃತಿ ಜಾಥಾವನ್ನು ಮಾಡಲು ಮತ್ತು ಪ್ರತಿ ಹೋಬಳಿ ಮಟ್ಟದ ಶಾಲೆಗಳಲ್ಲೂ ಬಿ.ಇಓ ರವರ ಅನುಮತಿ ಪಡೆದು ಶಾಲಾ ಮಕ್ಕಳಿಂದ ಜಾಥಾ ಕಾರ್ಯಮಾಡಿ ಜಾಗೃತಿ ಮೂಡಿಸಲು ತೀಮರ್ಾನಿಸಲಾಯಿತು. ಪಲ್ಸ್ ಪೋಲಿಯೋ ಕಾರ್ಯಕ್ರಮಕ್ಕೆ ಅಗತ್ಯ ಕರ ಪತ್ರಗಳನ್ನು ಮುದ್ರಿಸಿ ಸರಬರಾಜು ಮಾಡುವ ಜವಬ್ದಾರಿಯನ್ನು ಪುರಸಭೆಗೆ ವಹಿಸಲಾಯಿತು ಮತ್ತು ಸ್ಕೌಟ್ಸ್ ಗೈಡ್ಸ್ ವಿದ್ಯಾಥರ್ಿಗಳನ್ನು ಬಳಸಿಕೊಳ್ಳುವಂತೆ ತೀಮರ್ಾನಿಸಲಾಯಿತು.
ಸಭೆಯಲ್ಲಿ ಡಾ.ಶಿವಕುಮಾರ್,


ಚಿಕ್ಕನಾಯಕನಹಳ್ಳಿ,ಜ.14: ರಾಷ್ಟ್ರಕವಿ ಕುವೆಂಪು-ಸ್ವಾಮಿ ವಿವೇಕಾನಂದರ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಇದೇ 17ರಸೋಮವಾರ ತಾ.ಕಸಾಪ, ಹಾಗೂ ಪತ್ರಕರ್ತರ ಸಂಘ ಮತ್ತು ಮಲ್ಲಿಕಾಜರ್ುನ ಡಿ.ಇಡಿ ಕಾಲೇಜು ಇವರಗಳ ಸಂಯುಕ್ತಾಶ್ರಯದಲ್ಲಿ ಬೆಳಗ್ಗೆ 11ಕ್ಕೆ ಏರ್ಪಡಿಸಲಾಗಿದೆ.
ಸಮಾರಂಭವನ್ನು ಪಟ್ಟಣದ ಬಿ.ಆರ್.ಸಿ ಸಭಾಂಗಣದಲ್ಲಿ ಏರ್ಪಡಿಸಿದ್ದು ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮೀ ವಿರೇಶಾನಂದಜೀ ಕುವೆಂಪು ಕಂಡಂತೆ ರಾಮಕೃಷ್ಣ-ವಿವೇಕಾನಂದರು ಎಂಬ ವಿಷಯವಾಗಿ ಮಾತನಾಡಲಿದ್ದಾರೆ.
ತಾ.ಕಸಾಪ ಅಧ್ಯಕ್ಷ ಎಂ.ವಿ.ನಾಗರಾಜ್ರಾವ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು ಮಲ್ಲಿಕಾಜರ್ುನ ಡಿ.ಇಡಿ ಕಾಲೇಜಿನ ಪ್ರಾಂಶುಪಾಲ ಎಂ.ವಿ.ರಾಜಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ, ಬಿ.ಇ.ಓ ಸಾ.ಚಿ.ನಾಗೇಶ್ ಸಮಾರಂಭದ ಉದ್ಘಾಟನೆ ನೆರವೇರಿಸಲಿದ್ದಾರೆ.
ಸಮಾರಂಭದಲ್ಲಿ ತಾ.ಕಾ.ನಿ.ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಜಿ.ರಾಜೀವಲೋಚನ ಮತ್ತು ಬಿ.ಆರ್.ಸಿ ಎನ್.ಎಸ್.ಸುಧಾಕರ್ರವರು ಪ್ರತಿಭಾ ಸನ್ಮಾನವನ್ನು ನಡೆಸಿಕೊಡಲಿದ್ದಾರೆ.

Thursday, January 13, 2011

ರಾಜ್ಯದ ವಿಧಾನ ಸಭೆಯಲ್ಲಿ ವಿರೋಧ ಪಕ್ಷವೇ ಇಲ್ಲ
ಚಿಕ್ಕನಾಯಕನಹಳ್ಳಿ,ಜ.13: ಸಕರ್ಾರವನ್ನು ರಚಿಸಿ, ಸಕರ್ಾರದ ಹಲವು ಯೋಜನೆಗಳಿಂದ ಕೋಟ್ಯಾಂತರ ಹಣವನ್ನು ಲೂಟಿ ಮಾಡಿ ತಮ್ಮ ಸ್ಚಂತಕ್ಕೆ ಮತ್ತು ಚುನಾವಣೆ ಸಮಯದಲ್ಲಿ ಬಳಸಿ ಇಂತಿಷ್ಟು ಹಣವೆಂದು ಹಂಚುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನ್ನು ಬಹಿರಂಗವಾಗಿ ರಾಜ್ಯದ ಲೂಟಿಕೋರ ಪಕ್ಷಗಳು ಹರಾಜು ಮಾಡುತ್ತಿದ್ದಾರೆ ಎಂದು ಜೆ.ಡಿ.ಯು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಶರದ್ಯಾದವ್ ಹೇಳಿದರು.
ಪಟ್ಟಣದ ನವೋದಯ ಪ್ರಥಮ ದಜರ್ೆ ಕಾಲೇಜಿನ ಆವರಣದಲ್ಲಿ ನಡೆದ ಜನತಾದಳ ಸಂಯುಕ್ತ ಸಭೆಯ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಈಗ ನಡೆಯುತ್ತಿರುವ ಕ್ರಿಕೆಟ್ ಬೆಟ್ಟಿಂಗ್ನಂತೆ ಜನತೆಗೆ ತಲಾ ಇಂತಿಷ್ಟು ಹಣವೆಂದು ನಿಗದಿ ಪಡಿಸಿ ಇಲ್ಲಿನ ಪ್ರಜೆಗಳನ್ನು ಓಟಿಗಾಗಿ ಕೊಂಡುಕೊಳ್ಳುತ್ತಿದ್ದಾರೆ, ಇದರಿಂದ ರಾಜ್ಯದಲ್ಲಿ ಪ್ರಜಾತಂತ್ರ ಮತ್ತು ಲೋಕತಂತ್ರ ವ್ಯವಸ್ಥೆಯು ಬದಲಾವಣೆಯಾಗಿ ಹಣ ನೀಡಿದವನಿಗೆ ಮಾತ್ರ ಓಟು ಎಂಬ ವಾತಾವರಣ ಸೃಷ್ಟಿಯಾಗಿದೆ, ಅನ್ಯಾಯ ಎದರಿಸುವಂತಹ ನಾಯಕರಾದ ರಾಮಕೃಷ್ಣ ಹೆಗಡೆ, ಬೊಮ್ಮಾಯಿ ಯಂತಹ ಹಲವರ ನಾಯಕರ ಸಿದ್ದಾಂತ ಎಲ್ಲೆಡೆ ಪಸರಿಸಿ ರಾಜಕೀಯಕ್ಕೆ ಒಳ್ಳೆಯ ಪ್ರತಿಕ್ರಿಯೆ ಒಂದು ಕಾಲದಲ್ಲಿ ಇತ್ತು, ಆದರೆ ಇತ್ತಿಚಿನ ದಿನಗಳಲ್ಲಿ ರಾಜಕೀಯಕ್ಕೆ ಲೂಟಿಕೋರರ ಆಗಮನವಾಗುತ್ತಾ ರಾಜ್ಯದ ಜನತೆಗೆ ಕಷ್ಟದ ದಿನಗಳು ಎದುರಾಗುತ್ತಿವೆ ಎಂದ ಅವರು ಸುಂದರವಾದ ಕನರ್ಾಟಕ ರಾಜ್ಯ ಈಡೀ ದೇಶಕ್ಕೆ ರಾಜಕೀಯವಾಗಿ ಮಾದರಿಯಾಗಿತ್ತು. ಆದರೆ ಈಗ ಈ ರಾಜ್ಯ ಸಂಪತ್ತನ್ನು ಲೂಟಿ ಮಾಡುವುದಕ್ಕೆ ಮಾದರಿಯಾಗಿದೆ ಎಂದ ಅವರು ಕನರ್ಾಟಕದ ಪರಂಪರೆಯನ್ನು ಹೊಸ ಅಧ್ಯಯನದಿಂದ ರೂಪಿಸಲು ಜೆ.ಡಿ.ಯು ಪಕ್ಷಕ್ಕೆ ಸಹಕರಿಸಬೇಕು ಎಂದರು.
ಜೆ.ಡಿ.ಯು ರಾಜ್ಯಾಧ್ಯಕ್ಷ ಎಂ.ಪಿ.ನಾಡಗೌಡ ಮಾತನಾಡಿ ಈ ಸಭೆ ಕನರ್ಾಟಕದಲ್ಲಿ ಹೊಸ ದಿಕ್ಕನ್ನು ನೀಡಲಿದ್ದು, ತತ್ವ ಸಿದ್ದಾಂತಗಳನ್ನು ಬಿಟ್ಟು ರಾಜಕಾರಣ ಮಾಡುತ್ತಿರುವ ನಾಯಕರಿಲ್ಲದ ಪಕ್ಷಗಳಿಗೆ ಸವಾಲಾಗಿದೆ ಎಂದ ಅವರು ವಿಧಾನಸಭೆಗಳಲ್ಲಿ ವಿರೋದ ಪಕ್ಷಗಳಿಲ್ಲದೆ ಆಡಳಿತ ಪಕ್ಷಗಳು ಏನು ಮಾಡಿದರೂ ಕೇಳುವವರಿಲ್ಲದಂತಾಗಿದೆ ಎಂದರು. ಮಾಧುಸ್ವಾಮಿಯವರಿಗೆ ರಾಜ್ಯವನ್ನು ರಕ್ಷಣೆ ಮಾಡುವ ಸಮಥ್ರ್ಯವಿದೆ ಎಂದರು.
ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಮಾತನಾಡಿ ಗಣಿ ಉದ್ಯಮದಲ್ಲಿ ಬಳ್ಳಾರಿಗೆ ಸಮಾನಾಗಿರುವ ತಾಲೂಕು, ಜನರ ಕಷ್ಟಗಳನ್ನು ಕೇಳದೆ, ಜನತೆಗೆ ಸೇವೆ ಮಾಡದೆ, ಮನೆ ಮನೆಗೆ ಹೋಗಿ ತಮ್ಮ ಪರವಾಗಿ ಪ್ರಚಾರಮಾಡದೆ ಕೇವಲ ಹಣದ ಮೇಲೆ ಚುನಾವಣೆ ನಡೆಯುತ್ತಿದ್ದು ಎಂದರಲ್ಲದೆ, ರಾಜಕೀಯ ವ್ಯಾಪಾರವಾಗಿದೆ ಎಂದರು. ಜನರ ತಮ್ಮ ಓಟುಗಳನ್ನು ರಾಜಕೀಯ ಪಕ್ಷಗಳಿಗೆ ನಿಡದೆ, ಅಬ್ಯಾಥರ್ಿಗಳು ನೀಡುವ ಹಣ, ಹೆಂಡಕ್ಕೆ ಇಂತಿಷ್ಟು ಎಂಬಂತೆ ಹಂಚಿಕೆಯಾಗಿದೆ. ಈ ರೀತಿ ಹಂಚಿಕೆಯಾದರೂ ಜೆ.ಡಿ.ಯು ತಾಲೂಕಿನಲ್ಲಿ 2ನೇ ಸ್ಥಾನವನ್ನು ಉಳಿಸಿಕೊಂಡಿದ್ದು ಮುಂದೆ ತಾಲೂಕಿನಾದ್ಯಂತ ಜೆ.ಡಿ.ಯು ಪಕ್ಷ ಮೊದಲ ಸ್ಥಾನವನ್ನು ಅಲಂಕರಿಸಲಿದೆ ಎಂದರು.
ಮಧ್ಯಮ ಕುಟುಂಬದಿಂದ ಬಂದು 3ಬಾರಿ ಶಾಸಕನಾಗಿ ತಾಲೂಕಿನ ಅಭಿವೃದ್ದಿಗೆ ಶ್ರಮ ಪಟ್ಟರೂ ತಾ.ಪಂ. ಮತ್ತು ಜಿ.ಪಂ. ಚುನಾವಣೆಗಳಲ್ಲಿ ಪಕ್ಷ ಸ್ಥಾನ ಉಳಿಸಿಕೊಳ್ಳದಿದ್ದರೆ ರಾಜಕೀಯದಲ್ಲಿ ಇದೇ ನನ್ನ ಕೊನೇ ಹೋರಾಟವಾಗಿರುತ್ತಿತ್ತು ಎಂದ ಅವರು, ಜೆ.ಡಿ.ಎಸ್, ಬಿ.ಜೆ.ಪಿ ಕಾಲ ಮುಗಿಯುವ ಸಂದರ್ಭ ಬಂದಿದ್ದು ಕಾಂಗ್ರೆಸ್ ಆಗಲೇ ಮುಳುಗಿ ಹೋಗಿರುವ ಹಡಗಾಗಿದೆ, ತಾಲೂಕು ಮತ್ತು ರಾಜ್ಯದ ಆಡಳಿತ ಕೆಳಸ್ಥರಕ್ಕೆ ಹೋಗಿದೆ. ತಾಲೂಕಿನಿಂದಲೇ ಜೆ.ಡಿ.ಯು ಪಕ್ಷ ಅಸ್ಥಿತ್ವಗೊಳಿಸಿ ಹೋರಾಟಕ್ಕೆ ಮುಂದಾಗುತ್ತದೆ ಪಕ್ಷ, ಈ ರೀತಿಯಾಗಿ ಬಾಣದ ದಿಕ್ಕನ್ನು ರಾಜ್ಯಾದ್ಯಂತ ವಿಸ್ತರಿಸಿ ರೈತ ಪರವಾಗಿ ರಾಜ್ಯ ಕಟ್ಟಲಿದೆ ಎಂದರು.
ಸಮಾರಂಭದಲ್ಲಿ ಜೆ.ಡಿ.ಯು.ನ ಜಿ.ಪಂ.ಸದಸ್ಯೆ ಲೋಹಿತಾ ಬಾಯಿ ಮತ್ತು ತಾ.ಪಂ.ಸದಸ್ಯರುಗಳಾದ ಚಿಕ್ಕಮ್ಮ, ನಿರಂಜನಮೂತರ್ಿ, ಸುಮಿತ್ರ, ಲತಾ, ಶಶಿಧರ್, ಸಾವಿತ್ರಿರವರನ್ನು ಸನ್ಮಾನಿಸಲಾಯಿತು, ಚುನಾವಣೆಗಳಲ್ಲಿ ಸ್ಪಧರ್ಿಸಿದ್ದ ಅಬ್ಯಾಥರ್ಿಗಳನ್ನು ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ರೇಣುಕಮೂತರ್ಿ ಸ್ವಾಗತಿಸಿದರೆ, ಪುರಸಭಾ ಸದಸ್ಯ ಸಿ.ಡಿ.ಚಂದ್ರಶೇಖರ್ ನಿರೂಪಿಸಿ, ಡಿ.ಸಿ.ಸಿ.ಬ್ಯಾಂಕ್ ನಿದರ್ೇಶಕ ಸಿಂಗದಹಳ್ಳಿ ರಾಜ್ಕುಮಾರ್ ವಂದಿಸಿದರು.

ಕುಪ್ಪೂರು ಮಠದಲ್ಲಿ 6 ಲಕ್ಷರೂಗಳ ಬೆಳ್ಳಿ ಆಭರಣ ಕಳ್ಳತನ
ಚಿಕ್ಕನಾಯಕನಹಳ್ಳಿ,ಜ.13: ತಾಲೂಕಿನ ಸುಪ್ರಿಸಿದ್ದ ಕ್ಷೇತ್ರವಾದ ಕುಪ್ಪೂರು ಶ್ರೀ ಮರುಳಸಿದ್ದೇಶ್ವರ ಮಠದಲ್ಲಿ ಗುರುವಾರ ನಸುಕಿನಲ್ಲಿ ಕಳ್ಳತನ ನಡೆದಿದ್ದು ಮಠದ ಗರ್ಭಗುಡಿಯಲ್ಲಿದ್ದ ಸುಮಾರು 15 ಕೆ.ಜಿ.ಬೆಳ್ಳಿ ಆಭರಣಗಳು ಹಾಗೂ ಕಾಣಿಕೆ ಹುಂಡಿಯನ್ನು ಕಳ್ಳರು ದೋಚಿದ್ದಾರೆ.
ಮಠದ ಕಟ್ಟಡದಲ್ಲಿನ ಕರೆಂಟ್ ಕಟ್ಮಾಡಿ, ಮಠದ ಆವರಣದಲ್ಲಿರುವ ಕೊಠಡಿಯಲ್ಲಿ ಮಲಗಿದ್ದವರು ಹೊರಬಾರದಂತೆ ಹೊರಗಿನಿಂದ ಬೋಲ್ಟ್ಗಳನ್ನು ಭದ್ರ ಪಡಿಸಿ, ಮಠದ ಮೇಲ್ಚಾವಣಿಯ ಹೆಂಚನ್ನು ತೆಗೆದು ಗರ್ಭಗುಡಿಯಲ್ಲಿನ ಬೊಲ್ಟ್ನ್ನು ಬಲವಾದ ಅಸ್ತ್ರದಿಂದ ಮೀಟಿ ಬೀಗ ಹೊಡೆದು ಸುಮಾರು 5 ಕೆ.ಜಿ.ತೂಕದ ಶ್ರೀ ಮರಳಸಿದ್ದೇಶ್ವರರ ಮುಖ ಪದ್ಮ ನಾಗಭಾರಣ ಸಮೇತ, ಒಂದು ಕೆ.ಜಿ.ತೂಕದ ಮೂರು ಜೊತೆ ಪಾದುಕೆ, ಕಳಸ, ಪಾನ್ ಬಟ್ಲು, ಪಂಚಾರತಿ, ಬೆಳ್ಳಿಕಾಯಿನ್, ಬೆಳ್ಳಿ ರುದ್ರದೇವರು, ಎರಡು ರೇಣುಕರ ವಿಗ್ರಹ, ಗಣಪತಿ ವಿಗ್ರಹ, ನಟರಾಜನ ನಾಟ್ಯ ವಿಗ್ರಹ, ಆರತಿ ತಟ್ಟೆ, 108 ಬೆಳ್ಳಿ ರುದ್ರಾಕ್ಷಿ, 12 ಬೆಳ್ಳಿ ಭಿಲ್ವ ಪತ್ರೆ ಸೇರಿದಂತೆ ಸುಮಾರು 6 ಲಕ್ಷರೂಗಳ ಬೆಳ್ಳಿಯ ಆಭರಣಗಳು ಹಾಗೂ ಎರಡು ಕಾಣಿಕೆ ಹುಂಡಿಯನ್ನು ಹೊತ್ತು ಹೊಯ್ದಿದ್ದಾರೆ.
ಸ್ಥಳಕ್ಕೆ ಎಸ್.ಪಿ. ಡಾ.ಹರ್ಷ, ಕುಣಿಗಲ್ ಎ.ಎಸ್.ಪಿ. ಶಶಿಕುಮಾರ್, ಸಿ.ಪಿ.ಐ.ರವಿಪ್ರಸಾದ್, ಬೆರಳಚ್ಚು ತಜ್ಞರು, ಶ್ವಾನ ದಳ ತನಿಖೆ ನಡೆಸಿದರು.
ಹಂದನಕೆರೆ ಪಿ.ಎಸ್.ಐ. ರಾಜು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ಭಾಗದಲ್ಲಿ ಕಳೆದ ಎರಡು ತಿಂಗಳಿಂದ ದೇವಾಲಯಗಳ ಕಳ್ಳತನ ಹೆಚ್ಚುತ್ತಿದ್ದು, ಪಟ್ಟಣದ ಪಂಚಮುಖಿ ದೇವಾಸ್ಥಾನದಲ್ಲಿನ ಕಾಣಿಕೆ ಹುಂಡಿ ಕಳವು, ಸೊರಲಮಾವು, ತಮ್ಮಡಿಹಳ್ಳಿ ಸೇರಿದಂತೆ ಹಲವು ಕಡೆಗಳಲ್ಲಿ ಕಳ್ಳತನದ ಪ್ರಕರಣಗಳು ಪದೇ ಪದೇ ನಡೆಯುತ್ತಿದ್ದು ದೇವಾಲಯಗಳನ್ನೇ ಗುರಿಯಾಗಿಸಿಕೊಂಡು ಕಳ್ಳತನ ನಡೆಸುವವರ ತಂಡವೇ ಇಲ್ಲಿಗೆ ಬಂದಿರ ಬಹುದೆಂಬ ಅನುಮಾನಗಳಿವೆ.

Wednesday, January 12, 2011

Monday, January 10, 2011


ನೂತನ ಬಿ.ಸಿ.ಎಂ. ವಿಸ್ತರಣಾಧಿಕಾರಿಗಳ ಕಛೇರಿಗೆ ಚಾಲನೆ:ಚಿಕ್ಕನಾಯಕನಹಳ್ಳಿ,ಜ.10: ಪ್ರತಿ ತಾಲೂಕುಗಳಲ್ಲೂ ಬಿ.ಸಿ.ಎಂ. ಇಲಾಖೆಯ ವಿಸ್ತರಣಾಧಿಕಾರಿಗಳ ಕಛೇರಿಯನ್ನು ಪ್ರತ್ಯೇಕವಾಗಿ ಸ್ಥಾಪಿಸುವಂತೆ ಸಕರ್ಾರ ಸೂಚಿಸಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲೇ ಪ್ರಥಮವಾಗಿ ಈ ತಾಲೂಕಿನಲ್ಲಿ ಕಛೇರಿ ಆರಂಭಕ್ಕೆ ಚಾಲನೆ ನೀಡಲಾಗಿದೆ ಎಂದು ಬಿ.ಸಿ.ಎಂ. ಜಿಲ್ಲಾ ಅಧಿಕಾರಿ ಸಿ.ಟಿ.ಮುದ್ದುಕುಮಾರ ತಿಳಿಸಿದರು.ಪಟ್ಟಣದ ಬಿ.ಸಿ.ಎಂ. ಮೆಟ್ರಿಕ್ ಪೂರ್ವ ಹಾಸ್ಟೆಲ್ನಲ್ಲಿ ತಾಲೂಕು ವಿಸ್ತರಣಾಧಿಕಾರಿಗಳ ಕಛೇರಿ ಆರಂಭದ ಅಂಗವಾಗಿ ದಿ.ದೇವರಾಜ ಅರಸ್ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಸಾಂಕೇತಿಕವಾಗಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇಲ್ಲಿಯವರೆಗೆ ವಿಸ್ತರಣಾಧಿಕಾರಿಗಳ ಕಛೇರಿ ತಾ.ಪಂ.ಯ ಕಟ್ಟಡದಲ್ಲಿ ನಡೆಯುತ್ತಿದ್ದ ಈ ಕಛೇರಿ ಇನ್ನು ಮುಂದೆ ಪ್ರತ್ಯೇಕವಾದ ಕಟ್ಟಡದಲ್ಲಿ ನಡೆಯಲಿದೆ ಎಂದ ಅವರು, ನಮ್ಮ ಇಲಾಖೆಯಲ್ಲಿ ಈ ಬೇಡಿಕೆ ಕಳೆದ 20 ವರ್ಷಗಳ ಬೇಡಿಕೆಯಾಗಿತ್ತು. ಈಗ ಆ ಬೇಡಿಕೆ ಈಡೇರುವ ಕಾಲ ಬಂದಿದೆ ಎಂದರು. ಏಪ್ರಿಲ್ ತಿಂಗಳ ಆರಂಭದಿಂದ ಈ ಕಛೇರಿಗೆ ಡ್ರಾಯಿಂಗ್ ಪವರ್ ಬರಲಿದೆ. ಗುಮಾಸ್ತರು ಸೇರಿದಂತೆ ಕಛೇರಿಗೆ ಅಗತ್ಯವಿರುವ ಸಿಬ್ಬಂದಿಯನ್ನು ನೇಮಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ತಾಲೂಕು ಬಿ.ಸಿ.ಎಂ.ವಿಸ್ತರಣಾಧಿಕಾರಿ ವನಮಾಲಾ ಭೂಮ್ಕರ್, ಮೆಟ್ರಿಕ್ ನಂತರ ವಿದ್ಯಾಥರ್ಿನಿಲಯದ ನಿಲಯ ಪಾಲಕಿ ಭಾನುಮತಿ, ಜೆ.ಸಿ.ಪುರ ಮೊರಾಜರ್ಿ ದೇಸಾಯಿ ವಸತಿ ಶಾಲೆಯ ಮೇಲ್ವಿಚಾರಕ ದೇವರಾಜಯ್ಯ, ತಾಲೂಕಿನ ವಿವಿಧ ಹಾಸ್ಟೆಲ್ಗಳ ಮೇಲ್ವಿಚಾರಕರುಗಳಾದ ಅಶ್ವತ್ಥ್ನಾರಾಯಣ, ಶಿವಮೂತರ್ಿ, ರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಚಿ.ನಾ.ಹಳ್ಳಿಯ ಜೆ.ಡಿ.ಯು.ಸಭೆಗೆ ಶರದ್ಯಾದವ್ಚಿಕ್ಕನಾಯಕನಹಳ್ಳಿ,ಜ.10: ಇಲ್ಲಿನ ಜನತಾದಳ(ಸಂಯುಕ್ತ) ಕಾರ್ಯಕರ್ತರ ಸಭೆಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಶರದ್ಯಾದವ್, ರಾಜ್ಯ ಘಟಕದ ಅಧ್ಯಕ್ಷರಾದ ಎಸ್.ಪಿ. ನಾಡಗೌಡ ಅವರು ಆಗಮಿಸಲಿದ್ದಾರೆ ಎಂದು ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ. ಚಿ.ನಾ.ಹಳ್ಳಿಯ ನವೋದಯ ಪ್ರಥಮ ದಜರ್ೆ ಕಾಲೇಜ್ನ ಆವರಣದಲ್ಲಿ ಇದೇ 13ರ ಬೆಳಿಗ್ಗೆ 11.30ಕ್ಕೆ ಏರ್ಪಡಿಸಲಾಗಿರುವ ಈ ಸಭೆಯಲ್ಲಿ, ಈ ಸಲದ ಜಿ.ಪಂ ಹಾಗೂ ತಾ.ಪಂ. ಚುನಾವಣೆಯಲ್ಲಿ ಶ್ರಮಿಸಿದ ಕಾರ್ಯಕರ್ತರನ್ನು ಅಭಿನಂದಿಸುವುದರ ಜೊತೆಗೆ ಜಯಶೀಲರಾದ ಸದಸ್ಯರನ್ನು ಸನ್ಮಾನಿಸಲಾಗುವುದು ಹಾಗೂ ಸ್ಪಧಿಸಿದ್ದ ಪಕ್ಷದ ಎಲ್ಲಾ ಅಭ್ಯಾಥರ್ಿಗಳು ಹಾಗೂ ತಾಲೂಕು ಮಟ್ಟದ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಜರಿರುವರು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Saturday, January 8, 2011ಹಾಲು ಉತ್ಪದಾಕರಿಗೆ ಸಿಮ್ ಕಾಡರ್್ ವಿತರಣೆ
ಚಿಕ್ಕನಾಯಕನಹಳ್ಳಿ,ಜ.08: ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಏರ್ಟೆಲ್ ದೂರಸಂಪರ್ಕ ಕಂಪನಿಯ ಸಿಮ್ ವಿತರಣೆ ಮತ್ತು ಅಜೋಲಾ ಪ್ರಾತ್ಯಕ್ಷತೆ ಕಾರ್ಯಕ್ರಮವನ್ನು ಇದೇ 10ರಂದು ಏರ್ಪಡಿಸಲಾಗಿದೆ.
ಪಟ್ಟಣದ ಶಾರದಾ ಕಲ್ಯಾಣ ಮಂಟಪದಲ್ಲಿ ಕಾರ್ಯಕ್ರಮವನ್ನು ಏರ್ಪಡಿಸಿದ್ದು ತು.ಹಾ.ಒಕ್ಕೂಟದ ಅಧ್ಯಕ್ಷ ಶಿವನಂಜಪ್ಪ ಹಳೇಮನೆ ಅಧ್ಯಕ್ಷತೆ ವಹಿಸಲಿದ್ದು ತು.ಹಾ.ಒ.ಕಾರ್ಯನಿವರ್ಾಹಕ ನಿದರ್ೇಶಕ ಡಾ.ಕೆ.ಸ್ವಾಮಿ ಉದ್ಘಾಟಿಸಲಿದ್ದಾರೆ.
ವಿಶೇಷ ಆಹ್ವಾನಿತರಾಗಿ ತು.ಹಾ.ಒ ವ್ಯವಸ್ಥಾಪಕರಾದ ಜಿ.ಎಂ.ಚಂದ್ರಪ್ಪ, ಡಿ.ಅಶೋಕ್, ಸುರೇಶ್ನಾಯಕ್ ಆಗಮಿಸಲಿದ್ದು ಮುಖ್ಯ ಅತಿಥಿಗಳಾಗಿ ಉಪ ವ್ಯವಸ್ಥಾಪಕರಾದ ಡಾ.ಸುಬ್ರಾಯ್ಭಟ್, ಮಂಜುನಥ್, ಎನ್.ಬಸಪ್ಪ, ಯರಗುಂಟಪ್ಪ, ಶ್ರೀನಿವಾಸ್, ಸಿದ್ದಲಿಂಗಮೂತರ್ಿ, ಬುದ್ದಿಪ್ರಸಾದ್ ಉಪಸ್ಥಿತರಿರುವರು.

Friday, January 7, 2011ಪ್ರತಿಬಾ ಕಾರಂಜಿಯಲ್ಲಿ ತಾಲೂಕಿನಿಂದ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುವ ವಿದ್ಯಾಥರಿಗಲುಚಿಕ್ಕನಾಯಕನಹಲ್ಲಿ
,ಜ.05: 2010-11ನೇ ಸಾಲಿನ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪಧರ್ೆಯಲ್ಲಿ ತಾಲೂಕಿನ ಶಾಲೆಗಳಿಂದ ವಿದ್ಯಾಥರ್ಿಗಳು ಪ್ರಥಮ ಸ್ಥಾನಗಳಿಸಿ ವಿಜೇತರಾಗಿದ್ದಾರೆ.ಹುಳಿಯಾರಿನ ಉದರ್ು ಶಾಲೆ ಆರ್ಬೀನಾ ಬಾಬು ಭಾಷಣ ಸ್ಫದರ್ೆ, ಗೋಡೆಕೆರೆ ಸಕರ್ಾರಿ ಪ್ರೌಡಶಾಲೆ ಛದ್ಮವೇಷ ಸ್ಪಧರ್ೆ, ಕುಪ್ಪೂರು ವಿವೇಕಾನಂದ ಪ್ರೌಡಶಾಲೆ ಪವನ್ ಕ್ಲೇ ಮಾಡೆಲಿಂಗ್, ಗೋಡೆಕೆರೆ ಸಕರ್ಾರಿ ಪ್ರೌಡಶಾಲೆ ಸಿ.ಶಿವರಾಜು ಮಿಮಿಕ್ರ, ಚಿನಾಹಳ್ಳಿ ಡಿವಿಪಿ ಶಾಲೆ ಪ್ರಮೋದ್ ಸಿ.ಎನ್. ಚಿತ್ರಕಲೆ, ಹುಳಿಯಾರು ಉದರ್ುಶಾಲೆ ಹಬೀಬುಲ್ಲಾ ಗಝಲ್, ಚಿನಾಹಳ್ಳಿ ನಿರ್ವಣೇಶ್ವರ ಪ್ರೌಡಶಾಲೆ ಜಾನಪದ ನೃತ್ಯ, ಸ್ಪದರ್ೆಯಲ್ಲಿ ವಿಜೇತರಾಗಿದ್ದಾರೆ.
ಸಾಂಸ್ಕೃತಿಕ ತಾಲೂಕು ಚಿಕ್ಕನಾಯಕನಹಳ್ಳಿ : ಸಿ.ಬಿ.ಲೋಕೇಶ್ಚಿಕ್ಕನಾಯಕನಹಳ್ಳಿ,ಜ.05: ಕಲೆಯ ತವರೂರಾಗಿರುವ ನಮ್ಮ ತಾಲ್ಲೂಕು ಜನಪದ ಹಾಗೂ ಯಕ್ಷಗಾನ ಕಲಾವಿದರ ಬೀಡಾಗಿದೆ ಎಂದು ಪತ್ರಕರ್ತ ಸಿ.ಬಿ. ಲೋಕೆಶ್ ಬಣ್ಣಿಸಿದ್ದಾರೆ.ಪಟ್ಟಣದ ಬನಶಂಕರಿ ಕಲ್ಯಾಣ ಮಂಟಪದಲ್ಲಿ ದೇವಾಂಗ ಸಂಘದವರು ಆಯೋಜಿಸಿದ್ದ ಹೊಸವರ್ಷದ ಕಾರ್ಯಕ್ರಮದ ಉಧ್ಘಾಟನೆ ನೆರವೇರಿಸಿ ಮಾತನಾಡಿದ ಅವರು ನೇಕಾರರು ಆಥರ್ಿಕ ಸಂಕಷ್ಟಗಳಲ್ಲಿದ್ದರೂ ಧಾಮರ್ಿಕ ಕಾರ್ಯಕ್ರಮಗಳು ಹಾಗೂ ಕಲಾ ಪ್ರದರ್ಶನಗಳಿಗೆ ಎಂದೂ ಬಡತನ ಮಾಡದೆ ಸಾಂಸ್ಕೃತಿಕವಾಗಿ ಉತ್ಸವಗಳು, ಯಕ್ಷಗಾನದ ಬಯಲು ನಾಟಕ, ಯುವ ವೀರಗಾಸೆಗಳನ್ನು ಸಂಘದವರೆಲ್ಲ ಸೇರಿ ಒಟ್ಟಾಗಿ ಕೂಡಿ ವಿಜೃಂಭಣೆಯಿಂದ ಕಾರ್ಯಕ್ರಮಗಳನ್ನು ನೆರವೇರಿಸುತ್ತಿರುವುದರಿಂದಲೇ ತಾಲೂಕು ಕಲೆಯ ಬೀಡಾಗಿದೆ ಎಂದ ಅವರು, ನಮ್ಮೂರಿನ ಬನಶಂಕರಮ್ಮ ಅಮ್ಮನವರ ಉತ್ಸವ ಸಣ್ಣ ಮಕ್ಕಳ ಮೇಲೆ ಕಳಸವನ್ನು ಹೊರಿಸಿ ಮೆರವಣಿಗೆ ಹೋಗುವುದು ಉತ್ತಮ ಸಾಂಪ್ರದಾಯಕವಾಗಿದ್ದು ಇದರಿಂದ ಮಕ್ಕಳಿಗೆ ದೇವರ ಬಗ್ಗೆ ಭಕ್ತಿ ಹೆಚ್ಚಾಗುತ್ತದೆ ಎಂದು ಹೇಳಿದರು. ದೇವಾಂಗ ಸಂಘದ ಕಾರ್ಯದಶರ್ಿ ಸಿ.ಎ.ಕುಮಾರಸ್ವಾಮಿ ಮಾತನಾಡಿ ನೇಕಾರರ ಬದುಕು ಅತ್ಯಂತ ದುಸ್ತರವಾಗಿದ್ದುಜೀವನ ನಿರ್ವಹಣೆ ಬಹಳ ಕಷ್ಟಕರವಾಗಿದೆ. ಜೀವನೋಪಾಯ ಕೂಲಿ ಕೊಡುವಂತಹ ಪರಿಸ್ಥಿತಿ ಬಂದಿದೆ.ಬನದ ಹುಣ್ಣಿಮೆ ಶ್ರೀ ಬನಶಂಕರಿ ಅಮ್ಮನವರ ಜನ್ಮ ದಿನವಾಗಿದ್ದ ಈ ದಿನವನ್ನು ದೇವಾಂಗ ಜನಾಂಗದವರು ಬಹಳ ವಿಜೃಂಭಣೆಯಿಂದ ನಡೆಸಲು ಇದೇ 19ರ ಬುಧವಾರ ಮುಂಜಾನೆ ಕೆರೆ-ಬಾವಿಯಿಂದ ಅಮ್ಮನವರ ಕಳಸವನ್ನು ವೀರಮಕ್ಕಳೊಂದಿಗೆ ಕರೆತರುತ್ತಾರೆ ವಿವಿಧ ಭಜನಾ ತಂಡಗಳ ಜನಪದ ತಂಡಗಳು ಮೆರವಣಿಗೆಯೊಂದಿಗೆ ದೇವಾಲಯವನ್ನು ತಲುಪುತ್ತವೆ ನಂತರ ಸುಮಂಗಲಿಯರಿಂದ ಸಹಸ್ರ ಕುಂಕುಮಾರ್ಚನೆ ಕಾರ್ಯಕ್ರಮ ಏರ್ಪಡಿಸಿರುತ್ತಾರೆ. ಮಧ್ಯಾಹ್ನ 12.00 ಗಂಟೆಗೆ ಅಮ್ಮನವರನ್ನು ರಥದಲ್ಲಿ ಕೂರಿಸಿ ಮೆರವಣಿಗೆಯನ್ನು ಮಾಡಲಾಗುತ್ತದೆ. ದೇವಾಲಯಕ್ಕೆ ತಲುಪಿದ ನಂತರ ವೀರ ಮಕ್ಕಳಿಂದ ಅಲಗುಸೇವೆ ಕಾರ್ಯಕ್ರಮವನ್ನು ಏರ್ಪಡಿಸಿದೆ ನಂತರ ಪ್ರಸಾದ ವಿನಿಯೋಗ ಇರುತ್ತದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಶೇಷಪ್ಪ ಸಿ.ಜಿ. ಅಧ್ಯಕ್ಷತೆಯನ್ನ ವಹಿಸಿ ಮಾತನಾಡಿದರು, ಎಸ್ ಶಂಕರಪ್ಪನವರು ಪ್ರಾಥರ್ಿಸಿದರೆ , ಸಿ.ಟಿ. ಜಯಕೃಷ್ಣ ಸ್ವಾಗತಸಿ, ಎಂ. ಬನಶಂಕರಯ್ಯನವರು ವಂದಿಸಿದರು.

Tuesday, January 4, 2011
ಜಿ.ಪಂ.ನಲ್ಲಿ ಜೆ.ಡಿ.ಎಸ್, ಬಿ.ಜೆ.ಪಿ.ಸಮಪಾಲ, ತಾ.ಪಂ.ನಲ್ಲಿ ಜೆ.ಡಿ.ಎಸ್.ಮುನ್ನಡೆ, ಬಿ.ಜೆ.ಪಿ.ಮತ್ತು ಜೆ.ಡಿ.ಯು.ಸಮಪಾಲ
ಚಿಕ್ಕನಾಯಕನಹಳ್ಳಿ,ಜ.04: ತಾಲೂಕಿನಲ್ಲಿ ಚುನಾವಣಾ ಫಲಿತಾಂಶವನ್ನು ನಿರೀಕ್ಷೆಗೂ ಮೀರಿದಂತೆ ನೀಡಿದ ಜನತೆ ಪಕ್ಷಗಳ ಭವಿಷ್ಯವನ್ನು ಬಿಚ್ಚಿಟ್ಟಿದ್ದು 5 ಜಿ.ಪಂಗಳ ಪೈಕಿ ಜೆ.ಡಿ.ಎಸ್.ಹಾಗೂ ಬಿ.ಜೆ.ಪಿ ತಲಾ ಎರಡು ಸ್ಥಾನಗಳನ್ನು ಪಡೆದರೆ, ಜೆ.ಡಿ.ಯು ಒಂದು ಸ್ಥಾನಕ್ಕೆ ತೃಪ್ತಿ ಪಡೆದುಕೊಳ್ಳಬೇಕಾಗಿದೆ. ತಾ.ಪಂ.ಯಲ್ಲಿ ಜೆ.ಡಿ.ಎಸ್ ಮೊದಲನೇ ಸ್ಥಾನ ಪಡೆದರೆ ಬಿಜೆಪಿ ಮತ್ತು ಜೆ.ಡಿ.ಯು ಸಮವಾಗಿದ್ದು, ಕಾಂಗ್ರೆಸ್ ತಾಲೂಕಿನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಯಾವುದೇ ಸ್ಥಾನ ಪಡೆಯದೇ ಶೂನ್ಯ ಫಲಿತಾಂಶ ಪಡೆಯುವ ಮೂಲಕ ಇತಿಹಾಸದಲ್ಲೇ ಎನ್ನೆಂದು ಕಂಡರಿಯದ ರೀತಿಯಲ್ಲಿ ನೆಲಕಚ್ಚಿದೆ.
ತಾಲೂಕಿನ 19 ತಾ.ಪಂ ಕ್ಷೇತ್ರಗಳ ಪೈಕಿ ಜೆ.ಡಿ.ಎಸ್ 7, ಬಿ.ಜೆ.ಪಿ 6, ಜೆ.ಡಿ.ಯು 6ಸ್ಥಾನಗಳನ್ನು ಹಂಚಿಕೊಂಡಿವೆ.
ಜಿ.ಪಂ.ಕ್ಷೇತ್ರಗಳಲ್ಲಿ ಸ್ಫದರ್ಿಸಿದ್ದ ಅಭ್ಯಥರ್ಿಗಳು ಪಡೆದ ಮತಗಳ ವಿವರ: ಶೆಟ್ಟಿಕೆರೆ ಕ್ಷೇತ್ರ: ಒಟ್ಟು 20618 ಮತ ಚಲಾಚಣೆಯಾಗಿದ್ದು ಹೆಚ್.ಬಿ.ಪಂಚಾಕ್ಷರಯ್ಯ ಬಿ.ಜೆ.ಪಿ ಕ್ಷೇತ್ರದಿಂದ ಸ್ಫದರ್ಿಸಿದ್ದು 5501 ಮತಗಳನ್ನು ಗಳಿಸಿ ಜಯಗಳಿಸಿದ್ದಾರೆ, ಬಿ.ಎನ್.ಶಿವಪ್ರಕಾಶ್(ಪಕ್ಷೇತರ) 4949, ಟಿ.ಶಂಕರಲಿಂಗಪ್ಪ(ಜೆ.ಡಿ.ಯು)3832 ಬಿ.ಲಕ್ಕಪ್ಪ (ಕಾಂಗ್ರೆಸ್)3376, ಸತೀಶ್ ಸಾಸಲು(ಜೆ.ಡಿ.ಎಸ್)2422, ಬಿ.ನಾಗರಾಜು(ಪಕ್ಷೇತರ) 401, ಟಿ.ಆರ್.ಮಹೇಶ್(ಪಕ್ಷೇತರ) 137 ಮತಗಳನ್ನು ಪಡೆದಿದ್ದಾರೆ.
ಹುಳಿಯಾರು ಕ್ಷೇತ್ರ: ಒಟ್ಟು 20751 ಮತಗಳು ಚಲಾಚಣೆಯಾಗಿದ್ದು ಎನ್.ಜಿ.ಮಂಜುಳ(ಜೆ.ಡಿ.ಎಸ್) 7189ಮತಗಳನ್ನು ಪಡೆದು ಜಯಶೀಲರಾದರೆ, ಎಸ್.ಹೆಚ್.ಲತಾ (ಬಿ.ಜೆ.ಪಿ) 5335, ರೇಣುಕಾದೇವಿ.ವೈ.ಎಂ.(ಜೆ.ಡಿಯು) 3747, ಹೆಚ್.ಡಿ.ರಮಾದೇವಿ (ಕಾಂಗ್ರೆಸ್)3566, ಎನ್.ಪಿ.ಚಂದ್ರಕಲಾ(ಪಕ್ಷೇತರ) 914 ಮತಗಳನ್ನು ಪಡೆದುಕೊಂಡಿದ್ದಾರೆ.
ಹೊಯಿಸಲಕಟ್ಟೆ ಕ್ಷೇತ್ರ: ಒಟ್ಟು 17836 ಮತಗಳು ಚಲಾವಣೆಯಾಗಿದ್ದು ನಿಂಗಮ್ಮ (ಬಿ.ಜೆ.ಪಿ) 7082 ಮತಗಳನ್ನು ಪಡೆದು ಜಯಶೀಲರಾದರೆ, ಜಯಲಕ್ಷ್ಮೀ(ಜೆ.ಡಿ.ಎಸ್)5653, ಜ್ಯೋತಿ (ಕಾಂಗ್ರೆಸ್)1975, ಭಾರತಮ್ಮ (ಜೆ.ಡಿ.ಯು)3126, ಮತಗಳನ್ನು ಪಡೆದಿದ್ದಾರೆ.
ಕಂದಿಕೆರೆ ಕ್ಷೇತ್ರ: ಒಟ್ಟು 21388 ಮತಗಳು ಚಲಾವಣೆಯಾಗಿದ್ದು ಜಿ.ಲೋಹಿತಾಬಾಯಿ (ಜೆ.ಡಿ.ಯು) 9517 ಮತಗಳನ್ನು ಪಡೆದು ಜಯಶೀಲರಾದರೆ, ಈರಯ್ಯ (ಜೆ.ಡಿ.ಎಸ್)7930, ಸಿ.ರಂಗಾನಾಯ್ಕ(ಬಿಜೆಪಿ) 2286, ಜಿ.ಪರಮೇಶ್ವರಯ್ಯ(ಕಾಂಗ್ರೆಸ್)1655 ಮತಗಳನ್ನು ಪಡೆದಿದ್ದಾರೆ.
ಹಂದನಕೆರೆ ಕ್ಷೇತ್ರ: ಒಟ್ಟು 20,975 ಮತಗಳು ಚಲಾವಣೆಯಾಗಿದ್ದು ಜಾನಮ್ಮ ರಾಮಚಂದ್ರಯ್ಯ(ಜೆಡಿಎಸ್) 7531ಮತಗಳನ್ನು ಪಡೆದು ಜಯಶೀಲರಾದರೆ, ಎ.ಎಸ್.ಅನುಸೂಯಮ್ಮ(ಜೆಡಿಯು)5842, ಯಶೋಧಬಸವರಾಜು(ಬಿಜೆಪಿ)5260, ಜಯಲಕ್ಷ್ಮಮ್ಮ(ಕಾಂಗ್ರೆಸ್)1019, ಬಿ.ವಿ.ಮರುಳಮ್ಮ(ಪಕ್ಷೇತರ)991,ಪ್ರೇಮಲತಾ(ಬಿ.ಎಸ್.ಪಿ)332 ಮತಗಳನ್ನು ಪಡೆದುಕೊಂಡಿದ್ದಾರೆ.
ತಾ.ಪಂ.ಕ್ಷೇತ್ರಗಳಲ್ಲಿ ಸ್ಪಧರ್ಿಸಿದ್ದ ಅಭ್ಯಥರ್ಿಯ ಮತಗಳ ವಿವರ: ಶೆಟ್ಟಿಕೆರೆ ಕ್ಷೇತ್ರ: ಒಟ್ಟು 5550 ಮತಗಳು ಚಲಾವಣೆಯಾಗಿದ್ದು ಎ.ಬಿ.ರಮೇಶ್ಕುಮಾರ್(ಬಿಜೆಪಿ) 1557 ಮತಗಳನ್ನು ಪಡೆದು ಜಯಶೀಲರಾದರೆ, ಎ.ಬಿ.ಮಹೇಶ್(ಜೆಡಿಎಸ್)1514, ಎಸ್.ಬಿ.ರಾಜಶೇಖರಪ್ಪ(ಜೆಡಿಯು)1346, ಎಸ್.ಎಂ.ನಿಂಗಪ್ಪ(ಕಾಂಗ್ರೆಸ್) 531, ಎಸ್.ಜಿ.ಮಹೇಶ್(ಪಕ್ಷೇತರ) 175, ಉಮೇಶ್ ಎಸ್.ಆರ್(ಪಕ್ಷೇತರ)59, ಜಿ.ಟಿ.ವೆಂಕಟೇಶ್ 368 ಮತಗಳನ್ನು ಪಡೆದಿದ್ದಾರೆ.
ಹೊನ್ನೇಬಾಗಿ ಕ್ಷೇತ್ರ: ಒಟ್ಟು 5265 ಮತಗಳು ಚಲಾವಣೆಯಾಗಿದ್ದು ಹೆಚ್.ಆರ್.ಶಶಿಧರ(ಜೆಡಿಯು) 2634 ಮತಗಳನ್ನು ಪಡೆದು ಜಯಶೀಲರಾದರೆ , ಪ್ರಸನ್ನಕುಮಾರ್ ಹೆಚ್.ಜಿ.(ಬಿಜೆಪಿ)1157, ಶಂಕರಯ್ಯ(ಜೆಡಿಎಸ್) 867, ನಾಗರಾಜು ಹೆಚ್.ಟಿ(ಕಾಂಗ್ರೆಸ್) 607 ಮತಗಳನ್ನು ಪಡೆದಿದ್ದಾರೆ.
ಮತಿಘಟ್ಟ ಕ್ಷೇತ್ರ: ಒಟ್ಟು 5825 ಮತಗಳು ಚಲಾವಣೆಯಾಗಿದ್ದು ಎ.ನಿರಂಜನಮೂತರ್ಿ(ಜೆ.ಡಿಯು)2010 ಮತಗಳನ್ನು ಪಡೆದು ಜಯಶೀಲರಾದರೆ, ತಿಮ್ಮಯ್ಯ(ಜೆ.ಡಿ.ಎಸ್)1962, ಡಿ.ದೇವರತ್ನಯ್ಯ(ಬಿ.ಜೆ.ಪಿ)1567, ಕೆ.ಮಹದೇವಯ್ಯ(ಕಾಂಗ್ರೆಸ್ ಐ)194, ರಾಜಣ್ಣ (ಬಿ.ಎಸ್.ಪಿ)92 ಮತಗಳನ್ನು ಪಡೆದಿದ್ದಾರೆ.
ಹಂದನಕೆರೆ ಕ್ಷೇತ್ರ : ಒಟ್ಟು 5597 ಮತಗಳು ಚಲಾವಣೆಗೊಂಡಿದ್ದು ಡಿ.ಶಿವರಾಜು(ಜೆ.ಡಿ.ಎಸ್)2193 ಮತಗಳನ್ನು ಪಡೆದು ಜಯಶೀಲರಾದರೆ , ಎಂ.ಲಿಂಗರಾಜು(ಜೆ.ಡಿ.ಯು)1845, ಹೆಚ್.ಎನ್.ರಾಮನಾಥ(ಬಿಜೆಪಿ)1298, ಸಿದ್ದಪ್ಪ(ಕಾಂಗ್ರೆಸ್ ಐ) 261 ಮತಗಳನ್ನು ಪಡೆದಿದ್ದಾರೆ.
ದಸೂಡಿ ಕ್ಷೇತ್ರ: ಒಟ್ಟು 4237 ಮತಗಳು ಚಲಾವಣೆಗೊಂಡಿದ್ದು ಆರ್.ಪಿ.ವಸಂತಯ್ಯ(ಬಿ.ಜೆಪಿ)2162 ಮತ ಪಡೆದು ಜಯಶೀಲರಾದರೆ ಡಿ.ಬಿ.ರಮೇಶ್(ಜೆ.ಡಿ.ಎಸ್)965, ಎಂ.ಎಲ್.ನಿಂಗಪ್ಪ(ಜೆ.ಡಿ.ಯು)596, ಆರ್.ಶ್ರೀನಿವಾಸಮೂತರ್ಿ(ಪಕ್ಷೇತರ)113, ಆರ್.ಪಿ.ವಸಂತಯ್ಯ (ಬಿ.ಜೆ.ಪಿ)2162, ಡಿ.ಎಸ್.ಶಾಂತಕುಮಾರ್(ಕಾಂಗ್ರೆಸ್)401 ಮತಗಳನ್ನು ಪಡೆದಿದ್ದಾರೆ.
ಹುಳಿಯಾರು ಕ್ಷೇತ್ರ ಒಟ್ಟು 6292 ಮತಗಳು ಚಲಾವಣೆಯಾಗಿ ಬಿಬಿಫಾತಿಮ(ಜೆಡಿಎಸ್) 2147ಮತಗಳನ್ನು ಪಡೆದು ಜಯಶೀಲರಾದರೆ ಹೆಚ್.ಆರ್.ಚಂದ್ರಕಲಾ(ಜೆಡಿಯು) 1461, ವೀಣಾಧನುಷ್(ಕಾಂಗ್ರೆಸ್)1325, ರುಕ್ಸನಬಾನು(ಬಿಜೆಪಿ)1228, ಪವರ್ೀನ್(ಪಕ್ಷೇತರ) 84, ಹಸೀನಾಬಾನು(ಪಕ್ಷೇತರ) 47 ಮತಗಳನ್ನು ಪಡೆದಿದ್ದಾರೆ.
ತಿಮ್ಲಾಪುರ ಕ್ಷೇತ್ರ: ಒಟ್ಟು 5912 ಮತಗಳು ಚಲಾವಣೆಯಾದರೆ ಹೆಚ್.ಜಯಣ್ಣ(ಜೆಡಿಯು)1805 ಮತಗಳನ್ನು ಪಡೆದು ಜಯಶೀಲರಾದರೆ , ಟಿ.ಆರ್.ರಮೇಶ್(ಜೆಡಿಎಸ್) 1460, ಟಿ.ವಿ.ಚಂದ್ರಶೇಖರಯ್ಯ(ಬಿಜೆಪಿ) 1039, ಹೆಚ್.ಆರ್.ಕೃಷ್ಣಮೂತರ್ಿ(ಪಕ್ಷೇತರ) 887, ಎನ್.ಪಿ.ಕುಮಾರಸ್ವಾಮಿ(ಕಾಂಗ್ರೆಸ್) 589, ಹೆಚ್.ಚಂದ್ರಯ್ಯ(ಪಕ್ಷೇತರ) 132 ಮತಗಳನ್ನು ಪಡೆದಿದ್ದಾರೆ,
ಗಾಣಧಾಳು ಕ್ಷೇತ್ರ: ಒಟ್ಟು 4006 ಮತಗಳು ಚಲಾವಣೆಗೊಂಡಿದ್ದು ಜಿ.ಆರ್.ಸೀತರಾಮಯ್ಯ 1358(ಬಿಜೆಪಿ) ಮತ ಪಡೆದು ಜಯಶೀಲರಾದರೆ ಆರ್.ಉದಯ್ಕುಮಾರ್(ಜೆಡಿಎಸ್)1176, ಹೆಚ್.ಕೆ.ರಾಮಲಿಂಗಪ್ಪ(ಜೆಡಿಯು) 931, ಹೆಚ್.ಜಿ.ವಿಶ್ವನಾಥ್(ಕಾಂಗ್ರೆಸ್) 541 ಮತಗಳನ್ನು ಪಡೆದಿದ್ದಾರೆ.
ತಿಮ್ಮನಹಳ್ಳಿ ಕ್ಷೇತ್ರ : ಒಟ್ಟು 4724 ಮತಗಳು ಚಲಾವಣೆಗೊಂಡಿದ್ದು ಕೆ.ಎಸ್.ಸುಮಿತ್ರ(ಜೆಡಿಯು) 1680 ಮತಗಳನ್ನು ಪಡೆದು ಜಯಶೀಲರಾದರೆ ಕರಿಯಮ್ಮ(ಜೆಡಿಎಸ್) 1388, ಪುಟ್ಟಗಂಗಮ್ಮ(ಕಾಂಗ್ರೆಸ್) 1111, ಲಲಿತಮ್ಮ(ಬಿಜೆಪಿ) 545 ಮತಗಳನ್ನು ಪಡೆದಿದ್ದಾರೆ.
ಕಂದಿಕೆರೆ ಕ್ಷೇತ್ರ : ಒಟ್ಟು 5054 ಮತಗಳು ಚಲಾಚಣೆಗೊಂಡರೆ ವೈ.ಎಂ.ಉಮಾದೇವಿ 1764 ಮತಗಳನ್ನು ಪಡೆದು ಜಯಶೀಲರಾದರೆ ರೇಣುಕಮ್ಮ(ಜೆಡಿಯು) 1653, ಕ್ಯಾತಲಿಂಗಮ್ಮ(ಕಾಂಗ್ರೆಸ್) 1150, ಪಾರ್ವತಮ್ಮ(ಬಿಜೆಪಿ) 487 ಮತಗಳನ್ನು ಪಡೆದಿದ್ದಾರೆ.
ಮಾಳಿಗೆಹಳ್ಳಿ ಕ್ಷೇತ್ರ: ಒಟ್ಟು 5272 ಮತಗಳು ಚಲಾವಣೆಗೊಂಡು ಚಂದ್ರಕಲಾ ಎಂ.ಎಸ್(ಜೆಡಿಎಸ್) 2055 ಮತಗಳನ್ನು ಪಡೆದು ಜಯಶೀಲರಾದರೆ, ಲತಾ(ಜೆಡಿಎಸ್) 2101, ನಿರ್ಮಲ ಶಿವಾನಂದಯ್ಯ(ಬಿಜೆಪಿ) 903, ಎನ್.ಸಿ.ಮಧು(ಕಾಂಗ್ರೆಸ್) 213 ಮತಗಳನ್ನು ಪಡೆದಿದ್ದಾರೆ.
ಕುಪ್ಪೂರು ಕ್ಷೇತ್ರ: ಒಟ್ಟು 5387 ಮತ ಚಲಾವಣೆಗೊಂಡರೆ ಟಿ.ಡಿ.ಚಿಕ್ಕಮ್ಮ(ಜೆಡಿಯು) 1905 ಮತಗಳನ್ನು ಪಡೆದು ಜಯಶೀಲರಾದರು, ಕೆ.ಪಿ.ಪ್ರೇಮಲೀಲ(ಜೆಡಿಎಸ್) 1671, ಸುವರ್ಣಮ್ಮ ಎಸ್.ಬಿ(ಬಿಜೆಪಿ) 1379, ಪಿ.ಸುಜಾತ(ಕಾಂಗ್ರೆಸ್) 432 ಮತಗಳನ್ನು ಪಡೆದಿದ್ದಾರೆ.
ಜಯಚಾಮರಾಜಪುರ ಕ್ಷೇತ್ರ: ಒಟ್ಟು 5459 ಮತ ಚಲಾವಣೆಗೊಂಡು ಎಂ.ಎಂ.ಜಗದೀಶ್(ಬಿಜೆಪಿ) 2092 ಮತ ಪಡೆದು ಜಯಶೀಲರಾದರೆ ಎಂ.ಪಿ.ಪ್ರಸನ್ನಕುಮಾರ್(ಜೆಡಿಯು) 2028, ಬಿ.ದಯಾನಂದಮೂತರ್ಿ(ಜೆಡಿಎಸ್)652, ಶೇಖರಯ್ಯ(ಕಾಂಗ್ರೆಸ್) 604, ಕೆ.ಎಂ.ಸತೀಶ್ಬಾಬು(ಬಿಎಸ್ಪಿ) 83 ಮತಗಳನ್ನು ಪಡೆದಿದ್ದಾರೆ.
ಬರಗೂರು ಕ್ಷೇತ್ರ: ಒಟ್ಟು 5487 ಮತ ಚಲಾವಣೆಗೊಂಡು ಕೆ.ಆರ್.ಚೇತನಗಂಗಾಧರ(ಜೆ.ಡಿ.ಎಸ್) 2380 ಮತಗಳನ್ನು ಪಡೆದು ಜಯಶೀಲರಾದರೆ ನೇತ್ರಾವತಿ ಹೆಚ್.ಡಿ(ಬಿಜೆಪಿ) 1011, ಶ್ರೀದೇವಿ(ಜೆ.ಡಿ.ಯು) 1941, ಶಾರದಮ್ಮ(ಕಾಂಗ್ರೆಸ್ ಐ) 155 ಮತಗಳನ್ನು ಪಡೆದಿದ್ದಾರೆ.
ದೊಡ್ಡೆಣ್ಣೆಗೆರೆ ಕ್ಷೇತ್ರ: ಒಟ್ಟು 5352 ಮತ ಚಲಾವಣೆಗೊಂಡು ಬಿ.ಸಿ.ಹೇಮಾವತಿ(ಜೆ.ಡಿ.ಎಸ್) 1754 ಮತಗಳನ್ನು ಪಡೆದು ಜಯಶೀಲಾದರೆ ಪುಷ್ಪಾವತಿ(ಜೆ.ಡಿ.ಯು) 1632, ಬಿ.ಜಿ.ಲೀಲಾವತಿ(ಬಿ.ಜೆ.ಪಿ)983, ಎಸ್.ಗೀತಶಿವಕುಮಾರ್(ಕಾಂಗ್ರೆಸ್) 502, ಚಂದ್ರಮ್ಮ ಡಿ.ಬಿ.ಬಸವರಾಜು(ಪಕ್ಷೇತ್ರ)369, ಮಂಜಮ್ಮ(ಬಿ.ಎಸ್.ಪಿ)59, ಲಕ್ಷ್ಮೀದೇವಿ(ಪಕ್ಷೇತರ)53 ಮತಗಳನ್ನು ಪಡೆದಿದ್ದಾರೆ.
ಯಳನಡು ಕ್ಷೇತ್ರ: ಒಟ್ಟು 5787 ಮತ ಚಲಾವಣೆಗೊಂಡಿದ್ದು ಜಯಲಕ್ಷ್ಮೀ(ಬಿಜೆಪಿ) 1920 ಮತಗಳನ್ನು ಪಡೆದು ಜಯಶೀಲರಾದರೆ ತಾರಾಮಣಿಯಾದವ್(ಜೆಡಿಎಸ್) 1596, ವೈ.ಆರ್.ಲತಾಮಣಿ(ಕಾಂಗ್ರೆಸ್) 926, ಕೆ.ವಿಜಯಲಕ್ಷ್ಮಮ್ಮ (ಜೆಡಿಯು) 780, ಹೆಚ್.ಆರ್.ಜ್ಯೋತಿ(ಪಕ್ಷೇತರ) 565 ಮತಗಳನ್ನು ಪಡೆದಿದ್ದಾರೆ.
ಕೆಂಕೆರೆ ಕ್ಷೇತ್ರ: ಒಟ್ಟು 4756 ಮತ ಚಲಾವಣೆಗೊಂಡಿದ್ದು ಕೆ.ಎಂ.ನವೀನ್(ಬಿಜೆಪಿ) 2266 ಮತಗಳನ್ನು ಪಡೆದು ಜಯಶೀಲರಾದರೆ ಶಿವಕುಮಾರ್(ಜೆಡಿಯು) 1130, ಕೆ.ಆರ್.ಚನ್ನಬಸವಯ್ಯ(ಜೆಡಿಎಸ್)1126, ಎಂ.ನಾಗರಾಜು(ಕಾಂಗ್ರೆಸ್) 234 ಮತಗಳನ್ನು ಪಡೆದಿದ್ದಾರೆ.
ಹೊಯಿಸಲಕಟ್ಟೆ ಕ್ಷೇತ್ರ: ಒಟ್ಟು 5025 ಮತ ಚಲಾವಣೆಗೊಂಡಿದ್ದು ಎ.ಜಿ.ಕವಿತಾ(ಜೆಡಿಎಸ್) 1834 ಮತಗಳನ್ನು ಪಡೆದು ಜಯಶೀಲರಾದರೆ ಚಂದ್ರಪ್ರಭ (ಬಿಜೆಪಿ)1625, ಎಂ.ಪಿ.ಲಕ್ಷ್ಮೀದೇವಿ(ಕಾಂಗ್ರೆಸ್) 874, ಮೀನಾಕ್ಷಮ್ಮ(ಜೆಡಿಯು) 692 ಮತಗಳನ್ನು ಪಡೆದಿದ್ದಾರೆ.
ತೀರ್ಥಪುರ ಕ್ಷೇತ್ರ: ಒಟ್ಟು 6563 ಮತ ಚಲಾವಣೆಗೊಂಡಿದ್ದು ಲತ.ಎಂ.ಇ(ಜೆಡಿಯು) 3036 ಮತಗಳನ್ನು ಪಡೆದು ಜಯಶೀಲರಾದರೆ, ಕೆ.ಬಿ.ಮಂಜುಳ(ಜೆಡಿಎಸ್) 2290,ಲಕ್ಷ್ಮೀದೇವಮ್ಮ(ಬಿಜೆಪಿ) ಎಂ.ಕೆ 783, ಧನಲಕ್ಷ್ಮೀ(ಕಾಂಗ್ರೆಸ್) 454 ಮತಗಳನ್ನು ಪಡೆದಿದ್ದಾರೆ.

Monday, January 3, 2011

Sunday, January 2, 2011


ಮತ ಎಣಿಕೆಗೆ ಸಕಲ ಸಿದ್ದತೆ, ಪಟ್ಟಣದಲ್ಲಿ ಬಿಗಿ ಬಂದುಬಸ್ತು
ಚಿಕ್ಕನಾಯಕನಹಳ್ಳಿ,ಜ.02: ತಾಲೂಕಿನ ಚುನಾವಣಾ ಕ್ಷೇತ್ರಗಳ ಮತ ಎಣಿಕೆಗಾಗಿ ಪಟ್ಟಣದ ಸಕರ್ಾರಿ ಪದವಿ ಪೂರ್ವ ಕಾಲೇಜಿನ 7ಕೊಠಡಿಗಳಲ್ಲಿ ಮತಎಣಿಕೆ ನಡೆಯಲಿದ್ದು 3ಕೊಠಡಿ ಜಿ.ಪಂ ಕ್ಷೇತ್ರ, 4ಕೊಠಡಿ ತಾ.ಪಂ ಕ್ಷೇತ್ರಗಳಿಗೆ ಮೀಸಲಿಡಲಾಗಿದೆ ಎಂದು ತಹಶೀಲ್ದಾರ್ ಟಿ.ಸಿ.ಕಾಂತರಾಜ್ ತಿಳಿಸಿದ್ದಾರೆ.
ಜನವರಿ 4ರ ಮಂಗಳವಾರ ಬೆಳಗ್ಗೆ 8ಗಂಟೆಗೆ ಮತ ಎಣಿಕೆ ಕಾರ್ಯಕ್ರಮ ನಡೆಯಲಿದ್ದು 100ಜನ ಪೋಲಿಸ್ ಸಿಬ್ಬಂದಿ ಮತ್ತು 100 ಮಂದಿ ಎಣಿಕೆ ಸಿಬ್ಬಂದಿಯನ್ನು ನೇಮಿಸಲಾಗಿದೆ ಅಂದು ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವದರಿಂದ ಕಾನೂನು ಸುವ್ಯವಸ್ಥೆಗೆ ಅಗತ್ಯವಿರುವ ಎಲ್ಲಾ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಲಾಗಿದೆ ಮತ್ತು ಮಧ್ಯ ಮಾರಟವನ್ನು ನಿಷೇಧಿಸಲಾಗಿದೆ. ಮತ ಎಣಿಕೆ ಕಾರ್ಯ ಮಧ್ಯಾಹ್ನ 12ರ ಹೊತ್ತಿಗೆಲ್ಲಾ ಮುಗಿಯುವ ನಿರೀಕ್ಷಿ ಇದೆ ಎಂದರು.
ಜಿ.ಪಂ.ಕ್ಷೇತ್ರಗಳಿಗೆ ಮೀಸಲಿಟ್ಟಿರುವ ಕೊಠಡಿ : ಜಿ.ಪಂ ಕ್ಷೇತ್ರಗಳಿಗೆ 3ಕೊಠಡಿ ಮೀಸಲಿಟ್ಟಿದ್ದು 1ನೇ ಕೊಠಡಿ ಹೇಮಾವತಿಯಲ್ಲಿ ಹುಳಿಯಾರು ಮತ್ತು ಹೊಯ್ಸಳಕಟ್ಟೆ ಕ್ಷೇತ್ರಗಳ ಮತ ಎಣಿಕೆ ನಡೆಯಲಿದೆ. 2ನೇ ಕೊಠಡಿ
ಘಟ್ಟಪ್ರಭ ಕಂದಿಕೆರೆ , ಹಂದನಕೆರೆ ಕ್ಷೇತ್ರಗಳ ಮತ ಎಣಿಕೆ ನಡೆಯಲಿದೆ. 3ನೇ ಕೊಠಡಿ ವೇದಾವತಿಯಲ್ಲಿ ಶಟ್ಟಿಕೆರೆ ಕ್ಷೇತ್ರದ ಮತ ಎಣಿಕೆ ನಡೆಯಲಿದೆ.
ತಾ.ಪಂ.ಕ್ಷೇತ್ರಗಳಿಗೆ ಮೀಸಲಿಟ್ಟಿರುವ ಕೊಠಡಿ : 4ನೇ ಕೊಠಡಿ ಶರಾವತಿಯಲ್ಲಿ ತಾ.ಪಂ.ನ 6ಕ್ಷೇತ್ರಗಳಾದ ಹುಳಿಯಾರು, ಯಳನಡು, ತಿಮ್ಲಾಪುರ, ಕೆಂಕೆರೆ, ಗಾಣದಾಳು, ಹೊಯ್ಸಲಕಟ್ಟೆ ಕ್ಷೇತ್ರಗಳ ಮತಎಣಿಕೆ ನಡೆಯಲಿದೆ.
5ನೇ ಕೊಠಡಿ ನೇತ್ರಾವತಿಯಲ್ಲಿ 6ಕ್ಷೇತ್ರಗಳಾದ ತಿಮ್ಮನಹಳ್ಳಿ, ತೀರ್ಧಪುರ, ಕಂದಿಕೆರೆ, ಮಾಳಿಗೆಹಳ್ಳಿ, ಹೊನ್ನೆಬಾಗಿ, ಜೆ.ಸಿ.ಪುರ ಕ್ಷೇತ್ರಗಳ ಮತ ಎಣಿಕೆ ನಡೆಯಲಿದೆ.
6ನೇ ಕೊಠಡಿ ಕೃಷ್ಣದಲ್ಲಿ ಶೆಟ್ಟಿಕೆರೆ ಮತ್ತು ಕುಪ್ಪೂರು ಈ 2ಕ್ಷೇತ್ರಗಳ ಮತ ಎಣಿಕೆ ನಡೆಯಲಿದೆ.
7ನೇ ಕೊಠಡಿ ಮಲಪ್ರಭದಲ್ಲಿ 5ಕ್ಷೇತ್ರಗಳಾದ ಮತಿಘಟ್ಟ, ಬರಗೂರು, ಹಂದನಕೆರೆ, ಡಿ.ವೈ.ಗೆರೆ, ದಸೂಡಿ ಕ್ಷೇತ್ರಗಳ ಮತಎಣಿಕೆ ನಡೆಯಲಿದೆ.
ಎ.ಬಿ.ವಿ.ಪಿ. ತಾಲೂಕು ಕಛೇರಿ ಉದ್ಘಾಟನೆ
ಚಿಕ್ಕನಾಯಕನಹಳ್ಳಿ,ಜ.02: ಆಖಿಲಾ ಭಾರತೀಯ ವಿದ್ಯಾಥರ್ಿ ಪರಿಷತ್ನ ತಾಲೂಕು ಘಟ್ಟದ ನೂತನ ಕಛೇರಿ ತು.ಹಾ.ಒಕ್ಕೂಟದ ಅಧ್ಯಕ್ಷ ಶಿವನಂಜಪ್ಪ ಹಳೇಮನೆ ಉದ್ಘಾಟಿಸಿದರು.
ಪಟ್ಟಣದ ಚಿಕ್ಕ ಆಂಜನೇಯ ಸ್ವಾಮಿ ಬಳಿ ಉದ್ಘಾಟನೆಗೊಂಡ ಅಭಾವಿಪ ಕಛೇರಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ತು.ಹಾ.ಒಕ್ಕೂಟದ ಅದ್ಯಕ್ಷ ಶಿವನಂಜಪ್ಪ ಹಳೇಮನೆ, ಅಭಾವಿಪ ಸಂಘಟನೆಯು ಹೆಚ್ಚು ಪ್ರಚಲಿತವಾಗಿ ವಿದ್ಯಾಥರ್ಿಗಳ ಸಮಸ್ಯೆಗಳನ್ನು ನಿವಾರಿಸಲು ಹೋರಾಡಬೇಕು, ಚಿಕ್ಕದಾಗಿ ಸ್ಥಾಪಿತವಾಗಿರುವ ಕಛೇರಿ ಅತಿ ಎತ್ತರಕ್ಕೆ ಬೆಳೆಯಬೇಕೆಂದು ಆಶಿಸಿದರು.
ಸಮಾರಂಭದಲ್ಲಿ ಅಭಾವಿಪ ತಾಲೂಕು ಪ್ರಮುಖ್ ಚೇತನ್ಪ್ರಸಾದ್, ಮಾರಸಂದ್ರ ಸಿದ್ದರಾಮಯ್ಯ, ಕಾರ್ಯಕರ್ತರುಗಳಾದ ರಾಕೇಶ್, ನವೀನ್, ಚಂದನ್ ಉಪಸ್ಥಿತರಿದ್ದರು.