Thursday, April 16, 2015


ಏಪ್ರಿಲ್ 21, 22, 23  ರಾಜ್ಯ ಮಟ್ಟದ ಸಂಗೀತ ಸ್ಪಧರ್ೆ ಕಾರ್ಯಕ್ರಮ
ಚಿಕ್ಕನಾಯಕನಹಳ್ಳಿ,: ರಾಜ್ಯ ಮಟ್ಟದ ಸಂಗೀತ ಸ್ಪದರ್ೆ ಕಾರ್ಯಕ್ರಮವನ್ನು ಏಪ್ರಿಲ್ 21, 22, 24 ರಂದು ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ಏರ್ಪಡಿಸಲಾಗಿದೆ ಎಂದು ಗಾನವಿ ಲಲಿತಾ ಕಲಾವೃಂದದ ಉಪಾಧ್ಯಕ್ಷ ಸಿ.ಎಸ್.ಗಂಗಾಧರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. 
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಹಾಗೂ ಶ್ರೀ ಗಾನವಿ ಲಲಿತಾ ಕಲಾ ವೃಂದದ ವತಿಯಿಂದ ಏರ್ಪಡಿಸಿರುವ ರಾಜ್ಯ ಮಟ್ಟದ ಸಂಗೀತ ಸ್ಪಧರ್ೆ ಕಾರ್ಯಕ್ರಮದಲ್ಲಿ ಭಕ್ತಿಗೀತೆ, ಶರಣರ ವಚನ, ದಾಸರ ಪದ, ರಂಗಗೀತೆ, ಭಾವಗೀತೆ, ಜಾನಪದ ಗೀತೆ, ಚತ್ರಗೀತೆ ಸ್ಪಧರ್ೆಗಳು ನಡೆಯಲಿವೆ.
21ರಂದು ಬೆಳಗ್ಗೆ 10ಕ್ಕೆ ನಡೆಯುವ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ ನೆರವೇರಿಸಲಿದ್ದು ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ.
ಸಂಜೆ 6ಕ್ಕೆ ಸನ್ಮಾನ ಸಮಾರಂಭ ಕಾರ್ಯಕ್ರಮ ನೆರವೇರಲಿದ್ದು ಹಿರಿಯ ಸಾಹಿತಿ ಎಂ.ವಿ.ನಾಗರಾಜ್ರಾವ್ ಅಧ್ಯಕ್ಷತೆ ವಹಿಸಲಿದ್ದಾರೆ.
22ರಂದು ಬೆಳಗ್ಗೆ 10ಕ್ಕೆ ನಡೆಯುವ ಕಾರ್ಯಕ್ರಮವನ್ನು ಕಾಂಗ್ರೆಸ್ ಮುಖಂಡ ಸಾಸಲು ಸತೀಶ್ ಉದ್ಘಾಟನೆ ನೆರವೇರಿಸಲಿದ್ದು ಮಾಜಿ ಶಾಸಕ ಬಿ.ಲಕ್ಕಪ್ಪ ಅಧ್ಯಕ್ಷತೆ ವಹಿಸಲಿರುವರು.
24ರಂದು ಸಂಜೆ 4ಕ್ಕೆ ಸಂಗೀತ ಸ್ಪಧರ್ೆಗಳ ಬಹುಮಾನ ವಿತರಣೆ ಕಾಯಕ್ರಮ ನಡೆಯಲಿದೆ. ಪುರಸಭಾಧ್ಯಕ್ಷೆ ರೇಣುಕಮ್ಮ ಉದ್ಘಾಟನೆ ನೆರವೇರಿಸಲಿದ್ದು, ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿರುವರು.
ಗೋಷ್ಠಿಯಲ್ಲಿ ಗಾನವಿ ಲಲಿತ ಕಲಾವೃಂದದ ಶಿವರುದ್ರಯ್ಯ, ಮಹಾಲಿಂಗಯ್ಯ ಉಪಸ್ಥಿತರಿದ್ದರು.