Wednesday, August 6, 2014

16ಲಕ್ಷದ 80ಸಾವಿರ ಲೀಟರ್ ನೀರು ಚಿಕ್ಕನಾಯಕನಹಳ್ಳಿಗೆ ಅಗತ್ಯ
ಚಿಕ್ಕನಾಯಕನಹಳ್ಳಿ,ಆ.6: ಪ್ರತಿನಿತ್ಯ ಪುರಸಭಾ ವ್ಯಾಪ್ತಿಯ ಹಳ್ಳಿಗಳಿಗೂ ಸೇರಿದಂತೆ ಒಟ್ಟು  16ಲಕ್ಷದ 80ಸಾವಿರ ಲೀಟರ್ ನೀರು ಅಗತ್ಯವಿದ್ದು ಸದ್ಯದ ಪರಿಸ್ಥಿತಿಯಲ್ಲಿ ಮೂರು ಲಕ್ಷದಷ್ಟು ನೀರು ದೊರೆಯುತ್ತಿದೆ ಉಳಿದ ನೀರು ಕೊರೆತೆಯಿದೆ ಎಂದು ಪುರಸಭಾ ಮುಖ್ಯಾಧಿಕಾರಿ ಟಿ.ಆರ್.ವೆಂಕಟೇಶ್ ಶೆಟ್ಟಿ ಸಭೆಗೆ ತಿಳಿಸಿದರು. 
ಪಟ್ಟಣದ ಪುರಸಭಾ ಸಭಾಂಗಣದಲ್ಲಿ ಪುರಸಭಾ ಅಧ್ಯಕ್ಷೆ ಪುಷ್ಪಾರವರ ಅಧ್ಯಕ್ಷತೆಯಲ್ಲಿ ವಿಶೇಷ ಸಭೆ ನಡೆಯಿತು.  
ಪಟ್ಟಣಕ್ಕೆ ದಿನನಿತ್ಯ ಎಷ್ಟು ಲೀಟರ್ ನೀರು ಅಗತ್ಯವಿದೆ, ಜನತೆಗೆ ಯಾವ ಪ್ರಮಾಣದಲ್ಲಿ ನೀರು ದೊರೆಯುತ್ತಿದೆ ಎಂಬುದರ ಬಗ್ಗೆ ಸಿ.ಪಿ.ಮಹೇಶ್ ಪ್ರಶ್ನಿಸಿದಕ್ಕೆ ಮುಖ್ಯಾಧಿಕಾರಿಗಳು ಉತ್ತರಿಸಿದರು.
ಪಟ್ಟಣದಲ್ಲಿ ವೆಂಕಟ್ಟಣ್ಣಕಟ್ಟೆ ಬಳಿ ಹಾಗೂ ತಾತಯ್ಯನಗೋರಿ ಪಕ್ಕ ಪಾಕರ್್ ನಿಮರ್ಾಣ ಮಾಡಲು ಪುರಸಭೆಯಿಂದ ಹಣ ಖಚರ್ಾಗುತ್ತಿದೆ ಆದರೆ ಆ ಪ್ರಮಾಣದಲ್ಲಿ ಅಲ್ಲಿ ಅಭಿವೃದ್ದಿ ಆಗುತ್ತಿಲ್ಲ ಎಂದು ಸದಸ್ಯ ಸಿ.ಪಿ.ಮಹೇಶ್ ಆರೋಪಿಸಿದರು.
ಪುರಸಭಾ ಸದಸ್ಯ ಸಿ.ಆರ್.ತಿಮ್ಮಪ್ಪ ಮಾತನಾಡಿ ವಾಡರ್್ ನಂ.12ರಲ್ಲಿ ಟ್ಯಾಂಕರ್ ನೀರನ್ನು ಹರಿಸುತ್ತಿಲ್ಲ, ನೆಲ್ಲಿಯಲ್ಲಿಯೂ ನೀರನ್ನು ಸರಿಯಾಗಿ ಬಿಡುತ್ತಿಲ್ಲ, ನೀರಿಗಾಗಿ ಜನರು ಪ್ರತಿ ದಿನ ನಮ್ಮನ್ನು ದೂರುತ್ತಿದ್ದಾರೆ ಎಂದು ಆರೋಪಿಸಿದರು.
ಪುರಸಭಾ ಸದಸ್ಯ ಮಲ್ಲೇಶ್ ಮಾತನಾಡಿ, ಟ್ಯಾಂಕರ್ನಲ್ಲಿ ನೀರನ್ನು ಬೇರೆ ವಾಡರ್್ಗಳಿಗೆ ಕಳುಹಿಸುತ್ತಿದ್ದೀರ ಆದರೆ ವಾಡರ್್ ನಂ.15ರಲ್ಲಿ ಟ್ಯಾಂಕರ್ ನೀರು ಹರಿಸುತ್ತಿಲ್ಲ ಎಂದರು.
ಸದಸ್ಯ ಅಶೋಕ್ ಮಾತನಾಡಿ ವೀರಲಕ್ಕಮ್ಮ ಬಡಾವಣೆಗೆ ಸಮುದಾಯ ಭವನ ನೀಡುವಂತೆ ಒತ್ತಾಯಿಸಿದರು, ಪಟ್ಟಣದಲ್ಲಿ ಜನರಲ್ ಸಮುದಾಯ ಭವನ ನಿಮರ್ಿಸಲು ಪುರಸಭೆಯಿಂದ ಜಾಗ ನೀಡಿದರೆ ಸಂಸದರ ಬಳಿ ಭವನ ನಿಮರ್ಾಣದ ಬಗ್ಗೆ ಮಾತನಾಡಬಹುದು ಎಂದು ಕಾಂಗ್ರೆಸ್ ಸದಸ್ಯ ಸಿ.ಪಿ.ಮಹೇಶ್ ತಿಳಿಸಿದರು. 
ಪಟ್ಟಣದ ಉಡೇವ್ ಬೀದಿಯಲ್ಲಿನ ಅಂಗನವಾಡಿಯ ಕೊಠಡಿ ಚಿಕ್ಕದಾಗಿರುವುದರಿಂದ ಅಲ್ಲೇ ಇರುವ ಗಾಂಧಿಶಿಶುವಿಹಾರಕ್ಕೆ ಪುರಸಭೆಯಿಂದ ಜಾಗ ನೀಡಿ ಎಂದು ಮುಖ್ಯಾಧಿಕಾರಿ ವೆಂಕಟೇಶಶೆಟ್ಟಿ ಸಿಡಿಪಿಓರವರ ಮನವಿಯನ್ನು ಸಭೆಗೆ ತಿಳಿಸಿದರು. ಸದಸ್ಯರು ಸವರ್ಾನುಮತದಿಂದ ಒಪ್ಪಿಗೆ ಸೂಚಿಸಿದರು.
ಪುರಸಭೆಯಿಂದ ಹಾಕಲ್ಪಡುವ ಪ್ಲೆಕ್ಸ್ಗಳು, ಕರಪತ್ರಗಳಿಗೆ ಎಲ್ಲಾ ಸದಸ್ಯರ ಹೆಸರುಗಳನ್ನು ಹಾಕಿಸುವಂತೆ ಸಿ.ಟ.ದಯಾನಂದ್ ತಿಳಿಸಿದರು.
ಸ್ವಾತಂತ್ರ್ಯ ದಿನಾಚಾರಣೆ ದಿನದಂದ ಸಹಿ ವಿತರಣೆಯನ್ನು ತಯಾರಿಸುವ ಬಗ್ಗೆ ಚಚರ್ಿಸಲಾಯಿತು. 
ಸಭೆಯಲ್ಲಿ ಪುರಸಭಾ ಉಪಾಧ್ಯಕ್ಷೆ ನೇತ್ರಾವತಿ, ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್, ಸದಸ್ಯರುಗಳಾದ ರೂಪಾ, ಎಂ.ಕೆ.ಇಂದಿರಾ, ರೇಣುಕಮ್ಮ, ಗೀತಾರಮೇಶ್, ಧರಣಿಲಕ್ಕಪ್ಪ, ಅಶೋಕ್, ಸಿ.ಎಂ.ರಾಜಶೇಖರ್, ಹೆಚ್.ಬಿ.ಪ್ರಕಾಶ್, ಸಿ.ಎಂ.ರಂಗಸ್ವಾಮಯ್ಯ ಉಪಸ್ಥಿತರಿದ್ದರು.