Sunday, October 28, 2012ಭೋವಿ ಸಮಾಜಕ್ಕೆ ಆದ್ಯತೆ ನೀಡಿದವರನ್ನು  ಬೆಂಬಲಿಸಿ: ಶಾಸಕ ವೆಂಕಟರಮಣಪ್ಪ
ಚಿಕ್ಕನಾಯಕನಹಳ್ಳಿ,ಅ.27 : ಭೋವಿ ಜನಾಂಗವನ್ನು ನಿರ್ಲಕ್ಷ್ಯ ಮಾಡುವ ರಾಜಕಾರಣಿಗಳನ್ನು ತಿರಸ್ಕರಿಸುವ ಮೂಲಕ ಅವರಿಗೆ  ಬುದ್ದಿ ಕಲಿಸಬೇಕೆಂದು ಪಾವಗಡ ಶಾಸಕ ವೆಂಕಟರಮಣಪ್ಪ ಹೇಳಿದ್ದಾರೆ.
ತಾಲ್ಲೂಕಿನ ಬಡಕೇಗುಡ್ಲು ಬೋವಿ ಕಾಲೋನಿಯಲ್ಲಿ ನೂತನವಾಗಿ ನಿಮರ್ಿಸಿರುವ ರೇಣುಕಾ ಯಲ್ಲಮ್ಮದೇವಿ ದೇವಾಲಯದ ಪ್ರಾರಂಭೋತ್ಸವ ಮತ್ತು ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ನಮ್ಮ ಒಗ್ಗಟ್ಟು ನಮ್ಮ ಏಳಿಗೆಗೆ ರಹದಾರಿ, ನಿಮ್ಮ ಒಂದು ಕ್ಷಣದ ತಪ್ಪು ನಿಧರ್ಾರ ಐದು ವರ್ಷ ನೀವು ಅವರ ಮುಂದೆ ಕೈ ಕಟ್ಟಿಕೊಂಡು ನಿಲ್ಲುವಂತೆ ಮಾಡುತ್ತದೆ ಎಂದ ಅವರು ಚುನಾವಣೆಯಲ್ಲಿ ಕೈ ಮುಗಿದು ನಿಮ್ಮ ಮತಗಳನ್ನು ಪಡೆದು ಆಯ್ಕೆಯಾದ ಮೇಲೆ ನಿಮ್ಮನ್ನು ನಿರ್ಲಕ್ಷಿಸುವವರರನ್ನು ಮುಂಬರುವ ಚುನಾವಣೆಯಲ್ಲಿ ತಿರಸ್ಕರಿಸಬೇಕಿದೆ ಎಂದರಲ್ಲದೆ, ಜನಾಂಗದ ಶಕ್ತಿ ಏನೆಂಬುದನ್ನು ಮತಗಳ ಮೂಲಕ ತೋರಿಸಿ, ನನ್ನ ಕ್ಷೇತ್ರದಲ್ಲಿ ಎಲ್ಲಾ ವರ್ಗದ, ಜಾತಿಯ ಜನರ ದೇವಾಲಯಗಳಿಗೆ ನೆರವು ನೀಡುವ ಸಲುವಾಗು 3 ಕೋಟಿ ವಿನಿಯೋಗಿಸಿದ್ದೇನೆ ಎಂದಿದ್ದಾರೆ.
ಬಡಜನರ ಕಲ್ಯಾಣ ಕಾರ್ಯಕ್ರಮಗಳಿಗೆ ನೆರವಾಗುವ ನಿಟ್ಟಿನಲ್ಲಿ ಸುಮಾರು 30ಕಡೆ ಕಲ್ಯಾಣ ಮಂಟಪಗಳ ರೀತಿಯಲ್ಲಿ ಸಮುದಾಯ ಭವನಗಳನ್ನು ನಿಮರ್ಿಸಿದ್ದೇನೆ. ಇದರಿಂದ ಬಡ ಜನರ ಮದುವೆ ಮುಂತಾದ ಕಾರ್ಯಕ್ರಮಗಳಿಗೆ ಅನುಕೂಲವಾಗುತ್ತಿದೆ.
ಮೊದಲಿನಿಂದಲೂ ಕೊಕ್ಕರೆಗೊಂದು ಕೆರೆಯಿಲ್ಲ, ವಡ್ಡರಿಗೊಂದು ಊರಿಲ್ಲ ಎಂಬಂತೆ ನಮ್ಮ ಜನಾಂಗ ಎಂದೂ ಒಂದು ಕಡೆ ನೆಲೆ ನಿಂತಿಲ್ಲ. ಆದ್ದರಿಂದ ನಮ್ಮ ಜನಾಂಗ ಶೈಕ್ಷಣಿಕವಾಗಿ ಹಿಂದುಳಿದಿದೆ. ವಿದ್ಯವಾವಂತರಾಗದಿದ್ದರೆ ಬಡತನ ನಿವಾರಣೆಯಾಗುವುದಿಲ್ಲ. ಬೋವಿ ಜನಾಂಗ ಎಂದೂ ಕಷ್ಠಜೀವಿಗಳು. ವಿಧಾನಸೌಧ, ಕನ್ನಂಬಾಡಿ, ಅಷ್ಟೇ ಏಕೆ ಇಲ್ಲಿನ ಬೋರನಕಣಿವಯನ್ನು ಕಟ್ಟಿದಾರೆ. ಆದರೆ ಅದರಿಂದ ಅವರಿಗೆ ಯಾವುದೇ ರೀತಿಯ ಪ್ರಯೋಜನವಾಗಿಲ್ಲ ಎಂದರು.
ಇಂದು ಸಹ ಅವರು ಕೂಲಿಯಿಂದಲೇ ಜೀವನ ನಿರ್ವಹಣೆ ಮಾಡಬೇಕಾಗಿದೆ, ನೂರು ರೂಗೆ ದುಡಿದರೆ 150 ಖಚರ್ು ಮಾಡುವ ಮನೋಭಾವನೆಯಿಂದ ಹಿಂದುಳಿದಿದ್ದೀರಿ. ಮುಂದಾದರು ನಿಮ್ಮ ಮಕ್ಕಳ ಭವಿಷ್ಯದ ಬಗ್ಗೆ ಕಾಳಜಿ ಹೊಂದಿ ಎಂದರಲ್ಲದೆ, ಮದುವೆಗೆ ಅದ್ದೂರಿ, ಆಡಂಬರ ಬೇಡ. ಮದುವೆಗೆ ಪ್ರೀತಿಯೊಂದೇ ಸಾಕು. ಮುಂದಿನ ನಿಮ್ಮ ಜೀವನ ಬಹಳ ದೂರಸಾಗಬೇಕಿದೆ. ಆದ್ದರಿಂದ ಯಾವುದನ್ನೇ ಆದರೂ ಯೋಚಿಸಿ ನಿಧರ್ಾ ಕೈಗೊಳ್ಳಿ ಎಂದರು.
ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕ ಟಿ.ಬಿ.ಜಯಚಂದ್ರ ಮಾತನಾಡಿ ಶಿಕ್ಷಿತರಲ್ಲೇ ಅದ್ದೂರಿ ವಿವಾಹಗಳು ಹೆಚ್ಚುತ್ತಿದ್ದು ಅದೇ ರೀತಿ ವಿಚ್ಛೇದನಗಳು ಸಹ ವಿದ್ಯಾವಂತರಲ್ಲೇ ಹೆಚ್ಚುತ್ತಿವೆ, ಇದು ಇಂದಿನ ನಮ್ಮ ಸಮಾಜಕ್ಕೆ ಆತಂಕಕಾರಿಯಾಗಿದೆ ಎಂದರು.
ಮಾಜಿ ಶಾಸಕ ಕೆ.ಎಸ್.ಕಿರಣ್ಕುಮಾರ್ ಮಾತನಾಡಿ ಇಲ್ಲಿನ ಜನರಿಗೆ ಬಡತನವಿದ್ದರು ಭಕ್ತಿಗೆ ಬಡತನವಿಲ್ಲ ಎಂಬುದಕ್ಕೆ ನೀವು ನಿಮರ್ಿಸಿರುವ ದೇವಾಲಯವೇ ಸಾಕ್ಷಿ. ಈ ಭಾಗದ ಜನರ ನೀರಿನ ಕೊರತೆಯನ್ನು ನೀಗಿಸುವುದಕ್ಕೆ ಹೇಮಾವತಿ ನಾಲೆಯಿಂದ ಕುಡಿಯುವ ನೀರಿಗಾಗಿ 102ಕೋಟಿ ಮೊತ್ತದ ಯೋಜನೆ ಮಂಜೂರಾಗಿದೆ ಎಂದರು,
ಡಿಸಿಸಿ ಬ್ಯಾಂಕ್ ನಿದರ್ೇಶಕ ಸಿಂಗದಹಳ್ಳಿ ರಾಜ್ಕುಮಾರ್ ಮಾತನಾಡಿ ಬೋವಿ ಸಮಾಜದವರು ಶ್ರಮ ಜೀವಿಗಳು, ಪ್ರತಿ ಗ್ರಾಮಗಳ ಕೆರೆ,ಕಟ್ಟೆ, ದೇವಸ್ಥಾನಗಳನ್ನು ಕಟ್ಟಿದವರು ಬೋವಿ ಜನಾಂಗದವರೇ ಎಂದ ಅವರು, ಮಕ್ಕಳಿಗೆ ಹೆಚ್ಚಿನ ರೀತಿಯಲ್ಲಿ ವಿದ್ಯಾಭ್ಯಾಸ ನೀಡಿ ಅವರ ಮುಂದಿನ ಭವಿಷ್ಯಕ್ಕೆ ದಾರಿಯಾಗಿ ಎಂದರಲ್ಲದೆ ಸಾಮೂಹಿಕ ವಿವಾಹದಿಂದ ಆಥರ್ಿಕ ಸಂಕಷ್ಟಗಳನ್ನು ನಿವಾರಿಸಬಹುದು ಎಂದರು.
ಸಮಾರಂಭದಲ್ಲಿ ತಿಮ್ಮನಹಳ್ಳಿ ಲೋಕೇಶ್ ಮಾತನಾಡಿದರು. ಜಿ.ಪಂ.ಸದಸ್ಯೆ ಲೋಹಿತಬಾಯಿ, ತಾ.ಪಂ.ಉಪಾಧ್ಯಕ್ಷೆ ಲತಾಕೇಶವಮೂತರ್ಿ, ಗ್ರಾ.ಪಂ.ಅಧ್ಯಕ್ಷೆ ಅನಸೂಯಮ್ಮ, ಬೋವಿ ಜನಾಂಗದ ಮುಖಂಡರಾದ ಕೆ.ಕೆ.ಹನುಮಂತಪ್ಪ, ನಾಗರಾಜು ಮುಂತಾದವರಿದ್ದರು.

ಚಿ.ನಾ.ಹಳ್ಳಿಯಲ್ಲಿ ಅ.29ರಂದು ವಾಲ್ಮೀಕಿ ಜಯಂತಿ
ಚಿಕ್ಕನಾಯಕನಹಳ್ಳಿ,ಅ.27 : ಶ್ರೀ ಮಹಷರ್ಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಇದೇ 29ರ ಸೋಮವಾರ ಬೆಳಗ್ಗೆ 11ಕ್ಕೆ ಏರ್ಪಡಿಸಲಾಗಿದೆ.
ಸಮಾರಂಭವನ್ನು ಕನ್ನಡ ಸಂಘದ ವೇದಿಕೆಯಲ್ಲಿ ಹಮ್ಮಿಕೊಂಡಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದಾರೆ. ತಾ.ಪಂ.ಅಧ್ಯಕ್ಷ ಎಂ.ಎಂ.ಜಗದೀಶ್          ಮಹಷರ್ಿ ವಾಲ್ಮೀಕಿ ಭಾವಚಿತ್ರ ಅನಾವರಣಗೊಳಿಸಲಿದ್ದು ನಿವೃತ ಮುಖ್ಯೋಪಾಧ್ಯಾಯ ಸೋಮಶೇಖರಯ್ಯ ಮಹಷರ್ಿ ವಾಲ್ಮೀಕಿ ಕುರಿತು ಉಪನ್ಯಾಸ ನೀಡಲಿದ್ದಾರೆ.
ಸಮಾರಂಭದಲ್ಲಿ ಹಂಪಿ ಕನ್ನಡ ವಿಶ್ವವಿದ್ಯಾಲಯ ಅಧ್ಯಯನದ ವಿಭಾಗದ ಮುಖ್ಯಸ್ಥ ಡಾ.ಸಿದ್ದಗಂಗಮ್ಮ,  ಅಸಿಸ್ಟೆಂಟ್ ಪ್ರೊಫೆಸರ್ ಡಾ.ಪಿ.ಪರಮೇಶ್ವರ, ಕಲಾವಿದ ಶಂಕರಪ್ಪ,  ಸಮಾಜ ಸೇವಾಕರ್ತ ಶ್ರೀನಿವಾಸಶೆಟ್ಟಿರವರಿಗೆ ಸನ್ಮಾನಿಸಲಾಗುವುದು.

ಚಿ.ನಾ.ಹಳ್ಳಿಯಲ್ಲಿ ನ.1ರಂದು ಕನ್ನಡ ರಾಜ್ಯೋತ್ಸವ.
ಚಿಕ್ಕನಾಯಕನಹಳ್ಳಿ,ಅ27 :    ಕನ್ನಡ ರಾಜ್ಯೋತ್ಸವ  ಸಮಾರಂಭವನ್ನು ಇದೇ ನವಂಬರ್ 1ರ ಗುರುವಾರ ಬೆಳಗ್ಗೆ 9-00 ಗಂಟೆಗೆ ತಾಲ್ಲೂಕು ಕ್ರೀಡಾಂಗಣದಲ್ಲಿ  ಏರ್ಪಡಿಸಲಾಗಿದೆ.
ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಸಿ.ಬಿ. ಸುರೇಶ್ಬಾಬು  ವಹಿಸಲಿದ್ದು ತಹಸೀಲ್ದಾರ್ ಎನ್.ಆರ್. ಉಮೇಶಚಂದ್ರ ಧ್ವಜಾರೋಹಣವನ್ನು ನೆರವೇರಿಸುವರು.
ಸಮಾರಂಭದಲ್ಲಿ ಜಾನಪದ ಕಲಾವಿದರಾದ ಕದುರಮ್ಮ,  ಹಾಮರ್ೋನಿಯಂ ಮಾಸ್ಟರ್ ಸಿ.ಎಸ್.ಗಂಗಾಧರಯ್ಯ ಮತ್ತು ರಂಗಭೂಮಿ ಕಲಾವಿದ ಶ್ರೀಬೋರಯ್ಯ ರವರಿಗೆ ಸನ್ಮಾನಿಸಲಾಗುವುದು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಲೋಕಸಬಾ ಸದಸ್ಯ ಜಿ.ಎಸ್.ಬಸವರಾಜು,  ವಿಧಾನ ಪರಿಷತ್ ಮುಖ್ಯ ಸಚೇತಕ  ಎ.ಹೆಚ್.ಶಿವಯೋಗಿಸ್ವಾಮಿ, ವಿಧಾನ ಪರಿಷತ್ ಸದಸ್ಯ ಡಾ.ರಂ.ಆರ್.ಹುಲಿನಾಯ್ಕರ್, ವೈ.ಎ.ನಾಆಯಣಸ್ವಾಮಿ, ತಾ.ಪಂ.ಅಧ್ಯಕ್ಷ ಎಂ.ಎಂ.ಜಗದೀಶ್, ಪುರಸಭಾಧ್ಯಕ್ಷ ಸಿ.ಕೆ.ಕೃಷ್ಣಮೂತರ್ಿ, ತಾ.ಪಂ.ಉಪಾಧ್ಯಕ್ಷೆ ಲತಾಕೇಶವಮೂತರ್ಿ, ಪುರಸಭಾ ಉಪಾಧ್ಯಕ್ಷೆ ಗಾಯಿತ್ರಿಪುಟ್ಟಯ್ಯ ಸೇರಿದಂತೆ ಹಲವರು ಉಪಸ್ಥಿತರಿರುವರು.