Friday, December 19, 2014


ಎನ್.ಆರ್.ಇ.ಜಿ ಯೋಜನೆ ಅಡಿಯಲ್ಲಿ ನಡೆದಿರುವ ಕಾಮಗಾರಿಗಳಿಗೆ ಕೂಡಲೇ ಹಣ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಮನವಿ 
ಚಿಕ್ಕನಾಯಕನಹಳ್ಳಿ,: ತಾಲ್ಲೂಕಿನ 28 ಗ್ರಾಮ ಪಂಚಾಯ್ತಿಗಳಲ್ಲಿ ಎನ್.ಆರ್.ಇ.ಜಿ ಯೋಜನೆ ಅಡಿಯಲ್ಲಿ ನಡೆದಿರುವ ಕಾಮಗಾರಿಗಳಾದ ಕುರಿಶೆಡ್, ದನದ ಕೊಟ್ಟಿಗೆ, ಕೋಳಿಫಾರಂ ಹಾಗೂ ಶೌಚಾಲಯಗಳಿಗೆ ಕೂಡಲೇ ಹಣ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಾಧಿಕಾರಿ ಗೋವಿಂದರಾಜುರವರನ್ನು ಫಲಾನುಭವಿಗಳು ಮನವಿ ಸಲ್ಲಿಸಿದರು.
ಪಟ್ಟಣದ  ತಾ.ಪಂ.ಸಭಾಂಗಣದಲ್ಲಿ ನಡೆದ ತಿಪಟೂರು ಉಪವಿಭಾಗದ ಗ್ರಾಮ ಪಂಚಾಯ್ತಿಗಳ ಪ್ರಗತಿ ಪರಿಶೀಲನಾ ಸಭೆಗೆ ಭಾಗವಹಿಸಲು ಆಗಮಿಸಿದ್ದ ಸಂದರ್ಭದಲ್ಲಿ ಭೇಟಿ ಮಾಡಿದ ಫಲಾನುಭವಿಗಳು, ಎನ್.ಆರ್.ಇ.ಜಿ ಯೋಜನೆ ಅಡಿಯಲ್ಲಿ ವಿವಿಧ ಕಾಮಗಾರಿಗಳನ್ನು ನಿಮರ್ಿಸಿಕೊಂಡು ಒಂದು ವರ್ಷ ಕಳೆದರೂ ಹಣ ಬಿಡುಗಡೆ ಯಾಗಿಲ್ಲವೆಂದು ಒತ್ತಾಯಿಸಿದರು ಇದಕ್ಕೆ   ಪ್ರತಿಕ್ರಯಿಸಿದ ಜಿಲ್ಲಾ ಪಂಚಾಯ್ತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಗೋವಿಂದರಾಜು, ಜಿಲ್ಲೆಯ 82 ಗ್ರಾಮ ಪಂಚಾಯ್ತಿಗಳಲ್ಲಿ ಶೌಚಾಲಯಗಳು ನಿಮರ್ಿಸಿಕೊಳ್ಳಲು ಗುತ್ತಿಗೆದಾರರು ಕೂಲಿ ಕಾಮರ್ಿಕರಿಗೆ ಉದ್ಯೋಗ ಖಾತ್ರಿ ಕಾಡರ್್ನ್ನು ತಮ್ಮ ಬಳಿಯೇ ಇಟ್ಟುಕೊಂಡು ಜೆ.ಸಿ.ಬಿ ಮತ್ತಿತರ ಯಂತ್ರಗಳ ಮೂಲಕ ಕಾಮಗಾರಿಗಳನ್ನು ಮಾಡಿರುವುದರಿಂದ 60 ಕೋಟಿ ರೂಪಾಯಿ ಹಣ ದುರುಪಯೋಗವಾಗಿದೆ ಎಂಬ ವರದಿಯ ಹಿನ್ನಲೆಯಲ್ಲಿ ಸಕರ್ಾರ ಎನ್.ಆರ್.ಇ.ಜಿ ಯೋಜನೆಯಲ್ಲಿ ಕಂಪ್ಯೂಟರ್ನ್ನು ಸ್ಥಗಿತಗೊಳಿಸಿದೆ ಆದ್ದರಿಂದ ಈಗ ವೈಯಕ್ತಿಕವಾಗಿ ನಿಮರ್ಿಸಿಕೊಂಡಿರುವ ಶೌಚಾಲಯಗಳು, ಕುರಿಶೆಡ್, ಕೊಟ್ಟಿಗೆ, ಕೋಳಿಫಾರಂಗಳ ಬಗ್ಗೆ ಪಟ್ಟಿ ನೀಡಿದರೆ ಪರಿಶೀಲಿಸಿ ಹಣ ಬಿಡುಗಡೆ ಮಾಡುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜೆ.ಸಿ.ಪುರ ಗ್ರಾ.ಪಂ.ಉಪಾಧ್ಯಕ್ಷ ಶಿವಾನಂದ್, ಮುದ್ದೇನಹಳ್ಳಿ ಮಾಜಿ ಗ್ರಾ.ಪಂ.ಅಧ್ಯಕ್ಷ ಸಾಲ್ಕಟ್ಟೆಸ್ವಾಮಿ, ನಾಗರಾಜನಾಯ್ಕ, ಎಂ.ಎಲ್.ಗಂಗಾಧರಯ್ಯ, ದಲಿತ ಮುಖಂಡ ಗೋವಿಂದರಾಜು, ತಾ.ಬಂಜಾರ ಸಮಾಜದ ಸಂಘದ ಕಾರ್ಯದಶರ್ಿ ಶಶಿಧರನಾಯ್ಕ್ ಮತ್ತಿತರರು ಉಪಸ್ಥಿತರಿದ್ದರು.



ಡಿಸಂಬರ್ 23ರಂದು ಕೃಷಿ ಉತ್ಸವ ಹಾಗೂ ರೈತರ ದಿನಾಚಾರಣೆ ಕಾರ್ಯಕ್ರಮ
ಚಿಕ್ಕನಾಯಕನಹಳ್ಳಿ, : 2014-15 ನೇ ಸಾಲಿನ ಕೃಷಿ ಉತ್ಸವ ಹಾಗೂ ರೈತರ ದಿನಾಚಾರಣೆ ಕಾರ್ಯಕ್ರಮವನ್ನು ಡಿಸಂಬರ್ 23ರಂದು ಬೆಳಗ್ಗೆ 11ಕ್ಕೆ ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿ ಏರ್ಪಡಿಲಾಗಿದೆ ಎಂದು ಕೃಷಿ ಅಧಿಕಾರಿ ಹೆಚ್.ಹೊನ್ನದಾಸೇಗೌಡ ತಿಳಿಸಿದ್ದಾರೆ.
ಕೃಷಿ ಮತ್ತು ಕೃಷಿ ಸಂಬಂಧಿತ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ರೈತರಿಗೆ ಸಮಗ್ರ ಕೃಷಿ ಮಾಹಿತಿ ನೀಡುವ ನಿಟ್ಟಿನಲ್ಲಿ ಕೃಷಿ ಸಂಬಂಧಿತ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಹಾಗೂ ಕೃಷಿ ನಿದರ್ೇಶಕರ ಕಛೇರಿ ವತಿಯಿಂದ ಕಾರ್ಯಕ್ರಮ ಹಮ್ಮಿಕೊಂಡಿದ್ದು  ಶಾಸಕ ಸಿ.ಬಿ.ಸುರೇಶ್ಬಾಬು ಉದ್ಘಾಟನೆ ನೆರವೇರಿಸಲಿದ್ದಾರೆ. ಜಿ.ಪಂ.ಅಧ್ಯಕ್ಷ ವೈ.ಹೆಚ್.ಹುಚ್ಚಯ್ಯ ವಸ್ತು ಪ್ರದರ್ಶನ ಉದ್ಘಾಟನೆ ನೆರವೇರಿಸಲಿದ್ದು ತಾ.ಪಂ.ಅಧ್ಯಕ್ಷೆ ಲತಾಕೇಶವಮೂತರ್ಿ ಅಧ್ಯಕ್ಷತೆ ವಹಿಸಲಿದ್ದಾರೆ. ತಾಲ್ಲೂಕಿನ ಎಲ್ಲಾ ಜನಪ್ರತಿನಿಧಿಗಳು, ಸಂಘ ಸಂಸ್ಥೆ ಪದಾಧಿಕಾರಿಗಳು, ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪೆಡದುಕೊಳ್ಳುವಂತೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಮಾಜ ಮುಖಿ ಕೆಲಸದಲ್ಲಿ ತೊಡಗಿದಾಗ ಮಾತ್ರ ಪ್ರಶಂಸೆಗೆ ಅರ್ಹ : ಡಾ|| ಜಿ. ಪರಮೇಶ್ವರ್  

ಚಿಕ್ಕನಾಯಕನಹಳ್ಳಿ:  ಸಮಾಜ ಮುಖಿ ಕೆಲಸದಲ್ಲಿ ತೊಡಗಿದಾಗ ಮಾತ್ರ ಪ್ರಶಂಸೆಗೆ ಅರ್ಹರಾಗಿರುತ್ತೇವೆ ಇಲ್ಲದಿದ್ದರೆ ಏಕಮುಖಿ ಜೀವನ ಅನುಭವಿಸಬೇಕಾಗುತ್ತದೆ ಎಂದು ಹೃದ್ರೋಗ ತಜ್ಞ ತಾಲ್ಲೂಕು ಒಕ್ಕಲಿಗ ಸಂಘದ ಅಧ್ಯಕ್ಷ ಡಾ|| ಜಿ. ಪರಮೇಶ್ವರ್ ಹೇಳಿದರು.
ಪಟ್ಟಣದಲ್ಲಿ ತಾ|| ಒಕ್ಕಲಿಗ ಸಂಘ ಆಯೋಜಿಸಿದ್ದ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ,  ಬದುಕಿನ ದಿನನಿತ್ಯದಾಟದಲ್ಲಿ ಕೇವಲ ತಮ್ಮ ಬದುಕಿಗೆ ಒತ್ತು ನೀಡುವ ಜೊತೆಗೆ ಸಮಾಜದಲ್ಲಿನ ನಿರ್ಗತಿಕರಿಗೆ ಸ್ವಲ್ಪ ಮಟ್ಟಿನ ಸೇವೆ ಸಲ್ಲಿಸಿ ಸಮಾಜದ ಏಳಿಗೆಗೆ ಒತ್ತು ನೀಡಬೇಕು ಆಗ ನಮ್ಮನ್ನು ಅನ್ಯ ಸಮಾಜದವರು ಕೂಡ ಗೌರವಿಸುತ್ತಾರೆ ನಮ್ಮನ್ನು ಪುರಸ್ಕಾರ ಭಾವದಿಂದ ನೋಡುತ್ತಾರೆ  ಎಂದರು.
ಕೃಷಿ ಬದುಕನ್ನೇ ಅವಲಂಬಿಸಿಕೊಂಡು ಬಂದಿದ್ದ ಒಕ್ಕಲಿಗ ಸಮಾಜ ಬೇರೆ ಬೇರೆ ಕ್ಷೇತ್ರದಲ್ಲೂ ದುಡಿಯುತ್ತಾ ಬರುತ್ತಿದೆ ಅದಕ್ಕೆ ಸಾಮಾಜಿಕ ಸೇವೆ ಕೃಷಿಕ್ಷೇತ್ರ ಶಿಕ್ಷಣ ಕ್ಷೇತ್ರದ ಈ ಮೂಲಕ ಗುರುತಿಸಿಕೊಂಡಿರುವ ನಮ್ಮ ಸಮಾಜದ ಬಂಧುಗಳನ್ನು ಸನ್ಮಾನಿಸುತ್ತಿರುವುದು ಖುಷಿ ತಂದಿದೆ. ತಾಲ್ಲೂಕಿನಲ್ಲಿ ನಮ್ಮ ಸಂಘ ಅಸ್ತಿತ್ವಕ್ಕೆ ಬಂದು 1 ವರ್ಷವಾಗಿದ್ದು ಸಂಘದ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಸದಸ್ಯತ್ವದ ನೊಂದಣಿ ಕಾರ್ಯ ಆಗಬೇಕಿದೆ ಮುಂದಿನ ದಿನದಲ್ಲಿ ಕೆಂಪೇಗೌಡ ಬಡಾವಣೆ ಸಮುದಾಯ ಭವನ ನಿಮರ್ಾಣಕಾರ್ಯಕ್ಕೆ ಎಲ್ಲರೂ ಆದ್ಯತೆ ನೀಡಬೇಕು ಎಂದರು.
ತಾ|| ಒಕ್ಕಲಿಗ ಸಂಘದ ಕಾರ್ಯದಶರ್ಿ ಬಿ.ಜಿ.ರಾಜಣ್ಣ ಮಾತನಾಡಿ,  ತಾಲ್ಲೂಕಿನಲ್ಲಿ ಕಡಿಮೆ ಸಂಖ್ಯೆವುಳ್ಳ ಸಮಾಜವಾದರೂ ಸಂಘ ಅಸ್ಥಿತ್ವಕ್ಕೆ ಬಂದ ಕೆಲವೇ ದಿನಗಳಲ್ಲಿ ನಮ್ಮ ಸಮಾಜದ ಬಂಧುಗಳಾದ ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷರಾದ ಹೆಚ್.ಬಿ.ಪ್ರಕಾಶ್ , ಜಿಲ್ಲಾ ಕೃಷಿ ಪ್ರಶಸ್ತಿ ಪಡೆದ ಬಿ.ಎನ್.ಲೋಕೇಶ್ ತಾ|| ಶಿಕ್ಷಕರ ಸಂಘದ ಅಧ್ಯಕ್ಷರಾದ ಎಸ್.ಹೆಚ್.ಪ್ರಕಾಶ್ ಇವರುಗಳನ್ನು ಉತ್ತಮ ಸ್ಥಾನಕ್ಕೇರಿಸಲು ಸಹಕರಿಸಿದ ಎಲ್ಲರನ್ನೂ ನಾವು ಸ್ಮರಿಸಬೇಕು ಇವರನ್ನು ನಮ್ಮ ಸಂಘ ಸನ್ಮಾನಿಸುತ್ತಿರುವುದು ಕೂಡ ಇವರುಗಳ ಜವಬ್ದಾರಿಯನ್ನು ಹೆಚ್ಚಿಸುವ ಕರೆ ಗಂಟೆ ಎಂದು ಭಾವಿಸಿ ಇವರಿಂದ ಎಲ್ಲಾ ಸಮಾಜದ ಬಂದುಗಳಿಗೆ ಸೇವೆ ಲಭಿಸಲಿ ಎಂದರು.
ಈ ಸಮಾರಂಭದಲ್ಲಿ ಜಿ.ಶಾಂತ್ರಾಜು, ಪುರಸಭಾ ಸದಸ್ಯ ರಾಜಶೇಖರ್, ವಕೀಲ ಶ್ರೀನಿವಾಸಮೂತರ್ಿ, ಕೆ.ಜಿ.ಕೃಷ್ಣೇಗೌಡ ಮೊದಲಾದವರು ಉಪಸ್ಥಿತರಿದ್ದರು.