Thursday, January 31, 2013


ಪ್ರಜಾಪ್ರಗತಿ 25ರ ಸಂಭ್ರಮ ಕಾರ್ಯಕ್ರಮ


ಚಿಕ್ಕನಾಯಕನಹಳ್ಳಿ,ಜ.31 : ರಾಜ್ಯ ಮಟ್ಟದ ಪತ್ರಿಕೆಗಳು ತನ್ನ ಪ್ರಸಾರ ಸಂಖ್ಯೆ ಹೆಚ್ಚಿಸಲು ನಿಗಧಿಪಡಿಸಿದ್ದ ಬೆಲೆಯಷ್ಟೇ ಪ್ರಜಾಪ್ರಗತಿ ಪತ್ರಿಕೆ ನಿಗಧಿ ಪಡಿಸಿದಾಗಲೂ  ಜನ ಕೊಳ್ಳುತ್ತಿದ್ದ ಪತ್ರಿಕೆ ಪ್ರಜಾಪ್ರಗತಿ ಎಂದು ಕವಿ-ಲೇಖಕ ಪ್ರೊ.ಎಸ್.ಜಿ.ಸಿದ್ದರಾಮಯ್ಯ ತಿಳಿಸಿದರು.
ಪಟ್ಟಣದ ರೋಟರಿ ಬಾಲಭವನದಲ್ಲಿ ನಡೆದ ಪ್ರಜಾಪ್ರಗತಿ 25ರ ಸಂಭ್ರಮ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಸ್ಥಳೀಯ ಪತ್ರಿಕೆಯೊಂದು 25ವರ್ಷಗಳಿಂದ ಪತ್ರಿಕೆಯನ್ನು ಉತ್ತಮವಾಗಿ ನಡೆಸುವುದು ಸಣ್ಣ ವಿಷಯವಲ್ಲ, ಜಾತಿ ಪತ್ರಿಕೆಯಾಗಿ ಉಳಿಯದೆ ಸಮಾಜದ ಜನ ಒಪ್ಪುವ ರೀತಿಯಲ್ಲಿ ಸುದ್ದಿಗಳನ್ನು ನೀಡುತ್ತ  ರಾಜ್ಯ ಮಟ್ಟದ ಪತ್ರಿಕೆಗಳ ಸಮನಾಗಿ ಪ್ರಜಾಪ್ರಗತಿ ಪತ್ರಿಕೆ ಮುಂದಾಗುತ್ತಿದೆ.
ಗಂಟೆಗಟ್ಟಲೆ ಓದುವ ಸುದ್ದಿಗಿಂತ ಜನರಿಗೆ ಪತ್ರಿಕೆಯನ್ನು ಜನ ಬಯಸುವುದು ಸುದ್ದಿಯ ಪ್ರಮಾಣದ ಜೊತೆಗೆ ಸಾಮಾಜಿಕ ಹೊಣೆಗಾರಿಕೆ ಎಷ್ಠಿರುತ್ತದೆ ಎಂಬ ಅಂಶದಿಂದ ಎಂದರಲ್ಲದೆ ಸುದ್ದಿಯನ್ನು ಜನರಿಗೆ ಮುಟ್ಟಿಸುವಾಗ ಔಚಿತ್ಯ ಇರಬೇಕು, ಲೇಖನಿಗಳು ಜನರಲ್ಲಿ ಅರಿವನ್ನು ಮೂಡಿಸುವಂತಾಗಬೇಕು ಈ ಅಂಶವನ್ನು ಪ್ರಜಾಪ್ರಗತಿ ಪತ್ರಿಕೆ ಆರಂಭ ದಿನದಿಂದಲೂ ಹೊಂದಿದೆ ಎಂದರು.
ಅಪರಾಧಿ ಆಧಾರಿತ ಪತ್ರಿಕೆಗಳು ಸಮಾಜದ ಪ್ರಭಾವವನ್ನು ಬದಲಾಯಿಸುತ್ತಿದೆ, ಪತ್ರಿಕೆಗಳಿಗೆ ಸುದ್ದಿಗಳ ಜೊತೆಗೆ ಸಾಮಾಜಿಕ ಹೊಣೆಗಾರಿಕೆ ಅವಶ್ಯ, ರಾಜ್ಯಮಟ್ಟದ ಪತ್ರಿಕೆಗಳು ಪಕ್ಷಗಳಿಗೆ ಮಾರಿಕೊಂಡಿವೆ, ಪತ್ರಿಕೆಗಳು ರಾಜಕಾರಣವನ್ನು ಸ್ವಾಗತಿಸದೆ, ರಾಜಕಾರಣಿಗಳನ್ನು ದೂರ ಇಟ್ಟಾಗಲೇ ಪತ್ರಿಕಾ ಧರ್ಮ ಉಳಿಯುವುದು ಎಂದರಲ್ಲದೆ 1970ರ ದಶಕದಲ್ಲಿ ಅತ್ಯಂತ ಪ್ರಭಾವಿಯಾಗಿದ್ದ ಲಕೇಶ್ ಪತ್ರಿಕೆ ಬಂಡಾಯ, ರೈತ ಚಳುವಳಿಗಳಿಂದಾಗಿ ಪತ್ರಿಕೆ ಬೆಳೆದ ಕಾಲ ಎಂದು ತಿಳಿಸಿದರು.
ಸಂಪಾದಕ ಎಸ್.ನಾಗಣ್ಣ ಮಾತನಾಡಿ ಸ್ಥಳೀಯ ಪತ್ರಿಕೆಗಳು ಅಮ್ಮನಂತೆ, ರಾಜ್ಯಪತ್ರಿಕೆಗಳು ಚಿಕ್ಕಮ್ಮನಿದ್ದಂತೆ, ಸ್ಥಳೀಯ ಪತ್ರಿಕೆ ಸ್ಥಳೀಯ ಪ್ರದೇಶಗಳನ್ನು ಅಭಿವೃದ್ದಿ ಪಡಿಸಲು ಮಗುವಿಗೆ ಶಿಕ್ಷೆ ನೀಡುವಂತೆ ಕಠಿಣ ನಿಧರ್ಾರ ತಾಳುತ್ತದೆ, ರಾಜ್ಯಮಟ್ಟದ ಪತ್ರಿಕೆಗಳು ಈ ನಿಟ್ಟಿನಲ್ಲಿ ಮೃದುಧೋರಣೆಯನ್ನು ತೆಳೆಯುತ್ತವೆ ಎಂದರಲ್ಲದೆ, ಪತ್ರಿಕೆಗಳು ಬರವಣಿಗೆ ಮತ್ತು ಬವಣೆಯನ್ನು ಎರಡು ಸಮನಾಗಬೇಕು ಎಂದರು. ಪತ್ರಿಕೆಗಳು ದರ ನಿಗಧಿಪಡಿಸುವ ಸಮಯದಲ್ಲಿ ಪತ್ರಿಕೆಗಳು ಮೌಲ್ಯವನ್ನು ಕಳೆದುಕೊಂಡವು ಎಂದರಲ್ಲದೆ ಪತ್ರಿಕೆಗಳಿಗೆ ಜಾಹಿರಾತುಗಳಿಲ್ಲದಿದ್ದರೆ ನಡೆಸಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದರು.
 ಜಿಲ್ಲಾ ರೋಟರಿ ಅಸಿಸ್ಟೆಂಟ್ ಗವರ್ನರ್ ಬಿಳಿಗೆರೆ ಶಿವಕುಮಾರ್ ಪತ್ರಿಕೆಯನ್ನು ಕೊಂಡು ಓದುವ ರೂಡಿ ಬೆಳೆಸಿಕೊಳ್ಳಬೇಕು, ಇತರರು ಕೊಂಡಿರುವ ಪತ್ರಿಕೆಯನ್ನು ಅವರ ನಂತರ ಓದ ಬಹುದು ಎಂಬ ಸಂಪ್ರದಾಯವನ್ನು ಬಿಡಬೇಕು ಎಂದರು.