Tuesday, December 21, 2010



ಕೆರೆಗೆ ಹಾರವಾದ ಆಟೋ, ಪ್ರಯಾಣಿಕರು ಪಾರು, ಸ್ಥಳದಲ್ಲಿದ್ದವರ ಸಹಕಾರದಿಂದ ತಪ್ಪಿದ ಭಾರಿ ಅನಾಹುತ:
ಚಿಕ್ಕನಾಯಕನಹಳ್ಳಿ,ಡಿ.21: ತಾಲೂಕಿನ ನವಿಲೆ ಕೆರೆಗೆ ಎರಡು ಆಟೋಗಳು ಮುಖಾಮುಖಿ ಡಿಕ್ಕಿ ಹೊಡೆದು ಕೆರೆಗೆ ಬಿದ್ದಿದ್ದು ಇದರಿಂದ 6 ಜನಕ್ಕೆ ತೀವ್ರತರತರವಾಗಿ ಪೆಟ್ಟು ಬಿದ್ದಿದ್ದು ಇದರಲ್ಲಿ ಇಬ್ಬರು ಹೆಚ್ಚಿನ ಚಿಕಿತ್ಸೆಗೆ ತುಮಕೂರಿಗೆ ಕಳುಹಿಸಿದ್ದಾರೆ. ಆಟೋದಲ್ಲಿ 12 ಜನರಿದ್ದರು ಎಂಬುದಾಗಿ ಪ್ರತ್ಯಕ್ಷ ದಶರ್ಿ ಪತ್ರಿಕೆಗೆ ತಿಳಿಸಿದ್ದಾರೆ.
ಕುಪ್ಪೂರು ಕಡೆಯಿಂದ ಬಂದ ಲಗೇಜ್ ಆಟೋ, ಚಿ.ನಾ.ಹಳ್ಳಿ ಕಡೆಯಿಂದ ಬಂದ ಪ್ಯಾಸೆಂಜರ್ ಆಟೋಕ್ಕೆ ನವಿಲೆ ಏರಿಯ ಮೇಲೆ ಮುಖಾಮುಖಿ ಢಿಕ್ಕಿ ಹೊಡೆದು ಎರಡು ಆಟೋಗಳು ನವಿಲೆ ಕೆರೆಗೆ ಬಿದ್ದಿವೆ. ಇದರಿಂದ ಆಟೋದಲ್ಲಿದ್ದ 12 ಜನರು ನೀರಿನೊಳಗೆ ಬಿದ್ದಿದ್ದು ತಕ್ಷಣವೇ ಅದೇ ರಸ್ತೆಯಲ್ಲಿ ಹೋಗುತ್ತಿದ್ದವರು ಹಾಗೂ ಹೋಲದಲ್ಲಿ ಕೆಲಸ ಮಾಡುತ್ತಿದ್ದವರು ತಕ್ಷಣ ಕಾರ್ಯ ಪ್ರವೃತ್ತರಾಗಿ ನೀರಿನಲ್ಲಿ ಬಿದ್ದವರನ್ನು ದಡಕ್ಕೆ ತಂದು ಆಟೋ ಒಂದರಲ್ಲಿ ಕೆಲವರನ್ನು, ನಂತರ ಸಕರ್ಾರಿ ಬಸ್ನಲ್ಲಿ ಉಳಿದವರನ್ನು ತಕ್ಷಣವೇ ಚಿ.ನಾ.ಹಳ್ಳಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಇದರಲ್ಲಿ ಹಾಸನದಿಂದ ಕಪ್ಪೂರು ಜಾತ್ರೆಗೆಂದು ಬಂದಿದ್ದ ಹೇಮ ಹಾಗೂ ಚಿ.ನಾ.ಹಳ್ಳಿಯ ಸರ್ವಮಂಗಳ ಎಂಬುವವರಿಗೆ ತೀವ್ರವಾದ ಪೆಟ್ಟಾಗಿದ್ದು ಪ್ರಜ್ಞಾಹೀನರಾಗಿದ್ದರು. ಆಸ್ಪತ್ರೆಗೆ ದಾಖಲಾಗಿ ಪ್ರಥಮ ಚಿಕಿತ್ಸೆ ನೀಡಿದ ಎರಡು ಗಂಟೆ ಕಳೆದರೂ ಪ್ರಜ್ಞೆ ಬಾರದ ಹಿನ್ನೆಲೆಯಲ್ಲಿ ಇವರನ್ನು ಹೆಚ್ಚನ ಚಿಕಿತ್ಸೆಗೆ ತುಮಕೂರಿಗೆ ಕಳುಹಿಸಲಾಯಿತು. ಅಪಘಾತಕ್ಕೆ ಇಡಾಗಿದ್ದ ಲಗೇಜ್ ಆಟೋ ಮಾಲೀಕರಾದ ಚಟ್ಟಸಂದ್ರದ ಮೈಲಾರಲಿಂಗಾಚಾರ್ ಹಾಗೂ ಅವರ ಮಗ ಹರೀಶ್ ಇಬ್ಬರಿಗೂ ಗಾಯಗಳಾಗಿದ್ದು ಚಿ.ನಾ.ಹಳ್ಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆಯ ನಂತರ ನವಿಲೆ, ಮಾರಸಂದ್ರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿಮಾನವೀಯತೆ ಮೆರೆದು ಗಾಯಳುಗಳನ್ನು ಸಾಗಿಸುವುದರಿಂದ ಮೊದಲಗೊಂಡು ಜೆ.ಸಿ.ಬಿ.ಯನ್ನು ತಂದು ಆಟೋಗಳನ್ನು ಎತ್ತುವ ತನಕ ಎಲ್ಲ ಕಾರ್ಯದಲ್ಲೂ ಗ್ರಾಮಸ್ಥರ ಸಹಕಾರದಿಂದ ಹೆಚ್ಚಿನ ಅನಾಹುತ ತಪ್ಪಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿತ್ತು.
ಸ್ಥಳಕ್ಕೆ ಶಾಸಕ ಸಿ.ಬಿ.ಸುರೇಶ್ ಬಾಬು, ತಿಪಟೂರು ಉಪವಿಭಾಗಾಧಿಕಾರಿ ಪಾಟೀಲ್, ತಹಶೀಲ್ದರ್ ಟಿ.ಸಿ.ಕಾಂತರಾಜು, ಸ್ಥಳಕ್ಕೆ ಭೇಟಿ ನೀಡಿದ್ದರು. ಚಿ.ನಾ.ಹಳ್ಳಿ ಪಿ.ಎಸ್.ಐ. ಶಿವಕುಮಾರ್ ಪ್ರಕರಣ ದಾಖಲಿಸಿದ್ದಾರೆ.
ಖಚಿತತೆಗಿಂತ ರೋಚಕತೆಗೆ ಒತ್ತು ನೀಡಿದ ಟಿ.ವಿ.ಮಾಧ್ಯಮ: ಘಟನೆ ನಡೆದು ಸ್ವಲ್ಪ ಹೊತ್ತಿಗೆ ಸುದ್ದಿ ಚಾನಲ್ಗಳು ಸುದ್ದಿಯನ್ನು ಬ್ರೇಕ್ ಮಾಡುವ ಭಾರಟೆಯಲ್ಲಿ ಬದುಕಿದ್ದಗಾಯಳುಗಳನ್ನು ತಮ್ಮ ಸುದ್ದಿ ಪ್ರಸಾರದ ಮೂಲಕ ಸಾಯಿಸಿದರಲ್ಲದೆ, ಆಸ್ಪತ್ರೆಯಲ್ಲಿದ್ದವರನ್ನು ಕಾಣೆಯನ್ನಾಗಿಸಿದರು. ಇದರಿಂದ ಗಾಬರಿಗೊಂಡ ಜನರ ದಂಡೇ ಘಟನೆಯ ಸ್ಥಳಕ್ಕೆ ಧಾವಿಸಿದ್ದರು. ಸ್ಥಳಕ್ಕೆ ಆಗಮಿಸಿದ ಜನರು ಸಂಪೂರ್ಣ ವಿಷಯವನ್ನು ಗ್ರಹಿಸಿದ ಮೇಲೆ ಸುದ್ದಿಯನ್ನು ಖಚಿತವಾಗಿ ಬಿತ್ತರಿಸದ ಟಿ.ವಿ.ಯವರನ್ನು ಶಪಿಸುತ್ತಿದ್ದರು. ರೋಚಕ ಸುದ್ದಿಯನ್ನು ಕೊಡುವ ಆತುರದಲ್ಲಿ ತಪ್ಪು ಸುದ್ದಿಯನ್ನು ನೀಡುವುದು ಎಷ್ಟು ಸರಿ ಎಂದು ಸ್ಥಳದಲ್ಲಿದ್ದ ಪತ್ರಿಕೆಯ ವರದಿಗಾರರನ್ನು ಪ್ರಶ್ನಿಸುತ್ತಾ ು ವಿಮಶರ್ೆ ಮಾಡುತ್ತಿದ್ದರು.

ಚಿ.ನಾ.ಹಳ್ಳಿ: 5 ಜಿ.ಪಂ. ಕ್ಷೇತ್ರಗಳಿಗೆ ಅಂತಿಮವಾಗಿ 26 ಅಭ್ಯಥರ್ಿ ಕಣದಲ್ಲಿದ್ದಾರೆ
ಚಿಕ್ಕನಾಯಕನಹಳ್ಳಿ,ಡಿ.15: ತಾಲೂಕಿನ 5 ಜಿ.ಪಂ.ಕ್ಷೇತ್ರಗಳಿಗೆ 49 ನಾಮಪತ್ರಗಳು ಸಲ್ಲಿಕೆಯಾಗಿದ್ದವು ಈ ಪೈಕಿ 26 ಜನರು ಅಂತಿಮವಾಗಿ ಕಣದಲ್ಲಿ ಉಳಿದು 23 ಜನರು ತಮ್ಮ ಉಮೇದುವಾರಿಕೆಯನ್ನು ಹಿಂಪಡೆದಿದ್ದಾರೆ.
ಹುಳಿಯಾರು ಕ್ಷೇತ್ರದಲ್ಲಿ 5, ಹೊಯ್ಸಳಕಟ್ಟೆಯಿಂದ 4, ಹಂದನಕೆರೆ 6, ಕಂದೀಕೆರೆ 4 ಹಾಗೂ ಶೆಟ್ಟೀಕೆರೆ ಕ್ಷೇತ್ರದಿಂದ 7 ಅಬ್ಯಾಥರ್ಿಗಳು ಕಣದಲ್ಲಿ ಉಳಿದಿದ್ದಾರೆ.
ಶೆಟ್ಟೀಕೆರೆ ಕ್ಷೇತ್ರದಿಂದ ಕಾಂಗೈನಿಂದ ಮಾಜಿ ಶಾಸಕ ಬಿ.ಲಕ್ಕಪ್ಪ, ಬಿ.ಜೆ.ಪಿಯಿಂದ ಎಚ್.ಬಿ.ಪಂಚಾಕ್ಷರಯ್ಯ, ಜೆ.ಡಿ.ಯು ನಿಂದ ಟಿ.ಶಂಕರಲಿಂಗಪ್ಪ, ಜೆ.ಡಿ.ಎಸ್ನಿಂದ ಎಸ್.ಎನ್.ಸತೀಶ್, ಪಕ್ಷೇತರರಾಗಿ ಬಿ.ಎನ್.ಶಿವಪ್ರಕಾಶ್, ಬಿ.ನಾಗರಾಜು, ಟಿ.ಆರ್.ಮಹೇಶ್ ಅಂತಿಮವಾಗಿ ಕಣದಲ್ಲಿದ್ದಾರೆ.
ಕಂದಿಕೆರೆ ಕ್ಷೇತ್ರದಲ್ಲಿ ಜೆ.ಡಿ.ಯುನ ಜಿ.ಲೋಹಿತಾ ಬಾಯಿ, ಕಾಂಗ್ರೆಸ್ನಿಂದ ಜಿ.ಪರಮೇಶ್ವರಯ್ಯ, ಬಿ.ಜೆ.ಪಿಯಿಂದ ಸಿ.ರಂಗನಾಯ್ಕ, ಜೆ.ಡಿ.ಎಸ್ನಿಂದ ಈರಯ್ಯ, ಅಂತಿಮ ಕಣದಲ್ಲಿದ್ದಾರೆ.
ಹಂದನಕೆರೆ: ಕ್ಷೇತ್ರದಲ್ಲಿ ಬಿ.ಎಸ್.ಪಿಯಿಂದ ಪ್ರೇಮಲತ, ಕಾಂಗ್ರೆಸ್ನಿಂದ ಜಯಲಕ್ಷ್ಮಮ್ಮ, ಜೆ.ಡಿ.ಎಸ್ನಿಂದ ಜಾನಮ್ಮ, ಬಿ.ಜೆ.ಪಿಯಿಂದ ಯಶೋದ ಬಸವರಾಜು, ಜೆ.ಡಿ.ಯು.ನಿಂದ ಎ.ಎಸ್.ಅನುಸೂಯಮ್ಮ, ಪಕ್ಷೇತರರಾಗಿ ಮರುಳಮ್ಮ ಕಣದಲ್ಲಿದ್ದಾರೆ.
ಹೊಯ್ಸಳಕಟ್ಟೆ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಜ್ಯೋತಿ, ಬಿ.ಜೆ.ಪಿಯಿಂದ ನಿಂಗಮ್ಮ, ಜೆ.ಡಿ.ಎಸ್ನಿಂದ ಜಯಲಕ್ಷ್ಮೀ, ಜೆ.ಡಿ.ಯು ನಿಂದ ಭಾರತಮ್ಮ, ಕಣದಲ್ಲಿದ್ದಾರೆ..
ಹುಳಿಯಾರು: ಕ್ಷೇತ್ರದಲ್ಲಿ ಜೆ.ಡಿ.ಎಸ್ನಿಂದ ಎನ್.ಜಿ.ಮಂಜುಳ, ಬಿ.ಜೆ.ಪಿಯಿಂದ ಎಸ್.ಎಚ್.ಲತಾ, ಕಾಂಗ್ರೆಸ್ನಿಂದ ಎಚ್.ಡಿ.ರಮಾದೇವಿ, ಜೆ.ಡಿ.ಯು ನಿಂದ ವೈ.ಎಮ್.ರೇಣುಕಾದೇವಿ, ಪಕ್ಷೇತರರಾಗಿ ಚಂದ್ರಕಲಾ ಕಣದಲ್ಲಿದ್ದಾರೆ.

ಜನಪದ ಕಲಾವಿದರು ಸಂಘಟಿತರಾದರೆ ಮಾತ್ರ ಕಲೆ ಉಳಿಯಲು ಸಾಧ್ಯ: ಎಂ.ಎಸ್.ಚಂದ್ರಪ್ಪ
ಚಿಕ್ಕನಾಯಕನಹಳ್ಳಿ,ಡಿ.18: ಜಾನಪದ ಕಲಾವಿದರು ಸಂಘಟಿತರಾಗಿ ಜನರಿಂದ ದೂರವಾಗುತ್ತಿರುವ ಜಾನಪದ ಕಲೆಗಳನ್ನು ಬೆಳಸಲು ಸಹಕಾರ ನೀಡಬೇಕೆಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿದರ್ೇಶಕರಾದ ಎಂ.ಎಸ್. ಚಂದ್ರಪ್ಪನವರು ಹೇಳಿದರು.
ಪಟ್ಟಣದ ಬನಶಂಕರಿ ದೇವಾಲಯದ ಶ್ರೀ ರಾಮಮಂದಿರದಲ್ಲಿ ನಡೆದ ಚಿಗುರು ಹಾಗೂ ಯುವ ಸೌರಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಚಿಕ್ಕವಯಸ್ಸಿನಿಂದಲೇ ಕಲೆಗಳನ್ನು ಮೈಗೂಡಿಸಿಕೊಂಡು. ಪರಂಪರಾನುಗತವಾಗಿ ಉಳಿಸಿಕೊಂಡು ಬಂದಿರುವ ಜಾನಪದ ಕಲೆಗಳನ್ನು ಉಳಿಸಿ ಬೆಳಸಬೇಕು ಮತ್ತು ಶ್ರೀರಂಗ ಕ್ರೀಡಾ ಸಾಂಸ್ಕೃತಿಕ ಯುವ ಸಂಘದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು ತಾಲೂಕು ಅಶಕ್ತ ಕಲಾವಿದರಿಗೆ ನೀಡುತ್ತಿರುವ ಮಾಸಾಶನ ಹಾಗೂ ಇಲಾಖಾ ವತಿಯಿಂದ ಸಕರ್ಾರ ನೀಡುತ್ತಿರುವ ಸೌಲಭ್ಯಗಳ ಬಗ್ಗೆ ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಜಾನಪದ ಕಲಾವಿದರ ಸಂಘದ ಅಧ್ಯಕ್ಷರಾದ ಸಿ.ಎ.ಕುಮಾರಸ್ವಾಮಿ ಮಾತನಾಡಿ ಇಂದಿನ ಸಮಾಜದ ಅವನತಿಗೆ ಜನಪದ ಕಲೆಗಳು ಜನರಿಂದ ದೂರವಾಗುತ್ತಿರುವುದೇ ಕಾರವಾಗಿದ್ದು, ಜನಪದ ಕಲೆಗಳು ಸಮಾಜದ ಕೈಗನ್ನಡಿಯಂತಿದ್ದು ಇದನ್ನು ಬೆಳಸುವುದರಿಂದ ಸಾಮಾಜಿಕ ಮೌಲ್ಯಗಳು ವೃದ್ದಿಯಾಗುತ್ತವೆ ಎಂದು ತಿಳಿಸಿದರು. ಕಲಾವಿದರ ಇಂದಿನ ಸ್ಥಿತಿಗತಿಗಳ ಬಗ್ಗೆ ಚಚರ್ಿಸುತ್ತಾ ಜನಪದ ಕಲಾವಿದರ ಬಗ್ಗೆ ಗೌರವ ಭಾವನೆ ತಾಳುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಪುರಸಭಾ ಸದಸ್ಯರಾದ ಸಿ.ಕೆ.ಕೃಷ್ಣಮೂತರ್ಿ, ದೇವಾಂಗ ಸಂಘದ ಅಧ್ಯಕ್ಷ ಸಿ.ಜೆ.ಶೇಷಪ್ಪ, ಹಾಗೂ ವಿವಿದ ಸಂಘ ಸಂಸ್ಥೆಗಳ ಮುಖಂಡರು, ಕಲಾವಿದರು ಭಾಗವಹಿಸಿದ್ದರು.
ಸಿ.ಎ.ಚಿಕ್ಕನಾರಾಯಣಸ್ವಾಮಿ ನಿರೂಪಿಸಿ ಸಿ.ಟಿ.ಜಯಕೃಷ್ಣ ಸ್ವಾಗತಿಸಿ, ಸಿ.ಎಂ.ರಂಗನಾಥ್ ವಂದಿಸಿದರು.