Thursday, April 7, 2016


ಯಳನಡು ಸಿದ್ದರಾಮೇಶ್ವರ ಜಾತ್ರಾಮಹೋತ್ಸವ ಕಾರ್ಯಕ್ರಮಕ್ಕೆ ಸಿದ್ದತೆ : 
ಚಿಕ್ಕನಾಯಕನಹಳ್ಳಿ,ಏ.07 : ಹನ್ನೆರಡು ವರ್ಷಗಳ ನಂತರ ನಡೆಯಲಿರುವ ಯಳನಡು ಸಿದ್ದರಾಮೇಶ್ವರ ಜಾತ್ರಾ ಮಹೋತ್ಸವಕ್ಕೆ ಲಕ್ಷಾಂತರ ಜನರ ಸೇರುತ್ತಾರೆ ಹಾಗೂ ಮುಖ್ಯಮಂತ್ರಿ ಬರುವ ನಿರೀಕ್ಷೆಯಿದ್ದು ಅಧಿಕಾರಿಗಳು ಈಗಿನಿಂದಲೇ ಸಿದ್ದರಾಗಿ, ಬರುವವರಿಗೆ ಬಸ್ನ ವ್ಯವಸ್ಥೆ, ಕುಡಿಯುವ ನೀರು, ವಿದ್ಯುತ್ ವ್ಯವಸ್ಥೆಯನ್ನು ಸಮರ್ಪಕವಾಗಿ ನಿಭಾಯಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಸೂಚಿಸಿದರು.
ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಮೇ 11 ರಿಂದ 22ರವರೆಗೆ ನಡೆಯಲಿರುವ ಸಿದ್ದರಾಮೇಶ್ವರ ಜಾತ್ರಾ ಮಹೋತ್ಸವ ಹಲವು ವರ್ಷಗಳ ನಂತರ ನಡೆಯಲಿದೆ,  ಇದಕ್ಕಾಗಿ ಗ್ರಾಮಸ್ಥರೆಲ್ಲರೂ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನೆರವೇರಿಸಲು ಮುಂದಾಗುತ್ತಿದ್ದಾರೆ ಅದಕ್ಕೆ ಅಧಿಕಾರಿಗಳು ಸಹಕಾರ ನೀಡಬೇಕು ಹಾಗೂ ಜಾತ್ರೆಯಲ್ಲಿ ಕುಡಿಯುವ ನೀರಿಗಾಗಿ ಟ್ಯಾಂಕರ್ ನೀರು ಸರಬರಾಜು ಮಾಡುವಂತೆ ಅಧಿಕಾರಿಗೆ ಸೂಚಿಸಿದರು. 
ಸಂಸದ ಎಸ್.ಪಿ.ಮುದ್ದಹನುಮೇಗೌಡ ಮಾತನಾಡಿ, ಯಳನಡು ದೇವಸ್ಥಾನ ಬಳಿ ಹೈಮಾಸ್ಕ್ ದೀಪ ಅಳವಡಿಸುವಂತೆ ಹಾಗೂ ಜಾತ್ರೆಗೆ ಬರುವ ಭಕ್ತಾಧಿಗಳಿಗೆ ವಿದ್ಯುತ್ ಸಮಸ್ಯೆಯಾಗದಂತೆ, ನೀರಿನ ಸಮಸ್ಯೆ ಉಲ್ಭಣಿಸದಂತೆ ಅಧಿಕಾರಿಗಳು ಕ್ರಮ ವಹಿಸುವಂತೆ ತಿಳಿಸಿದರು.
ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ, ಜಾತ್ರಾ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಎಲ್ಲರೂ ಕೈಜೋಡಿಸುವಂತೆ ಮನವಿ ಮಾಡಿದರು.
ತಹಶೀಲ್ದಾರ್ ಗಂಗೇಶ್ ಮಾತನಾಡಿ, ಜಾತ್ರಾ ಮಹೋತ್ಸವಕ್ಕಾಗಿ ಸಿದ್ದತೆ ಮಾಡಿಕೊಳ್ಳಲು ಬೆಸ್ಕಾಂ, ಆಸ್ಪತ್ರೆ, ನೀರು ಸರಬರಾಜು ಹಾಗೂ ಬಸ್ ವ್ಯವಸ್ಥೆ ಕಲ್ಪಿಸುವ ಬಗ್ಗೆ ಸಂಬಂದಪಟ್ಟ ಅಧಿಕಾರಿಗಳ ಜೊತೆ ಚಚರ್ಿಸಿ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ಜಿ.ಪಂ.ಸದಸ್ಯ ವೈ.ಸಿ.ಸಿದ್ದರಾಮಯ್ಯ ಮಾತನಾಡಿ, ಯಳನಡುಸಿದ್ದರಾಮೇಶ್ವರರ ರಥೋತ್ಸವ ಸಂಚರಿಸುವ ಭಾಗದಲ್ಲಿ ರಸ್ತೆ ಸಂಪರ್ಕ ಕಲ್ಪಿಸುವಂತೆ ಅಧಿಕಾರಿಗೆ ತಿಳಿಸಿದರು.
ಸಭೆಯಲ್ಲಿ ಜಿ.ಪಂ.ಸದಸ್ಯರಾದ ಕಲ್ಲೇಶ್, ನಾರಾಯಣ್, ಮಾಜಿ ಶಾಸಕ ಬಿ.ಲಕ್ಕಪ್ಪ ಸೇರಿದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.
ಬಾಕ್ಸ್ ಕಾಲಂ-1
ತಾಲ್ಲೂಕಿನ ಹಂದನಕೆರೆ ಹೋಬಳಿ ದೊಡ್ಡೆಣ್ಣೆಗೆರೆ ಬಳಿಯ ಲಂಬಾಣಿ ಜನಾಂಗದ ಭೀಮಾಸತಿ ದೇವಸ್ಥಾನಕ್ಕೆ 10 ಎಕರೆ ಜಮೀನಿನ ಅವಶ್ಯಕತೆ ಇದೆ, ದೇವಸ್ಥಾನದ ಸಮಿತಿಯವರಿಗೆ ನೆರವು ನೀಡಿ ಎಂದು ತಹಶೀಲ್ದಾರ್ಗೆ ಸಚಿವರು ತಿಳಿಸಿದರು,  ಆಗೆಯೇ ತಹಶೀಲ್ದಾರರೇ,.. ಒಮ್ಮೆ ಭೀಮಾಸತಿ ದೇವಸ್ಥಾನಕ್ಕೆ ಭೇಟಿ ಕೊಟ್ಟು ಪೂಜೆ ಸಲ್ಲಿಸಿ,  ಇದರಿಂದ ನಿಮಗೆ ಹೆಣ್ಣು ಮಕ್ಕಳಾಗುತ್ತವೆ ಎಂದು ಸಚಿವ ಟಿ.ಬಿ.ಜಯಚಂದ್ರ ಸಭೆಯಲ್ಲಿದ್ದ ತಹಶೀಲ್ದಾರ್ಗೆ ಹೇಳಿದರು, ಇದಕ್ಕೆ ಪ್ರತಿಯಾಗಿ ಸಂಸದ ಮುದ್ದಹನುಮೇಗೌಡ ಮಾತನಾಡಿ,  ಸಚಿವರೇ ಈಗಾಗಲೇ ನೀವೂ ಭೀಮಾಸತಿಗೆ ಪೂಜೆ ಸಲ್ಲಿಸಿದ್ದೀರಿ ಆದರೂ ಹೆಣ್ಣು ಮಕ್ಕಳು ನಿಮಗಾಗಿಲ್ಲ ಏಕೆ ಎಂದು ಸಚಿವರಿಗೆ ಟಾಂಗ್ ನೀಡಿದರು. ಈ ಸಂಭಾಷಣೆ ಸಭೆಯಲ್ಲಿದ್ದವರಲ್ಲಿ ನಗು ಉಕ್ಕಿಸಿತು.


ಯುಗಾದಿ ಹಬ್ಬದ ಹಿನ್ನೇಲೆಯಲ್ಲಿ ಬೇವಿನ ಹೂ ಹಾಗೂ ಮಾವಿನ ಎಲೆಗಾಗಿ ಮರವೇರಿದ ಜನರು
ಚಿಕ್ಕನಾಯಕನಹಳ್ಳಿ07: ನೂತನ ಸಂವತ್ಸರವಾದ ದುಮರ್ುಖಿಗೆ ಆಹ್ವಾನ ನೀಡುವ ಪ್ರಥಮ ಹಬ್ಬವಾದ ಯುಗಾದಿಯ ಮುನ್ನಾದಿನ ಜನರು ಮಾವಿನ ತೋರಣ ಹಾಗೂ ಬೇವಿನ ಹೂವಿಗಾಗಿ ತೋಟಗಳತ್ತ ಮುಖಮಾಡಿ ಮರವೇರಿದ್ದು ಸಾಮಾನ್ಯವಾಗಿತ್ತು.
ತಾಲ್ಲೂಕಿನ ಕಾರೇಹಳ್ಳಿ ಗೇಟ್ ಬಳಿ ಬೇವಿನ ಮರವನ್ನೇರಿ ಬೇವಿನ ಹೂವಿಗಾಗಿ ಜನರು ಮುಗಿಬಿದ್ದಿದ್ದ ದೃಶ್ಯ ಕಂಡುಬಂದಿತು,  ಈ ಬಾರಿ ಬೇವಿನ ಹೂ ಕಡಿಮೆಇದ್ದು ತಾಲ್ಲೂಕಿನ ಹಲವೆಡೆ ಜನ ಬೇವಿನ ಹೂಗಳನ್ನು ಸಂಗ್ರಹಿಸಲು ತೋಟ ರಸ್ತೆ ಬದಿ ಹಾಗೂ ಹೊಲಮಾಳಗಳಲ್ಲಿ ಸುತ್ತಾಡುತ್ತಿದ್ದುದು ಕಂಡುಬಂತು.
ಯುಗಾದಿಯಲ್ಲಿ ಬೇವು ಬೆಲ್ಲ ಹಂಚಿ ನೆರೆಹೊರೆಯ ಸಾಮರಸ್ಯವನ್ನು ವೃದ್ದಿಕೊಳ್ಳಿಸುವುದು ವಾಡಿಕೆಯಾಗಿದ್ದು ಅದರಂತೆ ಗ್ರಾಮಾಂತರ ಭಾಗಗಳಷ್ಟೇ ಅಲ್ಲದೇ ಪಟ್ಟಣ ಪ್ರದೇಶಗಳಲ್ಲೂ ಬೇವಿನ ಹೂವಿಗಾಗಿ ಬೇಡಿಕೆ ಇದ್ದಿದ್ದು ಕಂಡು ಬಂದಿತು.
ಹಿಂದುಗಳಿಗೆ ಹೊಸವರ್ಷಚರಣೆಯ ಹಿನ್ನೆಲೆಯಲ್ಲಿ ಹೊಸ ಬಟ್ಟೆ, ಉಡುದಾರ ಖರೀದಿ ಬರಾಟೆಯಲ್ಲಿತ್ತು,  ಬೆಂಗಳೂರು ಸೇರಿದಂತೆ ಹಲವೆಡೆಗಳಿಂದ ತಮ್ಮ ಊರುಗಳಿಗೆ ಬರುವಂತಹ ಜನರು ಸಾಮಾನ್ಯವಾಗಿತ್ತು.
ಪಟ್ಟಣದ ಖಾಸಗಿ ಬಸ್ಸ್ಟ್ಯಾಂಡ್ ಬಳಿ ಹೂವಿನ ಹಾಗೂ ತರಕಾರಿ ವ್ಯಾಪಾರ ಹೆಚ್ಚಾಗಿ ಕಂಡುಬಂದಿದ್ದು ಹೂವಿನ ಹಾಗೂ ಹಣ್ಣುಗಳ ಬೆಲೆ ಮಾಮುಲಿ ದಿನಗಳಿಗಿಂತ ಸ್ವಲ್ಪ ಹೆಚ್ಚಾಗಿತ್ತು ಆದರೂ ಜನರು ಕೊಳ್ಳುವುದು ಮಾತ್ರ ಕಡಿಮೆಯಾಗಿರಲಿಲ್ಲ.
ಮಕ್ಕಳಿಗೆ ಹೆಚ್ಚಿನ ವಿದ್ಯಾಭ್ಯಾಸ ನೀಡಿ 
ಚಿಕ್ಕನಾಯಕನಹಳ್ಳಿ,ಏ.07 : ಖಾಸಗಿ ಶಾಲೆಗಳಿಗಿಂತ ಸಕರ್ಾರಿ ಶಾಲೆ ಮಕ್ಕಳು ಹೆಚ್ಚಿನ ಜ್ಞಾನ ಹೊಂದಿರುತ್ತಾರೆ ಅದನ್ನು ಹೊರ ತೆಗೆಯುವುದು ಶಿಕ್ಷಕರ ಮೇಲಿದೆ, ಶಿಕ್ಷಕರ ಜೊತೆಗೆ ಪೋಷಕರು ಸ್ಪಂದಿಸಿ ಮಕ್ಕಳಿಗೆ ಮನೆಯಲ್ಲಿ ಶಿಕ್ಷಕರು ಏನು ಪಾಠ ಮಾಡಿದ್ದಾರೆಯೆಂದು ಪ್ರತಿನಿತ್ಯ ಮನನ ಮಾಡಿಸಬೇಕು ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಎಸ್.ಪ್ರಕಾಶ್ ಹೇಳಿದರು.
ತಾಲ್ಲೂಕಿನ ಶೆಟ್ಟಿಕೆರೆ ಹೋಬಳಿ ಹೆಸರಹಳ್ಳಿ ಗ್ರಾಮದಲ್ಲಿನ ಶಾಲಾ ವಾಷರ್ಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಾತನಾಡಿ, ಮಕ್ಕಳ ವಿದ್ಯಾಭ್ಯಾಸ, ಶಾಲಾ ಕಾರ್ಯಗಳ ಬಗ್ಗೆ ಸಮೃದ್ದಿಯಾಗಿ ನಡೆಯಲು ಎಸ್.ಡಿಎಂ.ಸಿ ಸದಸ್ಯರು, ಪೋಷಕರು, ಶಿಕ್ಷಕರು, ಹಾಗೂ ಗ್ರಾಮಸ್ಥರ ಸಹಕಾರ ಅಗತ್ಯವಾಗಿದೆ ಎಂದರು.
ಶಿಕ್ಷಕ ಈಶ್ವರಪ್ಪ ಮಾತನಾಡಿ ಸಕರ್ಾರ ಹಲವಾರು ಸವಲತ್ತುಗಳನ್ನು ನೀಡುತ್ತಿದೆ, ಸಕರ್ಾರಿ ಶಾಲೆಗಳ ಶಿಕ್ಷಕರು ಸಿಇಟಿಯಂತಹ ಸ್ಮಧರ್ಾತ್ಮಕ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿ ಉತ್ತಮ ಜ್ಞಾನ ಹೊಂದಿರುತ್ತಾರೆ, ಮಕ್ಕಳನ್ನು ಸಕರ್ಾರಿ ಶಾಲೆಗಳಲ್ಲಿ ಓದಿರುವ ಹಲವಾರು ವ್ಯಕ್ತಿಗಳು ಇಂದು ದೇಶದ ಗಣ್ಯ ವ್ಯಕ್ತಿಗಳಾಗಿದ್ದಾರೆ ಎಂದರಲ್ಲದೆ ನಮ್ಮ ಶಾಲೆಯ ವಿದ್ಯಾಥರ್ಿಗಳು ಹವಮಾನ ಮತ್ತು ವಾಯುಗುಣ ಎಂಬ ವಿಷಯದ ಕೃಷಿಯಲ್ಲಿ ಮಕ್ಕಳು ಹವಮಾನ ಶೀಷರ್ಿಕೆಯಡಿಯಲ್ಲಿ ಚೆಂಡು ಹೂವಿನ ಬಗ್ಗೆ ಸಾಕಾಷ್ಟು ವಿಷಯಗಳ ಸಂಗ್ರಹಸಿ ಜಿಲ್ಲಾ ವಿಜ್ಞಾನ ಸಮಾವೇಷದಲ್ಲಿ ಆಯ್ಕೆಯಾಗಿ ಗೋಕಾಕ್ನಲ್ಲಿ ನೆಡೆದ ರಾಜ್ಯ ಮಟ್ಟದ ವಿಜ್ಞಾನ ಸಮಾವéೇಷದಲ್ಲಿ ಭಾಗವಹಿಸಿ ನಮ್ಮ ಶಾಲೆಗೆ ಹೆಸರು ತಂದಿದ್ದಾರೆ ಎಂದರು.
ಈ ಸಂದರ್ಭದಲ್ಲಿ ದಲಿತ ಮುಖಂಡ ಚನ್ನಬಸವಯ್ಯ, ಗ್ರಾ,ಪಂ ಸದಸ್ಯ ದಯಾನಂದ್, ಎಸ್.ಡಿ.ಎಂ ಸಿ ಅಧ್ಯಕ್ಷ ಪ್ರಕಾಶ್, ಕಲ್ಲೇಶಯ್ಯ, ಮಲ್ಲೇಶಯ್ಯ, ಬಸವರಾಜು, ಶಿವಶಂಕರ್, ಗೋಪಾಲ್, ನಂಜಯ್ಯ, ಮುಖ್ಯೋಪಾಧ್ಯಯ ಕೃಷ್ಣಮೂತರ್ಿ, ಶಿಕ್ಷಕರುಗಳಾದ ಜಯಣ್ಣ, ವಿಶ್ವೇಶ್ವರಯ್ಯ, ಗೀತಾ, ಶೋಭ ಮತ್ತಿತ್ತರರು ಉಪಸ್ಥಿತರಿದ್ದರು.

ಕೆ.ಎಸ್.ಆರ್.ಟಿ.ಸಿ ಬಸ್ ವಿದ್ಯುತ್ ಕಂಬಕ್ಕೆ ಡಿಕ್ಕಿ 

ಚಿಕ್ಕನಾಯಕನಹಳ್ಳಿ,ಏ.: ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ನ ಆಕ್ಸೆಲ್ ಬ್ಲೇಡ್ ತುಂಡಾದ ಪರಿಣಾಮ ರಸ್ತೆಯ ಪಕ್ಕದಲ್ಲಿದ್ದ ವಿದ್ಯುತ್ ಕಂಬಕ್ಕೆ ಢಿಕ್ಕಿಹೊಡೆದು,  ವಿದ್ಯುತ್ ತಂತಿ ಹರಿದು ವಿದ್ಯುತ್ ಕಂಬ ಬಸ್ಸಿನ ಮೇಲೆ ಬಿದ್ದ ಘಟನೆ ತಾಲ್ಲೂಕಿನಲ್ಲಿ ದೊಡ್ಡರಾಂಪುರದ ಬಳಿ ನಡೆದಿದೆ.
ತಾಲ್ಲೂಕಿನ ಕಂದಿಕೆರೆ ಹೋಬಳಿಯ ದೊಡ್ಡರಾಂಪುರದ ರಸ್ತೆಯಲ್ಲಿ ಚಿಕ್ಕನಾಯಕನಹಳ್ಳಿ ಕಡೆಯಿಂದ ಕೊಂಡ್ಲಿಕ್ರಾಸ್ ಕಡೆಗೆ ಸಾಗುತ್ತಿದ್ದ ಕೆಎಸ್ಆರ್ಟಿಸಿ ಬಸ್ನ ಚಕ್ರಗಳಿಗೆ ಅಳವಡಿಸಲಾಗಿದ್ದ  ಆಕ್ಸೆಲ್ ಬ್ಲೇಡ್ಗಳು ತುಂಡಾದ  ಕಾರಣ ಚಾಲಕನ ಹಿಡಿತ ತಪ್ಪಿ ಬಸ್ ರಸ್ತೆಯ ಪಕ್ಕದಲ್ಲಿದ್ದ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದಿದೆ,  ಜೊತೆಗೆ  ವಿದ್ಯುತ್ ತಂತಿ ತುಂಡಾಗಿ ಬಸ್ಸಿನ ಮೇಲೆ ವಿದ್ಯುತ್ ಕಂಬ ಬಿದ್ದಿದ್ದು ಬಸ್ ಪಕ್ಕದಲ್ಲೇ ಇದ್ದ ಕಮರಿಗೆ  ಬೀಳುವಂತಿದ್ದು ಚಾಲಕನ ಜಾಗರೂಕತೆಯಿಂದ ಹೆಚ್ಚಿನ ಅಪಘಾತ ಸಂಬವಿಸಿಲ್ಲ. ಹಾಗೂ  ಯಾವುದೇ ಪ್ರಾಣಾಪಯವಾಗಿಲ್ಲ ಬಸ್ಸಿನಲ್ಲಿ ಸುಮಾರು 20 ಜನ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ.