Thursday, June 16, 2016



ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ತಾ.ಪಂ. ಕೆಡಿಪಿ ಸಭೆ 
 ಚಿಕ್ಕನಾಯಕನಹಳ್ಳಿ : ಕೆ.ಡಿ.ಪಿ ಸಭೆಯಲ್ಲಿ ಕುಡಿಯುವ ನೀರು ಸಮಸ್ಯೆ, ಕೃಷಿ ಇಲಾಖೆಯಲ್ಲಿ ಅನುದಾನ ಹಂಚಿಕೆಯಲ್ಲಿ ಅಸಮರ್ಪಕ ನಿರ್ವಹಣೆ, ಆಸ್ಪತ್ರೆಗಳಲ್ಲಿ ಅನೈರ್ಮಲ್ಯ,  ಶಾಲಾ ಮೈದಾನವನ್ನು ಕಬಳಿಸಿ ಕಟ್ಟಿರುವ ಬಗ್ಗೆ ಒತ್ತುವರಿ ತೆರವು ಹಾಗೂ ರೈತರಿಗೆ ಸರಿಯಾಗಿ ಪರಿಕರಗಳನ್ನು ವಿತರಿಸದೇ ಇರುವ ಬಗ್ಗೆ ಸಭೆಯಲ್ಲಿ ಚಚರ್ೆ ನಡೆಯಿತು.

ಪಟ್ಟಣದ ತಾ.ಪಂ ಸಭಾಂಗಣದಲ್ಲಿ ಶಾಸಕ ಸಿ.ಬಿಸುರೇಶ್ಬಾಬು ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಕೆ.ಡಿ.ಪಿ ಸಭೆಯಲ್ಲಿ ಕೃಷಿ ಇಲಾಖೆಯಲ್ಲಿ ವಿವಿಧ ಯೋಜನೆ ಅಡಿಯಲ್ಲಿ ಸುಮಾರು ಐದು ಕೋಟಿ ಹದಿನಾರು ಲಕ್ಷ ರೂಗಳ ಅನುಧಾನ ಬಳಕೆಯ ಬಗ್ಗೆ ತಾ.ಪಂ.ಸದಸ್ಯ ಸಿಂಗದಹಳ್ಳಿ ರಾಜ್ಕುಮಾರ್ ಕೇಳಿದ ಪ್ರಶ್ನೆಗೆ ಕೃಷಿ ಅಧಿಕಾರಿ ಸಮರ್ಪಕವಾಗಿ ಉತ್ತರ ನೀಡುವಲ್ಲಿ ವಿಫಲರಾದರು. ರೈತರಿಗೆ ಕೃಷಿ ಇಲಾಖೆಯಿಂದ ಸರಿಯಾದ ಸವಲತ್ತುಗಳು ಸಿಗುತ್ತಿಲ್ಲ, ಜನಪ್ರತಿನಿಧಿಗಳಿಗೂ ಸರಿಯಾದ ಮಾಹಿತಿ ಇಲ್ಲ, ಗುಣಮಟ್ಟದ ಪರಿಕರಗಳನ್ನು ನೀಡುತ್ತಿಲ್ಲ ಎಂದು ಹೇಳಿದರು.
ಬಾಡಿಗೆ ಆಧಾರಿತ ಕೃಷಿ ಸೇವಾ ಕೇಂದ್ರಗಳು ಎಷ್ಟಿವೆ, ಯಂತ್ರಗಳಿಂದ ಎಷ್ಟು ಬಾಡಿಗೆ ಬರುತ್ತಿದೆ, ಸಾವಯವ ಕೃಷಿ ಯೋಜನೆಯಲ್ಲಿ ಇಪ್ಪತ್ತಾರು ಲಕ್ಷಗೂ ಅಧಿಕ ಹಣ ಖಚರ್ು ಮಾಡಿದ್ದೀರಾ ಅದರ ಪ್ರಗತಿ ಏನು, ಫಲಾನುಭವಿಗಳ ಹಂಚಿಕೆಯಲ್ಲಿನ ಮಾನದಂಡವನ್ನು ಸರಿಯಾಗಿ ಅನುಸರಿಸಲಾಗಿದಯೇ, ಪಾಲಿ ಹೌಸ್ ಫಲಾನುಭವಿಗಳ ಬಗ್ಗೆ ಮಾಹಿತಿ ನೀಡಿ, ಕೃಷಿ ಭಾಗ್ಯ ಯೋಜನೆ ಅಡಿಯಲ್ಲಿ ಪರಿಕರಗಳ ಗುಣಮಟ್ಟ ಉತ್ತಮವಾಗಿಲ್ಲ ಇದನ್ನು ಪರೀಕ್ಷಿಸಿದ್ದೀರಾ ಎಂಬ ಪ್ರಶ್ನೆಗಳಿಗೆ ಅಧಿಕಾರಿ ಎಲ್ಲಾ ಮಾಡಿದ್ದಾನೆ ಎಂದರೆ ಹೊರತು ಆ ಬಗ್ಗೆ ಮಾಹಿತಿಯನ್ನು ಸಭೆಗೆ ಒದಗಿಸುವಲ್ಲಿ ವಿಫಲರಾದರು.
ಕೃಷಿ ಅಭಿಯಾನದ ಅಡಿಯಲ್ಲಿ ಆರು ಇಲಾಖೆಗಳ ಜೊತೆಯಲ್ಲಿ ಸಭೆ ನಡೆಸಬೇಕಾಗಿತ್ತು ಹಾಗಾಗಿಲ್ಲ ಹಾಗೂ ಸಭೆಗೆ ಜನಪ್ರತಿನಿಧಿಗಳನ್ನು ಕರೆಯದೇ ಕೃಷಿ ಅಭಿಯಾನದ ಕಾರ್ಯಕ್ರಮ ಮಾಡುತ್ತಿರುವುದು ಸರಿಯಲ್ಲ, 2014ರಲ್ಲಿ ಜಲಾನಯನ ಇಲಾಖೆ ಕೃಷಿ ಇಲಾಖೆ ವಿಲೀನವಾಗಿದ್ದು ಜಲಾನಯನ ಇಲಾಖೆಯ ಬಗ್ಗೆ ಮಾಹಿತಿ ನೀಡಿಲ್ಲ ಎಷ್ಟು ಹಣ ಬಂದಿದೆ, ಎಷ್ಟು ಖಚರ್ಾಗಿದೆ ಎಂಬ ಮಾಹಿತಿಯನ್ನು ಸಿಂಗದಹಳ್ಳಿ ರಾಜ್ಕುಮಾರ್ ಕೇಳಿದರು.
ತಾಲ್ಲೂಕಿನಲ್ಲಿ ಎಷ್ಟು ಹೆಚ್.ಐ.ವಿ ಪೀಡಿತರಿದ್ದಾರೆ ಎಂಬ ಅಂಕಿ ಅಂಶವನ್ನು ನೀಡುವಂತೆ ಶಾಸಕರು ಕೇಳಿದ ಪ್ರಶ್ನೆಗೆ,  ಡಾ.ಶಿವಕುಮಾರ್ ಮಾತನಾಡಿ ತಾಲ್ಲೂಕಿನಲ್ಲಿ 600ಕ್ಕೂ ಹೆಚ್ಚು ಜನರಿಗೆ ಹೆಚ್.ಐ.ವಿ ಸೊಂಕು ತಗುಲಿದೆ, ಅತಿ ಹೆಚ್ಚು ಪೀಡಿತರು ಹುಳಿಯಾರು ಭಾಗದಲ್ಲಿದ್ದಾರೆ ಎಂದರು.
ಹುಳಿಯಾರು  ಸಕರ್ಾರಿ ಆಸ್ಪತ್ರೆಯ ಮೈದಾನದಲ್ಲಿ ಹಂದಿಗಳ ದ್ವಿಚಕ್ರವಾಹನಗಳ ಪಾಕರ್ಿಂಗ್ ಆಗಿದೆ,  ಸರಿಯಾಗಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ,  ಆಸ್ಪತ್ರೆಗೆ ದಾಖಲಾಗುವ ರೋಗಿಗಳಿಗೆ ಹೊರಗಡೆಯಿಂದ ಕುಡಿಯುವ ನೀರು ತಂದು ಕೊಡಬೇಕಾಗಿದೆ. ಸೊಳ್ಳೆಗಳ ಕಾಟ ಜಾಸ್ತಿಯಾಗಿದೆ ಎಂದು ಜಿ.ಪಂ  ಸದಸ್ಯ ಸಿದ್ದರಾಮಯ್ಯ ತಾ|| ವೈದ್ಯಾಧಿಕಾರಿ ಶಿವಕುಮಾರ್ರವರನ್ನು ಪ್ರಶ್ನಿಸಿದರು. ಡಾ.ಶಿವಕುಮಾರ್ ಮಾತನಾಡಿ, ಈಗಾಗೇ ಕುಡಿಯುವ ನೀರಿಗೆ ಆರ್.ಓ ಪ್ಲಾಂಟ್ ಹಾಕಲಾಗಿದೆ ಆಸ್ಪತ್ರೆಯ ಸುತ್ತ ಇರುವ ಗೇಟ್ಗಳನ್ನು ಭದ್ರಪಡಿಸಲಾಗುವುದು  ಪ್ರಾಣಿಗಳು ಆಸ್ಪತ್ರೆಯ ಮೈದಾನಕ್ಕೆ ಬರದಂತೆ ಮುಳ್ಳುತಂತಿಯನ್ನು ಹಾಕಲಾಗುವುದು ಹಾಗೂ ರಿವಾಲ್ವಿಂಗ್ ಗೇಟ್ ಅಳವಡಿಸಲಾಗುವುದು ಎಂದರು, ಇದಕ್ಕೆ ಪ್ರತಿಕ್ರಯಿಸಿದ ಶಾಸಕರು,  ತಮ್ಮ ಸ್ಥಳೀಯಾಭಿವೃದ್ದಿ ಅನುದಾನದಲ್ಲಿ ಹಣ ಬಿಡುಗಡೆ ಮಾಡಲಾಗುವುದು ಎಂದರು. 
ಸಭೆಗೆ ಗೈರು ಹಾಜರಾಗಿದ್ದ ಅಬಕಾರಿ ಮತ್ತು ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆಯ ಅಧಿಕಾರಿಗಳಿಗೆ ನೋಟಿಸ್ ನೀಡುವಂತೆ ಅಧ್ಯಕ್ಷರು ತಾ.ಪಂ.ಇ.ಓರವರಿಗೆ ಸೂಚಿಸಿದರು.
ತಾ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಸನ್ನಕುಮಾರ್ ಮಾತನಾಡಿ, ತಾಲ್ಲೂಕಿನ ಗಡಿಭಾಗದಲ್ಲಿರುವ ದಸೂಡಿ, ದಬ್ಬಗುಂಟೆ, ಹೊಯ್ಸಳಟ್ಟೆ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದೆ, ಇದರ ಬಗ್ಗೆ ಕ್ರಮಕೈಗೊಳ್ಳುವಂತೆ ತಿಳಿಸಿದಾಗ ಬಿಇಓ ಕೃಷ್ಣಮೂತರ್ಿ ಮಾತನಾಡಿ, ಪ್ರೌಡಶಾಲೆಗಳಿಗೆ ಸಕರ್ಾರ ಅತಿಥಿ ಶಿಕ್ಷಕರನ್ನು ನೇಮಕ ಮಾಡಲು ಕ್ರಮ ಕೈಕೊಂಡಿದೆ,  ಅತಿಥಿ ಶಿಕ್ಷಕರು ನೇಮಕವಾದಾಗ ಗಡಿ ಭಾಗದ ಹಳ್ಳಿಗಳಿಗೆ ನಿಯೋಜನ ಮಾಡಲಾಗುವುದು ಎಂದರಲ್ಲದೆ ದಸೂಡಿ ಭಾಗಕ್ಕೆ 108 ಆಂಬುಲೆನ್ಸ್ನ ಅವಶ್ಯಕತೆ ಇದ್ದು ಶೀಘ್ರ ಆ ಭಾಗಕ್ಕೆ ಆಂಬುಲೆನ್ಸ್ ವ್ಯವಸ್ಥೆ ಮಾಡುವಂತೆ ತಾಲ್ಲೂಕು ಆರೋಗ್ಯಾಧಿಕಾರಿಗಳಿಗೆ ತಿಳಿಸಿದರು.
ಸಭೆಯಲ್ಲಿ ಜಿ.ಪಂ.ಸದಸ್ಯರಾದ ರಾಮಚಂದ್ರಯ್ಯ, ಮಂಜುಳಮ್ಮ, ಮಹಲಿಂಗಯ್ಯ, ತಾ.ಪಂ.ಅಧ್ಯಕ್ಷೆ ಕೆ.ಹೊನ್ನಮ್ಮ, ಉಪಾಧ್ಯಕ್ಷ ಆಲದಕಟ್ಟೆ ತಿಮ್ಮಯ್ಯ, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಹೆಚ್.ಆರ್.ಶಶಿಧರ್, ಟಿ.ಎ.ಪಿ.ಸಿ.ಎಂ.ಎಸ್ ಅಧ್ಯಕ್ಷ ಎನ್.ಎನ್.ಶ್ರೀಧರ್, ತಹಶೀಲ್ದಾರ್ ಗಂಗೇಶ್, ಪುರಸಭಾಧ್ಯಕ್ಷ ಸಿ.ಟಿ.ದಯಾನಂದ್, ಮತ್ತಿತರರು ಉಪಸ್ಥಿತರಿದ್ದರು. 

ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕಾಗಿ ವಿಶೇಷ ಅರಿವು ಕಾರ್ಯಕ್ರಮ
ಚಿಕ್ಕನಾಯಕನಹಳ್ಳಿ,ಜೂ.16 : ಮಲೇರಿಯಾ ರೋಗವು ಪ್ಲಾಸ್ಮೋಡಿಯಂ ಎಂಬ ಸೂಕ್ಷ್ಮಾಣು ಜೀವಿಯಿಂದ ಬರುವ ರೋಗವಾಗಿದ್ದು,  ಅನಾಫೀಲಿಸ್ ಹೆಣ್ಣು ಸೊಳ್ಳೆಯಿಂದ ಹರಡಲಿದೆ ಈ ಸೊಳ್ಳೆಯೂ ಮನುಷ್ಯರನ್ನು ಕಚ್ಚುವುದರಿಂದ ಒಬ್ಬರಿಂದ ಒಬ್ಬರಿಗೆ ಹರಡುವ ಸಾಂಕ್ರಾಮಿಕ ರೋಗವಾಗಿದೆ ಎಂದು ಜಿಲ್ಲಾ ರೋಗವಾಹಕ ನಿಯಂತ್ರಣಾಧಿಕಾರಿ ಚಂದ್ರಪ್ಪ ಹೇಳಿದರು.
ಪಟ್ಟಣದ ಬಸವೇಶ್ವರ ನಗರದ ಅಂಗನವಾಡಿ ಕೇಂದ್ರದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಾಲ್ಲೂಕು ಪಂಚಾಯಿತಿ, ತಾಲ್ಲೂಕು ವೈದ್ಯಾಧಿಕಾರಿಗಳು, ಸಾರ್ವಜನಿಕ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳ ಸಂಯುಕ್ತಾಶ್ರಯದಲ್ಲಿ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕಾಗಿ ವಿಶೇಷ ಅರಿವು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು,  ಡೆಂಗ್ಯು ಮತ್ತು ಚಿಕನ್ಗುನ್ಯ ಜ್ವರ  ವೈರಸ್ನಿಂದ ಉಂಟಾಗುವ ಖಾಯಿಲೆ, ಈ ಖಾಯಿಲೆ ಕಚ್ಚುವ ಮೂಲಕ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ, ತೀವ್ರಜ್ವರ ಕಣ್ಣುಗಳು ಕೆಂಪಾಗುವಿಕೆ, ಸ್ನಾಯುನೋವು, ಕೀಲುಗಳಲ್ಲಿ ನೋವು, ಮೈ ನೋವಾಗುವಿಕೆ ರೀತಿಯ ರೋಗ ಕಂಡುಬರಲಿದೆ ಹಾಗೂ ಕುಷ್ಟರೋಗವು ಮೈಕೋಬ್ಯಾಕ್ಟೀರಿಯಂ ಲೆಪ್ರಿ ಎಂಬ ರೋಗಾಣುವಿನಿಂದ ಬರುವ ಸಾಂಕ್ರಾಮಿಕ ರೋಗವಾಗಿದ್ದು ಇದು ಯಾವ ವಯಸ್ಸಿನಲ್ಲಾದರೂ ಬರಬಹುದು, ಕೈಕಾಲುಗಳಲ್ಲಿ ಸ್ಪರ್ಶ ಜ್ಞಾನವಿಲ್ಲದಿರುವುದು, ಕತ್ತು, ಮೊಣಕೈ ಹಾಗೂ ಮೊಣಕಾಲಿನ ಹಿಂಭಾಗದಲ್ಲಿ ನರಗಳ ಊತ ಮತ್ತು ನೋವಿದ್ದರೆ ಅದು ಕುಷ್ಟರೋಗವಾಗುತ್ತದೆ, ಅದಕ್ಕಾಗಿ ಸಾಂಕ್ರಾಮಿಕ ರೋಗಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಅವಶ್ಯ ಈ ರೋಗಗಳ ಚಿಕಿತ್ಸೆಗಾಗಿ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರ, ಸಕರ್ಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಪಡೆಯಬಹುದು ಎಂದರು.
ಕಾರ್ಯಕ್ರಮದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಶಿವಕುಮಾರ್, ಇಲಾಖೆಯ ಕ್ಷೇತ್ರ ವ್ಯವಸ್ಥಾಪಕ ಸಿ.ಎನ್.ಮಧು, ಕುಮಾರ್, ಎಸ್.ಟಿ.ಶ್ರೀನಿವಾಸ್, ಉಮಾಶಂಕರ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.