Thursday, December 8, 2011



ಸಮಾಜಮುಖಿಯಾಗಿ ಸೇವೆ ಸಲ್ಲಿಸಿದ ಕುಪ್ಪೂರು ಶ್ರೀರಕ್ಷೆಯಡಿಯಲ್ಲಿ ಆಶೀವರ್ಾದ
ಚಿಕ್ಕನಾಯಕನಹಳ್ಳಿ,ಡಿ.08: ಸುಕ್ಷೇತ್ರ ಕುಪ್ಪೂರು ಗದ್ದಿಗೆ ಸಂಸ್ಥಾನ ಮಠದಲ್ಲಿ ಶ್ರೀ ಗುರು ಮರುಳಸಿದ್ದೇಶ್ವರ ಸ್ವಾಮಿಯವರ ಜಾತ್ರಾ ಮಹೋತ್ಸವದಲ್ಲಿ ಕುಪ್ಪೂರು ಮರುಳಸಿದ್ದಶ್ರೀ ಪ್ರಶಸ್ತಿ ಹಾಗೂ ಸಮಾಜಮುಖಿಯಾಗಿ ಸೇವೆ ಸಲ್ಲಿಸಿದ ಕುಪ್ಪೂರು ಶ್ರೀರಕ್ಷೆಯಡಿಯಲ್ಲಿ ಆಶೀವರ್ಾದಿಸಲಾಗುವುದು  ಎಂದು ಕುಪ್ಪೂರುಮಠದ ಪೀಠಾಧ್ಯಕ್ಷ ಡಾ.ಯತೀಶ್ವರ ಶಿವಾಚಾರ್ಯಸ್ವಾಮಿ ತಿಳಿಸಿದರು.
ಡಿಸಂಬರ್ 10 ಜನಜಾಗೃತಿ ಭಾವೈಕ್ಯ ಧರ್ಮ ಸಮಾರಂಭ ಮತ್ತು 11ರಂದು ಶ್ರೀಗುರು ಮರುಳಸಿದ್ದೇಶ್ವರ ಸ್ವಾಮಿ ರಥೋತ್ಸವವನ್ನು ಹಮ್ಮಿಕೊಳ್ಳಲಾಗುವುದು,  ಜಾತ್ರೆಯಲ್ಲಿ ಡಾ.ಯತೀಶ್ವರ ಶಿವಾಚಾರ್ಯಸ್ವಾಮಿಗಳ 21ನೇ ವರ್ಷದ ಪಟ್ಟಾಧಿಕಾರ ಮಹೋತ್ಸವ, ಬೃಹತ್ ಬ್ರಹ್ಮಾಂಡ ಖ್ಯಾತಿಯ ವೇದಬ್ರಹ್ಮ ನರೇಂದ್ರಬಾಬುಶರ್ಮ ಗುರೂಜಿರವರಿಗೆ ವಿಶೇಷ ಸನ್ಮಾನಿಸಲಾಗುವುದು.
11ರ ಭಾನುವಾರದಂದು ಬೆಳಗ್ಗೆ 10.30ಕ್ಕೆ ಉಜೈನಿಯ ಶ್ರೀಮದ್ ಶ್ರೀಶೈಲ ಜಗದ್ಗುರುಗಳ ಅಡ್ಡಪಲ್ಲಕ್ಕಿ ಮಹೋತ್ಸವ ವೈಭವ ನಡೆಯುತ್ತದೆ ನಂತರ ಧರ್ಮಜಾಗೃತಿ ಧಾಮರ್ಿಕ ಸಮಾರಂಭ ನಡೆಯಲಿದೆ.
ಈ ಜಾತ್ರಾಮಹೋತ್ಸವವನ್ನು ನಾಡಿನಾದ್ಯಂತ ಭಕ್ತರನ್ನು ಹೊಂದಿರುವ ಕ್ಷೇತ್ರವು  ದಾಸೋಹದ ಮಠ ಎಂದು ಪ್ರಖ್ಯಾತ ಹೊಂದಿದ್ದು ಜಾತ್ರಾಮಹೊತ್ಸವಕ್ಕೆ  ಸುಮಾರು 35 ರಿಂದ 40ಸಾವಿರ ಭಕ್ತರು ಆಗಮಿಸಲಿದ್ದು ಅವರಿಗೆಲ್ಲ ವಿಶೇಷ ಊಟದ ವ್ಯವಸ್ಥೆ ಮಾಡಲಾಗಿದೆ.
ನಂದೀಶ್ವರರ ಉತ್ಸವ ಹಾಗೂ ಮರುಳಸಿದ್ದೇಶ್ವರ ಅಡ್ಡಪಲ್ಲಕ್ಕಿಯೊಂದಿಗೆ ಬಸವೇಶ್ವರರು ಅನ್ನದ ರಾಶಿಗೆ ಪಾದವನ್ನು ಸ್ಪರ್ಶ ಮಾಡುವಂತಹ ಕಾರ್ಯಕ್ರಮ ಇದೇ 10ರ ಶನಿವಾರ ನಡೆಯಲಿದೆ. 11ರ ಭಾನುವಾರದಂದು ಶ್ರೀ ಮಠದ ಭಕ್ತರು ಉಳಿದುಕೊಳ್ಳುವ ಸಲುವಾಗಿ  ಯಾತ್ರಿ ನಿವಾಸದ ಅಡಿಗಲ್ಲು ಸ್ಥಾಪನೆಗೆ ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಗಮಿಸಲಿದ್ದಾರೆ. 
ಈ ಸಮಾರಂಭದಲ್ಲಿ ಶ್ರೀಮದ್ ಉಜ್ಜೈನಿ ಸದ್ದರ್ಮ ಸಿಂಹಾಸನಾಧೀಶ್ವರ  ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ, ಶ್ರೀ ಗಿರಿರಾಜ ಸೂರ್ಯಸಿಂಹಾಸನಾಧೀಶ್ವರ,  ಜಗದ್ಗುರು ಚನ್ನಸಿದ್ದರಾಮ ಪಂಡಿತಾರಾಧ್ಯ ರಾಜದೇಶೀಕೇಂದ್ರರವರು ದಿವ್ಯ ಸಾನಿದ್ಯ ವಹಿಸಲಿದ್ದು ಷಡಕ್ಷರಮಠದ ರುದ್ರಮುನಿ ಶಿವಯೋಗಿ ರಾಜೇಂದ್ರಸ್ವಾಮಿ, ಮಾಡಾಳು ಕುಮಾರಾಶ್ರಮ ಮಠದ ತೋಂಟದಾರ್ಯ ಸ್ವಾಮಿ, ಖ್ಯಾತ ಸಾಹಿತಿ ಷಣ್ಮುಖಯ್ಯ ಅಕ್ಕೂರ್ ಮಠ್ರವರಿಗೆ 'ಕುಪ್ಪೂರು ಮರುಳಸಿದ್ದಶ್ರೀ' ಪ್ರಶಸ್ತಿ, ತಮ್ಮಡಿಹಳ್ಳಿ ಮಠದ  ಡಾ.ಅಭಿನವಮಲ್ಲಿಕಾಜರ್ುನಸ್ವಾಮಿ ನೇತೃತ್ವ ವಹಿಸುವರು. ಕುಪ್ಪೂರು ಮಠದ ಡಾ.ಯತೀಶ್ವರ ಶಿವಾಚಾರ್ಯಸ್ವಾಮಿ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದು ನಿಕಟ ಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಯಾತ್ರಿ ನಿವಾಸ ಶಂಕು ಸ್ಥಾಪನೆ ನೆರವೇರಿಸಲಿದ್ದು ಸಂಸದ ಜಿ.ಎಸ್.ಬಸವರಾಜು  ಉದ್ಘಾಟನೆ ನೆರವೇರಿಸಲಿದ್ದು ವಿಭೂತಿಪುರ ಮಠ ಡಾ.ಮಹಾಂತಲಿಂಗ ಶಿವಾಚಾರ್ಯಸ್ವಾಮಿಗಳು ಅಧ್ಯಕ್ಷತೆ ವಹಿಸಲಿದ್ದಾರೆ.