Saturday, May 21, 2016
ಗುರುಸಿದ್ದರಾಮೇಶ್ವರ ಜಾತ್ರೆಗೆ ಬಿ.ಎಸ್.ಯಡಿಯೂರಪ್ಪ
ಚಿಕ್ಕನಾಯಕನಹಳ್ಳಿ,ಮೇ.21 : ಪ್ರಧಾನಮಂತ್ರಿ ಮೋದಿಯವರ ಆಶಯವನ್ನು ಈಡೇರಿಸುವುದು ನನ್ನ ಆದ್ಯತೆ, 40-50 ವರ್ಷಗಳ ನಂತರ ರಾಜ್ಯದಲ್ಲಿ ಭೀಕರ ಬರಗಾಲದಿಂದ ಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಮಳೆಯಿಲ್ಲದೆ ದನಗಳಿಗೆ, ಮೇವಿಲ್ಲದೆ ದುಡಿಯುವ ಕೈಗಳಿಗೆ ಕೆಲಸವಿಲ್ಲದೆ ಹಳೆಯ ಜನ ನಗರಗಳಿಗೆ ಗುಳೆ ಹೋಗುತ್ತಿದ್ದಾರೆ. ಎಂದು ಬಿ.ಜೆ.ಪಿ.ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅಭಿಪ್ರಾಯಪಟ್ಟರು.
ತಾಲೂಕಿನ ಗೋಡೆಕೆರೆಯಲ್ಲಿ ನಡೆಯುತ್ತಿರುವ ಸಿದ್ದರಾಮೇಶ್ವರರ ದೊಡ್ಡ ಜಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದರು, ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಿ, ನದಿ ಜೋಡಣೆಗೆ ವಿನೂತನ ಬೆಳೆವಿಮೆಗೆ ಜಾರಿಗೆ ತಂದಿದ್ದಾರೆ, ರೈತರು ಶೇ.2%ರಷ್ಟು ಬೆಳೆವಿಮೆಯ ಪ್ರೀಮಿಯಂ ಕಟ್ಟಿದ್ದರೆ ಸಾಕು, ಶೇ.35%ರಷ್ಟು ಬೆಳೆ ನಾಶವಾದರೆ, ಸೆಟ್ಲೈಟ್ ಮುಖಾಂತರ ವೀಕ್ಷಿಸಿ ಸಂಪೂರ್ಣ ವಿಮೆ ನೀಡಲಾಗುತ್ತಿದೆ, ಕೆರೆ ಹೂಳು ತೆಗೆಯುವುದು, ರಾಜ್ಯದಲ್ಲಿ 12ರಿಂದ 15ಗಂಟೆ ಉಚಿತ ವಿದ್ಯುತ್ ನೀಡುವ ಅಪೇಕ್ಷೆ ಇದೆ, ಕೈಗಾರಿಕೆಗಳಿಗೆ ಹೆಚ್ಚು ಒತ್ತು ನೀಡಿ ದೇಶದ ಆಥರ್ಿಕ ಸ್ಥಿತಿ ಸುಧಾರಣೆ ತಂದಿದ್ದಾರೆ, ರೈಲ್ವೆ, ರಸ್ತೆ, ಸುಧಾರಣೆ ಸೇರಿದಂತೆ ನಾನಾ ಕಾರ್ಯಕ್ರಮಗಳನ್ನು ನೀಡಿದ್ದಾರೆ ಎಂದ ಅವರು, ಚೀನಾ, ಅಮೇರಿಕಾಗಿಂತಲೂ ಭಾರತ ಆಥರ್ಿಕವಾಗಿ ಬಲಿಷ್ಠವಾಗುತಿದೆ, ಭಾರತ ಶತಮಾನದ ಆಥರ್ಿಕವಾಗಿ ಬಲಿಷ್ಠವಾಗುತ್ತಿದೆ ಎಂದರು.
 ಹಿಂದಿನ ಸಕರ್ಾರಗಳು ಅನ್ನದಾತ  ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ, ಸರಿಯಾದ ವಿದ್ಯುತ್ ಸಮನ್ವಯ ಬಗ್ಗೆ ಗಮನ ಹರಿಸಿಲ್ಲ ಎಂದ ಅವರು,  ತಾವು ಮುಖ್ಯಮಂತ್ರಿಯಾದಾಗ ರೈತರಿಗೆ ಉಚಿತ ವಿದ್ಯುತ್, ಸುವರ್ಣಗ್ರಾಮ ಯೋಜನೆ, ಭಾಗ್ಯಲಕ್ಷ್ಮೀ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಪಕ್ಷಬೇಧ ಮರೆತು ರಾಜ್ಯದ ಸವರ್ಾಂಗೀಣ ಅಭಿವೃದ್ದಿಗೆ ಶ್ರಮಿಸಿದ್ದೇನೆ ಎಂದರು.
ಕಾಯಕಯೋಗಿ ಸಿದ್ದರಾಮರು ಕೆರೆಕಟ್ಟೆಗಳನ್ನು ಕಟ್ಟಿ ಅವುಗಳ ಸಂರಕ್ಷಣೆ ಜನರಲ್ಲಿ ಕಾಯಕದ ಬಗ್ಗೆ ಜಾಗೃತಿ ಮೂಡಿಸಲು ನಾಲ್ಕು ಸಾವಿರ ಶಿಷ್ಯರ ಮೂಲಕ ಕೆರೆ ಕಟ್ಟೆಗಳನ್ನು ಕಟ್ಟಲು ತೊಡಗಿಸಿಕೊಂಡಿದ್ದರು, ಶರಣರು ಸಮಾಜದ ಕಟ್ಟಕಡೆಯ ವ್ಯಕ್ತಿಗಳು ಸದೃಢರಾಗಬೇಕು ಎಂದು ಆಶಯ ಹೊಂದಿದ್ದರು ಎಂದರು.
ಮಾಜಿ ಸಚಿವ ಬಸವರಾಜು ಬೊಮ್ಮಾಯಿ ಮಾತನಾಡಿ, ತುಮಕೂರು ಜಿಲ್ಲೆಯಲ್ಲಿ ಸಾವಿರಾರು ಕೆರೆಗಳಲ್ಲಿ ನೀರಿಲ್ಲ ಅನೇಕ ನಾಯಕರ ಹೋರಾಟದ ಫಲವಾಗಿ ಇಂದು ಜಿಲ್ಲೆಗೆ ನೀರಾವರಿ ಯೋಜನೆಗಳಿಂದ ನೀರು ಬಂದಿದ್ದು ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಗಳಾದಾಗ ಮೊದಲ ಆದ್ಯತೆಯನ್ನು ನೀರಾವರಿಗೆ ನೀಡಿ ಕೃಷ್ಣನದಿ ಪಾತ್ರದ ಮಧ್ಯಕನರ್ಾಟಕದ ಹಾಗೂ ತುಮಕೂರು, ಚಾಮರಾಜನಗರ, ಕೋಲಾರ ಜಿಲ್ಲೆಗಳಿಗೆ ನೀರು ಹರಿಸುವ ಕಾರ್ಯಕ್ರಮ ರೂಪಿಸಿ ನೀರಾವರಿ ಯೋಜನೆಗಳನ್ನು ಜಾರಿಗೆ ತಂದರು. ಚಿ.ನಾ.ಹಳ್ಳಿ ತಾ.ಹೇಮಾವತಿ ನಾಲೆಯಿಂದ 28ಕೆರೆಗಳಿಗೆ ನೀರು ಹರಿಸಿ ಯೋಜನೆಗೆ ಹಣ ಬಿಡುಗಡೆ ಮಾಡಿದರು. 
ಈಗ ನಾನಾ ಕಾರಣಗಳಿಂದ ಕಾಮಗಾರಿ ಕುಂಠಿತಗೊಂಡಿದೆ, ಭೂಸ್ವಾಧೀನ ಪ್ರಕ್ರಿಯೆ ಕೂಡಲೇ ಜಾರಿಗೆ ತರುವ ಮೂಲಕ ಕಾಮಗಾರಿ ಪೂರ್ಣಗೊಳಿಸಲು ಸಕರ್ಾರವನ್ನು ಆಗ್ರಹಿಸಿದರು. ಗೋಡೆಕೆರೆಯ ಶ್ರೀ ಸಿದ್ದರಾಮೇಶ್ವರ ತಾಲ್ಲೂಕಿನ ವನ ವಿಶ್ವ ಪ್ರವಾಸಿ ತಾಣವಾಗುವುದರಲ್ಲಿ ಅನುಮಾನವಿಲ್ಲ, ಈ ಭಾಗದ ಕೆರೆಗಳಿಗೆ ನೀರು ಹರಿಯುತ್ತಿರುವುದರಿಂದ ಇಲ್ಲಿನ ಅಂತರ್ಜಲ ಮಟ್ಟ ಸುಧಾರಿಸಿದೆ ಎಂದರು.
ಮಾಜಿ ಸಚಿವ ಗೋವಿಂದ ಕಾರಜೋಳ ಮಾತನಾಡಿ, ಶರಣರ ಸಂದೇಶ ಇಂದಿಗೂ ಪ್ರಸ್ತುತವಾಗಿದ್ದು ನಮಗಾಗಿ ಬಿಟ್ಟು ಹೋದ ಸಂದೇಶವನ್ನು ಪಾಲಿಸುವುದು ನಮ್ಮ ಕರ್ತವ್ಯ ಸಿದ್ದರಾಮೇಶ್ವರರು ಕೆರೆ-ಕಟ್ಟೆ ದೇವಾಲಯಗಳನ್ನು ಕಟ್ಟುವ ಮೂಲಕ ಕಾಯಕ ಯೋಗಿಯಾಗಿ ಸಮಾಜಕ್ಕೆ ಮಾರ್ಗದರ್ಶನವಾದರೂ ಅವರ ತತ್ವ, ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದ ಅವರು 21ನೇ ಶತಮಾನ ಮಾನವ ಧರ್ಮವಾಗಬೇಕು ಎಂದರು.
ಮಾಜಿ ಸಂಸದ ಜಿ.ಎಸ್.ಬಸವರಾಜು ಮಾತನಾಡಿ, ಒಂದು ವಾರ ಕಾಲ ನಡೆಯುವ ಜಾತ್ರೆಯ ದಾಸೋಹ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದು ಬಸವರಾಜು ಬೊಮ್ಮಾಯಿರುವರು ನೀರಾವರಿ ಸಚಿವರಾಗಿದ್ದಾಗಿ ತಾಲ್ಲೂಕಿನ ಕುಡಿಯುವ ನೀರಿನ ಯೋಜನೆಗೆ 102ಕೋಟಿ ಬಿಡುಗಡೆ ಮಾಡಿದ್ದರು, ನಡುವನಹಳ್ಳಿ, ಜೆ.ಸಿ.ಪುರ ಕೆರೆಗಳಿಗೆ ಏತನೀರಾವರಿ ಮೂಲಕ ನೀರು ಹರಿಸಲು 12ಕೋಟಿ ರೂ ಬಿಡುಗಡೆ ಮಾಡಿ ಈ ಭಾಗದ ಕೆರೆಗಳಿಗೆ ನೀರು ಹರಿಸಿರುವುದರಿಂದ ಅಂತರ್ಜಲ ಹೆಚ್ಚಾಗಿದೆ ಎಂದ ಅವರು, ಶ್ರೀ ಸಿದ್ದರಾಮೇಶ್ವರರ ದೇವಾಲಯ ಜೀಣರ್ೋದ್ದಾರ ಕಾರ್ಯಕ್ರಮಕ್ಕೆ 15ಕೋಟಿ ವೆಚ್ಚವಾಗುತ್ತಿದ್ದು ರಾಜಗೋಪುರ ನಿಮರ್ಿಸಲು 5 ರಿಂದ 6ಕೋಟಿ ರೂಪಾಯಿ ಭಕ್ತರು ನೀಡುತ್ತಿದ್ದಾರೆ, ಗೋಡೆಕೆರೆಯಲ್ಲಿ ಯಾತ್ರಿ ನಿವಾಸ ಹಾಗೂ ಸಮುದಾಯ ಭವನ ನಿಮರ್ಾಣಕ್ಕೆ ಹಣ ಬಿಡುಗಡೆಯಾಗಿದ್ದರೂ ಅಂದಿನ ಜಿಲ್ಲಾಧಿಕಾರಿಗಳ ನಿರ್ಲಕ್ಷದಿಂದ ಹಣ ವಾಪಸ್ ಹೋಯಿತು, ತಾಲ್ಲೂಕಿನ ಗಣಿಗಾರಿಕೆಯಿಂದ ಬರುವ ಹಣವನ್ನು ಗೋಡೆಕೆರೆ ಭಾಗಗಳಿಗೆ ಹೆಚ್ಚು ಹಣ ಬಿಡುಗಡೆ ಮಾಡುವಂತೆ ಸಕರ್ಾರವನ್ನು ಒತ್ತಾಯಿಸಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ಕಾಯಕವೇ ಜೀವನ, ಕೆರೆ-ಕಟ್ಟೆಗಳನ್ನು ನಿಮರ್ಿಸುವುದು, ಗೋವುಗಳ ರಕ್ಷಣೆ, ಪರಿಸರ ಸಂರಕ್ಷಣೆ ಮುಂತಾದ ಕಾರ್ಯಕ್ರಮಗಳಿಗೆ ಸಿದ್ದರಾಮೇಶ್ವರರು ಆದ್ಯತೆ ನೀಡಿ ಕಾಯಕ ಯೋಗಿಗಳಾದರು, ಪೂಜೆ ಶ್ರೇಷ್ಠವಲ್ಲ ಕಾಯಕ ಧರ್ಮ ಶ್ರೇಷ್ಠ ಎಂದ ಅವರು ಈಗ ಹಣ ಶ್ರೇಷ್ಠವಾಗಿದೆ ಹಣದಿಂದಲೇ ಗುರುತಿಸಿಕೊಳ್ಳುವುದು ಶ್ರೇಷ್ಠವಲ್ಲ, ಸಾಧನೆಯಿಂದ ಮೇಲೆ ಬರಬೇಕು ಎಂದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಸುರೇಶ್ಗೌಡ, ಮಾಜಿ ಶಾಸಕರಾದ ಬಿ.ಸಿ.ನಾಗೇಶ್, ಕೆ.ಎಸ್.ಕಿರಣ್ಕುಮಾರ್, ಮಾಜಿ ವಿಧಾನಪರಿಷತ್ ಸದಸ್ಯ ಡಾ.ಎಂ.ಆರ್.ಹುಲಿನಾಯ್ಕರ್, ಮಸಾಲೆಜಯರಾಂ, ಎಂ.ಎಂ.ಜಗದೀಶ್, ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಶಶಿಧರ್, ಜಿ.ಪಂ.ಸದಸ್ಯ ಕಲ್ಲೇಶ್, ತಾ.ಪಂ.ಸದಸ್ಯೆ ಶೈಲಶಶಿಧರ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಎನ್.ವಿ.ಅನಘ ವಿರಚಿತ ಮಕ್ಕಳ ಕಥೆಗಳ ಆಕೃತಿ ಪುಸ್ತಕವನ್ನು ಮಾಜಿ ಸಚಿವ ಸೊಗಡು ಶಿವಣ್ಣ ಬಿಡುಗಡೆ ಮಾಡಿದರು.
ಬಾಕ್ಸ್-1
ರಾಜ್ಯಾಧ್ಯಕ್ಷ ಸ್ಥಾನ ಹಾಗೂ ರಾಷ್ಟ್ರೀಯ ಉಪಾಧ್ಯಕ್ಷರ ಸ್ಥಾನ ಹೊಂದಿರುವ ನಿಮ್ಮನ್ನು ಈ ರಾಜ್ಯದ  ಮುಂದಿನ ಮುಖ್ಯಮಂತ್ರಿ ಎಂದು ಘೋಷಿಸಿಲ್ಲ ಕೇವಲ ರಾಜ್ಯಾದ್ಯಕ್ಷ ಸ್ಥಾನಕ್ಕೆ ತೃಪ್ತಿಪಡುವಿರಾ ಇಲ್ಲ ನೀವೇ ಮುಂದಿನ ಮುಖ್ಯಮಂತ್ರಿ ಎಂದು ಸ್ವಯಂಘೋಷಣೆ ಪಡಿಸಿಕೊಳ್ಳುವಿರಾ ಎಂಬ ಮಾಧ್ಯಮ ಪ್ರತಿನಿಧಿಯ ಪ್ರಶ್ನೆಗೆ ರಾಜ್ಯದ ಜನರ ಆಶಿವರ್ಾದ ಮತ್ತು ದೈವ ಬಲ ಇದ್ದಂತೆ ಎಂದು ಹೇಳಿದರು.
ಐದು ರಾಜ್ಯಗಳ ಚುನಾವಣಾ ಫಲಿತಾಂಶ ಒಳ್ಳೆಯ ಫಲಿತಾಂಶ ಬಂದಿದೆ ಬಿಜೆಪಿ ಪಕ್ಷಕ್ಕೆ ಹಾಗೂ ಭವಿಷ್ಯದಲ್ಲಿ ರಾಜ್ಯದ ಗೆಲುವಿಗೆ ಸಹಕಾರಿಯಾಗಲಿದೆ, ಈ ಫಲಿತಾಂಶದಿಂದ ದೇಶದಲ್ಲಿ ಕಾಂಗ್ರೆಸ್ ಸರ್ವನಾಶವಾಗಿ ಕಾಂಗ್ರೆಸ್ ಮುಕ್ತ ಭಾರತವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
 ಇದೊಂದು ಬಹಳ ಒಳ್ಳೆಯ ಗೆಲುವು ಆಗಿದೆ, ಕೇರಳ ರಾಜ್ಯದಲ್ಲಿ ಮೊದಲ ಬಾರಿಗೆ ಬಿ.ಜೆ.ಪಿ ಖಾತೆ ತೆರೆಯುವ ಮೂಲಕ ಹೊಸ ಮುನ್ನುಡಿ ಬರೆದಿದೆ, ಈ ರಾಜ್ಯಗಳ ಚುನಾವಣಾ ಫಲಿತಾಂಶದಿಂದ ದೇಶದಲ್ಲಿ ಕಾಂಗ್ರೆಸ್ ಪಕ್ಷ ಸರ್ವ ನಾಶವಾಗಲಿದೆ ಕನರ್ಾಟಕ ರಾಜ್ಯದಲ್ಲಿ ಕೂಡ ಬಿ.ಜೆ.ಪಿ ಅಧಿಕಾರ ಹಿಡಿಯಲಿದೆ ಎಂದರು. 
ಬಿ.ಎಸ್.ಯಡಿಯೂರಪ್ಪ,  ಬಿಜೆಪಿ ರಾಜ್ಯಾಧ್ಯಕ್ಷ

ಪುರಸಭಾ ಮುಖ್ಯಾಧಿಕಾರಿ ಪಿ.ಶಿವಪ್ರಸಾದ್ ಪತ್ರಿಕಾಗೋಷ್ಠಿ 
ಚಿಕ್ಕನಾಯಕನಹಳ್ಳಿ,ಮೇ.21 : ಫೆಬ್ರವರಿ ತಿಂಗಳಲ್ಲಿ ಪಟ್ಟಣದಲ್ಲಿ ಕುಡಿಯುವ ನೀರಿನ ಅಭಾವವಿದ್ದುದರಿಂದ ತುತರ್ಾಗಿ ನೀರು ಸರಬರಾಜು ಮಾಡುವ ಹಿನ್ನಲೆಯಲ್ಲಿ ಅಂದಿನ ಅಧ್ಯಕ್ಷರಾದ ಪ್ರೇಮಾರವರ ಅವಧಿಯಲ್ಲಿ ಚೆಕ್ನೆಟ್, ವಾಲ್ಡ್ರಾಡ್ ರಿಪೇರಿ ಸೇರಿದಂತೆ ದಬ್ಬೆಘಟ್ಟದ ಕೊಳವೆ ಬಾವಿಗೆ ಕೇಬಲ್ ಅಳವಡಿಸಲು 1.78ಲಕ್ಷ ರೂ ನೀಡಿದ್ದೇನೆ ಉಪವಿಭಾಗಾಧಿಕಾರಿಗಳ ಆಡಳಿತಾವಧಿಯಲ್ಲಿ ಅಲ್ಲ ಎಂದು ಪುರಸಬಾ ಮುಖ್ಯಾಧಿಕಾರಿ ಪಿ.ಶಿವಪ್ರಸಾದ್ ಸ್ಪಷ್ಟಪಡಿಸಿದರು.
ಪಟ್ಟಣದ ಪುರಸಭಾ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವು ಸದಸ್ಯರು ವಾಲ್ರಾಡ್, ಚೆಕ್ನೆಟ್ಗೆ 500 ರೂ ಬೆಲೆ ಬಾಳುತ್ತದೆ ಎಂದು ಆರೋಪಿಸಿದ್ದಾರೆ ಆದರೆ ವಾಸ್ತವ ಇದರ ಬೆಲೆ ನಾಲ್ಕು ಸಾವಿರಕ್ಕೂ ಹೆಚ್ಚಾಗಿದೆ, ಸಂಬಂಧಪಟ್ಟ ಗುತ್ತಿಗೆದಾರರಿಗೆ ಚೆಕ್ ನೀಡಿದ್ದೇವೆ ಹೊರತು ಯಾವುದೇ ಅವ್ಯವಹಾರ ನಡೆದಿಲ್ಲ ಎಂದರು. ಪಟ್ಟಣದಲ್ಲಿ ಹೊಸದಾಗಿ 19ಕೊಳವೆ ಬಾವಿಗಳನ್ನು ಕೊರೆದಿದ್ದು 12ಕೊಳವೆ ಬಾವಿಗಳಿಗೆ ಮೋಟಾರ್ ಪಂಪ್ ಅಳವಡಿಸಲಾಗಿದೆ ಇನ್ನು 7ಕೊಳವೆ ಬಾವಿಗಳಿಗೆ ಮೋಟಾರ್ ಪಂಪ್ ಅಳವಡಿಸಲು ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಕಳುಹಿಸಲಾಗಿದೆ ಬಂದ ತಕ್ಷಣ 2 ರಿಂದ 3 ದಿನಗಳಿಗೊಮ್ಮೆ ನೀರು ಸರಬರಾಜು ಮಾಡಲಾಗುವುದು ಎಂದರು.
  ಪುರಸಭೆಯಲ್ಲಿ ಮಧ್ಯವತರ್ಿಗಳ ಹಾವಳಿ ಇಲ್ಲ, ಕೆಲವು ಮಧ್ಯವತರ್ಿಗಳು ಹಣ ಮಾಡಲು ಬಂದರೆ ಅಂತಹವರ ಬಗ್ಗೆ ನಮ್ಮ ಗಮನಕ್ಕೆ ತರುವಂತೆ ಹಾಗೂ ಪುರಸಭಾ ಸಿಬ್ಬಂದಿಗಳು ಕಾನೂನು ಪ್ರಕಾರ ಕರ್ತವ್ಯ ನಿರ್ವಹಿಸುವಂತೆ ಸೂಚಿಸಿದರು.
ಸಿಬ್ಬಂದಿಗಳು ಯಾರದೇ ಒತ್ತಡಕ್ಕೆ ಮಣಿಯಬಾರದು ಹಾಗೇನಾದರೂ ಒತ್ತಡಕ್ಕೆ ಮಣಿದು ಕಾನೂನು ಉಲ್ಲಂಘಿಸಿ ಆಸ್ತಿಗಳ ಖಾತೆ ಮಾಡಿದರೆ ಅದಕ್ಕೆ ಅವರೇ ಜವಬ್ದಾರರು ಅಂತಹವರ ಮೇಲೆ ಸಾರ್ವಜನಿಕರು ತಮ್ಮ ಗಮನಕ್ಕೆ ತಂದರೆ ನಿದರ್ಾಕ್ಷಿಣ್ಯವಾಗಿ ಕ್ರಮಕೈಗೊಳ್ಳಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪುರಸಭೆ ಕಿರಿಯ ಅಭಿಯಂತರರುಗಳಾದ ಯೋಗಾನಂದ್ಬಾಬು, ಮಹೇಶ್, ಸಿಬ್ಬಂದಿಗಳಾದ ನಾಗರಾಜು, ಶಿವಣ್ಣ, ಜಯಶಂಕರ್, ಗಂಗಾಧರ್ ಮತ್ತಿತರರು ಉಪಸ್ಥಿತರಿದ್ದರು.

ಹೆಚ್.ಡಿ.ದೇವೇಗೌಡ ಪತ್ರಿಕಾಗೋಷ್ಠಿ
ಚಿಕ್ಕನಾಯಕನಹಳ್ಳಿ,ಮೇ.21 : ಕೇಂದ್ರದ ಬಿ.ಜೆ.ಪಿ ಸಕರ್ಾರ  ರೈತರಿಗೆ ಯಾವುದೇ ವಿಶೇಷ ಕಾರ್ಯಕ್ರಮಗಳನ್ನು ನೀಡಿಲ್ಲ, ರಾಜ್ಯ ಸಕರ್ಾರ ಸಮರ್ಥವಾಗಿ ಬರ ಪರಿಸ್ಥಿತಿಯನ್ನು ನಿಭಾಯಿಸುತ್ತಿಲ್ಲ ಎಂದು ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಆರೋಪಿಸಿದರು.
ತಾಲ್ಲೂಕಿನ ಯಳನಡು ಸಿದ್ದರಾಮೇಶ್ವರ ಜಾತ್ರೆಗೆ ಪಾಲ್ಗೋಳ್ಳಲು ತೆರಳುತ್ತಿದ್ದಾಗ ಮಾರ್ಗ ಮಧ್ಯೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಟಿ ನಡೆಸಿದರು. ಇತ್ತೀಚೆಗೆ ನಡೆದ ಐದು ರಾಜ್ಯಗಳ ಫಲಿತಾಂಶ ಪ್ರಾದೇಶಿಕ ಪಕ್ಷಗಳ ಸಾಮಥ್ರ್ಯವನ್ನು ತೋರಿಸಿದೆ. ಮುಂದಿನ ದಿನಗಳಲ್ಲಿ ಪ್ರಾದೇಶಿಕ ಪಕ್ಷಗಳೇ ರಾಷ್ಟ್ರ ರಾಜಕಾರಣದಲ್ಲಿ ನಿಣರ್ಾಯಕ ಪಾತ್ರ ವಹಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಅಸ್ಸಾಂನ ವಲಸಿಗರ ಸಮಸ್ಯೆಯನ್ನು ಕಾಂಗ್ರೆಸ್ ಸೂಕ್ಷವಾಗಿ ಗ್ರಹಿಸದೇ ಎಡವಿದ್ದರ ಪರಿಣಾಮವಾಗಿ ಬಿ.ಜೆ.ಪಿ ಅಧಿಕಾರಕ್ಕೆ ಬಂದಿತು. ಅಸ್ಸಾಂನ ಜನತೆ ಮೋದಿಯವರ ಮೇಲೆ ನಂಬಿಕೆ ಇಟ್ಟು ಪಕ್ಷವನ್ನು ಗೆಲ್ಲಿಸಿದ್ದಾರೆ. ಅವರ ಅಶೋತ್ತರವನ್ನು ಈಡೇರಿಸುವ ಜವಬ್ದಾರಿ ನರೇಂದ್ರ ಮೋದಿಯವರ ಮೇಲಿದೆ ಎಂದರು.
ರಾಜ್ಯದಲ್ಲಿ ಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜ್ಯ ಸಕರ್ಾರ ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ಸಹಾಯ ಮಾಡಿಲ್ಲ ಬಿಜೆ.ಪಿ ನಾಯಕರು ರಾಜ್ಯ ಸುತ್ತಿ ಸಾಂತ್ವಾನ ಹೇಳುವ ನಾಟಕ ಮಾಡಿದ್ದಾರೆ. ಸ್ವಂತಹ ಸಿದ್ದರಾಮಯ್ಯ ಅವರೇ ಸಂತ್ರಸ್ಥರ ಮನೆಗೆ ಹೋಗಿ ಬಂದಿದ್ದಾರೆ, ಸಾಂತ್ವನ ಸಮಸ್ಯೆಗಳಿಗೆ ಪರಿಹಾರವಲ್ಲ. ಬರಗಾಲವನ್ನು ಎದುರಿಸುವ ಬದ್ದತೆಯನ್ನು ಎರಡು ಸಕರ್ಾರಗಳು ತೋರುತ್ತಿಲ್ಲ ಎಂದರು.
ಮಂಡ್ಯದ ಕಬ್ಬ ಬೆಳೆಗಾರ ಆತ್ಮಹತ್ಯೆ ಮಾಡಿಕೊಂಡಾಗ ರೈತರ ಮನೆಗೆ ಮೊದಲು ಹೋದವನು ನಾನು, ನಂತರ ಕೃಷ್ಣ ಬಂದರು, ಆಮೇಲೆ ಸಕರ್ಾರ, ನನ್ನ ರೈತ ಪರ ಕಾಳಜಿ ಏತಹದು ಎಂದು ಹೇಳಲು ಇಷ್ಟು ಸಾಕು ಎಂದರು.
ಈಗ ನನಗೆ 83ವರ್ಷ ಈಗಾಗಲೇ ರಾಜ್ಯದಾದ್ಯಂತ ಸುತ್ತಿ ಪಕ್ಷ ಸಂಘಟಿಸಿದ್ದೇನೆ, ಪುನಃ ಮತ್ತೆ ರಾಜ್ಯ ಪ್ರವಾಸ ಮಾಡಿ ಪಕ್ಷವನ್ನು ಬಲಗೊಳಿಸುತ್ತೇನೆ, ಈಗಾಗಲೇ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ರೂ.50ಸಾವಿರದಿಂದ 1ಲಕ್ಷದವರೆವಿಗೆ ವೈಯಕ್ತಿಕ ಪರಿಹಾರ ನೀಡಿದ್ದಾರೆ, ಕೇಂದ್ರ ಸಕರ್ಾರದಿಂದ ರಾಜ್ಯ ಸಕರ್ಾರ ಪರಿಹಾರದ ಹಣ ಬಂದಿಲ್ಲ ಎಂದು ಆರೋಪಿಸಿದರೆ, ರಾಜ್ಯ ಬಿಜೆಪಿ ನಾಯಕರುಗಳು ಬಿಡುಗಡೆಯಾಗಿರುವ ಹಣವನ್ನು ಸರಿಯಾಗಿ ಖಚರ್ು ಮಾಡಿಲ್ಲ ಎಂದು ಆರೋಪ, ಪ್ರತ್ಯಾರೋಪ ಮಾಡುವ ಮೂಲಕ ಬರದಲ್ಲೂ ರಾಜಕಾರಣ ಮಾಡುತ್ತಿದ್ದಾರೆ ಎಂದರು.
ಸ್ಥಳೀಯ ಸಂಸ್ಥೆಗಳ ರಾಜಕೀಯ ಮೈತ್ರಿಯನ್ನು  ರಾಜ್ಯ ಹಾಗೂ ರಾಷ್ಟ್ರರಾಜಕಾರಣಕ್ಕೆ ತಳಕು ಹಾಕಬಾರದು, ಸ್ಥಳೀಯ ನಾಯಕರುಗಳ ಸಲಹೆಯಂತೆ ತುಮಕೂರು ಮತ್ತು ಮೈಸೂರಿನಲ್ಲಿ ಬಿಜೆಪಿ, ಜೆಡಿಎಸ್


ಹಾಗೂ ಶಿವಮೊಗ್ಗ ಮತ್ತು ಬೆಂಗಳೂರು ಬಿಬಿಎಂಪಿಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡಿದ್ದೇವೆ ಎಂದು ವಿವರ ನೀಡಿದರು.
ಈ ಸಂದರ್ಭದಲ್ಲಿ ಶಾಸಕ ಸಿ.ಬಿ.ಸುರೇಶ್ಬಾಬು, ಜಿ.ಪಂ.ಅಧ್ಯಕ್ಷೆ ಲತಾರವಿಕುಮಾರ್, ತಾ.ಪಂ.ಅಧ್ಯಕ್ಷೆ ಹೊನ್ನಮ್ಮ, ಪುರಸಭಾಧ್ಯಕ್ಷ ಸಿ.ಟಿ.ದಯಾನಂದ್, ಪುರಸಭಾ ಸದಸ್ಯರುಗಳಾದ ಹೆಚ್.ಬಿ.ಪ್ರಕಾಶ್, ಸಿ.ಡಿ.ಚಂದ್ರಶೇಖರ್, ಸಿ.ಎಸ್.ರಮೇಶ್,   ಮುಖಂಡರುಗಳಾದ ಸಿ.ಎಸ್.ನಟರಾಜು, ಸಿ.ಡಿ.ಸುರೇಶ್, ಎಂ.ಎನ್.ಸುರೇಶ್, ಸಿ.ಎಲ್.ದೊಡ್ಡಯ್ಯ, ಸಿ.ಹೆಚ್.ದೊರೆಮುದ್ದಯ್ಯ, ಪುಟ್ಟಯ್ಯ ಮತ್ತಿತರರು ಉಪಸ್ಥಿತರಿದ್ದರು.

ಬಾಲಕ ಮತ್ತು ಬಾಲಕಿಯರ ವಿದ್ಯಾಥರ್ಿ ನಿಲಯಕ್ಕೆ ಅಜರ್ಿ ಆಹ್ವಾನ
ಚಿಕ್ಕನಾಯಕನಹಳ್ಳಿ,ಮೇ.21 : ತಾಲ್ಲೂಕಿನ ಹಾಗೂ ಪಟ್ಟಣದ ಮೆಟ್ರಿಕ್ ನಂತರದ ಬಾಲಕ ಮತ್ತು ಬಾಲಕಿಯರ ವಿದ್ಯಾಥರ್ಿ ನಿಲಯಗಳಿಗೆ ಮೆಟ್ರಿಕ್ ನಂತರದ ಕೋಸರ್್ಗಳಲ್ಲಿ ಅಧ್ಯಯನ ಮಾಡುತ್ತಿರುವ ಪ.ಜಾತಿ, ಪ.ವರ್ಗದ ವಿದ್ಯಾಥರ್ಿಗಳಿಗಾಗಿ ಅಜರ್ಿ ಆಹ್ವಾನಿಸಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿದರ್ೇಶಕ(ಗ್ರೇಡ್-2) ತಿಳಿಸಿದ್ದಾರೆ.
ತಾಲ್ಲೂಕಿನ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ಗುರುವಾಪುರ, ಚಿಕ್ಕನಾಯಕನಹಳ್ಳಿ ಟೌನ್, ದಸೂಡಿ, ಹುಳಿಯಾರು, ಬರಕನಹಾಳ್, ಬೆಳಗುಲಿಗಳಲ್ಲಿರುವ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾಥರ್ಿ ನಿಲಯ ಮತ್ತು ಚಿಕ್ಕನಾಯಕನಹಳ್ಳಿ ಟೌನ್ನಲ್ಲಿರುವ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾಥರ್ಿ ನಿಲಯಕ್ಕೆ ಈ ಸಾಲಿಗಾಗಿ 5 ರಿಂದ 10ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿರುವ ಅರ್ಹ ವಿದ್ಯಾಥರ್ಿಗಳಿಂದ ಅಜರ್ಿ ಆಹ್ವಾನಿಸಲಾಗಿದೆ.
ತಾಲ್ಲೂಕಿನ ಗೋಡೆಕೆರೆ ಗೇಟ್ನಲ್ಲಿರುವ ಪರಿಶಿಷ್ಠ ವರ್ಗದ ಆಶ್ರಮ ಶಾಲೆಗೆ 1 ರಿಂದ 5ನೇ ತರಗತಿಯ ಪರಿಶಿಷ್ಟ ವರ್ಗ / ಪ.ಜಾತಿ / ಹಿಂದುಳಿದ ವರ್ಗದ ವಿದ್ಯಾಥರ್ಿಗಳು ಅಜರ್ಿ ಸಲ್ಲಿಸಬಹುದು, ಹೆಚ್ಚಿನ ಮಾಹಿತಿಗಾಗಿ ನಿಲಯ ಮೇಲ್ವಿಚಾರಕರು ಅಥವಾ ಸಹಾಯಕ ನಿದರ್ೇಶಕರ ಕಛೇರಿ, ಸಮಾಜ ಕಲ್ಯಾಣ ಇಲಾಖೆರವರನ್ನು ಸಂಪಕರ್ಿಸಲು ಕೋರಿದ್ದಾರೆ.