Sunday, November 21, 2010



ಶಾಸಕರುಗಳಿಗೆ ಕವಡೆ ಕಾಸಿನ ಕಿಮ್ಮತ್ತು ನೀಡದ ಸಿ.ಎಂ.ರವರಿಗೆ, ಶಾಸಕರ ಬೆಲೆ ಏನು ಎಂಬುದನ್ನು ತೋರಿಸಲು ಹೋಗಿದ್ದೆವು: ಶಾಸಕ ಸಿ.ಬಿ.ಎಸ್.
ಚಿಕ್ಕನಾಯಕನಹಳ್ಳಿ,ನ.21: ನಮ್ಮ ಪತ್ರಗಳಿಗೆ ಮಾನ್ಯತೆ ನೀಡದ ಮುಖ್ಯಮಂತ್ರಿಗಳು, ನಮ್ಮ ಕ್ಷೇತ್ರಗಳಿಗೆ ನೀಡುವ ಅನುದಾನ ನೀಡುವಲ್ಲಿ ಅನುಸರಿಸುತ್ತಿದ್ದ ತಾರತಮ್ಯ ನೀತಿ ಹಾಗೂ ಅತಿಯಾದ ಸ್ವಜನ ಪಕ್ಷಪಾತದಿಂದ ರೋಸಿ ಹೋಗಿದ್ದೇವೆ ಎಂದು ಶಾಸಕ ಸಿ.ಬಿ.ಸುರೇಶ್ ಬಾಬು ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿರೋಧ ಪಕ್ಷದವರಿಗೆ ಯಾವುದೇ ಮಾನ್ಯತೆಯನ್ನು ನೀಡದೆ ನಮ್ಮನ್ನೆಲ್ಲಾ ನಿರ್ಲಕ್ಷಿಸುವ ಜೊತೆಗೆ ವಿಧಾನ ಸಭಾ ಕ್ಷೇತ್ರಗಳಿಗೆ ನೀಡುವ ಅನುದಾನವನ್ನು ಸಮರ್ಪಕವಾಗಿ ನೀಡದೆ ಮಲತಾಯಿ ಧೋರಣೆ ಅನುಸರಿಸುತ್ತಿರುವ ಈ ಸಕರ್ಾರ, ರಾಜ್ಯದ ಅಭಿವೃದ್ದಿಯನ್ನು ಕಡೆಗಣಿಸಿ ಸ್ವಹಿತಾಸಕ್ತಿಗೋಸ್ಕರ ಸಾಕಷ್ಟು ಅವ್ಯವಹಾರಗಳನ್ನು ಮಾಡುತ್ತಿರುವು ರಾಜ್ಯ ಮಟ್ಟದ ಬಿ.ಜೆ.ಪಿ. ನಾಯಕರು, ಹಗರಣಗಳ ಸರಮಾಲೆಯಲ್ಲಿ ಸುತ್ತಿಕೊಂಡಿದ್ದಾರೆ, ಈ ಹಗರಣಗಳನ್ನು ನಮ್ಮ ಜೆ.ಡಿ.ಎಸ್. ಬಯಲೆಗೆಳೆಯುತ್ತಿರುವ ಭರಾಟೆಗೆ ಬಿ.ಜೆ.ಪಿ. ನಾಯಕರು ಧೂಳಿಪಟವಾಗಿತ್ತಿದ್ದಾರೆ. ಇದರ ಹೊಡೆತವನ್ನು ತಾಳಲಾರದೆ ಆ ಪಕ್ಷದ ನಾಯಕರು ದಿಕ್ಕುತೋಚದೆ ಪರದಾಡುತ್ತಿದ್ದಾರೆ ಎಂದರಲ್ಲದೆ, ಭ್ರಷ್ಟಾಚಾರದಲ್ಲಿ ಮುಳುಗಿರುವ ಈ ಸಿ.ಎಂ.ರವರು ತಕ್ಷಣ ಕೆಳಗಿಳಿಯಬೇಕೆಂದರು.
ಪಕ್ಕದ ಮಹಾರಾಷ್ಟ್ರದಲ್ಲಿನ ರೀತಿಯಲ್ಲಿಯೇ ಇಲ್ಲಿಯೂ ನಡೆಯಬೇಕು, ಹಗರಣಗಳ ಬಗ್ಗೆ ಮೇಲ್ಮಟ್ಟದಲ್ಲಿ ನೀತಿಪಾಠ ಮಾಡುವ ಬಿ.ಜೆ.ಪಿ.ನಾಯಕರಿಗೆ ನಮ್ಮ ರಾಜ್ಯದಲ್ಲಿ ನಡೆಯುತ್ತಿರುವ ಹಗರಣಗಳ ಬಗ್ಗೆ ಮಾಹಿತಿ ಇಲ್ಲವೆ ? ಎಂದು ಪ್ರಶ್ನಿಸಿದರಲ್ಲದೆ, ಕಾಂಗ್ರೆಸ್ಗೆ ಒಂದು ನೀತಿ ಬಿ.ಜೆ.ಪಿ.ಗೆ ಒಂದು ನೀತಿಯಾ ಎಂದರು.
ನಮ್ಮ ನಾಯಕರಾದ ಎಚ್.ಡಿ.ಕುಮಾರಸ್ವಾಮಿಯವರು ಬಿ.ಜೆ.ಪಿ.ನಾಯಕರ ಹಗರಣಗಳನ್ನು ಬಯಲು ಮಾಡಲು ಸಮಿತಿಯೊಂದನ್ನು ರಚಿಸಿದ್ದು ಆ ಸಮಿತಿಯಲ್ಲಿದ್ದ ನನಗೆ, ನಮ್ಮ ನಾಯಕರು ವಹಿಸಿದ್ದ ಜವಬ್ದಾರಿಯನ್ನು ನಿರ್ವಹಿಸುವ ಸಲುವಾಗಿ ಕ್ಷೇತ್ರಕ್ಕೆ ಬರುವುದು ತಡವಾದರೂ ಪ್ರತಿ ದಿವಸ ಕ್ಷೇತ್ರದಲ್ಲಿ ನಡೆಯುವ ಆಗುಹೋಗುಗಳ ಬಗ್ಗೆ ಸದಾ ಮಾಹಿತಿ ಪಡೆಯುತ್ತಿದ್ದೆ ಎಂದರು.
ಬೋರನಕಣಿವೆ ಜಲಾಶಯದ ಗೇಟ್ ದುರಸ್ತಿ ಸಲುವಾಗಿ ಲಕ್ಕವಳ್ಳಿಯಿಂದ ಇಂಜಿನಿಯರ್ರವರನ್ನು ಕರೆಸಿ ಅದರ ದುರಸ್ಥೆಗೆ ಮುಂದಾಗಿರುವುದಲ್ಲದೆ, ತಾಲೂಕಿನ ಕೆರೆಗಳಲ್ಲಿನ ಏರಿಗಳನ್ನು ಸರಿ ಪಡಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ, ಅದನ್ನು ಸರಿ ಪಡಿಸಲು ಅಧಿಕಾರಿಗಳು ಕೇಳುವ ಅನುದಾನವನ್ನು ನೀಡಲು ಸಕರ್ಾರದ ಕೈಯಲ್ಲಿ ಸಾಧ್ಯವಾಗುತ್ತಿಲ್ಲ, ಇದರಿಂದ ಸಾಕಷ್ಟು ಅನಾನುಕೂಲಗಳಾಗುತ್ತಿದೆ ಎಂದರು.
ಸಕರ್ಾರ ತಾಲೂಕಿಗೆ ಯಾವ ರೀತಿಯ ಹಣವನ್ನು ಬಿಡುಗಡೆ ಮಾಡದ ಪರಿಣಾಮ, ತಾಲೂಕಿನಲ್ಲಿ ಆಗುತ್ತಿರುವ ಅತಿವೃಷ್ಟಿಗೆ ತಾಲೂಕು ಆಡಳಿತದಿಂದ ಸಹಕಾರ ನೀಡಲಾಗುತ್ತಿಲ್ಲ ಎಂದರು.
ಸ್ಥಳೀಯ ಬಿ.ಜೆ.ಪಿ. ತಾಲೂಕು ಕಛೇರಿ ಆವರಣದಲ್ಲಿ ನಡೆಸಲು ಉದ್ದೇಶಿಸಿರುವ ಸ್ಪಂದನ ಕಾರ್ಯಕ್ರಮದ ಬಗ್ಗೆ ಪ್ರತಿಕ್ರಯಿಸಿದ ಶಾಸಕರು, ಈ ರೀತಿಯ ಕಾರ್ಯಕ್ರಮಕ್ಕೆ ನಿಯಮಾವಳಿಗಳಲ್ಲಿ ಅವಕಾಶವಿಲ್ಲವೆಂದರು.
ಪತ್ರಿಕಾಗೋಷ್ಠಿಯಲ್ಲಿ ತಾ.ಪಂ.ಅಧ್ಯಕ್ಷ ಕೆ.ಜಿ.ಮಲ್ಲಿಕಾರ್ಜನಯ್ಯ, ಪುರಸಭಾ ಅಧ್ಯಕ್ಷ ಸಿ.ಜಿ.ರಾಜಣ್ಣ, ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಎಂ.ಬಿ.ನಾಗರಾಜ್, ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜು, ಜಿ.ಪಂ.ಸದಸ್ಯ ರಘುನಾಥ್, ತಾ.ಪಂ.ಸದಸ್ಯ ಕೆ.ಟಿ.ಗೋವಿಂದಪ್ಪ, ಪುರಸಭಾ ಸದಸ್ಯರುಗಳಾದ ದೊರೆಮುದ್ದಯ್ಯ, ರವಿ, ಎಂ.ಎನ್.ಸುರೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.