Tuesday, June 29, 2010

ಚಿಕ್ಕನಾಯಕನಹಳ್ಳಿ,ಜೂ.29(1): ರಾಷ್ಟ್ರೀಯ ಮಲೇರಿಯಾ ವಿರೋಧಿ ಮಾಸಾಚರಣೆ ಸಮಾರಂಭವನ್ನು ಇದೇ ಜೂನ್ 30ರ(ಇಂದು) ಸಂಜೆ 6ಗಂಟೆಗೆ ಏರ್ಪಡಿಸಲಾಗಿದೆ.
ಸಮಾರಂಭವು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸುವರು. ಜಿಲ್ಲಾ ಪಂಚಾಯತ್ ಸದಸ್ಯರು, ತಾಲೂಕು ಪಂಚಾಯತ್ ಸದಸ್ಯರು, ಪುರಸಭಾ ಸದಸ್ಯರು, ಗ್ರಾಮಪಂಚಾಯಿತಿ ಕಾರ್ಯದಶರ್ಿಗಳು ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಲಿದ್ದು ಸಮಾರಂಭದಲ್ಲಿ ಮಲೇರಿಯಾ, ಡೆಂಗ್ಯೂ, ಚಿಕನ್ಗುನ್ಯಾ, ಮೆದುಳು ಜ್ವರ ಹರಡಲು ಕಾರಣಗಳು, ನಿಯಂತ್ರಣೋಪಾಯಗಳು ಹಾಗೂ ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶ ಪಡಿಸುವ ಬಗ್ಗೆ ಮತ್ತು ಮಲೇರಿಯಾ ನಿಯಂತ್ರಿಸಲು ಸಮುದಾಯದಲ್ಲಿ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಚಿಕ್ಕನಾಯಕನಹಳ್ಳಿ,ಜೂ.29: ಮತದಾರರ ಪಟ್ಟಿಯಲ್ಲಿ ಹೆಸರು ದಾಖಲೆಯಾಗಿದ್ದು ಭಾವಚಿತ್ರಗಳು ಮುದ್ರಣವಾಗದೆ ಇರುವಂತಹ ಮತದಾರರು ತಮ್ಮ ಇತ್ತೀಚಿನ ಬಣ್ಣದ ಪಾಸ್ ಪೋಟರ್್ ಸೈಜಿನ ಭಾವಚಿತ್ರವನ್ನು ನಿಮ್ಮ ಮತಗಟ್ಟೆಯಲ್ಲಿರುವ ಮತಗಟ್ಟೆ ಅಧಿಕಾರಗಳಿಗೆ ನೀಡಿ ಮತದಾರರ ಭಾವಚಿತ್ರವಿರುವ ಗುರುತಿನ ಚೀಟಿಯನ್ನು ಪಡೆಯಲು ತಹಸೀಲ್ದಾರ್ ಟಿ.ಸಿ.ಕಾಂತರಾಜು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗುರುತಿನ ಚೀಟಿಯು ಮುಂಬರುವ ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗಳಿಗೆ ಮತ್ತು ಇತರೆ ಸಕರ್ಾರ ಸವಲತ್ತುಗಳಿಗೂ ಭಾವಚಿತ್ರ ಗುರುತಿನ ಕಾಡರ್ು ಕಡ್ಡಾಯವಾಗಿದ್ದು ಜೂನ್ 1ರಿಂದ ಈ ಕಾರ್ಯ ನಡೆಯುತ್ತಿದೆ, ತಮ್ಮ ಹತ್ತಿರದ ಗ್ರಾಮಲೆಕ್ಕಿಗರಿಗೆ, ರಾಜಸ್ವ ನಿರೀಕ್ಷಕರಿಗೆ, ನಾಡ ಕಛೇರಿಗೆ ಅಥವಾ ತಾಲೂಕು ಕಛೇರಿಗೆ ತಲುಪಿಸುವಂತೆ ತಿಳಿಸಿದ್ದು ಈ ಸಂದರ್ಭದಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ಆಕ್ಷೇಪಣೆ, ಬಿಡತಕ್ಕುವುಗಳು, ಹೆಸರು ಭಾವಚಿತ್ರಗಳ ತಿದ್ದುಪಡಿ ಹಾಗೂ ವಗರ್ಾವಣೆಗೆ ಅವಕಾಶವಿದ್ದು ಸೇರ್ಪಡೆಗೆ ನಮೂನೆ-6, ವಗರ್ಾವಣೆಗೆ-6(ಎ), ಆಕ್ಷೇಪಣೆ, ಬಿಡತಕ್ಕವುಗಳಿಗೆ-7 ತಿದ್ದುಪಡಿಗೆ-8 ರಲ್ಲಿ ಇತ್ತೀಚಿನ ಬಣ್ಣದ ಪಾಸ್ ಪೋಟರ್್ ಸೈಜಿನ ಭಾವಚಿತ್ರ ಹಾಗೂ ಸೂಕ್ತ ದಾಖಲೆಗಳೊಂದಿಗೆ ಸಂಬಂದಿಸಿದ ಮತಗಟ್ಟೆಯಲ್ಲಿರುವ ನಿದರ್ಿಷ್ಠಾದಿಕಾರಿಗಳಿಗೆ ಸಲ್ಲಿಸಲು ಅವಕಾಶವಿರುತ್ತದೆ ಹೆಚ್ಚಿನ ಮಾಹಿತಿಗಾಗಿ ತಹಶೀಲ್ದಾರ್ ಕಾಯರ್ಾಲಯ, ಕಂದಾಯ ತನಿಖಾಧಿಕಾರಿಗಳ ಕಾಯರ್ಾಲಯ, ಗ್ರಾಮ ಲೆಕ್ಕಿಗರ ಕಾಯರ್ಾಲಯದಲ್ಲಿ ಪಡೆಯಬಹುದಾಗಿರುತ್ತದೆ.