Sunday, August 28, 2011ಜೈ ಹೋ, ಅಣ್ಣಾ ಜೈ ಹೋ

ಮಹಾತ್ಮ ಗಾಂಧೀಜಿಯಂತಾದ ಅಣ್ಣಾ ಹಜಾರೆ
ಪಾಂಡುರಂಗ.ಜೆ

ಚಿಕ್ಕನಾಯಕನಹಳ್ಳಿ :ಭಾರತಕ್ಕೆ ದೊರಕಿದ ಎರಡನೇ ಮಹಾತ್ಮ ಗಾಂಧೀ, ಎರಡನೇ ಸ್ವತಂತ್ರ ಸಂಗ್ರಾಮ ಸೃಷ್ಠಿಸಿದ ಕತೃ ಅಣ್ಣಾ ಹಜಾರೆರವರಿಗೆ ಜೈ ಹೋ, ಜೈ ಹೋ ಎಂಬ ಕೂಗು ದೇಶದಲ್ಲೆಲ್ಲಾ ಮೊಳಗುತ್ತಿದೆ.ಗಾಂಧೀಜಿಯವರ ತತ್ವಗಳಂತೆ ಶಾಂತಿ, ಅಹಿಂಸೆಯನ್ನು ಪಾಲಿಸಿ ಭ್ರಷ್ಠಾಚಾರ ನಿಮರ್ೂಲನೆಗಾಗಿ ಜನಲೋಕಪಾಲ್ ಮಸೂದೆ ಜಾರಿಗೆ ತರಲು ಉಪವಾಸ ಸತ್ಯಾಗ್ರಹ ನಡೆಸಿ ಗಾಂಧೀಯವರಂತೆ ಉತ್ತಮ ನಾಯಕತ್ವದೊಂದಿಗೆ ಭ್ರಷ್ಠಾಚಾರದ ವಿರುದ್ದ ಸಮಾಜವನ್ನು ಕಟ್ಟಿ ಜನಸಮಾನ್ಯರ ಮುಂದಿನ ದಿನಗಳ ಭವಿಷ್ಯಕ್ಕೆ ದಿಕ್ಕು ತೋರಿಸಿದ ಗಾಂದಿವಾಧಿ ಹಜಾರೆರವರ ಜೀವನವನ್ನು ಅವಲೋಕಿಸಿ ಅವರಂತೆ ನಾಯಕತ್ವದ ಗುಣಗಳನ್ನು ಹೊಂದುವುದು ನಮ್ಮೆಲ್ಲರ ಕರ್ತವ್ಯ. ಕಿಶನ್ ಬಾಬರೋ ಹಜಾರೆರವರು ಮಹಾರಾಷ್ಟ್ರ ರಾಜ್ಯ ಅಹಮದ್ನಗರದ ಬಿನ್ಗಾರ್ನಲ್ಲಿ ಜನವರಿ 15 1940ರಂದು ಜನಿಸಿದರು. ಅವರು 7ನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡಿ ಭಾರತೀಯ ಸೇನೆಯ ಟ್ರಕ್ ಚಾಲಕನಾಗಿ ಕಾರ್ಯ ನಿರ್ವಹಿಸಿದರು. ಸೇನೆಯಲ್ಲಿದ್ದಾಗಲೇ ಸ್ವಾಮಿ ವಿವೇಕಾನಂದ, ಮಹಾತ್ಮಗಾಂಧಿ, ಆಚಾರ್ಯ ವಿನೊಬಾಬಾವೆರವರ ಲೇಖನ, ಪುಸ್ತಕಗಳನ್ನು ಓದಿ ಸ್ಪೂತರ್ಿಗೊಂಡು 1975ರಲ್ಲಿ ಸೇನೆಕಾರ್ಯಕ್ಕೆ ಸ್ವಯಂ ನಿವೃತ್ತಿ ಹೊಂದಿ ತಮ್ಮ ಗ್ರಾಮಕ್ಕೆ ಮರಳಿದರು. ಗ್ರಾಮಕ್ಕೆ ಮರಳಿದ ಅವರು ಗ್ರಾಮದಲ್ಲಿನ ಸಮಸ್ಯೆಗಳನ್ನು ನಿವಾರಿಸಲು ಮುಂದಾದರು, ಅಲ್ಲಿನ ಗ್ರಾಮಸ್ಥರನ್ನು ಒಗ್ಗೂಡಿಸಿ ಅಲ್ಲಿನ ಸಮಸ್ಯೆಗಳನ್ನು ನಿವಾರಿಸಲು ಸತ್ಯಾಗ್ರಹ ಆರಂಭಿಸಿದರು, ಇಲ್ಲಿಂದ ಹಜಾರೆರವರು ಸತ್ಯಾಗ್ರಹ ಆರಂಭಿಸಿ ಆ ಗ್ರಾಮದಲ್ಲಿ ಮಧ್ಯಪಾನ, ಧೂಮಪಾನ ನಿಷೇಧಿಸಿ ಗ್ರಾಮಗಳಿಗೆ ಮಾದರಿಯದರು, ಈ ಮೂಲಕ ಸತ್ಯಾಗ್ರಹ ಆರಂಭಿಸಿದ ಅವರು ದೇಶದಲ್ಲಿ ನಡೆಯುತ್ತಿರುವ ಭ್ರಷ್ಠಾಚಾರವನ್ನು ತೊಲಗಿಸಲು ಕೇಂದ್ರ ಸಕರ್ಾರದ ವಿರುದ್ದ ನಿಂತು ಭ್ರಷ್ಠಾಚಾರವನ್ನು ಹೋಗಲಾಡಿಸಲು ಮೊದಲ ಬಾರಿ ಸತ್ಯಾಗ್ರಹ ನಡೆಸಿದರು ಈ ಸಂದರ್ಭದಲ್ಲಿ ಅಣ್ಣಾರವರಿಗೆ ಲಕ್ಷಗಟ್ಟಲೆ ಬೆಂಬಲ ಸೂಚಿಸಿದರೂ ಕೇಂದ್ರ ಸಕರ್ಾರಕ್ಕೆ ಆಗಷ್ಟ್ 15ನೇ ತಾರೀಖಿನೊಳಗೆ ಜನಲೋಕಪಾಲ ಮಸೂದೆ ಜಾರಿಗೆ ತರಬೇಕೆಂದು ಕಾಲವಕಾಶ ನೀಡಿದ್ದರು. ಅಣ್ಣಾರವರು ನೀಡಿದ್ದ ಕಾಲವಕಾಶ ಮುಗಿದರೂ ಸಕರ್ಾರ ಮಸೂದೆಯನ್ನು ಅಂಗೀಕರಿಸದಿದ್ದಾಗ ಹಜಾರೆರವರು ಶಾಂತಿಯುತವಾಗಿ 13 ದಿನ 288 ಗಂಟೆಯ ವರೆಗೆ ನಡೆಸಿದ ಉಪವಾಸ ಸತ್ಯಾಗ್ರಹಕ್ಕೆ ಕಿರಣ್ಬೇಡಿ, ಸಂತೋಷ್ಹೆಗಡೆ ಇನ್ನಿತರರ ಅಣ್ಣಾ ಬೆಂಬಲಿಗರು ದೇಶದಲ್ಲೆಲ್ಲ ಹಜಾರೆರವರ ನಾಯಕತ್ವದೊಂದಿಗೆ ಬೆಂಬಲಿಸಿ ಸಕರ್ಾರಕ್ಕೆ ನಡುಕ ಹುಟ್ಟಿಸಿ ಮಸೂದೆ ಅಂಗೀಕಾರವನ್ನು ಜಾರಿಗೆ ತರಲು ಒತ್ತಾಯಿಸಿ ಅದರಲ್ಲಿ ವಿಜಯಶಾಲಿಯಾದರು. ಇವುಗಳನ್ನೆಲ್ಲ ಗಮನಿಸಿದರೆ ಗಾಂಧಿ ತತ್ವಗಳ ಅಹಿಂಸೆ, ಶಾಂತಿ ಮಂತ್ರ ಹಾಗೂ ಜನಶಕ್ತಿಯಿಂದ ಯಾವುದೇ ಅನ್ಯಾಯದ ವಿರುದ್ದ ಹೋರಾಡಿದರೆ ಗೆಲುವು ಸಾಧಿಸಬಹುದು ಎಂಬುದನ್ನು ಮತ್ತೊಮ್ಮೆ ಹಜಾರೆರವರು ಸಾಬೀತುಪಡಿಸಿದ್ದಾರೆ, ಏನಾದರೂ ಸರಿ ಮಹಾತ್ಮ ಗಾಂಧಿಜಿಯಂತೆ, ಎರಡನೇ ಗಾಂಧಿಯಾಗಿ ಪ್ರಬಲ ಅಣ್ವಸ್ತ್ರದಂತೆ ಅಣ್ಣಾ ಹಜಾರೆರವರ ನಾಯಕತ್ವ ದೇಶದ ಜನತೆಗೆ ದೊರಕಿ ಭ್ರಷ್ಟಚಾರಿಗಳಿಗೆ ನಡುಕ ಹುಟ್ಟಿಸಿರುವ ಅಣ್ಣಾರವರಿಗೆ ಇದುವೇ ನಮ್ಮ ಜೈ ಹೋ.