Tuesday, November 27, 2012


ಎಪಿಎಂಸಿ ಜೆಸಿಎಂ ಬೆಂಬಲಿಗರಿಗೆ ಅಧಿಕ ಜಯ, 2ನೇ ಸ್ಥಾನದಲ್ಲಿ ಜೆಡಿಎಸ್, ಒಂದೊಂದು ಕ್ಷೇತ್ರಕ್ಕೆ ಸಮಾಧಾನ ಪಟ್ಟ ಬಿಜೆಪಿ, ಕಾಂಗ್ರೆಸ್
ಚಿಕ್ಕನಾಯಕನಹಳ್ಳಿ,ನ.27 : ಹುಳಿಯಾರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಾಗಿ ನಡೆದ 13ಕ್ಷೇತ್ರಗಳ ನಿದರ್ೇಶಕರ  ಚುನಾವಣೆಯಲ್ಲಿ ಸಹಕಾರ ಮಾರುಕಟ್ಟೆ ವ್ಯವಹಾರ ಕ್ಷೇತ್ರದಿಂದ ಎಸ್.ಆರ್.ರಾಜ್ಕುಮಾರ್ ಅವಿರೋದ ಆಯ್ಕೆಯಾಗಿದ್ದು ಜೆಸಿಎಂ ಬೆಂಬಲಿತ 8, ಜೆಡಿಎಸ್ ಬೆಂಬಲಿತ 2, ಕಾಂಗ್ರೆಸ್ ಬೆಂಬಲಿತ 1, ಬಿಜೆಪಿ ಬೆಂಬಲಿತ 1 ಕ್ಷೇತ್ರಗಳಲ್ಲಿ ಅಭ್ಯಥರ್ಿಗಳು ಗೆಲುವು ಸಾಧಿಸಿದ್ದಾರೆ.
ಯಳನಡು ಕ್ಷೇತ್ರ : ಕಾಂಗ್ರೆಸ್ ಬೆಂಬಲಿತ ವೈ.ಸಿ.ಸಿದ್ದರಾಮಯ್ಯ(614 ಜಯ), ಲಕ್ಷ್ಮಯ್ಯ(485), ರಮೇಶ್ ಟಿ.ಕೆ(280), ಕರಿಯಪ್ಪ ಪೂಜಾರಿ(208).
ಹುಳಿಯಾರು ಕ್ಷೇತ್ರ : ಬಿಜೆಪಿ ಬೆಂಬಲಿತ ಆರ್.ಪಿ.ವಸಂತಯ್ಯ(842 ಜಯ), ರಾಜಶೇಖರಪ್ಪ(687), ಸಯ್ಯದ್ಜಲೀಲ್(287), ಹೆಚ್.ಆರ್.ರಂಗನಾಥ್(122). 
ಹೊಯ್ಸಳಕಟ್ಟೆ ಕ್ಷೇತ್ರ : ಜೆಡಿಎಸ್ ಬೆಂಬಲಿತ ರುದ್ರಪ್ಪ ಡಿ.ಆರ್(444 ಜಯ), ಡಿ.ಜಿ.ರಾಜಶೇಖರನಾಯ್ಕ(258), ಲಚ್ಚಾನಾಯ್ಕ(192), ರಾಮಾನಾಯ್ಕ(140), ಸೋಮಶೇಖರನಾಯ್ಕ(74).
ತಿಮ್ಮನಹಳ್ಳಿ ಕ್ಷೇತ್ರ : ಜೆಸಿಎಂ ಬೆಂಬಲಿತ ಅಭ್ಯಥರ್ಿ ಸಣ್ಣಕರಿಯಪ್ಪ(473 ಜಯ), ರಾಮಚಂದ್ರಯ್ಯ (330), ಸ್ವಾಮಿನಾಥ್ಎಸ್.ಆರ್(288), ದಬ್ಬೇಘಟ್ಟ ಬಸವರಾಜು(25).
ತೀರ್ಥಪುರ ಕ್ಷೇತ್ರ : ಜೆ.ಸಿ.ಎಂ ಬೆಂಬಲಿತ ಅಭ್ಯಥರ್ಿ ದ್ರಾಕ್ಷಾಯಣಮ್ಮ(798 ಜಯ), ವಸಂತಲಕ್ಷ್ಮೀ(790), ಈ.ಲತಾ(258), ಈರಮ್ಮ(145).
ಕಂದಿಕೆರೆ ಕ್ಷೇತ್ರ : ಜೆಸಿಎಂ ಬೆಂಬಲಿತ ಅಭ್ಯಥರ್ಿ ಬಿ.ಸಣ್ಣಯ್ಯ(773ಜಯ), ಬಿ.ಕೆ.ಜಯಣ್ಣ(745), ಡಿ.ಪಂಚಾಕ್ಷರಯ್ಯ(116).
ಚಿಕ್ಕನಾಯಕನಹಳ್ಳಿ ಕಸಬಾ  ಕ್ಷೇತ್ರ : ಜೆಡಿಎಸ್ ಬೆಂಬಲಿತ ಅಭ್ಯಥರ್ಿ ಸಿ.ಎಂ.ರಂಗಸ್ವಾಮಯ್ಯ(679ಜಯ),ಲಿಂಗರಾಜು ದೇವರಮನೆ(310), ಸಿ.ಕೆ.ಶಾಂತಕುಮಾರ್(104), ಕೆ.ಶಿವಣ್ಣ(79), ಬಸವರಾಜು(51), ಸಿ.ಕೆ.ಗುರುಸಿದ್ದಯ್ಯ(39), ಶಾಂತಕುಮಾರ(12).
ಹಂದನಕೆರೆ ಕ್ಷೇತ್ರ : ಜೆಸಿಎಂ ಬೆಂಬಲಿತ ಅಭ್ಯಥರ್ಿ ಸೋಮಶೇಖರಯ್ಯ(1050 ಜಯ), ಚಂದ್ರಣ್ಣ(895), ನೀಲಕಂಠಪ್ಪ(95), ಕಾಂತರಾಜ್ಅರಸ್(03).
ಮತಿಘಟ್ಟ ಕ್ಷೇತ್ರ : ಜೆಸಿಎಂ ಬೆಂಬಲಿತ ಅಭ್ಯಥರ್ಿ ಹೆಚ್.ಬಸವರಾಜು(863 ಜಯ), ನಟರಾಜು(688), ಬರಗೂರು ಬಸವರಾಜು(467).
ಶೆಟ್ಟಿಕೆರೆ ಕ್ಷೇತ್ರ : ಜೆಸಿಎಂ ಬೆಂಬಲಿತ ಅಭ್ಯಥರ್ಿ ಕೆ.ಎಂ.ಈಶ್ವರಮೂತರ್ಿ(870 ಜಯ), ಕೃಷ್ಣಮೂತರ್ಿ(602), ಎನ್.ಬಿ.ಸಿದ್ದೇಗೌಡ(368), ಜೆ.ಸಿ.ಶಿವಕುಮಾರಸ್ವಾಮಿ(70).
ಜೆ.ಸಿ.ಪುರ ಕ್ಷೇತ್ರ : ಜೆಸಿಎಂ ಬೆಂಬಲಿತ ಅಭ್ಯಥರ್ಿ ಎಂ.ಎಸ್.ಶಿವರಾಜು(1094 ಜಯ), ಗಂಗಾಧರಯ್ಯ(389), ಎಸ್.ಜಿ.ಮಹೇಶ್(356), ಶಂಕರಣ್ಣ(93), ನಿಜಾನಂದಮೂತರ್ಿ(81).
ವರ್ತಕರ ಕ್ಷೇತ್ರ : ಜೆಸಿಎಂ ಬೆಂಬಲಿತ ಅಭ್ಯಥರ್ಿ ಸಿ.ಎಸ್.ಶಾಂತಕುಮಾರ್(52 ಜಯ), ಎಲ್.ಅರ್.ಬಾಲಾಜಿ(36), ವೈ.ಎ.ರಿಯಾಜ್ಅಹಮದ್(04), ಕೆ.ನಿಂಗರಜು(01) ಮತಗಳನ್ನು ಪಡೆದಿದ್ದಾರೆ ಎಂದು ಚುನಾವಣಾಧಿಕಾರಿ ಎನ್.ಆರ್.ಉಮೇಶ್ಚಂದ್ರ ತಿಳಿಸಿದ್ದಾರೆ.

ಈ ಚುನಾವಣೆ ಉಮ್ಮಸ್ಸು ತುಂಬಿದೆ, ಮುಂದಿನ ಚುನಾವಣೆಗೆ ಸಿದ್ದರಾಗಿ : ಜೆಸಿಎಂ 
ಚಿಕ್ಕನಾಯಕನಹಳ್ಳಿ,ನ.27 : ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಚುನಾವಣೆಯಲ್ಲಿ ಗೆಲುವು ಸಾಧಿಸಿರುವುದು ಮುಂದೆ ಬರುವ ಚುನಾವಣೆಗಳಲ್ಲಿ ಗೆಲುವು ಸಾಧಿಸಲು ಹುಮ್ಮಸ್ಸು ಬಂದಂತಾಗಿದ್ದು ಈಗ  ಚುನಾವಣಾ ರಣರಂಗ ಆರಂಭವಾಗಿದೆ,  ಮುಂದೆ ಬರುವ ಎಲ್ಲಾ ಚುನಾವಣೆಗಳಲ್ಲಿಯೂ ನಮ್ಮ ಬೆಂಬಲಿತ ಅಭ್ಯಥರ್ಿಗಳು ಗೆಲುವು ಸಾಧಿಸುವಂತೆ ಕಾರ್ಯಕರ್ತರು ದುಡಿಯಬೇಕು ಎಂದು ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಅಭ್ಯಥರ್ಿಗಳನ್ನು ಅಭಿನಂದಿಸುವ ಸಲುವಾಗಿ ನವೋದಯ ಕಾಲೇಜು ಆವರಣದಲ್ಲಿ ಕರೆದಿದ್ದ ಸಭೆಯಲ್ಲಿ ಕಾರ್ಯಕರ್ತರನ್ನು ಅಭಿನಂದಿಸಿ ಮಾತನಾಡಿದರು. 
 8ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ, ಉಳಿದ 4ಕ್ಷೇತ್ರಗಳಲ್ಲಿ ಸೋಲನ್ನು ಅನುಭವಿಸಿರುವುದರ ಬಗ್ಗೆ ಚಿಂತಿಸುವುದನ್ನು ಬಿಟ್ಟು ಆ ಕ್ಷೇತ್ರದಲ್ಲಿ ಮುಂದಿನ ಚುನಾವಣೆಯ ಬಗ್ಗೆ ಹೇಗೆ ಪ್ರಚಾರ ಕೈಗೊಳ್ಳಬೇಕು ಎಂಬುದರ ಬಗ್ಗೆ ಯೋಚಿಸಿ ಎಂದರಲ್ಲದೆ ಈಗ ಸೋತಿರುವವರನ್ನು ಮುಂದೆ ಬರುವ ಚುನಾವಣೆಗಳಲ್ಲಿ ಗೆಲ್ಲಿಸುವ ಮುಖೇನ ಸಂಘಟನೆ ಮಾಡಿರಿ ಎಂದು ಕರೆ ಕೊಟ್ಟ ಅವರು ಯುವ ಕಾರ್ಯಕರ್ತರಿಗೆ ಹೆಚ್ಚಿನ ಅವಕಾಶ ಕಲ್ಪಿಸಿ ಎಂದರು. 
ತಾಲ್ಲೂಕಿನಲ್ಲಿ ಹುಳಿಯಾರು ದೊಡ್ಡ ಹೋಬಳಿಯಾಗಿದ್ದು ಅಲ್ಲಿ ಪಕ್ಷ ಸೋತಿರುವುದರ ಬಗ್ಗೆ ಯೋಚಿಸಿ ಮುಂದೆ ಹೀಗಾಗದಂತೆ ಕಾರ್ಯಕರ್ತರು ನೋಡಿಕೊಳ್ಳಬೇಕು ಎಂದರು.
ಮಾಜಿ ಜಿ.ಪಂ.ಸದಸ್ಯ ಬಿ.ಎನ್.ಶಿವಪ್ರಕಾಶ್ ಮಾತನಾಡಿ ಎಪಿಎಂಸಿ ಚುನಾವಣೆ ಮೂಲಕ ಮುಂಬರುವ ಚುನಾವಣೆಗಳಿಗೆ ಪ್ರತಿ ಗ್ರಾಮದಲ್ಲೂ ಇಂದಿನಿಂದಲೇ ಚುನಾವಣಾ ಪ್ರಚಾರ ಮಾಡಲು ಸಿದ್ದರಾಗೋಣ ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ಸಮಾರಂಭದಲ್ಲಿ ಎಪಿಎಂಸಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ ತಿಮ್ಮನಹಳ್ಳಿಯ ಸಣ್ಣಕರಿಯಪ್ಪ, ತೀರ್ಥಪುರ ದ್ರಾಕ್ಷಾಯಣಮ್ಮ, ಕಂದಿಕೆರೆ ಸಣ್ಣಯ್ಯ, ಹಂದನಕೆರೆ ಸೋಮಶೇಖರಯ್ಯ, ಮತಿಘಟ್ಟ ಹೆಚ್.ಬಸವರಾಜು, ಶೆಟ್ಟಿಕೆರೆ ಈಶ್ವರಮೂತರ್ಿ, ಜೆ.ಸಿ.ಪುರ ಎಮ್.ಎನ್.ಶಿವರಾಜು, ವರ್ತಕರ ಕ್ಷೇತ್ರ ಸಿ.ಎಸ್.ಶಾಂತಕುಮಾರ್ರವರಿಗೆ ಜೆ.ಸಿ.ಮಾಧುಸ್ವಾಮಿ, ತಾ.ಪಂ.ಸದಸ್ಯರಾದ ಶಶಿಧರ್, ನಿರಂಜನಮೂತರ್ಿ ಹಾಗೂ ಕಾರ್ಯಕರ್ತರು, ಬೆಂಬಲಿಗರು ಹಾಜರಿದ್ದರು.
  1.  ತಾಲ್ಲೂಕು ಪ್ರೌಡಶಾಲಾ ಶಿಕ್ಷಕರ ಸಮ್ಮೇಳನ

ಚಿಕ್ಕನಾಯಕನಹಳ್ಳಿ,ನ.27 : ತಾಲ್ಲೂಕು ಪ್ರೌಡಶಾಲಾ ಶಿಕ್ಷಕರ ಸಮ್ಮೇಳನ ಹಾಗೂ ಸನ್ಮಾನ ಸಮಾರಂಭವನ್ನು ಇದೇ 29ರ ಬೆಳಗ್ಗೆ 10.30ಕ್ಕೆ ಏರ್ಪಡಿಸಲಾಗಿದೆ.
ಪಟ್ಟಣದ ಕಲ್ಪವೃಕ್ಷ ಕೋ ಆಪರೇಟಿವ್ ಬ್ಯಾಂಕ್ ಸಭಾಂಗಣದಲ್ಲಿ ಸಮಾರಂಭ ಏರ್ಪಡಿಸಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದು ತಾ.ಪಂ.ಅಧ್ಯಕ್ಷ ಎಂ.ಎಂ.ಜಗದೀಶ್ ಉದ್ಘಾಟನೆ ನೆರವೇರಿಸಲಿದ್ದಾರೆ.
ವಿಧಾನಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿರವರಿಗೆ ಸನ್ಮಾನಿಸಲಿದ್ದು, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿದರ್ೇಶಕ ಬಿ.ಮೋಹನ್ಕುಮಾರ್ ಉಪನ್ಯಾಸ ನೀಡಲಿದ್ದಾರೆ. ಈ ಸಮಾರಂಭದಲ್ಲಿ ಜನಪ್ರತಿನಿಧಿಗಳು ಹಾಗೂ ಇಲಾಖೆಯ ಮುಖ್ಯಸ್ಥರು ಉಪಸ್ಥಿತರಿರುವರು.
ಬಸವೇಶ್ವರಸ್ವಾಮಿ ದೇವಸ್ಥಾನದ ಪ್ರಾರಂಭೋತ್ಸವ
                             
ಚಿಕ್ಕನಾಯಕನಹಳ್ಳಿ,ನ.27: ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಕ್ಯಾತನಾಯಕನಹಳ್ಳಿ ಗ್ರಾಮದ ಶ್ರೀ ಬಸವೇಶ್ವರಸ್ವಾಮಿ ದೇವಸ್ಥಾನದ ಪ್ರಾರಂಭೋತ್ಸವ ಮತ್ತು ಕಳಸ ಪ್ರತಿಷ್ಠಾಪನೆಯು ಗಾಮಸ್ಥರ ಸಮ್ಮುಖ ಹಾಗೂ ಗುಬ್ಬಿ ತಾಲ್ಲೂಕಿನ ಶ್ರೀ ದೊಡ್ಡಗುಣಿಯ ಹಿರೇಮಠದ ಶ್ರೀ ರೇವಣಸಿದ್ದೇಶ್ವರ ಶಿವಾಚಾರ್ಯಸ್ವಾಮಿಗಳ ನೇತೃತ್ವದಲ್ಲಿ ನೆರವೇರಿತು.
ಮುಂಜಾನೆ ಬ್ರಾಂಹ್ಮೀ ಮುಹೂರ್ತದಲ್ಲಿ ಶ್ರೀ ಬಸವೇಶ್ವರಸ್ವಾಮಿಗೆ ನೇತ್ರೋನ್ಮಿಲನ ಹಾಗೂ ಪ್ರಾಣ ಪ್ರತಿಷ್ಠಾಪನೆ ಮತ್ತು ಕಳಸ ಸ್ಥಾಪನೆ, ಬಸವೇಶ್ವರಸ್ವಾಮಿಯವರಿಗೆ ರುದ್ರಾಭಿಷೇಕ, ಪೂಣರ್ಾಹುತಿ, ಮಹಾಮಂಗಳಾರತಿ ನೆರವೇರಿತು.
ಬೆಳಗಿನ ಜಾವ 4ರಿಂದಲೇ ಗ್ರಾಮಸ್ಥರು ದೇವಾಲಯದ ಬಳಿ ಆಗಮಿಸಿ, ಬಯಲು ಬಸವೇಶ್ವರಸ್ವಾಮಿ, ವೀರಭದ್ರಸ್ವಾಮಿ, ಬಸವೇಶ್ವರಸ್ವಾಮಿ, ಮುದ್ದೇನಹಳ್ಳಿ, ಶ್ರೀ ಹೊನ್ನವ್ಮರಡಿ ರಂಗನಾಥಸ್ವಾಮಿ, ಬೆಳಗುಲಿ ಕದರಿ ಲಕ್ಷ್ಮೀನರಸಿಂಹಸ್ವಾಮಿ, ಸೋರಲಮಾವು, ಶ್ರೀ ಉಡಸಲಮ್ಮದೇವಿ, ಹೊಸಕೆರೆ, ಓಬಳಲಿಂಗೇಶ್ವರ ಬ್ರಹ್ಮಲಿಂಗೇಶ್ವರಸ್ವಾಮಿ ಶ್ರೀ ಕಾಟಮ್ಮದೇವರು, ಹಾಗೂ ಕ್ಯಾತನಾಯಕನಹಳ್ಳಿ ದೇವತೆಗಳು ದೇವಾಲಯಕ್ಕೆ ಪ್ರವೇಶವಾಯಿತು. ನಂತರ ಅನ್ನಸಂತರ್ಪಣೆ ನೆರವೇರಿತು.