Thursday, February 25, 2016


ಆಕಸ್ಮಿಕ ಬೆಂಕಿ ಬೆಳೆ ನಷ್ಟ
ಚಿಕ್ಕನಾಯಕನಹಳ್ಳಿ,ಫೆ.25 : ತಾಲ್ಲೂಕಿನ ಕಂದಿಕೆರೆ ಹೋಬಳಿ ತೀರ್ಥಪುರ ಪಂಚಾಯ್ತಿಯ ಶ್ರೀನಿವಾಸ್ ಎಂಬುವವರ ಜಮೀನಿಗೆ ಆಕಸ್ಮಿಕ ಬೆಂಕಿ ತಗುಲಿ ಸಾವಿರಾರು ರೂಪಾಯಿ ನಷ್ಟವುಂಟಾಗಿದೆ.
ಕಾತ್ರಿಕೆಹಾಲ್ ಗ್ರಾಮದ ವಾಸಿ ಶ್ರೀನಿವಾಸ್ ಎಂಬವವರ ಜಮೀನಾದ ಸವರ್ೆ ನಂ.131 ಜಮೀನಿನಲ್ಲಿ ಬೆಳೆದಿದ್ದ 250 ಬಾಳೆಸಸಿ, 40ತೆಂಗಿನ ಮರಗಳು ನಾಶವಾಗಿವೆ ಹಾಗೂ ಜಮೀನಿನಲ್ಲಿದ್ದ ಬೋರ್ವೆಲ್ ಕೇಬಲ್ಗೆ ಬೆಂಕಿ ತಗುಲಿ ಸುಟ್ಟು ಕರಕಲಾಗಿದ್ದು ಸುಮಾರು 70ಸಾವಿರಕ್ಕೂ ಅಧಿಕ ಬೆಳೆ ನಾಶವಾಗಿದ್ದು, ಬೆಳೆದಿದ್ದ ಬೆಳೆ ಬೆಂಕಿ ತಗುಲಿ ನಾಶವಾಗಿದ್ದು ಜೀವನ ನಿರ್ವಹಿಸಲು ಇದ್ದ ಜೀವನಾಧಾರಕ್ಕೆ ಆಥರ್ಿಕವಾಗಿ ತೊಂದರೆಯುಂಟಾಗಿದ್ದು ಸಕರ್ಾರ ಬೆಳೆನಷ್ಠವನ್ನು ತುಂಬಿಕೊಡುವಂತೆ ಜಮೀನಿನ ಮಾಲಿಕ ಶ್ರೀನಿವಾಸ್ ಒತ್ತಾಯಿಸಿದ್ದಾರೆ.
ಅಗ್ನಿಶಾಮಕ ಠಾಣೆ ನಂಬರ್ ಬದಲು : ಚಿಕ್ಕನಾಯಕನಹಳ್ಳಿ ಅಗ್ನಿಶಾಮಕ ಠಾಣೆ ನಂಬರ್ ಬದಲಾಗಿದೆ, ಈ ಮೊದಲು 08133-202101 ಇತ್ತು, ಬದಲಾದ ನಂಬರ್ 08133-267303ಗೆ ಬದಲಾಗಿದ್ದು ಸಾರ್ವಜನಿಕರು  ಬದಲಾವಣೆಯನ್ನು ಗಮನಿಸಬೇಕು ಎಂದು ಚಿ.ನಾ.ಹಳ್ಳಿ ಪ್ರಭಾರ ಅಗ್ನಿಶಾಮಕ ಠಾಣೆ ಇನ್ಸೆಪ್ಟಕರ್ ಪಂಚಾಕ್ಷರಯ್ಯ ತಿಳಿಸಿದ್ದಾರೆ.

ಸ್ಮಧರ್ಾತ್ಮಕ ಜಗತ್ತಿಗೆ ಇಂಗ್ಲೀಷ್ ಅವಶ್ಯ ಇದನ್ನೇ ಬಂಡವಳವನ್ನಾಗಿ ಮಾಡಿಕೊಂಡಿರುವ ಕಾನ್ವೆಂಟ್ ಶಾಲೆಗಳು


ಚಿಕ್ಕನಾಯಕನಹಳ್ಳಿ,ಫೆ.25 : ಸ್ಮಧರ್ಾತ್ಮಕ ಜಗತ್ತಿನ ಜೊತೆ ಹೆಜ್ಜೆ ಹಾಕಬೇಕಾದರೆ ಇಂಗ್ಲೀಷ್ ಜ್ಞಾನ ಅತ್ಯಗತ್ಯ ಆದರೆ ಇದನ್ನೇ ಬಂಡವಾಳ ಮಾಡಿಕೊಂಡು ಕಾನ್ವೆಂಟ್ಗಳು ತಾಲ್ಲೂಕು ಹಂತದಲ್ಲೂ ನಾಯಿಕೊಡೆಗಳಂತೆ ಹೆಚ್ಚುತ್ತಿವೆ ಎಂದು ನಿವೃತ್ತ ಮುಖ್ಯಶಿಕ್ಷಕ ಲಿಂಗದೇವರು ಹೇಳಿದರು.
ತಾಲ್ಲೂಕಿನ ಬೊಮ್ಮೆನಹಳ್ಳಿ ಸಕರ್ಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಆಂಗ್ಲಭಾಷಾ ಶಿಕ್ಷಕರಿಗೆ ನಡೆದ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿ, ಇಂಗ್ಲೀಷ್ನ್ನು ಸರಿಯಾಗಿ ಕಲಿಸಿದರೆ ಇಂಗ್ಲೀಷ್ ವಿದ್ಯಾಥರ್ಿಗಳಿಗೆ ಸರಳ ಎನಿಸುತ್ತದೆ ಆದ್ದರಿಂದ ಇಂಗ್ಲೀಷ್ ಭೋಧಕರು ಪೂರ್ವ ತಯಾರಿಯೊಂದಿಗೆ ತರಗತಿಗೆ ಹೋಗಬೇಕು ಎಂದು ಸಲಹೆ ನೀಡಿದರು.
ಮುಖ್ಯಶಿಕ್ಷಕ ಸಿದ್ದಲಿಂಗಪ್ಪ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಮಕ್ಕಳನ್ನು ಶಾಲೆಗೆ ಕರೆತರುವುದು ಸವಾಲಿನ ಕೆಲಸವಾಗಿದೆ, ಪೋಷಕರಿಗೆ ವಿದ್ಯೆಯ ಮಹತ್ವ ತಿಳಿಯದ ಹೊರೆತು ಗ್ರಾಮಾಂತರ ಪ್ರದೇಶದಲ್ಲಿ ಅಕ್ಷರಜ್ಞಾನ ಹೆಚ್ಚುವುದು ಕಷ್ಟ ಎಂದರು.
ಹಂದನಕೆರೆ ಹೋಬಳಿ ಶಿಕ್ಷಣ ಸಂಯೋಜನಾಧಿಕಾರಿ ಎನ್.ಪಿ.ಕುಮಾರಸ್ವಾಮಿ ಮಾತನಾಡಿ, ಶಿಕ್ಷಕರು, ಪೋಷಕರು ಹಾಗೂ ವಿದ್ಯಾಥರ್ಿಗಳು ಒಗ್ಗಟ್ಟಾದರೆ ಮಾತ್ರ ಸಾಕ್ಷರ ಸಮಾಜವನ್ನು ಕಟ್ಟಲು ಸಾಧ್ಯ ಎಂದರು.
ಕಾಯರ್ಾಗಾರದಲ್ಲಿ ಸಂಪನ್ಮೂಲ ಶಿಕ್ಷಕ ಪ್ರವೀಣ್ ಶಿಕ್ಷಕರಿಗೆ ಬರವಣಿಗೆ ತಂತ್ರಗಳನ್ನು ತಿಳಿಸಿಕೊಟ್ಟರು. ಆಂಗ್ಲಭಾಷಾ ಬೋಧಕರ ಸಂಘದ ಗೌರವಾಧ್ಯಕ್ಷ ಕೆ.ಬಿ.ಕೃಷ್ಣಮೂತರ್ಿ, ಅಧ್ಯಕ್ಷ ಬಿ.ಎಸ್.ನಟರಾಜ್ , ಮುಖ್ಯಶಿಕ್ಷಕ ನಾಗರಾಜು, ಶಿಕ್ಷಕರುಗಳಾದ ಬಸವರಾಜು, ದೇವರಾಜು, ಸೇರಿದಂತೆ ತಾಲ್ಲೂಕಿನ ಆಂಗ್ಲಭಾಷಾ ಶಿಕ್ಷಕರು ಭಾಗವಹಿಸಿದ್ದರು.
ವಿದ್ಯಾಥರ್ಿನಿ ಪ್ರಿಯಾಂಕ ಪ್ರಾಥರ್ಿಸಿದರು, ಶಿಕ್ಷಕ ನಟರಾಜ್ ನಿರೂಪಿಸಿದರು.