Tuesday, February 8, 2011








ಚಿಕ್ಕನಾಯಕನಹಳ್ಳಿ.ಫೆ.08: ಮಹಿಳೆಯರು ತಮಗೆ ಸಿಗಬೇಕಾದ ಹಕ್ಕು, ಮೀಸಲಾತಿ ಹಾಗೂ ಕಾನೂನಿನ ಅರಿವಿನ ಬಗ್ಗೆ ತಿಳಿದುಕೊಳ್ಳಲು ಮಹಿಳೆಯರಿಗಾಗಿ ನಡೆಯುವ ಸಭೆ, ಸಮಾರಂಭಗಳಲ್ಲಿ ಭಾಗವಹಿಸಿ ಕಾನೂನಿನ ಅರಿವಿನ ನೆರವನ್ನು ಪಡೆದುಕೊಳ್ಳಬೇಕು ಎಂದು ಸಿವಿಲ್ ಹಿರಿಯ ನ್ಯಾಯಾಧೀಶರಾದ ಜಿ.ಎಂ.ಶೀನಪ್ಪ ಕರೆ ನೀಡಿದರು.
ತಾಲೂಕಿನ ಹಂದನಕೆರೆ ಗ್ರಾಮದಲ್ಲಿ ನಡೆದ ಮಹಿಳೆಯರ ಕೌಟುಂಬಿಕ ದೌರ್ಜನ್ಯ ಸಂ ರಕ್ಷಣಾ ಕಾಯ್ದೆಯ ಕಾನೂನು ಅರಿವು ನೆರವು ಕಾರ್ಯಗಾರ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ಕೌಂಟುಬಿಕ ಸಮಸ್ಯೆಯನ್ನು ಬಗೆಹರಿಸಲು ಶಿಶು ಅಭಿವೃದ್ದಿ ಯೋಜನಾಧಿಕಾರಿಗಳಿಗೆ ದೂರಿನ ಅಜರ್ಿಯನ್ನು ಸಲ್ಲಿಸಿ, ರಾಜಿ ಸಂದಾನದ ಮೂಲಕ ಕೌಟುಂಬಿಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಪ್ರಯತ್ನಿಸಬೇಕು, ಸಮಸ್ಯೆ ರಾಜಿ ಸಂದಾನದ ಮೂಲಕ ಇತ್ಯರ್ಥವಾಗದೆ ಇದ್ದಲ್ಲಿ ನ್ಯಾಯಾಲಯದಲ್ಲಿ ಪ್ರಕರಣವನ್ನು ದಾಖಲಿಸಿ, ಶೀಘ್ರವಾಗಿ ಪ್ರಕರಣವನ್ನು ಇತ್ಯರ್ಥಗೊಳಿಸಲಾಗುವುದು ಎಂದು ತಿಳಿಸಿದರು.
ವಕೀಲ ವೈ.ಜಿ.ಲೋಕೇಶ್ ಮಾತನಾಡಿ ಮಹಿಳೆಯರು ಕಾಖರ್ಾನೆ ಮತ್ತು ಕಛೇರಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಮಯದಲ್ಲಿ ಹೆರಿಗೆ ರಜೆ, ತಂದೆ ಆಸ್ತಿಯಲ್ಲಿನ ಹಕ್ಕು, ಜೀವನಾಂಶದ ಬಗ್ಗೆ ಆಸ್ತಿಯನ್ನು ಮಾರಾಟಮಾಡುವುದು ಹಾಗೂ ಆಸ್ತಿಯನ್ನು ವಿಲ್ ಮಾಡುವ ಬಗ್ಗೆ ಇರುವ ಕಾನೂನುಗಳ ಬಗ್ಗೆ ವಿವರವಾಗಿ ತಿಳಿದುಕೊಳ್ಳಬೇಕು ಎಂದ ಅವರು ಕಾಖರ್ಾನೆಗಳಲ್ಲಿ ದುಡಿಯುವ ಮಹಿಳೆಯರಿಗೆ ಸಂಬಳ ಸಾರಿಗೆಯನ್ನು ಹಣದ ರೂಪದಲ್ಲಿಯೇ ನೀಡಬೇಕೇ ಹೊರತು ವಸ್ತು ರೂಪದಲ್ಲಿ ನೀಡಲು ಅವಕಾಶವಿರುವುದಿಲ್ಲ ಎಂದು ತಿಳಿಸಿದರು.
ವಕೀಲ ಎಂ.ಎನ್.ಶೇಖರ್ ಮಾತನಾಡಿ ಕುಟುಂಬದಲ್ಲಿನ ಸದಸ್ಯರಲ್ಲಿ ನಡೆಯುವ ಹಿಂಸೆ, ದೈಹಿಕ ಹಿಂಸೆ, ಲೈಂಗಿಕ ಹಿಂಸೆ, ಅಶ್ಲೀಲ ಚಿತ್ರ ಪ್ರದರ್ಶನ, ಭಾವನಾತ್ಮಕ ಹಿಂಸೆ ಮತ್ತು ಆಥರ್ಿಕ ಹಿಂಸೆ ಇವೆಲ್ಲಾ ಕೌಟುಂಬಿಕ ಹಿಂಸೆಯಡಿಯಲ್ಲಿದ್ದು, ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು ಕೌಟುಂಬಿಕ ದೌರ್ಜನ್ಯ ತಡೆ ಅಧಿಕಾರಿಗಳಾಗಿದ್ದು ಇಂತಹ ಪ್ರಕರಣಗಳ ಬಗ್ಗೆ, ದೂರಿನ ಅಜರ್ಿಯನ್ನು ಸಲ್ಲಿಸಿ ನ್ಯಾಯವನ್ನು ದೊರಕಿಸಿಕೊಳ್ಳಬೇಕು ಮತ್ತು ಪ್ರಕರಣಗಳು ಇತ್ಯರ್ಥವಾಗದಿದ್ದಲ್ಲಿ ನ್ಯಾಯಾಲಯದಲ್ಲಿ ಉಚಿತವಾಗಿ ಕಾನೂನಿನ ನೆರವು ಪಡೆದು 60ದಿನಗಳ ಒಳಗಾಗಿ ನ್ಯಾಯವನ್ನು ಪಡೆಯುವಂತೆ ತಿಳಿಸಿದರು.
ಸಹಾಯಕ ಶಿಶು ಅಭಿವೃದ್ದಿ ಯೋಜನಾಧಿಕಾರಿ ಜಿ..ಪರ್ವತಯ್ಯ ಮಾತನಾಡಿ ಮಹಿಳೆಯ ಮೇಲಿನ ಕೌಟುಂಬಿಕ ದೌರ್ಜನ್ಯಗಳು ಹಾಗೂ 2005-06 ಕಾನೂನಿನ ಬಗ್ಗೆ ವಿವರವಾಗಿ ತಿಳಿಸಿದರು. ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು ಕೌಟುಂಬಿಕ ದೌರ್ಜನ್ಯ ತಡೆ ಅಧಿಕಾರಿಗಳಾಗಿದ್ದು. ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರು ಅಧಿಕಾರಿಗಳನ್ನು ಭೇಟಿ ಮಾಡಿ ಸೂಕ್ತ ಸಲಹೆ ಮತ್ತು ಪರಿಹಾರಗಳನ್ನು ಪಡೆಯುವಂತೆ ತಿಳಿಸಿದ ಅವರು ಭಾಗ್ಯಲಕ್ಷ್ಮಿ ಯೋಜನೆಯಡಿ ಬಂದಿರುವ ಬಾಂಡ್ಗಳ ಸಂಖ್ಯೆಗಳನ್ನು ಆಧಾರ್ ಯೋಜನೆಯಡಿ ಅಳವಡಿಸುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ತಾ.ಪಂ.ಸದಸ್ಯೆ ಬಿ.ಸಿ.ಹೇಮಾವತಿ, ವಕೀಲರ ಸಂಘದ ಗೋಪಾಲಕೃಷ್ಣ, ಸಹಾಯಕ ಸಕರ್ಾರಿ ಅಭಿಯೋಜಕ ಕೆ.ಎಲ್.ಭಾಗ್ಯಲಕ್ಷ್ಮಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಎಂ.ಎಸ್.ಮಹದೇವಮ್ಮ ಪ್ರಾಥರ್ಿಸಿದರೆ, ವಕೀಲರಾದ ಎಂ.ಕೆ.ಸುಲೋಚನ ಸ್ವಾಗತಿಸಿ, ಆರ್.ಎಲ್. ಎಲಿಜಬೆತ್ ರಾಣಿ ನಿರೂಪಿಸಿ, ವೈ.ಜಿ.ಲೋಕೇಶ್ವರ ವಂದಿಸಿದರು.