Wednesday, March 30, 2016


ಸಮರ್ಪಕ ವಿದ್ಯುತ್ಗಾಗಿ ಬೆಸ್ಕಾಂ ಕಛೇರಿಗೆ ರೈತರ ಮುತ್ತಿಗೆ

ಚಿಕ್ಕನಾಯನಹಳ್ಳಿ,ಮಾ.30:  ಶೆಟ್ಟಿಕೆರೆ ಹೋಬಳಿ ತಿಮ್ಲಾಪುರ ಲಕ್ಮೆಗೊಂಡನಹಳ್ಳಿ ಗ್ರಾಮಸ್ಥರು ತಮ್ಮ ಗ್ರಾಮಕ್ಕೆ ಕೂಡಲೇ ವಿದ್ಯುತ್ ಪರಿವರ್ತಕ ಅಳವಡಿಸಿ ಕುಡಿಯುವ ನೀರಿನ ವ್ಯವಸ್ಥೆ ಸರಿಪಡಿಸುವಂತೆ ಆಗ್ರಹಿಸಿ ಬೆಸ್ಕಾಂ ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಕಳೆದ ಹದಿನೈದು ದಿನಗಳಿಂದ ತಿಮ್ಲಾಪುರ ಸುತ್ತಮುತ್ತಲ ಗ್ರಾಮಗಳಲ್ಲಿ ವಿದ್ಯುತ್ ಸರಿಯಾಗಿ ಇಲ್ಲದೇ ಇರುವುದರಿಂದ ಈ ಭಾಗದಲ್ಲಿ ಟ್ರಾನ್ಸ್ಪಾರ್ಮರ್ ಕೆಟ್ಟುಹೋಗಿ ಕುಡಿಯುವ ನೀರು ಇಲ್ಲದೆ ಪರದಾಡುವ ಸ್ಥಿತಿ ಒದಗಿದ್ದು ಕೂಡಲೇ ಹೊಸ ವಿದ್ಯುತ್ ಪರಿವರ್ತಕವನ್ನು ಅಳವಡಿಸುವಂತೆ ಆಗ್ರಹಿಸಿದರು. 
ಈ ಸಂದರ್ಭದಲ್ಲಿ ರೈತ ಸಂಘದ ಮುಖಂಡ ತಿಮ್ಲಾಪುರ ಶಂಕರಣ್ಣ ಮಾತನಾಡಿ, ವಿದ್ಯುತ್ತೊಂದರೆಯಿಂದಾಗಿ ಸುಮಾರು 15ರಿಂದ 20ದಿನಗಳಿಂದ ಕುಡಿಯುವ ನೀರಿಗೆ ತೀವ್ರ ತೊಂದರೆ ಅನುಭವಿಸುತ್ತಿದ್ದೇವೆ,  ಜೊತೆಗೆ ಈಗ ಮಕ್ಕಳಿಗೆ ಪರೀಕ್ಷೆ ಸಮಯವಾಗಿರುವುದರಿಂದ ರಾತ್ರಿ ವೇಳೆ ಸರಿಯಾಗಿ ವಿದ್ಯುತ್ ಇಲ್ಲದೇ ಇರುವುದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ ಎಂದ ಅವರು,  ತಾಲ್ಲೂಕಿನಾದ್ಯಂತ  ಸುಮಾರು 60 ವಿದ್ಯುತ್ಪರಿವರ್ತಕಗಳು ಸುಟ್ಟುಹೋಗಿದ್ದು ವಿದ್ಯುತ್ಪರಿವರ್ತಕಗಳನ್ನು ದುರಸ್ತಿ ಮಾಡಿ ವಿದ್ಯುತ್ ಸರಿಪಡಿಸುವಂತೆ ಆಗ್ರಹಿಸಿದರು. 
ರೈತರು ಹೊಸ ವಿದ್ಯುತ್ ಪರಿವರ್ತಕಗಳನ್ನು ತರಲು ತಿಪಟೂರಿಗೆ ಹೋಗಬೇಕಾಗಿದ್ದು ಇದಕ್ಕೆ ಸಾವಿರಾರು ರೂಪಾಯಿಗಳು ಖಚರ್ಾಗುತ್ತಿವೆ ಆದ್ದರಿಂದ ಚಿಕ್ಕನಾಯಕನಹಳ್ಳಿ ಪಟ್ಟಣದ ಬೆಸ್ಕಾಂ ಕಛೇರಿಯಲ್ಲಿಯೇ ವಿದ್ಯುತ್ ಪರಿವರ್ತಕಗಳನ್ನು ನೀಡುವ ವ್ಯವಸ್ಥೆ ಕಲ್ಪಿಸುವಂತೆ ಸಕರ್ಾರವನ್ನು ಒತ್ತಾಯಿಸಿದರು. 
ರೈತ ಮುಖಂಡ ಮಲ್ಲಿಕಾಜರ್ುನ್ ಮಾತನಾಡಿ, ಬೆಸ್ಕಾಂ ಇಲಾಖೆಯಲ್ಲಿ ವಿದ್ಯುತ್ ಪರಿವರ್ತಕಗಳನ್ನು ತರಲು ಲಾರಿಗಳಿದ್ದರೂ ಇಲಾಖಾ ಅಧಿಕಾರಿಗಳು ಸರಿಯಾಗಿ ಸ್ಪಂದಿಸದೆ ರೈತರು ಸ್ವತಃ ತಮ್ಮ ಖಚರ್ಿನಲ್ಲಿ ತಿಪಟೂರಿನಿಂದ ವಿದ್ಯುತ್ ಪರಿವರ್ತಕಗಳನ್ನು ತರಬೇಕಾಗಿದೆ ಇದರಿಂದ ರೈತರಿಗೆ ಸಾವಿರಾರು ರೂ ಖಚರ್ಾಗುವುದರ ಜೊತೆಯಲ್ಲಿ ಸಮಯವೂ ವ್ಯರ್ಥವಾಗುತ್ತಿದೆ ಎಂದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಬೆಸ್ಕಾಂ ಎಇಇ ರಾಜಶೇಖರ್ ಮಾತನಾಡಿ, ಸಮಸ್ಯೆ ಇರುವ ಗ್ರಾಮಗಳಿಗೆ ಖುದ್ದು ಭೇಟಿ ನೀಡಿ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದರು. 
ಈ ಸಂದರ್ಭದಲ್ಲಿ ರೈತರುಗಳಾದ ತೋಂಟಾದಾರ್ಯ, ಚಂದ್ರಯ್ಯ, ಮುತ್ತು, ಲೋಕೇಶ್, ಸೇರಿದಂತೆ ಲಕ್ಮಗೊಂಡನಹಳ್ಳಿ ಗ್ರಾಮಸ್ಥರು, ಪಿ.ಎಸ್.ಐ ವಿಜಯ್ಕುಮಾರ್ ಇದ್ದರು.