Friday, May 10, 2013ಪಟಾಕಿ ಸಿಡಿಸಿ, ಘೋಷಣೆ ಕೂಗಿದ ಸಿದ್ದರಾಮಯ್ಯನವರ ಅಭಿಮಾನಿಗಳು

ಚಿಕ್ಕನಾಯಕನಹಳ್ಳಿ,ಮೇ.10 : ರಾಜ್ಯದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯನವರು ಆಯ್ಕೆಗೊಂಡಿದ್ದಾರೆ ಎಂಬ ವಿಷಯವನ್ನು ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದಂತೆಯೇ ಪಟ್ಟಣದಲ್ಲಿ ಸಿದ್ದರಾಮಯ್ಯನವರ ಅಭಿಮಾನಿಗಳು ಅವರ ಪರವಾಗಿ ಘೋಷಣೆಗಳನ್ನು ಕೂಗುತ್ತ ಪಟಾಕಿ ಸಿಡಿಸಿ ಸಿಹಿ ಹಂಚಿದರು.
ಕಾಂಗ್ರೆಸ್ನ ಶಾಸಕಾಂಗ ಪಕ್ಷದ ನಾಯಕರಾಗಿದ್ದಾರೆ, ರಾಜ್ಯದ ಮುಖ್ಯಮಂತ್ರಿಯಾಗಿ ಸೋಮವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂಬ ಸುದ್ದಿಯಿಂದ ಉತ್ಸಾಹಗೊಂಡು ಸಿದ್ದರಾಮಯ್ಯನವರಿಗೆ ಜೈಕಾರಗಳನ್ನು ಕೂಗುತ್ತ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಬೈಕ್ ರ್ಯಾಲಿ ನಡೆಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಅಭಿಮಾನಿಗಳಾದ   ಸಿ.ಎಂ.ಬೀರಲಿಂಗಯ್ಯ, ಸಿ.ಟಿ.ಗುರುಮೂತರ್ಿ, ಓಂಕಾರಮೂತರ್ಿ, ರವಿಕುಮಾರ್(ಲ್ಯಾಬ್), ಸಿ.ಎಸ್.ಬಸವರಾಜು, ನಾಗರಾಜು ಸೇರಿದಂತೆ ಹಲವರಿದ್ದರು.

ಜೋರು ಬಿರುಗಾಳಿಗೆ ಎದರಿ ಎರಡು ದಿನದಿಂದ ಹಾಲು ನೀಡದ ಹಸುಗಳು

ಚಿಕ್ಕನಾಯಕನಹಳ್ಳಿ,ಮೇ.10 :  ಜೋರು ಮಳೆಗಾಳಿಯಿಂದ  ದನದಕೊಟ್ಟಿಗೆಗೆ ಹಾಕಲಾಗಿದ್ದ ಶೆಡ್ ಹಾರಿಹೋಗಿ, ಬೀಸುತ್ತಿದ್ದ ಭಾರಿ ಶಬ್ದಕ್ಕೆ ಹೆದರಿ ಹಸುವು ಎರಡು ದಿನದಿಂದ ಹಾಲು ನೀಡದೆ ಭಯಭೀತವಾಗಿವೆ, ಶೆಡ್ ಹಾರಿಹೋದ ಪರಿಣಾಮ  ಸಾವಿರಾರು ರೂಪಾಯಿ ನಷ್ಟ ಸಂಭವಿರುವ ಘಟನೆ ಪಟ್ಟಣದ 1ನೇ ವಾಡರ್್ನ, ಪಿ.ಯು.ಕಾಲೇಜ್ನ ಹಿಂಭಾಗದ  ಕೆ.ಎಮ್.ವಠಾರದಲ್ಲಿ ನಡೆದಿದೆ.
ಭಾರಿ ಬಿರುಗಾಳಿಗೆ ತಮ್ಮ ಜಮೀನಿನಲ್ಲಿ ಹಾಕಲಾಗಿದ್ದ ಶೆಡ್ ಬಿರುಗಾಳಿಗೆ ನೆಲಕ್ಕುರುಳಿದೆ, ಶೆಡ್ನಲ್ಲಿ ದನದಕೊಟ್ಟಿಗೆ, ಕಾಯಿ ಹಾಗೂ ಅಡಕೆ ದಾಸ್ತಾನು ಮಾಡಲಾಗಿತ್ತು, ಗಾಳಿಗೆ ಶೆಡ್ ಹಾರಿದ ಪರಿಣಾಮ ದಾಸ್ತಾನು ಮಾಡಿದ್ದ ವಸ್ತುಗಳಿಗೆ ಹಾನಿಯಾಗಿದ್ದು ಹಸುಕರುಗಳು ಭಯಭೀತವಾಗಿವೆ. ಸದ್ಯ ಯಾವುದೇ ಪ್ರಾಣಹಾನಿಯಾಗಿಲ್ಲ, ಹಾನಿಯಾಗಿರುವ ಸಾವಿರಾರು ರೂಪಾಯಿಗೆ ಪರಿಹಾರ ದೊರಕಿಸಿಕೊಡಬೇಕೆಂದು ಮಾಲೀಕ ಸಿ.ಎಸ್ ನಾಗರಾಜು ಒತ್ತಾಯಿಸಿದ್ದಾರೆ.

ಶನಿಮಹಾದೇವರ ವಾಷರ್ಿಕ ಜಾತ್ರಾ ಮಹೋತ್ಸವ
ಚಿಕ್ಕನಾಯಕನಹಳ್ಳಿ,ಮೇ.10 : 19ನೇ ವರ್ಷದ ಶ್ರೀ ಶನಿಮಹಾದೇವರ ವಾಷರ್ಿಕ ಜಾತ್ರಾ ಮಹೋತ್ಸವವು ಇದೇ 11ರ ಶನಿವಾರ ತಾಲ್ಲೂಕಿನ ಕಾಡೇನಹಳ್ಳಿಯಲ್ಲಿ ನಡೆಯಲಿದೆ.
11ರ ಬೆಳಗ್ಗೆ 7.30ಕ್ಕೆ ಶನಿದೇವರಿಗೆ ಪಂಚಾಮೃತ ಅಭಿಷೇಕ ಮತ್ತು ನವಗ್ರಹ ಪೂಜೆ, ಹೋಮಾದಿಗಳು ಹಾಗೂ ಗ್ರಾಮಸ್ಥರಿಂದ ಆರತಿ, ದೇವರ ಉತ್ಸವ ನಡೆಯಲಿದೆ. ಮಧ್ಯಾಹ್ನ 12.30ಕ್ಕೆ ಅನ್ನಸಂತರ್ಪಣೆ ನೆಡಯಲಿದೆ.
ರೋಟರಿ ಶಾಲೆಗೆ 96.87ರಷ್ಟು ಫಲಿತಾಂಶ
ಚಿಕ್ಕನಾಯಕನಹಳ್ಳಿ,ಮೇ.10 : ಪಟ್ಟಣದ ರೋಟರಿ ಆಂಗ್ಲ ಪ್ರೌಡಶಾಲೆಗೆ ಈ ಬಾರಿಯ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ.96.87ರಷ್ಟು ಪಲಿತಾಂಶ ದೊರೆತಿದೆ.
ಶಾಲೆಯಿಂದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಒಟ್ಟು 64 ವಿದ್ಯಾಥರ್ಿಗಳು ಪರೀಕ್ಷೆ ತೆಗೆದುಕೊಂಡಿದ್ದು ಅದರಲ್ಲಿ ಒಟ್ಟು 62 ವಿದ್ಯಾಥರ್ಿಗಳು ಉತ್ತೀರ್ಣರಾಗಿದ್ದಾರೆ. 11ಮಂದಿ ವಿದ್ಯಾಥರ್ಿಗಳು ಅತ್ಯುನ್ನತದಜರ್ೆ, 34ವಿದ್ಯಾಥರ್ಿಗಳು ಪ್ರಥಮದಜರ್ೆ, 11ದ್ವಿತೀಯದಜರ್ೆ ಹಾಗೂ 6ವಿದ್ಯಾಥರ್ಿಗಳು ತೇರ್ಗಡೆ ಹೊಂದಿದ್ದಾರೆ.
ಹೀನಾ.ಎ561(89.76), ನಿದಾ557(89.12), ಅನುಷಾ552(88.32), ದೀಕ್ಷಿತ.ಡಿ.546(87.36), ನವ್ಯಶ್ರೀ.ಸಿ.ಕೆ540(86.40) ಶಾಮ್ಪ್ರಸಾದ್.ಎಸ್.ವಿ.539(86.24), ಶಿಲ್ಪ.ಎಮ್.537(85.92), ಪಲ್ಲವಿ.ಎನ್.537(85.92), ಗೌತಮಿ ಡಿ.ಕೆ.535(85.60), ಪೂಜಾಜೈನ್533(85.28), ಲಾವಣ್ಯ.ಎಮ್.ಪಿ.533(58.28) ಅಂಕಗಳನ್ನು ಪಡೆದಿದ್ದಾರೆ.

ಎಸ್.ಎಮ್.ಎಸ್.ಕಾಲೇಜಿಗೆ 90.42ರಷ್ಟು ಫಲಿತಾಂಶ
ಚಿಕ್ಕನಾಯಕನಹಳ್ಳಿ,ಮೇ.10 : ಪಟ್ಟಣದ ಎಸ್.ಎಮ್.ಎಸ್.ಪದವಿ ಪೂರ್ವ ಕಾಲೇಜಿಗೆ ಈ ಬಾರಿಯ ಪಿ.ಯು.ಸಿ ಪರೀಕ್ಷೆಯಲ್ಲಿ ಶೇ.90.42ರಷ್ಟಿ ಪಲಿತಾಂಶ ದೊರೆತಿದೆ.
ಮಾಚರ್್ 2013ರ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕುಳಿದ 94 ವಿದ್ಯಾಥರ್ಿಗಳಲ್ಲಿ 85ವಿದ್ಯಾಥರ್ಿಗಳು ಉತ್ತೀರ್ಣರಾಗಿದ್ದಾರೆ.        
ಕಲಾ ವಿಭಾಗದಲ್ಲಿ ಅತಿ ಹೆಚ್ಚು ಅಂಕಪಡೆದ ಸಿ.ಜಿ.ರೋಜಾ543(90.5), ಬಿ.ಎನ್.ಕೀರ್ತನಕುಮಾರಿ504(84.00), ಸಿ.ಆರ್.ನವೀನ್ಕುಮಾರ್489(81.55), ವಾಣಿಜ್ಯ ವಿಭಾಗದಲ್ಲಿ ವಿದ್ಯಾ.ಎಮ್.ಎನ್.476(79.3), ಅರುಣ್ಕುಮಾರ್.ಡಿ.ಆರ್.453(75.5) ಅಂಕಗಳನ್ನು ಪಡೆದಿದ್ದಾರೆ.

ಕ್ಷೇತ್ರದ ಜನತೆ ಗುಳೇ ಹೋಗುವುದನ್ನು ತಪ್ಪಿಸಲು ಗಾಮರ್ೇಂಟ್ಸ್ಗೆ ಮೊರೆಹೋದ ಶಾಸಕ ಸಿ.ಬಿ.ಎಸ್.
ಚಿಕ್ಕನಾಯಕನಹಳ್ಳಿ,ಮೇ.9 : ಕ್ಷೇತ್ರದ ಮತದಾರರ ಆಶೀವರ್ಾದ ಹಾಗೂ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಂದ ಭಾರಿ ಅಂತರದಲ್ಲಿ ಗೆಲುವು ಸಾಧಿಸಿದ್ದು, ಈ ಗೆಲುವು ತಾಲ್ಲೂಕಿನ ಕ್ಷೇತ್ರದ ಜನತೆಯ ಗೆಲುವಾಗಿದ್ದು ಕ್ಷೇತ್ರದ ಜನತೆಗೆ ಎಂದೆಂದು ನಾನು ಚಿರಋಣಿಯಾಗಿರುವೆ ಎಂದು ಚುನಾವಣೆಯಲ್ಲಿ ಮರು ಆಯ್ಕೆಗೊಂಡ ಶಾಸಕ ಸಿ.ಬಿ.ಸುರೇಶ್ಬಾಬು ತಿಳಿಸಿದರು.
ಗೆಲುವಿನ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡ ಸುರೇಶ್ಬಾಬು, ಜ್ಯಾತ್ಯಾತೀತ ಮನೋಭಾವನೆಯಿಂದ  ಎಲ್ಲ ವರ್ಗಗಳಿಗೂ ಸ್ಥಾನಮಾನ ಕಲ್ಪಿಸಿ ತಾಲ್ಲೂಕಿನ ಅಭಿವೃದ್ದಿ ಕಡೆ ಯೋಚಿಸಿದ್ದರಿಂದಲೇ ತಾಲ್ಲೂಕಿನ ಎಲ್ಲಾ ವರ್ಗಗಳ ಮತದಾರರು ನನ್ನನ್ನು ಮರು ಆಯ್ಕೆಮಾಡಿದ್ದಾರೆ. ಶಾಸಕನಾದ ಮೇಲೆ ನಾವು ಮಾಡಿರುವ ಅಭಿವೃದ್ದಿ ಕೆಲಸಗಳು ಹಾಗೂ ಜನರು ನಮ್ಮ ಮೇಲೆ ಇಟ್ಟಿರುವ ವಿಶ್ವಾಸವೇ ನಮ್ಮ ಗೆಲುವಿಗೆ ಸಹಾಯಕವಾಯಿತು ಎಂದರಲ್ಲದೆ ಈ ಮೂಲಕ ತಾಲ್ಲೂಕಿನ ಜನತೆಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ನನ್ನ ಕ್ಷೇತ್ರದಿಂದ ಪಟ್ಟಣಕ್ಕೆ ಗುಳೇ ಹೋಗುವವರು ಹೆಚ್ಚಾಗಿದ್ದಾರೆ, ಅದಕ್ಕಾಗಿ ಇಲ್ಲಿ ಗಾಮರ್ೆಂಟ್ಸ್ ಅನ್ನು ತೆರೆದು ಯುವಕ-ಯುವತಿಯರಿಗೆ ಉದ್ಯೋಗ ಕಲ್ಪಿಸಿ ಅವರನ್ನು ಕ್ಷೇತ್ರದಲ್ಲಿಯೇ ಜೀವನ ನಡೆಸುವಂತೆ ಹಾಗೂ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಮಾಡುವುದಾಗಿ ತಿಳಿಸಿದರು, ವಿವಿಧ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು  ಕ್ಷೇತ್ರದ ಜನತೆಯ ಸಮಸ್ಯೆ ನಿವಾರಿಸಲು ಮುಂದಾಗುವೆ ಎಂದರು.
ಚುನಾವಣೆಯಲ್ಲಿ ಗೆಲುವು ಪಡೆದ ನಂತರ ಪಟ್ಟಣದನ ಜನರಿಗೆ ಕೃತಜ್ಞತೆ ತಿಳಿಸಲು ರಾಜ ಬೀದಿಗಳಲ್ಲಿ ತೆರದ ವಾಹನದಲ್ಲಿ ಮೆರವಣಿಗೆ ನಡೆಸಿದರು. ಮಳೆಯ ನಡುವೆಯೂ ಅಪಾರ ಅಭಿಮಾನಿಗಳೊಂದಿಗೆ ನಡೆದ ವಿಜಯೋತ್ಸವದಲ್ಲಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. 

ಮೇ.12ರಂದು ತಾ.ಕ.ಸಾ.ಪ ಆಜೀವ ಸದಸ್ಯರ ಸಭೆ
ಚಿಕ್ಕನಾಯಕನಹಳ್ಳಿ,ಮೇ.9: ತಾಲೂಕು ಸಾಹಿತ್ಯ ಪರಿಷತ್ನ ಎಲ್ಲಾ ಆಜೀವ ಸದಸ್ಯರ ಸಭೆಯನ್ನು ಇದೇ 12ರ ಭಾನುವಾರ ಮಧ್ಯಾಹ್ನ 2ಗಂಟೆಗೆ ಪಟ್ಟಣದ ಜ್ಞಾನಪೀಠ ಪ್ರೌಢಶಾಲೆಯ ಆವರಣದಲ್ಲಿ ಕರೆಯಲಾಗಿದೆ ಎಂದು ತಾ.ಕ.ಸಾ.ಪ. ಅಧ್ಯಕ್ಷ ಎಂ.ಎಸ್.ರವಿಕುಮಾರ್ ತಿಳಿಸಿದ್ದಾರೆ.
ತಾಲೂಕಿನಲ್ಲಿ  ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆಸುವ ಸಲುವಾಗಿ ಈ ಸಭೆಯನ್ನು ಕರೆದಿದ್ದು ಸಭೆಯಲ್ಲಿ ಜಿಲ್ಲಾ.ಕ.ಸಾ.ಪ ಅಧ್ಯಕ್ಷ ಸೋ.ಮು.ಭಾಸ್ಕರಾಚಾರ್ ಉಪಸ್ಥಿತರಿರುವವರು ಆದ್ದರಿಂದ ಎಲ್ಲಾ ಆಜೀವ ಸದಸ್ಯರು ಸಭೆಯಲ್ಲಿ ಭಾಗವಹಿಸುವಂತೆ ಕೋರಲಾಗಿದೆ.