Saturday, February 27, 2016



ಕಂದಾಯ ಇಲಾಖೆ ನೌಕರರ ಪ್ರತಿಭಟನೆ
ಚಿಕ್ಕನಾಯಕನಹಳ್ಳಿ,ಫೆ.26 : ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆ ನೌಕರರನ್ನು ಕಂದಾಯ ಇಲಾಖೆಯ ಹುದ್ದೆಗೆ ವಿಲೀನಗೊಳಿಸುತ್ತಿರುವ ಕ್ರಮವನ್ನು ಖಂಡಿಸಿ ಕಂದಾಯ ಇಲಾಖೆಯ ನೌಕರರರು ತಹಶೀಲ್ದಾರ್ ಮೂಲಕ ಸಕರ್ಾರಕ್ಕೆ ಮನವಿ ಪತ್ರ ಸಲ್ಲಿಸಿದರು.
ಪಟ್ಟಣದ ತಾಲ್ಲೂಕು ಕಛೇರಿ ಆವರಣದಲ್ಲಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ  ತಾಲ್ಲೂಕು ಶಿರಸ್ತೆದಾರ್ ನಾಗೇಂದ್ರಪ್ಪ, ಕಂದಾಯ ಇಲಾಖೆ ಸಕರ್ಾರಕ್ಕೆ ಮಾತೃ ಇಲಾಖೆಯಾಗಿದ್ದು ಸಕರ್ಾರದ ಮಹತ್ವ ಉಳ್ಳ ಯೋಜನೆಗಳನ್ನು ಅನುಷ್ಠಾನಗೊಳಿಸುವ ಇಲಾಖೆ ಇದಾಗಿರುವುದರಿಂದ ಇಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳಿಗೆ ಕಂದಾಯ ಇಲಾಖೆಯ ಸೂಕ್ಷ್ಮ ವಿಚಾರಗಳು ತಿಳಿದಿದ್ದರೆ ಮಾತ್ರ ಸಮರ್ಥವಾಗಿ ಕಾರ್ಯ ನಿರ್ವಹಿಸಲು ಸಾಧ್ಯ, ಆದ್ದರಿಂದ ಇಲ್ಲಿ ಕಾರ್ಯನಿರ್ವಹಿಸುವ ನೌಕರರಿಗೆ ಮುಂಬಡ್ತಿ ನೀಡುವ ಮೂಲಕ ಕಂದಾಯ ಇಲಾಖೆ ವಿವಿಧ ಹಂತದ ಹುದ್ದೆಗಳಿಗೆ  ನೇಮಕ ಮಾಡಿಕೊಳ್ಳಬೇಕೇ ಹೊರತು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪಿ.ಡಿ.ಓ.ಗಳನ್ನು ಈ ಇಲಾಖೆಯ ಹುದ್ದೆಗಳಿಗೆ ವೀಲಿನಗೊಳಿಸಬಾರದೆಂದು ಕಂದಾಯ ಇಲಾಖಾ ನೌಕರರ ಸಂಘ ಒತ್ತಾಯಿಸಿದೆ.
  ಕಂದಾಯ ಇಲಾಖೆಯ ಬುನಾದಿ ಹಂತದ ಅನುಭವ ಹೊಂದಿರದ  ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ರಾಜ್ ಇಲಾಖೆ ನೌಕರರನ್ನು ಕಂದಾಯ ಇಲಾಖೆ ಉಪತಹಶೀಲ್ದಾರ್ ಮತ್ತು ಶಿರಸ್ತೆದಾರ್ ಹುದ್ದೆಗೆ ವಿಲೀನಗೊಳಿಸಿರುವ ಕ್ರಮವನ್ನು ಕಂದಾಯ ಇಲಾಖೆ ಬಲವಾಗಿ ಖಂಡಿಸುತ್ತದೆ, ವಿಲೀನಗೊಳಿಸುವ ಕ್ರಮವನ್ನು ಸಕರ್ಾರ ಕೂಡಲೇ ಕೈಬಿಡಬೇಕು ಎಂದರು.
ಈಗಾಗಲೇ ವಿಲೀನಗೊಳಿಸಿರುವ ನೌಕರನನ್ನು ಮಾತೃ ಇಲಾಖೆಗೆ ವಾಪಸ್ಸು ಕಳುಹಿಸಬೇಕು ಇಲ್ಲದಿದ್ದರೆ ಸಕರ್ಾರದ ಕ್ರಮದ ವಿರುದ್ದ ಮಾಚರ್್ 2ರಂದು ಕಂದಾಯ ಇಲಾಖೆ ನೌಕರರು ಕಪ್ಪು ಪಟ್ಟಿ ಧರಿಸಿ ಕೆಲಸ ನಿರ್ವಹಿಸಬೇಕಾಗುತ್ತದೆ ಎಂದರು.
ಪ್ರತಿಭಟನಾಕಾರರ ಮನವಿಯನ್ನು ತಹಶೀಲ್ದಾರ್ ಗಂಗೇಶ್ ಸ್ವೀಕರಿಸಿ ಮಾತನಾಡಿ, ಸಕರ್ಾರದ ಮಟ್ಟಕ್ಕೆ ಮನವಿ ರವಾನಿಸಲಾಗುವುದು ಎಂದರು.
ಪ್ರತಿಭಟನೆಯಲ್ಲಿ ಗಂಗಾಧರ್,  ರವಿಕುಮಾರ್, ಈರಣ್ಣ, ಅಜಯ್, ರಮೇಶ್, ಪ್ರತಾಪ್, ಮಧು, ಡಿ.ನಾಗರಾಜು, ಎಂ.ಎಸ್.ರಾಜಶೇಖರ್, ಅಂಬುಜ, ವನಜಾಕ್ಷಿ, ಈಶ್ವರಾಚಾರ್, ಮತ್ತಿತರರು ಉಪಸ್ಥಿತರಿದ್ದರು.

ಪುರಸಭೆಯಲ್ಲಿ ನಡೆದ ಸಾಮಾನ್ಯ ಸಭೆ
ಚಿಕ್ಕನಾಯಕನಹಳ್ಳಿ27: ಕಸ ವಿಲೇವಾರಿಗಾಗಿ ಟ್ರ್ಯಾಕ್ಟರ್ ಬಳಸಲಾಗುತ್ತಿದ್ದು ಇದಕ್ಕೆ ನಾಲ್ಕು ತಿಂಗಳಲ್ಲಿ ಒಟ್ಟು ಇಂದನ ಹಾಕಿಸಿರುವುದನ್ನು ಸೇರಿ 1 ಲಕ್ಷದ 92 ಸಾವಿರ ರೂಪಾಯಿಗಳನ್ನು ಖಚರ್ುಮಾಡಿರುವುದಾಗಿ ತಿಳಿಸಿರುವ ಅಧಿಕಾರಿಗಳ ಕ್ರಮವನ್ನು ಖಂಡಿಸಿದ ಪುರಸಭಾ ಸದಸ್ಯರು ಸಂಬಂಧಪಟ್ಟ ಅಧಿಕಾರಿಯ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡವುದಾಗಿ ಎಚ್ಚರಿಸಿದರು.
ಪಟ್ಟಣದ ಪುರಸಭೆಯಲ್ಲಿ ಪುರಸಭಾದ್ಯಕ್ಷೆ ಪ್ರೇಮಾದೇವರಾಜು ಇವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯಸಭೆಯಲ್ಲಿ ಸೆಪ್ಟಂಬರ್ 2015 ರಿಂದ ಡಿಸೆಂಬರ್ 2015ರವರೆಗಿನ ಆದಾಯ ಹಾಗೂ ಖಚರ್ಿನ ಬಗ್ಗೆ ಮಾಹಿತಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಸದಸ್ಯ ಹೆಚ್.ಬಿ.ಪ್ರಕಾಶ್ ಪಟ್ಟಣದಲ್ಲಿ ಎಲ್ಲಿಯೂ ಕಸ ವಿಲೇವಾರಿ ಯಾಗುತ್ತಿಲ್ಲ ಆದರೆ ಕಸ ವಿಲೇವಾರಿಗೆ ಮಾತ್ರ ಬಳಸಿರುವ ಟ್ರ್ಯಾಕ್ಟರ್ನ ಖಚರ್ು ಮಾತ್ರ ಜಾಸ್ತಿಯಾಗಿದೆ ಈ ಬಗ್ಗೆ ತನಿಖೆಯಾಗ ಬೇಕು ಸಂಬಂಧ ಪಟ್ಟ ಅಧಿಕಾರಿಯ ವಿರುದ್ದ ಲೋಕಾಯುಕ್ತಕ್ಕೆ ದೂರು ನೀಡುವಂತೆ ತಿಳಿಸಿದರು. ಮುಖ್ಯಾಧಿಕಾರಿ ಶಿವಪ್ರಸಾದ್ ಇದಕ್ಕೆ ಉತ್ತರಿಸಿ ಟ್ರ್ಯಾಕ್ಟರ್ ಬಗ್ಗೆ ಹಾಗೂ ಕಸ ವಿಲೇವಾರಿಯ ಬಗ್ಗೆ ಒಂದು ಕಮಿಟಿ ಮಾಡಿ ಆ ಮೂಲಕ ಅದರ ನಿರ್ವಹಣೆ ಮಾಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸದಸ್ಯ ಸಿ.ಪಿ.ಮಹೇಶ್ ನಾವು ಸಹ ನಮ್ಮ ಸ್ವಂತ ಟ್ರ್ಯಾಕ್ಟರ್ಗಳನ್ನು ಬಳಸುತ್ತಿದ್ದು ಇಷ್ಟೋಂದು ಇಂಧನವನ್ನು ಹಾಕಿಸುತ್ತಿಲ್ಲ ಆದರೆ ಪುರಸಭೆಯ ಟ್ರ್ಯಾಕ್ಟರ್ ಮಾತ್ರ ಇಷ್ಟೊಂದು ಇಂಧನ ಕುಡಿಯುತ್ತಿದೆ ಇದರಲ್ಲಿ ಅಕ್ರಮ ನಡೆದಿದೆ ಎಂದ ಅವರು ಪಟ್ಟಣದಲ್ಲಿ ನಡೆಯುವಂತಹ ಕಾರ್ಯಕ್ರಮಗಳಿಗೆ ತಾರತಮ್ಯದಲ್ಲಿ ವಂತಿಕೆ ನೀಡುತ್ತಿರೀ ಎಲ್ಲರಿಗೂ ಒಂದೇ ಸಮನಾದ ವಂತಿಕೆಯನ್ನು ನೀಡುವಂತೆ ತಿಳಿಸಿದರು.
ಸಭೆಯಲ್ಲಿ ಸದಸ್ಯ ಮಹಮದ್ ಖಲಂದರ್ ಮಾತನಾಡಿ ಅಂಗಡಿ ಮಳಿಗೆಗಳಿಂದ ಪುರಸಭೆಗೆ ತಿಂಗಳಿಗೆ 4 ಲಕ್ಷ ರೂಪಾಯಿಗಳಷ್ಟು ಆದಾಯವಿದೆ ಆದರೆ ಈ ಮಳಿಗೆಗಳಿಂದ ಈಗ ಕೇವಲ 15ಸಾವಿರ ಆದಾಯ ಬರುತ್ತಿದೆ ಬಾಡಿಗೆ ಕರಾರು ಮುಗಿದು 15ವರ್ಷಗಳು ಕಳೆದರೂ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ  ಕೂಡಲೇ ಅವಧಿ ಮುಗಿದಿರುವಂತಹ ಮಳಿಗೆಗಳನ್ನು ಇರುವಂತಹ ಬಾಡಿಗೆದಾರನ್ನು ಖಾಲಿ ಮಾಡಿಸಿ  ಹೊಸದಾಗಿ ಹರಾಜು ಮಾಡಿ ಸೂಕ್ತ ಬಾಡಿಗೆಯನ್ನು ವಸೂಲು ಮಾಡಿ ಪುರಸಭೆಗೆ ಆದಾಯ ಬರುವಂತೆ ಮಾಡಬೇಕೆಂದು ಒತ್ತಾಯಿಸಿದರು ಇದಕ್ಕೆ ಎಲ್ಲಾ ಸದಸ್ಯರು ಒಮ್ಮತ ಸೂಚಿಸಿದರು. ಇದಕ್ಕೆ ಉತ್ತರಿಸಿದ ಮುಖ್ಯಾಧಿಕಾರಿ ಈ ಬಗ್ಗೆ ಕಾನೂನು ರೀತಿಯಾಗಿ ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ಸದಸ್ಯ ಸಿ.ಎಂ.ರಂಗಸ್ವಾಮಿ ಮಾತನಾಡಿ ಸಂತೆಯ ಹರಾಜಿನಿಂದ ಪುರಸಭೆಗೆ ಆದಾಯ ಬರುತ್ತಿದೆ ಅದರೆ ಮಳೆಗಾಲದಲ್ಲಿ ಸಂತೆಯ ಒಳಗೆ ಹೋಗಲು ಸಾರ್ವಜನಿಕರು ಹಾಗೂ ವ್ಯಾಪಾರಸ್ಥರಿಗೆ ಬಹಳ ತೊಂದರೆಯಾಗುತ್ತಿದ್ದು ಈ ಬಗ್ಗೆ ಸೂಕ್ರವಾದ ವ್ಯವಸ್ಥೆ ಕಲ್ಪಿಸುವಂತೆ ತಿಳಿಸಿದರು.
ಇದಕ್ಕೆ ಧ್ವನಿಗೂಡಿಸಿದ ಸದಸ್ಯ ಸಿ.ಟಿ.ದಯಾನಂದ್ ಪ್ರತಿದಿನ ನಡೆಯುವಂತಹ ಮಾರುಕಟ್ಟೆಯ ಶೌಚಾಲಯ ನಿಮರ್ಿಸುವಂತೆ ಒತ್ತಾಯಿಸಿದರು. ಈ ಬಗ್ಗೆ ಯಾವುದೇ ಮನವಿಗಳು ನಮಗೆ ಬಂದಿಲ್ಲ ಎಂದು ಮುಖ್ಯಾಧಿಕಾರಿ ತಿಳಿಸಿದರು.
ಸಭೆಯಲ್ಲಿ 2015-16ನೇ ಸಾಲಿಗೆ ಶೇ 24.10%, ಶೇ 7.25% ಹಾಗೂ ಶೇ 3% ಯೋಜನೆಯಡಿ ಸ್ವೀಕರಿಸಿರುವ ಅಜರ್ಿಗಳಲ್ಲಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡುವ ಸಂಬಂಧ ಪುರಸಭಾ ಸದಸ್ಯರು ತಲಾ ಇಬ್ಬರನ್ನು ನಾವೇ ಆಯ್ಕೆಮಾಡುತ್ತೇವೆ ಎಂದು ತೀಮರ್ಾನಿಸಿದರು, 2014-15 ಹಾಗೂ 2015-16 ನೇಸಾಲಿನ ಎಸ್.ಎಫ್.ಸಿ.ಮುಕ್ತನಿಧಿ ಹಾಗೂ ಪುರಸಭಾ ನಿಧಿಯ ಅನುದಾನದಲ್ಲಿ ಅನುಮೋದನೆಗೊಂಡಿರುವ 24.10% ಹಾಗೂ 7.25% ಯೋಜನೆಯಡಿ ಯುವಕ ಯುವತಿಯರಿಗೆ ಕಂಪ್ಯೂಟರ್ ತರಬೇತಿ ನಡೆಸಲು ಘಟನೋತ್ತರ ಮಂಜೂರಾತಿ ಮೇರೆಗೆ ಕಿಯೋನಿಕ್ಸ್ ತರಬೇತಿ ಸಂಸ್ಥೆಗೆ ಕಾರ್ಯದೇಶ ನೀರುವ ಕುರಿತು ಅನುಮೋದಿಸಲಾಯಿತು. 2015-16ನೇ ಸಾಲಿಗೆ ಡಾ|| ಬಿ.ಆರ್.ಅಂಬೇಡ್ಕರ್ ನಿವಾಸ್ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ನಿವೇಶನ ಹೊಂದಿರುವ ಫಲಾನುಭವಿಗಳಿಗೆ ಮನೆ ಕಟ್ಟಲು ಪ್ರೋತ್ಸಾಹ ಧನ ನೀಡುವ ಸಂಬಂಧ ಸದಸ್ಯರುಗಳೇ ತಮ್ಮ ತಮ್ಮ ವಾಡರ್ಿನಲ್ಲಿ ಫಲಾನುಭವಿಗಳನ್ನು ಆಯ್ಕೆಮಾಡುವುದಾಗಿ ತಿಳಿಸಿದರು.
ಈ ಸಂದರ್ಭಲ್ಲಿ ವಿವಿಧ ಭೂ ಪರಿವರ್ತನೆಗೆ ಬಂದಿದ್ದಂತಹ ಅಜರ್ಿಗಳಿಗೆ ಹಾಗೂ ವಿವಿಧ ಟೆಂಡರ್ ಕಾಮಗಾರಿಗಳಿಗೆ ಅನುಮೋದನೆ ನೀಡಲಾಯಿತು.
ಸಭೆಯಲ್ಲಿ ಉಪಾಧ್ಯಕ್ಷೆ ನೇತ್ರಾವತಿ, ಸ್ಥಾಯಿಸಮಿತಿ ಅಧ್ಯಕ್ಷ ಮಲ್ಲೇಶಯ್ಯ, ಸದಸ್ಯರಾದ ರೂಪ,  ಇಂದಿರಾ, ಧರಣಿ, ರೇಣುಕಮ್ಮ, ಸಿ.ಎಸ್.ರಮೇಶ್, ರಾಜಶೇಖರ್, ತಿಮ್ಮಪ್ಪ, ಎಂ.ಕೆ.ರವಿಚಂದ್ರ, ಕೃಷ್ಣಮೂತರ್ಿ, ಇತರರು ಇದ್ದರು.
 ನಿವೃತ್ತ ನೌಕರರ ದಿನಾಚಾರಣೆ : ಡಾ.ಯತೀಶ್ವರ ಶಿವಾಚಾರ್ಯಸ್ವಾಮೀಜಿ ಉದ್ಘಾಟನೆ
ಚಿಕ್ಕನಾಯಕನಹಳ್ಳಿ,ಫೆ.27 : ಒಂಟಿತನ ಹೊಗಲಾಡಿಸಲು ಸ್ನೇಹಿತರ ಜೊತೆಯಲ್ಲಿ ಲವಲವಿಕೆಯಿಂದ ಇದ್ದರೆ ಚಿಂತೆಗಳು ದೂರವಾಗುತ್ತದೆ ಇದರಿಂದ ಆರೋಗ್ಯವೂ ಸಧಾರಣೆಯಾಗಲಿದೆ ಎಂದು ಕುಪ್ಪೂರು ಗದ್ದಿಗೆ ಮಠದ ಡಾ.ಯತೀಶ್ವರ ಶಿವಾಚಾರ್ಯಸ್ವಾಮೀಜಿ ಹೇಳಿದರು. 
ಪಟ್ಟಣದಲ್ಲಿನ ನೆಹರು ಸರ್ಕಲ್ ಬಳಿ ಇರುವ ನಿವೃತ್ತ ನೌಕರರ ಸಂಘದ ಕಟ್ಟಡದ ಆವರಣದಲ್ಲಿ ನಡೆದ ನಕರ ರವರ ಮತ್ತು ನಿವೃತ್ತ ನೌಕರರ ದಿನಾಚಾರಣೆ, 30ನೇ ವರ್ಷದ ಸರ್ವ ಸದಸ್ಯರ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಅವರು, ನಿವೃತ್ತಿಯಾದ ಸಕರ್ಾರಿ ನೌಕರರು ಚಟುವಟಿಕೆಯಿಂದ ಇದ್ದರೆ ಉತ್ತಮ ಆರೋಗ್ಯ ಹೊಂದಲು ಸಾಧ್ಯ  ಎಂದ ಅವರು ದೇಶ ಕಾಯುವ ಸೈನಿಕರು ಎಷ್ಟು ಮುಖ್ಯವೋ ಸಮಾಜದ ಅಭಿವೃದ್ದಿ ಹಾಗೂ ಒಳಿತಿಗೆ ಚಿಂತನೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯವು ಹೌದು, ನಿವೃತ್ತಿಯಾದ ಶಿಕ್ಷಕರು ಶಾಲೆಗಳಿಗೆ ತೆರಳಿ ತಮ್ಮ ತಮ್ಮ ಅನುಭವ ಹೇಳುವುದರ ಜೊತೆಯಲ್ಲಿ ಮಕ್ಕಳಿಗೆ ಉತ್ತಮ ಪ್ರಜೆಗಳಾಗುವಂತೆ ಸಲಹೆ ನೀಡುವಂತೆ ತಿಳಿಸಿದರು.
ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ, ನಿವೃತ್ತ ಜೀವನದಲ್ಲಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಮಾಜವನ್ನು ಸರಿ ದಾರಿಗೆ ತರುವ ಜವಬ್ದಾರಿ ನಿವೃತ್ತಿ ನೌಕರರ ಮೇಲಿದೆ, ಶಿಕ್ಷಕರು ಶಿಸ್ತುಬದ್ದ ಜೀವನ ನಡೆಸಿಕೊಂಡು ಬರುತ್ತಿದ್ದಾರೆ ಇದರಿಂದ ಶಿಕ್ಷಕರಲ್ಲಿ ಆರೋಗ್ಯ ಉತ್ತಮವಾಗಿದ್ದು ನಿವೃತ್ತ ನೌಕರರು ಆರೋಗ್ಯ ಕಾಪಾಡಿಕೊಂಡು ಹೋಗುವುದರ ಜೊತೆಯಲ್ಲಿ ನಿಮಗೆ ಬೇಕಾದ ಸವಲತ್ತಗಳನ್ನು ನೀಡುವುದು ನಮ್ಮ ಜವಬ್ದಾರಿ ನಿವೃತ್ತ  ನೌಕರರ ಕಟ್ಟಡದಲ್ಲಿ ಅರ್ಧಕ್ಕೆ ನಿಂತಿರುವ ಶೌಚಾಲಯ ಪೂರ್ಣಗೊಳಿಸಲು ಹಾಗೂ  ವಾಚನಾಲಯಕ್ಕೆ ಪುಸ್ತಕಗಳನ್ನು ನೀಡುವುದಾಗಿ ತಿಳಿಸಿದರು. 
ತಾ.ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ರಾಮಯ್ಯ ಮಾತನಾಡಿ, ನಿವೃತ್ತ ನೌಕರರು ಸೇವೆಯಿಂದ ನಿವೃತ್ತರಾಗುತ್ತಾರೆ ಹೊರೆತು ಒಂದಲ್ಲಾ ಒಂದ ರೀತಿಯಲ್ಲಿ ಸಮಾಜ ಸೇವೆಯಲ್ಲಿ ತೊಡಗಿರುತ್ತಾರೆ, ಬ್ರಿಟೀಷ್ ಸಕರ್ಾರವಿದ್ದಾಗ ನೌಕರರಲ್ಲಿಯೇ ತಾರತಮ್ಯ ನೀತಿ ಅನುಸರಿಸುತ್ತಿದ್ದರು, ಆ ಸಮಯದಲ್ಲಿ ಬ್ರಿಟೀಷ್ ಆಳ್ವಿಕೆಯಲ್ಲಿ ಫೈನಾನ್ಷಿಯಲ್ ಅಡ್ವೆಂಚರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ನಕರರವರು,  ಈ ದ್ವಂದ್ವ ನೀತಿ ತೊಲಗಿಸಲು ಸಂಘ ಕಟ್ಟುವ ಮೂಲಕ ಪ್ರತಿಭಟಿಸಿದರು. ನಂತರ ನಕರರವರ ಹೋರಾಟದಿಂದ ಸುಪ್ರಿಂ ಕೋಟರ್್ನಲ್ಲಿ  ತೀಮರ್ಾನವಾಗಿ, ನಿವೃತ್ತರಿಗೆ ಪಿಂಚಣಿ ಕೊಡುವುದರಿಂದ ಸಕರ್ಾರಕ್ಕೆ ಯಾವುದೇ ಅನ್ಯಾಯವಿಲ್ಲ, ನೌಕರರು ಯುವಕರಾಗಿದ್ದಾಗ ಆಯಾ ಸಂಸ್ಥೆ, ಇಲಾಖೆಗಳಿಗೆ ಕಷ್ಟ ಬಿದ್ದು ಕೆಲಸ ಮಾಡಿರುತ್ತಾರೆ ಅವರ ಸೇವೆಗೆ ನಿವೃತ್ತಿ ನಂತರ ಪಿಂಚಣಿ ಕೊಡಬಹುದು ಎಂದು ತೀಪರ್ು ನೀಡಿತು,  ಈ ತೀಪರ್ಿನ ಸಂತಸದಿಂದಲೇ ನಿವೃತ್ತ ನೌಕರರು ನಕರರವರ ದಿನಾಚಾರಣೆ ಆಚರಿಸುತ್ತಿದ್ದಾರೆ, ತಾಲ್ಲೂಕಿನಲ್ಲಿ ನಿವೃತ್ತ ನೌಕರರ ಸಂಘ 30ವರ್ಷದಿಂದ ಜನ್ಮದಿನಾಚಾರಣೆ ಹಮ್ಮಿಕೊಂಡು ಬರುತ್ತಿದೆ ಎಂದರು.
ತಾ.ನಿವೃತ್ತ ನೌಕರರ ಸಂಘದ ಪ್ರಧಾನ ಕಾರ್ಯದಶರ್ಿ ಸಿ.ಡಿ.ರುದ್ರಮುನಿ ಮಾತನಾಡಿ, ತಾಲ್ಲೂಕಿನ ನಿವೃತ್ತ ನೌಕರರ ಸಂಘ ಮೊದಲು ಹುಳಿಯಾರಿನಲ್ಲಿ ಆರಂಭವಾಯಿತು, ನಂತರದ ದಿನಗಳಲ್ಲಿ ಪಟ್ಟಣದಲ್ಲಿ ನಿವೇಶನ ದೊರೆತು ಶಾಸಕರ ಹಾಗೂ ಹಲವರ ನೆರವಿನಿಂದ ಸುಸಜ್ಜಿತ ಕಟ್ಟಡ ಪ್ರಾರಂಭವಾಗಿ ಕಾರ್ಯಕ್ರಮಗಳು ನೆರವೇರತೊಡಗಿದವು ಹಾಗೂ ನಿವೃತ್ತ ನೌಕರರ ಸಂಘ ಬಲವಾಗಿ ಬೆಳೆಯಿತು ಎಂದರಲ್ಲದೆ ಸಂಘದ ಮೂಲಕ ನಿವೃತ್ತ ನೌಕರರ ಸಮಸ್ಯೆಗಳನ್ನು ಪರಿಹರಿಸುವುದು, ನೌಕರರಿಗೆ ಬೇಕಾಗಿರುವ ಮಾಹಿತಿ ನೀಡುವಂತಹ ಕೆಲಸಗಳನ್ನು ಸಂಘ ಮಾಡುತ್ತಿದೆ ಎಂದರು.
ತುಮಕೂರು ಜಿಲ್ಲಾ ನಿವೃತ್ತ ನೌಕರರ ಸಂಘದ ನಿದರ್ೇಶಕರಾದ ಸಾವಿತ್ರಿಮೂತರ್ಿ ಮಾತನಾಡಿ, ಯಾವುದೇ ಕೆಲಸಗಳು ಸುಲಭವಾಗಿ ಆಗಬೇಕಾದರೆ ಮುಂದೆ ಗುರಿಯಿರಬೇಕು ಹಿಂದೆ ಗುರುವಿರಬೇಕು ಆದರೆ ಇತ್ತೀಚಿನ ದಿನಗಳಲ್ಲಿ ಯುವಕರು ಗುರಿ ಹಾಗೂ ಗುರು ಇಬ್ಬರನ್ನೂ ಮರೆಯುತ್ತಾ, ಕುರಿಮಂದೆಯಂತೆ ಸಾಗುತ್ತಿದ್ದಾರೆ ಇದರಿಂದ ಯುವಶಕ್ತಿ ಸಾಧಿಸುವ ಛಲವನ್ನು ಕಳೆದುಕೊಳ್ಳುತ್ತಿದೆ ಎಂದರಲ್ಲದೆ ಹಿರಿಯರಾದ ನಾವುಗಳು ಮುಂದಿನ ಪೀಳಿಗೆಗೆ ಅನುಸರಿಸಬೇಕಾದಂತಹ ಮಾರ್ಗದರ್ಶನಗಳನ್ನು ನೀಡಬೇಕು, ಸಂಸ್ಕೃತಿ, ಧರ್ಮವನ್ನು ರಕ್ಷಿಸುವ ಬಗ್ಗೆ ತಿಳಿಸಬೇಕು ಎಂದು ಸಲಹೆ ನೀಡಿದರು. 
ಕಾರ್ಯಕ್ರಮದಲ್ಲಿ 75ವರ್ಷ ತುಂಬಿದ ಹಿರಿಯ ನಿವೃತ್ತ ನೌಕರರಿಗೆ ಹಾಗೂ ಜಿಲ್ಲಾ ಮಟ್ಟದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ಪ್ರತಿಭಾನ್ವಿತ ವಿದ್ಯಾಥರ್ಿಗಳ ಪೋಷಕರಿಗೆ ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಪುರಸಭಾ ಮುಖ್ಯಾಧಿಕಾರಿ ಪಿ.ಶಿವಪ್ರಸಾದ್, ಪ್ರಾಂಶುಪಾಲರಾದ ಎನ್.ಇಂದಿರಮ್ಮ, ಕನ್ನಡ ಸಂಘದ ಕಾರ್ಯದಶರ್ಿ ಸಿ.ಬಿ.ರೇಣುಕಸ್ವಾಮಿ, ಪುರಸಭಾ ಸದಸ್ಯ ಸಿ.ಎಂ.ರಂಗಸ್ವಾಮಯ್ಯ, ನಿವೃತ್ತ ನೌಕರ ದಾನಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ತಾತಯ್ಯನವರ ಉರುಸ್ ಫೆ.29ರಿಂದ ಮಾಚರ್್ 2ರವರೆಗೆ
ಚಿಕ್ಕನಾಯಕನಹಳ್ಳಿ,ಫೆ.25 : ಪಟ್ಟಣದ ಹಜರತ್ ಸೈಯದ್ ಮೊಹಿದ್ದೀನ್ ಷಾ ಖಾದ್ರಿಯವರ 56ನೇ ವರ್ಷದ ತಾತಯ್ಯನವರ ಉತ್ಸವ ಹಾಗೂ ಉರುಸ್ ಕಾರ್ಯಕ್ರಮ ಫೆ.29ರಿಂದ ಮಾಚರ್್ 2ರವರೆಗೆ ನಡೆಯಲಿದೆ.
29ರಂದು ರಾತ್ರಿ 7.30ಕ್ಕೆ ತಾತಯ್ಯನವರ ಗೋರಿಯಿಂದ ಹೊರಟ ಉತ್ಸವ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿದ್ಯುತ್ ದೀಪದ ಅಲಂಕಾರದಿಂದ ಹೂವಿನ ಮಂಟಪದಲ್ಲಿ ವಾದ್ಯಗೋಷ್ಠಿಯೊಂದಿಗೆ ಮೆರವಣಿಗೆ ಗೋರಿಯನ್ನು ತಲುಪಲಿದೆ, ನಂತರ ಪಾತಹಾಖಾನಿ ಕಾರ್ಯಕ್ರಮ ನಡೆಯಲಿದೆ. 
ಮಾಚರ್್ 1ರಂದು 9ಗಂಟೆಗೆ ಪಟ್ಟಣದ ಸಕರ್ಾರಿ ಪ್ರೌಢಶಾಲಾ ಮೈದಾನದಲ್ಲಿ ತಮನ್ನ ಬಾನು ಮತ್ತು ತಯ್ಯಬ್ ಉರುಫ್ ಅವರಿಂದ ಜಿದ್ದಾಜಿದ್ದಿನ ಖವ್ವಾಲಿ. ಮಾಚ 2ರಂದು ಕನ್ನಡ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.