Monday, June 20, 2016ರೈತರು ಸಕರ್ಾರದ ಯೋಜನೆಗಳನ್ನು ತಿಳಿಯಬೇಕು : ತಾ.ಪಂ.ಸದಸ್ಯೆ ಶೈಲಾಶಶಿಧರ್
ಚಿಕ್ಕನಾಯಕನಹಳ್ಳಿ,ಜೂ.20 : ಇಲಾಖಾ ಮಟ್ಟ ಶಿಬಿರ, ಸಭೆ, ಕಾಯರ್ಾಗಾರಗಳಿಗೆ ರೈತರು ಭಾಗವಹಿಸಿ ಹಾಗೂ ಆಗಾಗ್ಗೆ ಕಛೇರಿಗಳಿಗೆ ತೆರಳಿ ಸಕರ್ಾರಿ ಯೋಜನೆಗಳ ಬಗ್ಗೆ ಮಾಹಿತಿ ಪಡೆಯಿರಿ ಎಂದು ತಾ.ಪಂ.ಸದಸ್ಯೆ ಶೈಲಶಶಿಧರ್ ಹೇಳಿದರು.
ಪಟ್ಟಣದ ಕಸಬಾ ರೈತ ಸಂಪರ್ಕ ಕೇಂದ್ರದ ಆವರಣದಲ್ಲಿ ಸೋಮವಾರ ನಡೆದ ಕೃಷಿ ಅಭಿಯಾನ-ಇಲಾಖೆಗಳ ನಡಿಗೆ ರೈತರ ಬಾಗಿಲಿಗೆ ಸಂವಾದದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವೈದ್ಯರು, ಇಂಜನಿಯರ್ಗಳಿಗಿಂತ ರೈತರು ಕಡಿಮೆಯೇನಲ್ಲ, ದೇಶಕ್ಕೆ ಅನ್ನ ನೀಡುವ ರೈತ ದೇಶ ಕಾಯುವ ಸೈನಿಕರಿಗಿಂತ ಶ್ರೇಷ್ಠ ಎಂದರು.
   ಅಧಿಕಾರಿಗಳು ಯೋಜನೆಗಳ ಬಗ್ಗೆ ರೈತರಿಗೆ  ಸರಿಯಾದ ಮಾಹಿತಿ ನೀಡದೇ ಸಕರ್ಾರದ ಯೋಜನೆಗಳು ನಿಜವಾದ ರೈತರಿಗೆ ತಲುಪುತ್ತಿಲ್ಲ. ಹಿಂದೆ ಮನುಷ್ಯರಿಗೆ ಮಾತ್ರ ಜೀವವಿಮೆ ಮಾಡಿಸಲಾಗುತ್ತಿತ್ತು ಈಗ ಬೆಳೆಗಳಿಗೂ ವಿಮೆ ಮಾಡಿಸುವ ಅವಕಾಶವಿದೆ ಇಂತಹ ಸಕರ್ಾರದ ಹೊಸ ಯೋಜನೆಗಳನ್ನು ಬಳಸಿಕೊಳ್ಳಿ ಎಂದರು.
ತಾಲ್ಲೂಕು ಕೃಷಿ ಇಲಾಖೆ ಸಹಾಯಕ ನಿದರ್ೇಶಕ ಹೊನ್ನದಾಸೇಗೌಡ ಮಾತನಾಡಿ, ರೈತರಿಗೆ ಸಕರ್ಾರದಿಂದ ಬರುವಂತಹ ವಿವಿಧ ಯೋಜನೆಗಳ ಮಾಹಿತಿ ನೀಡುತ್ತಿದ್ದೇವೆ. ಈಗಾಗಲೇ ಇಲಾಖಾವಾರು ಬೀಜ, ಗೊಬ್ಬರ, ಯಂತ್ರೋಪಕರಣಗಳು, ಲಘು ಪೋಷಕಾಂಷಗಳ ಗೊಬ್ಬರ ವಿತರಣೆ ಮಾಡಲಾಗುತ್ತಿದೆ. ಕೃಷಿ ಇಲಾಖೆಗೆ 2016-17ನೇ ಸಾಲಿನಲ್ಲಿ ಕನರ್ಾಟಕ ಸುರಕ್ಷಾ ರೈತ ಫಸಲ್ ಭೀಮ ಯೋಜನೆ ಎಂಬ ಹೊಸ ಕಾರ್ಯಕ್ರಮ ಆರಂಭವಾಗಿದೆ.ಈ ಯೋಜನೆಗೆ ರೈತರು ಬಳಸಿಕೊಳ್ಳಬೇಕು. ಬ್ಯಾಂಕ್ಗಳಿಗೆ ಬೆಳೆ ವಿಮಾ ಕಂತನ್ನು  ಪಾವತಿಸಿದರೆ ಬೆಳೆ ನಷ್ಟದ ಪರಿಹಾರ ಈ ಯೋಜನೆ ಮೂಲಕ ದೊರಕಲಿದೆ ಎಂದರು.  
ಗಾಂಧಿ ಕೃಷಿ ವಿಶ್ವವಿದ್ಯಾಲಯದ ಕೀಟಶಾಸ್ತ್ರಜ್ಞ ಡಾ.ಹನುಮಂತಯ್ಯ ಮಾತನಾಡಿ, ಕೃಷಿ ಯೋಜನೆಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲದೆ ರೈತರು ಕೃಷಿಯಿಂದ ವಿಮುಖವಾಗುತ್ತಿದ್ದಾರೆ. ಕೃಷಿಯಲ್ಲಿ ದೊರಕುವ ವಿಮೆಯಿಂದಲೇ ನಷ್ಟ ಪರಿಹಾರ ದೊರಕಲಿದೆ. ಇಂತಹ ಯೋಜನೆಗಳ ಬಗ್ಗೆ ರೈತರು ಮಾಹಿತಿ ಪಡೆಯಬೇಕು ಎಂದರು.
ಕಾರ್ಯಕ್ರಮದಲ್ಲಿ ತಾ.ಪಂ.ಉಪಾಧ್ಯಕ್ಷ ಟಿ.ಜಿ.ತಿಮ್ಮಯ್ಯ, ಸಾಮಾಜಿಕ ಅರಣ್ಯ ಇಲಾಖೆ ಅಧಿಕಾರಿ ತಾರಕೇಶ್ವರಿ, ರೇಷ್ಮೆ ಇಲಾಖೆ ಅಧಿಕಾರಿ ಇಂದ್ರಾಣಿ, ಹೊನ್ನೆಬಾಗಿ ಗ್ರಾ.ಪಂ.ಅಧ್ಯಕ್ಷೆ ಲೋಕಮ್ಮ, ಸದಸ್ಯ ಮಲ್ಲೇಶಯ್ಯ, ಗ್ರಾ.ಪಂ.ಉಪಾಧ್ಯಕ್ಷೆ ಅನುಸೂಯಮ್ಮ, ಸದಸ್ಯ ರಾಜೇಶ್ವರಿ, ಜಿಕೆವಿಕೆಯ ನೋಡಲ್ ಆಫೀಸರ್ ಹನುಮಂತಪ್ಪ, ತೋಟಗಾರಿಕಾ ಇಲಾಖೆ ಅಧಿಕಾರಿ ಮಂಜು ಮತ್ತಿತರರು ಉಪಸ್ಥಿತರಿದ್ದರು.


ಪುರಸಭೆ ಮುಂದೆ ದಲಿತ ಸಂಘಟನೆಗಳ ಪ್ರತಿಭಟನೆ 
ಚಿಕ್ಕನಾಯಕನಹಳ್ಳಿ,ಜೂ.20 :  ಪುರಸಭಾ ಮುಖ್ಯಾಧಿಕಾರಿ ಪಿ.ಶಿವಪ್ರಸಾದ್ ವಗರ್ಾವಣೆ ಹಾಗೂ ಪುರಸಭೆಯಲ್ಲಿ ನಡೆದಿರುವ ಕಾಮಗಾರಿಗಳ ತನಿಖೆಗೆ ಆಗ್ರಹಿಸಿ ಪುರಸಭೆಯ ಕಚೇರಿಯ ಮುಂಭಾಗದಲ್ಲಿ ವಿವಿಧ ದಲಿತ ಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಸೋಮವಾರ ಪ್ರತಿಭಟನೆ, ಧರಣಿ ನಡೆಸಿದರು.
ದಲಿತ ಸಂಘರ್ಷ ಸಮಿತಿ ತಾಲ್ಲೂಕು ಘಟಕದ ಸಂಚಾಲಕ ಸಿ.ಎಸ್.ಲಿಂಗದೇವರು ಮಾತನಾಡಿ, ಕೆಲವು ಪಟ್ಟಭದ್ರ ಹಿತಾಸಕ್ತಿಗಳು ದಕ್ಷ ಅಧಿಕಾರಿಯಾಗಿದ್ದ ಮುಖ್ಯಾಧಿಕಾರಿ ಪಿ.ಶಿವಕುಮಾರ್ರನ್ನು ವಗರ್ಾವಾಣೆ ಮಾಡಿಸಿದ್ದಾರೆ. ಕೂಡಲೇ ವಗರ್ಾವಣೆಯನ್ನು ರದ್ದುಗೊಳಿಸಬೇಕು. ಪುರಸಭೆಯಲ್ಲಿ ಸುಮಾರು ಹತ್ತಾರು ವರ್ಷಗಳಿಂದ ಇಲ್ಲೇ ಕೆಲಸ ನಿರ್ವಹಿಸುತ್ತಿರುವ ಕೆಲವು ನೌಕರರನ್ನು ವಗರ್ಾವಣೆ ಮಾಡಬೇಕು ಹಾಗೂ ಪುರಸಭೆ  ವ್ಯಾಪ್ತಿಯಲ್ಲಿ ನಡೆದಿರುವಂತಹ ಕಾಮಗಾರಿಗಳು ಕಳಪೆ ಗುಣಮಟ್ಟದಿಂದ ಕೂಡಿದ್ದು ಸೂಕ್ತ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದರು.
 ಸುಮಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಪೌರಕಾಮರ್ಿಕರ ಪಿ.ಎಫ್.ಹಣವನ್ನು ಖಾತೆಗೆ ಜಮಾ ಮಾಡಬೇಕು, ಪೌರ ಕಾಮರ್ಿಕರಿಗೆ ಮೂಲಭೂತ ಸವಲತ್ತುಗಳನ್ನು ಕೂಡಲೇ  ಕೊಡಮಾಡಬೇಕು. ಈ ಎಲ್ಲಾ ಬೇಡಿಕೆಗಳನ್ನು ಎಂಟು ದಿನಗಳ ಅವಧಿಯಲ್ಲಿ  ಈಡೇರಿಸಬೇಕು, ಇಲ್ಲವಾದರೆ ಜಿಲ್ಲಾ ಮಟ್ಟದಲ್ಲಿ ಹೋರಾಟ ಮುಂದುವರೆಸಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನಾಕಾರರು ಪಟ್ಟಣದ ಕನ್ನಡ ಸಂಘದ ವೇಧಿಕೆಯಿಂದ ಮೆರವಣಿಗೆ ಹೊರಟು ಪುರಸಭಾ ಕಚೇರಿ ಮುಂಭಾಗ ಧರಣಿ ಕುಳಿತರು. ಪ್ರತಿಭಟನಾ ಸ್ಥಳಕ್ಕೆ ತಹಶಿಲ್ದಾರ್ ಆರ್.ಗಂಗೇಶ್ ತೆರಳಿ ಮನವಿ ಸ್ವೀಕರಿಸಿ, ಮುಂದಿನ ಕ್ರಮಕ್ಕೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂಪಡೆಯಲಾಯಿತು. 
ಪ್ರತಿಭಟನೆಯಲ್ಲಿ ದಲಿತ ಮುಖಂಡರುಗಳಾದ ಕಂಟಲಗೆರೆ ರಂಗಸ್ವಾಮಿ, ನಾರಾಯಣರಾಜು, ಗೋ.ನಿ.ವಸಂತ್ಕುಮಾರ್, ಕೃಷ್ಣಮೂತರ್ಿ, ಗೋವಿಂದರಾಜು, ಪ್ರಸನ್ನಕುಮಾರ್, ಲೋಕೇಶ್, ಶಿವಣ್ಣ, ಗಿರೀಶ್, ದಲಿತ ವಿದ್ಯಾಥರ್ಿ ಒಕ್ಕೂಟದ ಮುಖಂಡ ಮುರುಳಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. 

ದುಡಿಮೆಯಲ್ಲಿ ಸ್ವಲ್ಪ ಭಾಗವನ್ನು ಸಮಾಜಕ್ಕೆ ಕೊಡಿ : ಹೊಸೂರಪ್ಪ
ಚಿಕ್ಕನಾಯಕನಹಳ್ಳಿ,ಜೂ.20 : ಹಲವರಿಂದ ದೊರೆತ ಸಲಹೆ ಸಹಕಾರದಿಂದ ವ್ಯಕ್ತಿತ್ವ ರೂಪುಗೊಂಡಿರುತ್ತದೆ.ದುಡಿಮೆಯಲ್ಲಿ ಸ್ವಲ್ಪ ಭಾಗವನ್ನು ಹಿಂದಿರುಗಿಸುವ ಮೂಲಕ ಸಮಾಜದ ಋಣ ತೀರಿಸಬೇಕು, ಆಗ ಮಾತ್ರ ಮನುಷ್ಯರಾಗಿ ಹುಟ್ಟದ್ದಕ್ಕೆ ಸಾರ್ಥಕತೆ ದೊರೆಯುತ್ತದೆ ಎಂದು ಎವರ್ಗ್ರೀನ್ ಚಾರಿಟಬಲ್ ಟ್ರಸ್ಟ್ನ ಅಧ್ಯಕ್ಷ ಸಿ.ಎಂ.ಹೊಸೂರಪ್ಪ ಹೇಳಿದರು.
ಪಟ್ಟಣದ ಕುರುಬರಶ್ರೇಣಿ ಶಾಲೆಯಲ್ಲಿ ಎವರ್ಗ್ರೀನ್ ಚಾರಿಟಬಲ್ ಟ್ರಸ್ಟ್, ಮಮತೆಯ ಮಡಿಲು ಅನಾಥಾಶ್ರಮ ವತಿಯಿಂದ ಸೋಮವಾರ ಏರ್ಪಡಿಸಿದ್ದ ಉಚಿತ ನೋಟ್ಬುಕ್ ವಿತರಣಾ ಸಮಾರಂಭದಲ್ಲಿ ಮಾತನಾಡಿದರು.
ಕನ್ನಡ ಸಂಘದ ಅಧ್ಯಕ್ಷ ಸೀಮೆಎಣ್ಣೆ ಕೃಷ್ಣಯ್ಯ ಮಾತನಾಡಿ, ದುಡಿಮೆಯ ಒಂದಂಶ ಸೇವೆಗೆ ಎಂಬ ಮನಸ್ಥಿತಿ ಬೆಳೆಸಿಕೊಂಡರೆ ಸಮಾಜದ ಉನ್ನತಿಗೆ ತನ್ನದೂ ಪುಟ್ಟ ಪಾಲಿದೆ ಎಂಬ ನೆಮ್ಮದಿ ದೊರೆಯುತ್ತದೆ, ಸೇವೆಗೆ ಬಹಳ ಮಹತ್ವದ ಸ್ಥಾನವಿದೆ. ಜೀವನದಲ್ಲಿ ಸೇವೆಗೆ ಸಮಯವನ್ನು ನೀಡಬೇಕು ಎಂದರು.
ಮುಖ್ಯೋಪಾಧ್ಯಾಯ ತಿಮ್ಮಾಬೋವಿ ಮಾತನಾಡಿ, ಎವರ್ಗ್ರೀನ್ ಟ್ರಸ್ಟ್ ಚಾರಿಟಬಲ್ ಟ್ರಸ್ಟ್, ಹಳೆ ವಿದ್ಯಾಥರ್ಿಗಳ ಸಂಘ ಹಾಗೂ ಮಮತೆಯ ಮಡಿಲು ಸಂಸ್ಥೆಗಳು ಸಹಾಯ ಹಸ್ತ ನೀಡುತ್ತಿದ್ದು ಮಕ್ಕಳ ಶೈಕ್ಷಣಿಕ ಪ್ರಗತಿಗೆ ನೆರವಾಗುತ್ತಿವೆ ಎಂದರು.
ಶಾಲಾ ಅಭಿವೃದ್ಧಿ ಸಂಘದ ಅಧ್ಯಕ್ಷ ರಾಜೇಶ್, ಶಿಕ್ಷಕರಾದ ಶಿವಕುಮಾರ್, ಮೋಹನ್, ಚಂದ್ರಮತಿ, ಸಿ.ಟಿ.ರೇಖಾ, ಶಾಂತಮ್ಮ, ಸಾಕಮ್ಮ ಹಾಗೂ ಎವರ್ಗ್ರೀನ್ ಚಾರಿಟಬಲ್ ಟ್ರಸ್ಟ್ನ ಚನ್ನಬಸವಯ್ಯ, ಗಣೇಶ್ಕುಮಾರ್, ಹನುಮೇಶ್ ಮತ್ತಿತರರು ಉಪಸ್ಥಿತರಿದ್ದರು.

ವಿಜೃಂಭಣೆಯಾಗಿ ನೆರವೇರಿದ ಕಾರಬ್ಬ

ಚಿಕ್ಕನಾಯಕನಹಳ್ಳಿ,ಜೂ.20 : ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧ ಹೋಬಳಿಗಳಲ್ಲಿ ಸೋಮವಾರ ಕಾರಬ್ಬದ ಸಂಭ್ರಮ ಕಂಡುಬಂದಿತು.
ಸೋಮವಾರ ಸಂಜೆ ಪಟ್ಟಣದ ರೈತರು ಉಳುಮೆ ರಾಸುಗಳನ್ನು ಸಿಂಗರಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ನಿವರ್ಾಣೇಶ್ವರ ಮಠ, ಸಿದ್ದೇಶ್ವರ ಮಠ, ರೇವಣ್ಣಪ್ಪನ ಮಠಗಳಿಂದ ಹೊರಟ ರಾಸುಗಳು ಹಳೆಯೂರು ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಸಮಾವೇಶಗೊಂಡವು, ಬಳಿಕ ನಾಲ್ಕು ಬೀದಿಗಳಲ್ಲಿ ಒಟ್ಟಾಗಿ ರಾಸುಗಳ ಮೆರವಣಿಗೆ ನಡೆಯಿತು. 
ಶೆಟ್ಟಿಕೆರೆ : ಸುಪ್ರಸಿದ್ದ ಶೆಟ್ಟಿಕೆರೆ ಕಾರಬ್ಬ ಸಂಪನ್ನಗೊಂಡಿತು, ಕರುಗಲ್ಲಿಗೆ ಕೆರೆ, ಸೊಪ್ಪು ಕಟ್ಟುವುದು, ಮಿಣಿ ಸೇವೆ, ಕರಗ ಸ್ಥಾಪನೆ, ಬ್ರಹ್ಮಲಿಂಗಕ್ಕೆ 101ಪೂಜೆ, ಬಲಿಶಾಂತಿ, ಕರಗಪೂಜೆ ಹಾಗೂ ಕಾಲಭೈರವೇಶ್ವರಸ್ವಾಮಿ, ಕೆಂಪಮ್ಮದೇವಿ, ಬಸವೇಶ್ವರಸ್ವಾಮಿ ದೇವರುಗಳ ಉತ್ಸವ ನಡೆಯಿತು.
ಕರಗ ಹೊಡೆಯುವ ಆಚರಣೆ : ಜನರೆಲ್ಲಾ ರಾತ್ರಿ ಊರ ಮಧ್ಯದ ಕರುಗಲ್ಲು ಮಂಟಪದ ಬಳಿ ನೆರೆದರು. ಕರುಗಲ್ಲು ಮಂಟಪದ ಕೆಳಗೆ ಇರಿಸಿದ್ದ ಮಡಿಕೆಯಲ್ಲಿ ನೀರು ತುಂಬಿ ಭತ್ತ, ರಾಗಿ ಸಿರಿಧಾನ್ಯಗಳು, ದ್ವಿದಳ ಧಾನ್ಯಗಳನ್ನು ತುಂಬಿಸಲಾಯಿತು. ಬಳಿಕ ಮದಲಿಂಗನನ್ನು ಕರೆತಂದು ನೇಗಿಲು ಹೂಡಿ ಕರಗದ ಮೇಲೆ ಊಡಿದ್ದ ನೇಗಿಲನ್ನು ಆಯಿಸಲಾಯಿತು. ನೇಗಿಲು ಆಯಿಸಿದಾಗ ಯಾವ ಧಾನ್ಯ ಮುಂದಕ್ಕೆ ಚಿಮ್ಮಲ್ಪಡುತ್ತದೋ ಆ ಬೆಳೆ  ಸುಭಿಕ್ಷವಾಗುತ್ತದೆ ಎಂಬ ನಂಬಿಕದೆ ಇದೆ.  ಇದಲ್ಲದೆ ತಾಲ್ಲೂಕಿನ ಕಂದಿಕೆರೆ ಹಂದನಕೆರೆ ಹಾಗೂ ಹುಳಿಯಾರು ಭಾಗಗಳಲ್ಲಿ ಕಾರಬ್ಬ ವಿಜೃಂಭಣೆಯಿಂದ ನೆರವೇರಿತು
ಚಿಕ್ಕನಾಯಕನಹಳ್ಳಿ ತಾಲ್ಲೂಕು ಬಲಿಜ ಸಮಾಜದ ವತಿಯಿಂದ, ಎಂ.ಆರ್.ಸೀತಾರಾಂರವರ ರಾಜ್ಯ ಸಕರ್ಾರದ ನೂತನ ಸಚಿವರಾಗಿ ಆಯ್ಕೆಯಾದ ಹಿನ್ನಲೆಯಲ್ಲಿ ಬಲಿಜ ಸಮಾಜದ ಮುಖಂಡರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸದರು.ಚಿಕ್ಕನಾಯಕನಹಳ್ಳಿಯಲ್ಲಿ ಮಲೇರಿಯ ವಿರೋಧಿ ಮಾಸಾಚರಣೆ ಅಂಗವಾಗಿ ವಿದ್ಯಾಥರ್ಿಗಳಿಂದ ಜಾಥಾ ಮೆರವಣಿಗೆ ನಡೆಸಲಾಯಿತು. ವೈದ್ಯಾಧಿಕಾರಿ ಶಿವಕುಮಾರ್, ಮುಖ್ಯೋಪಾಧ್ಯಾಯ ಸಿದ್ದರಾಜನಾಯ್ಕ್, ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.