Saturday, May 2, 2015


ವಕೀಲರ ಸಂಘದ ನೂತನ ಅಧ್ಯಕ್ಷರ ಆಯ್ಕೆ
ಚಿಕ್ಕನಾಯಕನಹಳ್ಳಿ, : ತಾಲ್ಲೂಕು ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ಆರ್.ಕರಿಯಪ್ಪ, ಕಾರ್ಯದಶರ್ಿಯಾಗಿ ಬಿ.ಜಿ.ಆದರ್ಶ,ಉಪಾಧ್ಯಕ್ಷರಾಗಿ ಸಿ.ರಾಜಶೇಖರ್ ಸಹಕಾರ್ಯದಶರ್ಿಯಾಗಿ ಟಿ.ರವೀಂದ್ರಕುಮಾರ್, ಖಜಾಂಚಿಯಾಗಿ ಮೋಹನ್ಪೃಥ್ವಿಪ್ರಸಾದ್ ಆಯ್ಕೆಯಾಗಿದ್ದಾರೆ.

ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹ
ಚಿಕ್ಕನಾಯಕನಹಳ್ಳಿ : ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿಯನ್ನು ಸಚಿವ ಸಂಪುಟದ ಸಭೆಯಲ್ಲಿ ಮಂಡಿಸಿ, ಕೇಂದ್ರ ಸಕರ್ಾರಕ್ಕೆ ಶಿಫಾರಸ್ಸು ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉತ್ಸುಕರಾಗಿರುವುದನ್ನು ಸ್ವಾಗತಿಸುತ್ತೇವೆ ಎಂದು ದಲಿತ ಸಂಘರ್ಷ ಸಮಿತಿ ಮುಖಂಡ ಗೋ.ನಿ.ವಸಂತ್ಕುಮಾರ್ ತಿಳಿಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸಕರ್ಾರ ಪರಿಶಿಷ್ಠ ಜಾತಿಯಲ್ಲಿನ ಶೇಕಡಾ 15ರ ಮೀಸಲಾತಿಯನ್ನು ಸಂವಿಧಾನದತ್ತವಾಗಿ, ಜನಸಂಖ್ಯಾ ಆಧಾರಿತವಾಗಿ ಪರಿಶಿಷ್ಠ ಜಾತಿಯ ಒಳಗಿನ ಮಾದಿಗರಿಗೆ ಶೇ.6%, ಛಲವಾಧಿಗಳಿಗೆ ಶೇ.5%, ಉಳಿದ ಇತರೆಯವರಿಗೆ ಶೇ.3% ಹಾಗೂ ಅಲೆಮಾರಿಗಳಿಗೆ ಶೇ.1% ಒಳ ಮೀಸಲಾತಿಯಲ್ಲಿ ವಗರ್ೀಕರಣ ಮಾಡಿ ಸಕರ್ಾರಕ್ಕೆ ಶಿಫಾರಸ್ಸು ಮಾಡಿದ್ದು, ಅಸ್ಪೃಶ್ಯತೆಯ ಅಸಮಾನತೆಯ ಬದುಕನ್ನು ಸವೆಸುತ್ತಿರುವ ಮಾದಿಗರು ಮತ್ತು ಛಲವಾದಿ(ಹೊಲೆಯ) ಸಮುದಾಯಗಳಿಗೆ ನ್ಯಾ.ಸದಾಶಿವ ವರದಿ ಜಾರಿಗೊಂಡರೆ ಈ ಸಮುದಾಯಗಳು ಸಾಮಾಜಿಕ ಮುಖ್ಯ ವಾಹಿನಿಗೆ ಬರಲು ಸಹಾಯಕವಾಗುತ್ತದೆ ತಕ್ಷಣ ಸದಾಶಿವ ವರದಿ ಜಾರಿಯಾಗಬೇಕೆಂದು ಒತ್ತಾಯಿಸಿ, ದಲಿತ ಮುಖಂಡರುಗಳಾದ ಗೋ.ನಿ.ವಸಂತ್ಕುಮಾರ್, ಸಿ.ಎಸ್.ಲಿಂಗದೇವರು ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

ತಾಂಡ ನಿವಾಸಿಗಳಿಗೆ ದುಶ್ಚಟಗಳಿಂದ ದೂರವಿರಲು
                                                          
ಜಾಗೃತಿ ಶಿಬಿರ
                             

ಚಿಕ್ಕನಾಯಕನಹಳ್ಳಿಮೇ.02 : ಯುವಕ, ಯುವತಿಯರು ಮಧ್ಯಪಾನ, ಬೀಡಿ ಸಿಗರೇಟು, ಗುಟುಕದಂತಹ ದುಷ್ಚಟಗಳಿಗೆ ಒಳಗಾಗುವುದರಿಂದ ಅವರ ಆರೋಗ್ಯದ ಮೇಲೆ ಬೀರುವ ದುಷ್ಪಣಾಮದ ಬಗ್ಗೆ ತಾಂಡ ನಿವಾಸಿಗಳಿಗೆ ಅರಿವು, ಜಾಗೃತಿ ಮೂಡಿಸಲು ಶ್ರೀ ಬಸವೇಶ್ವರ ಸಮಗ್ರ ಗ್ರಾಮೀಣ ಅಭಿವೃದ್ದಿ ಸಂಸ್ಥೆ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕನರ್ಾಟಕ ಸಕರ್ಾರದ, ಕನರ್ಾಟಕ ತಾಂಡಾ ಅಭಿವೃದ್ದಿ ನಿಗಮ ಸ್ಥಾಪನೆಯಾಗಿದ್ದು ಕನರ್ಾಟಕದಲ್ಲಿರುವ ವಿವಿಧ ತಾಂಡಗಳಿಗೆ ಮತ್ತು ತಾಂಡ ನಿವಾಸಿಗಳಿಗೆ ಅರಿವು ಮತ್ತು ಜಾಗೃತಿ ಮೂಡಿಸುವ ಕಾರ್ಯಕ್ರಮದ ಪ್ರಯುಕ್ತ ತಾಲ್ಲೂಕಿನ ಬರಗೂರು ಗ್ರಾಮ ಪಂಚಾಯಿತಿಗೆ ಸೇರಿದ ಟಿ.ತಾಂಡಾ ಗ್ರಾಮದಲ್ಲಿ ಶ್ರೀ ಬಸವೇಶ್ವರ ಸಮಗ್ರ ಗ್ರಾಮೀಣ ಅಭಿವೃದ್ದಿ ಸಂಸ್ಥಯ ಸಹಯೋಗದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಕನರ್ಾಟಕದ ತಾಂಡಾ ಅಭಿವೃದ್ದಿ ನಿಗಮದಿಂದ ಮೂಲಭೂತ ಸೌಕರ್ಯ ಒದಗಿಸುವ ಯೋಜನೆಗಳು, ತಾಂಡದಲ್ಲಿ ಸಿ.ಸಿ.ರಸ್ತೆ, ಚರಂಡಿ, ಶುದ್ದ ಕುಡಿಯುವ ನೀರು, ಬೀದಿ ದೀಪಗಳು, ವಿದ್ಯುತ್ ಸಂಪರ್ಕ, ಬಸ್ ನಿಲುಗಡೆ ಸ್ಥಳದಲ್ಲಿ ಕುಳಿತುಕೊಳ್ಳುವ ವ್ಯವಸ್ಥೆ, ಆರೋಗ್ಯ ಮತ್ತು ಶೈಕ್ಷಣಿಕ ಮೂಲ ಸೌಕರ್ಯ ಯೋಜನೆಗಳು ಆರೋಗ್ಯ ಕೇಂದ್ರಗಳು, ಆರೋಗ್ಯ ತಪಾಸಣಾ ಶಿಬಿರ ಮತ್ತು ಶೈಕ್ಷಣಿಕವಾಗಿ ಅಂಗನವಾಡಿ ಕೇಂದ್ರ ಮತ್ತು ಖುತುಮಾನ ಶಾಲೆಗಳು, ತಾಂಡ ನಿವಾಸಿಗಳಿಗಾಗಿ ಬಂಜಾರ ಜನರ ಪಾರಂಪರಿಕ ಮತ್ತು ಸಾಂಸ್ಕೃತಿಕ ಆಚಾರ ವಿಚಾರ ಸಂಪ್ರದಾಯಗಳಿಗೆ ಉತ್ತೇಜನ, 2006 ಅರಣ್ಯ ಹಕ್ಕು ಕಾಯ್ದೆ ಅನ್ವಯ ತಾಂಡಾದ ನಿವಾಸಿಗಳು ಸಕರ್ಾರಿ ಜಮೀನು, ಗೋಮಾಳ, ಅರಣ್ಯ ಭೂಮಿ ಉಳುಮೆ ಮಾಡುವವರಿಗೆ ಹಕ್ಕು ಪತ್ರ ವಿತರಣೆ ಮಾಡಿಸುವ ಬಗ್ಗೆಯೂ ಜಾಗೃತಿ ಮೂಡಿಸಲಾಯಿತು ಹಾಗೂ ಪ್ರತಿಯೊಂದು ತಾಂಡಾ ಮಟ್ಟದಲ್ಲಿ ತಾಂಡಾ ವಿಕಾಸ ಸಮಿತಿಯನ್ನು ರಚನೆ ಮಾಡುವುದು, ಅದರಲ್ಲಿ ತಾಂಡಾದ ವಂಶಪಾರಂಪಾರಿಕರಾದ ನಾಯಕ, ಡಾವೂ, ಕಾರುಭಾರಿ & ಒಬ್ಬ ವಿದ್ಯಾವಂತ ಯುವಕ/ಯುವತಿ ಹಾಗೂ ಸ್ಥಳಿಯ ಚುನಾಯಿತಿ ಪ್ರತಿನಿಧಿಗಳು ತಾಂಡಾ ವಿಕಾಸ ಸಮಿತಿಯಲ್ಲಿ ಪದಮಿತ ಸದಸ್ಯರಾಗಿರುವುದು ತಾಂಡಾ ವಿಕಾಸ ಸಮಿತಿಯ ಮುಖ್ಯ ಉದ್ದೇಶ ತಾಂಡಾವನ್ನು ನಾವೇ ಅಭಿವೃದ್ದಿ ಮಾಡವುದು ಬಗ್ಗೆ ತಿಳಿಸಲಾಯಿತು.
ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಸದಸ್ಯೆ ಚೇತನಗಂಗಾಧರ್, ರಾಜ್ಯ ತಾಂಡ ಅಭಿವೃದ್ದಿ ನಿಗಮದ ಸಂಪನ್ಮೂಲ ವ್ಯಕ್ತಿಗಳಾದ ಹರಿಯಾನಾಯ್ಕ, ಕೃಷ್ಣನಾಯ್ಕ, ಶಶಿಧರನಾಯ್ಕ, ಗ್ರಾ.ಪಂ.ಮಾಜಿ ಸದಸ್ಯರಾದ ಚಂದ್ರನಾಯ್ಕ, ಶಿಕ್ಷಕ ಮೂತರ್ಿನಾಯ್ಕ, ಗಂಗಾದರ್, ಬಡ್ಸರ್್ ಸಂಸ್ಥೆಯ ಸಿಬ್ಬಂದಿ ಶಿವಾನಂದನಾಯಕ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


ಚಿಕ್ಕನಾಯಕನಹಳ್ಳಿಯಲ್ಲಿ ಜಯಕನರ್ಾಟಕ ಸಂಘಟೆನೆಯ ಸಂಸ್ಥಾಪಕ ಅಧ್ಯಕ್ಷ ಎನ್.ಮುತ್ತಪ್ಪರೈರವರ ಹುಟ್ಟುಹಬ್ಬದ ಹಬ್ಬದ ಅಂಗವಾಗಿ ತಾ.ಜಯಕನರ್ಾಟಕ ಸಂಘಟನೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಉಚಿತ ಹಣ್ಣು, ಹಂಪಲು ವಿತರಿಸಿದರು. ಈ ಸಂದರ್ಭದಲ್ಲಿ ತಾ.ಜಯಕನರ್ಾಟಕ ಸಂಘಟನೆ ಅಧ್ಯಕ್ಷ ಹೆಚ್.ಎನ್.ವೆಂಕಟೇಶ್, ಕುಮಾರಸ್ವಾಮಿ, ಲೋಕೇಶ್, ದಯಾನಂದ್ ಮತ್ತಿತರರು ಉಪಸ್ಥಿತರಿದ್ದರು.