Friday, June 7, 2013


ಹೆಸರಿಗೆ ನಂಜು ರೋಗ, ಹಲಸಂದೆಗೆ ಕರಿಹೇನಿನ ಕೀಟಗಳ ಬಗ್ಗೆ ಎಚ್ಚರ ವಿರಲಿ
                          (ಸಿ.ಗುರುಮೂತರ್ಿ ಕೊಟಿಗೆಮನೆ)
                                         
ಚಿಕ್ಕನಾಯಕನಹಳ್ಳಿ,ಜು.7: ಬರಗಾಲದ ಬೇಗೆಗೆ ಕಂಗಾಲಾಗಿದ್ದ ರೈತರು ಬಿದ್ದ ಅಲ್ಪ ಸ್ವಲ್ಪ ಮಳೆಗೆ ಹೊಲಗಳನ್ನು ಅಸನು ಮಾಡಿಕೊಂಡು ಇದ್ದ ಅಷ್ಟೋ ಇಷ್ಟೋ ಬೀಜಗಳನ್ನು ರಾಸಾಯನಿಕ ಗೊಬ್ಬರಗಳೆಂಬ ನಿಧಾನ ಗತಿಯ ವಿಷದ ಉಂಡೆಗಳೊಂದಿಗೆ ಬಿತ್ತಿ ಬಂದಿದ್ದಾರೆ, ಮತ್ತೆ ಮುಗಿಲು ನೋಡುವ ಸರದಿಯಲ್ಲಿದ್ದಾನೆ. ಆದರೆ ಮಳೆರಾಯ ತಾಲೂಕಿನಲ್ಲಿ ವಾಡಿಕೆಯಷ್ಟು ಪ್ರಮಾಣದಲ್ಲೂ ಬರದೆ ಸತಾಯಿಸುತ್ತಿದ್ದಾನೆ, ಜೊತೆಗೆ ರೈತರು ಸಸಿಗಳಿಗೆ ಹರಡುವ ರೋಗಗಳ ಬಗ್ಗೆಯೂ ಎಚ್ಚರವಿರಬೇಕಾಗಿದೆ.
ತಾಲೂಕಿನ ರೈತರು ದ್ವಿದಳ ಧಾನ್ಯಗಳಾದ ತೊಗರಿ, ಹೆಸರು, ಅಲಸಂದೆ ಗಳನ್ನು ಮುಂಗಾರಿಗೆ 17350 ಎಕರೆ ಪ್ರದೇಶದಲ್ಲಿ ಬಿತ್ತಿದ್ದಾನೆ, ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ಆರಂಭವಾಗುವ ಪೂರ್ವ ಮುಂಗಾರಿಗೆ ತೊಗರಿಯನ್ನು 3050 ಎಕರೆಯಲ್ಲಿ ಬಿತ್ತಿದ್ದರೆ, ಹೆಸರನ್ನು 12675 ಎಕರೆಯಲ್ಲಿ, ಉದ್ದು550 ಎಕರೆ, ಅಲಸಂದೆ 1075 ಎಕರೆಗಳಲ್ಲಿ, ಎಳ್ಳು 225 ಎಕರೆಯಲ್ಲಿ,  ಜೋಳವನ್ನು 145 ಎಕರೆ ಪ್ರದೇಶದಲ್ಲಿ ಬಿತ್ತಿದ್ದಾರೆ. ಈ ಬೆಳೆಗಳಿಗೆ ಮಳೆ ಬೇಕು ಆದರೆ ತಾಲೂಕಿನಲ್ಲಿ ಮೇ ಮತ್ತು ಜೂನ್ ತಿಂಗಳ ಇದುವರೆಗೆ  ಬಿದ್ದಿರುವ ಮಳೆಯ ಪ್ರಮಾಣ 106 ಮಿ.ಮೀ ಮಾತ್ರ, ಇನ್ನೂ 35 ಮಿ.ಮೀ.ಮಳೆಯಾಗಬೇಕು, ಅದೂ ಕಾಲ ಕಾಲಕ್ಕೆ ಆಗಬೇಕು, ಹೆಸರು 3ತಿಂಗಳ ಬೆಳೆ ಆದ್ದರಿಂದ ಮೇ ತಿಂಗಳಲ್ಲಿ ಬಿತ್ತಿದವರೆಗೆ ಈ ಬೆಳೆ ಉತ್ತಮ ಫಸಲು ಕೊಡುತ್ತದೆ.
ತಡ ಮುಂಗಾರು ಆರಂಭ: ಜೂನ್ ತಿಂಗಳಿಂದ ಸೆಪ್ಟೆಂಬರ್ ವರೆಗಿನ ಕಾಲವನ್ನು ತಡ ಮುಂಗಾರು ಕಾಲವೆಂದು ಗುತರ್ಿಸಿದ್ದು, ಈ ಸಮಯದಲ್ಲಿ ಸಿರಿ ಧಾನ್ಯಗಳಾದ ನವಣೆ, ಸಜ್ಜೆ, ಸಾವೆ, ಹಾರಕದ ಜೊತೆ ದ್ವಿದಳ ಬೆಳೆಗಳಾದ ಅವರೆ, ಹುರುಳಿ. ಎಣ್ಣೆಕಾಳು ಬೆಳೆಗಳಾದ, ನೆಲಗಡಲೆ, ಹುಚ್ಚಳ್ಳು, ಸಾಸುವೆ ಬೆಳೆಯಲು ಪ್ರಾಶಸ್ತವಾಗಿದೆ, ಇನ್ನೂ ರಾಗಿ, ಸೂರ್ಯಕಾಂತಿ, ಮುಸುಕಿನ ಜೋಳವನ್ನು ಬೆಳೆಯ ಬಹುದು. 
  ರೋಗಗಳ ಭಾದೆ: ಹೆಸರು ಕಾಳಿಗೆ ನಂಜುರೋಗ, ಹಳದಿ ರೋಗಗಳಂತಹವು ಬಾರದೆ ಇದ್ದರೆ ಈ ಬಾರಿ ಸ್ವಲ್ಪ ಬೆಳೆಯಾಗಬಹುದು ಎಂಬುದು ಅನುಭವಿಸ್ಥರ ಮಾತು, ಆದರೆ ತಾಲೂಕಿನಲ್ಲಿ ಪರಿಸ್ಥಿತಿ ಆಗಿಲ್ಲ. ಈಗಾಗಲೇ ಹುಳಿಯಾರು ಹೋಬಳಿ ಭಾಗದಲ್ಲಿ ಹೆಸರು ಕಾಳಿಗೆ ನಂಜುರೋಗ ಕಾಣಿಸಿಕೊಂಡಿದೆ,  ಹಲಸಂದೆಗೆ ತಾಲೂಕಿನ ಅಲ್ಲಲ್ಲಿ ಕರಿಹೇನು ರೋಗ ಕಾಣಿಸಿಕೊಂಡಿದೆ, ಇಂತಹ ಪರಿಸ್ಥಿತಿಯಲ್ಲಿ ರೈತನಿದ್ದಾನೆ.
ನಂಜುರೋಗಕ್ಕೆ ಔಷಧೋಪಚಾರ:  ಹೆಸರಿಗೆ ನಂಜುರೋಗ ಹಾಗೂ ಹಳದಿ ರೋಗಗಳು ಕಾಣಿಸಿಕೊಂಡಿರುವ ಹೊಲಗಳಿಗೆ ರೈತರು ತಕ್ಷಣವೇ ಮಾನೋಕ್ರೊಟೋಪಾಸ್ ಎಂಬ ಕೀಟ ನಾಶಕವನ್ನು ಒಂದು ಎಂ.ಎಲ್ ಔಷಧಿಗೆ ಒಂದು ಲೀಟರ್ನಂತೆ ನೀರು ಬೆರಸಿ ಹೊಲಗಳಿಗೆ ಸಿಂಪಡಿಸುವುದು ಉತ್ತಮ. ಹೊಲದಲ್ಲಿ ಒಂದು ಗಿಡದಲ್ಲಿ ಈ ರೋಗ ಕಾಣಿಸಿಕೊಂಡರೂ ಅದು ಇಡೀ ಹೊಲವನ್ನು ಆವರಿಸಿಕೊಳ್ಳುವ ಅವಕಾಶಗಳು ಹೆಚ್ಚಾಗಿರುತ್ತವೆ ಆದ್ದರಿಂದ ರೈತರು ಬೇಗ ಎಚ್ಚೆತ್ತುಕೊಳ್ಳುವುದು ಒಳ್ಳೆಯದು, ಈ ರೋಗಕ್ಕೆ ಯಾವುದೇ ರೀತಿಯಾದ ಸಾವಯವ ಔಷಧಿಗಳು, ರಾಸಾಯನಿಕ ಕ್ರಿಮಿನಾಶಕದಷ್ಟು ಪರಿಣಾಮಕಾರಿಯಾಗುವುದಿಲ್ಲ ಎನ್ನುತ್ತಾರೆ ಕೃಷಿ ಇಲಾಖೆಯ ಅಧಿಕಾರಿಗಳು. ನಂಜು ಅಥವಾ ಹಳದಿ ನಂಜುರೋಗವನ್ನು ಉದಾಸೀನ ಮಾಡಿದರೆ ಗಿಡದಲ್ಲಿ ಕಾಳು ಕಟ್ಟುವುದಿಲ್ಲ, ಕಟ್ಟಿದರೂ ಸೀಕಲು ಕಾಳುಗಳಾಗುತ್ತವೆ.
ಹಲಸಂದೆಗೆ ಕರಿಹೇನು ರೋಗ ಉಲ್ಬಣಗೊಳ್ಳುತ್ತಿದೆ ಆದ್ದರಿಂದ ಹಲಸಂದೆ ಹಾಕಿರುವ ರೈತರು ತಕ್ಷಣವೇ ಡೈಮಿತೋಯೇಟ್ ಔಷಧವನ್ನು ಒಂದು ಲೀಟರ್ ನೀರಿಗೆ 1.7 ಮಿ.ಲೀ.ಬೆರಸಿ ಸಿಂಪಡಿಸಿ.
ಪೂರ್ವ ಮುಂಗಾರಿಗೆ ಈಗಾಗಲೇ ಸಮಯ ಮುಗಿದಿರುವುದರಿಂದ ಈಗ ಬಿತ್ತನೆಗೆ ಮುಂದಾಗುವವರು ತಡ ಮುಂಗಾರಿನ ಬೆಳೆಗಳನ್ನು ಬೆಳೆಯುವುದು ಒಳ್ಳೆಯದು.
ಸುದ್ದಿ: 2
 ರಾಷ್ಟ್ರೀಯ ಕೃಷಿ ವಿಮಾ ಯೋಜನೆ ಉಪಯೋಗ ಪಡೆಯಲು ರೈತರಿಗೆ ಕರೆ
ಚಿಕ್ಕನಾಯಕನಹಳ್ಳಿ,ಜೂ.07 : ತಾಲ್ಲೂಕಿನಲ್ಲಿ ಮುಂಗಾರು ಹಂಗಾಮಿಗೆ ಹೋಬಳಿ ಮಟ್ಟದಲ್ಲಿ  ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಬೆಳೆ ವಿಮೆ ಮಾಡಿಸಲು ಅವಕಾಶವಿದ್ದು, ಪ್ರಾಯೋಗಿಕವಾಗಿಕ  ರಾಷ್ಟ್ರೀಯ ಕೃಷಿ ಯೋಜನೆಯನ್ನು 2013ರ ಮುಂಗಾರು ಹಂಗಾಮಿನಲ್ಲಿ ಅನುಷ್ಠಾನಗೊಳಿಸಲು ಘಟಕವಾರು ಬೆಳೆಗಳ ಘೋಷಣೆ ಮಾಡಲಾಗಿದೆ ಎಂದು ಕೃಷಿ ಇಲಾಖೆ ಸಹಾಯಕ ನಿದರ್ೇಶಕ ಕೃಷ್ಣಪ್ಪ ತಿಳಿಸಿದಾರೆ.
ರಾಷ್ಟ್ರೀಯ ಕೃಷಿ ವಿಮಾ ಯೋಜನೆಯಲ್ಲಿ ತಾಲ್ಲೂಕಿನ ಕಸಬಾ, ಶೆಟ್ಟಿಕೆರೆ, ಕಂದಿಕೆರೆ, ಹುಳಿಯಾರು, ಹಂದನಕೆರೆ ಹೋಬಳಿ ಹಾಗೂ ಕಂದಿಕೆರೆ ಗ್ರಾಮ ಪಂಚಾಯಿತಿ ಮತ್ತು ಮುದ್ದೇನಹಳ್ಳಿ ಗ್ರಾಮ ಪಂಚಾಯಿತಿಗಳ ರೈತರು ಭಾಗವಹಿಸಲು ಜೂನ್ 30ಕೊನೆಯ ದಿನವಾಗಿರುತ್ತದೆ.
  ಜೋಳ ಬೆಳೆಯನ್ನು ಕಸಬಾ, ಹಂದನಕೆರೆ, ಹುಳಿಯಾರು, ಕಂದಿಕೆರೆ, ರಾಗಿ (ನೀರಾವರಿ) ಹುಳಿಯಾರು, ಸಾವೆ(ಮಳೆ ಆಶ್ರಿತ) ಹುಳಿಯಾರು ಹಂದನಕೆರೆ, ನವಣೆ(ಮಳೆಆಶ್ರಿತ)ಹುಳಿಯಾರು, ರಾಗಿ(ಮಳೆಮಿಶ್ರಿತ), ಹೆಸರು(ಮಳೆಆಶ್ರಿತ) ಹುರುಳಿ(ಮಳೆಆಶ್ರಿತ)ಬೆಳೆಯನ್ನು ತಾಲ್ಲೂಕಿನ ಎಲ್ಲಾ ಹೋಬಳಿಗಳು, ಹುರಳು(ಮಳೆ ಆಶ್ರಿತ)ಹುಳಿಯಾರು, ಹಂದನಕೆರೆ, ಕಸಬಾ, ಹತ್ತಿ(ನೀರಾವರಿ)ಹಂದನಕೆರೆ, ಮೆಣಸಿನಕಾಯಿ(ಮಳೆಆಶ್ರಿತ) ಬೆಳೆಗಳನ್ನು ಹುಳಿಯಾರು ಹೋಬಳಿಗಳಲ್ಲಿ ಹಾಗೂ ತೊಗರಿ(ಮಳೆಆಶ್ರಿತ)ಬೆಳೆಯನ್ನು ಕಂದಿಕೆರೆ, ಮುದ್ದೇನಹಳ್ಳಿ ಗ್ರಾಮ ಪಂಚಾಯಿತಿಗಳಿಲ್ಲಿ  ಮುಂಗಾರಿಗೆ ವಿಮೆ ಮಾಡಿಸಲು ಅವಕಾಶವಿದೆ.
ಬೆಳೆಸಾಲ ಪಡೆಯದೇ ಇರುವ ರೈತರು ಅಜರ್ಿಯೊಂದಿಗೆ ಭೂಮಿ ಹೊಂದಿರುವುದಕ್ಕೆ ಪಹಣೆ/ಖಾತೆ/ಪಾಸ್ಪುಸ್ತಕ/ಕಂದಾಯ ರಸೀತಿಯನ್ನು ನೀಡುವುದು. ಏಪ್ರಿಲ್1ರಿಂದ ಜೂನ್ 30ರೊಳಗೆ ಬೆಳೆ ಸಾಲ ಮಂಜೂರಾಗಿದ್ದರೆ ಅಂತಹ ರೈತರನ್ನು ಕಡ್ಡಾಯವಾಗಿ ಯೋಜನೆಯಡಿ ಒಳಪಡಿಸತಕ್ಕದ್ದು. 
2013 ಮುಂಗಾರು ಹಂಗಾಮಿನಲ್ಲಿ ಅಧಿಸೂಚಿತ ಘಟಕದಲ್ಲಿ ಶೇ.75ಕ್ಕಿಂತ ಹೆಚ್ಚಿನ ಕ್ಷೇತ್ರದಲ್ಲಿ ಬಿತ್ತನೆ ವಿಫಲಗೊಂಡಲ್ಲಿ ಬೆಳೆವಿಮೆವ್ಯಾಪ್ತಿಯಲ್ಲಿ ಬರುತ್ತದೆ.
ವಿಮಾ ಯೋಜನೆಯ ಉದ್ದೇಶಗಳು : ಅಧಿಸೂಚಿತ ಬೆಳೆಗಳು ಪ್ರಕೃತಿ ವಿಕೋಪ, ಪೀಡೆ ಮತ್ತು ರೋಗ ಬಾಧೆಯಿಂದ ವಿಫಲಗೊಂಡಲ್ಲಿ ಅಂತಹ ಬೆಳೆಗಳನ್ನು ಅಧಿಸೂಚಿತ ಘಟಕಗಳಲ್ಲಿ ಬೆಳೆದ ರೈತರಿಗೆ ವಿಮಾ ರಕ್ಷೆ ಹಾಗೂ ಆಥರ್ಿಕ ನೆರವನ್ನು ನೀಡುವುದು. ಕೃಷಿ ವರಮಾನವನ್ನು ವಿಶೇಷವಾಗಿ ಪ್ರಕೃತಿ ವಿಕೋಪಗಳಿಗೆ ತುತ್ತಾದ ವರ್ಷಗಳಲ್ಲಿ ಸ್ಥಿರಗೊಳಿಸಲು ನೆರವಾಗುವುದು. ಪ್ರಕೃತಿ ವಿಕೋಪಗಳಿಂದ ಪ್ರವಾಹ. ಆಲಿಕಲ್ಲು ಮಳೆ, ಭೂಕುಸಿತ ಮತ್ತು ಚಂಡಮಾರುತ ಉಂಟಾದ ಸಂದರ್ಭದಲ್ಲಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳನ್ನು ನಷ್ಟದ ನಿರ್ಧರಣೆಗಾಗಿ ಅಳವಡಿಸಿಕೊಳ್ಳುವುದು. ಮುಂಗಾರು ಹಂಗಾಮಿನಲ್ಲಿ ಅಧಿಸೂಚಿತ ಬೆಳೆಗಳಿಗೆ ಆಲಿಕಲ್ಲು ಮಳೆ ಭೂಕುಸಿತದಿಂದ ಉಂಟಾಗುವ ನಷ್ಟದ ನಿರ್ಧರಣೆಯನ್ನು ವೈಯುಕ್ತಿಕವಾಗಿ ನಿರ್ಧರಿಸಿ ಬೆಳೆ ವಿಮಾ ನಷ್ಟ ಪರಿಹಾರವನ್ನು ಇತ್ಯರ್ಥಪಡಿಸುವುದು. ಇಂತಹ ಸ್ಥಳೀಯ ಗಂಡಾಂತರಗಳಿಂದ ಬೆಳೆ ನಷ್ಟ ಸಂಭವಿಸಿದರೆ, ವಿಮೆ ಮಾಡಿಸಿರುವ ರೈತರು ಈ ಬಗ್ಗೆ ಸಂಬಂಧಪಟ್ಟ ಹಣಕಾಸು ಸಂಸ್ಥೆ ಅಥವಾ ವಿಮಾ ಸಂಸ್ಥೆಂ ಕಛೇರಿಗಳಿಗೆ ತಕ್ಷಣ ಸೂಚನೆ ನೀಡಬೇಕು. ಯಾವುದೇ ಸಂದರ್ಭದಲ್ಲಿ ವಿಮೆ ಮಾಡಿಸಿದ ಬೆಳೆಯು ವಿವರಗಳನ್ನು ಹಾನಿಯ ವ್ಯಾಪ್ತಿ ಹಾಗೂ ಹಾನಿಗೆ ಕಾರಣವನ್ನು 48ಗಂಟೆಗಳೊಳಗಾಗಿ ತಿಳಿಸಬೇಕು.
ಯಾವ ರೈತರು ಭಾಗವಹಿಸಬಹುದು : ಅಧಿಸೂಚಿತ ಕ್ಷೇತ್ರ ಘಟಕಗಳಲ್ಲಿ ಅಧಿಸೂಚಿತ ಬೆಳೆಗಳನ್ನು ಬೆಳೆಯುವ ಎಲ್ಲಾ ರೈತರು ಯೋಜನೆಯಡಿಯಲ್ಲಿ ಭಾಗವಹಿಸಬಹುದು. ಏಪ್ರಿಲ್ 1ರಿಂದ ಜೂನ್ 30ರವರೆಗೆ ಅಧಿಸೂಚಿತ ಬೆಳೆಗಳನ್ನು ಅಧಿಸೂಚಿತ ಘಟಕಗಳಲ್ಲಿ ಬೆಳೆಯಲು ಬೆಳೆ ಸಾಲ ಮಂಜೂರಾದ ಎಲ್ಲಾ ರೈತರಿಗೆ ಇದು ಕಡ್ಡಾಯವಾಗಿರುತ್ತದೆ. ಬೆಳೆ ಸಾಲ ಪಡೆಯದ ರೈತರಿಗೆ ಇದು ಐಚ್ಛಿಕವಾಗಿರುತ್ತದೆ. ಅವರು ಸ್ವಿಚ್ಛೆಯಿಂದ ಭಾಗವಹಿಸಬಹುದು.
ವಿಮಾ ಕಂತಿನ ಮೇಲೆ ರಿಯಾಯಿತಿ : ಎಲ್ಲಾ ವರ್ಗದ ರೈತರಿಗೂ ವಿಮಾ ಕಂತಿನ ಮೇಲೆ ರಿಯಾಯಿತಿ ನೀಡಲಾಗಿದೆ. ರಿಯಾಯಿತಿಯನ್ನು ಹೊರತು ಪಡಿಸಿದ ವಿಮಾ ಕಂತನ್ನು ಮಾತ್ರ ರೈತರು ಕಟ್ಟಬೇಕು ಯಾವುದೇ ಸೇವಾ ಶುಲ್ಕವನ್ನು ರೈತರು ಭರಿಸಬೇಕಾಗಿಲ್ಲ.