Wednesday, April 23, 2014

ರೇಣುಕಾಯಲ್ಲಮ್ಮದೇವಿಯವರ ಜಾತ್ರಾ ಮಹೋತ್ಸವ
ಚಿಕ್ಕನಾಯಕನಹಳ್ಳಿ,ಏ.23 : ತಾಲ್ಲೂಕಿನ ಕಂದಿಕೆರೆಯ ಶ್ರೀ ರೇಣುಕಾಯಲ್ಲಮ್ಮದೇವಿಯವರ ಜಾತ್ರಾ ಮಹೋತ್ಸವವು ವಿಜೃಂಭಣೆಯಿಂದ ಆರಂಭಗೊಂಡಿದ್ದು ಬುಧವಾರ ದೇವಿಯನ್ನು ಹೊತ್ತ ಭಕ್ತರು ಅಗ್ನಿಕುಂಡ ಹಾಯ್ದರು.
ಬುಧವಾರ ರೇಣುಕಾಯಲ್ಲಮ್ಮದೇವಿಯವರ ಮಂಗಳಸ್ನಾನದೊಂದಿಗೆ ಗಂಗಾಪೂಜೆ ನೆರವೇರಿತು. ಈ ಜಾತ್ರೆಗೆ ಹಲವು ಜಿಲ್ಲೆಗಳಿಂದ ಭಕ್ತರು ಆಗಮಿಸಿದ್ದು, ಭಕ್ತರ ಹಷರ್ೋದ್ಘಾರದಿಂದ ದೇವಿಯ ಸ್ತುತಿ ಮಾಡುತ್ತಿದ್ದರು. 
24ರಂದು ಸಂಜೆ 6.30ಕ್ಕೆ ಸಿಡಿಮದ್ದಿನ ಸೇವೆಯೊಂದಿಗೆ ರೇಣುಕಯಲ್ಲಮ್ಮದೇವಿ, ಶ್ರೀ ಕರಿಯಮ್ಮದೇವಿ, ಶ್ರೀ ಆಂಜನೇಯಸ್ವಾಮಿವರ ಪ್ರಸನ್ನೋತ್ಸವ ನಡೆಯಲಿದೆ. 25ರಂದು ಶ್ರೀ ರೇಣುಕಯಲ್ಲಮ್ಮದೇವಿಯ ರಥೋತ್ಸವ ಮಧ್ಯಾಹ್ನ 3.30ಕ್ಕೆ ಭಕ್ತಾಧಿಗಳಿಂದ ಪ್ರಸಾದ ವಿನಿಯೋಗ ಮತ್ತು ಮಜ್ಜಿಗೆ ವಿತರಣೆ, 4.30ಕ್ಕೆ ಪಾತಪ್ಪಸ್ವಾಮಿಯವರಿಂದ ಗಾವಿನ ಸೇವೆ ಹಾಗೂ ರಾತ್ರಿ 8.30ಕ್ಕೆ ಶ್ರೀ ರಾಮ ಕಲಾಸಂಘದವರಿಂದ ರಾಜಾ ಸತ್ಯವ್ರತ ಅಥವಾ ಶನಿಪ್ರಭಾವ ಪೌರಾಣಿಕ ನಾಟಕ ನಡೆಯಲಿದೆ. 26ರಂದು ಸಂಜೆ 6ರಿಂದ 8ರವರೆಗೆ ಆರತಿಬಾನ, 6.30ಕ್ಕೆ ಶನೇಶ್ವರಸ್ವಾಮಿ ಉತ್ಸವ, ರಾತ್ರಿ 9ಕ್ಕೆ ಸಿಡಿಸೇವೆ ನಡೆಯಲಿದೆ.  27ರ ಭಾನುವಾರ ರಾತ್ರಿ 7ಕ್ಕೆ ಗುಗ್ಗರಿ ಮಾರಮ್ಮನವರ ಉತ್ಸವ, ರಾತ್ರಿ 8.30ಕ್ಕೆ ಕಂದಿಕೆರೆ ಗೆಳೆಯರ ಬಳಗದವರಿಂದ ಶ್ರೀ ರೇಣುಕಾಯಲ್ಲಮ್ಮದೇವಿಯವರ ಉಯ್ಯಾಲೋತ್ಸವ ಹಮ್ಮಿಕೊಳ್ಳಲಾಗಿದೆ.
28ರ ಬೆಳಗ್ಗೆ ರೇಣುಕಾಯಲ್ಲಮ್ಮದೇವಿಯವರೊಂದಿಗೆ ಶ್ರೀ ರಂಗನಾಥಸ್ವಾಮಿ, ಸಾದರಹಳ್ಳಿ ಶ್ರೀ ಆಂಜನೇಯಸ್ವಾಮಿ, ಸಂಗೇನಹಳ್ಳಿ, ಶ್ರೀ ಬಯಲಪ್ಪಸ್ವಾಮಿ, ಆಂಜನೇಯಸ್ವಾಮಿ ಮತ್ತು ಶ್ರೀ ಮೈಲಾರಲಿಂಗಸ್ವಾಮಿಯವರುಗಳ ಉತ್ಸವ ಹಾಗೂ ಮಧ್ಯಾಹ್ನ 3.30ಕ್ಕೆ ಕರಿಯಮ್ಮದೇವಿಯವರೊಂದಿಗೆ ಶ್ರೀ ಪಾತಪ್ಪಸ್ವಾಮಿಯವರ ಬಂಡಾರಸೇವಾ ಉತ್ಸವ ನಡೆಯಲಿದ್ದು 28ರ ಸೋಮವಾರ ಮಧ್ಯಾಹ್ನ 3.30ಕ್ಕೆ ಧ್ವಜಾವರೋಹಣ ರಾತ್ರಿ 8.30ಕ್ಕೆ ಜೋಗಿನ ಊಟ ಹಾಗೂ ಹಾಲು ಒಕ್ಕೂಟದವರಿಂದ ಮಜ್ಜಿಗೆ ವಿತರಣೆ ನಡೆಯಲಿದೆ.

ಖಾಸಗಿ ಬಸ್ಗಳ ಸಂಚಾರ ರದ್ದು: ಕೆ.ಎಸ್.ಆರ್.ಟಿ.ಸಿ.ಬಸ್ಗಳ ಕೊರತೆ, ಪ್ರಯಾಣಿಕರ ಪರದಾಟ.
ಚಿಕ್ಕನಾಯಕನಹಳ್ಳಿ,ಏ.23  : ಬಸ್ಗಾಗಿ ಕಾದೂ ಕಾದೂ ಸಾಕಾಗೋಯ್ತು, ಬಸ್ ಬಂದರೂ ಕಾಲಿಡಲು ಸ್ಥಳವಿಲ್ಲದಂತೆ ತುಂಬಿ ತುಳುಕುತ್ತಿರುತ್ತದೆಯಾದರೂ ಅದೇ ಬಸ್ನೊಳಗೆ ನುಗ್ಗಿ ಅವರಿವರನ್ನು ಗೊಣಗಿಕೊಂಡು ನಿಂತರೆ ನಮ್ಮೂರಿಗೆ ತೆರಳುವುದರೊಳಗೆ ಸಾಕಪ್ಪ ಬಸ್ನ ಸಹವಾಸ ಎನ್ನುವಷ್ಟು ಸಾಕಾಗಿ ಹೋಗುತ್ತದೆ ಎಂಬುದು ತುಮಕೂರಿನಿಂದ ಚಿಕ್ಕನಾಯಕನಹಳ್ಳಿ, ಹುಳಿಯಾರು, ಹೊಸದುರ್ಗ ಮಾರ್ಗವಾಗಿ ಸಂಚರಿಸುವ ಪ್ರಯಾಣಿಕರ ದಿನನಿತ್ಯದ ಸಮಸ್ಯೆಯಿದು.
ಪ್ರತಿನಿತ್ಯ ಸಾವಿರಾರು ಜನರು ಚಿಕ್ಕನಾಯಕನಹಳ್ಳಿ, ಹುಳಿಯಾರು ಹಾಗೂ ಹೊಸದುರ್ಗ ಮಾರ್ಗವಾಗಿ ತುಮಕೂರು ಹಾಗೂ ಬೆಂಗಳೂರಿಗೆ ಸಂಚರಿಸುವವರು ಈ ಮಾರ್ಗದಲ್ಲಿನ ಬಸ್ಗಳ ಸಮಸ್ಯೆಯ ವ್ಯವಸ್ಥೆ ಕಂಡು ಮಮ್ಮಲ ಮರುಗುತ್ತಿದ್ದಾರೆ.
ಬೆಂಗಳೂರಿನಿಂದ ಹೊಸದುರ್ಗ ಮಾರ್ಗವಾಗಿ ಹೆಚ್ಚಿನ ಖಾಸಗಿ ಬಸ್ಗಳು ಓಡಾಡುತ್ತಿದ್ದವು ಆದರೆ ಜಿಲ್ಲಾಡಳಿತದ ಬಿಗಿ ಕ್ರಮದಿಂದಾಗಿ ಖಾಸಗಿ ಬಸ್ಗಳ ಓಡಾಟಕ್ಕೆ ಕಡಿವಾಣ ಹಾಕಲಾಗಿದೆ, ತುಮಕೂರಿನಿಂದ ಹೊಸದುರ್ಗ ಮಾರ್ಗವಾಗಿ ಸಂಚರಿಸಬೇಕಾದರೆ ಕೆ.ಎಸ್.ಆರ್.ಟಿ.ಸಿ ಬಸ್ಗಳನ್ನೇ ಪ್ರಯಾಣಿಕರು ಅವಲಂಬಿಸಬೇಕಾಗಿದ್ದು ತುಮಕೂರಿನಿಂದ ಈ ಮಾರ್ಗವಾಗಿ ಕೆ.ಎಸ್.ಆರ್.ಟಿ.ಸಿ ಬಸ್ಗಳು ಅಧಿಕವಾಗಿ ಇಲ್ಲದಿರುವುದರಿಂದ  ಬಸ್ಗಳಲ್ಲಿ ಕಾಲಿಡಲು ಜಾಗವಿಲ್ಲದಂತೆ ತುಂಬಿ ತುಳುಕುತ್ತಿರುತ್ತವೆ.
ಬೆಳಗಿನ ಸಮಯದಲ್ಲೂ ತಾಲ್ಲೂಕಿನ ಹಲವು ಗ್ರಾಮಗಳಿಂದ  ವಿದ್ಯಾಥರ್ಿಗಳು ತುಮಕೂರಿಗೆ ಸಂಚರಿಸಲು ಪರಿತಪಿಸುತ್ತಾರೆ, ಪರೀಕ್ಷೆ ಸಮಯದಲ್ಲಂತೂ ವಿದ್ಯಾಥರ್ಿಗಳ ಪರಿಸ್ಥಿತಿ ಹೇಳತೀರದು, ವ್ಯಾಪಾರಸ್ಥರು, ರೈತರ ಲಗೇಜುಗಳನ್ನು ಬಸ್ನಲ್ಲಿ ಹಾಕಲಾಗದೇ ಬೆಂಗಳೂರಿಗೆ ಪ್ರಯಾಣಿಸಲು ಮೇಲ್ಚಾವಣಿ(ಟಾಪ್ ಕ್ಯಾರಿಯರ್) ಖಾಲಿಯಾಗಿರುವ ಬಸ್ಗಳು ಬರುವವರೆಗೆ ಕಾಯುತ್ತಾರೆ, ಹಬ್ಬ-ಹರಿದಿನ, ಸಕರ್ಾರಿ ರಜೆ ಇನ್ನಿತರ ಜಾತ್ರಾ ಮಹೋತ್ಸವದಲ್ಲಂತೂ ಬಸ್ಗಳಿಗಾಗಿ ಪರಿತಪಿಸುವ ತಾಲ್ಲೂಕಿನ ಜನತೆ ಹಿಡಿಶಾಪ ಹಾಕುತ್ತಾರೆ. 
ಇನ್ನೂ ಚಿಕ್ಕನಾಯಕನಹಳ್ಳಿಯಿಂದ ಕುಪ್ಪೂರು, ಹಂದನಕೆರೆ, ತಿಮ್ಮನಹಳ್ಳಿ, ಕಾತ್ರಿಕೆಹಾಳ್ ಹಾಗೂ ಮುದ್ದೇನಹಳ್ಳಿ ಭಾಗಗಳಿಗೆ ಸಂಚರಿಸಲು ಬಸ್ಗಳ ಸಮಸ್ಯೆಯಿದೆ, ಈ ಭಾಗದಿಂದ ಬರುವ ವಿದ್ಯಾಥರ್ಿಗಳಿಗೆ ಸರಿಯಾದ ಸಮಯಕ್ಕೆ ಶಾಲಾ-ಕಾಲೇಜಿಗೆ ಬರಲು ಸಾಧ್ಯವಾಗುತ್ತಿಲ್ಲ, ಸಾರ್ವಜನಿಕರಿಗೆ ಬಸ್ಗಳ ಚಿಂತೆಯಾಗಿದ್ದು ಈ ಭಾಗಗಳಿಗೆ ಬಸ್ ವ್ಯವಸ್ಥೆ ಕಲ್ಪಿಸಲು ಸಾರ್ವಜನಿಕರು ಹಲವಾರು ದಿನಗಳಿಂದ ಪ್ರತಿಭಟನೆ, ಮನವಿ ಅಪರ್ಿಸುತ್ತಲೇ ಇದ್ದಾರೆ. ಪ್ರಯೋಜನ ಮಾತ್ರ ಶೂನ್ಯ.