Wednesday, April 17, 2013


ಕಾಂಗ್ರೆಸ್ ಪಕ್ಷದ ಅಭ್ಯಥರ್ಿ ಎಸ್.ಎನ್.ಸತೀಶ್ ನಾಮಪತ್ರ ಸಲ್ಲಿಕೆ
ಚಿಕ್ಕನಾಯಕನಹಳ್ಳಿ,ಏ.17 : ಈಗ ಕಣದಲ್ಲಿ ಮುಂಚೂಣಿಯಲ್ಲಿರುವವರು ಅಧಿಕಾರ ಉಂಡವರೆ ಅವರಿಗೆ ಗೆಲ್ಲುವ ತನಕ ಜನ ಬೇಕಷ್ಟೇ ನಂತರ ಜನರತ್ತ ತಿರಿಗಿಯೂ ನೋಡುವುದಿಲ್ಲ ಇದನ್ನರಿತು ಕ್ಷೇತ್ರದ ಜನತೆ ನನಗೆ ಆಶೀರ್ವದಿಸುತ್ತಾರೆ ಎಂಬ ನಂಬಿಕೆ ಎಂದು ಕಾಂಗ್ರೆಸ್ ಪಕ್ಷದ ಅಭ್ಯಥರ್ಿ ಸಾಸಲು ಸತೀಶ್ ಹೇಳಿದರು.
ಪಟ್ಟಣದ ಹಳೆಯೂರು ಆಂಜನೇಯಸ್ವಾಮಿ ದೇವಾಲಯದಿಂದ ತಮ್ಮ ಬೆಂಬಲಿಗರೊಂದಿಗೆ ಮೆರವಣಿಗೆ ಮೂಲಕ ತಾಲ್ಲೂಕು ಕಛೇರಿಗೆ ಆಗಮಿಸಿ ಚುನಾವಣಾಧಿಕಾರಿ ಇ.ಪ್ರಕಾಶ್ರವರಿಗೆ ನಾಮಪತ್ರ ಸಲ್ಲಿಸಿ ನಂತರ ಪತ್ರಕರ್ತರೊಂದಿಗೆ ಮಾತನಾಡಿದರು.
ತಾವು ಈಗಾಗಲೇ ಹಲವು ಹಳ್ಳಿಗಳಲ್ಲಿ ಸಂಚರಿಸಿ ಪ್ರಚಾರ ನಡೆಸಿದ್ದು ಅಲ್ಲಿನ ಜನತೆ ಹೊಸ ಅಭ್ಯಥರ್ಿ ಯುವಕನಿಗೆ ಸ್ಪಂದಿಸುತ್ತೇವೆ, ಚುನಾವಣೆಗೆ ಸ್ಪಧರ್ಿಸಿ ಬೆಂಬಲಿಸುವೆವು ಎಂಬ ಮಾತುಗಳನ್ನು ತಿಳಿಸುತ್ತಿದ್ದಾರೆ, ಹಲವು ನಾಯಕರು ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರ ಜನರ ಬಳಿಯೇ ಆಗಮಿಸುವುದಿಲ್ಲ ಸಿಕ್ಕ ಅವಕಾಶವನ್ನು ಬಳಸದೆ ಜನತೆಗೆ ಮೋಸ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ ಎಂದರು.
ರಾಜ್ಯದಲ್ಲಿ ಈ  ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸಕರ್ಾರವೆ ಅಧಿಕಾರಕ್ಕೆ ಬರಲಿದ್ದು ತಾಲ್ಲೂಕಿನಲ್ಲಿಯೂ ಕಾಂಗ್ರೆಸ್ ಪಕ್ಷವೇ ಜಯಗಳಿಸಿದರೆ ಜನತೆಯ ಕಷ್ಟ, ಸುಖಗಳಿಗೆ ಸ್ಪಂದಿಸುವುದರ ಜೊತೆಗೆ ತಾಲ್ಲೂಕನ್ನು ಅಭಿವೃದ್ದಿ ಪಥದತ್ತ ಕೊಂಡೊಯ್ಯುವ ಚಿಂತನೆ ಇದೆ ಎಂದರಲ್ಲದೆ ಇಷ್ಟು ವರ್ಷಗಳ ಚುನಾವಣೆಯಲ್ಲಿ ಯುವ ಅಭ್ಯಥರ್ಿಯನ್ನು ಕಡೆಗಣಿಸುತ್ತಿದ್ದ ಜನತೆ ಈ ಬಾರಿ ಯುವಕನಾದ ನನಗೆ ಪ್ರಥಮ ಆಧ್ಯತೆ ನೀಡಲಿದ್ದಾರೆ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷದ ಮುಖಂಡ ಸಿ.ಬಸವರಾಜು ಮಾತನಾಡಿ ಕಳೆದ ಎಂ.ಪಿ ಚುನಾವಣೆಯಲ್ಲಿ 25ಸಾವಿರ ಮತಗಳನ್ನು ಪಡೆದಿದ್ದ ಕಾಂಗ್ರೆಸ್ ಪಕ್ಷ, ವಿಧಾನಸಭಾ ಚುನಾವಣೆಯಲ್ಲಿ 50ಸಾವಿರಕ್ಕೂ ಹೆಚ್ಚಿನ ಮತಗಳಿಸಿ ಗೆಲುವು ಸಾಧಿಸಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಬಿ.ಲಕ್ಕಪ್ಪ, ಗೋವಿಂದರಾಜು, ಕೆ.ಜಿ.ಕೃಷ್ಣೇಗೌಡ, ರೆಹಮುತುಲ್ಲಾ, ನೆರಲಗುಡ್ಡ ಶಿವಕುಮಾರ್ ಸೇರಿದಂತೆ ಹಲವರಿದ್ದರು.

ಬಿ.ಎಸ್.ಪಿ ಪಕ್ಷದ ಅಭ್ಯಥರ್ಿ ಕ್ಯಾಪ್ಟನ್ ಸೋಮಶೇಖರ್ ನಾಮಪತ್ರ ಸಲ್ಲಿಕೆ
                             
ಚಿಕ್ಕನಾಯಕನಹಳ್ಳಿ,ಏ.17 : ಇಪ್ಪತ್ತು ವರ್ಷದ ಹಿಂದೆ ಪುರಸಭಾ ಸದಸ್ಯನಾಗಿ, ಸ್ಥಾಯಿ ಸಮಿತಿ ಅಧ್ಯಕ್ಷನಾಗಿ ಕಾರ್ಯ ನಿರ್ವಹಿಸಿದ್ದ ನನ್ನ ಸೇವೆಯನ್ನು ಮತ್ತೆ ತಾಲ್ಲೂಕಿನಾದ್ಯಂತ ಮುಂದುವರೆಸಲು ಎಂ.ಎಲ್.ಎ ಚುನಾವಣೆಗೆ ಸ್ಪಧರ್ಿಸಿದ್ದು ನನ್ನ ಸೇವೆಯನ್ನು ಜನರಿಗೆ ಎಂದೂ ಕಟ್ಟಿಬದ್ದರಾಗಿ ನಿರ್ವಹಿಸುತ್ತೇನೆ ಎಂದು ಬಿ.ಎಸ್.ಪಿ ಪಕ್ಷದ ಅಭ್ಯಥರ್ಿ ಕ್ಯಾಪ್ಟನ್ ಸೋಮಶೇಖರ್ ತಿಳಿಸಿದರು.
ಪಟ್ಟಣದ ತಮ್ಮ ಬೆಂಬಲಿಗರೊಂದಿಗೆ ಮೆರವಣಿಗೆ ಮೂಲಕ ತಾಲ್ಲೂಕು ಕಛೇರಿಗೆ ಆಗಮಿಸಿ ಚುನಾವಣಾಧಿಕಾರಿ ಇ.ಪ್ರಕಾಶ್ರವರಿಗೆ ನಾಮಪತ್ರ ಸಲ್ಲಿಸಿ ನಂತರ ಪತ್ರಕರ್ತರೊಂದಿಗೆ ಮಾತನಾಡಿದರು.
ಬಹುಜನಾ ಸಮಾಜ ಪಾಟರ್ಿ ಪಕ್ಷದ ಸಿದ್ದಂತವಾದ ಶೋಷಣೆ ವಿರುದ್ದ ಹೋರಾಟ ತತ್ವ ಸಿದ್ದಾಂತವನ್ನು ಮುಂದಿಟ್ಟುಕೊಂಡು ಚುನಾವಣೆಗೆ ಸ್ಪಧರ್ಿಸಿದ್ದು, ವಾರದ ಏಳು ದಿನವೂ ಸಾರ್ವಜನಿಕರಿಗೆ ನಮ್ಮ ಪಕ್ಷದ ಸೇವೆಯನ್ನು ಮುಂದುವರೆಯುತ್ತಿರುತ್ತದೆ ಎಂದರಲ್ಲದೆ ಪಕ್ಷದ ರಾಜ್ಯ ಮತ್ತು ಜಿಲ್ಲಾ ಕಾರ್ಯಕರ್ತರು ಜನರ ಸಮಸ್ಯೆಗಳಿಗೆ ನಿರಂತರವಾಗಿ ಸ್ಪಂದಿಸಲಿದ್ದಾರೆ ಅಲ್ಲದೆ ಶೋಷಣೆ ವಿರುದ್ದ ನಮ್ಮ ಹೋರಾಟ ಅವಿರತವಾಗಿ ಇರುತ್ತದೆ ಎಂದರು.