Friday, September 3, 2010

16ಮಂದಿ ಶಿಕ್ಷಕರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ
ಚಿಕ್ಕನಾಯಕನಹಳ್ಳಿ,ಸೆ.03: 2010-11ನೇ ಸಾಲಿನ ಕ್ಲಸ್ಟರ್ ಮಟ್ಟದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಸಂಘದ ವತಿಯಿಂದ ಉತ್ತಮ ಶಿಕ್ಷಕ ಪ್ರಶಸ್ತಿಗಾಗಿ 16 ಮಂದಿಯನ್ನು ಆಯ್ಕೆ ಮಾಡಲಾಗಿದೆ.
ಸಕರ್ಾರಿ ಪ್ರೌಡಶಾಲಾ ಆವರಣದಲ್ಲಿ ಸೆಪ್ಟಂಬರ್ 5ರ ಭಾನುವಾರ ನಡೆಯಲಿರುವ ಡಾ.ಸರ್ವಪಲ್ಲಿ ರಾಧಕೃಷ್ಣನ್ರವರ 123ನೇ ಜನ್ಮದಿನಾಚರಣೆ ಸಮಾರಂಭದಲ್ಲಿ ಶಿಕ್ಷಕರಾದ ಬರಗೂರಿನ-ಹನುಮಂತಯ್ಯ, ತೀರ್ಥಪುರ-ಬಸವರಾಜು, ಕಂದಿಕೆರೆ-ರೇವಣ್ಣಎಸ್.ಬಿ, ಶೆಟ್ಟಿಕೆರೆ-ಸಿದ್ದರಾಮಯ್ಯ, ಜೆ.ಸಿ.ಪುರ-ಕೃಷ್ಣಪ್ಪ ಮತ್ತು ಅಜ್ಜಯ್ಯ, ಮತಿಘಟ್ಟ-ರಾಧಮ್ಮ, ಹುಳಿಯಾರು-ಲೀಲಾವತಿ, ಯಸ್ಮಿನಾಬಾನು, ಗಾಣಧಾಳು-ಹನುಮಂತರಾಜು, ಯಳನಡು-ಪುರಂದರ, ಹೋಯ್ಸಳಕಟ್ಟೆ-ದೇವರಾಜು, ಹಂದನಕೆರೆ-ಸೀತಮ್ಮ, ಚಿಕ್ಕನಾಯಕನಹಳ್ಳಿ-ಸಿ.ಕೆ.ಪುಟ್ಟಸ್ವಾಮಿ, ಸರ್ವಮಂಗಳ, ಜಗದಾಂಬ ಶಿಕ್ಷಕರುಗಳನ್ನು ಪ್ರಶಸ್ತಿಗಾಗಿ ಆಯ್ಕೆಮಾಡಲಾಗಿದೆ.

ರಾಜಕೀಯ ಪಕ್ಷಗಳು ನಡೆಸುತ್ತಿರುವ ದಂಧೆಗಳನ್ನು ತಡೆಯಲು ಕ.ಜ.ಪಕ್ಷ
ಚಿಕ್ಕನಾಯಕನಹಳ್ಳಿ,ಸೆ.03: ಕನ್ನಡ ಹೆಸರಿನಲ್ಲಿ ನಡೆಯುತ್ತಿರುವ ದಂಧೆಗಳು ನಿಲ್ಲಬೇಕು ಅದಕ್ಕಾಗಿ ಕನರ್ಾಟಕ ಜನತಾ ಪಕ್ಷ ಎಂಬ ಪಕ್ಷವನ್ನು ರಾಜ್ಯದ್ಯಂತ ವಿಸ್ತರಿಸುತ್ತಿದ್ದೇವೆ ಎಂದು ಕನರ್ಾಟಕ ಜನತಾ ಪಕ್ಷದ ರಾಜ್ಯಾಧ್ಯಕ್ಷ ಪ್ರಸನ್ನಕುಮಾರ್ ಆರೋಪಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕನರ್ಾಟಕ ರಕ್ಷಣಾ ವೇದಿಕೆಯಂತಹ ಕನ್ನಡ ಸಂಘ ಸಂಸ್ಥೆಗಳು ಭಕ್ಷಣಾ ಸಂಸ್ಥೆಗಳಾಗಿ ಮಾರ್ಪಟ್ಟಿವೆ ಎಂದರು. ರಾಜ್ಯಾದ್ಯಂತ ಸ್ಥಳೀಯ ಸಂಘ ಸಂಸ್ಥೆಗಳನ್ನು ಸೇರಿಸಿ ಅನ್ಯಾಯದ ವಿರುದ್ದ ನ್ಯಾಯಕ್ಕಾಗಿ ಹೋರಾಡಿ ಕನರ್ಾಟಕ ರಾಜ್ಯವನ್ನು ಸುವರ್ಣ ಕನರ್ಾಟಕ ಮಾಡಬೇಕಾಗಿದೆ ಎಂದರು.
ಅಕ್ರಮ ಗಣಿಗಾರಿಕೆ, ರೈತರು ಬೆಳೆದ ಉತ್ಪನ್ನಗಳಿಗೆ ಸಿಗದ ಬೆಲೆ ಮತ್ತು ರಾಜ್ಯಕ್ಕೆ ಬಹುರಾಷ್ಟ್ರೀಯ ಕಂಪನಿಗಳಿಂದಾಗಿ ರಾಜ್ಯದ ಉದ್ಯಮಗಳು ನಶಿಸುತ್ತಿವೆ ಎಂದರು. 60ವರ್ಷಗಳಿಂದ ರಾಜ್ಯದಲ್ಲಿ ರೈಲ್ವೆ ಯೋಜನೆಗಳಲ್ಲಿ ಆದ ಅನ್ಯಾಯಗಳು ಮತ್ತು ರಾಷ್ಟ್ರೀಯ ಪಕ್ಷಗಳು ರಾಜ್ಯದ ಸಂಪತ್ತನ್ನು ಲೂಟಿ ಮಾಡಿ ಸಂಪತ್ಭರಿತವಾಗುವ ಮೂಲಕ ರಾಜ್ಯವನ್ನು ಬರಿದು ಮಾಡಲು ಹೊರಟಿವೆ ಎಂದರಲ್ಲದೆ, ಜನತಾ ಪಕ್ಷವು ಇವುಗಳನ್ನೆಲ್ಲ ತಡೆಹಿಡಿಯಲು ಪಣ ತೊಟ್ಟಿದೆ ಎಂದರು.
ಗೋಷ್ಟಿಯಲ್ಲಿ ರಾಜ್ಯ ಉಪಾಧ್ಯಕ್ಷ ಚೆಲುವರಾಜ್, ಸಂಚಾಲಕಿ ಜಯಪದ್ಮ, ಕಾರ್ಯದಶರ್ಿ ಜ್ಯೋತಿ ಉಪಸ್ಥಿತರಿದ್ದರು.