Monday, January 23, 2012


ಕಾವೇರಿ ಕಲ್ಪತರು ಬ್ಯಾಂಕ್ನ ನಿಂದ ಗ್ರಾಮೀಣ ಜನರಿಗೆ ವಿಮಾ ಸೌಲಭ್ಯ: ಪಿ.ಎನ್.ಸ್ವಾಮಿ
ಚಿಕ್ಕನಾಯಕನಹಳ್ಳಿ,ಜ.23 : ಗ್ರಾಮೀಣ ಪ್ರದೇಶದ ಜನರಿಗೆ ಜೀವವಿಮಾ ಪಾಲಿಸಿಯ ಅರಿವು ಆಗಲಿ, ಅದರಿಂದ ಸಿಗುವಂತಹ ಅನುಕೂಲಗಳು ಅವರಿಗೆ ದೊರೆಯಲಿ ಎಂಬ ಉದ್ದೇಶದಿಂದ ಕಾವೇರಿ ಕಲ್ಪತರು ಗ್ರಾಮೀಣ ಬ್ಯಾಂಕ್ ಸರಳ ಸುಲಭ ಜೀವವಿಮೆ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ತುಮಕೂರು ಬ್ಯಾಂಕ್ನ ಪ್ರಾದೇಶಿಕ ಮುಖ್ಯ ವ್ಯವಸ್ಥಾಪಕ ಪಿ.ಎಲ್.ಸ್ವಾಮಿ ಹೇಳಿದರು.
ಪಟ್ಟಣದ ಕನಕ ಭವನದಲ್ಲಿ ಕಾವೇರಿ ಕಲ್ಪತರು ಗ್ರಾಮೀಣ ಬ್ಯಾಂಕ್ ವತಿಯಿಂದ ಸ್ವಸಹಾಯ ಸಂಘಗಳಿಗೆ ಸಾಲ ವಿತರಣಾ ಹಾಗೂ ಸರಳ ಸುಲಭ ಜೀವವಿಮೆ ಗುಂಪು ಸ್ವದನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ವಿಮೆಯನ್ನು ಕಲ್ಪತರು ಗ್ರಾಮೀಣ ಬ್ಯಾಂಕ್ನಲ್ಲಿ ಉಳಿತಾಯ ಖಾತೆ ಹೊಂದಿರುವ ಪ್ರತಿಯೊಬ್ಬರೂ ವಿಮೆ ಮಾಡಿಸಬಹುದಾಗಿದ್ದು, ಎಲ್ಲಾ ವಿಮಾ ಪಾಲಿಸಿಯಲ್ಲಿ ಇರುವಂತೆ ಈ ಪಾಲಿಸಿಯಲ್ಲಿಯೂ ಮನಿಬ್ಯಾಕ್ ಪಾಲಿಸಿ, ಎಂಡೋಮೆಂಟ್ ಪಾಲಿಸಿ, ಸ್ಕಾಲರ್ ಪಾಲಿಸಿ, ಸರಳ ಶೀಲ್ಡ್ ಪಾಲಿಸಿ, ಸರಳ್ ಪಾಲಿಸಿ ವಿಮಾ ಪಾಲಿಸಿಯಿದೆ ಎಂದ ಅವರು, ವಿಮಾ ಪಾಲಿಸಿ ಮಾಡಿಸುವುದರಿಂದ ಪಾಲಿಸಿ ಮಾಡಿಸಿದವರ ಕುಟಂಬದ ಜೀವನ ನಿರ್ವಹಣೆಯಾಗುವುದು ಇದಕ್ಕಾಗಿ ಪ್ರತಿಯೊಬ್ಬರಿಗೂ ವಿಮಾ ಪಾಲಿಸಿಯ ಅವಶ್ಯವಿದೆ ಎಂದ ಅವರು ಸ್ವಸಹಾಯ ಸಂಘದ ಸದಸ್ಯರಿಗೆ ಬ್ಯಾಂಕ್ ಸಾಲ ನೀಡುವುದು ನಂಬಿಕೆಯ ಮೇಲೆ ಆ ನಂಬಿಕೆಯನ್ನು ಕಳೆದುಕೊಳ್ಳಬೇಡಿ, ಸಂಘಗಳಲ್ಲಿ ಇತ್ತೀಚಿಗೆ ಒಡಕು ಸೃಷ್ಠಿಯಾಗುತ್ತಿದೆ, ತಮ್ಮ ಸ್ವಂತಕ್ಕಾಗಿ ಸಂಘವನ್ನು ಒಡೆಯಬೇಡಿ ಸಂಘವನ್ನು ಸಂಘಟಿಸುವದಕ್ಕೆ ಧೈರ್ಯಮಾಡಿ ಎಂದು ಸಲಹೆ ನೀಡಿದರು.
ತುಮಕೂರು ಬ್ಯಾಂಕ್ನ ಹಿರಿಯ ವ್ಯವಸ್ಥಾಪಕ ಎ.ಎನ್. ನೀಲಕಂಠರವರು ಮಾತನಾಡಿ,  ದೇಶದಲ್ಲಿ ವಿಮಾ ಪಾಲಿಸಿ ಹೊಂದಿರುವವರು ಶೇ.7ರಷ್ಟು ಮಾತ್ರ, ಗ್ರಾಮೀಣ ಪ್ರದೇಶದ ಜನರಿಗೆ ಈ ಪಾಲಿಸಿಯ ಬಗ್ಗೆ ಇನ್ನೂ ತಿಳಿದೇ ಇಲ್ಲ,  ಪಾಲಿಸಿಯಿಂದ ಸಿಗುವಂತಹ ಅನುಕೂಲಗಳು ಎಲ್ಲರಿಗೂ ಸಿಗಲಿ ಎಂಬ ಉದ್ದೇಶದಿಂದ ಸಾಧ್ಯವಾದಷ್ಟು ಸಾರ್ವಜನಿಕ ಸೇವೆ ಮಾಡವ ಬಯಕೆಯಿಂದ ಕಾವೇರಿ ಕಲ್ಪತರು ಗ್ರಾಮೀಣ ಬ್ಯಾಂಕ್,  ಸರಳ ಸುಲಭ ಜೀವವಿಮೆ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದ ಅವರು,  ಈ ವಿಮಾ ಪಾಲಿಸಿ 5 ರಿಂದ 10ವರ್ಷದ ಅವಧಿಯಾಗಿದ್ದು 50ಸಾವಿರ, 1ಲಕ್ಷ ಹಾಗೂ 3ಲಕ್ಷದ ವರೆವಿಗೂ ವಿಮಾ ಪಾಲಿಸಿ ಮಾಡಿಸಬಹುದು,  ಸಣ್ಣ, ಅತಿಸಣ್ಣ, ಕೂಲಿ ಕಾಮರ್ಿಕರು ಮತ್ತು ಆಥರ್ಿಕವಾಗಿ ಹಿಂದುಳಿದವರಿಗೆ ಸುಲಭವಾಗಿ ವಿಮಾ ಪಾಲಿಸಿ ದೊರಕಲಿ ಎಂಬ ಉದ್ದೇಶದಿಂದ ಬ್ಯಾಂಕ್ ಈ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.
ಚಿ.ನಾ.ಹಳ್ಳಿ ಕಲ್ಪತರು ಗ್ರಾಮೀಣ ಬ್ಯಾಂಕ್ನ ವ್ಯವಸ್ಥಾಪಕ ರಾಜಶೇಖರ್ ಉಪಸ್ಥಿತರಿದ್ದರು.
 C