Thursday, December 1, 2011


: ಶ್ರೀಗುರು ಮರುಳಸಿದ್ದೇಶ್ವರ ಸ್ವಾಮಿಯವರ ಜಾತ್ರಾ ಮಹೋತ್ಸವ
ಚಿಕ್ಕನಾಯಕನಹಳ್ಳಿ,ಡಿ.01 : ಶ್ರೀಗುರು ಮರುಳಸಿದ್ದೇಶ್ವರ ಸ್ವಾಮಿಯವರ ಜಾತ್ರಾ ಮಹೋತ್ಸವ ಹಾಗೂ ಡಾ.ಯತೀಶ್ವರ ಶಿವಾಚಾರ್ಯಸ್ವಾಮಿಗಳ 21ನೇ ವರ್ಷದ ಪಟ್ಟಾಧಿಕಾರ ಮಹೋತ್ಸವ, ಕಾಯಕಯೋಗಿಗಳಿಗೆ ಕುಪ್ಪೂರು ಶ್ರೀರಕ್ಷೆ ಸುಕ್ಷೇತ್ರ ಕಾರ್ಯಕ್ರಮವನ್ನು ಇದೇ 10ರ ಶನಿವಾರ ಮತ್ತು 11ರ ಭಾನುವಾರ ನಡೆಯಲಿದೆ.
ಕುಪ್ಪೂರು ಗದ್ದಿಗೆ ಸಂಸ್ಥಾನ ಮಠದಲ್ಲಿ ಕಾರ್ಯಕ್ರಮವಿದ್ದು 10ರ ಸಂಜೆ 4.30ಕ್ಕೆ ಜನಜಾಗೃತಿ ಭಾವೈಕ್ಯ ಧರ್ಮ ಸಮಾರಂಭ ಹಮ್ಮಿಕೊಂಡಿದ್ದು ಸಿದ್ದಸಂಸ್ಥಾನ ಮಠದ ಜಗದ್ಗುರು ಶಿವಲಿಂಗಸ್ವಾಮಿ ದಿವ್ಯಸಾನಿದ್ಯ ವಹಿಸಲಿದ್ದು ಯಡಿಯೂರು ಕ್ಷೇತ್ರದ ರೇಣುಕ ಶಿವಾಚಾರ್ಯಸ್ವಾಮಿ, ದೊಡ್ಡಗುಣಿಮಠದ ರೇವಣಸಿದ್ದೇಶ್ವರಶಿವಾಚಾರ್ಯಸ್ವಾಮಿ, ಶಿವಗಂಗೆ ಕ್ಷೇತ್ರದ ಮಲಯಶಾಂತಮುನಿ ಶಿವಾಚಾರ್ಯಸ್ವಾಮಿಗಳ ಸಮ್ಮುಖದಲ್ಲಿ ನಡೆಯಲಿದ್ದು ಡಾ.ಯತೀಶ್ವರ ಶಿವಾಚಾರ್ಯಸ್ವಾಮಿ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದು ಆಯುರಾಶ್ರಮದ ಡಾ.ಸಂತೋಷ ಗುರೂಜಿ ಉದ್ಘಾಟನೆ ನೆರವೇರಿಸಲಿದ್ದು ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್, ಮಾಜಿ ಶಾಸಕರಾದ ಎಸ್.ಪಿ.ಗಂಗಾಧರಪ್ಪ, ಜೆ.ಸಿ.ಮಾಧುಸ್ವಾಮಿ, ಕಿರಣ್ಕುಮಾರ್, ತಾ.ಪಂ.ಅಧ್ಯಕ್ಷ ಜಿ.ಆರ್.ಸೀತಾರಾಮಯ್ಯ, ಪುರಸಭಾಧ್ಯಕ್ಷ ದೊರೆಮುದ್ದಯ್ಯ, ಸರ್ಕಲ್ ಇನ್ಸ್ಪೆಕ್ಟರ್ಗಳಾದ ಲೋಕೇಶ್, ಪ್ರಭಾಕರ್ ಉಪಸ್ಥಿತರಿರುವರು.
ಇದೇ ಸಂದರ್ಭದಲ್ಲಿ ಕಾಯಕಯೋಗಿಗಳಾದ  ಅರಳೆ ಗುರುಸಿದ್ದಪ್ಪ, ಬಿ.ಎಸ್.ನಾಗರಾಜು, ವೈ.ಜಗದೀಶ್ದರೇದಾರ, ಎಸ್.ಜಿ.ಜಗದೀಶ್, ಬಿ.ನಿರಂಜನ್ ಇವರಿಗೆ ಕುಪ್ಪೂರು ಶ್ರೀರಕ್ಷೆ ನೀಡಲಾಗುವುದು.
11ರಂದು ಬೆಳಗ್ಗೆ 10.30ಕ್ಕೆ ಧರ್ಮಜಾಗೃತಿ ಧಾಮರ್ಿಕ ಸಮಾರಂಭ ನಡೆಯಲಿದ್ದು ರುದ್ರಮುನಿ ಶಿವಯೋಗಿ ರಾಜೇಂದ್ರಸ್ವಾಮಿ, ಡಾ.ಅಭಿನವಮಲ್ಲಿಕಾಜರ್ುನಸ್ವಾಮಿ  ಡಾ.ಯತೀಶ್ವರಶಿವಾಚಾರ್ಯಸ್ವಾಮಿ ಸಮ್ಮುಖದಲ್ಲಿ ಸಂಸದ ಜಿ.ಎಸ್.ಬಸವರಾಜು ಉದ್ಘಾಟನೆ ನೆರವೇರಿಸಲಿದ್ದು ವಿಭೂತಿಪುರ ಮಠದ ಡಾ.ಮಹಾಂತಲಿಂಗಶಿವಾಚಾರ್ಯ ಗುರೂಜಿ ಅಧ್ಯಕ್ಷತೆ ವಹಿಸಲಿದ್ದಾರೆ. ಬೃಹತ್ ಬ್ರಹ್ಮಾಂಡ ಖ್ಯಾತಿಯ ವೇದಬ್ರಹ್ಮ ನರೇಂದ್ರಬಾಬುಶರ್ಮ ಗುರೂಜಿಗೆ ವಿಶೇಷ ಸನ್ಮಾನ ನಡೆಯಲಿದ್ದು ಖ್ಯಾತ ಸಾಹಿತಿ ಷಣ್ಮುಖಯ್ಯ ಅಕ್ಕೂರ್ ಮಠ್ರವರಿಗೆ ಕುಪ್ಪೂರು ಮರಳಸಿದ್ದಶ್ರೀ ಪ್ರಶಸ್ತಿ ಪ್ರಧಾನ ಮಾಡಲಾಗುವುದು.ವರ್ತಕರ ಸಂಘದಿಂದ ಪ್ರತಿಭಟನೆ  
ಚಿಕ್ಕನಾಯಕನಹಳ್ಳಿ,ಡಿ.01 : ದೇಶದ ಚಿಲ್ಲರೆ ವ್ಯಾಪರ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಕೇಂದ್ರ ಸಕರ್ಾರ ಅನುಮತಿ ನೀಡಲು ನಿರಾಕರಿಸಿರುವುದನ್ನು ವಿರೋಧಿಸಿ ಪಟ್ಟಣದ ದಿನಸಿ ವರ್ತಕರ ಸಂಘ, ಚಿನ್ನಬೆಳ್ಳಿ ವರ್ತಕರ ಸಂಘ, ಜವಳಿ ವರ್ತಕರ ಸಂಘ, ಫ್ಯಾನ್ಸಿ ವರ್ತಕರ ಸಂಘ, ಎಲೆಕ್ಟ್ರಿಕಲ್ ವರ್ತಕರ ಸಂಘ, ಮೊಬೈಲ್ ವರ್ತಕರ ಸಂಘ ಹಾಗೂ ಎಲ್ಲಾ ವರ್ತಕರ ಸಂಘದವರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ವರ್ತಕರ ಸಂಘದ ಈಶ್ವರ್ಭಾಗವತ್, ಚಂದ್ರಶೇಖರ್ ಶ್ರೀನಿವಾಸ್ ಸೇರಿದಂತೆ ಹಲವರು ಭಾಗವಹಿಸಿದ್ದರು.