Tuesday, June 14, 2011







ಪುರಸಭೆಯ ನಿರ್ಲಕ್ಷದಿಂದ ಕೆಸರು ಗದ್ದೆಯಾದ ಬಸ್ ನಿಲ್ದಾಣಚಿಕ್ಕನಾಯಕನಹಳ್ಳಿ,ಜು.14: ಪಟ್ಟಣದ ಪುರಸಭಾ ಬಸ್ ನಿಲ್ದಾಣ, ಮಳೆ ಬಂದರೆ ಪೈರು ನಾಟಿ ಮಾಡಬಹುದಾದಷ್ಟು ಹದಗೊಂಡಿರುತ್ತದೆ ಇದರಿಂದ ಸಾರ್ವಜನಕರಿಗೆ ನಾವು ನಿಂತಿರುವುದು ಬಸ್ ನಿಲ್ದಾಣದಲ್ಲೋ, ಗದ್ದೆಯ ಬದಿಯಲ್ಲೊ ಎಂಬಷ್ಟು ಗೊಂದಲ ಉಂಟಾಗುತ್ತಿದೆ ಇಲ್ಲಿಯ ಪರಿಸ್ಥಿತಿ. ಈ ನಿಲ್ದಾಣ ಡಾಂಬರೀಕರಣಗೊಂಡು ಎರಡು-ಮೂರು ಮಳೆಗಾಲವನ್ನೂ ಕಂಡಿಲ್ಲ, ಅಷ್ಟರಲ್ಲಾಗಲೇ ಗುಂಡಿ ಗೊಟರು ಬಿದ್ದು ನಿಲ್ದಾಣ ಗಬ್ಬೆದ್ದು ಹೋಗಿದೆ. ಪುರಸಭೆಯವರು ಈ ಬಸ್ ನಿಲ್ದಾಣದ ನಿರ್ವಹಣೆಗೆ ಖಾಸಗಿ ಬಸ್ಗಳ ಮಾಲೀಕರಿಂದ ಬಸ್ ಒಂದಕ್ಕೆ ದಿನಕ್ಕೆ ಹತ್ತುರೂ ನಂತೆ ಕರ ವಸೂಲಿ ಮಾಡುತ್ತಿದ್ದಾರೆ. ಆದರೆ ಇದರ ನಿರ್ವಹಣೆಯನ್ನು ಮಾತ್ರ ಕಡೆಗಣಿಸಿರುವ ಪುರಸಭೆಯವರು ಪ್ರಯಾಣಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದಾರೆ. ಪ್ರಯಾಣಿಕರು ಶುಭ ಸಮಾರಂಭವೂ ಸೇರಿದಂತೆ ತಮ್ಮ ಹಲವು ಕಾರ್ಯಗಳಿಗಾಗಿ ಜನ ಶುಭ್ರಬಟ್ಟೆ ತೊಟ್ಟು ಸಂಸಾರದೊಂದಿಗೆ ಬಸ್ ನಿಲ್ದಾಣಕ್ಕೆ ಬಂದು ಬಸ್ ಹತ್ತಲು ಸಿದ್ದಗೊಂಡ ಸಂದರ್ಭದಲ್ಲಿ ಬಸ್ ಒಂದು ಪಕ್ಕದಲ್ಲಿ ಹಾದು ಹೋದರೆ, ಗುಂಡಿಗೊಟರುಗಳಲ್ಲಿದ್ದ ಮಳೆ ನೀರು ಬಸ್ ಚಲಿಸುವ ರಭಸಕ್ಕೆ ಬಟ್ಟೆ ಮೇಲೆ ಸಿಡಿದು ಅಸಹ್ಯ ಮೂಡಿಸುವ ಜೊತೆಗೆ ಜನರ ನಂಬಿಕೆಗಳ ಮೇಲೂ ದುಷ್ಪರಿಣಾಮ ಉಂಟು ಮಾಡುತ್ತಿದೆ. ಪ್ರಯಾಣದ ನಂಬಿಕೆಗಳಿಗೆ ಬೆಲೆ ಕೊಡುವ ಜನರು, ತಮ್ಮ ಬಟ್ಟೆ ಕೊಳಕ್ಕಾಗಿದ್ದಕ್ಕೆ ಬೇಸರದಿಂದ ತಮ್ಮ ಕೆಲಸ ಆಗುವುದಿಲ್ಲವೆಂದು ಮನೆಗೆ ವಾಪಸ್ ಆದ ಅದೆಷ್ಟೋ ಉದಾಹರಣೆಗಳಿವೆ. ಮಳೆ ಬಂದು ಎರಡು ಮೂರು ದಿನಗಳು ಕಳೆದರೂ ಈ ಕಿರುಕುಳ ಜನರಿಗೆ ತಪ್ಪುವುದಿಲ್ಲ. ಬಸ್ ನಿಲ್ದಾಣಕ್ಕೆ ಹೊಂದಿಕೊಂಡ ರಸ್ತೆಯೂ ಇದಕ್ಕಿಂತ ಹೊರತಾಗಿಲ್ಲ. ಇತ್ತೀಚೆಗಷ್ಟೇ ಬಸ್ ನಿಲ್ದಾಣದಲ್ಲಿದ್ದ ಪೆಟ್ಟಿಗೆ ಅಂಗಡಿಗಳನ್ನು ಬಲವಂತವಾಗಿ ತೆರವುಗೊಳಿಸಿ, ಅವರಿಗೆ ಯಾವುದೇ ಪರಿಹಾರ ಮಾರ್ಗವನ್ನು ತೋರಿಸದ ಪರಿಣಾಮ, ಹೂ ಹಣ್ಣು ಸೇರಿದಂತೆ ವಿವಿಧ ಸಣ್ಣ ಪುಟ್ಟ ಅಂಗಡಿಯವರು ಬಸ್ ಸ್ಟಾಂಡ್ನಲ್ಲಿರುವ ಪ್ರಯಾಣಿಕರು ಕೂರುವ ಸ್ಥಳಗಳಲ್ಲಿ ಅಂಗಡಿ ಇಟ್ಟು ಕೊಂಡು ಪ್ರಯಾಣಿಕರಿಗೆ ಸಾಕಷ್ಟು ತೊಂದರೆ ಕೊಡುತ್ತಿದ್ದಾರೆ. ಇಲ್ಲಿ ಶೌಚಾಲಯದ ಕಾಮಗಾರಿಯೂ ನಡೆಯುತ್ತಿರುವುದರಿಂದ ಇಟ್ಟಿಗೆ, ಮರಳು ಮತ್ತಿತರ ವಸ್ತುಗಳನ್ನು ಹಾಕಿಕೊಂಡಿದ್ದು ಬಸ್ ನಿಲ್ದಾಣವನ್ನು ಮತ್ತಷ್ಟು ಕಿರಿದಾಗಿಸಿದೆ, ಈ ಕಾಮಗಾರಿಯನ್ನೂ ಶೀಘ್ರ ಮುಗಿಸಬೇಕಿದೆ. ಬಸ್ ನಿಲ್ದಾಣದ ಒಂದು ಬದಿ ಸೀಮೆಂಟ್ ರಸ್ತೆ ಮಾಡಲು 20 ಲಕ್ಷರೂ ವೆಚ್ಚದಲ್ಲಿ ನಿಮರ್ಿಸಲು ಟೆಂಡರ್ ಕರೆದು ಒಂದು ವರ್ಷವಾದರೂ ಈ ಕಾಮಗಾರಿಯನ್ನು ಕೈಗೆತ್ತಿಕೊಂಡಿಲ್ಲ. ಈ ಬಗ್ಗೆ ಪುರಸಭೆಯ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ಥಾಪವಾಗಿ, ಚಚರ್ೆಗಳು ನಡೆದರು ಕಾಮಗಾರಿ ಆರಂಭಗೊಳ್ಳದಿರುವುದು ಇಲ್ಲಿನ ಆಡಳಿತದ ವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ.