Thursday, January 21, 2016


5ನೇ ವಾಡರ್್ನಲ್ಲಿ ಅನೈರ್ಮಲ್ಯ ಹೆಚ್ಚಾಗಿದೆ : ಸಾರ್ವಜನಿಕರ ಆರೋಪ 
ಚಿಕ್ಕನಾಯಕನಹಳ್ಳಿಜ.21 : ಪಟ್ಟಣದ 5ನೇ ವಾಡರ್್ನ ಪೋಲಿಸ್ ಕ್ವಾಟ್ರಸ್ ಬಳಿಯಿಂದ ರೋಟರಿ ಶಾಲೆಯ ಸುತ್ತಮುತ್ತಲೂ ಸ್ವಚ್ಛತೆಯಿಲ್ಲದೆ ಅನೈರ್ಮಲ್ಯ ಹೆಚ್ಚಾಗಿದೆ ಎಂದು ಆ ಭಾಗದ ಸಾರ್ವಜನಿಕರು ಆರೋಪಿಸಿದ್ದಾರೆ.
  ಪಟ್ಟಣಕ್ಕೆ ಹೊಂದಿಕೊಂಡಂತೆ ವಿಸ್ತಾರಗೊಂಡಿರುವ  ಪೋಲಿಸ್ ಕ್ವಾಟ್ರಸ್ ಬಳಿ  ಯಾವುದೇ ಮೂಲಭೂತ  ಸೌಕಾರ್ಯವಿಲ್ಲದೆ ಇಲ್ಲಿನ ನಾಗರೀಕರು ಪರದಾಡುವಂತಾಗಿದೆ, ಈ ಭಾಗಕ್ಕೆ ಪುರಸಭೆ ವತಿಯಿಂದ ಸರಸ್ವತಿಪುರ ಎಂಬ ಹೆಸರಿಡಲಾಗಿದೆ.  ಇಲ್ಲಿ ಸುಮಾರು 6 ರಿಂದ 8 ಶಾಲಾ ಕಾಲೇಜುಗಳಿದ್ದು ಪ್ರತಿನಿತ್ಯ ಈ ಶೆಟ್ಟಿಕೆರೆ ರಸ್ತೆಯಲ್ಲಿ ಸುಮಾರು 5000ಮಕ್ಕಳು ಶಾಲಾ ಕಾಲೇಜಿಗೆ ಬಂದು ಹೋಗುತ್ತಾರೆ. ಹಾಗೂ ತಿಪಟೂರು ರಸ್ತೆಯಾದ್ದರಿಂದ ಹೆಚ್ಚಿನ ವಾಹನಗಳು ಶಾಲಾ ವಾಹನಗಳು, ದ್ವಿಚಕ್ರ ವಾಹನಗಳು ಸಂಚರಿಸುತ್ತವೆ ಜೊತೆಗೆ ತಾಲ್ಲೂಕು ಸಬ್ ರಿಜಿಸ್ಟಾರ್ರವರ  ಕಛೇರಿಯು ಸಹ ಈ ವಾಡರ್್ನಲ್ಲಿದ್ದು ಗ್ರಾಮಾಂತರ ಜನರು ಸಹ ಹೆಚ್ಚಿನದಾಗಿ ತಮ್ಮ ಕೆಲಸ ಕಾರ್ಯಗಳಿಗೆ ಪ್ರತಿನಿತ್ಯ ಬಂದು ಹೋಗುವ ಜಾಗವಾಗಿದೆ.
 ಈ ವಾಡರ್್ನಲ್ಲಿ ಪುರಸಭಾ ವತಿಯಿಂದ ಯಾವುದೇ ಚರಂಡಿಗಳ ವ್ಯವಸ್ಥೆಯಾಗಲಿ ರಸ್ತೆ ದೀಪಗಳ ವ್ಯವಸ್ಥೆಯಾಗಲಿ ನೀರಿನ ವ್ಯವಸ್ಥೇಯಾಗಲಿ ಇಲ್ಲವಾಗಿದೆ, ಕಾರಣ ವಾಡರ್್ನಲ್ಲಿರುವ ಜನರು ತಮ್ಮ ಮನೆಗಳ, ಹೋಟೆಲ್ಗಳ ಹಾಗೂ ಗ್ಯಾರೇಜ್ಗಳ ಕಲುಷಿತ ನೀರನ್ನು ಮುಖ್ಯರಸ್ತೆಯ ಇಕ್ಕೆಲಗಳಲ್ಲಿ ಬಿಡುವುದರಿಂದ ವಾಹನ ಸವಾರರು ರಸ್ತೆ ಮೇಲಿನ ಚರಂಡಿ ನೀರಿನಲ್ಲಿ ವಾಹನ ಹರಿಸಿದಾಗ ಆ ಕಲುಷಿತ ನೀರು ಪಾದಚಾರಿಗಳಿಗೆ ಸಿಡಿಯುತ್ತದೆ. ಇನ್ನು ಶಾಲಾ ಮಕ್ಕಳೂ ಸ್ವಚ್ಛತೆಯಿಂದ ಶಾಲೆಗೆ ಹೋಗಬೇಕಾದರೆ ಆ ನೀರನ್ನು ಮೈಗೆ ಸಿಡಿಸಿಕೊಂಡು ಸಮವಸ್ತ್ರ ಕೊಳಕು ಮಾಡಿಕೊಂಡು ಉದಾಹರಣೆಗಳೆಷ್ಟೊ,  ಶಾಲಾ ಆವರಣವಾಗಿದ್ದರು ಯಾವುದೇ ಸೂಚನಾ ಫಲಕಗಳಿಲ್ಲದಿರುವುದರಿಂದ,  ವಾಹನ ಸವಾರರು ಅಡ್ಡದಿಡ್ಡಿಯಾಗಿ ಚಲಿಸುವುದರಿಂದ ಈ ಭಾಗದಲ್ಲಿ ಅಪಘಾತಗಳು ಸವರ್ೆ ಸಾಮಾನ್ಯವಾಗಿದೆ ಇನ್ನೂ ಹೊಸ ಬಡಾವಣೆಗಳಾಗಿದ್ದು ಬೀದಿ ದೀಪಗಳ ವ್ಯವಸ್ಥೆ ಹಾಗೂ ಅವುಗಳ ನಿರ್ವಹಣೆ ಯಾರು ಕೇಳದಂತಾಗಿದೆ. ಇನ್ನೂ ಕುಡಿಯುವ ನೀರಿನ ಸರಬರಾಜು  10 ರಿಂದ 15 ದಿನಗಳಿಗೊಮ್ಮೆಬಿಡುತ್ತಾರೆ,  ಬೀದಿದೀಪ ಸರಿಪಡಿಸಿ ಎಂದು ಪುರಸಭೆಯವರಿಗೆ ತಿಳಿಸಿದರೆ 1 ತಿಂಗಳಾದರೂ ಈ ಕಡೆ ಬರುವುದಿಲ್ಲ ಇಲ್ಲಿ ಉಳಉಪ್ಪಟಗಳ ಕಾಟ ಹೆಚ್ಚಾಗಿದ್ದು ಶಿಕ್ಷಕರು ಮತ್ತು ಪೋಷಕರು ಮಕ್ಕಳನ್ನು  ಕಾಯುವಂತಾಗಿದೆ ಒಟ್ಟಾರೆ ಸರಸ್ವತಿ ಪುರದ ಜನರ ಕಷ್ಟ ಹೇಳತೀರದಾಗಿದೆ ಈಗಲಾದರೂ ಸಂಬಂದಿಸಿದವರು ಇತ್ತ ಗಮನ ಹರಿಸುವರೇ ಎಂದು ಆ ಭಾಗದ ನಿವಾಸಿಗಳು ತಮ್ಮ ಅಳಲನ್ನು ಮಾಧ್ಯಮದವರೆದರು ತೋಡಿಕೊಂಡಿದ್ದಾರೆ. 

ಜ.24ರಂದು ಬನದ ಹುಣ್ಣಿಮೆ
ಚಿಕ್ಕನಾಯಕನಹಳ್ಳಿ,ಜ,21 : ಶ್ರೀ ಬನಶಂಕರಿ ಮತ್ತು ಚೌಡೇಶ್ವರಿ ಅಮ್ಮನವರ ಬನದ ಹುಣ್ಣಿಮೆ ಹಾಗೂ ಬೆಳ್ಳಿ ಕವಚ ಅಲಂಕಾರ ಮಹೋತ್ಸವವನ್ನು ಪಟ್ಟಣದ ಬನಶಂಕರಿ ದೇವಾಲಯದಲ್ಲಿ ಇದೇ 24ರ ಭಾನುವಾರ ನಡೆಯಲಿದೆ ಎಂದು ದೇವಾಂಗ ಸಂಘದ ನಿದರ್ೇಶಕ ಸಿ.ವಿ.ಪ್ರಕಾಶ್ ತಿಳಿಸಿದ್ದಾರೆ.
ಬನದ ಹುಣ್ಣಿಮೆ ಪ್ರಯುಕ್ತ ಕೆರೆ ಬಾವಿಯಿಂದ ಅಮ್ಮನವರ ಕಳಸವನ್ನು ಮಂಗಳವಾದ್ಯದೊಂದಿಗೆ ವೀರಮಕ್ಕಳ ಜೊತೆಗೂಡಿ ದೇವಾಲಯಕ್ಕೆ ಕರೆತರುವುದು ನಂತರ ಬನಶಂಕರಿ ಅಮ್ಮನವರ ರಥೋತ್ಸವ ನಡೆಯಲಿದೆ, ಮಧ್ಯಾಹ್ನ 2.30ಕ್ಕೆ ಶ್ರೀ ಬನಶಂಕರಿ ಅಮ್ಮನವರ ಉಯ್ಯಾಲೆ ಉತ್ಸವ ಹಾಗೂ ಅನ್ನಸಂತರ್ಪಣೆ ನಡೆಯಲಿದೆ ಎಂದು ದೇವಾಂಗ ಸಂಘದ ನಿದರ್ೇಶಕ ನಟರಾಜು ತಿಳಿಸಿದ್ದಾರೆ.

ದೇಶ ಸುತ್ತಿ ನೋಡು ಇಲ್ಲ ಕೋಶ ಓದಿ ನೋಡು : ಬಿಇಓ ಕೃಷ್ಣಮೂತರ್ಿ
ಚಿಕ್ಕನಾಯಕನಹಳ್ಳಿ,ಜ.20 : ದೇಶ ಸುತ್ತಿ ನೋಡು ಕೋಶ ಓದಿ ನೋಡು ಎಂಬಂತೆ ಓದಿನ ಜತೆಗೆ ಪ್ರವಾಸ ಮಕ್ಕಳ ಶೈಕ್ಷಣಿಕ ಹಾಗೂ ಸಾಮಾಜಿಕ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂತರ್ಿ ಹೇಳಿದರು.
  ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿಯಿಂದ ಉತ್ತರ ಕನರ್ಾಟಕ ಪ್ರವಾಸ ಹೊರಟ ಮಕ್ಕಳ ತಂಡಕ್ಕೆ ಶುಭಕೋರಿ ಮಾತನಾಡಿ, ಪರಿಶಿಷ್ಠ ಜಾತಿ ಹಾಗೂ ಪಂಗಡದ ಪ್ರೌಢಶಾಲಾ ಮಕ್ಕಳ ಸವರ್ಾಂಗೀಣ ಅಭಿವೃದ್ಧಿಗೆ ಸಕರ್ಾರ ಹಲವಾರು ಕಾರ್ಯಕ್ರಮ ಹಾಕಿಕೊಂಡಿದೆ, ಮಕ್ಕಳು ಸವಲತ್ತುಗಳನ್ನು ಬಳಸಿಕೊಂಡು ಜವಾಬ್ಧಾರಿಯುತ ಪ್ರಜೆಗಳಾಗಿ ಬೆಳೆಯಬೇಕು ಎಂದರು.
  ತಾಲ್ಲೂಕಿನ ಸಕರ್ಾರಿ ಶಾಲೆಗಳಿಂದ ಆಯ್ಧ 98 ಪ್ರೌಢಶಾಲೆ ಮಕ್ಕಳು ಪ್ರವಾಸಕ್ಕೆ ತೆರಳಿದರು. 4 ಶಿಕ್ಷಕರು, 2 ಮಾರ್ಗದಶರ್ಿಗಳು, 2 ಸಹಾಯಕರು ತಂಡದಲ್ಲಿ ಇದ್ದರು.


 ವಿವೇಕಾನಂದರ ಜಯಂತಿಯನ್ನು ವಿಶಿಷ್ಠವಾಗಿ ಆಚರಿಸಿದ ಶಾಲಾ ಮಕ್ಕಳು 
ಚಿಕ್ಕನಾಯಕನಹಳ್ಳಿ,ಜ.21 : ತಾಲ್ಲೂಕು ಶೆಟ್ಟಿಕೆರೆ ಹೋಬಳಿ ಸಾಸಲು ಸಕರ್ಾರಿ ಪ್ರೌಢಶಾಲೆಯಲ್ಲಿ ಈಚೆಗೆ ಸಾಂಪ್ರದಾಯಿಕ ಉಡುಗೆ ಹಾಗೂ ಪೂರ್ಣಕುಂಭದೊಂದಿಗೆ ಊರಿನ ಪ್ರಮುಖ ಬೀದಿಗಳಲ್ಲಿ ವಿವೇಕಾನಂದರ ಭಾವಚಿತ್ರ ಹಿಡಿದು ಮೆರವಣಿಗೆ ಮಾಡುವ ಮೂಲಕ  ವಿವೇಕಾನಂದರ ಜಯಂತಿಯನ್ನು ವಿಶಿಷ್ಟವಾಗಿ ಆಚರಿಸಲಾಯಿತು.
 ವಿದ್ಯಾಥರ್ಿಗಳು ಸೀರೆ, ಶೆಲ್ಯ, ಪಂಚೆ ತೊಟ್ಟು ಗಮನ ಸೆಳೆದರು. ದೊಡ್ಡವರು ಹಾಗೂ ಶಿಕ್ಷಕರು ಮಕ್ಕಳೊಂದಿಗೆ ಹೆಜ್ಜೆ ಹಾಕಿದರು. ಗ್ರಾಮಸ್ಥರು ವಿವೇಕಾನಂದರ ಭಾವಚಿತ್ರಕ್ಕೆ ಆರತಿ ಬೆಳಗಿದರು. ವಿವೇಕಾನಂದರ ಸ್ಫೂತರ್ಿ ಘೋಷಗಳನ್ನು ಕೂಗುತ್ತ ಮಕ್ಕಳು ಮೆರವಣಿಗೆಯಲ್ಲಿ ಸಾಗಿಬಂದರು.
   ನಂತರ ನಡೆದ ಸಮಾರಂಭದಲ್ಲಿ ಮುಖ್ಯ ಶಿಕ್ಷಕ ಜಿ.ಸಂತೋಷ್ ಮಾತನಾಡಿ, ದೀನ ದಲಿತರಲ್ಲಿ ದೇವರನ್ನು ಕಾಣು ಎಂದು ಹೇಳಿದ ವಿವೇಕಾನಂದರ ಮಾತನ್ನು ಪ್ರತಿಯೊಬ್ಬ ಬಾಲ್ಯದಲ್ಲೇ ಅರ್ಥಮಾಡಿಕೊಂಡರೆ ಸಮಾಜ ಸೃಷ್ಟಿಯಾಗುವುದರಲ್ಲಿ ಅನುಮಾನವಿಲ್ಲ ಎಂದರು.
ಗ್ರಾಮದ ಮುಖಂಡ ಆಡಿಟರ್ ಚಂದ್ರಣ್ಣ ಮಾತನಾಡಿ, ವಿವೇಕಾನಂದರ ವಿಚಾರಧಾರೆಯನ್ನು ಯುವಕರಿಗೆ ದಾಟಿಸುವುದು ಮುಖ್ಯ ಎಂದರು. ತಮ್ಮಡಿಹಳ್ಳಿ ಸಕರ್ಾರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯರಾದ ಟಿ.ಜಯಣ್ಣ ಮಾತನಾಡಿದರು. ಶಿಕ್ಷಕರಾದ ರಾಜಶೇಖರಯ್ಯ ನಿರೂಪಿಸಿ, ಲೋಕೇಶ್ ಸ್ವಾಗತಿಸಿದರು. ಕುಮಾರಸ್ವಾಮಿ ಪ್ರಗತಿ ವರದಿ ವಾಚಿಸಿದರು. ಜೆ.ಪ್ರವೀಣ್ ವಂದಿಸಿದರು.

ಹಿಂದಿ ಭಾಷೆ ನೆಪದ ಮೂಲಕ ಸ್ವಾತಂತ್ರ್ಯ ಸಂಗ್ರಾಮಕ್ಕೆ ಜನರ ಧಾವಿಸುತ್ತಿದ್ದರು
ಚಿಕ್ಕನಾಯಕನಹಳ್ಳಿ,ಜ.21 : ಮಹಾತ್ಮಾಗಾಂಧೀಜಿ 1914ರಿಂದಲೂ ಹಿಂದಿ ಭಾಷೆಗೆ ವಿಶೇಷ ಸ್ಥಾನಮಾನ ಕಲ್ಪಿಸಲು ಮುಂದಾದವರು, ಏಕೆಂದರೆ ಭಾರತದಲ್ಲಿ ಹಿಂದಿ ಭಾಷೆ ಹೆಚ್ಚಿನ ಜನ ಮಾತನಾಡುತ್ತಿದ್ದರು, ಭಾಷೆಯ ನೆಪದಲ್ಲಿ ಸ್ವಾತಂತ್ರ್ಯ ಸಂಗ್ರಾಮಕ್ಕೆ ಗಾಂಧೀಜಿ ಜನರನ್ನು ಕರೆತರುತ್ತಿದ್ದರು  ಎಂದು ಬಿ.ಇ.ಓ ಕೃಷ್ಣಮೂತರ್ಿ ಹೇಳಿದರು.
ಪಟ್ಟಣದ ಡಿವಿಪಿ ಬಾಲಕಿಯರ ಪ್ರೌಢಶಾಲೆಯಲ್ಲಿ ನಡೆದ ಹಿಂದಿ ಶಿಕ್ಷಕರಿಗೆ ಕಾಯರ್ಾಗಾರ, ಹಿರಿಯ ಸಾಹಿತಿ ಎಂ.ವಿ.ನಾಗರಾಜ್ರಾವ್ರವರು ಬರೆದಿರುವ ಹಿಂದಿ ಸಾಹಿತ್ಯ ಚರಿತ್ರೆ ಪುಸ್ತಕ ಬಿಡುಗಡೆ ಹಾಗೂ ಹಿಂದಿ ಭಾಷೆಯ ಸಿ.ಡಿ.ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕನ್ನಡ ಭಾಷೆಯಲ್ಲಿರುವ ಹಿಂದಿ ಸಾಹಿತ್ಯ ಚರಿತ್ರೆ ಪುಸ್ತಕವನ್ನು ಹಿಂದಿ ಶಿಕ್ಷಕರು ಕಡ್ಡಾಯವಾಗಿ ಖರೀದಿಸಿ ಪುಸ್ತಕದಲ್ಲಿರುವ ಅಂಶಗಳನ್ನು ತಿಳಿದುಕೊಂಡು ಮಕ್ಕಳಿಗೆ ಬೋಧಿಸಿ ಎಂದು ಸಲಹೆ ನೀಡಿದರು.
ಎಂ.ವಿ.ನಾಗರಾಜ್ರವರು ಹಿರಿಯರು, ಅನುಭವಸ್ಥರು ಅವರು ಬರೆದಿರುವ ಪುಸ್ತಕ ಕನ್ನಡದಲ್ಲಿ ಉತ್ತಮವಾಗಿ ಮೂಡಿ ಬಂದಿದ್ದು ಪ್ರತಿಯೊಬ್ಬರಿಗೂ ಅರ್ಥವಾಗಲಿದೆ, ಶಾಲಾ ಶಿಕ್ಷಕರು ಪುಸ್ತಕವನ್ನು ಖರೀದಿಸಿ, ಕಛೇರಿಗೆ ಅಜರ್ಿ ನೀಡಿದರೆ ಶಾಲಾ ಸಂಚಿತ ನಿಧಿಯಿಂದ ಪುಸ್ತಕ ತೆಗೆದುಕೊಳ್ಳಲು ಅನುಮತಿ ನೀಡುತ್ತೇನೆ ಎಂದ ಅವರು ತಾಲ್ಲೂಕಿನ ಹಿಂದಿ ಭಾಷಾ ಬೋಧಕರ ಸಂಘ ಕ್ರಿಯಾಶೀಲವಾಗಿದೆ ಎಂದರು.
ಸಾಹಿತಿ ಎಂ.ವಿ.ನಾಗರಾಜ್ರಾವ್ ಮಾತನಾಡಿ, ಹಿಂದಿ ಸಾಹಿತ್ಯ ಚರಿತ್ರೆ ಪುಸ್ತಕ ಬಿಡುಗಡೆಯಾಗಿ ಸಾವಿರ ಪ್ರತಿಗಳು ಖಚರ್ಾಗಿವೆ, ಈಗ ಬಿಡುಗಡೆಯಾಗುತ್ತಿರುವ ಪುಸ್ತಕ ಎರಡನೇ ಮುದ್ರಣವಾಗಿದೆ, ಪುಸ್ತಕದಲ್ಲಿರುವ ಅಂಶಗಳನ್ನು ತಿಳಿದುಕೊಂಡು ಶಿಕ್ಷಕರು ಟೀಕೆ, ಪ್ರಶಂಸೆ ಮಾಡಬಹುದಾಗಿದೆ ಎಂದರು.
ಬಿಆರ್ಸಿ ತಿಮ್ಮರಾಯಪ್ಪ ಮಾತನಾಡಿ, ಹಿಂದಿ ಭಾಷೆ ಜೋಡಣೆ ಭಾಷೆ, ಶಿಕ್ಷಕರು ಮಕ್ಕಳಿಗೆ ಮನಮುಟ್ಟುವಂತೆ ಭಾಷೆಯ ಬಗ್ಗೆ ಬೋಧನೆ ಮಾಡುವಂತೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಸಕರ್ಾರಿ ಪ್ರಥಮ ದಜರ್ೆ ಕಾಲೇಜು ಪ್ರಾಂಶುಪಾಲ ಸಿ.ಜಿ.ಸುರೇಶ್, ನೋಡಲ್ ಅಧಿಕಾರಿ ಶಿವಣ್ಣ ಮಾತನಾಡಿದರು. ಕಾರ್ಯಕ್ರಮದಲ್ಲಿ ಹಿಂದಿ ಭಾಷೆಯ ಬೋಧನೆ ಬಗ್ಗೆ ಇರುವ ಸಿ.ಡಿ.ಬಿಡುಗಡೆ ಮಾಡಲಾಯಿತು. ತಾಲ್ಲೂಕು ಪ್ರೌಡಶಾಲಾ ಹಿಂದಿ ಭಾಷಾ ಬೋಧಕರ ಸಂಘದ ವತಿಯಿಂದ ತಾಲ್ಲೂಕಿನ ಹಿಂದಿ ಶಿಕ್ಷಕರುಗಳಿಗೆ ಉಚಿತವಾಗಿ ನೀಡಲಾಯಿತು.
ಕಾರ್ಯಕ್ರಮದಲ್ಲಿ ತಾಲ್ಲೂಕು ಪ್ರೌಡಶಾಲಾ ಹಿಂದಿ ಭಾಷಾ ಬೋಧಕರ ಸಂಘದ ಅಧ್ಯಕ್ಷ ಸಿ.ಎ.ಕುಮಾರಸ್ವಾಮಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಪುಟ್ಟಣ್ಣ ಸ್ವಾಗತಿಸಿದರು. ಸೌಭಾಗ್ಯಮ್ಮ ನಿರೂಪಿಸಿದರು, ಗಂಗಾಧರ್ ವಂದಿಸಿದರು. ಶಿಕ್ಷಕರಾದ ಅರುಣ್, ಗುರುಸ್ವಾಮಿನಾಯ್ಡು ಮತ್ತಿತರರು ಉಪಸ್ಥಿತರಿದ್ದರು.

ವಿದ್ಯುತ್ ಉಳಿಸಿ ತರಬೇತಿ ಕಾಯರ್ಾಗಾರ



ಚಿಕ್ಕನಾಯಕನಹಳ್ಳಿ,ಜ.21 : ಜನಸಂಖ್ಯೆ ಹೆಚ್ಚಳ, ಕೈಗಾರಿಕೀಕರಣ ಹಾಗೂ ಯಾಂತ್ರಿಕ ಬಳಕೆಯಿಂದ ದಿನದಿಂದ ದಿನಕ್ಕೆ ವಿದ್ಯುತ್ ಉತ್ಪಾದನೆಗಿಂತ ಬಳಕೆ ಹೆಚ್ಚಾಗುತ್ತಿದ್ದು ಸಾರ್ವಜನಿಕರು ಅವಶ್ಯಕತೆ ಹಾಗೂ ಅಗತ್ಯಕ್ಕೆ ತಕ್ಕಂತೆ ವಿದ್ಯುತ್ ಬಳಕೆ ಮಾಡುವುದನ್ನು ಕಲಿತು ವಿದ್ಯುತ್ ಉಳಿತಾಯ ಮಾಡಬೇಕಿದೆ ಎಂದು ಸಂಪನ್ಮೂಲ ವ್ಯಕ್ತಿ ಈರಣ್ಣ ತಿಳಿಸಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಬೆಸ್ಕಾಂ ಮತ್ತು ಮಹಾತ್ಮಗಾಂಧಿ ರೂರಲ್ ಡೆವಲಪ್ಮೆಂಟ್ ಅಂಡ್ ಯೂತ್ ವೆಲ್ಫೇರ್ ಸೆಂಟರ್ ವತಿಯಿಂದ ವಿದ್ಯುತ್ ಸುರಕ್ಷತೆ ಹಾಗೂ ಉಳಿತಾಯದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಒಂದು ದಿನದ ತರಬೇತಿ ಕಾರ್ಯಕ್ರಮ ನಡೆಯಿತು.
ಮನುಷ್ಯನಿಗೆ ಆಹಾರ, ನೀರು, ಗಾಳಿ ಬೆಳಕು ಹೇಗೆ ಮೂಲಭೂತ ಅವಶ್ಯಕತೆಗಳಾಗಿದೆ ಅದೇ ರೀತಿ ಇತ್ತೀಚಿನ ದಿನಗಳಲ್ಲಿ ವಿದ್ಯುತ್ ಇಲ್ಲದೇ ಸಾರ್ವಜನಿಕರು ಬದುಕುವುದು ಕಷ್ಟವಾಗಿದೆ, ಆಧುನಿಕ ಹಾಗೂ ತಾಂತ್ರಿಕ ಜಗತ್ತಿನಲ್ಲಿ ಮನುಷ್ಯನ ದಿನನಿತ್ಯದ ಪ್ರತಿಯೊಂದು ಚಟುವಟಿಕೆಗೂ ವಿದ್ಯುತ್ ಅಗತ್ಯವಾಗಿದೆ, ಗೃಹಬಳಕೆಗೆ, ಕೃಷಿ ವಲಯಕ್ಕೆ, ಸಾರ್ವಜನಿಕ ಉಪಯೋಗಕ್ಕೆ, ರಕ್ಷಣಾ ವಲಯಕ್ಕೆ, ಕೈಗಾರಿಕೆಗೆ, ಶೈಕ್ಷಣಿಕ ವಲಯಕ್ಕೆ, ವಾಣಿಜ್ಯೋದ್ಯಮಕ್ಕೆ ಹೀಗೆ ಪ್ರತಿಯೊಂದಕ್ಕೂ ವಿದ್ಯುತ್ ಅವಲಂಬಿತರಾಗಿದ್ದೇವೆ ಆದ್ದರಿಂದ ವಿದ್ಯುತ್ ಉಳಿತಾಯ ಮಾಡುವುದು ಅಗತ್ಯವಾಗಿದೆ ಎಂದರು.
ಉಪನ್ಯಾಸಕ ಶೈಲೇಂದ್ರಕುಮಾರ್ ಮಾತನಾಡಿ, ವಿದ್ಯುತ್ ಮಿತವಾಗಿ ಬಳಕೆ ಮಾಡುವುದರ ಬಗ್ಗೆ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾಲಾ ಕಾಲೇಜು ವಿದ್ಯಾಥರ್ಿಗಳಿಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಭವಾನಿ ಸ್ತ್ರೀಶಕ್ತಿ ಸಂಘದ ಶುಭಾ, ವಿದ್ಯಾಥರ್ಿನಿ ಜ್ಯೋತಿ, ಗ್ರಾ.ಪಂ.ನೌಕರ ಚಂದ್ರಶೇಖರ್, ಸಂಪನ್ಮೂಲ ವ್ಯಕ್ತಿಗಳಾದ ನಟೇಶ್ಬಾಬು, ರವೀಂದ್ರಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.