Thursday, January 24, 2013


ಗುಳೇ ಹೋಗುವುದನ್ನು ಬಿಟ್ಟು ಉಪ ಕಸಬುಗಳಿಗೆ ಮಾರುಹೋಗಿ
ಚಿಕ್ಕನಾಯಕನಹಳ್ಳಿ,ಜ.23 : ರೈತರಿಗೆ ಕೃಷಿ ಕೈಕೊಟ್ಟಾಗ ಪಟ್ಟಣದ ಪ್ರದೇಶಕ್ಕೆ ಗುಳೇ ಹೋಗಿ ಕಷ್ಟ ಪಡುವುದಕ್ಕಿಂತ ಡಿಸಿಸಿ ಬ್ಯಾಂಕ್ ವತಿಯಿಂದ ನೀಡುವ ಸಾಲವನ್ನು ಪಡೆದುಕೊಂಡು ಹಳ್ಳಿಯಲ್ಲೇ ಸಣ್ಣಪುಟ್ಟ ವ್ಯಾಪಾರ ಅಥವಾ ಉಪಕಸುಬುಗಳನ್ನು ಮಾಡಿ, ಆ ಮೂಲಕ ರೈತರು ತಮ್ಮ ಆಥರ್ಿಕ ಮಟ್ಟ ಸುಧಾರಿಸಿಕೊಳ್ಳಿ ಎಂದು ಜಿಲ್ಲಾ ಡಿಸಿಸಿ ಬ್ಯಾಂಕ್ ನಿದರ್ೇಶಕ ಸಿಂಗದಹಳ್ಳಿ ರಾಜ್ಕುಮಾರ್ ತಿಳಿಸಿದರು.
 ತಾಲ್ಲೂಕಿನ ರಾಮನಹಳ್ಳಿಯಲ್ಲಿ ನಡೆದ ರೈತರಿಗೆ ಸಾಲ ಸೌಲಭ್ಯದ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಹಳ್ಳಿ ಬಿಟ್ಟು ನಗರ ಪ್ರದೇಶಕ್ಕೆ ತೆರಳುವವರ ಜೀವನ ಕಷ್ಟಕರವಾಗಿರುತ್ತದೆ, ತಮ್ಮ ಹುಟ್ಟಿದ ಊರಿನಲ್ಲೇ ಕೃಷಿ ಜೊತೆಗೆ ಸಣ್ಣಪುಟ್ಟ ವ್ಯಾಪಾರ ಮಾಡಿದರೆ ತಮ್ಮ ತಂದೆ, ತಾಯಿ, ಕುಂಟುಂಬವನ್ನು ನೋಡಿಕೊಂಡು  ನೆಮ್ಮದಿಯಿಂದ ಜೀವನ ಸಾಗಿಸಬಹುದು ಎಂದರಲ್ಲದೆ ತಾಲ್ಲೂಕಿನ ಎಲ್ಲಾ ರೈತರಿಗೂ ನನ್ನ ನಿದರ್ೇಶಕನ ಅವಧಿಯಲ್ಲಿ ಸಾಲ ಕೊಡಿಸಿದ್ದು ಈ ರೈತರು ಸರಿಯಾದ ಸಮಯಕ್ಕೆ ಸಾಲವನ್ನು ಮರುಪಾವತಿ ಮಾಡಿದರೆ ಅವರಿಗೆ ಪುನಃ ಬಡ್ಡಿ ರಹಿತ ಸಾಲ ಕೊಡಿಸುತ್ತಿರುವುದಾಗಿಯೂ ಹಾಗೂ ಹಲವು ರೈತರಿಗೆ ಸಾಲ ಮನ್ನ ಆಗಿರುವ ಬಗ್ಗೆಯೂ ತಿಳಿಸಿದರು.
ಈ ಭಾಗದ ರೈತರ ಜಮೀನುಗಳಲ್ಲಿ ಅಂತರ್ಜಲ ಮಟ್ಟ ಕುಸಿದಿದೆ, ಶೆಟ್ಟಿಕೆರೆಯ ಸಾಸಲಿನ ಮೂಲಕ ತಾಲ್ಲೂಕಿನ ಹಲವು ಕೆರೆಗಳಿಗೆ ಕುಡಿಯುವ ನೀರು ದೊರಕಲಿದೆ, ಆ ನೀರನ್ನು ಗುಡ್ಡಗಾಡು ಪ್ರದೇಶಗಳಿಗೂ ಹರಿಸಲು ಮುಖ್ಯಮಂತ್ರಿಗಳಿಗೆ ಮನವಿ ಪತ್ರ ನೀಡಿರುವುದಾಗಿ ತಿಳಿಸಿದರು. ಈ ಭಾಗಕ್ಕೆ ನೀರನ್ನು ಹರಿಸುವಂತೆ ಒತ್ತಾಯಿಸಿ ಮುಂದಿನ ದಿನಗಳಲ್ಲಿ ರೈತರೊಂದಿಗೆ ಹೋರಾಟ ಮಾಡುವುದಾಗಿಯೂ ತಿಳಿಸಿದರು.
ರೈತರಿಗೆ ನೀಡುತ್ತಿರುವ ಸಾಲದ ಹಣವನ್ನು ಡಿಸಿಸಿ ಬ್ಯಾಂಕ್ನ ಠೇವಣಿ ಹಣದಲ್ಲಿ ನೀಡುತ್ತಿದ್ದು ರೈತರು ತಮ್ಮ ಠೇವಣಿಗಳನ್ನು ಬೇರೆ ಬ್ಯಾಂಕ್ಗಳಲ್ಲಿ ಇಡುವ ಬದಲು ನಮ್ಮ ಬ್ಯಾಂಕಿನಲ್ಲೇ ಇಟ್ಟರೆ ರೈತರಿಗೂ ಅನುಕೂಲವಾಗುತ್ತದೆ ಎಂದರು.
ಗುಡ್ಡಗಾಡು ಪ್ರದೇಶಗಳ ಸಹಕಾರ ಬ್ಯಾಂಕ್ಗಳಿಗೆ ಮಾತ್ರ ರಾಜ್ಕುಮಾರ್ ಸಾಲ ಸೌಲಭ್ಯವನ್ನು ಕೊಡಿಸುತ್ತಾರೆ ಇತರೆ ಬ್ಯಾಂಕ್ಗಳಿಗೆ  ಆ ಸೌಲಭ್ಯ ನೀಡುವುದಿಲ್ಲ ಎಂಬ ಆರೋಪ ನನ್ನ ಮೇಲಿದೆ ಆದರೆ ತಾಲ್ಲೂಕಿನ ಹೋಬಳಿಗಳ ಹಲವು ಸಹಕಾರ ಬ್ಯಾಂಕ್ಗಳಿಗೆ ಸಾಲಸೌಲಭ್ಯ ಕೊಡಿಸಿರುವುದಾಗಿ ತಿಳಿಸಿದರು.
ರಾಮನಹಳ್ಳಿ ಸಹಕಾರ ಬ್ಯಾಂಕ್ಗೆ ಮೊದಲು 75ಸಾವಿರ ಸಾಲ ಕೊಡಿಸಿದ್ದು, ಈಗ ಈ ಬ್ಯಾಂಕ್ಗೆ 20ಲಕ್ಷರೂ ಸಾಲ ಪಡೆದಿದೆ. ಒಟ್ಟಾರೆ ಈ ಸಂಸ್ಥೆ ಅಭಿವೃದಿಯಾಗಿ 3ಕೋಟಿಯಷ್ಟು ವ್ಯವಹಾರ ನಡೆಸುತ್ತಿದ್ದು ಈ ಭಾಗದಲ್ಲಿ 96ಲಕ್ಷರೂ ಗಳಷ್ಟು ರೈತರ ಸಾಲ ಮನ್ನಾ ಆಗಿದೆ ಎಂದರು.
 ಟಿ.ಎ.ಪಿ.ಸಿ.ಎಂ.ಎಸ್ ನಿದರ್ೇಶಕ ಆರ್.ಬಿ.ಕುಮಾರ್ ಮಾತನಾಡಿ ಡಿಸಿಸಿ ಬ್ಯಾಂಕ್ ವತಿಯಿಂದ ನೀಡಲಾಗಿರುವ ಸಾಲವನ್ನು ರೈತರು ದುರುಪಯೋಗ ಪಡಿಸಿಕೊಳ್ಳದೆ ಸಾಲದಿಂದ ಲಾಭ ಪಡೆಯುವ ಬಗ್ಗೆ ತಿಳಿಸಿದರು.
ಸ್ಥಳೀಯ ಸಹಕಾರಿ ಬ್ಯಾಂಕ್ ಅಧ್ಯಕ್ಷ ಜೋಗಣ್ಣ ಮಾತನಾಡಿ  ಈ ಗುಡ್ಡಗಾಡು ಪ್ರದೇಶದಲ್ಲಿ ಹೆಚ್ಚು ಬಡವರು ಇರುವುದರಿಂದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಎನ್.ರಾಜಣ್ಣ ಹಾಗೂ ನಿದರ್ೇಶಕ ರಾಜ್ಕುಮಾರ್ರವರ ನೆರವಿನಿಂದ ಬೆಳೆಸಾಲ, ವ್ಯಾಪಾರ ಸಾಲದ ಸೌಲಭ್ಯ ನೀಡಿ ರೈತರಿಗೆ ನೆರವು ನೀಡಿರುವುದಾಗಿ ತಿಳಿಸಿದರು.
ಸಮಾರಂಭದಲ್ಲಿ ರಾಮನಹಳ್ಳಿ ನಿದರ್ೇಶಕ ಆರ್.ಕೇಶವಮೂತರ್ಿ, ಆರ್.ಜಿ.ಕುಮಾರಸ್ವಾಮಿ, ಉಮಾದೇವಿ, ರಘು, ನರಸಿಂಹಮೂತರ್ಿ ಉಪಸ್ಥಿತರಿದ್ದರು.