Tuesday, March 19, 2013

                                                      ತಾತಯ್ಯನವರ ಉತ್ಸವ
                                   
ಚಿಕ್ಕನಾಯಕನಹಳ್ಳಿ,ಮಾ.19: ಕನರ್ಾಟಕದ ಕೋಮುಸೌಹಾರ್ದ ನೆಲೆಗಳಲ್ಲಿ ಒಂದಾದ ಪಟ್ಟಣದ ಸೂಫಿ ಸಂತ ಹಜರತ್ ವೂಹಿದ್ದಿನ್ ಷಾ ಖಾದ್ರಿ ತಾತನ ಉತ್ಸವ ಸಂದಲ್ ಮೆರವಣಿಗೆಯೊಟ್ಟಿಗೆ ಸೋಮವಾರ ರಾತ್ರಿ 11ಗಂಟೆಗೆ ವಿಧ್ಯುಕ್ತ ಚಾಲನೆ ಪಡೆದುಕೊಂಡಿತು.
  ಸೂಫಿ ತಾತನ ಅಕ್ಕ ಚನ್ನೇನಹಳ್ಳಿ ಬೀಬಿ ಫಾತಿಮ ಸನ್ನಿಧಿಯಲ್ಲಿ ವಿವಿಧ ವಿಧಿ ವಿಧಾನಗಳೊಟ್ಟಿಗೆ ಸಂದಲ್(ನಿರಾಕಾರಿ ದೈವದ ಹೂ ಪಟದ ಅಲಂಕಾರ)ದೊಂದಿಗೆ ಸಂಜೆ ಮೆರವಣಿಗೆ ಬಂದು ಪಟ್ಟಣದ ತಾತನ ಗದ್ದುಗೆಯಲ್ಲಿ ದೈವಿ ಪ್ರಾರ್ಥನೆ ಮುಗಿಸಿ ರಾತ್ರಿ ಪಟ್ಟಣದ ಬಿ.ಹೆಚ್.ರಸ್ತೆ, ನೆಹರು ಸರ್ಕಲ್, ಪುರಸಭೆ ಮುಂಭಾಗದಿಂದ ಸಾಗಿ ಪಟ್ಟಣದ ರಾಜಬೀದಿಗಳಲ್ಲಿ ತಡರಾತ್ರಿವರೆಗೆ ಉತ್ಸವ ನಡೆಯಿತು.
 ಬಿರುಸುಬಾಣಗಳು,ಟಿಪ್ಪು ಸಾಹಸ ಸಾರುವ ಸ್ತಬ್ಧ ಚಿತ್ರ, ಮೆರವಣಿಗೆಯಲ್ಲಿ ಸಾಗಿದ ಚಿತ್ರದುರ್ಗದ ಡೋಲ್ ಆಕರ್ೆಸ್ಟ್ರಾ ಮತ್ತು ಅಲಂಕೃತ ಅಶ್ವ ಸೆಂದಲ್ ಉತ್ಸವಕ್ಕೆ ಮೆರುಗು ತಂದವು ಜಾತಿ ಮತ ಧರ್ಮಗಳನ್ನು ಒಂದುಮಾಡಿ ಸಾವಿರಗಟ್ಟಲೆ ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರು ಪ್ರಾರ್ಥನೆ ಸಲ್ಲಿಸುತ್ತ ಮೆರವಣಿಗೆಯಲ್ಲಿ ಪಲ್ಗೊಂಡರು.
     ಕಷ್ಟ ಬಂದಾಗ ಹಿಂದುಗಳು ಹರಕೆ ಹೊತ್ತು ಗದ್ದುಗೆಗೆ ತೆರಳಿ ಕಡಲೆ ಸಕ್ಕರೆ ತಿದ್ದುವುದು ಇಲ್ಲಿಯ ವಾಡಿಕೆಯಾಗಿದ್ದು ಹಿಂದು ಮುಸ್ಲೀಮರು ಒಟ್ಟಿಗೆ ಪೂಜೆ ಸಲ್ಲಿಸುತ್ತಿದ್ದ ದೃಶ್ಯ ಮನಮೋಹಕವಾಗಿತ್ತು.
 ಕಳೆದ 53 ವರ್ಷಗಳಿಂದ ಸ್ಥಳೀಯ ಹಿಂದು-ಮುಸ್ಲೀಮರು ಒಂದಾಗಿ ಕಮಿಟಿ ರಚಿಸಿಕೊಂಡು ತಾತಯ್ಯನ ಉರುಸ್ ಅನ್ನು ವೈಭವಯುತವಾಗಿ ನಡೆಸಿಕೊಂಡು ಬರುತ್ತಿರುವುದು ಈ ನೆಲದ ಸೌಹಾರ್ದ ತತ್ವಕ್ಕೆ ಹಿಂಬು ನೀಡಿದೆ.
 19ರ ಮಂಗಳವಾರ ಹೈದರಾಬಾದ್ ಮತ್ತು ಹಿಂದೂರಿನ ಖವ್ವಾಲಿ ತಂಡಗಳು ಜಿದ್ದಾಜಿದ್ದಿನ ಖವ್ವಾಲಿ ಜುಗಲ್ಬಂದಿಯಲ್ಲಿ ಭಾಗವಹಿಸಲಿದ್ದು ರಾಜ್ಯದ ವಿವಿದ ಭಾಗಗಳಿಂದ ಆಗಮಿಸುವ ಭಕ್ತರು ಸೌಹಾರ್ದವನ್ನು ಸಾಕ್ಷಿಕರಿಸುತ್ತಾರೆ. ಹಾಗು 20ರ ಬುಧವಾರ ಆಕರ್ಷಣೀಯ ರಸಸಂಜೆ ಮತ್ತು ನೃತ್ಯ ವೈಭವದೊಟ್ಟಿಗೆ ತೆರೆ ಬೀಳಲಿದೆ.   
ನುರಿತ ವೈದ್ಯರುಗಳನ್ನು ಹಾಗೂ ಅಗತ್ಯ ಸಿಬ್ಬಂದಿ ವರ್ಗವನ್ನು ನೇಮಿಸಲು ಸಕರ್ಾರಿ ವಿಫಲವಾಗಿದೆ : ಸಿಬಿಎಸ್


ಚಿಕ್ಕನಾಯಕನಹಳ್ಳಿ,ಮಾ.19 : ಸಕರ್ಾರಿ ಆಸ್ಪತ್ರೆಗಳಿಗೆ ನುರಿತ ವೈದ್ಯರುಗಳನ್ನು ಹಾಗೂ ಅಗತ್ಯ ಸಿಬ್ಬಂದಿ ವರ್ಗವನ್ನು ನೇಮಿಸಲು ಸಕರ್ಾರಿ ವಿಫಲವಾಗಿದೆ ಎಂದು ಶಾಸಕ ಸಿ.ಬಿ.ಸುರೇಶ್ಬಾಬು ಆರೋಪಿಸಿದರು.
    ಪಟ್ಟಣದ ಸಕರ್ಾರಿ ಸಾರ್ವಜನಿಕ ಆಸ್ಪತ್ರೆಯ 50ರಿಂದ 100 ಹಾಸಿಗೆಗಳ ಮೇಲ್ದಜರ್ೆಗೆ ಏರಿಸಿದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ನೂತನ ಆಸ್ಪತ್ರೆಗೆ 100ಕ್ಕೂ ಹೆಚ್ಚು ಸಿಬ್ಬಂದಿ ವರ್ಗ ಬೇಕಾಗಿದ್ದು ಕೂಡಲೇ ಅಗತ್ಯ ಸಿಬ್ಬಂದಿಯನ್ನು ನೇಮಿಸುವಂತೆ ಸಕರ್ಾರವನ್ನು ಒತ್ತಾಯಿಸಿದರು. ವೈದ್ಯರು ಸಿಬ್ಬಂದಿವರ್ಗ ಆಸ್ಪತ್ರೆಗೆ ಬಂದಂತಹ ರೋಗಿಗಳ ಜೊತೆಯಲ್ಲಿ ಸ್ಪಂದಿಸಿ ಚಿಕಿತ್ಸೆ ನೀಡುವಂತೆ ತಿಳಿಸಿದ ಅವರು, ಪಟ್ಟಣದ ಆಸ್ಪತ್ರೆಗೆ ಅರವಳಿಕೆ(ಅನಸ್ತೇಷೇಯ) ವೈದ್ಯರನ್ನು ನೇಮಿಸಿದರೆ ಆಸ್ಪತ್ರೆಯಲ್ಲಿ ಆಪರೇಷನ್ ಮಾಡಲು ಅನುಕೂಲವಾಗುತ್ತದೆ. ಸಾರ್ವಜನಿಕರು ರೋಗಿಗಳಿಗೆ ಆಸ್ಪತ್ರೆ ನಮ್ಮದು ಎಂಬ ಭಾವನೆ ಬಂದರೆ ಮಾತ್ರ ಆಸ್ಪತ್ರೆ ಸ್ವಚ್ಛವಾಗಿರಲು ಸಾಧ್ಯ ಸಕರ್ಾರಿ ಆಸ್ಪತ್ರೆಯ ನೀಡುತ್ತಿರುವುದು ಅಭಿನಂದನೀಯ. ಕುದುರೆಮುಖ ಅದಿರು ಕಂಪನಿ ಅಂಬುಲೆನ್ಸ್ ನೀಡುತ್ತಿದೆ ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ, 108 ಆಂಬುಲೆನ್ಸ್ ಮಾತ್ರ ಸಾರ್ವಜನಿಕರು ಹೆಚ್ಚಿನ ಸೇವೆಗೆ ಬಳಕೆಯಾಗುತ್ತದೆ ಎಂದರು. ಸಕರ್ಾರಿ ಆಸ್ಪತ್ರೆಗಳೂ ಖಾಸಗಿ ಆಸ್ಪತ್ರೆಗಳ ಪೈಪೋಟಿಯನ್ನು ಎದುರಿಸಲು ಸಕರ್ಾರಿ ಆಸ್ಪತ್ರೆಗಳಲ್ಲಿ ಉತ್ತಮ ಚಿಕಿತ್ಸೆ ನೀಡುವಂತೆ ಸಲಹೆ ನೀಡಿದರು.
    ತಾ.ಪಂ.ಅಧ್ಯಕ್ಷ ಎಂ.ಎಂ.ಜಗದೀಶ್ ಮಾತನಾಡಿ ಸಕರ್ಾರಿ ಆಸ್ಪತ್ರೆಗಳು ಸ್ವಚ್ಛವಾಗಿಟ್ಟುಕೊಳ್ಳುವಂತೆ ವೈದ್ಯರು ಹಾಗೂ ಸಿಬ್ಬಂದಿವರ್ಗಕ್ಕೆ ಸಲಹೆ ನೀಡಿದರು.
    ಪುರಸಭಾ ಸದಸ್ಯ ಹೆಚ್.ಬಿ.ಪ್ರಕಾಶ್ ಮಾತನಾಡಿ ಕುದುರೆಮುಖ ಕಂಪನಿ ಸಕರ್ಾರಿ ಆಸ್ಪತ್ರೆಗೆ 2ಕೃತಕ ಉಸಿರಾಟದ ಉಪಕರಣ ಹಾಗೂ ಪಟ್ಟಣದಲ್ಲಿ ಹೃದ್ರೋಗ ಖಾಯಿಲೆ ಹೆಚ್ಚಾಗಿರುವುದರಿಂದ ಇ.ಸಿ.ಜಿ ಉಪಕರಣವನ್ನು ಆಸ್ಪತ್ರೆಗೆ ನೀಡುವಂತೆ ಮನವಿ ಮಾಡಿದರು.
    ಕುದುರೆಮುಖ ಅಧಿರು ಕಂಪನಿಯ ಅಧಿಕಾರಿ ಲಕ್ಷ್ಮೀನಾರಾಯಣ ಮಾತನಾಡಿ ಪಟ್ಟಣದ ಕುದುರೆಮುಖ ಕಂಪನಿಯ ಕಛೇರಿಯು 2008ರಲ್ಲಿ ಪ್ರಾರಂಭವಾಗಿದೆ, ಗಣಿಗಾರಿಕೆ ಇನ್ನೂ ಪ್ರಾರಂಭಿಸಿಲ್ಲವಾದರೂ ಕಂಪನಿ ಸಾಮಾಜಿಕ ಚಟುವಟಿಕೆಗಳು ಹಾಗೂ ವಿದ್ಯಾಭ್ಯಾಸ ಸೇರಿದಂತೆ ಅನೇಕ ಕಾರ್ಯಕ್ರಮಗಳಿಗೆ ಕಂಪನಿ ತೊಡಗಿಸಿಕೊಂಡಿದ್ದು ಸಕರ್ಾರಿ ಆಸ್ಪತ್ರೆಗೆ ಕೃತಿಕ ಉಸಿರಾಟದ ಉಪಕರಣ 1ಲಕ್ಷರೂ ವೆಚ್ಚದಲ್ಲಿ ನೀಡುತ್ತಿದ್ದೇವೆ ಎಂದರು.
    ಕಾರ್ಯಕ್ರಮದಲ್ಲಿ ಜಿ.ಪಂ.ಸದಸ್ಯರುಗಳಾದ ಜಾನಮ್ಮರಾಮಚಂದ್ರಯ್ಯ, ಲೋಹಿತಬಾಯಿರಂಗಸ್ವಾಮಿ, ತಾ.ಪಂ.ಉಪಾಧ್ಯಕ್ಷೆ ಲತಾಕೇಶವಮೂತರ್ಿ, ಪುರಸಭಾ ಸದಸ್ಯರುಗಳಾದ ಸಿ.ಟಿ.ದಯಾನಂದ, ಎಂ.ಕೆ.ರವಿಚಂದ್ರ, ಸಿ.ಡಿ.ಚಂದ್ರಶೇಖರ್, ಸಿ.ಎಸ್.ರಮೇಶ್, ಮಲ್ಲೇಶಯ್ಯ, ರಾಜಶೇಖರ್, ಪ್ರೇಮ, ಅಶೋಕ್, ತಿಮ್ಮಪ್ಪ ಮತ್ತಿತರರು ಉಪಸ್ಥಿತರಿದ್ದರು.

                            ಲೋಕಾಯುಕ್ತರ ಭೇಟಿ
                                
ಚಿಕ್ಕನಾಯಕನಹಳ್ಳಿ,ಮಾ.20 : ಲೋಕಾಯುಕ್ತರ ಜನಸಂಪರ್ಕ ಸಭೆಯಲ್ಲಿ ಬಂದಿರುವ ಅಜರ್ಿಗಳನ್ನು ಕೂಲಂಕುಶವಾಗಿ ಪರಿಶೀಲಿಸಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಕ್ರಮಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಲೋಕಾಯುಕ್ತ ಪೋಲೀಸ್ ನಿರೀಕ್ಷಕ ಗೌತಮ್ ತಿಳಿಸಿದರು.
    ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿ ಮಾತನಾಡಿದ ಅವರು ಅಜರ್ಿದಾರರು ಸಲ್ಲಿಸಿರುವ ದೂರನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿ, ಹುಳಿಯಾರಿನ ಗುರುಪ್ರಸಾದ್ರವರು ಸಲ್ಲಿಸಿರುವ ದೂರಿನ ಅನ್ವಯ ಹುಳಿಯಾರಿನ ಪ್ರತಿಷ್ಠಿತ ಆರ್.ಟಿ.ಇ ಶಿಕ್ಷಣ ಹಕ್ಕು ಕಾಯ್ದೆಯ ಅನ್ವಯ ಮಕ್ಕಳನ್ನು ಶಾಲೆಗೆ ಸೇರಿಸಿಕೊಳ್ಳುವಲ್ಲಿ ವಿಫಲವಾಗಿರುವ ಬಗ್ಗೆ ಹಾಗೂ ರಂಗಯ್ಯ ಎಂಬುವವರು ಸಲ್ಲಿಸಿರುವ ಅಜರ್ಿಯಂತೆ ಪುರಸಭಾ ವ್ಯಾಪ್ತಿಯ 7ನೇ ವಾಡರ್್ನ ಕನ್ಸ್ರ್ವೆನ್ಸಿ ಜಾಗದಲ್ಲಿ ಕಲ್ಲು ಕಂಬ ಹಾಕಿದ್ದು ಅದನ್ನು ತೆರವುಗೊಳಿಸಲು ಪುರಸಭೆಗೆ ಅಜರ್ಿ ನೀಡಿದರೂ ಪುರಸಭೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂಬ ಬಗ್ಗೆ ಅಜರ್ಿ ಸಲ್ಲಿಸಿದ್ದಾರೆ.
    ಶೆಟ್ಟಿಕೆರೆ ಹೋಬಳಿಯ ದುಗಡಿಹಳ್ಳಿ ಗ್ರಾ.ಪಂ.ಸದಸ್ಯ ದಯಾನಂದ್ ಸಲ್ಲಿಸಿರುವ ಅಜರ್ಿಯಲ್ಲಿ ಅಜ್ಜೇನಹಳ್ಳಿ ಗ್ರಾಮದಲ್ಲಿ 63ಕೆವಿ ಟ್ರಾನ್ಸ್ಫಾರಂ ಪೆಟ್ಟಿಗೆಯು ಮೂರು ಬಾರಿ ಕೆಟ್ಟಿದ್ದರೂ ಇದರ ಬಗ್ಗೆ ದೂರು ನೀಡಿ, 100ಕೆವಿ ವಿದ್ಯುತ್ ಪರಿವರ್ತಕ ಅಳವಡಿಸುವಂತೆ ಮನವಿ ಮಾಡಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲದೆ ಬಗ್ಗೆ ದೂರು ನೀಡಿದ್ದಾರೆ.
    ಹುಳಿಯಾರು ಹೋಬಳಿಯ ಕೇಶವಾಪುರ ಗ್ರಾಮದ ಲಿಂಗರಾಜು ಹಾಗೂ  ಗ್ರಾಮಸ್ಥರು ನೀಡಿರುವ ಅಜರ್ಿಯು ಕೇಶವಾಪುರ ಗ್ರಾಮದ ಸವರ್ೆ ನಂ. 08/03 ಮತ್ತು ಸವರ್ೆ ನಂ.3/04ರಲ್ಲಿನ ಕ್ರಮವಾಗಿ 71/2 ಗುಂಟೆ ಮತ್ತು 08 ಗುಂಟೆ ಹೊಸದುರ್ಗ-ಹುಳಿಯಾರು ರಸ್ತೆಗೆ ಹೊಂದಿಕೊಂಡಿರುವ ಸಕರ್ಾರಿ ಜಮೀನನ್ನು ಕೆಲವರು ಅಕ್ರಮವಾಗಿ ಅತಿಕ್ರಮಿಸಿಕೊಂಡಿದ್ದಾರೆ ಎಂದು ದೂರು ನೀಡಿದ್ದಾರೆ.
    ಹುಳಿಯಾರು ಹೋಬಳಿಯ ಬರಕನಹಾಳ್ ಪಂಚಾಯ್ತಿಯಲ್ಲಿ ಆರ್.ಐ ಮತ್ತು ರೆವಿನ್ಯು ಸೆಕ್ರೆಟರಿಗಳು ಸಣ್ಣ ಹಿಡುವಳಿದಾರರಿಗೆ ನೀಡಬೇಕಾದ ಚೆಕ್ಕನ್ನು ಸರಿಯಾದ ವ್ಯಕ್ತಿಗಳಿಗೆ ನೀಡದೆ ತಮಗೆ ಬೇಕಾದ ವ್ಯಕ್ತಿಗಳಿಗೆ ಮನಸೋ ಇಚ್ಛೆ ನೀಡಿದ್ದಾರೆ ಎಂದು ಶಿಡ್ಲಘಟ್ಟದ ಕುಮಾರ್ರವರು ದೂರು ನೀಡಿದ್ದಾರೆ ಎಂದು ತಿಳಿಸಿದರು.
    ಈ ಸಂದರ್ಭದಲ್ಲಿ ತಹಶೀಲ್ದಾರ್ ಕೃಷ್ಣಸ್ವಾಮಿ, ಗ್ರೇಡ್-2 ತಹಶೀಲ್ದಾರ್ ಪುಟ್ಟರಾಮಯ್ಯ, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ತಿಮ್ಮಯ್ಯ ಉಪಸ್ಥಿತರಿದ್ದರು.
 
aPÀÌ£ÁAiÀÄPÀ£ÀºÀ½îAiÀÄ°è £ÀqÉzÀ ¸ÀPÁðj vÁ.DAiÀÄĵï D¸ÀàvÉæ £ÀÆvÀ£À PÀlÖqÀªÀ£ÀÄß ±Á¸ÀPÀ ¹.©.¸ÀÄgÉñï¨Á§Ä GzÁÏn¹zÀgÀÄ. F ¸ÀAzÀ¨sÀðzÀ°è f.DAiÀÄÄµï ªÉÊzÁå¢üPÁj qÁ.¸ÀAfêïªÀÄÆwð, f.¥ÀA.¸ÀzÀ¸Éå eÁ£ÀªÀÄä, E.N.wªÀÄäAiÀÄå G¥À¹ÜvÀjzÀÝgÀÄ.