Tuesday, June 4, 2013


ಗ್ರಾಮಸ್ಥರು, ಶಿಕ್ಷಕಿಯ ನಡುವೆ ತಲೆದೋರಿದ್ದ ಸಮಸ್ಯೆ ಬಗೆಹರಿಸಿದ ಬಿ.ಇ.ಓ.
ಚಿಕ್ಕನಾಯಕನಹಳ್ಳಿ,ಜೂ.04 : ತಾಲೂಕಿನ ಸಾಲಕಟ್ಟೆ ಕಾಲೋನಿಯ ಗ್ರಾಮಸ್ಥರಿಗೂ ಹಾಗೂ ಸ್ಥಳೀಯ ಸಕರ್ಾರಿ ಶಾಲೆಯ ಮುಖ್ಯ ಶಿಕ್ಷಕಿಗೂ ತಲೆದೋರಿದ್ದ ಭಿನ್ನಾಭಿಪ್ರಾಯದಿಂದ ಶಾಲೆಗೆ ಬೀಗ ಹಾಕಿದ್ದು ಬಿ.ಇ.ಓ. ಸಾ.ಚಿ.ನಾಗೇಶ್ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಯನ್ನು ಬಗೆಹರಿಸಿದ್ದಾರೆ.
ಶಾಲಾ ಮುಖ್ಯಶಿಕ್ಷಕಿಯು ಶಾಲಾ ಅಭಿವೃದ್ದಿಗಾಗಿ ಬಂದಂತಹ ಹಣವನ್ನು ಎಸ್.ಡಿ.ಎಂ.ಸಿ ಅಧ್ಯಕ್ಷರ ಗಮನಕ್ಕೆ ಬಾರದೆ ಹಣ ಬಳಸಿಕೊಂಡಿದ್ದಾರೆ  ಎಂದು ಆರೋಪಿಸಿ ಸಾಲ್ಕಟ್ಟೆ ಕಾಲೋನಿಯ ಸಕರ್ಾರಿ ಕಿರಿಯ ಪ್ರಾಥಮಿಕ ಪಾಠಶಾಲೆಗೆ ಬೀಗ ಹಾಕಿ ಗ್ರಾಮಸ್ಥರು ಧರಣಿ ನಡೆಸಿರುವ ಘಟನೆ ನಡೆದಿತ್ತು.
ಶಾಲೆಗೆ ಬಂದಂತಹ ಶಾಲಾ ಅನುದಾನ, ಶಿಕ್ಷಕರ ಅನುದಾನವನ್ನು ಬಳಸಿಕೊಂಡಿದ್ದಾರೆ ಎಂದು ಆರೋಪಿಸಿರುವ ಗ್ರಾಮಸ್ಥರು ಮುಖ್ಯಶಿಕ್ಷಕಿ ಬಳಸಿಕೊಂಡಿರುವ  ಹಣವನ್ನು ಪೂತರ್ಿ ಕಟ್ಟಬೇಕು ಜೊತೆಗೆ ಶಿಕ್ಷಕಿಯನ್ನು ಬೇರೆ ಕಡೆ ವಗರ್ಾವಣೆ ಮಾಡಬೇಕು ಎಂದು ಪಟ್ಟು ಹಿಡಿದರು.
ಈ ಸಂಬಂಧ  ಸಾಲ್ಕಟ್ಟೆ ಶ್ರೀನಿವಾಸ್ ಮಾತನಾಡಿ ಶಾಲೆಯಲ್ಲಿ ಈ ರೀತಿಯ ದುರುಪಯೋಗ ನಡೆದಿರುವ ಬಗ್ಗೆ ಶಿಕ್ಷಕಿಯನ್ನು ಗ್ರಾಮಸ್ಥರು ಕೇಳಿದಾಗ ನನ್ನದು ತಪ್ಪಾಗಿದೆ ಆ ಹಣವನ್ನು ಕಟ್ಟುತ್ತೇನೆಂದು ಗ್ರಾಮಸ್ಥರ ಮುಂದೆ ಒಪ್ಪಿಕೊಂಡಿದ್ದರು, ಇದಾದ ಮೂರು ದಿನಗಳ ನಂತರವೂ ಹಣ ಕಟ್ಟಿರುವುದಿಲ್ಲ ಎಂದರು.
ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷ ನಾಗರಾಜಯ್ಯ ಮಾತನಾಡಿ ನಾವು ಇತ್ತೀಚೆಗೆ ಅಧಿಕಾರ ವಹಿಸಿಕೊಂಡಿದ್ದು ನಮ್ಮ ಹಿಂದಿನ ಅವಧಿಯಲ್ಲಿ ಹಣ ದುರುಪಯೋಗವಾಗಿದೆ ಎಂದರು
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಬಿ.ಇ.ಓ ಸಾ.ಚಿ.ನಾಗೇಶ್ ಘಟನೆ ಕುರಿತಂತೆ ಮಾತನಾಡಿ ಎಷ್ಟು ಹಣ ದುರುಪಯೋಗವಾಗಿದೆ ಅಷ್ಟು ಹಣವನ್ನು ಈಗಲೇ ಶಿಕ್ಷಕಿಯಿಂದ ಕಟ್ಟಿಸಿ, ಶಾಲೆಯನ್ನು ಪ್ರಾರಂಭಿಸುತ್ತೇವೆ,  ಗ್ರಾಮಸ್ಥರ ಬೇಡಿಕೆಯಂತೆ ಶಿಕ್ಷಕಿಯನ್ನು ಬೇರೆ ಶಾಲೆಗೆ ನಿಯೋಜಿಸಲಾಗುವುದೆಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಎಸ್.ಡಿ.ಎಂ.ಸಿ.ಅಧ್ಯಕ್ಷ ನಾಗರಾಜಯ್ಯ, ಬಸವರಾಜು, ಈಶ್ವರ್, ಶ್ರೀರಂಗಯ್ಯ, ನಾಗೇಶಯ್ಯ, ಚಂದ್ರಯ್ಯ, ಕೃಷ್ಣಯ್ಯ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.
6ನೇ ವಾಡರ್್ನ ನಾಗರೀಕರಿಂದ ಪುರಸಭಾ ಕಛೇರಿಗೆ ಮುತ್ತಿಗೆ 
ಚಿಕ್ಕನಾಯಕನಹಳ್ಳಿ,ಜೂ.04 : ನಮಗೆ ಸಮರ್ಪಕವಾಗಿ ನೀರು ಕೊಡಿ, ರಸ್ತೆ ಸರಿಪಡಿಸಿ, ವಿದ್ಯುತ್ ನೀಡಿ ಇಲ್ಲಾವಾದರೆ ಪುರಸಭೆಯಲ್ಲಿರುವ ನಮ್ಮ ವಾಡರ್್ನ್ನು ಮಂಡಲ್ ಪಂಚಾಯಿತಿಗೆ ವಗರ್ಾಯಿಸಿಬಿಡಿ ಎಂದು ಪುರಸಭಾ ಕಛೇರಿಗೆ ಪಟ್ಟಣದ ಕೇದಿಗೆಹಳ್ಳಿ ವಾಡರ್್ಗೆ ಸೇರಿದ ಹೊಸೂರು ಗ್ರಾಮದ ಸಾರ್ವಜನಿಕರು ಪ್ರತಿಭಟನೆ ನಡೆಸಿದರು.
ನೀರು ಬೇಕು ನೀರು, ನೀರಿಗಾಗಿ ಈ ಹೋರಾಟ ಎಂಬ ಕೂಗಿನ ಮೂಲಕ ಪ್ರತಿಭಟನೆ ನಡೆಸುತ್ತಿದ್ದ ಹೊಸೂರಿನ ನಾಗರೀಕರು ನಮಗೆ ಈಗ ಸಿಗುತ್ತಿರುವ ನೀರು ಸಾಲುತ್ತಿಲ್ಲ, ನಮ್ಮ ವಾಡರ್್ನಲ್ಲಿರುವ ಅಕ್ಕಪಕ್ಕದ ಜನ ನೀರಿಗಾಗಿ ಪ್ರತಿದಿನ ಜಗಳವಾಡುತ್ತಿದ್ದಾರೆ, ನಮ್ಮ ವಾಡರ್್ನ್ನು ಪುರಸಭೆಗೆ ತಗೆದುಕೊಂಡು ಹದಿನೈದು ವರ್ಷವಾದರೂ ಮೂಲಭೂತ ಸೌಕರ್ಯ ಸಿಗುತ್ತಿಲ್ಲ, ಅಲ್ಲಿನ ಕಸದ ಸಮಸ್ಯೆಯನ್ನು ಸ್ವಚ್ಛತೆಗೊಳಿಸಲು ಯಾರೂ ಬರುತ್ತಿಲ್ಲ,  ಎಂದು ದೂರಿದರು.
ಕೇದಿಗೆಹಳ್ಳಿ ವಾಡರ್್ನ ಪುರಸಭಾ ಸದಸ್ಯೆ ಧರಣಿಲಕ್ಕಪ್ಪ ಮಾತನಾಡಿ ನಮ್ಮ ವಾಡರ್್ಗೆ ಪುರಸಭೆ ಯಾವುದೇ ಮೂಲ ಸೌಕರ್ಯ ನೀಡಿಲ್ಲ, ಮೂರು ತಿಂಗಳಿನಿಂದಲೂ ನಮಗೆ ಕೇವಲ ಆಶ್ವಾಸನೆ ನೀಡುತ್ತಿದ್ದಾರೆ, ಎಲ್ಲಾ ವಾಡರ್್ನಲ್ಲೂ ಬೋರ್ಕೊರೆಸಿದ್ದಾರೆ ನಮ್ಮ ವಾಡರ್್ನಲ್ಲಿ ಯಾವುದೇ ಬೋರ್ ಕೊರೆಸಿಲ್ಲ, ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ನೀಡಿದಂತೆ ಪುರಸಭೆ ಮಾಡುತ್ತಿದ್ದು ಈ ಬಗ್ಗೆ ನಮ್ಮ ವಾಡರ್್ನ ನಾಗರೀಕರು ಆಕ್ರೋಶಿತರಾಗಿ ಇಂದು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಬಿ.ಲಕ್ಕಪ್ಪ, ಪುರಸಭಾ ಸದಸ್ಯ ಸಿ.ಪಿ.ಮಹೇಶ್ ಸೇರಿದಂತೆ ಆ ವಾಡರ್ಿನ ನಾಗರೀಕರು ಹಾಜರಿದ್ದರು.
ಸಾಹಿತ್ಯ ಸಮ್ಮೇಳನಕ್ಕೆ ಚಿತ್ರಕಲೆ ಮತ್ತು ಶಿಲ್ಪಕಲೆಗಳ ಪ್ರದರ್ಶನ
ಚಿಕ್ಕನಾಯಕನಹಳ್ಳಿ,ಜೂ.04 :  ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತಾಲ್ಲೂಕಿನ ಚಿತ್ರಕಲೆ ಮತ್ತು ಶಿಲ್ಪಕಲೆ ವತಿಯಿಂದ ವಿಶೇಷವಾದ ಪ್ರದರ್ಶನವನ್ನು ಅನೇಕ ಕಲಾವಿದರೊಂದಿಗೆ ನಿಮರ್ಾಣ ಮಾಡಿ ಕನ್ನಡ ನೆಲ, ಜಲ, ಸಾಹಿತ್ಯವನ್ನು ಅದ್ದೂರಿಯಾಗಿ ಪ್ರದರ್ಶನ ಮಾಡಲು ತೀಮರ್ಾನಿಸಲಾಗಿದೆ ಎಂದು ಕಲಾವಿದ ಸಿದ್ದು ಜಿ.ಕೆರೆ ತಿಳಿಸಿದರು.
ಪಟ್ಟಣದ ಗಂಗು ಆಟ್ಸ್ನ ಕಛೇರಿಯಲ್ಲಿ  ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಚಿತ್ರಕಲಾ ಪ್ರದರ್ಶನ ಮತ್ತು ಶಿಲ್ಪಕಲಾ ಪ್ರದರ್ಶನವನ್ನು ಏರ್ಪಡಿಸಿದ್ದು ತುಮಕೂರು ಜಿಲ್ಲೆಯ ಐತಿಹಾಸಿಕ, ಧಾಮರ್ಿಕ, ಶೈಕ್ಷಣಿಕ, ಪ್ರಾಕೃತಿಕ ಹಾಗೂ ರಂಗಭೂಮಿ  ಕಲಾವಿದರಿಂದ ಮತ್ತು ತಾಲ್ಲೂಕು ಪೋಟೋಗ್ರಾಫರ್ ಮತ್ತು ವಿಡಿಯೋಗ್ರಾಫರ್ ಸಂಘದ ವತಿಯಿಂದ ಆಯ್ಕೆ ಮಾಡಿದಂತಹ ಚಿತ್ರಗಳನ್ನು ಜಿಲ್ಲಾ ಸಮ್ಮೇಳನದಲ್ಲಿ ಪ್ರದಶರ್ಿಸಲು ತಯಾರಿ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಸಿ.ಹೆಚ್.ಗಂಗಾಧರ್ ಮಾತನಾಡಿ ಕುಂಚಾಂಕುರ ಕಲಾ ಸಂಘದಿಂದ ಚಿತ್ರಕಲಾ ಪ್ರದರ್ಶನ, ಚಿತ್ರಕಲಾ ಸ್ಪಧರ್ೆ ಏರ್ಪಡಿಸಿದ್ದು ಚಿತ್ರಕಲಾ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವವರಿಗೆ ಹಾಗೂ ಕಲೆಯನ್ನೇ ಶಿಕ್ಷಣವನ್ನಾಗಿ ಪಡದು ತಮ್ಮ ಪ್ರತಿಭೆಯನ್ನು ತೋರ್ಪಡಿಸಲು ಸಹಕಾರಿಯಾಗಲೆಂದು ಈ ರೀತಿಯ ವ್ಯವಸ್ಥೆ ಮಾಡಿರುವುದಾಗಿ ತಿಳಿಸಿದರು.
ಕನ್ನಡ ನಾಡು, ನುಡಿ, ಜಲ, ಸಂಸ್ಕೃತಿ, ಶಿಲ್ಪ ವೈಭವದ ಬಗ್ಗೆ  ಹಾಗೂ ನಶಿಸುತ್ತಿರುವ ಗ್ರಾಮೀಣ ಕುಲ ಕಸುಬು ಹಾಗೂ ಗ್ರಾಮೀಣ ವಿಭಾಗದಲ್ಲಿ ಮಾಧ್ಯಮಗಳ ಪಾತ್ರವನ್ನು ಸ್ಪಧರ್ೆಯಲ್ಲಿ ಇಟ್ಟಿದ್ದು, ಸ್ಪಧರ್ೆಯಲ್ಲಿ ಪ್ರಥಮ ಬಹುಮಾನವಾಗಿ 3ಸಾವಿರ, ದ್ವಿತೀಯ 2ಸಾವಿರ,ತೃತಿಯ 1ಸಾವಿರ ಮತ್ತು ಸಾಹಿತ್ಯ ಸಮ್ಮೇಳನದ ವೇದಿಕೆಯಲ್ಲಿ ಭಾಗವಹಿಸಿದ ಎಲ್ಲರಿಗೂ ನೆನಪಿನ ಕಾಣಿಕೆ ಹಾಗೂ ಪ್ರಶಸ್ತಿ ಪತ್ರ ನೀಡಲಾಗುವುದು. ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಲು ನಮ್ಮ ಕಲಾ ಚೌಕಟ್ಟಿನಲ್ಲಿ ಕನ್ನಡ ಸಂಘದ ವೇದಿಕೆಯಲ್ಲಿ ದಿನಾಂಕ 5ರಿಂದ ಬೆಳಗ್ಗೆ 10ರಿಂದ 5ರವರಗೆ ಶಿಲ್ಪಕಲಾ ಮತ್ತು ಚಿತ್ರಕಲಾ ಕಾರ್ಯಗಾರ ಮಾಡುತ್ತಿದ್ದು ಆಸಕ್ತ ಎಲ್ಲರೂ ಭಾಗವಹಿಸಬಹುದು ಹಾಗೂ ಹೆಚ್ಚಿನ ವಿವರಗಳಿಗಾಗಿ ಸಿ.ಹೆಚ್.ಗಂಗಾಧರ್ 9845007131, ವಿಶ್ವನಾಥ್ 9845279517, ಸಿ.ಎ.ನಿರೂಪ್ರಾವತ್ 9902159412, ಸಿ.ಪಿ.ಗಿರೀಶ್ 9141092238ಗೆ ಸಂಪಕರ್ಿಸಲು ಹಾಗೂ ಕಲಾಸಕ್ತರು ತಮ್ಮ ಜೊತೆ ಕೈಜೋಡಿಸಲು ಕೋರಿದರು.
ಶಿಲ್ಪಿ ವಿಶ್ವನಾಥ್ ಮಾತನಾಡಿ ಸಮ್ಮೇಳನಕ್ಕಾಗಿ ಚಿತ್ರಕಲಾ ಶಿಬಿರ, ಶಿಲ್ಪಕಲಾ ಶಿಬಿರ ಏರ್ಪಡಿಸಿದ್ದು ಜಕಣಾಚಾರಿರವರು ಮಾಡಿದ ಮಾದರಿ ಶಿಲ್ಪದಂತೆ ಹಾಗೂ ಕನ್ನಡ ತಾಯಿ ಭುವನೇಶ್ವರಿಯ ರಚನೆ ಮಾಡಲು ಇದನ್ನು 15ದಿನಗಳ ಅವಧಿಯಲ್ಲಿ ಮಾಡಲು ತೀಮರ್ಾನಿಸಿದ್ದು ಈ ಕಾರ್ಯಕ್ರಮಕ್ಕೆ ಆಸಕ್ತರು ಪಾಲ್ಗೊಳ್ಳಬಹುದು ಎಂದು ತಿಳಿಸಿದರು.

 ವಿಶ್ವಶಾಂತಿ ಲೋಕ ಕಲ್ಯಾಣಾರ್ಥವಾಗಿ ಚಂಡಿಕಾ ಯಾಗ
ಚಿಕ್ಕನಾಯಕನಹಳ್ಳಿ,ಜೂ.04 : ಶ್ರೀ ಮಹಾದೇವ ಶಿವಾಚಾರ್ಯ ಮಹಾಸ್ವಾಮಿಗಳವರ 12ನೇ ವರ್ಷದ ಪುಣ್ಯ ಸಂಸ್ಮರಣೋತ್ಸವ ಹಾಗೂ ವಿಶ್ವಶಾಂತಿ ಲೋಕ ಕಲ್ಯಾಣಾರ್ಥವಾಗಿ ಚಂಡಿಕಾ ಯಾಗ ಹಾಗೂ ಸಿ.ಬಿ.ಸುರೇಶ್ಬಾಬುರವರಿಗೆ ಅಭಿನಂದನಾ ಸಮಾರಂಭವನ್ನು ಇದೇ 9ರ ಭಾನುವಾರ ಏರ್ಪಡಿಸಲಾಗಿದೆ ಎಂದು ಮಾದಿಹಳ್ಳಿ ಹಿರೇಮಠದ ಚನ್ನಮಲ್ಲಿಕಾಜರ್ುನ ಶಿವಾಚಾರ್ಯಸ್ವಾಮಿ ತಿಳಿಸಿದರು.
ಪಟ್ಟಣ ಕಲ್ಲತ್ತಿಗಿರಿ ವೀರಭದ್ರಶ್ವೇರ ದೇವಾಲಯದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಜು.9ರ  ಬೆಳಗ್ಗೆ 7ಗಂಟೆಗೆ ವಿಶೇಷ ಪೂಜೆ ನಡೆಯಲಿದ್ದು ಮಧ್ಯಾಹ್ನ 12ಕ್ಕೆ ಧಾಮರ್ಿಕ ಸಮಾರಂಭ ನಡೆಯಲಿದೆ. ಸಮಾರಂಭದ ಉದ್ಘಾಟನೆಯನ್ನು ಬೆಲಗೂರು ವೀರಪ್ರತಾಪ ಆಂಜನೇಯಸ್ವಾಮಿ ದೇವಾಲಯದ ಬಿಂದುಮಾದವಶರ್ಮ ನೆರವೇರಿಸಲಿದ್ದಾರೆ. ಹುಲಿಕೆರೆ ದೊಡ್ಡಮಠದ ವಿರೂಪಾಕ್ಷ ಲಿಂಗಶಿವಾಚಾರ್ಯಸ್ವಾಮಿ, ಕರಿಸಿದ್ದೇಶ್ವರಸ್ವಾಮಿ ಮಠದ ಶಿವಪ್ರಕಾಶ ಶಿವಾಚಾರ್ಯಸ್ವಾಮಿ, ಷಡಕ್ಷರಮಠದ ರುದ್ರಮುನಿಸ್ವಾಮಿ, ಕೆ.ಬಿದರೆ ದೊಡ್ಡಮಠದ ಪ್ರಭುಕುಮಾರಶಿವಾಚಾರ್ಯಸ್ವಾಮಿ, ಬೀರೂರುಮಠದ ರುದ್ರಮುನಿಶಿವಾಚಾರ್ಯಸ್ವಾಮಿ ಆಗಮಿಸಲಿದ್ದು ಮಾದಿಹಳ್ಳಿ ಹಿರೇಮಠದ ಚನ್ನಮಲ್ಲಿಕಾಜರ್ುನಶಿವಾಚಾರ್ಯಸ್ವಾಮಿ ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದಾರೆ.
ಈ ಸಂದರ್ಭದಲ್ಲಿ ನೂತನ ಶಾಸಕ ಸಿ.ಬಿ.ಸುರೇಶ್ಬಾಬು, ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ, ಬೆಂಗಳೂರು ಶಾಸಕ ಪ್ರಿಯಾಕೃಷ್ಣ ಉಪಸ್ಥಿತರಿರುವರು.