Thursday, July 28, 2011

ತನು ಭತ್ತ ಸೋನಾಮಸೂರಿಗಿಂತ ಉತ್ಕೃಷ್ಟ: ಕೃಷಿ ತಜ್ಞರ ಅಭಿಮತ
ಚಿಕ್ಕನಾಯಕನಹಳ್ಳಿ,ಜು.28 : ಕಡಿಮೆ ಖಚರ್ಿನಲ್ಲಿ ಅಧಿಕ ಇಳುವರಿ ಪಡೆಯಲು ಮಧ್ಯಮಾವಧಿ ತಳಿ ತನು(ಕೆ.ಎಮ್.ಪಿ.101)ವನ್ನು ಬೆಳೆಯಲು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ. ವೈ.ಎನ್. ಶಿವಲಿಂಗಯ್ಯ ಸೂಚಿಸಿದರು
ತಾಲ್ಲೂಕಿನ ಹಂದನಕೆರೆ ಹೋಬಳಿಯ ತಾರೀಕಟ್ಟೆ ಗ್ರಾಮದ ವೀರಭದ್ರ ನಿಶಾನಿಯವರ ಜಮೀನಿನಲ್ಲಿ ಕೃಷಿ ವಿಶ್ವ ವಿದ್ಯಾನಿಲಯ, ಬೆಂಗಳೂರು ಕೃಷಿ ವಿಜ್ಞಾನ ಕೇಂದ್ರ. ತುಮಕೂರು ಕೃಷಿ ವಿಜ್ಙಾನ ಕೇಂದದ ವತಿಯಿಂದ ನಡೆದ 'ತನು ಭತ್ತ'ದ ಕ್ಷೇತ್ರೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು,
ಈ ತಳಿಯು 120 ರಿಂದ 125 ದಿನಗಳಲ್ಲಿ ಕಟಾವಿಗೆ ಬರುವುದಲ್ಲದೇ, ಮುಂಗಾರು ಮತ್ತು ಹಿಂಗಾರಿನಲ್ಲಿ ಬೆಳೆಯಲು ಸೂಕ್ತವಾಗಿದೆ ಎಂದು ತಿಳಿಸಿದರು. ಭತ್ತವು ಸೋನಾ ಮುಸ್ಸೂರಿಯಂತೆ ಉತ್ಕೃಷ್ಟವಾಗಿದ್ದು ಮಾರುಕಟ್ಟೆಯಲ್ಲಿ ಒಳ್ಳೆಯ ಬೇಡಿಕೆಯಿರುವುದರಿಂದ ರೈತರು ಈ ತಳಿಯನ್ನು ಬೆಳೆಯಬಹುದೆಂದು ತಿಳಿಸಿದರು. ಪ್ರತಿ ಎಕರೆಗೆ 27 ರಿಂದ 28 ಕ್ವಿಂಟಾಲ್ ಧಾನ್ಯವನ್ನು ನಿರೀಕ್ಷಣೆ ಮಾಡಬಹುದಾಗಿದ್ದು ಸುಧಾರಿತ ತಂತ್ರಜ್ಞಾನಗಳಿಂದ ಉತ್ತಮ ಬೀಜ ಸರಿಯಾದ ಕಾಲದಲ್ಲಿ ನಾಟಿ ಸಾವಯವ ಗೊಬ್ಬರ ಬಳಕೆ, ಟ್ರೈ ಕೋಡರ್ಮದಿಂದ ಬೀಜೋಪಚಾರ ನೀರು ನಿರ್ವಹಣೆ ಕಳೆ ನಿರ್ವಹಣೆಯಿಂದ ಹೆಚ್ಚು ಇಳುವರಿ ಪಡೆಯಬಹುದೆಂದು ತಿಳಿಸಿದರು.
ಕೀಟಶಾಸ್ರ್ತಜ್ಞರಾದ ಡಾ. ಶ್ರೀ ನಿವಾಸ ರೆಡ್ಡಿಯವರು ಮಾತನಾಡಿ ಭತ್ತಕ್ಕೆ ಬರುವ ಕೀಟ ಹಾಗೂ ರೋಗಗಳ ಬಗ್ಗೆ ಭತ್ತಕ್ಕೆ ತಗಲುವ ಮಾರಕ ರೋಗವಾದ ಬೆಂಕಿ ರೋಗದ ಲಕ್ಷಣಗಳು ಹಾಗೂ ಅದರ ಸಮಗ್ರ ಕೀಟ ಹತೋಟಿಯ ಬಗ್ಗೆ ಮಾಹಿತಿ ನೀಡಿದರು, ಅಲ್ಲದೇ ಭತ್ತಕ್ಕೆ ಬೀಳುವ ಕೀಟಗಳಾದ ಹಳದಿ ಕಾಂಡ ಕೊರಕ, ಗರಿಸುತ್ತುವ ಹುಳು ಹಾಗೂ ಕೊಳವೆ ಹುಳುವಿನ ಸಮಗ್ರ ಹತೋಟಿಯ ಬಗ್ಗೆ ಉಪನ್ಯಾಸ ನೀಡಿದರು.
ಗ್ರಾಮ ಪಂಚಾಯತಿ ಸದಸ್ಯ ತಾರೇಕಟ್ಟೆ ನಾಗರಾಜು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ರೈತರು ಬೆಳೆ ಬೆಳೆಯುವಾಗ ಸರಿಯಾದ ಮಾಹಿತಿ ತಿಳಿದುಕೊಳ್ಳಬೇಕು, ಇಲ್ಲದಿದ್ದರೆ ಬೆಳೆಯ ಇಳುವರಿ ಕಡಿಮೆಯಾಗಿ ರೈತರಿಗೆ ಆಥರ್ಿಕವಾಗಿ ನಷ್ಠವುಂಟಾಗುತ್ತದೆ ಎಂದರು. ರೈತರ ಜೀವನ ಬಳಹ ಕಷ್ಟವಾಗಿರುವುದರಿಂದ ಕೇವಲ ಭೂಮಿಯನ್ನು ನಂಬಿಕೊಂಡರೆ ಸಾಲದು ಪಶುಗಳ ಸಾಕಾಣಿಕೆ, ಗುಡಿಕೈಗಾರಿಕೆಗಳನ್ನು ಅಳವಡಿಸಿಕೊಳ್ಳಬೇಕು ಎಂದ ಅವರು ರೈತರು ಪ್ರಾಣಿಗಳಿಗೆ, ಜನುವಾರಗಳಿಗೆ ಆದ್ಯತೆ ನೀಡಿ ಅವರ ಗೊಬ್ಬರವನ್ನು ಕೃಷಿಗೆ ಅಳವಡಿಸಿ ತಮ್ಮ ಇಳುವರಿಯನ್ನು ಹೆಚ್ಚಿಸಿಕೊಳ್ಳಬೇಕು ಎಂದರು.
ಸಮಾರಂಭದಲ್ಲಿ ಪ್ರಾಣಿತಜ್ಞ ಮಂಜುನಾಥ್, ಕೃಷಿ ಇಲಾಖೆ ರಂಗಯ್ಯ, ತೋಟಗಾರಿಕೆ ಹರೀಶ್ ನಾಯ್ಕ್, ಗ್ರಾಮಪಂಚಾಯ್ತಿ ಸದಸ್ಯ ನಾಗರಾಜು, ವೀರಭದ್ರ ಸ್ವಾಮಿ ನಿಶಾನಿ, ಸಾವಯವ ಕೃಷಿ ನಿದರ್ೇಶಕ ಮಲ್ಲೇಶ್ಯ್ಯ, ಮಾತಾನಾಡಿದರು.
ಸಮಾರಂಭದಲ್ಲಿ ತೇಜಾಸ್ವಿ ಪ್ರಾಥರ್ಿಸಿ, ಮಲ್ಲೇಶ್ಯ್ಯ ಸ್ವಾಗತಿಸಿದರೆ ವೀರಭದ್ರ ಸ್ವಾಮಿ ನಿಶಾನಿ ವಂದಿಸಿದರು.