Tuesday, August 16, 2011ಸೆ.17ರಂದು ಚಿ.ನಾ.ಹಳ್ಳಿ ತಾ.4ನೇ ಸಾಹಿತ್ಯ ಸಮ್ಮೇಳನಚಿಕ್ಕನಾಯಕನಹಳ್ಳಿ,ಆ.16 : ತಾಲ್ಲೂಕು ನಾಲ್ಕನೆಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಸೆಪ್ಟಂಬರ್ 17ರ ಶನಿವಾರದಂದು ಪಟ್ಟಣದಲ್ಲಿ ನಡೆಸಲಿದ್ದು, ಸಮ್ಮೇಳನದ ಅಧ್ಯಕ್ಷರಾಗಿ ಪ್ರೊ.ನಾ.ದಯಾನಂದರವರನ್ನು ಆಯ್ಕೆ ಮಾಡಲಾಗಿದೆ ಎಂದು ತಾ.ಕಸಾಪ ಅಧ್ಯಕ್ಷ ಎಂ.ವಿ.ನಾಗರಾಜ್ರಾವ್ ತಿಳಿಸಿದ್ದಾರೆ.ಇತ್ತೀಚಿಗೆ ನಡೆದ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ನ ಕಾರ್ಯಕಾರಿ ಸಮತಿಯಲ್ಲಿ ಸಂತ ಜೋಸೆಫರ ಕಾಲೇಜು ಬೆಂಗಳೂರಿನ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ನಿವೃತ್ತರಾಗಿರುವ ಪ್ರೊ.ನಾ.ದಯಾನಂದರವರನ್ನು ಆಯ್ಕೆ ಮಾಡಿದ್ದು ಇವರು ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಸಮಾನ ಪ್ರಭುತ್ವವುಳ್ಳವರಾಗಿದ್ದು ಎರಡೂ ಭಾಷೆಯಲ್ಲಿ ಸುಮಾರು 26 ಕೃತಿಗಳನ್ನು ರಚಿಸಿದ್ದಾರೆ. ಕವಿ ಹೃದಯದ ದಯಾನಂದರವರು 10 ಕವನ ಸಂಕಲನಗಳಲ್ಲದೆ, ಅನುವಾದ ಮತ್ತು ಮೂಲ ಜೀವನ ಚಿತ್ರಣವನ್ನು ರಚಿಸಿ ಖ್ಯಾತರಾಗಿದ್ದು ಕಾರ್ಯಕಾರಿ ಸಮಿತಿಯಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷರಾದ ಮೇಜರ್ ಡಿ.ಚಂದ್ರಪ್ಪರವರು ಉಪಸ್ಥಿತರಿದ್ದು ಇವರನ್ನು ಆಯ್ಕೆಗೆ ಅನುಮೋದಿಸಿ ಶುಭಾಷಯಗಳನ್ನು ತಿಳಿಸಿದ್ದಾರೆ ಎಂದು ತಾ.ಕಸಾಪ ಅಧ್ಯಕ್ಷ ಎಂ.ವಿ.ನಾಗರಾಜ್ರಾವ್, ಕಾರ್ಯದಶರ್ಿ ಸಿ.ಗುರುಮೂತರ್ಿ ಕೊಟಿಗೆಮನೆ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.


ಚಿಕ್ಕನಾಯಕನಹಳ್ಳಿ,ಆ.16 : ರಾಷ್ಟ್ರದ ಮುಂದಿರುವ ಸವಾಲುಗಳನ್ನು ಎದುರಿಸುವಲ್ಲಿ ಸತ್ಯ ಅಹಿಂಸೆ ಮತ್ತು ನ್ಯಾಯ ಪ್ರತಿಪಾದಿಸಬೇಕೆಂದು ಪ್ರೊ.ಸಿ.ಚನ್ನಬಸಪ್ಪ ಹೇಳಿದರು. ಪಟ್ಟಣದ ನವೋದಯ ಪ್ರಥಮ ದಜರ್ೆ ಕಾಲೇನಲ್ಲಿ 64ನೇ ವರ್ಷದ ಸ್ವಾತಂತ್ರ್ಯೋತ್ಸವ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.ಪ್ರಾಂಶುಪಾಲ ಕೆ.ಸಿ.ಬಸಪ್ಪರವರು ಮಾತನಾಡಿ ಸ್ವಾತಂತ್ರದ ಅಗತ್ಯತೆ ಮತ್ತು ಅದರ ಪ್ರಭಾವವನ್ನು ವಿವರಿಸಿದರು.ಈ ಸಂದರ್ಭದಲ್ಲಿ ಎನ್.ಎಸ್.ಎಸ್ ಘಟಕದಿಂದ ವಿದ್ಯಾಥರ್ಿಗಳು ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಶ್ರಮದಾನ ಕಾರ್ಯವನ್ನು ಎನ್.ಎಸ್.ಎಸ್ ಅಧಿಕಾರಿಗಳಾದ ಸಿ.ಚನ್ನಬಸಪ್ಪ, ಡಿ.ಎಸ್.ಲೋಕೇಶ್ರವರ ಮಾರ್ಗದರ್ಶನದಲ್ಲಿ ನೆರವೇರಿಸಿದರು.