Wednesday, June 16, 2010

ಪರಿಸರ ಅಭಿವೃದ್ದಿ ಸಮಿತಿಯಲ್ಲಿ ಹತ್ತು ಕೋಟಿ ರೂ
ಚಿಕ್ಕನಾಯಕನಹಳ್ಳಿ,ಜೂ.16: ಪರಿಸರ ಅಭಿವೃದ್ದಿ ಸಮಿತಿಗೆ ಗಣಿ ಮಾಲೀಕರುಗಳಿಂದ ಟನ್ಗೆ 15 ರೂ ನಂತೆ ಸಂಗ್ರಹಿಸಿದ ಹಣ ಹತ್ತು ಕೋಟಿ ಮುಟ್ಟಿದೆ ಎಂದು ಶಾಸಕ ಸಿ.ಬಿ.ಸುರೇಶ್ ಬಾಬು ತಿಳಿಸಿದರು.
ಪಟ್ಟಣದ ಡಾ. ಅಂಬೇಡ್ಕರ್ ಭವನದಲ್ಲಿ ಪರಿಸರ ಅಭಿವೃದ್ದಿ ಸಮಿತಿ ವತಿಯಿಂದ ರೈತರಿಗೆ ಹಾಗೂ ವಿದ್ಯಾಥರ್ಿಗಳಿಗೆ ಧನ ಸಹಾಯದ ಚೆಕ್ ವಿತರಿಸಿ ಮಾತನಾಡಿದರು.
ಈ ಹಣದಲ್ಲಿ ಇಲ್ಲಿಯವರೆಗೆ ಗಣಿಗಾರಿಕೆಯಿಂದ ನೊಂದ 16 ಹಳ್ಳಿಗಳ 376 ರೈತರಿಗೆ 11 ಲಕ್ಷದ 72 ಸಾವಿರ ರೂ ಪರಿಹಾರ ರೂಪದಲ್ಲಿ ವಿತರಿಸಲಾಗಿದೆ, ಉನ್ನತ ಶಿಕ್ಷಣ ಅಧ್ಯಯನ ಮಾಡುತ್ತಿರುವ ವಿದ್ಯಾಥರ್ಿಗಳಿಗೆ 15 ಲಕ್ಷದ 33 ಸಾವಿರ ರೂಗಳ ಚೆಕ್ ವಿತರಣೆ ಮಾಡಲಾಗಿದೆ ಎಂದರು.
ಈ ಭಾಗದ 16 ಹಳ್ಳಿಗಳ ಮೂಲಭೂತ ಸೌಕರ್ಯಗಳಾದ ರಸ್ತೆ, ಕುಡಿಯುವ ನೀರು, ರೈತರಿಗೆ ಪಶು ಸಂಗೋಪಾನೆ, ಶೌಚಾಲಯ ಮುಂತಾದ ಕಾಮಗಾರಿಗಳಿಗೆ 30 ಲಕ್ಷದ 27 ಸಾವಿರ ರೂ ವೆಚ್ಚ ಮಾಡಲಾಗುತ್ತಿದೆ ಎಂದರಲ್ಲದೆ, ಇನ್ನೂ 9 ಕೋಟಿ ರೂಗಳು ಬ್ಯಾಂಕ್ನಲ್ಲಿದೆ ಎಂದರು.
ತಹಶೀಲ್ದಾರ್ ಟಿ.ಸಿ.ಕಾಂತರಾಜು ಮಾತನಾಡಿ ಮಾನವ ಹಕ್ಕುಗಳ ಆಯೋಗದ ಆದೇಶದಂತೆ ಈ ಭಾಗದ 16 ಹಳ್ಳಿಗಳ ಮೂಲಭೂತ ಸೌಕರ್ಯಗಳಿಗೆ ಒತ್ತು ನೀಡಲಾಗಿದೆ, 170 ಉನ್ನತ ಶಿಕ್ಷಣ ವಿದ್ಯಾಥರ್ಿಗಳಿಗೆ ಪ್ರೋತ್ಸಾಹ ಧನ ನೀಡಲಾಗಿದೆ ಎಂದರಲ್ಲದೆ, ಇನ್ನೂ ಕೆಲವು ಗ್ರಾಮಗಳಾದ ಕೋಡಿಹಳ್ಳಿ, ಭಾವನಹಳ್ಳಿ, ಹೊಸಹಳ್ಳಿ ಗ್ರಾಮಗಳನ್ನು ಈ ವ್ಯಾಪ್ತಿಗೆ ಸೇರಿಸಲಾಗಿದೆ ಎಂದರು.
ಈಗ ಪರಿಸರ ಅಭಿವೃದ್ದಿ ನಿಧಿಯಿಂದ ನೀರಾವರಿಗೆ 5 ಕೋಟಿಯನ್ನು ಕೆನರಾ ಬ್ಯಾಂಕ್ನಲ್ಲಿ ಠೇವಣಿ ಇಡಲಾಗಿದೆ, ಎಸ್.ಬಿ.ಎಂ.ನ ಉಳಿತಾಯ ಖಾತೆಯಲ್ಲಿ 3 ಕೋಟಿ 83 ಲಕ್ಷ ರೂ ಹಣವಿದೆ ಅಲ್ಲದೆ ಈ ಹಣಗಳಿಂದ 21 ಲಕ್ಷ ರೂ ಬಡ್ಡಿ ಬಂದಿದೆ ಎಂದರು.
ಕಾರ್ಯಕ್ರಮದಲ್ಲಿ ತಾ.ಪಂ.ಅಧ್ಯಕ್ಷ ಕೆ.ಜಿ.ಮಲ್ಲಿಕಾರ್ಜನಯ್ಯ, ತಾ.ಪಂ.ಸದಸ್ಯರಾದ ವೈ.ಆರ್.ಮಲ್ಲಿಕಾರ್ಜನಯ್ಯ, ರುದ್ರೇಶ್, ಗಣಿ ಮಾಲೀಕರ ಸಂಘದ ಅಧ್ಯಕ್ಷ ಎಸ್.ಎ.ನಭಿ, ಕಾರ್ಯದಶರ್ಿ ಸಾಯಿಬಾಬ, ತಾ.ಪಂ.ಇ.ಓ, ಡಾ.ವೇದಮೂತರ್ಿ, ಸಿ.ಡಿ.ಪಿ.ಓ, ಅನೀಸ್ ಖೈಸರ್, ಸಮಾಜ ಕಲ್ಯಾಣಾಧಿಕಾರಿ ಸಯದ್ ಮುನೀರ್, ಸಿ.ಪಿ.ಐ, ಪಿ.ರವಿಪ್ರಸಾದ್ ಮುಂತಾದವರು ಹಾಜರಿದ್ದರು.
ಗ್ರಾ.ಪಂ. ಅಧ್ಯಕ್ಷರ, ಉಪಾಧ್ಯಕ್ಷರ ಚುನಾವಣೆ ವೇಳಾ ಪಟ್ಟಿ ಪ್ರಕಟ
ಚಿಕ್ಕನಾಯಕನಹಳ್ಳಿ,ಜು.16: ತಾಲೂಕಿನ 28 ಗ್ರಾ.ಪಂ.ಗಳ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ಚುನಾವಣೆಗಳು ಇದೇ 24 ರಿಂದ 26 ರವರೆಗೆ ಒಟ್ಟು ಮೂರು ದಿನ 9 ಜನ ಚುನಾವಣಾಧಿಕಾರಿಗಳು ನಡೆಸಿಕೊಡಲಿದ್ದಾರೆ ಎಂದು ತಹಶೀಲ್ದಾರ್ ಟಿ.ಸಿ.ಕಾಂತರಾಜು ತಿಳಿಸಿದ್ದಾರೆ.
ಜೂನ್ 24 ರಂದು 10 ಗ್ರಾ.ಪಂ.ಗಳಿಗೆ ಚುನಾವಣೆ ಹಾಗೂ ನೇಮಕ ಗೊಂಡಿರುವ ಚುನಾವಣಾಧಿಕಾರಿಗಳು
1) ದಸೂಡಿ ಗ್ರಾ.ಪಂ. ಚುನಾವಣಾಧಿಕಾರಿ ತಾ.ಪಂ. ಇ.ಓ. ಡಾ.ವೇದಮೂತರ್ಿ
2) ಕೆಂಕೆರೆ ಗ್ರಾ.ಪಂ. ಚುನಾವಣಾಧಿಕಾರಿ ಸ.ತೋಟಗಾರಿಕೆ ನಿದರ್ೇಶಕ ಕೃಷ್ಣಪ್ಪ
3) ಕೋರಗೆರೆ ಗ್ರಾ.ಪಂ. ಚುನಾವಣಾಧಿಕಾರಿ ಎ.ಇ.ಇ (ಜಿ.ಪಂ.) ಮಲ್ಲೇಶಯ್ಯ
4) ಚೌಳಕಟ್ಟೆ ಗ್ರಾ.ಪಂ. ಚುನಾವಣಾಧಿಕಾರಿ ಕೃಷಿ ಅಧಿಕಾರಿ ರಂಗಸ್ವಾಮಿ
5) ತಿಮ್ಮಲಾಪುರ ಗ್ರಾ.ಪಂ. ಚುನಾವಣಾಧಿಕಾರಿ ಮೀನುಗಾರಿಕೆ ಸ.ನಿ. ಉಮೇಶ್
6) ದೊಡ್ಡಬಿದರೆ ಗ್ರಾ.ಪಂ. ಚುನಾವಣಾಧಿಕಾರಿ ಬಿ.ಇ.ಓ. ಬಿ.ಜೆ.ಪ್ರಭುಸ್ವಾಮಿ
7) ಬರಕನಾಳ್ ಗ್ರಾ.ಪಂ. ಚುನಾವಣಾಧಿಕಾರಿ ಎ.ಇ.ಇ.(ಪಿ.ಡಬ್ಲೂ.ಡಿ) ಭಾಸ್ಕರಾಚಾರ್ಯ
8) ಶೆಟ್ಟೀಕೆರೆ ಗ್ರಾ.ಪಂ. ತಹಶೀಲ್ದಾರ್ ಟಿ.ಸಿ.ಕಾಂತರಾಜು
9) ದುಗಡಿಹಳ್ಳಿ ಗ್ರಾ.ಪಂ. ಸಿ.ಡಿ.ಪಿ.ಓ. ಅನೀಸ್ ಖೈಸರ್
10) ಗೋಡೆಕೆರೆ ಗ್ರಾ.ಪಂ. ತಹಶೀಲ್ದಾರ್ ಟಿ.ಸಿ.ಕಾಂತರಾಜು
ಜೂನ್ 25ರ ಶುಕ್ರವಾರ 9 ಗ್ರಾ.ಪಂ.ಗಳಿಗೆ ಚುನಾವಣೆ
11) ಹೊಯ್ಸಳ ಕಟ್ಟೆ ಗ್ರಾ.ಪಂ. ಇ.ಓ. ಡಾ.ವೇದಮೂತರ್ಿ
12) ಹುಳಿಯಾರು ಗ್ರಾ.ಪಂ. ತಹಶೀಲ್ದಾರ್ ಟಿ.ಸಿ.ಕಾಂತರಾಜು
13) ಯಳನಡು ಗ್ರಾ.ಪಂ. ತೋಟಗಾರಿಕೆ ಅಧಿಕಾರಿ ಕೃಷ್ಣಪ್ಪ
14) ದೊಡ್ಡೇಣ್ಣೆಗೆರೆ ಗ್ರಾ.ಪಂ. ಎ.ಇ.ಇ.(ಜಿ.ಪಂ.) ಮಲ್ಲೇಶಯ್ಯ
15) ತಿಮ್ಮನಹಳ್ಳಿ ಗ್ರಾ.ಪಂ. ಎ.ಇ.ಇ. ಭಾಸ್ಕರಾಚಾರ್ಯ
16) ಕಂದಿಕೆರೆ ಗ್ರಾ.ಪಂ. ಕೃಷಿ ಅಧಿಕಾರಿ ರಂಗಸ್ವಾಮಿ
17) ಮತ್ತಿಘಟ್ಟ ಗ್ರಾ.ಪಂ. ಬಿ.ಇ.ಓ, ಬಿ.ಜೆ.ಪ್ರಭುಸ್ವಾಮಿ
18) ಕೋರಗೆರೆ ಗ್ರಾ.ಪಂ. ಮೀನುಗಾರಿಕೆ ಎ.ಡಿ, ಉಮೇಶ್
19) ಮುದ್ದೇನಹಳ್ಳಿ ಗ್ರಾ.ಪಂ. ಸಿ.ಡಿ.ಪಿ.ಓ, ಅನೀಸ್ ಖೈಸರ್
ಜೂನ್ 26ರ ಶನಿವಾರ 9 ಗ್ರಾ.ಪಂ.ಗಳಿಗೆ ಚುನಾವಣೆ
20) ಹಂದನಕೆರೆ ಗ್ರಾ.ಪಂ. ಎ.ಇ.ಇ.(ಜಿ.ಪಂ.) ಮಲ್ಲೇಶಯ್ಯ
21) ರಾಮನಹಳ್ಳಿ ಗ್ರಾ.ಪಂ. ಎ.ಇ.ಇ. ಭಾಸ್ಕರಾಚಾರ್ಯ
22) ಬೆಳಗುಲಿ ಗ್ರಾ.ಪಂ. ಕೃಷಿ ಅಧಿಕಾರಿ ರಂಗಸ್ವಾಮಿ
23) ಬರಗೂರು ಗ್ರಾ.ಪಂ. ತಹಶೀಲ್ದಾರ್ ಟಿ.ಸಿ.ಕಾಂತರಾಜು
24) ಮಲ್ಲಿಗೆರೆ ಗ್ರಾ.ಪಂ. ಬಿ.ಇ.ಓ, ಬಿ.ಜೆ.ಪ್ರಭುಸ್ವಾಮಿ
25) ಹೊನ್ನೇಬಾಗಿ ಗ್ರಾ.ಪಂ. ತೋಟಗಾರಿಕೆ ಅಧಿಕಾರಿ ಕೃಷ್ಣಪ್ಪ
26) ತೀರ್ಥಪುರ ಗ್ರಾ.ಪಂ. ಸಿ.ಡಿ.ಪಿ.ಓ, ಅನೀಸ್ ಖೈಸರ್
27) ಜೆ.ಸಿ.ಪುರ ಗ್ರಾ.ಪಂ. ಮೀನುಗಾರಿಕೆ ಎ.ಡಿ, ಉಮೇಶ್
28) ಗಾಣಧಾಳು ಗ್ರಾ.ಪಂ. ಇ.ಓ. ಡಾ.ವೇದಮೂತರ್ಿ
ಹಿರಿಯ ವಿದ್ಯಾಥರ್ಿ ಸಂಘದ ಕಾರ್ಯ ಶ್ಲಾಘನೀಯ: ಬಿ.ಇ.ಓ
ಚಿಕ್ಕನಾಯಕನಹಳ್ಳಿ,ಜೂ.16: ಶತಮಾನ ಕಂಡ ಸಕರ್ಾರಿ ಶಾಲೆಯ ಹಿರಿಯ ವಿದ್ಯಾಥರ್ಿಗಳು ತಮ್ಮ ಶಾಲೆಯ ಹಾಗೂ ವಿದ್ಯಾಥರ್ಿಗಳ ಏಳಿಗೆಗೆ ಶ್ರಮಿಸುತ್ತಿರುವುದು ಮೇಲ್ಪಂಕ್ತಿಯಾಗಿದೆ ಎಂದು ಬಿ.ಇ.ಓ ಬಿ.ಜೆ ಪ್ರಭುಸ್ವಾಮಿ ಹೇಳಿದರು.
ಪಟ್ಟಣದ ಕುರುಬರಶ್ರೇಣಿಯಲ್ಲಿ ನಡೆದ ಉಚಿತ ನೋಟ್ ಬುಕ್ ವಿತರಣಾ ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರು, 100 ವರ್ಷ ಪೂರೈಸಿರುವ ಈ ಶಾಲೆಯ ಶತಮಾನೋತ್ಸವ ಇತ್ತೀಚಿಗೆ ಆಚರಿಸಿ ಶಾಲೆಯ ಸವರ್ೋತಮುಖ ಅಭಿವೃದ್ದಿಯ ಉದ್ದೇಶದಿಂದ ರೂಪುಗೊಂಡಿರುವುದು ಹರ್ಷದಾಯಕ ಎಂದರಲ್ಲದೆ, ಇಲ್ಲಿನ ಹಿರಿಯ ವಿದ್ಯಾಥರ್ಿಗಳ ಸಂಘ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದರು. ಸಂಘ 2ಲಕ್ಷ ಹಣ ಸೇರಿಸಿ ಆಥರ್ಿಕವಾಗಿ ಸದೃಡವಾಗಿದೆ. ಹಿರಿಯ ವಿದ್ಯಾಥರ್ಿಯೊಬ್ಬರು ಶಾಲೆಗೆ ಈಗಾಗಲೇ ನಿವೇಶನವೊಂದನ್ನು ನೀಡಿದ್ದು ಶೈಕ್ಷಣಿಕ ಸಾಲಿನಲ್ಲಿ ಈ ಶಾಲೆಗೆ ಒಂದು ಕೊಠಡಿ ಮಂಜೂರು ಮಾಡಿದೆ ಎಂದರು. ಸಕರ್ಾರ ವಿದ್ಯಾಥರ್ಿಗಳಿಗೆ ನೀಡುತ್ತಿರುವ ಸಹಾಯದ ಜೊತೆಗೆ ಸಂಘ ಸಂಸ್ಥೆಗಳು ಮುಂದೆ ಬಂದು ಕೈ ಜೋಡಿಸುತ್ತಿರುವುದು ಆರೋಗ್ಯಕರ ಬೆಳವಣಿಗೆ ಎಂದರು.
ಹಿರಿಯ ವಿದ್ಯಾಥರ್ಿ ಸಂಘದ ಅಧ್ಯಕ್ಷ ಜಿ.ರಂಗಯ್ಯ ಮಾತನಾಡಿ ಈಗಾಗಲೇ 400 ಸದಸ್ಯರನ್ನು ಒಳಗೊಂಡಿರುವ ಸಂಘವು ಈ ಶಾಲೆಯನ್ನು ಉತ್ತಮ ಮಾದರಿ ಶಾಲೆಯನ್ನಾಗಿ ಮಾಡುವ ಹೆಗ್ಗುರಿಯನ್ನು ಹೊಂದಿದೆ ಎಂದರಲ್ಲದೆ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವ ಸಲುವಾಗಿ ಶಾಲೆಗೆ ಬೇಕಾದ ಮೂಲಭೂತ ಸೌಲಭ್ಯವನ್ನು ಸಂಘದ ವತಿಯಿಂದ ಮುಂದಿನ ದಿನಗಳಲ್ಲಿ ನೀಡಲಾಗುವುದು ಎಂದರು. ಸಮಾರಂಭದಲ್ಲಿ 195 ವಿದ್ಯಾಥರ್ಿಗಳಿಗೆ ನೋಟ್ಬುಕ್ ವಿತರಣೆ ಮಾಡಲಾಯಿತು.
ಸಮಾರಂಭದಲ್ಲಿ ಶಾಲಾ ಅಭಿವೃದ್ದಿ ಸಮಿತಿ ಅಧ್ಯಕ್ಷ ನರಸಿಂಹಮೂತರ್ಿ, ಹಿರಿಯ ವಿದ್ಯಾಥರ್ಿಗಳ ಸಂಘದ ಕಾರ್ಯದಶರ್ಿ ಕೆ.ಜಿ.ರಾಜೀವಲೋಚನ, ಶಂಕರಪ್ಪ, ಕೃಷ್ಣಾಚಾರ್, ಲೀಲಾವತಿರಾಜ್ಕುಮಾರ್, ಬನಶಂಕರಯ್ಯ, ಪಾಂಡುರಂಗಯ್ಯ ಉಪಸ್ಥಿತರಿದ್ದರು. ಶಿಕ್ಷಕ ಕೆ.ಶಿವಕುಮಾರ್ ಸ್ವಾಗತಿಸಿ ದ್ರಾಕ್ಷಾಯಣಮ್ಮ ವಂದಿಸಿದರು.
ಕನಕ ಸೇವಾ ಸಮಿತಿಗೆ ನೂತನ ನಿದರ್ೇಶಕರುಗಳು
ಚಿಕ್ಕನಾಯಕನಹಳ್ಳಿ,ಜು.16: ಪಟ್ಟಣದ ಕನಕ ಸೇವಾ ಸಮಿತಿಗೆ 15 ಜನ ನೂತನ ನಿದರ್ೇಶಕರುಗಳು ಚುನಾವಣೆಯ ಮೂಲಕ ಆಯ್ಕೆಗೊಂಡಿದ್ದಾರೆ.
ಬೀರಯ್ಯ(ಅಡಿಕೆ), ಸಿ.ಟಿ.ಗುರುಮೂತರ್ಿ ಸೀಮೆಣ್ಣೆ, ಸಿ.ಎಂ.ಬೀರಲಿಂಗಯ್ಯ, ಸಿ.ಜಿ.ಚಂದ್ರಶೇಖರ್, ಸಿ.ಎಂ.ರಮೇಶ್, ಕ್ಯಾಪ್ಟನ್ ಸೋಮಶೇಖರ್, ಪರಮೇಶ್, ಸಿ.ಎಸ್.ಬಸವರಾಜು, ಸಿ.ಬಿ.ಲಿಂಗರಾಜು, ಸಿ.ಎಸ್.ರಘು, ಸುದರ್ಶನ್, ಸಿ.ಎಸ್.ಪುಷ್ಪಲತ, ಸಿ.ಪಿ.ಮಹೇಶ್, ಗೋವಿಂದಯ್ಯ, ಸಿ.ಎಸ್.ರಾಜಣ್ಣ ಆಯ್ಕೆಯಾಗಿದ್ದಾರೆ.



ಆರ್.ಟಿ.ಓ.ಇನ್ಸ್ಪೆಕ್ಟರ್ ಕಾರು ಢಿಕ್ಕಿ: ಸ್ಥಳದಲ್ಲೇ ಒಬ್ಬ ಸಾವು
ಚಿಕ್ಕನಾಯಕನಹಳ್ಳಿ,ಜು.16: ತರಬೇನಹಳ್ಳಿಯ ಬಳಿ ಎರಡು ವಾಹನಗಳು ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ಒಬ್ಬ ಸ್ಥಳದಲ್ಲೇ ಸಾವನ್ನಪಿದರೆ ಮತ್ತೋರ್ವನ ಕಾಲು ಮುರಿದಿದೆ.
ಬೀದರ್ ಜಿಲ್ಲೆಯ ಆರ್.ಟಿ.ಓ. ಇಲಾಖೆಯ ಇನ್ಸ್ಪೆಕ್ಟರ್ ಕೃಷ್ಣೇಗೌಡ ಎಂಬುವರ ಸ್ಕೋಡಾ ಆಕ್ಟೀವ ವಾಹನ, ಕಲ್ಕತ್ತದ ಗಣಿ ಉದ್ಯಮಿ ವಿಜಯಕಾಂತ ಶರ್ಮನ ಬುಲೆರೋ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ವಿಜಯಕಾಂತ ಶರ್ಮ ಸ್ಥಳದಲ್ಲೇ ಸಾವನ್ನಪಿದ್ದಾನೆ, ಇನ್ಸ್ ಪೆಕ್ಟರ್ ಕೃಷ್ಣೇಗೌಡನ ಕಾಲು ಮುರಿದಿದ್ದು ಹೆಚ್ಚಿನ ಚಿಕಿತ್ಸೆಗೆ ತುಮಕೂರಿಗೆ ಕೊಂಡೊಯ್ಯಲಾಗಿದೆ.
ಅಜ್ಜಿಯ ತಲೆಗೆ ಹೊಡೆದು ಸರ ಅಪಹರಣ: ಪಟ್ಟಣದ ಹೊರವಲಯದ ಮೇಲನಹಳ್ಳಿ ವಾಸಿ ಲಕ್ಷ್ಮೀದೇವಮ್ಮ(60) ಬುಧವಾರ ಮಧ್ಯಾಹ್ನ 3 ಗಂಟೆ ವೇಳೆಯಲ್ಲಿ ಹೊಲದಲ್ಲಿ ಕೆಲಸ ಮಾಡುತ್ತಿರುವಾಗ ಅಪರಚಿತ ಯುವಕನೊಬ್ಬ ಕುಡುಗೋಲಿನಿಂದ ಅಜ್ಜಿಯ ತಲೆಗೆ ಬಲವಾಗಿ ಹೊಡೆದು ಅವರ ಕೊರಳಲ್ಲಿದ್ದ ಚಿನ್ನದ ಸರವನ್ನು ಅಪಹರಿಸಿದ್ದಾನೆ. ಲಕ್ಷ್ಮೀದೇವಮ್ಮ ನವರನ್ನು ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಈ ಎರಡು ಪ್ರಕರಣಗಳನ್ನು ಚಿ.ನಾ.ಹಳ್ಳಿ ಪೊಲೀಸರು ದಾಖಲಿಸಿಕೊಂಡಿದ್ದಾರೆ.

ಹೆಸರು ಬೆಳೆಗೆ ಕೀಟ ಭಾದೆ, ನಿಯಂತ್ರಣಕ್ಕೆ ರೈತರಿಗೆ ಸೂಚನೆ
ಚಿಕ್ಕನಾಯಕನಹಳ್ಳಿ,ಜು.16: ರೈತರು ಭಿತ್ತಿರುವ ಹೆಸರು ಬೆಳೆ ಹೂ ಮತ್ತು ಕಾಯಿ ಹಂತದಲ್ಲಿದ್ದು ಈ ಬೆಳೆಗೆ ತಂಬಾಕು ಹುಳು ಮತ್ತು ಕೊಂಡ್ಲಿ ಹುಳುವಿನ ಬಾಧೆ ಹೆಚ್ಚಾಗಿದೆ ಈ ಸಂಬಂಧ ರೈತರು ಮುಂಜಾಗ್ರತೆ ವಹಿಸಬೇಕೆಂದು ಕೃಷಿ ಸಹಾಯಕ ನಿದರ್ೇಶಕರು ತಿಳಿಸಿದ್ದಾರೆ.
ತಾಲೂಕಿನ 5283 ಹೆಕ್ಟರ್ ಪ್ರದೇಶದಲ್ಲಿ ಹೆಸರು ಬೆಳೆ ಬಿತ್ತಿದ್ದು ಇದರಲ್ಲಿ ಸುಮಾರು 780 ಹೆಕ್ಟರ್ ಪ್ರದೇಶದಲ್ಲಿನ ಬೆಳೆ ಹೂವಿನ ಮತ್ತು ಕಾಯಿಯ ಹಂತದಲ್ಲಿದ್ದು ಇದಕ್ಕೆ ಹತ್ತಿರುವ ಕೀಟಗಳನ್ನು ನಿಯಂತ್ರಿಸಲು ರೈತರು ಈ ಕೆಳಗಿನ ಕ್ರಮ ಕೈಗೊಳ್ಳಬೇಕಿದೆ.
ತಂಬಾಕು ಹುಳುಗಳನ್ನು ಹತೋಟಿ ತರುವ ನೈಸಗರ್ಿಕ ವಿಧಾನವೆಂದರೆ ಗುಂಪಾಗಿರುವ ತಂಬಾಕು ಹುಳುವಿನ ಮೊಟ್ಟೆಗಳನ್ನು ಮತ್ತು ಮರಿಹುಳುಗಳನ್ನು ಕೈಯಿಂದ ಆಯ್ದು ನಾಶಪಡಿಸುವುದು ಒಂದು ಕ್ರಮವಾದರೆ, ರಾಸಾಯನಿಕಗಳಿಂದ ಹತೋಟಿ ಮಾಡಲು ಒಂದು ಲೀಟರ್ ನೀರಿನಲ್ಲಿ ಮಿಥೋಮಿಲ್ 40 ಎಸ್.ಪಿ. ಕರಗುವ ಪುಡಿಯನ್ನು ಬೆರಸಿ ಸಿಂಪಡಿಸುವುದು ಅಥವಾ ಒಂದು ಲೀಟರ್ ನೀರಿನಲ್ಲಿ ಇಂಡಾಕ್ಸ ಕಾಬರ್್ 14.5 ಎಸ್.ಪಿ.ಯನ್ನು 5 ಮಿಲಿ ಬೆರಸಿ ಸಿಂಪಡಿಸಬಹುದು, ನೋವಲ್ಯೂರಾನ್ 10 ಇಸಿ ಯ 5 ಮಿಲಿಯನ್ನು ಒಂದು ಲೀಟರ್ ನೀರಿನಲ್ಲಿ ಬೆರಸಿ ಸಿಂಪಡಿಸಿದರೆ ತಂಬಾಕು ಹುಳುಗಳನ್ನು ನಿಯಂತ್ರಿಸಬಹುದು.
ಬೆಳೆದ ಹುಳುಗಳನ್ನು ಹತೋಟಿಯಲ್ಲಿಡಲು ವಿಷಪಾಷಣ ಬಳಸುವುದು ಸೂಕ್ತವಾಗಿದ್ದು, ಈ ವಿಷಪಾಷಣವನ್ನು ತಯಾರಿಸುವ ಕ್ರಮವೆಂದರೆ ಗೋಧಿ ಹಿಟ್ಟು ಅಥವಾ ಬೂಸಾ ಅಥವಾ ಅಕ್ಕಿ ತೌಡು 10 ಕಿ.ಗ್ರಾಂ.ಗೆ ಒಂದು ಕಿ.ಗ್ರಾ. ಬೆಲ್ಲವನ್ನು ನೀರಿನಲ್ಲಿ ನೆನಸಿದ್ದು, ಈ ಬೆಲ್ಲದ ನೀರಿಗೆ ಹಿಟ್ಟನ್ನು ಕಲಿಸಿ ಸಣ್ಣ ಸಣ್ಣ ಉಂಡೆ ಮಾಡುವುದು ಅದಕ್ಕೆ 150 ಗ್ರಾಂ ಮೆಧೋಮಿಲ್ 40 ಎಸ್.ಪಿ.ಕೀಟನಾಶಕ ಮಿಶ್ರಣ ಮಾಡಿ ಸಂಜೆ 5 ಗಂಟೆಯ ನಂತರ ಹೊಲದಲ್ಲಿ ಎರಚಿ ಹುಳುಗಳನ್ನು ನಾಶ ಪಡಿಸಬಹುಬು.
ಕೊಂಡ್ಲಿಹುಳು, ಕಾಯಿ ಕೊರಕ ಮತ್ತು ಸ್ಪಿಂಜ್ಡ್ ಮಾಥ್ ಹತೋಟಿ ಕ್ರಮ: ಇವುಗಳ ಹತೋಟಿಗೆ ಕ್ಲೋರೋ ಫೈರಿಫಾಸ್ ಅಥವಾ ಎಂಡೋಸಲ್ಪಾನ್ ಅಥವಾ ಕ್ವಿನಲ್ ಫಾಸ್ ಅಥವಾ ಮನೋ ಕ್ರೋಟೋಫಾಸ್ ಇವುಗಳಲ್ಲಿ ಯಾವುದಾದರೊಂದನ್ನು ಒಂದು ಲೀಟರ್ ನೀರಿಗೆ 2 ಮಿಲಿ ಯನ್ನು ಬೆರಸಿ ಸಿಂಪರಣೆ ಮಾಡುವುದು ಒಂದು ಎಕರೆ ಪ್ರದೇಶಕ್ಕೆ 250 ಲೀಟರ್ ಸಿಂಪರಣಾದ್ರಾವಣ ಬಳಸುವುದು ಸೂಕ್ತ ಎಂದಿದ್ದಾರೆ.
ಹೆಚ್ಚಿನ ವಿವರಗಳಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರವನ್ನು ಸಂಪಕರ್ಿಸಲು ಕೋರಿದ್ದಾರೆ