Monday, June 24, 2013


9ನೇ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಭರದಿಂದ ಸಿದ್ದತೆ: ಎಂ.ಎಸ್.ರವಿಕುಮಾರ್

ಚಿಕ್ಕನಾಯಕನಹಳ್ಳಿ,ಜೂ.24 : 9ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಭರದಿಂದ ಸಿದ್ದತೆ ನಡೆಯುತ್ತಿದ್ದು ಸಮ್ಮೇಳನಕ್ಕೆ ಗ್ರಾಮೀಣ ಹೆಣ್ಣುಮಕ್ಕಳು ರೊಟ್ಟಿ ತಯಾರಿಸಿ ತರುವುದು,  ಆರಂಭವಾಗುವ ಒಂದು ದಿನ ಮುಂಚಿತವಾಗಿಯೇ ಗಿಳಿವಿಂಡು ಮಕ್ಕಳ ತಂಡದಿಂದ ನಾಟಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಸಮ್ಮೇಳನಕ್ಕೆ ಪ್ರಾರಂಭವಾಗಲಿದೆ ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷ ಎಂ.ಎಸ್.ರವಿಕುಮಾರ್ ತಿಳಿಸಿದರು.
ಪಟ್ಟಣದ ಕಸಾಪ ಕಛೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು 28,29, ಹಾಗೂ 30ರಂದು ವಿದ್ಯುಕ್ತವಾಗಿ ಸಮ್ಮೇಳನ ನಡೆಯಲಿದೆ, ಸಮ್ಮೇಳನಾಧ್ಯಕ್ಷರ ಮೆರವಣಿಗೆಯು ಕನ್ನಡ ಸಂಘದಿಂದ ಆರಂಭಗೊಂಡು  ಪಟ್ಟಣದ ನಾಲ್ಕು ಪ್ರಮುಖ ಬೀದಿಗಳಲ್ಲಿ ಸಂಚರಿಸುವುದು. ಈ ವೇಳೆ 30ಕ್ಕೂ ಹೆಚ್ಚು ಕಲಾ ತಂಡಗಳು ಸಾವಿರಕ್ಕೂ ಹೆಚ್ಚು ಸಾಹಿತ್ಯಾಸಕ್ತರು ಭಾಗವಹಿಸಲಿದ್ದಾರೆ, ಸಮ್ಮೇಳನದಲ್ಲಿ ನಡೆಯುವ ಪ್ರತಿ ಕಾರ್ಯಕ್ರಮಕ್ಕೂ  ಅಗತ್ಯವಿರುವ ಪೂರ್ವ ಸಿದ್ದತೆಗಳನ್ನು ಸಿದ್ದಪಡಿಸಿಕೊಂಡಿದ್ದೇವೆ, 25ರಂದು ಸಮ್ಮೇಳನದ ಪರವಾಗಿ ಪಟ್ಟಣದ ಬೀದಿಗಳಲ್ಲಿ ಧನ ಧಾನ್ಯ ಸಂಗ್ರಹಣೆಗಾಗಿ ಕನ್ನಡ ಪರ ಸಂಘಟನೆಗಳು, ಆಟೋ ಚಾಲಕರ ಸಂಘದಿಂದ  ಜಾಥಾ ನಡೆಸಲಿವೆ. 27ರಂದು ಮಕ್ಕಳ ನಾಟಕಗಳು ವಿಶೇಷ ಆಕರ್ಷಣೆ ಪಡೆಯಲಿದ್ದು ಶಾಲಾ ಕಾಲೇಜು ವಿದ್ಯಾಥರ್ಿಗಳ ಎನ್.ಎಸ್.ಎಸ್ ವಿದ್ಯಾಥರ್ಿಗಳು ನಮಗೆ ಕೈಜೋಡಿಸಲಿದ್ದಾರೆ ಎಂದರು. 
ಸಮ್ಮೇಳನದಲ್ಲಿ ವಿಶೇಷವಾಗಿ ನಮ್ಮೂರಲ್ಲಿ ಗಜಲ್ ಎಂಬ ವಿಶೇಷ ಕವಿಗೋಷ್ಠಿ ಹಾಗೂ  ವಿವಿಧ ಗೋಷ್ಠಿಗಳಲ್ಲಿ ನಡೆಯುವ ಸಾಹಿತ್ಯ, ಸಾಂಸ್ಕೃತಿಯ, ವೈಶಿಷ್ಟ್ಯತೆಗಳ ಅನಾವರಣ, ಕೃಷಿಗೆ ಸಂಬಂಧಿಸಿದ ವಿಷಯಗಳ ಮಂಡನೆ, ಚಚರ್ೆ ತೆಂಗು ಬೆಳೆಗೆ ಸಂಬಂಧಿಸಿದ ಮಾರುಕಟ್ಟೆ, ಅದರ ಮುಂದಿನ ಪರಿಣಾಮಗಳ ಚಿಂತನೆ, ಕುಂಚಾಂಕುರ ಕಲಾ ಸಂಘದ ಆಕರ್ಷಕ ಚಿತ್ರಕಲೆಗಳ ಪ್ರದರ್ಶನ, ಶಿಲ್ಪಿ ವಿಶ್ವನಾಥ್ರವರಿಂದ ಕೆತ್ತಲ್ಪಟ್ಟ ಭುವನೇಶ್ವರಿ ವಿಗ್ರಹದ ಅನಾವರಣ, ಛಾಯಾಚಿತ್ರ ಸಂಘಗಳಿಂದ ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳ ದರ್ಶನ, ರಾಜ್ ಅಭಿಮಾನಿ ಸಿ.ಹೆಚ್.ರೂಪೇಶ್ರವರ ರಾಜ್ ಪ್ರದರ್ಶನ, ರಂಗೋಲಿ ಚಿತ್ತಾರ, ಗುಡಿ ಕೈಗಾರಿಕೆಗಳಾದ ಕಂಬಳಿ, ಬುಟ್ಟಿ, ಕುಂಬಾರಿಕೆಗಳ ಪ್ರದರ್ಶನ, ಹಾಗೂ ಮೆರವಣಿಗೆಯಲ್ಲಿ ವೈಶಿಷ್ಟ್ಯಪೂರ್ಣ ಕಲಾ ತಂಡಗಳ, ಸಾಂಸ್ಕೃತಿ ವೈಭವ ಪ್ರತಿಬಿಂಬಿಸುವ ಜಾನಪದ ಕಲೆಗಳ ಪ್ರದರ್ಶನವಿರುತ್ತದೆ ಎಂದರು.
ಗೋಷ್ಠಿಯಲ್ಲಿ ಪ್ರಚಾರ ಸಮಿತಿಯ ಅಧ್ಯಕ್ಷ ಕೆ.ಜಿ.ರಾಜೀವಲೋಚನ, ಪರಿಷತ್ನ ಪ್ರಧಾನ ಕಾರ್ಯದಶರ್ಿಗಳಾದ ಉಪನ್ಯಾಸಕ ರವಿಕುಮಾರ್ ಮಂಜುನಾಥರಾಜ ಅರಸ್,  ನಂದೀಶ್ ಬಟ್ಲೇರಿ, , ಸಿ.ಟಿ.ಗುರುಮೂತರ್ಿ, ಎಸ್.ಬಿ.ಕುಮಾರ್, ಸಿ.ಹೆಚ್.ಗಂಗಾಧರ್ ಉಪಸ್ಥಿತರಿದ್ದರು.