Tuesday, September 7, 2010




ಉನ್ನತ ಜ್ಞಾನ ಬೋಧನೆಯನ್ನು ಉತ್ತಮ ಪಡಿಸುತ್ತದೆ.
ಚಿಕ್ಕನಾಯಕನಹಳ್ಳಿ,ಸೆ.07: ಶಿಕ್ಷಕರು ವೃತ್ತಿಗಾಗಿ ಮಾಡಿರುವ ವಿದ್ಯಾಭ್ಯಾಸದ ಜೊತೆಗೆ ಉನ್ನತ ವಿಧ್ಯಾಭ್ಯಾಸ ಮಾಡಿ ಹೆಚ್ಚು ವಿಷಯಗಳನ್ನು ತಿಳಿದುಕೊಂಡು ಮಕ್ಕಳಿಗೆ ಬೋಧನೆ ಮಾಡಿದರೆ ಮಕ್ಕಳಿಂದ ನಿರೀಕ್ಷೆಗೂ ಮೀರಿ ಫಲಿತಾಂಶ ಪಡೆಯಬಹುದು ಎಂದು ಬೆಂಗಳೂರಿನ ಭವತಾರಿಣಿ ಆಶ್ರಮದ ಮಾತಾಜಿ ವಿವೇಕಮಯಿ ಅಭಿಪ್ರಾಯಪಟ್ಟರು.
ಪಟ್ಟಣದ ಸಕರ್ಾರಿ ಪ್ರೌಡಶಾಲಾ ಆವರಣದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಶಿಕ್ಷಕರಲ್ಲಿ ಮುಖ್ಯವಾಗಿ ತಾಳ್ಮೆ, ಶಾಂತ ಸ್ವಭಾವದ ವ್ಯಕ್ತಿತ್ವ ಇದ್ದರೆ ದುಶ್ಚಟಗಳಿಗೆ ಬಾಗಿಯಾಗಿರುವ ವಿದ್ಯಾಥರ್ಿಯನ್ನು ಸರಿದಾರಿಗೆ ತರಬಹುದು ಎಂದರಲ್ಲದೆ, ಶಿಕ್ಷಕರು ವೃತ್ತಿಯನ್ನು ಪ್ರೀತಿಸುವುದಕ್ಕಿಂತ ಮಕ್ಕಳನ್ನು ಹೆಚ್ಚು ಪ್ರೀತಿಸಿದರೆ ಅವರು ತಂದೆ, ತಾಯಿ ಬಳಿ ಹೇಳಿಕೊಳ್ಳದಂತಹ ವಿಷಯಗಳನ್ನು ಗುರುಗಳಲ್ಲಿ ಹೇಳಿ ಸಮಸ್ಯೆ ಬಗೆಹರಿಸಿಕೊಳ್ಳುತ್ತಾರೆ ಆದ್ದರಿಂದ ಮಕ್ಕಳಿಗೆ ಸತ್ಭಾವನೆಯಿಂದ ಬೋಧಿಸಬೇಕು ಎಂದರು. ಶಿಕ್ಷಕರು ಮಕ್ಕಳ ಆಸಕ್ತಿ ಕಡೆ ಹೆಚ್ಚು ಒತ್ತು ಕೊಟ್ಟರೆ ಪಠ್ಯೇತರ ಚಟುವಟಿಕೆಗಳ ಜೊತೆಗೆ ವಿದ್ಯಾಭ್ಯಾಸವನ್ನು ಕಲಿಯುತ್ತಾರೆ, ಮತ್ತು ಮಕ್ಕಳಿಗೆ ವಿದ್ಯೆ ಬೋದಿಸುವಾಗ ಧರ್ಮ, ಆಧ್ಯಾತ್ಮ ವಿಷಯಗಳನ್ನು ತಿಳಿಸಿ ಸಮಾಜ ಸುಸ್ಥಿಯಲ್ಲಿಡುವಂತೆ ತಿಳಿಸಿದರು.
ತಹಶೀಲ್ದಾರ್ ಟಿ.ಸಿ.ಕಾಂತರಾಜು ಮಾತನಾಡಿ ಶಿಕ್ಷಕರು ಮಾಡುವ ಬೋಧನೆಯಲ್ಲಿ ಭವಿಷ್ಯ ಅಡಗಿದ್ದು ಅವರು ವೇತನಕ್ಕೋಸ್ಕರ ಭೋದನೆ ಮಾಡದೆ ಒಬ್ಬ ಡಾ.ಸರ್ವಪಲ್ಲಿ ರಾಧಕೃಷ್ಣನ್ರವರನ್ನು ಬೆಳೆಸುತ್ತಿದ್ದೇನೆ ಎಂದು ಅರಿತು ಬೋದಿಸಿದಾಗ ಶಿಕ್ಷಕ ವೃತ್ತಿ ಸಾರ್ಥಕವೆನಿಸುತ್ತದೆ ಎಂದರು. ವಿದ್ಯಾಥರ್ಿಗಳಿಗೆ ದೇಶಕ್ಕೆ ಕೀತರ್ಿ ತಂದ ಮೇರು ವ್ಯಕ್ತಿಯನ್ನು ಮಾದರಿಯನ್ನಾಗಿ ತೋರಿಸಿ ಅವರ ಆದರ್ಶದ ಮಾರ್ಗದಲ್ಲಿ ನಡೆಯುವಂತೆ ಬೋಧಿಸಿದರೆ, ಮಕ್ಕಳು ಉತ್ತಮ ಹಂತಕ್ಕೆ ತಲುಪಿ ವಿದ್ಯೆ ಕಲಿಸಿಕೊಟ್ಟ ಗುರುವನ್ನು ಎಲ್ಲಿದ್ದರೂ ನೆನಪಿಸಿ ತಮ್ಮಲ್ಲೇ ಗೌರವಿಸುತ್ತಾರೆ ಎಂದರು. ಆಡಳಿತದ ಮೂಲ ಉದ್ದೇಶ ಸಾರ್ವಜನಿಕ ಸೇವೆಯಾಗಿದ್ದು ಕುಂದುಕೊರತೆಗಾಗಿ ನಿವಾರಿಸಿಕೊಳ್ಳಲು ಬರುವಂತಹವರಿಗೆ ಸೌಜನ್ಯದಿಂದ ವತರ್ಿಸಬೇಕು ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ತಾಲೂಕು ಶಿಕ್ಷಕರ ಸಂಘದ ವತಿಯಿಂದ 16ಜನ ಶಿಕ್ಷಕರಿಗೆ ಮತ್ತು ಡಾ.ಲಕ್ಷ್ಮಿಪತಿ ಬಾಬು,ಡಾ.ಸರೋಜ ಲಕ್ಷ್ಮಿಪತಿ ಪ್ರತಿಷ್ಠಾನದ ವತಿಯಿಂದ ನಿವೃತ್ತ ಮುಖ್ಯೋಪಾಧ್ಯಾಯ ಜಿ.ತಿಮ್ಮಯ್ಯ ಪ್ರಶಸ್ತಿಯನ್ನು 4ಜನ ಶಿಕ್ಷಕರಿಗೆ ಪ್ರದಾನ ಮಾಡಲಾಯಿತು.
ಸಮಾರಂಭದಲ್ಲಿ ತಾ.ಪಂ.ಅಧ್ಯಕ್ಷ ಕೆ.ಜಿ.ಮಲ್ಲಿಕಾಜರ್ುನಯ್ಯ, ಪುರಸಭಾಧ್ಯಕ್ಷ ರಾಜಣ್ಣ, ಉಪಾಧ್ಯಕ್ಷೆ ಕವಿತಾಚನ್ನಬಸವಯ್ಯ, ಟೌನ್ ಬ್ಯಾಂಕ್ ಅಧ್ಯಕ್ಷ ಸಿ.ಎಸ್.ನಟರಾಜು, ಎಸ್.ಆರ್.ಎಸ್.ಕಂಬಳಿ ಸೊಸೈಟಿ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್, ಜಿ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಪರಶಿವಮೂತರ್ಿ, ತಾ.ಪ್ರಾ.ಶಾ.ಶಿ.ಸಂಘದ ಅಧ್ಯಕ್ಷ ಹೆಚ್.ಎಂ.ಸುರೇಶ್, ನಿವೃತ್ತ ಮುಖ್ಯೋಪಾಧ್ಯಾಯ ಜಿ.ತಿಮ್ಮಯ್ಯ ಪ್ರಾಂಶುಪಾಲ ಎ.ಎನ್.ವಿಶ್ವೇಶ್ವರಯ್ಯ ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಮಹದೇವಮ್ಮ ಪ್ರಾಥರ್ಿಸಿ, ಬಿ.ಇ.ಓ ಸಾ.ಚಿ.ನಗೇಶ್ ಸ್ವಾಗತಿಸಿ, ಸಂಘದ ಉಪಾಧ್ಯಕ್ಷ ಎಸ್.ಸಿ.ನಟರಾಜ್ ನಿರೂಪಿಸಿದರು.