Wednesday, March 23, 2011



ಚಿ.ನಾ.ಹಳ್ಳಿಯ ರೇವಣ್ಣ ಮಠ ಹಿರಿಯ ಪ್ರಾಥಮಿಕ ಶಾಲೆ ಪಾಕಶಾಲೆಗೆ ನಿವೇಶನದ ಕೊಡುಗೆ
(ಸಿ.ಗುರುಮೂತರ್ಿ ಕೊಟಿಗೆಮನೆ)
ಚಿಕ್ಕನಾಯಕನಹಳ್ಳಿ ತಾಲ್ಲೂಕು ಕೇಂದ್ರದಲ್ಲಿ ಹೆಚ್ಚಿನ ವಿದ್ಯಾಥರ್ಿ ಸಂಖ್ಯೆಯನ್ನು ಹೊಂದಿರುವ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ, 'ರೇವಣ್ಣ ಮಠ ಹಿರಿಯ ಪ್ರಾಥಮಿಕ ಪಾಠಶಾಲೆ'. ಈ ಪಾಠಶಾಲೆಯು ಸುಮಾರು ಆರು ದಶಕಗಳಿಗೂ ಹಿಂದಿನಿಂದ ಇಲ್ಲಿನ ಶ್ರೀ ರೇವಣ್ಣ ಸಿದ್ದೇಶ್ವರ ಮಠದಲ್ಲಿ ನಡೆಯುತ್ತಿತ್ತು. ಈಗ್ಗೆ ಎರಡು ವರ್ಷಗಳ ಹಿಂದೆ ಶಾಲೆಗೆ ಸಕರ್ಾರಿ ಕಟ್ಟಡವನ್ನು ನಿಮಿಸಬೇಕೆಂಬ ಉದ್ದೇಶದಿಂದ ಸಕರ್ಾರವು ಶಾಲೆಯ ಪರಿಸರದಲ್ಲೇ ನಿವೇಶನವೊಂದನ್ನು ಹುಡುಕಲು ಪ್ರಾರಂಭಿಸಿತು. ಆ ಸಂದರ್ಭದಲ್ಲಿ ಇದೇ ಊರಿನ ನಿವೃತ್ತ ವಾತರ್ಾ ಜಂಟಿ ನಿದರ್ೇಶಕ ಶ್ರೀ ಸಿ.ಕೆ.ಪರಶುರಾಮಯ್ಯನವರು ಶಾಲೆಗೆ ಸೂಕ್ತ ನಿವೇಶನವೊಂದನ್ನು ಹುಡುಕಿ, ಸುಮಾರು ಮೂರು ಲಕ್ಷ ರೂಗಳಿಗೆ ಕೊಂಡು; ತಮ್ಮ ಮಾತಾಪಿತೃ ದಿ.ಚೌಡಿಕೆ ಕರಿಯಪ್ಪ ಮತ್ತು ದಿ.ಸಣ್ಣಮುದ್ದಮ್ಮನವರ ಸ್ಮರಣಾರ್ಥ ಸಕರ್ಾರಕ್ಕೆ ದಾನ ಮಾಡಿದ್ದರು. ಪರಿಣಾಮವಾಗಿ ಈ ಶಾಲೆಗೆ ಈಗ ಸ್ವಂತ ಸಕರ್ಾರಿ ಕಟ್ಟಡದ ಸುಯೋಗ ಒದಗಿ ಬಂದಿದೆ.
ಈ ನಿವೇಶನದಲ್ಲಿ ಈಗಾಗಲೇ ವಿಶಾಲವಾದ ಮೂರು ಕೊಠಡಿಗಳ ನಿಮರ್ಾಣ ಮುಗಿದಿದ್ದು, ಅಲ್ಲಿ ಶಾಲೆಯೂ ನಡೆಯುತ್ತಿದೆ. ಶಾಲೆಯ ಮೇಲಿನ ಅಂತಸ್ತಿನಲ್ಲಿ ಇನ್ನೂ ಮೂರು ಕೊಠಡಿಗಳ ನಿಮರ್ಾಣ ಕಾರ್ಯ ಭರದಿಂದ ಸಾಗುತ್ತಿದೆ. ಇಲ್ಲಿಗೆ ಕೊಠಡಿಗಳ ಅಗತ್ಯ ಪೂರ್ಣಗೊಳ್ಳುತ್ತದೆ. ಈ ಶಾಲೆಯ ಪರಿಸರದಲ್ಲಿ ವಾಹನಗಳ ಓಡಾಟದ ಒತ್ತಡವಿಲ್ಲದಿರುವುದರಿಂದ ಸುತ್ತಮುತ್ತಣ ಏಳೆಂಟು ಕೇರಿಗಳ ಬಡವರು ಮತ್ತು ಮಧ್ಯಮ ವರ್ಗದವರ ಮಕ್ಕಳು ನಿರಾತಂಕವಾಗಿ ಶಾಲೆಗೆ ಬಂದು, ಕಲಿತು ಹೋಗುವ ಸೌಲಭ್ಯವಿದೆ.
ಪ್ರಸ್ತುತ ಈ ಶಾಲೆಗೆ ಮಧ್ಯಾಹ್ನದ ಉಪಾಹಾರ ಸಿದ್ದಪಡಿಸಲು ಪಾಕಶಾಲೆಯ ನಿಮರ್ಾಣಕ್ಕೆ ಶಾಲೆಗೆ ಹೊಂದಿಕೊಂಡಂತೆ ಸೂಕ್ತ ನಿವೇಶನದ ಅಗತ್ಯವಿತ್ತು. ಈ ಕೊರತೆಯನ್ನು ತುಂಬುವ ಸಲುವಾಗಿ ಪಾಕ ಶಾಲೆಗೆ ಪುಟ್ಟ ನಿವೇಶನವೊಂದನ್ನು ಐವತ್ತು ಸಾವಿರ ರೂಗಳಿಗೆ ಕೊಂಡು, ಸಕರ್ಾರಕ್ಕೆ ದಾನವಾಗಿ ನೀಡಿದ್ದಾರೆ ಶ್ರೀ ಸಿ.ಕೆ.ಪರಶುರಾಮಯ್ಯ ದಂಪತಿಗಳು. ಈ ನಿವೇಶನವನ್ನು ಅವರು ತಮ್ಮ ಚಿಕ್ಕಮ್ಮ(ತಾಯಿಯ ತಂಗಿ) ಕೊಟಿಗೆಮನೆ ದಿ.ಸಿ.ಮುದ್ದೇಗೌಡ ಮತ್ತು ದಿ.ಸಿರಿಯಮ್ಮನವರ ಮಗಳು ದಿ. ಸವರ್ೇಯರ್ ಕವಡಿಕೆ ಆಂಜನಪ್ಪನವರ ಧರ್ಮಪತ್ನಿ ದಿ. ಶ್ರೀಮತಿ ಲಕ್ಕಮ್ಮ(ಅವ್ವಣ್ಣಿ)ನವರ ಸ್ಮರಣಾರ್ಥ ದಾನವಾಗಿ ನೀಡಿದ್ದಾರೆ.
ಶ್ರೀಮತಿ ಲಕ್ಕಮ್ಮ ಮದುವೆಯಾದ ಹರೆಯದಲ್ಲೇ, ಕೇವಲ ಆರೆಂಟು ತಿಂಗಳಲ್ಲಿ ಪತಿಯನ್ನು ಕಳೆದುಕೊಂಡ ನಿಭರ್ಾಗ್ಯೆ. ಆಕೆಯ ದೌಭರ್ಾಗ್ಯವನ್ನು, ಮಾನಸಿಕ ವೇದನೆಯನ್ನು ಮರೆಸಿ ಆಸರೆಯಾದವರು ಸೋದರರಾದ ಕೊಟಿಗೆಮನೆಯ ಸಿ.ಮುದ್ದುಲಿಂಗಯ್ಯ, ಸಿ.ಎಂ.ಗುರುಲಿಂಗಪ್ಪ, ಸಿ.ಎಂ.ರೇವಣ್ಣ- ಇವರೆಲ್ಲರೂ ಆ ಕಾಲಕ್ಕೇ ಎಂ.ಎ., ಬಿ.ಎ., ಬಿ.ಎಸ್ಸಿ(ಆನಸರ್್) ಪದವಿಗಳನ್ನು ಗಳಿಸಿ ಸಕರ್ಾರದಲ್ಲಿ ಉನ್ನತ ಹುದ್ದೆಯಲ್ಲಿದ್ದವರು. ಕಿರಿಯ ಮಗ ಸಿ.ಎಂ.ಮುದ್ದುರಾಮೇಗೌಡರು ಮನೆತನದ ಪ್ರತಿಷ್ಠಿತ ರೇವಣ್ಣ ಸಿದ್ದೇಶ್ವರ ಮಠದ ಹರಿವಾಣದ ಗೌಡರು ಹಾಗೂ ಆಕೆಯ ಹಿರಿಯಕ್ಕ ದಿ.ಸಣ್ಣಮುದ್ದಮ್ಮ ಮತ್ತು ಅತ್ತಿಗೆ ದಿ.ಯಲ್ಲಮ್ಮ, ಇವರೆಲ್ಲರ ಅಕ್ಕರೆಯ ಆರೈಕೆ ಮತ್ತು ಹಾರೈಕೆಯಲ್ಲಿ ವೈಧವ್ಯದ ಬರ ಸಿಡಿಲಿನ ನಡುವೆಯೂ ಬದುಕಿನಲ್ಲಿ ಭರವಸೆಯ ಬೆಳಕನ್ನು ಕಂಡುಕೊಂಡ ಆದರ್ಶ ಸಾದ್ವಿ ಶ್ರೀಮತಿ ಲಕ್ಕಮ್ಮ.
ಲಕ್ಕಮ್ಮ ಅದ್ಭುತವಾದ ಪಾಕ ಪ್ರವೀಣೆ. ಯಾವ ಅಡಿಗೆಯು ಯಾವ ಹದದಲ್ಲಿದ್ದರೆ ರುಚಿ ಮತ್ತು ಚಂದ ಎಂಬ ಅಡಿಗೆಯ ರಹಸ್ಯವನ್ನು ಅರಿತವರು. ಅರ್ಧ ಶತಮಾನದಷ್ಟು ಹಿಂದೆ ಮೈಸೂರಿನ ಕೃಷ್ಣಮೂತರ್ಿ ಪುರದಲ್ಲಿದ್ದ ತನ್ನ ಹಿರಿಯಣ್ಣ ಸೀನಿಯರ್ ಅಸಿಸ್ಟೆಂಟ್ ಕಮೀಷನರ್ ಸಿ.ಮುದ್ದಲಿಂಗಯ್ಯನವರ ಮನೆಯಲ್ಲಿ ಮೂವತ್ತೈದಕ್ಕೂ ಹೆಚ್ಚು ಜನ ಒಂದೇ ಸೂರಿನಡಿ ಸಂತೋಷದಿಂದ ವಾಸಿಸುತ್ತದ್ದ ಒಟ್ಟು ಕುಟುಂಬ. ಅವರಲ್ಲಿ ಮೂರನೆಯ ಎರಡರಷ್ಟು ಜನ ಆ ಕಾಲಕ್ಕೇ ಉನ್ನತ ವ್ಯಾಸಂಗ ಮಾಡುತ್ತಿದ್ದ ವಿದ್ಯಾಥರ್ಿಗಳು. ಜೊತೆಗೆ ಆ ಮನೆಗೆ ಬರುತ್ತಿದ್ದ ಬಂಧು-ಬಾಂಧವರು, ಅತಿಥಿ-ಅಭ್ಯಾಘತರು; ಹೀಗೆ ಸದಾ ಜನರಿಂದ ತುಂಬಿದ್ದ ಗೃಹ. ಅವರೆಲ್ಲರಿಗೂ ಶ್ರೀಮತಿ ಲಕ್ಕಮ್ಮ ತನ್ನ ಅತ್ತಿಗೆ ಶ್ರೀಮತಿ ಎಲ್ಲಮ್ಮ(ದಿ.ಚೌಡಿಕೆ ಕರಿಯಪ್ಪನವರ ಹಿರಿಯ ಮಗಳು) ನವರೊಂದಿಗೆ ಮೂರು ಹೊತ್ತು ಅಷ್ಟು ದೊಡ್ಡ ಅಡಿಗೆಯನ್ನು ಮಾಡಿ ಒಲವಿನಿಂದ ಬಡಿಸುತ್ತಿದ್ದ ಅನ್ನಪೂಣರ್ೆ.
ಈಗ ಸಕರ್ಾರವು ಶಾಲಾ ಮಕ್ಕಳಿಗೆ ಒದಗಿಸುತ್ತಿರುವ ಮಧ್ಯಾಹ್ನದ ಉಪಾಹಾರ ಸಿದ್ಧತೆಯ ಕೊಠಡಿಗೆ ಪಾಕಪ್ರವೀಣೆ ಶ್ರೀಮತಿ ಲಕ್ಕಮ್ಮನವರ ಹೆಸರಿನಲ್ಲಿ ನಿವೇಶನವನ್ನು ನೀಡಿರುವುದು ಆಕೆಯ ತ್ಯಾಗ ಜೀವನಕ್ಕೆ ಸಂದ ಗೌರವವಾಗಿದೆ. ತಮ್ಮ ಚಿಕ್ಕಮ್ಮನ ಸ್ಮರಣೆಗೆ ಪುಟ್ಟ ಕೊಡಿಗೆಯನ್ನು ನೀಡಿರುವ ಸಿ.ಕೆ.ಪರಶುರಾಮಯ್ಯ ದಂಪತಿಗಳ ಕಲ್ಪನೆ ಮತ್ತು ಕೈಂಕರ್ಯಕ್ಕೆ ಈ ಕೊಡುಗೆ ಸಾಕ್ಷಿಯಾಗಿದೆ.
ಈ ನಿವೇಶನ ನೀಡಿಕೆಯ ಪುಟ್ಟ ಸರಳ ಸಮಾರಂಭವು ದಿ.21.03.11ರಂದು ಶ್ರೀ ರೇವಣ್ಣಸಿದ್ದೇಶ್ವರ ಮಠದ ಶ್ರೀಗುರು ಸನ್ನಿಧಿಯಲ್ಲಿ ನಡೆಯಿತು. ಶಾಲಾ ಶಿಕ್ಷಕ ವರ್ಗ, ಶಾಲಾಭಿವೃದ್ದಿ ಸಮಿತಿಯ ಸದಸ್ಯರು, ವಿದ್ಯಾಥರ್ಿಗಳು ಹಾಗೂ ಸಾರ್ವಜನಿಕರ ಸಮ್ಮುಖದಲ್ಲಿ ನಡೆದ ಈ ಸಮಾರಂಭದಲ್ಲಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಸಾ.ಚಿ.ನಾಗೇಶ್ ಅವರು ಸಿ.ಕೆ.ಪರಶುರಾಮಯ್ಯನವರಿಂದ ಸಕರ್ಾರದ ಪರವಾಗಿ ನಿವೇಶನ ದಾನ ಪತ್ರವನ್ನು ಸ್ವೀಕರಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಹಿರಿಯರಾದ ಎಸ್.ಮುರಡಯ್ಯನವರು ವಹಿಸಿದ್ದರು. ನಿವೃತ್ತ ಹಿರಿಯ ಶಿಕ್ಷಕರಾದ ಜಿ.ತಿಮ್ಮಯ್ಯನವರು ಸಂದರ್ಭಕ್ಕೆ ಉಚಿತವಾದ ಮಾತನಾಡಿ, ಶಿಕ್ಷಕರ ಜವಬ್ದಾರಿಯನ್ನು ಮನದಟ್ಟು ಮಾಡಿದರು. ಈ ಸಂದರ್ಭದಲ್ಲಿ ಸಿ.ಕೆ.ಪರಶುರಾಮಯ್ಯನವರು ತಮ್ಮ ಬಾಲ್ಯದ ಶಾಲಾದಿನಗಳನ್ನು ಮೆಲಕು ಹಾಕುತ್ತಾ ಹಳೆಯ ಶಿಕ್ಷಕರ ವೃತ್ತಿನಿಷ್ಠೆ ಮತ್ತು ಸೇವಾ ಮನೋಭಾವವನ್ನು ಮೆಲುಕು ಹಾಕಿದರು.
ಶಾಲೆಯ ಮುಖ್ಯೋಪಾಧ್ಯಾಯಿನಿ ತಿಲೋತ್ತಮೆ ಸ್ವಾಗತಿಸಿದರು, ಶಿಕ್ಷಕಿ ಚಂದ್ರಮತಿ ವಂದಿಸಿದರು.

ಚಿಕ್ಕನಾಯಕನಹಳ್ಳಿ,ಮಾ.22: ಪಟ್ಟಣದ ಶೆಟ್ಟಿಕೆರೆ ಗೇಟ್ ವಾಡರ್್ ನಂ.9ರ ಹಳೇ ಆಸ್ಪತ್ರೆ ಹಿಂಭಾಗದಲ್ಲಿರುವ ಸಾರ್ವಜನಿಕರ ಶೌಚಾಲಯಕ್ಕೆ ಮಾಜಿ ಅಧ್ಯಕ್ಷ ರಾಜಣ್ಣನವರು ತಮಗೆ ಬೇಕಾದ ಖಾಸಗಿ ವ್ಯಕ್ತಿಗೆ ಶೌಚಾಲಯದ ಕೀ ಕೊಟ್ಟು ಉಪಯೋಗಿಸಿಕೊಳ್ಳಲು ನೀಡಿದ್ದು ಸಾರ್ವಜನಿಕರಿಗೆ ಅನ್ಯಾಯವೆಸಗಿದ್ದಾರೆಂದು ಕರವೇ ಅಧ್ಯಕ್ಷ ಸಿ.ಟಿ.ಗುರುಮೂತರ್ಿ ಆರೋಪಿಸಿದ್ದಾರೆ.
ಕನರ್ಾಟಕ ಕೊಳಚೆ ನಿಮರ್ೂಲನ ಮಂಡಳಿಯು ನೈರ್ಮಲ್ಯವನ್ನು ಕಾಪಾಡಲು ಸಾರ್ವಜನಿಕರಿಗೆ ಶೌಚಾಲಯವನ್ನು ನೀಡಿದೆ ಆದರೆ ಇಲ್ಲಿನ ಮಾಜಿ ಅಧ್ಯಕ್ಷರು ಸಾರ್ವಜನಿಕರ ವಿರುದ್ದವಾಗಿ ತಮಗೆ ಬೇಕಾದವರಿಗೆ ಕೀ ನೀಡಿದ್ದಾರೆ ಎಂದು ಸಾರ್ವಜನಿಕರು ಕರವೇ ಅಧ್ಯಕ್ಷ ಸಿ.ಟಿ.ಗುರುಮೂತರ್ಿಯವರ ಬಳಿ ಹೇಳಿದಾಗ, ಅವರು ಪುರಸಭೆ ಮುಖ್ಯಾಧಿಕಾರಿಗಳ ಬಗ್ಗೆ ಈ ವಿಷಯವಾಗಿ ಚಚರ್ಿಸಿದರು, ಆದರೆ ಮುಖ್ಯಾಧಿಕಾರಿಗಳು ನಮ್ಮ ಗಮನಕ್ಕೆ ಈ ವಿಷಯ ಬಂದಿಲ್ಲ ಎಂದು ಸಬೂಬು ಹೇಳಿದರು ಎಂದರೆಂದು ಆರೋಪಿಸಿದರಲ್ಲದೆ ಮಾಜಿ ಪುರಸಭಾಧ್ಯಕ್ಷ ರಾಜಣ್ಣನವರ ಬಳಿಯೂ ಈ ವಿಷಯವಾಗಿ ಚಚರ್ಿಸಿದಾಗ ಕರವೇ ಅಧ್ಯಕ್ಷ ಮತ್ತು ಪುರಸಭಾಧ್ಯಕ್ಷರಿಬ್ಬರಿಗೂ ಮಾತಿನ ಚಕಮಕಿ ಉಂಟಾಯಿತು, ಸ್ಥಳದಲ್ಲೇ ಇದ್ದ ಪುರಸಭಾಧ್ಯಕ್ಷ ದೊಡ್ಡಯ್ಯ, ಉಪಾಧ್ಯಕ್ಷ ರವಿ, ಇಬ್ಬರನ್ನು ಸಮಾಧಾನ ಪಡಿಸಿ ನಾಳೆಯಿಂದಲೇ ಸಾರ್ವಜನಿಕರಿಗೆ ಶೌಚಾಲಯ ಉಪಯೋಗಿಸಲು ಅನುಮತಿ ನೀಡುತ್ತೇವೆ ಎಂದು ಒಪ್ಪಿಕೊಂಡರು. ಘಟನಾ ಸ್ಥಳದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಎಸ್.ರಮೇಶ್, ಮುಖ್ಯಾಧಿಕಾರಿ ಹೊನ್ನಪ್ಪ ಇದ್ದರು.

ಚಿಕ್ಕನಾಯಕನಹಳ್ಳಿ.ಮಾ.22: ತಾಲೂಕು ಕಾನೂನು ಸಮಿತಿ ಮತ್ತು ವಕೀಲರ ಸಂಘದ ವತಿಯಿಂದ ಇದೇ 25ರಂದು ಕಾನೂನು ಕಾರ್ಯಗಾರವನ್ನು ಏರ್ಪಡಿಸಲಾಗಿದೆ.
ಕಾರ್ಯಗಾರವನ್ನು ನ್ಯಾಯಾಲಯದ ಆವರಣದಲ್ಲಿ ಬೆಳಗ್ಗೆ 9.30ಕ್ಕೆ ಹಮ್ಮಿಕೊಂಡಿದ್ದು
ಜಿಲ್ಲಾ ಸತ್ರ ನ್ಯಾಯಾದೀಶ ಜಿ.ವಿ.ಅಂಗಡಿ ಹಿರೇಮಠ್ ಉದ್ಘಾಟನೆ ನೆರವೇರಿಸಲಿದ್ದು ರಾಜ್ಯ ವಕೀಲರ ಸಂಘದ ಮಾಜಿ ಉಪಾಧ್ಯಕ್ಷ ಮುನಿಯಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಜಿ.ಎಂ.ಶೀನಪ್ಪ, ಎನ್.ಶೀಲಾ, ರಾ.ವಕೀಲರ ಸಂಘದ ಮಾಜಿ ಉಪಾಧ್ಯಕ್ಷ ಬಿ.ಎಸ್.ಯೋಗೀಶ್ ವಕೀಲರ ಸಂಘದ ಅಧ್ಯಕ್ಷ ಎಸ್.ಜಿ.ಗೋಪಾಲಕೃಷ್ಣ ಉಪಸ್ಥಿತರಿರುವರು.