Saturday, June 1, 2013ವಿದ್ಯುತ್ ಅವಗಡ ಒಂದು ಸಾವು: ಶಾಸಕರ ಸಾಂತ್ವಾನ
ಚಿಕ್ಕನಾಯಕನಹಳ್ಳಿ,ಜೂ.01 : ಟಿ.ವಿ.ಗೆ ಕೇಬಲ್ವೈರನ್ನು ಅಳವಡಿಸುವ ಸಮಯದಲ್ಲಿ ಸಂಭವಸಿದ ವಿದ್ಯುತ್ಶಾಖ್ನಿಂದ ವ್ಯಕ್ತಿಯೊಬ್ಬ ಅಸುನೀಗಿರುವ ಘಟನೆ ತಾಲ್ಲೂಕಿನ ಕ್ಯಾತನಾಯಕನಹಳ್ಳಿಯಲ್ಲಿ ನಡೆದಿದೆ.
ತಾಲ್ಲೂಕಿನ ಮಾಳಿಗೆಹಳ್ಳಿ ಸಮೀಪದಲ್ಲಿರುವ ಕ್ಯಾತನಾಯಕನಹಳ್ಳಿಯ ಉಮೇಶ್(28) ಎಂಬ ವ್ಯಕ್ತಿ ಈ ಘಟನೆಯಿಂದ ಸಾವನ್ನಪ್ಪಿರುವ ದುದರ್ೈವಿಯಾಗಿದ್ದು ಉಮೇಶ್ ತಾಯಿ, ಪತ್ನಿ, ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಘಟನೆ ವಿವರ : ಶುಕ್ರವಾರ ಸಂಜೆ ಮಳೆಗಾಳಿ ಬೀಸುತ್ತಿದ್ದರಿಂದ ಕೇಬಲ್ವೈರನ್ನು ಟಿವಿಯಿಂದ ತೆಗೆದು ನಂತರ ಮಳೆ ನಿಂತಮೇಲೆ, ಕೇಬಲ್ವೈರನ್ನು ಟಿವಿಗೆ ಅಳವಡಿಸಲು ಹೋಗಿದ್ದಾನೆ, ಈ ಸಮಯದಲ್ಲಿ ವಿದ್ಯುತ್ವೈರ್ ಜೊತೆ ಕೇಬಲ್ವೈರ್ ಸುತ್ತಿಕೊಂಡಿದ್ದರಿಂದ ವಿದ್ಯುತ್ನ ಪವರ್ ಕೇಬಲ್ಗೂ ತಾಕಿ ಉಮೇಶ್ ಬಲಿಯಾಗಿದ್ದಾನೆ.
ಗ್ರಾಮಸ್ಥರ ಆಕ್ರೋಶ : ಗ್ರಾಮದಲ್ಲಿ ವಿದ್ಯುತ್ವೈರ್ನ ಜೊತೆ ಕೇಬಲ್ವೈರನ್ನು ಕೇಬಲ್ ಮಾಲೀಕರು ಅಳವಡಿಸಿದ್ದಾರೆ, ಇದರಿಂದ ಕೇಬಲ್ಗೆ ವಿದ್ಯುತ್ ಹರಿಯುತ್ತಿದೆ, ಇಗ ಸಂಭವಿಸಿರುವ ಘಟನೆ ರೀತಿ ಗ್ರಾಮದಲ್ಲಿ ಹಲವು ಬಾರಿ ಆಗಿದೆ, ಆದರೆ ಈ ಘಟನೆ ಸಾವಿನವರೆಗೆ ಕರೆದೊಯ್ಯುತ್ತದೆ ಎಂದುಕೊಂಡಿರಲಿಲ್ಲ, ಕೇಬಲ್ವೈರನ್ನು ವಿದ್ಯುತ್ ವೈರ್ ಜೊತೆ ಹೊಂದಿಕೊಂಡಿರುವುದನ್ನು ತೆಗೆದು ಬೇರೆ ಮಾರ್ಗದ ಮೂಲಕ ವೈರ್ ಎಳೆಯಿರಿ ಎಂದು ಕೇಬಲ್ ಮಾಲೀಕರಿಗೆ ತಿಳಿಸಿದರೂ ಅವರು ನಮ್ಮ ಮಾತಿಗೆ ಸ್ಪಂದಿಸುತ್ತಲೇ ಇಲ್ಲ ಇಗ ಸಂಭವಿಸಿರುವ ಘಟನೆಗೆ ಕೇಬಲ್ ಮಾಲೀಕರೆ ಹೊಣೆ ಎಂದು ಗ್ರಾಮಸ್ಥರು ದೂರಿದರು.
ಶಾಸಕರ ಸಾಂತ್ವಾನ : ಘಟನೆ ತಿಳಿಯುತ್ತಿದ್ದಂತೆ ತಾಲ್ಲೂಕು ಆಡಳಿತದೊಂದಿಗೆ ಆಗಮಿಸಿದ ಶಾಸಕ ಸಿ.ಬಿ.ಸುರೇಶ್ಬಾಬು ಘಟನೆ ಕುರಿತು ತಾಲ್ಲೂಕಿನಾದ್ಯಂತ ವಿದ್ಯುತ್ವೈರ್ಗೆ ಅಳವಡಿಸಿರುವ ಕೇಬಲ್ವೈರನ್ನು ತೆಗೆಸಲು ಬೆಸ್ಕಾಂ ಎಇಇ ರಾಜಶೇಖರ್ರವರಿಗೆ ಸೂಚಿಸಿದರು. ಮೃತಪಟ್ಟ ಕುಟುಂಬದವರಿಗೆ ಸಾಂತ್ವಾನ ನೀಡಿ ವ್ಯಕ್ತಿಯ ಅಂತ್ಯಸಂಸ್ಕಾರಕ್ಕಾಗಿ ಹಣಸಹಾಯ ನೀಡಿದರು. 
ಘಟನಾ ಸ್ಥಳಕ್ಕೆ ತಹಶೀಲ್ದಾರ್ ಕಾಮಾಕ್ಷಮ್ಮ, ಸಿ.ಪಿ.ಐ ಕೆ.ಪ್ರಭಾಕರ್ ಹಾಗೂ ಬೆಸ್ಕಾಂ ಇಲಾಖೆಯ ಎಇಇ ರಾಜಶೇಖರ್ ಆಗಮಿಸಿದ್ದರು.
ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಆಯ್ಕೆಗೆ ವಿರೋಧ
ಚಿಕ್ಕನಾಯಕನಹಳ್ಳಿ,ಜೂ.1: ಜಿಲ್ಲೆಯ ಹಾಗೂ ತಾಲೂಕಿನ ಮೌಲ್ಯಯುತ ಕೊಡುಗೆಗಳನ್ನು ಕಡೆಗಣಿಸಿರುವ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಸಮ್ಮೇಳನಕ್ಕೆ ಪ್ರೊ.ಸಿ.ಎಚ್.ಮರಿದೇವರುರವರನ್ನು ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಪ್ರಜಾಪ್ರಭುತ್ವ ಮೌಲ್ಯಕ್ಕೆ ವಿರೋಧವಾಗಿದೆ ಎಂದು ಪ್ರಗತಿಪರ ಚಿಂತಕ ಸಿ.ಆರ್.ನಾಗಕುಮಾರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನಮ್ಮ ತಾಲೂಕು ಬಯಲು ಸೀಮೆಯ ಬಿರು ಬಿಸಿಲಿಗೆ ತುತ್ತಾಗಿದ್ದರೂ ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ, ಸಾಹಿತ್ಯಿಕವಾಗಿ ಶ್ರೀಮಂತವಾಗಿರುವ ಈ ನೆಲದಲ್ಲಿ ಹತ್ತು ಹಲವು ಸಾಹಿತಿಗಳು, ಚಿಂತಕರು ಹಾಘೂ ರಂಗಕಮರ್ಿಗಳು ಇದ್ದರೂ ಅವರನ್ನು ಕಡೆಗಣಿಸಿ ಪ್ರೊ.ಮರಿದೇವರು ಅವರನ್ನು ಆಯ್ಕೆ ಮಾಡಿರುವುದಕ್ಕೆ ನಮ್ಮ ವಿರೋಧವಿದೆ ಎಂದು ಪ್ರಗತಿಪರ ಚಿಂತಕರು, ಸಾಹಿತಿಗಳು ಮತ್ತು ಸಾಮಾಜಿಕ ಹಾಗೂ ಪರಿಸರ ಕಾರ್ಯಕರ್ತರುಗಳಾದ ಶಿವನಂಜಯ್ಯ ಬಾಳೆಕಾಯಿ, ಕೃಷ್ಣಮೂತರ್ಿ ಬಿಳಿಗೆರೆ, ಡಾ.ತಿಮ್ಮನಹಳ್ಳಿ ವೇಣುಗೋಪಾಲ್, ಡಾ.ನವೀನ್ ಹಳೆಮನೆ, ಡಾ.ಸಿ.ಜಿ.ಮಲ್ಲಿಕಾರ್ಜನಯ್ಯ, ಎಸ್.ಗಂಗಾಧರಯ್ಯ, ಅಣೆಕಟ್ಟೆ ವಿಶ್ವನಾಥ್, ಎನ್.ಇಂದಿರಮ್ಮ, ಡಾ.ರಘಪತಿ, ಸಂಚಲನದ ನಾಸಿರ್ ಹುಸೇನ್, ಸಿ.ಪಿ.ಗಿರೀಶ್, ಸಿ.ಎಸ್.ಸುಬ್ರಹ್ಮಣ್ಯ, ಇಬ್ರಾಹಿಂ, ಕೆ.ಪ್ರಹ್ಲಾದ್, ಕಂಟಲಗೆರೆ ಗುರುಪ್ರಸಾದ್ ಸೇರಿದಂತೆ ಹಲವರು ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದಾರೆ.