Wednesday, January 23, 2013



ಸಕರ್ಾರಿ ಕ್ಯಾಮರಗಳ ದುರ್ಬಳಕೆ: ಗ್ರಾಮೀಣ ಪೊಟೋಗ್ರಾಫರ್ಗಳ ಕೆಲಸಕ್ಕೆ ಕುತ್ತು
                            
ಚಿಕ್ಕನಾಯಕನಹಳ್ಳಿ,ಜ.23 : ಗ್ರಾಮ ಪಂಚಾಯಿತಿಗಳ ಕೆಲಸಗಳಿಗೆ ಪೋಟೋ ತೆಗೆಯಲು ಸಕರ್ಾರದವರು ನೀಡಿರುವ ಕ್ಯಾಮಾರಗಳು ದುರ್ಬಳಕೆಯಾಗುತ್ತಿದೆ ಎಂದು ತಾ.ಪೋಟೋಗ್ರಾಫರ್ ಮತ್ತು ವಿಡಿಯೋಗ್ರಾಫರ್ ಸಂಘ  ಆರೋಪಿಸಿದೆ.
  ಸಕರ್ಾರ ವಿವಿಧ ಇಲಾಖೆಗಳಿಗೆ ಕ್ಯಾಮಾರ ನೀಡಿರುವುದು ತಮ್ಮ ಇಲಾಖೆಗಳ ಕೆಲಸಕ್ಕೆ ಮಾತ್ರ  ಆದರೆ ಈ ಕ್ಯಾಮಾರದಿಂದ ಕೆಲವರು ತಮ್ಮ ಹಳ್ಳಿಗಳಲ್ಲಿ ನಡೆಯುವ ಸಣ್ಣ ಪುಟ್ಟ ಶುಭ ಸಮಾರಂಭಗಳ ಪೋಟೋ ಮತ್ತು ವಿಡಿಯೋಗಳನ್ನು ತೆಗೆದು ಕೈಯಿಗೆ ಬಂದಷ್ಟು ಕಾಸು ಮಾಡಿ ಗ್ರಾಮಾಂತರ ಛಾಯಾಗ್ರಹಕರ ಕೆಲಸಕ್ಕೆ ತೊಂದರೆ ಪಡಿಸುತ್ತಿದ್ದಾರೆ ಅದನ್ನು ತಪ್ಪಿಸಬೇಕೆಂದು  ತಾ.ಪಂ.ಕಾರ್ಯನಿರ್ವಹಣಾಧಿಕಾರಿ ತಿಮ್ಮಯ್ಯರವರಿಗೆ ಸಂಘದ ಪದಾಧಿಕಾರಿಗಳು ಮನವಿ ಪತ್ರ ಅಪರ್ಿಸಿದರು.
ಗ್ರಾಮಾಂತರ ಛಾಯಾಗ್ರಹಹಕರು ಹಳ್ಳಿಗಳಿಗೆ ಹೋಗಲಾರದಂತಹ ಸ್ಥಿತಿಯನ್ನು ಗ್ರಾಮ ಪಂಚಾಯಿತಿ ನೌಕರರು ಮಾಡುತ್ತಿರುವುದು ದಿನ ನಿತ್ಯ ನಡೆಯುವ ವಿಚಾರವಾಗಿದೆ, ಅಲ್ಲದೆ ಬಡ ಛಾಯಾಗ್ರಾಹಕರುಗಳು ಪರಿಚಯವಿರುವವರ ಗ್ರಾಂಟ್ ಮನೆ ಪೋಟೋಗಳನ್ನು ತೆಗೆದರೆ ನಾವು ಸ್ವೀಕರಿಸುವುದಿಲ್ಲ, ನಮ್ಮ ಕ್ಯಾಮರಾದಲ್ಲಿಯೇ ಪೋಟೋ ತೆಗೆಸಿಕೊಳ್ಳಬೇಕು ಇಲ್ಲವಾದರೆ ನಿಮಗೆ ಬಿಲ್ ಕೊಡುವುದಿಲ್ಲ ಎಂದು ಫಲಾನುಭವಿಗಳಿಗೆ ಹೆದರಿಸುತ್ತಿದ್ದಾರೆ, ಗ್ರಾಮ ಪಂಚಾಯ್ತಿ ನೌಕರುಗಳು ಸಕರ್ಾರಿ ಸಂಬಳ ತೆಗೆದುಕೊಂಡು  ಜೊತೆಗೆ ಕ್ಯಾಮರಾ ಬಳಸಿ ಎಲ್ಲಾ ವ್ಯವಹಾರವನ್ನು ನೌಕರರೆ ಮಾಡುತ್ತ ನಮ್ಮ ಛಾಯಾಗ್ರಾಹಕರ ಕೆಲಸ ಮತ್ತು ಜೀವನಕ್ಕೆ ತೊಂದರೆ ಪಡಿಸುತ್ತಿದ್ದಾರೆ ಆದ್ದರಿಂದ ಇಂದಿನಿಂದಲೇ ಆದೇಶವನ್ನು ಜಾರಿ ಮಾಡಿ ಗ್ರಾಮ ಪಂಚಾಯ್ತಿಯ ನೌಕರರಿಗೆ ಸಕರ್ಾರಿ ಕೆಲಸದ ಹೊರತು ಬೇರೆ ಪೋಟೋಗಳು, ವಿಡಿಯೋಗಳನ್ನು ಚಿತ್ರಿಕರಿಸಿದರೆ ಕ್ರಮ ಕೈಗೊಳ್ಳುತ್ತೇವೆಂದು ಆದೇಶ ಹೊರಡಿಸಬೇಕೆಂದು ಹಾಗೇನಾದರೂ ನಿಮ್ಮ ಆದೇಶವನ್ನು ಮೀರಿ ತಮ್ಮ ಕೈಚಳಕ ತೋರಿದರೆ ಸಂಘ ಗಂಬೀರವಾಗಿ ಪರಿಗಣಿಸಿ ಸಂಬಂಧಿಸಿದವರ ಮೇಲೆ ಕ್ರಮ ಕೈಗೊಳ್ಳುತ್ತದೆ ಎಂದು ತಾ.ಪೋಟೋಗ್ರಾಫರ್ ಮತ್ತು ವಿಡಿಯೋಗ್ರಾಫರ್ ಸಂಘ ಮನವಿ ಪತ್ರದಲ್ಲಿ ತಿಳಿಸಿದೆ. 
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಮೃತ್ಯಂಜಯ, ಸದಸ್ಯರುಗಳಾದ ಸಿದ್ದು.ಜಿ.ಕೆರೆ, ಮಂಜುನಾಥ್, ಸಂಜಯ್, ರಂಗನಾಥಬಾಬು, ಗೋಪಾಲಚಾರ್, ವಿಜಿ.ಪ್ರಭು, ಹಂಪೇಶ್, ಈಶ್ವರ್, ಹರೀಶ್, ನವೀನ್, ಗೋವಿಂದರಾಜು ಮುಂತಾದವರು ಉಪಸ್ಥಿತರಿದ್ದರು.

ಸುಭಾಷ್ ಚಂದ್ರ ಬೋಸ್ರವರ 116ನೇ ಜನ್ಮಾಚರಣೆ ಆಚರಿಸಿದ ಆಟೋಚಾಲಕರು
ಚಿಕ್ಕನಾಯಕನಹಳ್ಳಿ,ಜ.23 : ದೇಶ ಭಕ್ತ, ಸ್ವತಂತ್ರ ಸೇನಾನಿ ಸುಭಾಷ್ ಚಂದ್ರ ಬೋಸ್ರವರ 116ನೇ ಜನ್ಮಾಚರಣೆಯನ್ನು ಆಚರಿಸುತ್ತಿರುವುದು ಹಾಗೂ  ಆಟೋ ಚಾಲಕರು ತಮ್ಮ ಸಂಘಟನೆಯ ಶಕ್ತಿಯಾಗಿ ಬೋಸ್ರವರ ಹೆಸರನ್ನು ಬಳಿಸಿಕೊಳ್ಳುವ ಮೂಲಕ  ಶ್ರಮಿಕ ವರ್ಗದವರು ಸ್ಮರಿಸಿಕೊಳ್ಳುತ್ತಿರುವುದು ಶ್ಲಾಘನೀಯ ಎಂದು ರೋಟರಿ ಅಧ್ಯಕ್ಷ ಹಾಗೂ ಸಾಹಿತಿ ಎಂ.ವಿ.ನಾಗರಾಜ್ರಾವ್ ಅಭಿಪ್ರಾಯಪಟ್ಟರು.
ಪಟ್ಟಣದ ಕನ್ನಡ ಸಂಘದ ವೇದಿಕೆಯಲ್ಲಿ ಸುಭಾಷ್ ಚಂದ್ರಬೋಸ್ ಆಟೋಚಾಲಕರ ಮತ್ತು ಮಾಲೀಕರ ಸಂಘ ಮತ್ತು ರೋಟರಿ ಕ್ಲಬ್ ವತಿಯಿಂದ ನಡೆದ ಸುಭಾಷ್ ಚಂದ್ರಬೋಸ್ ಜನ್ಮದಿನಾಚಾರಣೆ, ರಸ್ತೆಸುರಕ್ಷತಾ ಸಪ್ತಾಹ ಹಾಗೂ ವಿಕಲಚೇತನರ ದಿನಾಚರಣೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. 
ಅಶಕ್ತರಿಗೆ ಮತ್ತು ಆಥರ್ಿಕ ಬಲಹೀನರ ಅನಾರೋಗ್ಯಕ್ಕೆ ಸ್ಪಂದಿಸುತ್ತಾ, ಮಾನವೀಯತೆಯ ನೆಲೆಗಟ್ಟಿನಲ್ಲಿ ನಡೆದುಕೊಳ್ಳುವ ಮೂಲಕ ಆಟೋ ಚಾಲಕರು ತಮ್ಮ ಸಂಘಕ್ಕೆ ಇಟ್ಟಿರುವ ಹೆಸರನ್ನು ಸಾರ್ಥಕ ಪಡಿಸಿಕೊಳ್ಳಬೇಕು, ಆ ಮೂಲಕ ಸುಭೋಷ್ ಚಂದ್ರ ಬೋಸ್ರವರ ಆಶಯಗಳಿಗೆ ಸ್ಪಂದಿಸುತ್ತಾ ಸಂಘಟಿತರಾಗಬೇಕು  ಎಂದರು.
ಇಪ್ಪತ್ತು ವರ್ಷಗಳ ಹಿಂದೆ ಎರಡು ಆಟೋಗಳನ್ನು ಹೊಂದಿದ್ದ ಪಟ್ಟಣ, ಈಗ ಇನ್ನೂರ ಐವತ್ತಕ್ಕೂ ಹೆಚ್ಚು ಆಟೋಗಳನ್ನು ಹೊಂದುವ ಮೂಲಕ  ಸಂಘಟನೆಗೊಂಡಿರುವುದು ಪಟ್ಟಣ ಬೆಳೆಯುತ್ತಿರುವ ವೇಗಕ್ಕೊಂದು ಮಾಪನವಾಗಿದೆ ಎಂದರು.
ಶಾಸಕ ಸಿ.ಬಿ.ಸುರೇಶ್ಬಾಬು ಮಾತನಾಡಿ ಆಟೋ ಚಾಲಕರು ಜಾಗರೂಕತೆಯಿಂದ ಚಾಲನೆ ಮಾಡಬೇಕು, ಚಾಲನೆ ಮಾಡುವಾಗ ಪ್ರಯಾಣಿಕರೊಂದಿಗೆ ಸೌಜನ್ಯದಿಂದ ವತರ್ಿಸಿದರೆ ಪ್ರಯಾಣಿಕರು ಪ್ರೀತಿ ವಿಶ್ವಾಸದಿಂದ ನಡೆದುಕೊಳ್ಳಿ ಎಂದರಲ್ಲದೆ, ಪುರಸಭೆ ವತಿಯಿಂದ ನಿವೇಶನ ಹಂಚಿಕೆಯ ಚಚರ್ೆ ನಡೆಯುತ್ತಿದೆ, ಆಥರ್ಿಕವಾಗಿ ಹಿಂದುಳಿದವರು ನಿವೇಶನಗಳಿಗೆ ಅಜರ್ಿ ಹಾಕಿಕೊಂಡರೆ ಇಂತಹ ಅಜರ್ಿಗಳನ್ನು ಪರಿಗಣಿಸಲಾಗುವುದು ಎಂದರು.
ಸರ್ಕಲ್ ಇನ್ಸ್ಪೆಕ್ಟರ್ ಕೆ.ಪ್ರಭಾಕರ್ ರಸ್ತೆ ಸುರಕ್ಷತೆ ಸಪ್ತಾಹದ ಬಗ್ಗೆ ಮಾತನಾಡಿ, ಚಾಲಕರು ರಸ್ತೆ ಸುರಕ್ಷೆಯನ್ನು ಪಾಲಿಸದೆ ಚಾಲನೆ ಮಾಡಿದ್ದರಿಂದ ಒಂದು ವರ್ಷದಲ್ಲಿ  ತಾಲ್ಲೂಕಿನಲ್ಲಿ 27ಅಪಘಾತಗಳು ನಡೆದು 34ಜನರ ಪ್ರಾಣಹಾನಿಯಾಗಿದೆ, ಚಾಲನೆ ಮಾಡುವವರು ಆರ್.ಟಿ.ಓ ಕಛೇರಿಯಿಂದ ಲೈಸೆನ್ಸ್ ಪಡೆಯುವುದು ಕಡ್ಡಾಯವಾಗಿದ್ದು ತಮ್ಮ ವಾಹನಕ್ಕೆ ವಿಮೆ ಮಾಡಿಸಿದರೆ ಅಪಘಾತವಾದರೆ ಅದರಿಂದ ಸಹಾಯವಾಗಲಿದೆ ಎಂದರಲ್ಲದೆ ಆಟೋ ಚಾಲಕರು ಸಮವಸ್ತ್ರವನ್ನು ಧರಿಸಲು ತಿಳಿಸಿದರು.
ಆರಕ್ಷಕ ಉಪನಿರೀಕ್ಷಕ ಬಿ.ಟಿ.ಗೋವಿಂದ್ ಮಾತನಾಡಿ ಸಾರ್ವಜನಿಕರು ಪೋಲಿಸರು ಮತ್ತು ಚಾಲಕರು ಧರಿಸುವ ಯೂನಿಫಾರಂನಲ್ಲಿ ನಂಬಿಕೆ ಇಟ್ಟಿದ್ದಾರೆ, ಈ ನಂಬಿಕೆಯಿಂದಲೇ ಮಹಿಳೆಯರು ಆಟೋಗಳಲ್ಲಿ ಪ್ರಯಾಣಿಸುವುದು ಎಂದರಲ್ಲದೆ ಚಾಲಕರು ರಾತ್ರಿ ಸಮಯದಲ್ಲಿ ಪ್ರಯಾಣಿಸುವ ಸಾರ್ವಜನಿಕರನ್ನು ವಿಚಾರಿಸಿ ಪ್ರಯಾಣಿಸಬೇಕು, ಪೋಲಿಸರಿಗೆ ಸಹಕರಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಜಿಲ್ಲಾಆಟೋ ಚಾಲಕರ ಕಲ್ಯಾಣ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ವಿ.ಪ್ರತಾಪ್ ಹಾಗೂ ಡಿ.ಎಸ್.ಎಸ್.ಮುಖಂಡ,ಆಟೊ ಚಾಲಕ ಲಿಂಗದೇವರು ಅವರನ್ನು ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಪುರಸಭಾಧ್ಯಕ್ಷ ಕೃಷ್ಣಮುತರ್ಿ, ಬಿ.ಇ.ಓ ಸಾ.ಚಿ.ನಾಗೇಶ್, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರವಿಕುಮಾರ್, ರೋಟರಿ ಕ್ಲಬ್ ಕಾರ್ಯದಶರ್ಿ ಎಂ.ದೇವರಾಜು ಉಪಸ್ಥಿತರಿದ್ದರು.