Sunday, August 1, 2010





  • ಕಳ್ಳತನಕ್ಕೆ ಈ ಶಿಕ್ಷೆ ಸರಿಯೇ. . . . ?
  • ಇದು ಮಾನವ ಹಕ್ಕು ಸ್ಪಷ್ಟ ಉಲ್ಲಂಘನೆ
  • ಕಾನೂನನ್ನು ಕೈಗೆತ್ತಿಕೊಂಡಿದ್ದು ಎಷ್ಟು ಸಮಂಜಸ
  • ನಾಗರೀಕ ಸಮಾಜದಲ್ಲಿ ಇನ್ನೂ ಇಂತಹವಕ್ಕೆ ಅವಕಾಶವಿರುವುದು ಸೊಜಗ
  • ಕಳ್ಳತನಮಾಡಿರುವುದು ತಪ್ಪೇ, ಆದರೆ ಶಿಕ್ಷೆ ಕೊಡಲು ಇವರ್ಯಾರು ?
(ಚಿಗುರು ಕೊಟಿಗೆಮನೆ)
ಚಿಕ್ಕನಾಯಕನಹಳ್ಳಿ,ಜು.31: ಒಂದುವರೆ ವರ್ಷದಾಚೆ ಲಾರಿಯೊಂದರಲ್ಲಿ 360 ಲೀ ಡೀಸಲ್, ಟಾರ್ಪಾಲ್, ಜಾಕ್ ಮತ್ತಿತರ ವಸ್ತುಗಳನ್ನು ಕದ್ದವ, ಈಗ ಸಿಕ್ಕನೆಂದು ಲೈಟ್ ಕಂಬಕ್ಕೆ ಕಟ್ಟಿ ಹಾಕಿದ್ದ ಪ್ರಸಂಗ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ದೇವಾಂಗ ಬೀದಿಯ ಬನಶಂಕರಿ ದೇವಸ್ಥಾನದ ಬಳಿ ಸುಮಾರು 30 ವರ್ಷದ ವ್ಯಕ್ತಿಯೊರ್ವನನ್ನು ಸುಮಾರು ಎರಡು ಗಂಟೆ ಕಾಲ ಲೈಟ್ ಕಂಬಕ್ಕೆ ಕಟ್ಟಿ ಹಾಕಿ ಸಾರ್ವಜನಿಕವಾಗಿ ಆತನನ್ನು ಅವಮಾನಿಸಲಾಗಿದೆ.
ಲೈಟ್ ಕಂಬಕ್ಕೆ ಕಟ್ಟಲು ಕಾರಣ: ತಿಪಟೂರು ತಾಲೂಕಿನ ಈ ಆರೋಪಿ ಮೈನ್ಸ್ ಲಾರಿಯೊಂದರಲ್ಲಿ ಕೆಲಸ ಮಾಡುತ್ತಿದ್ದವ, ಈತನ ಸುಬದರ್ಿನಲ್ಲಿ ಖನಿಜ ತುಂಬಿದ ಲಾರಿಯನ್ನು ಅನ್ಲೋಡ್ ಮಾಡಲು ಮಂಗಳೂರಿಗೆ ಕಳುಹಿಸಲಾಗಿತ್ತು, ಆದರೆ ಈತ ಮತ್ತು ಈತನ ಸ್ನೇಹಿತರು ಹಾಸನದ ಬಳಿ ಯ 'ದುದ್ದ'ದ ಬಳಿ ಲಾರಿಯಲ್ಲಿದ್ದ 360 ಲೀ. ಡೀಸಲ್, ಜಾಕ್, ವೀಲ್ ಸ್ಪ್ಯಾನರ್, ಟಾರಪಾಲ್,ಹಗ್ಗ ಸೇರಿದಂತೆ ಲಾರಿಯಲ್ಲಿದ್ದ ಕೆಲವು ಸಾಮಾನುಗಳನ್ನು ತೆಗೆದುಕೊಂಡು ಲಾರಿಯನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದ, ಅಂದಿನಿಂದ ಈತನ ಮೇಲೆ ಒಂದು ಕಣ್ಣಿಟ್ಟಿದ್ದೆವು ಇಂದು ಸಿಕ್ಕಿದ, ಪೊಲೀಸಿನವರಿಗೆ ವಿಷಯ ತಿಳಿಸಿದ್ದಕ್ಕೆ, ಈ ಘಟನೆ ನಡೆದಿರುವುದು ದುದ್ದದಲ್ಲಿ ಅಲ್ಲಿಯ ಪೊಲೀಸರಿಗೆ ದೂರು ನೀಡಿ ಎಂದರು, ಈತನನ್ನು ಅಲ್ಲಿಯ ತನಕ ಏಕೆ ಕರೆದುಕೊಂಡು ಹೋಗಲಿ ಇಲ್ಲಿಯೇ ಕಟ್ಟಿ ಹಾಕಿದ್ದೇವೆ. ಈತನನ್ನು ಬಿಡಸಿಕೊಂಡು ಹೋಗುವವರು ಅಂದು ಕಳುವಾಗಿರುವ ಅಷ್ಟೂ ಸಾಮಾಗ್ರಿಗಳನ್ನು ತಂದು ಕೊಟ್ಟು ಬಿಡಿಸಿಕೊಂಡು ಹೋಗಲಿ ಎಂಬುದು ಈತನನ್ನು ಕಂಬಕ್ಕೆ ಕಟ್ಟಿದವರ ದೂರು. ಈ ಬಗ್ಗೆ ಕೈಕಟ್ಟಿಸಿಕೊಂಡವನನ್ನು ಪ್ರಶ್ನಿಸಿದರೆ, ಹೌದು ಆ ದಿನ ಲಾರಿಯಲ್ಲಿದ್ದ ಸಾಮಾನುಗಳು ಕಳ್ಳತನವಾಗಿರುವುದು ಸತ್ಯ, ಆದರೆ ಇದಕ್ಕೆ ನಾನು ಸಂಪೂರ್ಣ ಹೊಣೆಗಾರನಲ್ಲ, ನನ್ನ ಜೊತೆ ಇನ್ನಿತರರು ಇದ್ದರು, ಅವರನ್ನೇಲ್ಲಾ ಸೇರಿಸಿ ಪೊಲೀಸರಿಗೆ ದೂರು ನೀಡಲಿ ಆದರೆ ನನಗೊಬ್ಬನಿಗೆ ಈ ರೀತಿಯ ಶಿಕ್ಷೆ ಏಕೆ ಎಂಬುದು ಆತನ ಅಳಲು.
ಈಗ ಸಾರ್ವಜನಿಕರಲ್ಲಿ ಚಚರ್ೆ ಆಗುತ್ತಿರುವ ವಿಷಯವೆಂದರೆ, ಆತ ನಿಜವಾಗಿಯೂ ಕಳ್ಳನಾಗಿದ್ದರೆ ವಿಚಾರಿಸಲು ಪೋಲೀಸು, ನ್ಯಾಯಾಲಯವಿದೆ, ಆದರೆ ಇವರು ಕಂಬಕ್ಕೆ ಕಟ್ಟಿ ಹಾಕಿರುವುದು ತಪ್ಪು, ಇದು ಮಾನವ ಹಕ್ಕು ಉಲ್ಲಂಘನೆ, ಇಂತಹ ಘಟನೆಗಳು ಹಾಗ್ಗಾಗ್ಗೆ ನಡೆಯುತ್ತಲೇ ಇರುತ್ತವೆ, ಕೆಲವು ಪ್ರಕರಣಗಳು ಬೆಳಕಿಗೆ ಬರುತ್ತವೆ, ಇನ್ನು ಕೆಲವು ಮುಚ್ಚಿ ಹೋಗುತ್ತವೆ. ಆದರೆ ಈ ರೀತಿ ಅವಮಾನಿಸುತ್ತಿರುವುದು ಎಷ್ಟು ಸರಿ.
ಆಧುನಿಕ ಶೈಲಿಗೆ ಮಾರು ಹೋಗುತ್ತಿರುವ ಯುವಕರು, ಹೇಗಾದರೂ ಸರಿಯೇ ಮೈನೊವಿಲ್ಲದಂತೆ ಬೇಗ ಶ್ರೀಮಂತರಾಗಲು ಅವಣಿಸುತ್ತಿರುವುದು ಎಲ್ಲಾ ಕಡೆ ನಡೆಯುತ್ತಿದೆ. ಹಾಗಾಗಿ ಕಳ್ಳತನವೆಂಬುದು ಒಂದು ಪಿಡುಗಾಗಿದೆ, ಇದನ್ನು ಅವರ ಅವರ ಯೋಗ್ಯಾತಾನುಸಾರ ಮಾಡುತ್ತಿದ್ದಾರೆ, ಅದೊಂದು ಕುಕೃತ್ಯವೆಂದು ತಿಳಿದೂ ತಿಳಿದು ಮಾಡುತ್ತಿರುವದಕ್ಕೆ ಕ್ಷಮೆ ಇಲ್ಲ, (ದೊಡ್ಡೋರು/ಅಧಿಕಾರದಲ್ಲಿರುವವರು ಮಾಡುವುದು ಬೇರೆ ಮಾತು.....!), ಆದರೆ ಈ ಕಳ್ಳತನಕ್ಕೆ ಈ ರೀತಿಯ ಶಿಕ್ಷೆ ಸರಿಯೇ. . . !?

ಚಿನ್ನಾಭರಣ ದೋಚಲು ಹೊಂಚು ಹಾಕುತ್ತಿದ್ದವರ ಬಂಧನ
ಚಿಕ್ಕನಾಯಕನಹಳ್ಳಿ,ಜು.31: ಪಟ್ಟಣದ ಜ್ಯೂಯಲರಿಯ ಮಾಲೀಕರೊಬ್ಬರು ಚಿನ್ನಾಭರಣಗಳನ್ನು ಅಂಗಡಿಗೆ ತೆಗೆದುಕೊಂಡು ಹೋಗುವ ಮಾರ್ಗ ಮಧ್ಯೆದಲ್ಲಿ ದೋಚಲು ಹೊಂಚುಹಾಕುತ್ತಿದ್ದ ಯುವಕರ ಗುಂಪೊಂದನ್ನು ಬಂಧಿಸುವಲ್ಲಿ ಸ್ಥಳೀಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಪಟ್ಟಣದ ಕಿಶೋರ್ ಜ್ಯೂಯಲರ್ಸ್ನ ಮಾಲೀಕ ತನ್ನ ಅಂಗಡಿಯಲ್ಲಿದ್ದ ಬೆಲೆ ಬಾಳುವ ಚಿನ್ನಾಭರಣಗಳನ್ನು ಮನೆಯಿಂದ ಅಂಗಡಿಗೆ ತೆಗೆದುಕೊಂಡು ಹೋಗುವ ಬಗ್ಗೆ ಮಾಹಿತಿ ಪಡೆದು ಆ ಆಭರಣಗಳನ್ನು ದೋಚಲು ಸಕರ್ಾರಿ ಪದವಿ ಪೂರ್ವ ಕಾಲೇಜ್ನ ಬಳಿ ಹೊಂಚು ಹಾಕುತ್ತಿದ್ದ ಯುವಕರಾದ ಬೆಂಗಳೂರಿನ ಇಮ್ರಾನ್, ಸದ್ದಾಂ, ಭರತ್ ಗೌಡ, ಶ್ರೀಧರ, ನವೀನ, ಜಿ.ಎಂ.ಗೌಡ, ಸತೀಶ,ನಾಗರಾಜು ಎಂಬುವರನ್ನು ಬಂಧಿಸಿದ್ದು, ಇವರ ಬಳಿ ಇದ್ದ ಒಂದು ಲಾಂಗ್, ಖಾರದ ಪುಡಿ, 4 ಮೊಬೈಲ್, ಮೋಟಾರ್ ಸೈಕಲ್ನ್ನು ವಶ ಪಡಿಸಿಕೊಳ್ಳಲಾಗಿದೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಆರೋಪಿಗಳನ್ನು ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಈ ಕಾಯರ್ಾಚರಣೆಯಲ್ಲಿ ವೃತ್ತ ನಿರೀಕ್ಷಕ ಪಿ.ರವಿಪ್ರಸಾದ್ ನೇತೃತ್ವದಲ್ಲಿ ಕೆ.ಬಿ.ಕ್ರಾಸ್ ಪಿ.ಎಸೈ. ರಾಘವೇಂದ್ರ ಮತ್ತು ಸಿಬ್ಬಂದಿ ಕಾರ್ಯಪ್ರವೃತ್ತರಾಗಿದ್ದರು.

ಜಡೇಸಿದ್ದೇಶ್ವರ ಜಾತ್ರಾ ಮಹೋತ್ಸವ
ಚಿಕ್ಕನಾಯಕನಹಳ್ಳಿ,ಜು.30: ಜಡೇಸಿದ್ದೇಶ್ವರ ಮತ್ತು ಶಾಂತವೀರ ಸ್ವಾಮಿ 21ನೇ ವರ್ಷಬ್ದಿ ಪೂಜಾ ಮತ್ತು ಪಲ್ಲಕ್ಕಿ ಮಹೋತ್ಸವ ಇದೇ ಆಗಷ್ಟ್ 11ರಂದು ಏರ್ಪಡಿಸಲಾಗಿದೆ.
ಮಹೋತ್ಸವದಂದು ಬೆಳಿಗ್ಗೆ 6ಗಂಟೆಗೆ ಗಣಪತಿ ಪೂಜೆ, ರುದ್ರಾಭಿಷೇಕ ನಂತರ ಮಹಾಮಂಗಳಾರತಿ ನಂತರ ಮಧ್ಯಾಹ್ನ 1-30ಕ್ಕೆ ಅನ್ನ ಸಂತರ್ಪಣೆ ನಡೆಯಲಿದ್ದು ಸಂಜೆ 6-30ಕ್ಕೆ ಪಲ್ಲಕ್ಕಿ ಮಹೋತ್ಸವ ಜನಪದ ಕಲಾ ವೀರಗಾಸೆ ಕಥಾನಕದೊಂದಿಗೆ ಕಂದಿಕೆರೆ ರಾಜಬೀದಿಗಳಲ್ಲಿ ನಡೆಯುವುದು.
ಯಶಸ್ವಿ ಆರೋಗ್ಯ ಮತ್ತು ರಕ್ತದಾನ ಶಿಬಿರ
ಚಿಕ್ಕನಾಯಕನಹಳ್ಳಿ,ಜು.30: ಜನತೆಗೆ ಅಗತ್ಯವಾಗಿರುವುದು ನೀರಾವರಿ ಸೌಲಭ್ಯ ಈ ಕೊರತೆ ನಿವಾರಣೆಗಾಗಿ ಇಂದು ತಾಲೂಕಿನಲ್ಲಿ ನೀರಾವರಿ ಹೋರಾಟದಿನವನ್ನಾಗಿ ಆಚರಿಸಲಾಗಿದೆ ಎಂದು ಡಾ.ಯತೀಶ್ವರ ಶಿವಚಾರ್ಯಸ್ವಾಮೀಜಿ ಹೇಳಿದರು.
ತಾಲೂಕಿನ ಕಪ್ಪೂರು ಗದ್ದಿಗೆ ಮಠದಲ್ಲಿ ಯತೀಶ್ವರ ಶಿವಚಾರ್ಯಸ್ವಾಮಿ 36ನೇ ಹುಟ್ಟುಹಬ್ಬದ ಪ್ರಯುಕ್ತ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು ತಮ್ಮ ಜನ್ಮದಿನವನ್ನು ನೀರಾವರಿ ಹೋರಾಟ ದಿನವನ್ನಾಗಿ ಆಚರಿಸಲು ಸಂಕಲ್ಪಿಸಲಾಗಿದೆ ಇದಕ್ಕೆ ತಾಲೂಕಿನ 67ಸಂಘಟನೆಗಳು ಬೆಂಬಲ ಸೂಚಿಸಿದ್ದು ಮುಂದೆ ವಿವಿಧ ಹೋರಾಟಗಳನ್ನು ರೂಪಿಸಲಾಗುವುದು ಎಂದರು.
ಪುರಷೋತ್ತಮಾನಂದ ಸ್ವಾಮೀಜಿ ಮಾತನಾಡಿ ಮಾನವ ಜನ್ಮವನ್ನು ಸನ್ಮಾರ್ಗದ ಮೂಲಕ ಸಾರ್ಥಕತೆ ಪಡಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಆರೋಗ್ಯ ತಪಾಸಣೆ ಶಿಬಿರದ ಮುಖ್ಯಸ್ಥರಾದ ಡಾ.ಜಿ.ಪರಮೇಶ್ವರಪ್ಪ ಮಾತನಾಡಿ ಸ್ವಾಮೀಜಿಯವರ ಹೋರಾಟಕ್ಕೆ ಬೆಂಬಲ ಸೂಚಿಸಿದರು.
ಮಠದ ಟ್ರಸ್ಟ್ ವತಿಯಿಂದ ಶಾಲಾ ಮಕ್ಕಳಿಗೆ ನೋಟ್ಪುಸ್ತಕ ವಿತರಣೆ ಮತ್ತು ಸುತ್ತಮುತ್ತಲಿನ ನೂರಾರು ಮಂದಿಗೆ ವಿವಿಧ ವೈದ್ಯರ ತಂಡದಿಂದ ಆರೋಗ್ಯ ತಪಾಸಣೆ ನಡೆಸಲಾಯಿತು.

ಹರಿಯ ವಿದ್ಯಾಥರ್ಿಗಳಿಂದ ಕಿರಿಯ ವಿದ್ಯಾಥರ್ಿಗಳಿಗೆ ಸ್ವಾಗತ
ಚಿಕ್ಕನಾಯಕನಹಳ್ಳಿ,ಜು.30: ಭವಿಷ್ಯದ ಬಗೆಗೆ ಹಲವು ಹೊಂಗನಸುಗಳನ್ನು ಹೊತ್ತು ಹೊಸ ಪರಿಸರದಲ್ಲಿ ಪ್ರವೇಶ ಪಡೆದು ಆರಂಭಿಕ ಮುಜುಗರಕ್ಕೆ ಒಳಗಾಗುವ ವಿದ್ಯಾಥರ್ಿಗಳ ಆತಂಕವನ್ನು ತಪ್ಪಿಸಲು ಸ್ಥಳೀಯ ನವೋದಯ ಪ್ರಥಮ ದಜರ್ೆ ಕಾಲೇಜಿನಲ್ಲಿ ಹಿರಿಯ ವಿದ್ಯಾಥರ್ಿಗಳ ಕಿರಿಯ ವಿದ್ಯಾಥರ್ಿಗಳನ್ನು ಪರಿಚಯಿಸಿಕೊಳ್ಳಲು ಆತ್ಮೀಯವೆನಿಸುವ 'ಮಡಿಲು ಸೇರುವ' ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಹಿರಿಯ ಮತ್ತು ಕಿರಿಯ ವಿದ್ಯಾಥರ್ಿಗಳಲ್ಲಿ ಅನೇಕರು ಪರಸ್ಪರ ಶುಭಾಷಯ ಮತ್ತು ಅನಿಸಿಕೆಗಳನ್ನು ಅಭಿವ್ಯಕ್ತಗೊಳಿಸಿದ ತರುವಾಯ ಕಾಲೇಜಿನ ಅಧ್ಯಾಪಕ ವೃಂದ 2010-11ನೇ ಸಾಲಿನ ಶೈಕ್ಷಣಿಕ ಮತ್ತು ಪಠ್ಯೇತರ ಚಟುವಟಿಕೆಗಳ ನೀಲ ನಕ್ಷೆಯೊಂದನ್ನು ವಿದ್ಯಾಥರ್ಿಗಳ ಎದುರು ಅನಾವರಣಗೊಳಿಸಿ ಅದರ ಯಶಸ್ಸು ಆ ಮೂಲಕ ನಿಮ್ಮಗಳ ವ್ಯಕ್ತಿತ್ವದ ವಿಕಸನದ ಸಾಧನೆಗಾಗಿ ಎಲ್ಲ ವಿದ್ಯಾಥರ್ಿಗಳು ಕ್ರಿಯಾಶೀಲವಾಗಿ ಪಾಲ್ಗೊಳ್ಳಲು ಅರಿಕೆ ಮಾಡಿದರು.
ಕಾಲೇಜನಿ ಪ್ರಾಂಶುಪಾಲ ಕೆ.ಸಿ.ಬಸಪ್ಪ ಮಾತನಾಡಿ ಗಾತ್ರದಲ್ಲಿ ಚಿಕ್ಕದಾದರೂ ವಿಶ್ವವಿದ್ಯಾನಿಲಯ ಮತ್ತು ರಾಜ್ಯ ಮಟ್ಟದಲ್ಲಿ ಈ ಕಾಲೇಜಿನಿಂದ ಅಧಿಕ ಸಂಖ್ಯೆಯ ಗ್ರಾಮೀಣ ಪ್ರತಿಭೆಗಳು ಹೊರಹೊಮ್ಮಬೇಕು ಅದಕ್ಕಾಗಿಯೇ ಎಲ್ಲ ಅಧ್ಯಾಪಕರನ್ನೊಳಗೊಂಡಂತೆ ನಡೆಸಿದ ತೀವ್ರತರ ಚಿಂತನೆ ಮತ್ತು ಚಚರ್ೆಯ ಫಲವಾಗಿ ಈ ನೀಲ ನಕ್ಷೆ ರೂಪಿಸಲಾಗಿದೆ. ವಿದ್ಯಾಥರ್ಿಗಳ ಆಪ್ತ ಸಮಾಲೋಚನೆ ವಿಭಿನ್ನ ವೇದಿಕೆಗಳಲ್ಲಿ ಅವರುಗಳ ಪ್ರತಿಭಾ ಅನಾವರಣಕ್ಕೆ ಅವಕಾಶ, ವಿಚಾರ ಸಂಕಿರಣ, ಸ್ಪೋಕನ್ ಇಂಗ್ಲೀಷ್, ಗುಂಪು ಚಚರ್ೆ, ಚಚರ್ಾಸ್ಪಧರ್ೆ, ಸಮೀಕ್ಷೆ ಸಂಗತಿ ಅಧ್ಯಯನ ರಾಷ್ಟ್ರೀಯ ಸೇವಾ ಯೋಜನೆ ಇವುಗಳನ್ನೊಳಗೊಂಡಂತೆ ಸಾಂಸ್ಕೃತಿಕ ಚಟುವಟಿಕೆಗಳ ಉದ್ದೀಪನ, ಕ್ರೀಡಾ ಚಟುವಟಿಕೆಗಳ ವಿಸ್ತರಣೆ ತನ್ಮೂಲಕ ಪ್ರತಿ ವಿದ್ಯಾಥರ್ಿಯ ಸವಾಂಗೀಣ ವ್ಯಕ್ತಿತ್ವ ವಿಕಸನ ಶೈಕ್ಷಣಿಕ ನೀಲ ನಕ್ಷೆಯ ಯೋಜಿತ ಗುರಿಯಾಗಿಸಿಕೊಳ್ಳಬೇಕು ಎಂದು ಹೇಳುತ್ತಾ ವಿದ್ಯಾಥರ್ಿಗಳು ಇವೆಲ್ಲವನ್ನು ಸಮರ್ಪಕವಾಗಿ ಬಳಸಿಕೊಂಡು ಉತ್ತರೋತ್ತರ ಏಳಿಗೆ ಸಾಧಿಸಲೆಂದು ಹಾರೈಸಿದರು.
ಸಮಾರಂಭದಲ್ಲಿ ಅಧ್ಯಾಪಕರುಗಳಾದ ಆರ್.ಎಂ.ಶೇಖರಯ್ಯ, ಎಸ್.ಎಲ್.ಶಿವಕುಮಾರಸ್ವಾಮಿ, ಬಿ.ಎಸ್.ಬಸವಲಿಂತಯ್ಯ, ಸಿ.ಚನ್ನಬಸಪ್ಪ, ಹೆಚ್.ಎಸ್.ಪ್ರಕಾಶ, ಶಿವಯೋಗಿ, ಆಶಾ, ಅರುಣ್ಕುಮಾರ್, ಡಿ.ಎಸ್.ಲೋಕೇಶ್, ಉಪಸ್ಥಿತರಿದ್ದರು.
ಸಮಾರಂಭದಲ್ಲಿ ವಿದ್ಯಾಥರ್ಿಯರಾದ ಅನ್ನಪೂರ್ಣ ಮತ್ತು ಹೇಮ ಪ್ರಾಥರ್ಿಸಿ, ರವಿಚಂದ್ರ ಸ್ವಾಗತಿಸಿ, ದನಲಕ್ಷೀ ನಿರೂಪಿಸಿ, ಶ್ರೀನಿವಾಮೂತರ್ಿ ವಂದಿಸಿದರು.
ಹೈನುಗಾರಿಕೆ ಅಭಿವೃದ್ದಿ ಪಡಿಸಿ ಬೆಂಗಳೂರಿನ ವಲಸೆ ತಪ್ಪಿಸಿ
ಚಿಕ್ಕನಾಯಕನಹಳ್ಳಿ,ಜು.30: ವಿಧವೆಯರಿಗೆ ಹಸು ಸಾಕಲು ಹಾಲು ಒಕ್ಕೂಟ 35ಸಾವಿರ ರೂಗಳನ್ನು ಸಾಲನೀಡುತ್ತಿದ್ದು ಈ ಸಾಲ ಯೋಜನೆಯಲ್ಲಿ 18,500ರೂಗಳ ಸಬ್ಸಿಡಿ ದೊರೆಯಲಿದೆ ಎಂದು ತುಮಕೂರು ಹಾಲು ಒಕ್ಕೂಟದ ನಿದರ್ೇಶಕ ಶಿವನಂಜಪ್ಪ ಹಳೇಮನೆ ತಿಳಿಸಿದರು.
ತಾಲೂಕಿನ ಕುಪ್ಪೂರು ಗ್ರಾ.ಪಂ.ವ್ಯಾಪ್ತಿಯ ಬೆನಕನಕಟ್ಟೆಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘ ಸ್ಥಾಪಿಸಲು ಏರ್ಪಡಿಸಿದ್ದ ಗ್ರಾಮ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಗ್ರಾಮೀಣ ಭಾಗದ ಜನರು ತಿಂಗಳಿಗೆ ಐದಾರು ಸಾವಿರ ದುಡಿಯಲು ಬೆಂಗಳೂರಿಗೆ ವಲಸೆ ಹೋಗಿ ಅಲ್ಲಿ ಕಷ್ಟ ಅನುಭವಿಸುವ ಬದಲು ತಮ್ಮ ಊರಿನಲ್ಲೇ ಎರಡು ಸೀಮೆಹಸುವನ್ನು ಸಾಕಿದರೆ ಅದು ಕೊಡುವ ಹಾಲಿನಲ್ಲಿ ಸುಖವಾಗಿ ತಮ್ಮ ತಂದೆ, ತಾಯಿಗಳ ಜೊತೆಯಲ್ಲಿ ಆನಂದವಾಗಿ ಸಂಸಾರ ನಡೆಸಬಹುದೆಂದರು ಒಕ್ಕೂಟವೇ 20 ತರಹದ ಔಷದಿಯನ್ನು ಕೊಡುತ್ತಿದೆ ಎಂದರು. ಈ ಮೂರು ವರ್ಷದಲ್ಲಿ ತಾಲೂಕಿನಲ್ಲಿ 80ಕ್ಕೂ ಅಧಿಕ ಹಾಲೂ ಉತ್ಪಾದಕರ ಸಂಘಗಳನ್ನು ನೊಂದಾಯಿಸಿದ್ದು ನಮ್ಮ ಅವಧಿಯಲ್ಲಿ 101 ಸಂಘಗಳನ್ನು ಸ್ಥಾಪಿಸುವ ಗುರಿ ಹೊಂದಿದ್ದೇನೆ ಎಂದರು.
ನಮ್ಮ ತಾಲೂಕಿನಿಂದ ತುಮಕೂರಿಗೆ ಪ್ರತಿ ದಿನ 30ಸಾವಿರ ಲೀಟರ್ ಹಾಲನ್ನು ರವಾನೆ ಮಾಡುತ್ತಿತ್ತು, ಮಲ್ಲಸಂದ್ರದ ಬಳಿ ಇರುವ ಹಾಲು ಒಕ್ಕೂಟಕ್ಕೆ ಪ್ರತಿದಿನ 3ಲಕ್ಷದ 65ಸಾವಿರ ಲೀಟರ್ ಹಾಲು ಸಂಗ್ರಹವಾಗುತ್ತಿದೆ ಎಂದರು.
ನಾನು ಈ ಹಿಂದೆ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷ ಸ್ಥಾನವನ್ನು ಅಲಂಕರಿಸುವ ಸಂದರ್ಭದಲ್ಲಿ ಒಕ್ಕೂಟ 11ಕೋಟಿ ಸಾಲದ ಹೊರೆಯನ್ನು ಹೊಂದಿತ್ತು. ಈ ಸಾಲವನ್ನೆಲ್ಲ ತೀರಿಸಲು ನಾನು ಸಾಕಷ್ಟು ಶ್ರಮಿಸಿ ಹತ್ತು ಕೋಟಿಗೂ ಹೆಚ್ಚು ಸಾಲವನ್ನು ತೀರಿಸಿದೆನು ಎಂದರು.
ಈ ಸಭೆಯಲ್ಲಿ ಕುಪ್ಪೂರು ಗ್ರಾ.ಪಂ.ಅಧ್ಯಕ್ಷ ಬಿ.ಕೆ.ರಮೇಶ್ ಮಾತನಾಡಿ ಹಾಲು ಉತ್ಪಾದಕರಿಗೆ ಸಾಕಷ್ಟು ಅವಕಾಶಗಳಿದ್ದು ಸಕರ್ಾರ ನೀಡುವ ಸವಲತ್ತುಗಳನ್ನು ಬಳಸಿಕೊಂಡು ಹಾಲು ಉತ್ಪಾದನೆಯನ್ನು ಹೆಚ್ಚಿಸಿಕೊಳ್ಳುವ ಮೂಲಕ ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಬೇಕೆಂದು ತಿಳಿಸಿದರು.
ಗ್ರಾಮ ಸಭೆಯಲ್ಲಿ ಮುಖ್ಯ ಪ್ರವರ್ತಕರು ಸೇರಿದಂತೆ ಹತ್ತು ಜನ ಪ್ರವರ್ತಕರನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಗ್ರಾ.ಪಂ. ಸದಸ್ಯ ಕೃಷ್ಣಮೂತರ್ಿ, ಹಿರಿಯಣ್ಣ ಪಾಂಡುರಂಗಯ್ಯ, ವಾಗೀಶ ಪಂಡಿತರಾದ್ಯ ಸೇರಿದಂತೆ ವಿಸ್ತರಣಾಧಿಕಾರಿಗಳಾದ ಬಸವಯ್ಯ, ಯರಗುಂದಪ್ಪ, ಬಲಟ್ಟಿಪ್ರಸಾದ್ ಉಪಸ್ಥಿತರಿದ್ದರು.
ಸಭೆಯಲ್ಲಿ ಸಕರ್ಾರಿ ಕಿ.ಪ್ರಾ.ಶಾಲೆಯ ವಿದ್ಯಾಥರ್ಿಗಳಾದ ದರ್ಶನ್ ಮತ್ತು ಲೀನಾ ಪ್ರಾಥರ್ಿಸಿದರೆ ವೆಂಕಟೇಶ್ ಸ್ವಾಗತಿಸಿ, ವಂದಿಸಿದರು.