Monday, August 11, 2014



ದಶಕದ ಹಿಂದಿನ ಸ್ಥಿತಿಯಲ್ಲಿ ಹಿಂದುಳಿಯುತ್ತಿರುವ ಚಿಕ್ಕನಾಯಕನಹಳ್ಳಿ
ಚಿಕ್ಕನಾಯಕನಹಳ್ಳಿ,ಆ.11 : ದಶಕದ ಹಿಂದೆ ಚಿಕ್ಕನಾಯಕನಹಳ್ಳಿ ಯಾವ ಸ್ಥಿತಿಯಲ್ಲಿ ಇತ್ತೋ ಅದೇ ರೀತಿಯಲ್ಲಿ ಈಗಲೂ ಇದೆ,  ಯಾವ ಅಭಿವೃದ್ದಿಯನ್ನೂ ಕಾಣದೆ ಹಿಂದುಳಿಯುತ್ತಿದೆ ಎಂದು ಕಿರುತರೆ ಕಲಾವಿದ ಹನುಮಂತೆಗೌಡ ವಿಷಾಧಿಸಿದರು.
ಪಟ್ಟಣದ ನವೋದಯ ಪ್ರಥಮ ದಜರ್ೆ ಕಾಲೇಜು ಹಾಗೂ ಪದವಿ ಪೂರ್ವ ಕಾಲೇಜಿನ 2014-15ನೇ ಸಾಲಿನ ಸಾಂಸ್ಕೃತಿಕ, ಕ್ರೀಡೆ ಮತ್ತು ರಾ.ಸೇ.ಯೋ. ಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು,  ಬೇಸಿಗೆಯಲ್ಲಿ ಮಾತ್ರವಲ್ಲ ಇತರ ಕಾಲಗಳಲ್ಲೂ ನೀರಿನ ಸಮಸ್ಯೆ ದೊಡ್ಡದಾಗಿ ಪರಿಣಮಿಸಿದೆ ಎಂದ ಅವರು ಮುಂದೆ ಹೇಗೆ ಎಂಬುದರ ಬಗ್ಗೆ ನಾಗರೀಕರು ಈಗಿನಿಂದಲೇ ಚಿಂತನೆ ನಡೆಸಿ ತಾಲ್ಲೂಕಿನ ಅಭಿವೃದ್ದಿ ಬಗ್ಗೆ ಕಾಳಜಿ ವಹಿಸಿ ಎಂದರು.
ಮನೆಯ ಹಿರಿಯರು ಹೇಗೆ ಇರುತ್ತಾರೋ ಅದೇ ರೀತಿಯಲ್ಲಿ ಕಿರಿಯರು ಜೀವಿಸುತ್ತಾರೆ, ಅದೇ ರೀತಿಯಲ್ಲಿ ಪೋಷಕರು ಮಕ್ಕಳಿಗೆ ಉತ್ತಮ ದಾರಿಯನ್ನು ತೋರಿಸಿದರೆ ಮಕ್ಕಳು ಸಮಾಜದ ಒಳ್ಳೆಯ ವ್ಯಕ್ತಿಗಳಾಗಿ ಬದುಕುತ್ತಾರೆ, ಇಂತಹದರ ನಡುವೆ ನಾವು ಜೀವನವನ್ನು ಕಳೆಯಬೇಕಿದ್ದು ನಾಡನ್ನು ಕಟ್ಟುವ ಪ್ರಯತ್ನದಲ್ಲಿ ಮುಂದುವರೆಯೋಣ ಎಂದು ಸಲಹೆ ನೀಡಿದರು.
ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಮಾತನಾಡಿ ನಮ್ಮನ್ನು ನಾವು ನಮ್ಮ ಪ್ರತಿಭೆಯ ಮೂಲಕ ವಿಭಿನ್ನ ರೀತಿಯಲ್ಲಿ ಗುರುತಿಸಿಕೊಂಡಾಗ ಗೌರವಕ್ಕೆ ಒಳಗಾಗುತ್ತೇವೆ, ಒಂದೇ ಕ್ಷೇತ್ರದಲ್ಲಿ ವರ್ಷಗಳ ಕಾಲ ಸೇವೆ ಸಲ್ಲಿಸಿದರೆ ಆ ಸೇವೆಯು ಸಾಧನೆಯಾಗಿ ಪರಿವರ್ತನೆಯಾಗಿ ಗೆಲುವು ಪಡೆಯಬಹುದು ಎಂದರು.
 ಬಿ.ಎ ಪದವಿಗೆ ಮುಂದಿನ ವರ್ಷಗಳಲ್ಲಿ ಒಳ್ಳೆಯ ಪ್ರಾತಿನಿಧ್ಯ ದೊರಕಲಿದೆ, ಕಂಪನಿಗಳ ಮಾಲೀಕರು ಆಡಳಿತ ಸೇವೆಗಳ ಬಗ್ಗೆ ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ,  ಇಂಜನಿಯರಿಂಗ್, ಕಾಮಸರ್್ ಪದವಿಗಳಿಗೆ ಹೆಚ್ಚಿನದಾಗಿ ವಿದ್ಯಾಥರ್ಿಗಳು ದಾಖಲಾಗಿರುವುದು ಹಾಗೂ ಆ ಪದವಿಗಳ ನಿರುದ್ಯೋಗ ಸಮಸ್ಯೆ ಹೆಚ್ಚಿದೆ. ಬಿ.ಎ ಪದವಿಯ ಬಗ್ಗೆ ಅಸೆಡ್ಡೆ ತೋರದೆ ವಿದ್ಯಾಭ್ಯಾಸ ಮುಂದುವರೆಸಿ ಬಿ.ಎ ಪದವಿಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಅವಕಾಶ ದೊರಕಲಿದೆ ಎಂದರು.
ಯು.ಪಿ.ಎಸ್.ಸಿ ಪರೀಕ್ಷೆಯಲ್ಲಿ ಕೇಂದ್ರ ಸಕರ್ಾರ ಹಿಂದಿ ಭಾಷೆಯ ಬಗ್ಗೆ ಒಲವು ತೋರಿರುವುದರಿಂದ ದಕ್ಷಿಣ ಭಾರತದ ಜನತೆಗೆ ಸಮಸ್ಯೆಯುಂಟಾಗುತ್ತದೆ, ಯುಪಿಎಸ್ಸಿ ಪರೀಕ್ಷೆಗೆ ಹಿಂದಿ ಕಡ್ಡಾಯವಾದರೆ ಪರೀಕ್ಷೆ ಬರೆಯುವವರು ಹಿಂದಿ ಭಾಷೆ ಕಲಿಯುವುದು ಅನಿವಾರ್ಯವಾಗುತ್ತದೆ ಎಂದರಲ್ಲದೆ ವಿದ್ಯಾಥರ್ಿಗಳಿಗೆ ಗುಣಮಟ್ಟ ಬೋಧನೆ ನೀಡಿದಾಗ ಉತ್ತಮ ಅಂಕ ದೊರೆಯಲಿದೆ ಎಂದರು.
ನವೋದಯ ವಿದ್ಯಾಸಂಸ್ಥೆ ಕಾರ್ಯದಶರ್ಿ ಬಿ.ಕೆ.ಚಂದ್ರಶೇಖರ್ ಮಾತನಾಡಿ ವಿದ್ಯಾಥರ್ಿಗಳ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಾದ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರೆ ಮುಂದೊಂದು ದಿನ ಅದು ಪ್ರತಿಭೆಗಳಿಗೆ ನೆರವಾಗಲಿದೆ ಎಂದರು.
 ಕಾರ್ಯಕ್ರಮದಲ್ಲಿ ಪ್ರಥಮ ದಜರ್ೆ ಕಾಲೇಜ್ನ ಪ್ರಾಂಶುಪಾಲರಾದ ಬಿ.ಎಸ್.ಬಸವಲಿಂಗಪ್ಪ, ಪಿ.ಯು.ಕಾಲೇಜ್ನ ಪ್ರಾಂಶುಪಾಲರಾದ ಮೋಹನ್ ಉಪಸ್ಥಿತರಿದ್ದರು.



ಕುಪ್ಪೂರು ಶ್ರೀಗಳ ರಜತ ಮಹೋತ್ಸವಕ್ಕೆ ಸಿದ್ದತೆ:
ಚಿಕ್ಕನಾಯಕನಹಳ್ಳಿ,ಆ.11: ತಾಲ್ಲೂಕಿನ ಕುಪ್ಪೂರು ಗದ್ದಿಗೆ ಮಠಾಧ್ಯಕ್ಷರಾದ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮೀಜಿಯವರ 25ನೇ ವರ್ಷದ ಪಟ್ಟಾಧಿಕಾರದ ರಜತ ಮಹೋತ್ಸವ ಕಾರ್ಯಕ್ರಮವನ್ನು ವಿಂಜೃಂಭಣೆಯಾಗಿ ನೆರವೇರಿಸಲು ಭಕ್ತರ ಸಮೂಹ ತಿಮರ್ಾನಿಸಿತು.
  ಕುಪ್ಪೂರು ಗದ್ದಿಗೆಯ ಪೀಠಾಧ್ಯಕ್ಷರಾಗಿ ಇಪ್ಪತೈದು ವರ್ಷದ ಸೇವೆಯನ್ನು ಸ್ಮರಿಸಿಕೋಂಡು ಭಕ್ತರ ಸಮೂಹ,  ಸ್ವಾಮೀಜಿಯವರ ಪಟ್ಟಾಧಿಕಾರದ  ರಜತಾ ಮಹೋತ್ಸವವನ್ನು ನೆರವೇರಿಸಲು ಪೂರ್ವಭಾವಿ ಸಭೆಯನ್ನು ಏರ್ಪಡಿಸಿತ್ತು.
 ಸಭೆಯ ಅಧ್ಯಕ್ಷತೆ ವಹಿಸಿ ಎಸ್.ಪಿ.ಗಂಗಾಧರಪ್ಪ ಮಾತನಾಡಿ ಗದ್ದಿಗೆ ಮಠದಲ್ಲಿ ಹಿರಿಯ ಶ್ರೀಗಾಳಾದ ಲಿಂಗೈಕ್ಯ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಯವರು ಇಷ್ಟ ಪಟ್ಟು ಅತಿ ಚಿಕ್ಕ ವಯಸ್ಸಿನಲ್ಲಿ ಯತೀಶ್ವರ ಶಿವಾಚಾರ್ಯ ಸ್ವಾಮಿಗಳಿಗೆಪಟ್ಟಾಧಿಕಾರವನ್ನು ನೀಡಿದರು. ಅವರ ಮಾರ್ಗ ದರ್ಶನದಂತೆ ಮಠದ ಅಭಿವೃದ್ದಿ ಹಾಗೂ ಸಮಾಜದಲ್ಲಿ ಅವರದೇ ಆದ ಶೈಲಿಯಲ್ಲಿ ಶ್ರೀಗಳು ಸೇವೆ ಸಲ್ಲಿಸಿದ್ದಾರೆ ಎಂದು ಶ್ಲಾಘಿಸಿದರು. 
ಡಿಸೆಂಬರ್ 05,06 ಮತ್ತು07ರಂದು  ನೆಡೆಯಲಿರುವ ಬೆಳ್ಳಿ ಹಬ್ಬದ ಸಂದರ್ಭದಲ್ಲಿ ಅಭಿವಂದನಾ ಗ್ರಂಥವನ್ನು ಶ್ರೀಗಳಿಗೆ ಅಪರ್ಿಸಲಾಗುವುದು, ಸ್ವಾಮೀಜಿ ಯವರ ಸಾಧನೆಗಳ ಚಿತ್ರ ಸಂಪುಟವನ್ನು ಬಿಡುಗಡೆ ಮಾಡಲಾಗುವುದು. ಎಂದು ವಕೀಲ ಶಿವಲಿಂಗಪ್ಪ ತೀಳಿಸಿದರು. ಮೂರು ದಿವಸ ನೆಡೆಯುವ ಬೃಹತ್ ಕಾರ್ಯಕ್ರಮದಲ್ಲಿ  ನಾಡಿನ ಜಗದ್ಗುರುಗಳು, ಶಿವಾಚಾರ್ಯರು, ಸಮಾಜದ ಚಿಂತಕರು, ಕವಿಗಳು, ಕಲಾವಿದರು, ರಾಜಕೀಯ ಗಣ್ಯರು ಪಾಲ್ಗೋಳ್ಳಲಿದ್ದಾರೆ ಎಂದು ಭಕ್ತರ ಸಮೂಹ ತಿಳಿಸಿತು. ಸಭೆಯಲ್ಲಿ ಡಾ.ಯತೀಶ್ವರ ಶಿವಾಚಾರ್ಯ ಸ್ವಾಮೀಜಿ ಸಾನಿದ್ಯ ವಹಿಸಿದ್ದರು, ತಿಪಟೂರು ಬಿಜೆಪಿ ಮುಂಖಡ ಹೆಚ್.ಎನ್.ಗಂಗಾಧರಪ್ಪ, ಶೆಟ್ಟಿಕೆರೆ ಡಾ.ಶಿವಕುಮಾರ್, ಆರ್.ಮಹೇಶ್, ಆರ್.ಬಿ.ಕೊಟ್ಟೂರಪ್ಪ, ಕೆ.ಎಸ್.ಶಿವಶಂಕರಪ್ಪ, ಸಾಸಲು ಶಾಂತವೀರಪ್ಪ, ಮುಂತಾದ ಭಕ್ತರು ಸಭೆಯಲ್ಲಿ ಭಾಗವಹಿಸಿದ್ದರು.

ಅಂತಹ ಕಲಹ ಎಲ್ಲೆ ಮೀರಿದಾಗ ಮೀಸಲಾತಿಗೆ ಮುನ್ನಡಿ ಬರೆದವರು ಬ್ರಾಹ್ಮಣರೆ: ಜೆ.ಸಿ.ಎಂ.
ಚಿಕ್ಕನಾಯಕನಹಳ್ಳಿ,ಆ11: ಕನರ್ಾಟಕದಲ್ಲಿ ಮೀಸಲಾತಿಗೆ ಮುನ್ನುಡಿ ಬರೆದವರು ಬ್ರಾಹ್ಮಣರು. ಮೈಸೂರು ಅರಸರ ಆಳ್ವಿಕೆಯಲ್ಲಿ ಉನ್ನತ ಹುದ್ದೆಗಳು ತಮಿಳುನಾಡು ಬ್ರಾಹ್ಮಣರ ಪಾಲಾಗುತ್ತಿದ್ದಾಗ ಕನರ್ಾಟಕದ ಬ್ರಾಹ್ಮಣರಿಗೆ ಮೀಸಲಾತಿ ಕೊಡಿ ಎಂದು ಪಟ್ಟು ಹಿಡಿದಿದ್ದವರು ಇವರೆ. ಅಂದು ಮೀಸಲಾತಿಗೆ ಮುಗಿಬಿದ್ದ ಬ್ರಾಹ್ಮಣರು ಇಂದು ಪ್ರತಿಭೆ ಹೆಸರಿನಲ್ಲಿ ಮೀಸಲಾತಿ ವಿರೋಧಿಸುತ್ತಿದ್ದಾರೆ ಎಂದು ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಹೇಳಿದರು. 
ತಾಲ್ಲೂಕಿನ ಜೆ.ಸಿ.ಪುರದಲ್ಲಿ ವೀರಶೈವ ನೌಕರರ ಕ್ಷೇಮಾಭಿವೃದ್ಧಿ ಸಂಘ ಭಾನುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಮತ್ತು ನಿವೃತ್ತ ನೌಕರರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಉಳ್ಳವರು ಇಲ್ಲದವರಿಗೆ ಸಹಾಯ ಹಸ್ತ ಚಾಚುವುದು ಸಂಘಟನೆಯ ಧ್ಯೇಯ ಆಗಬೇಕು ಎಂದರು.
  ಕನರ್ಾಟಕದಲ್ಲಿ ಶಿಕ್ಷಣದ ಮಾತು ಬಂದಾಗ ಶಿಕ್ಷಣವನ್ನು ಸಾರ್ವತ್ರೀಕರಿಸಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಸಂಸ್ಥೆಗಳನ್ನು ಕಟ್ಟಿ ಶಿಕ್ಷಣವನ್ನು ವಿಸ್ತರಿಸಿದ ಮಠಗಳನ್ನು ಸ್ಮರಿಸಬೇಕು, ಮೀಸಲಾತಿ ಲಾಭ ಪಡೆದು ಮೇಲೆ ಬಂದವರು ಸಮುದಾಯದ ಮಕ್ಕಳಿಗೆ ಸೂಕ್ತ ಸಹಾಯ ಹಾಗೂ ಮಾರ್ಗದರ್ಶನ ನೀಡುವ ಮೂಲಕ ಋಣ ತೀರಿಸಬೇಕು ಎಂದರು. ಆಥರ್ಿಕ ಮತ್ತು ಸಾಮಾಜಿಕ ಸ್ಥಾನಮಾನಗಳ ಸಮಾನ ಹಂಚಿಕೆಗೆ ಮೀಸಲಾತಿ ಬೇಕು. ಆದರಲ್ಲಿ ಇನ್ಫೋಸಿಸ್ ಹಾಗೂ ವಿಪ್ರೋದಂತಹ  ಪ್ರತಿಷ್ಠಿತ ಸಾಫ್ಟ್ವೇರ್ ಕಂಪನಿಗಳು ಪ್ರತಿಭೆ ಹೆಸರಿನಲ್ಲಿ ಮೀಸಲಾತಿ ವಿರೋಧಿ ಚಳುವಳಿಯನ್ನು ರೂಪಿಸುತ್ತಿವೆ  ಪ್ರತಿಭೆಗೂ ಉದ್ಯೋಗಕ್ಕೂ ಸಂಬಂಧ ಇಲ್ಲ. ಕೆಲಸಕ್ಕೆ ಬೇಕಿರುವುದು ಪರಿಶ್ರಮ ಮತ್ತು ಶ್ರದ್ಧೆ.ಅಂಕಗಳಿಂದ ಅಳೆಯಲ್ಪಡುತ್ತಿರುವ ಪ್ರತಿಭೆ ಒಳ್ಳೆಯ ಉದ್ಯೋಗಿಯನ್ನು ರೂಪಿಸಲಾರದು ಎಂದರು.
ಜಾತಿ, ಧರ್ಮ ಶ್ರೇಷ್ಠ ಅಲ್ಲ ಮಾನವಿಯತೆ ಶ್ರೇಷ್ಠ, ಮಾನವೀಯತೆ ಸಮಾಜ ಸೃಷಿಸಿದ್ಠ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದರು.
    ನಿವೃತ್ತ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಎ.ಎಸ್.ಸದಾಶಿವಯ್ಯ ಮಾತನಾಡಿ, ಯಶಸ್ಸಿಗೆ ಶೇ.95 ಭಾಗ ಶ್ರಮ ಹಾಗೂ ಉಳಿದ ಶೆ.5ಭಾಗ ಪ್ರೇರಣೆ ಕಾರಣವಾಗುತ್ತದೆ. ಕಷ್ಟವೇ  ಸಾಧನೆಗೆ ಸ್ಪೂತರ್ಿಯಾಗುತ್ತದೆ.ಹಳ್ಳಿಯ ಮಕ್ಕಳು ತಮ್ಮಲ್ಲಿ ಹಡಗಿರುವ ಸುಪ್ತ ಶಕ್ತಿಯನ್ನು ಹೊರ ಹೊಮ್ಮಿಸಲು ಧೈರ್ಯದಿಂದ ಮುನ್ನುಗ್ಗಬೇಕು ಎಂದು ಕಿವಿಮಾತು ಹೇಳಿದರು.
  ಗೋಡೆಕೆರೆ ಕ್ಷೇತ್ರದ ಸ್ಥಿರ ಪಟ್ಟಾಧ್ಯಕ್ಷ ಶ್ರೀ ಸಿದ್ದರಾಮೇಶ್ವರ ದೇಶಿಕೇಂದ್ರ ಸ್ವಾಮೀಜಿ ಹಾಗೂ ಚರಪಟ್ಟಾಧ್ಯಕ್ಷ ಮೃತ್ಯುಂಜಯ ದೇಶಿ ಕೇಂದ್ರ ಸ್ವಾಮೀಜಿಗಳ ದಿವ್ಯ ಸಾನಿಧ್ಯದಲ್ಲಿ ಕಾರ್ಯಕ್ರಮ ನಡೆಯಿತು. ಸಂಘದ ಅಧ್ಯಕ್ಷ ಎಸ್.ಸಿ.ದಿನೇಶ್ ಅಧ್ಯಕ್ಷತೆ ವಹಿಸಿದ್ದರು.ಜಿಪಂ ಸದಸ್ಯ ಎಚ್.ಬಿ.ಪಂಚಾಕ್ಷರಿ,ತಾಪಂ ಸದಸ್ಯರಾದ ಎಂ.ಎಂ.ಜಗದೀಶ್ ಮತ್ತು ಎಚ್.ಆರ್.ಶಶಿಧರ್, ಡಿಡಿಪಿಐ ಈಶ್ವರಯ್ಯ, ತುಮುಲ್ ನಿದರ್ೇಶಕ ಹಳೇಮನೆ ಶಿವನಂಜಪ್ಪ ಮಾತನಾಡಿದರು.   
ವೀರಶೈವಮುಖಂಡರುಗಳಾದ ಬಾಲಚಂದ್ರ, ಪ್ರಸನ್ನಕುಮಾರ್, ನಿಜಗುಣಯ್ಯ, ಶಿವರಾಜ್,ಶಂಕರಲಿಂಗಪ್ಪ. ಜಯಣ್ಣ, ಮಾ.ಚಿ.ಕೈಲಾಸನಾಥ್, ಎಸ್.ಎಲ್.ಶಾಂತಕುಮಾರ್, ನಿರಂಜನ್ ಮುಂತಾದವರು ಇದ್ದರು. 
ಮರುಳಸಿದ್ಧಯ್ಯ ವಾಷರ್ಿಕ ವರದಿ ವಾಚಿಸಿದರು.ಕೆ.ಎಸ್.ನವೀನ್ಕುಮಾರ್ ಸ್ವಾಗತಿಸಿ ಎಂ.ಎಸ್.ಈಶ್ವರಪ್ಪ ನಿರೂಪಿಸಿದರು. ಶಿಕ್ಷಕ ಮಲ್ಲಿಕಾಜರ್ುನ್ರ ವಚನ ಗಾಯನ ಮಾಡಿದರು.

ರಾಗಿ ಬಿತ್ತನೆಗೆ ಸಜ್ಜಾದ ರೈತರು
ಚಿಕ್ಕನಾಯಕನಹಳ್ಳಿ,ಆ.11 : ತಾಲ್ಲೂಕಿನಲ್ಲಿ ಕಳೆದ ಎರಡು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು ರೈತರು ತಮ್ಮ ಹೊಲಗಳಲ್ಲಿ ರಾಗಿ ಬೆಳೆಯನ್ನು ಬಿತ್ತನೆ ಮಾಡುತ್ತಿರುವ ದೃಶ್ಯ ಕಂಡುಬರುತ್ತಿದೆ.
ಜುಲೈ ತಿಂಗಳಿನಲ್ಲಿ ಮಳೆಯನ್ನೇ ಕಾಣದ ಜನತೆ ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ಬಿದ್ದ ಮಳೆಯಿಂದ ರೈತರ ಮುಖದಲ್ಲಿ ಸಂತಸ ಮೂಡಿದೆ, ತಾಲ್ಲೂಕಿನಲ್ಲಿ ಮುಂಗಾರು ಮಳೆಯು ಕೈಕೊಟ್ಟ ಪರಿಣಾಮ ಹೆಸರುಕಾಳು, ಹಲಸುಂಡೆ ಹಾಗೂ ದ್ವಿದಳ ಧಾನ್ಯಗಳ ಬೆಳೆಯನ್ನು ಹಾಕಿ ಕೈಸುಟ್ಟುಕೊಂಡಿದ್ದರು. ಕಳೆದ ಎರಡು ತಿಂಗಳಿನಿಂದಲೂ ಸರಿಯಾಗ ಮಳೆಯಾಗದೇ ಇದ್ದ ಪರಿಣಾಮ ಸಾಲ ಮಾಡಿ ಮುಂಗಾರು ಬೆಳೆ ಬೆಳೆಯಲು ಗೊಬ್ಬರ ಮತ್ತು ಬೀಜಗಳನ್ನು ತಂದು ಹೊಲಗಳಿಗೆ ಬಿತ್ತನೆ ಮಾಡಿದರೂ ಉತ್ತಮ ಫಸಲು ದೊರೆಯದ ಕಾರಣ ರೈತರು ನೋವನ್ನು ಅನುಭವಿಸುತ್ತಿದ್ದರು, ಆಗಸ್ಟ್ ಮೊದಲ ವಾರದಲ್ಲಿ ಸುರಿದ ಮಳೆಯಿಂದ ದ್ವಿದಳ ಬೆಳೆಗಳನ್ನು ಬಿತ್ತಿದ್ದ ರೈತರು ಹೊಲಗಳನ್ನು ಸ್ವಚ್ಛಗೊಳಿಸಿ, ರಾಗಿ ಬೆಳೆಯ ಭಿತ್ತನೆ ನೆಡೆಸುತ್ತಿದ್ದಾರೆ.
ಕುರುಬರಹಳ್ಳಿ ರೈತ ಮಹಿಳೆ ಗೌರಮ್ಮ ಮಾತನಾಡಿ ಕಳೆದ ಎರಡು ದಿನಗಳಿಂದ ಬಿದ್ದ ಮಳೆಯನ್ನು ನೆಚ್ಚಿಕೊಂಡು ಮನೆಮಂದಿಯೆಲ್ಲಾ ರಾಗಿ ಬಿತ್ತನೆಗೆ ಮುಂದಾಗಿದ್ದೇವೆ, ನೆನ್ನೆ ಬಂದಂತಹ ಮಳೆಯಿಂದ ಹೊಲದ ಪೂರ್ಣಭಾಗ ಸಸಿ ಹಾಕುತ್ತಿದ್ದೇವೆ ಎಂದರಲ್ಲದೆ, ಮುಂಗಾರು ಮಳೆಯಲ್ಲಿ ಹಾಕಿದಂತಹ ಬೆಳೆ ನಷ್ಟವಾಗಿ ರೈತರಿಗೆ ಏನೂ ಸಿಗದಂತಾಗಿದೆ, ರೈತರು ಏನೇ ಕಷ್ಟ ಪಟ್ಟು ಮಾಡಿದರೂ ಉತ್ತಮ ಫಸಲು ದೊರೆಯುತ್ತಿಲ್ಲ, ಗೊಬ್ಬರದ ಮತ್ತು ಬೀಜಗಳ ಬೆಲೆ ಗಗನಕ್ಕೇರಿದೆ, ಕೊಟ್ಟಿಗೆ ಗೊಬ್ಬರ ಸಿಂಪಡಿಸೋಣವೆಂದರೆ ಪಶುಗಳಿಗೆ ಮೇವೂ ಹಾಗೂ ಕುಡಿಯಲೂ ನೀರಿಲ್ಲದೆ ಕೊಟ್ಟಿಗೆ ಗೊಬ್ಬರ ಎಲ್ಲಿಯೋ ದೊರೆಯುತ್ತಿಲ್ಲ, ಅಂಗಡಿಗಳಲ್ಲಿ ಗೊಬ್ಬರದ ಬೆಲೆ ಹೆಚ್ಚಿರುವುದರಿಂದ ಹಣ ನೀಡಿ ತರಲು ಸಾಧ್ಯವಾಗುತ್ತಿಲ್ಲ ಇದರಿಂದ ಗೊಬ್ಬರದ ಸಮಸ್ಯೆಯೂ ತಲೆದೂರಿದೆ, ಸಕರ್ಾರ ಗೊಬ್ಬರದ ಬೆಲೆಯನ್ನು ಕಡಿಮೆ ಮಾಡುವಂತೆ ಮನವಿ ಮಾಡಿದ್ದಾರೆ. 
ರೈತ ಕೃಷ್ಣಪ್ಪ ಮಾತನಾಡಿ ರೈತರು ಕಷ್ಟಪಟ್ಟು ಬೆಳೆದ ಬೆಳೆಗಳನ್ನು ಕಡಿಮೆ ಬೆಲೆಯಲ್ಲಿ ಅಂಗಡಿಗಳ ವ್ಯಾಪಾರಸ್ಥರು ಕೇಳುತ್ತಾರೆ, ಆದರೆ ನಾವು ಬೆಳೆದ ಬೆಳೆಯನ್ನೇ ಅನಿವಾರ್ಯವಾಗಿ ಅಂಗಡಿಗಳಲ್ಲಿ ತರಲು ಹೋದರೆ ದುಪ್ಪಟ್ಟು ಹಣ ನೀಡಬೇಕಾಗುತ್ತದೆ ಎಂದು ತಿಳಿಸಿದರು.

ಗುರು ರಾಘವೇಂದ್ರಸ್ವಾಮಿಯ 343 ನೇ ಆರಾಧನೆ  

ಚಿಕ್ಕನಾಯಕನಹಳ್ಳಿ : ಪಟ್ಟಣದ ಜೋಗಿಹಳ್ಳಿ ಬಳಿ ಇರುವ  ಆದಿಆಂಜನೇಯಸ್ವಾಮಿ ದೇವಾಲಯದಲ್ಲಿ ಶ್ರೀ ಗುರು ರಾಘವೇಂದ್ರಸ್ವಾಮಿಯ 343 ನೇ ಆರಾಧನಾ ಮಹೋತ್ಸವ ಆಗಸ್ಟ್12 ರಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ.
 ಬೆಳಿಗ್ಗೆ 8 ಗಂಟ್ಟೆಗೆ ಆದಿಆಂಜನೇಯಸ್ವಾಮಿಗೆ ಅಭಿಷೇಕ ಹಾಗೂ ಬೆಳಿಗ್ಗೆ 8 ಘಂಟ್ಟೆಗೆ ವಿಶೇಷ ಅಭಿಷೇಕ ಹಾಗೂ ಅಲಂಕಾರ ನಡೆಯಲಿದೆ. ಸಂಜೆ 6 ಘಂಟೆಗೆ ಪ್ರಸಾಧ ವಿನಿಯೋಗ ಸಂಜೆ 7 ಗಂಟ್ಟೆಗೆ ಮಾರುತಿ ಭಜನ ಸಂಘದವರಿಂದ ಹಾಗೂ ವಾಸವಿ ಭಜನಾ ಮಂಡಳಿ ಮತ್ತು ಇತರೆ  ಭಜನಾ ಸಂಘದವರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ ಆದ್ದರಿಂದ ಭಕ್ತಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವಂತೆ ಪ್ರಕಟಣಿಯಲ್ಲಿ ತಿಳಿಸಿದೆ.