Monday, April 5, 2010


ಅನುದಾನ ವಿತರಣೆಯಲ್ಲಿ ವಿಳಂಬ; ವಿಕಲಚೇತನರ ಪ್ರತಿಭಟನೆ

ಚಿಕ್ಕನಾಯಕನಹಳ್ಳಿ,ಏ.05: ಅಂಗವಿಕಲ ಫಲಾನುಭವಿಗಳಿಗೆ ಸಲ್ಲಬೇಕಿರುವ ಅನುದಾನ ಮತ್ತು ಸಾಧನ ಸಲಕರಣೆಗಳನ್ನು ವಿತರಣೆ ಮಾಡಲು ಜಿಲ್ಲಾಧಿಕಾರಿಗಳು ಆದೇಶಿಸಿದ್ದರೂ, ಇದುವರೆಗೂ ಯಾವುದೇ ಸಲಕರಣೆಗಳನ್ನು ಪುರಸಭಾ ಮುಖ್ಯಾಧಿಕಾರಿಗಳು ವಿತರಣೆ ಮಾಡದೆ ಅಂಗವಿಕಲರಿಗೆ ಅನ್ಯಾಯವೆಸಗಿದ್ದಾರೆಂದು ತಾಲೂಕಿನ ಅಂಗವಿಕಲರ ಒಕ್ಕೂಟ ದವರು ಆರೋಪಿಸಿದ್ದಾರೆ.
ಪಟ್ಟಣದ ಪುರಸಭಾ ಕಾಯರ್ಾಲಯದ ಮುಂದೆ ಬೆಳಗಿನಿಂದ ಸಂಜೆ ರವರೆಗೂ ಧರಣಿ ನಡೆಸಿದ ಪಟ್ಟಣ ವಿಕಲಚೇತನ ಒಕ್ಕೂಟದವರು ಪುರಸಭೆಯ ಆಡಳಿತ ವರ್ಗದ ನಿಧಾನ ದ್ರೋಹವನ್ನು ಖಂಡಿಸಿದರು.
ಕಳೆದ 2008-09ನೇ ಸಾಲಿನಲ್ಲಿ ತ್ರಿಚಕ್ರ ಸೈಕಲ್ಗಳು ಹಾಗೂ ಸಾಧನ ಸಲಕರಣೆಗಳಿಗೆ ಶೇ 3ರಷ್ಟರ ಅನುದಾನದಂತೆ 50ಸಾವಿರ ಹಣ ತೆಗೆದಿದ್ದು ಆ ಹಣ ವಿನಿಯೋಗವಾಗಿಲ್ಲ, ಹಾಗೆಯೇ 09-10ನೇ ಸಾಲಿನಲ್ಲಿ ಶೇ.3. ರ ಅನುದಾನದಂತೆ 90ಸಾವಿರ ರೂಪಾಯಿಗಳನ್ನು ತೆಗೆಯಲಾಗಿದ್ದು ಮುಖ್ಯಾಧಿಕಾರಿಗಳು ಈ ಅನುದಾನದಲ್ಲಿ 1ಲಕ್ಷದ 40ಸಾವಿರ ಹಣವನ್ನು ವಂಚನೆ ಮಾಡಿದ್ದಾರೆ ಮತ್ತು ಈ ವಿಷಯದಲ್ಲಿ ಮುಖ್ಯಾಧಿಕಾರಿಗಳು ಸಂಘಕ್ಕೆ ಮಾಹಿತಿ ನೀಡುತ್ತಿಲ್ಲ ಹಾಗೂ ಹಣ ವಿತರಣೆ ಮಾಡುವಲ್ಲಿ ಬೇಜಾವಬ್ದಾರಿತನ ತೋರುತ್ತಿದ್ದಾರೆಂದು ದೂರಿದರು.
ಸಂಘದ ಅಧ್ಯಕ್ಷೆ ಶಾಂತಮ್ಮ ಮಾತನಾಡಿ ನಮಗೆ ಸೇರಬೇಕಾಗಿರುವ ಅನುದಾನ ಪಡೆಯುವವರೆಗೂ ಧರಣಿ ನಿಲ್ಲಿಸುವುದಿಲ್ಲ ಮತ್ತು ಸಂಘದಲ್ಲಿ 500 ಸದಸ್ಯರಿದ್ದು 113 ಅಂಗವಿಕಲ ಸದಸ್ಯರಿಗೆ ಇನೂ ಅನುದಾನಕ್ಕೆ ಒಳಪಡಿಸುವ ಪಟ್ಟಿ ಬಿಡುಗಡೆ ಮಾಡಿಲ್ಲವೆಂದು ದೂರಿದ್ದಾರೆ.
ಪ್ರತಿಭಟನಾ ಸ್ಥಳಕ್ಕೆ ತಹಶೀಲ್ದಾರ್ ಟಿ.ಸಿ.ಕಾಂತರಾಜು ಭೇಟಿ ನೀಡಿ ವಿಕಲಚೇತನರೊಂದಿಗೆ ಮಾತನಾಡಿದರಲ್ಲದೆ, ಇದೇ 7(ಇಂದು)ರಂದು ತಾಲೂಕು ಕಛೇರಿಯಲ್ಲಿ ಈ ಸಂಬಂಧ ಸಭೆ ನಡೆಸುವುದಾಗಿ ತಿಳಿಸಿದರು, ಈ ಸಭೆಗೆ ಪಟ್ಟಣದ ಎಲ್ಲಾ ವಿಕಲಚೇತನರು ಭಾಗವಹಿಸುವಂತೆ ತಿಳಿಸಿದರು.
ಪುರಸಭಾ ಅಧ್ಯಕ್ಷ ಸಿ.ಎಂ.ರಂಗಸ್ವಾಮಿ ಮಾತನಾಡಿ ಮುಖ್ಯಾಧಿಕಾರಿಗಳು ಸಭೆಯೊಂದರಲ್ಲಿ ಭಾಗವಹಿಸಲು ತೆರಳಿರುವುದರಿಂದ ಅವರು ಕಛೇರಿಗೆ ಬಂದ ನಂತರ ಅವರೊಂದಿಗೆ ಚಚರ್ಿಸಿ ಸೂಕ್ತ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.
ವಿಕಲಚೇತನರ ಪ್ರತಿಭಟನೆಗೆ ಪುರಸಭೆಯ ವಿರೋಧ ಪಕ್ಷದ ಸದಸ್ಯರುಗಳಾದ ಸಿ.ಡಿ.ಚಂದ್ರಶೇಖರ್, ಸಿ.ಪಿ.ಮಹೇಶ್, ಬಾಬು ಸಾಹೇಬ್ ಬೆಂಬಲ ವ್ಯಕ್ತ ಪಡಿಸಿದರು.
ಪ್ರತಿಭಟನೆಯಲ್ಲಿ ಹನುಂತಯ್ಯ, ಭಾಗ್ಯಮ್ಮ, ಸಿ.ಕೆ.ನಾಗರಾಜು, ಸಿ.ಕೆ ದೀಪ,ಕರೇಹನುಮಯ್ಯ, ಎ.ಬಸವರಾಜು ಸೇರಿದಂತೆ ಹಲವರು ಭಾಗವಹಿಸಿದ್ದರು.