Thursday, April 11, 2013


 ಪಿ.ಐ. ಸಿ.ಆರ್.ರವೀಶ್ ರವರಿಗೆ ಸಿ.ಎಂ.ಚಿನ್ನದ ಪದಕ
                           
ಚಿಕ್ಕನಾಯಕನಹಳ್ಳಿ,ಏ.10: ಬೆಂಗಳೂರಿನ ಹೈಗ್ರೌಂಡ್ಸ್ ಸಂಚಾರಿ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಸಿ.ಆರ್.ರವೀಶ್ ರವರು ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ, ಇವರು ಚಿಕ್ಕನಾಯಕನಹಳ್ಳಿಯವರಾಗಿದ್ದು, ಇವರ ಸಾಧನೆಗೆ ಪಟ್ಟಣದ ಜನತೆ ಹರ್ಷ ವ್ಯಕ್ತಪಡಿಸಿದ್ದಾರೆ.
    ಪಟ್ಟಣದ ಅಡಿಕೆ ವ್ಯಾಪಾರಿ ರೇವಣ್ಣನವರ ಮಗನಾದ ಸಿ.ಆರ್.ರವೀಶ್ ರವರು ಪೊಲೀಸ್ ಇಲಾಖೆಗೆ ಸಬ್ ಇನ್ಸ್ಪೆಕ್ಟರ್ ಆಗಿ 1994ರಲ್ಲಿ ನೇಮಕಗೊಂಡರು, ತಮ್ಮ ವೃತ್ತಿ ಜೀವನವನ್ನು ಕರಾವಳಿ ಭಾಗದಲ್ಲಿ ಆರಂಭಿಸಿದರು, ಪುತ್ತೂರು, ವಿಟ್ಲ, ಬೆಳ್ತಂಗಡಿ, ಮಂಗಳೂರು ನಗರಗಳಲ್ಲಿ ಸೇವೆಸಲ್ಲಿಸಿದ್ದು, 2002ರಲ್ಲಿ ಇನ್ಸ್ಪೆಕ್ಟರ್ ಆಗಿ ಬಡ್ತಿ ಪಡೆದ ನಂತರ ಮಂಗಳೂರು, ಅರಸೀಕೆರೆ, ಪುತ್ತೂರು, ಕೆಂಗೇರಿಗಳಲ್ಲಿ ಸೇವೆಸಲ್ಲಿಸಿದ್ದು, ಕೆಲ ಕಾಲ ಸಿ.ಐ.ಡಿ. ಯಲ್ಲೂ ಸೇವೆ ಸಲ್ಲಿಸಿದರು, ಇವರ ಜೀವಮಾನದ ಸೇವೆಯನ್ನು ಪರಗಣಿಸಿ ಇಲಾಖೆ ಮುಖ್ಯಮಂತ್ರಿಗಳ ಚಿನ್ನದ ಪದಕ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಇವರ ಸೇವೆಗೆ ಸಂದ ಬಳುವಳಿಯಾಗಿದೆ. ಡಿ.ವಿ.ಜಿ.ಯವರ ಕಗ್ಗದ ಬಗ್ಗೆ ಉಪನ್ಯಾಸ ನೀಡುವುದು ಸೇರಿದಂತೆ   ಸಾಹಿತ್ಯ, ಸಂಗೀತ ಹಾಗೂ ಲಲಿತ ಕಲೆಗಳನ್ನು ಹವ್ಯಾಸವಾಗಿಸಿಕೊಂಡಿರುವ ಇವರನ್ನು ಪಟ್ಟಣದ ರೋಟರಿ ಕ್ಲಬ್, ಕ.ಸಾ.ಪ. ಸವಿತಾ ಸಮಾಜ, ಅಕ್ಕಮಹಾದೇವಿ ಮಹಿಳಾ ಸಂಘ, ತಾ.ವೀರಶೈವ ಕ್ಷೇಮಾಭಿವೃದ್ದಿ ಸಂಘ, ತಾ.ಪ್ರಗತಿಪರರ ಮತ್ತು ಸಾಂಸ್ಕೃತಿ ಸಂಘಟನೆಗಳ ಒಕ್ಕೂಟ ಸೇರಿದಂತೆ ಹಲವು ಸಂಘ ಸಂಸ್ಥೆಗಳು ಇವರನ್ನು ಅಭಿನಂದಿಸಿವೆ.


ಸಾವಿರಾರು ಬೆಂಗಲಿಗರೊಂದಿಗೆ ನಾಮಪತ್ರ ಸಲ್ಲಿಸಿದ ಭಾಜಪ ಅಭ್ಯಥರ್ಿ ಕೆ.ಎಸ್.ಕಿರಣ್ ಕುಮಾರ್
ಚಿಕ್ಕನಾಯಕನಹಳ್ಳಿ,ಏ.10 : ಬಿಜೆಪಿ ಅಭ್ಯಥರ್ಿ ಕೆ.ಎಸ್.ಕಿರಣ್ ಕುಮಾರ್ ತಮ್ಮ ಸಾವಿರಾರು ಬೆಂಬಲಿಗರೊಂದಿಗೆ ಬುಧವಾರ ತಾಲ್ಲೂಕು ಕಛೇರಿಗೆ ತೆರಳಿ ಚುನಾವಣಾಧಿಕಾರಿ ಇ.ಪ್ರಸನ್ನರವರಿಗೆ ತಮ್ಮ ನಾಮಪತ್ರ ಸಲ್ಲಿಸಿದರು.
    ಪಟ್ಟಣದ ಶ್ರೀ ಹಳೆಯೂರು ಆಂಜನೇಯಸ್ವಾಮಿ ದೇವಾಲಯದಿಂದ ಸಾವಿರಾರು ಬೆಂಬಲಿಗರ ಘೋಷಣೆಯೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಹೊರಟು ತಮ್ಮ ಪತ್ನಿ ಕವಿತಾಕಿರಣ್ಕುಮಾರ್ರೊಂದಿಗೆ  ತಾ.ಭಾಜಪ ಅಧ್ಯಕ್ಷ ಮಿಲ್ಟ್ರಿಶಿವಣ್ಣ, ಜಿ.ಪಂ.ಸದಸ್ಯ ಹೆಚ್.ಬಿ.ಪಂಚಾಕ್ಷರಿ, ತಾ.ಪಂ.ಅಧ್ಯಕ್ಷ ಎಂ.ಎಂ.ಜಗಧೀಶ್, ತಾ.ಪಂ.ಸದಸ್ಯರುಗಳಾದ ಸೀತಾರಾಮಯ್ಯ, ನವೀನ್ಕೆಂಕೆರೆ ಹಾಗೂ ಇತರ ಮುಖಂಡರೊಂದಿಗೆ ನಾಮಪತ್ರ ಸಲ್ಲಿಸಿದರು.
    ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕೆ.ಎಸ್.ಕಿರಣ್ ಕುಮಾರ್ ರವರು, ನಮ್ಮೊಂದಿಗೆ ನಾಮಪತ್ರ ಸಲ್ಲಿಸಲು ಬಂದಿರುವ ಜನತೆಯನ್ನು ನೋಡಿದರೆ ತಿಳಿಯುತ್ತದೆ ಈ ಬಾರಿ ನನಗೆ ಗೆಲುವು ನಿಶ್ಚಿತ ಎನ್ನುವುದು ಎಂದರಲ್ಲದೆ, ಯುಗಾದಿ ಹಬ್ಬದ ಹಿಂದಿನ ಒಳ್ಳೆಯ ದಿನವಾಗಿರುವುದರಿಂದ ನಾಮಪತ್ರ ಸಲ್ಲಿಸಿದ್ದು, ಒಂದು ನಾಮಪತ್ರ ಸಲ್ಲಿಸಿರುವುದಾಗಿ ತಿಳಿಸಿದರು. ಇನ್ನು 2-3ದಿನದೊಳಗೆ ಭಾಜಪ ಪಕ್ಷದ ಭಿ ಪಾರಂನ್ನು ವರಿಷ್ಠರು ನೀಡಲಿದ್ದಾರೆ ಎಂದರು.
    ನಮ್ಮ ಭಾಜಪ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ, ಯಾರೊಬ್ಬರು ಆಕಾಂಕ್ಷಿಯಾಗಿಯೂ ಇಲ್ಲ, ಬಂಡಾಯವೂ ಎದ್ದಿಲ್ಲ ಎಂದು ತಿಳಿಸಿದರಲ್ಲದೆ ನಾನು ಅಧಿಕಾರದಲ್ಲಿ ಇಲ್ಲದಿದ್ದರೂ ಚಿಕ್ಕನಾಯಕನಹಳ್ಳಿ ತಾಲ್ಲೂಕಿಗೆ  ಹೇಮಾವತಿ ತರಲು ಶ್ರಮವಹಿಸಿ ಯಶಸ್ವಿಯಾಗಿದ್ದೇನೆ, ಮುಂದೆ ಬುಕ್ಕಾಪಟ್ಟಣ ಹೋಬಳಿಯ 80ಹಳ್ಳಿಗಳಿಗೆ ಹೇಮಾವತಿ ನೀರನ್ನು ಒದಗಿಸುವುದು ಮತ್ತು ಹೊಸ ಕೆರೆಗಳ ನಿಮರ್ಾಣಕ್ಕೆ ಒತ್ತು ನೀಡುವುದು, ತಾಲ್ಲೂಕಿಗೆ ಸಕರ್ಾರಿ ಡಿಪ್ಲೊಮೋ ಕಾಲೇಜ್ ತರುವುದು ಹಾಗೂ ಜಡ್ಡುಗಟ್ಟಿರುವ ಆಡಳಿತ ವ್ಯವಸ್ಥೆಗೆ ಚುರುಕು ಮುಟ್ಟಿಸಿ ಬಿಜೆಪಿ ಸಕರ್ಾರ ತಂದಿರುವ ಸಕಾಲ ಯೋಜನೆಯನ್ನು ತಾಲ್ಲೂಕಿನಲ್ಲಿ ಅನುಷ್ಠಾನಗೊಳಿಸುವುದು ನನ್ನ ಆಧ್ಯತೆ ಎಂದರು.
ಮಾಜಿ ಶಾಸಕರೊಬ್ಬರು ಈ ಭಾಗಕ್ಕೆ ಹೇಮಾವತಿ ತರಲು ಯಾರಾದರೂ ಯಶಸ್ವಿಯಾದರೆ ರಾಜಕೀಯ ನಿವೃತ್ತಿ ಹೊಂದುತ್ತೇನೆ ಎಂದು ಹೇಳಿದ್ದರು, ಆದರೆ ಜಟ್ಟಿ ನೆಲಕ್ಕಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತೆ ತಮ್ಮ ನಡಯನ್ನು ಸಮಥರ್ಿಸಿಕೊಳ್ಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರಲ್ಲದೆ ಜೆಡಿಎಸ್ ತಮಗೆ ಪ್ರತಿಸ್ಪಧರ್ಿ ಎಂದರು.