Wednesday, December 2, 2015


ಚಿಕ್ಕನಾಯಕನಹಳ್ಳಿಯನ್ನು ಚಿಕ್ಕನಾಯಕನಗರ ಮಾಡುವ ಬಗ್ಗೆ ಸ್ಪಷ್ಟ ಅಭಿಪ್ರಾಯಕ್ಕೆ ಸಕರ್ಾರದ ಕಂದಾಯ ಇಲಾಖೆಯಿಂದ ಪತ್ರ 
ಚಿಕ್ಕನಾಯಕನಹಳ್ಳಿ, : ಚಿಕ್ಕನಾಯಕನಹಳ್ಳಿಯನ್ನು ಚಿಕ್ಕನಾಯಕನಗರ ಎಂದು ಬದಲಾವಣೆ ಮಾಡುವ ಬಗ್ಗೆ  ಸಕರ್ಾರದ ಪ್ರಧಾನ ಕಾರ್ಯದಶರ್ಿಗಳಿಂದ ತುಮಕೂರು ಜಿಲ್ಲಾಧಿಕಾರಿಗಳವರಿಗೆ ಈ ಬಗ್ಗೆ ಸ್ಪಷ್ಟ ಅಭಿಪ್ರಾಯದೊಂದಿಗೆ ನಿಗದಿತ ನಮೂನೆಯಲ್ಲಿ ಸಕರ್ಾರಕ್ಕೆ ಪ್ರಸ್ತಾವನೆ ಸಲ್ಲಿಸಲು ಕಂದಾಯ ಇಲಾಖೆ ಪತ್ರ ಬರೆದಿದೆ ಎಂದು  ಕ.ರ.ವೇ ತಾಲೂಕು ಘಟಕದ ಅಧ್ಯಕ್ಷ ಸಿ.ಟಿ.ಗುರುಮೂತರ್ಿ ತಿಳಿಸಿದ್ದಾರೆ.
ಚಿಕ್ಕನಾಯಕನಗರ ಎಂದು ಹೆಸರನ್ನು ಬದಲಾವಣೆ ಮಾಡುವ ಬಗ್ಗೆ ತಾಲ್ಲೂಕಿನ ಕನರ್ಾಟಕ ರಕ್ಷಣಾ ವೇದಿಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ, ವಿರೋಧ ಪಕ್ಷದ ನಾಯಕರಾದ ಜಗದೀಶ್ಶೆಟ್ಟರ್ರವರಿಗೆ, ಹೆಚ್.ಡಿ.ಕುಮಾರಸ್ವಾಮಿಯವರಿಗೆ, ತುಮಕೂರಿನ ಜಿಲ್ಲಾಧಿಕಾರಿಗಳು ಹಾಗೂ ಶಾಸಕರಿಗೆ ಮನವಿ ಪತ್ರ ಸಲ್ಲಿಸಿದ್ದರು,
 ಸ್ಥಳ ಬದಲಾವಣೆಯ ಬಗ್ಗೆ ಭಾರತ ಸಕರ್ಾರದ ಗೃಹ ಮಂತ್ರಾಲಯ ಮಾರ್ಗಸೂಚಿಯನ್ನು ಹೊರಡಿಸಿದ್ದು ಈ ಮಾರ್ಗಸೂಚಿಗಳನ್ವಯ ಪರಿಶೀಲಿಸಿ, ಸ್ಪಷ್ಟ ಅಭಿಪ್ರಾಯದೊಂದಿಗೆ ನಿಗದಿತ ನಮೂನೆಯಲ್ಲಿ ಪ್ರಸ್ತಾವನೆಯನ್ನು ಸಲ್ಲಿಸಲು ಕಂದಾಯ ಇಲಾಖೆಯ ಅಧಿಕಾರಿಗಳು  ತಹಶೀಲ್ದಾರ್ರವರಿಗೆ ಪತ್ರವನ್ನು ಕಳುಹಿಸಿದ್ದಾರೆ. 
ಈ ವಿಚಾರವಾಗಿ ಪಟ್ಟಣದ ವಿವಿಧ ಸಂಘ ಸಂಸ್ಥೆಗಳಾದ ತಾ.ಕನ್ನಡ ಸಾಹಿತ್ಯ ಪರಿಷತ್, ದಲಿತ ಸಂಘರ್ಷ ಸಮಿತಿ, ಕನರ್ಾಟಕ ರಾಜ್ಯ ನೌಕರರ ಸಂಘ ತಾಲ್ಲೂಕು ಘಟಕ, ಸುಭಾಷ್ ಚಂದ್ರಬೋಸ್ ಆಟೋಚಾಲಕರ ಮತ್ತು ಮಾಲೀಕರ ಸಂಘ, ಪತ್ರಕರ್ತರ ಸಂಘ, ರೈತ ಸಂಘ ಹಸಿರು ಸೇನೆ, ವಿವಿಧ ಸಾಹಿತಿಗಳು, ತಾಲ್ಲೂಕು ದಿನಸಿವರ್ತಕರ ಸಂಘ, ಕಾಮರ್ಿಕ ಸಂಘಟನೆ, ಶ್ರೀ ಮಲ್ಲಿಕಾಜರ್ುನದೇಶೀಕೇಂದ್ರಸ್ವಾಮಿಗಳು ತಮ್ಮಡಿಹಳ್ಳಿ ಮಠ, ಚಿನ್ನಬೆಳ್ಳಿ ವ್ಯಾಪಾರಿಗಳ ಸಂಘ, ರಸ್ತೆಬದಿ ವ್ಯಾಪಾರಿಗಳ ಸಂಘ, ವಿದ್ಯಾಥರ್ಿ ಸಂಘಟನೆಗಳು, ನೇಕಾರರ ಒಕ್ಕೂಟ, ಕಂಬಳಿ ನೇಕಾರರು, ರೇಷ್ಮೆನೇಕಾರರ ಒಕ್ಕೂಟ, ಸವಿತಾ ಸಮಾಜ, ಕನರ್ಾಟಕ ರಕ್ಷಣಾ ವೇದಿಕೆ, ನಾಡಜಾಗೃತಿ ವೇದಿಕೆ, ಟಿಪ್ಪುಸುಲ್ತಾನ್ ಕಮಿಟಿ ಮುಂತಾದ ಸಂಘ ಸಂಸ್ಥೆಗಳ 2ಸಾವಿರ ಜನರ ಸಹಿಗಳು ಫೆಬ್ರವರಿ 20ರ 2015ರಂದು ಜಿಲ್ಲಾ ಉಸ್ತುವಾರಿ ಸಚಿವರಾದ ಜಯಚಂದ್ರರವರು ಹಾಗೂ ಸಂಸದ ಮುದ್ದಹನುಮೇಗೌಡರಿಗೂ ಮನವಿ ಸಲ್ಲಿಸಿದ್ದರು.


ಗೋಡೆಕೆರೆಯಲ್ಲಿ ಲಕ್ಷದೀಪೋತ್ಸವದ ಅಂಗವಾಗಿ ಕಬಡ್ಡಿ ಪಂದ್ಯಾವಳಿ
ಚಿಕ್ಕನಾಯಕನಹಳ್ಳಿ,ಡಿ.02 : ತಾಲ್ಲೂಕಿನ ಗೋಡೆಕೆರೆಯ ಗುರುಸಿದ್ದರಾಮೇಶ್ವರಸ್ವಾಮಿ ಕಾತರ್ಿಕ ಮಾಸದ ಲಕ್ಷದೀಪೋತ್ಸವದ ಅಂಗವಾಗಿ ರಾಜ್ಯ ಮಟ್ಟದ ಅಮೆಚೂರ್ ಕಬಡ್ಡಿ ಸಂಸ್ಥೆಯ ಸಹಯೋಗದೊಂದಿಗೆ ಜಗೋಸಿರಾ ಕಪ್-2015 ರಾಜ್ಯಮಟ್ಟದ ಪುರುಷರ ಖಾಸಗಿ ತಂಡಗಳ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಡಿ.7ರಿಂದ 9ರವರೆಗೆ ನಡೆಯಲಿದೆ.
ಗೋಡೆಕೆರೆಯ ತಪೋವನದಲ್ಲಿ ಕಬಡ್ಡಿ ಪಂದ್ಯಾವಳಿ ನಡೆಯಲಿದೆ. ಪ್ರಥಮ ಬಹುಮಾನ 40ಸಾವಿರ ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಬಹುಮಾನ 25ಸಾವಿರ ಹಾಗೂ ಟ್ರೋಪಿ, ಸೆಮಿಫೈನಲ್ನಲ್ಲಿ ಪರಾಜಿತ ತಂಡಗಳಿಗೆ ತಲಾ 10ಸಾವಿರ ರೂಪಾಯಿ ಹಾಗೂ ಆಕರ್ಷಕ ಟ್ರೋಫಿ ಇದೆ ಎಂದು ಲಾಲ್ಬಹದ್ದೂರ್ ಶಾಸ್ತ್ರೀ ಕ್ರೀಡಾ ಸಂಘ ಪ್ರಕಟಣೆಯಲ್ಲಿ ತಿಳಿಸಿದೆ.
ಕಾರ್ಯಕ್ರಮ ಡಿ.7ರಂದು ಬೆಳಗ್ಗೆ 7.30ಕ್ಕೆ ಉದ್ಘಾಟನೆ ನೆರವೇರಲಿದ್ದು ಗೋಡೆಕೆರೆ ಮಠದ ಮೃತ್ಯುಂಜಯದೇಶೀಕೇಂದ್ರಸ್ವಾಮೀಜಿ ಹಾಗೂ ಸಿದ್ದರಾಮದೇಶೀಕೇಂದ್ರಸ್ವಾಮಿಗಳು ದಿವ್ಯ ಸಾನಿದ್ಯ ವಹಿಸುವರು. ಮಾಜಿ ಸಂಸದ ಜಿ.ಎಸ್.ಬಸವರಾಜು ಕಾರ್ಯಕ್ರಮ ಉದ್ಘಾಟಿಸುವರು. ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸುವರು. ಗೋಡೆಕೆರೆಯ ಎಲ್.ಬಿ.ಎಸ್.ಸಿ ಗೌರವಾಧ್ಯಕ್ಷ ಎನ್.ಆರ್.ಆದರ್ಶಕುಮಾರ್ರವರಿಂದ ಆಶಯ ನುಡಿ. ನಿವೃತ್ತ ಐ.ಎ.ಎಸ್.ಅಧಿಕಾರಿ ಡಾ.ಸಿ.ಸೋಮಶೇಖರ್, ಮಾಜಿ ಶಾಸಕಕರುಗಳಾದ ಜೆ.ಸಿ.ಮಾಧುಸ್ವಾಮಿ, ಕೆ..ಎಸ್.ಕಿರಣ್ಕುಮಾರ್, ಜಿ.ಪಂ.ಸದಸ್ಯ ಹೆಚ್.ಬಿ.ಪಂಚಾಕ್ಷರಿ, ತಾ.ಪಂ.ಸದಸ್ಯರಾದ ಎಂ.ಎಂ.ಜಗದೀಶ್, ಎ.ಬಿ.ರಮೇಶ್ಕುಮಾರ್, ತುಮಕೂರು ಜಿಲ್ಲಾ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ಹಳೆಮನೆ ಶಿವನಂಜಪ್ಪ, ಸುರೇಶ್ ಹಳೆಮನೆ ಮತ್ತಿತರರು ಭಾಗವಹಿಸುವರು.
ಡಿ.8ರಂದು ಸಂಜೆ 7.30ಕ್ಕೆ ಸಮಾರಂಭ ನಡೆಯಲಿದ್ದು ಸಂಸದ ಎಸ್.ಪಿ.ಮುದ್ದಹನುಮೇಗೌಡ ಅಧ್ಯಕ್ಷತೆ ವಹಿಸುವರು. ತು.ಜಿ.ಯುವ ಕಾಂಗ್ರೆಸ್ ಅಧ್ಯಕ್ಷ ಆರ್.ರಾಜೇಂದ್ರ, ಟೂಡಾ ಅಧ್ಯಕ್ಷ ಶಿವಮೂತರ್ಿ, ಕಾಂಗ್ರೆಸ್ ಮುಖಂಡ ಸಾಸಲು ಸತೀಶ್, ಗೋಡೆಕೆರೆ ಗ್ರಾ.ಪಂ.ಅಧ್ಯಕ್ಷೆ ದ್ರಾಕ್ಷಾಯಿಣಿ ಕೆಂಪರಾಜು ಹಾಗೂ ಚಲನಚಿತ್ರ ಹಾಸ್ಯ ನಟ ಚಿಕ್ಕಣ್ಣ ಮತ್ತಿತರರು ಭಾಗವಹಿಸುವರು.
ಡಿ.9ರಂದು ನಡೆಯುವ ಸಮಾರೋಪ ಸಮಾರಂಭ ರಾತ್ರಿ 9ಕ್ಕೆ ಆರಂಭವಾಗಲಿದೆ. ಶಾಸಕ ಸಿ.ಬಿ.ಸುರೇಶ್ಬಾಬು ಅಧ್ಯಕ್ಷತೆ ವಹಿಸುವರು. ಜೆ.ಡಿ.ಎಸ್ ಮುಖಂಡ ಬಿ.ಎಂ.ಎಲ್ ಕಾಂತರಾಜು, ಜೆಡಿಎಸ್ ಜಿ.ಪ್ರ.ಕಾರ್ಯದಶರ್ಿ ಜಿ.ನಾರಾಯಣ್ ಬಹುಮಾನ ವಿತರಿಸುವರು. ಮುಖಂಡರುಗಳಾದ ಕಲ್ಲೇಶ್, ಹನುಮಂತೇಗೌಡ, ಶ್ರೀಕಾಂತ್, ಬಿ.ಎನ್.ಶಿವಪ್ರಕಾಶ್, ವಿ.ಜಯರಾಂ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು ಮಾಜಿ ಅಂತರಾಷ್ಟ್ರೀಯ ಕಬಡ್ಡಿ ಆಟಗಾರ ಬಿ.ಸಿ.ರಮೇಶ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ  ಕಬಡ್ಡಿ ತಂಡಗಳು ಭಾಗವಹಿಸುವಂತೆ ಮನವಿ ಮಾಡಿದ್ದಾರೆ.


                                   
ಚಿಕ್ಕನಾಯಕನಹಳ್ಳಿ ಪಟ್ಟಣದ ರೋಟರಿ ಶಾಲೆ ವತಿಯಿಂದ ಸಕರ್ಾರಿ ಉದರ್ು ಶಾಲೆ ಹಾಗೂ ನೀರಬಾಗಿಲು ಶಾಲೆಯ ವಿದ್ಯಾಥರ್ಿಗಳಿಗೆ ಉಚಿತ ಪುಸ್ತಕ, ಪೆನ್ನು ಜಾಮಿಟ್ರಿ ಬಾಕ್ಸ್ ವಿತರಿಸಲಾಯಿತು. ರೋಟರಿ ಟ್ರಸ್ಟ್ನ  ನಿದರ್ೇಶಕ ಚಾಂದ್ಪಾಷ, ಶಾಲೆಯ ಮುಖ್ಯೋಪಾಧ್ಯಾಯರಾದ ಬಿ.ಕೆ.ಮಂಜುನಾಥ್, ಶಿಕ್ಷಕರಾದ ಅಪ್ರೋಜಾ, ರಿಜ್ವಾನ್ ಉಪಸ್ಥಿತರಿದ್ದರು.


ರಾಜ್ಯಮಟ್ಟದ ಇನ್ಸ್ಪೈರ್ ಅವಾಡರ್್ಗೆ ತಾಲ್ಲೂಕಿನ ಬರಕನಾಳು ವಿದ್ಯಾಥರ್ಿ ದರ್ಶನ್ಕುಮಾರ್
ಚಿಕ್ಕನಾಯಕನಹಳ್ಳಿ,: ರಾಜ್ಯ ಮಟ್ಟದ ಇನ್ಸ್ಪೈರ್ ಅವಾಡರ್್ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ತಾಲೂಕಿನ ಬರಕನಾಳು ಗ್ರಾಮದ  ಶ್ರೀ ವಿಶ್ವಭಾರತಿ ಪ್ರೌಢಶಾಲೆಯ ವಿದ್ಯಾಥರ್ಿ ದರ್ಶನ್ಕುಮಾರ್ ಕೆ.ಆರ್. ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವುದಕ್ಕೆ   ಬಿ.ಇ.ಓ.ಕೃಷ್ಣಮೂತರ್ಿ ವಿದ್ಯಾಥರ್ಿಯನ್ನು ಅಭಿನಂದಿಸಿದ್ದಾರೆ.
ನವದೆಹಲಿಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ರಾಜ್ಯ ಶಿಕ್ಷಣ ಸಂಶೋಧನಾ ಮತ್ತು ತರಬೇತಿ ಸಂಸ್ಥೆ ನಡೆಸಿದ ಈ ಸ್ಪಧರ್ೆಯಲ್ಲಿ ರಾಜ್ಯವನ್ನು ಪ್ರತಿನಿಧಿಸಲಿದ್ದು,  10ನೇ ತರಗತಿ ಓದುತ್ತಿರುವ ದರ್ಶನ್ಕುಮಾರ್ ಡೆಲ್ಲಿಯಲ್ಲಿ ನಡೆಯುವ ಸ್ಪಧರ್ೆಯಲ್ಲಿ ಭಾಗವಹಿಸಲಿದ್ದಾನೆ.
ಈತ ತಯಾರಿಸಿರುವ ಬಹು ಉಪಯೋಗಿ ಕೃಷಿ ಯಂತ್ರ(ರೈತ ಮಿತ್ರ) ಎಂಬ ಸಲಕರಣೆಯು ಐದು ಯಂತ್ರಗಳು ಮಾಡುವ ಕೆಲಸವನ್ನು ಒಂದೇ ಯಂತ್ರ ಮಾಡಲಿದ್ದು, ಈ ಯಂತ್ರವು  ರಾಜ್ಯ ಮಟ್ಟದ ಸ್ಪಧರ್ೆಯಲ್ಲಿ ಮೆಚ್ಚುಗೆ ಗಳಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದೆ.  ಈ ಯಂತ್ರವು ಹೈಡ್ರಾಲಿಕ್ ತತ್ವದ ಆಧಾರದ ಮೇಲೆ ಕೆಲಸ ನಿರ್ವಹಿಸಲಿದ್ದು, ಪ್ಯಾಸ್ಕಲ್ ನಿಯಮದ ತತ್ವವನ್ನು ಹೊಂದಿದೆ.
ಈ ಯಂತ್ರದಿಂದ ಹೊಲಗಳಲ್ಲಿ ಗೊಬ್ಬರ ಚೆಲ್ಲುವುದು, ಉಳುಮೆ ಮಾಡುವುದು, ಹುಲ್ಲನ್ನು ಕತ್ತರಿಸುವುದು, ಗುಂಡಿ ತೋಡುವುದು, ಔಷಧಿ ಸಿಂಪಡಣೆ ಮಾಡುವುದು. ಈ ಐದು ಕೆಲಸಗಳನ್ನು ಈ ಒಂದು ಯಂತ್ರವೇ  ನಿರ್ವಹಿಸುವುದರಿಂದ ಕೂಲಿ ಕಾಮರ್ಿಕರ ಬಳಕೆಯನ್ನು ಕಡಿಮೆ ಮಾಡಬಹುದು, ಕಾಮರ್ಿಕರ ಕೊರತೆಯನ್ನು ನಿವಾರಣೆ ಮಾಡುವುದು ಹಾಗೂ ಆಥರ್ಿಕ ತೊಂದರೆಯನ್ನು ನಿವಾರಣೆ ಮಾಡಲು ಇದೊಂದು ಒಳ್ಳೆಯ ಸಾಧನವಾಗಿದೆ. ಈ ವಿದ್ಯಾಥರ್ಿಗೆ ಶಿಕ್ಷಕ ಉಮೇಶ್ ಕೆ.ಎಂ. ಮಾರ್ಗದರ್ಶನ ಮಾಡಿದ್ದಾರೆ. ವಿದ್ಯಾಥರ್ಿಯನ್ನು ಶಾಲೆಯ ಮುಖ್ಯೋಪಾಧ್ಯಾಯ ಅನಂತರಾಜು ಅಭಿನಂದಿಸಿದ್ದಾರೆ.