Friday, September 5, 2014

ಸಾಮಾಜಿಕ  ತಾರತಮ್ಯ ಹೊಗಲಾಡಿಸಿ ಹಳ್ಳಿಗಳ ಅಭಿವೃದ್ದಿಗೆ ಶಿಕ್ಷಕರು ಶ್ರಮಿಸುವುದು ಅಪೇಕ್ಷಣೀಯ: ಶಾಸಕ ಸಿ.ಬಿ.ಎಸ್.

ಚಿಕ್ಕನಾಯಕನಹಳ್ಳಿ,ಸೆ.05 : ಸಮಾಜದ ಪರಿವರ್ತನೆ ಶಿಕ್ಷಕರಿಂದ ಮಾತ್ರ ಸಾಧ್ಯ, ತಾವು ಹೋಗುವ ಹಳ್ಳಿಗಳ ಅಭಿವೃದ್ದಿ, ಪರಿಸರ ಹಾಗೂ ಹಳ್ಳಿಗಳಲ್ಲಿ ಇರುವ ಸಾಮಾಜಿಕ ಸಮಸ್ಯೆಗಳನ್ನು ಹೋಗಲಾಡಿಸಲು ಶ್ರಮಿಸುವಂತೆ ಶಾಸಕ ಸಿ.ಬಿ.ಸುರೇಶ್ಬಾಬು ಕರೆ ನೀಡಿದರು.
ಪಟ್ಟಣದ ಸಕರ್ಾರಿ ಪ್ರೌಢಶಾಲಾ ಆವರಣದಲ್ಲಿ ಡಾ.ರಾಧಾಕೃಷ್ಣನ್ರವರ 127ನೇ ಜನ್ಮದಿನಾಚಾರಣೆ ಅಂಗವಾಗಿ ನಡೆದ ಶಿಕ್ಷಕರ ದಿನಾಚಾರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಅವರು, ಶಿಕ್ಷಕರು ಸಮಾಜವನ್ನು ತಿದ್ದುವ ಕೆಲಸ ಮಾಡಬೇಕು, ಖಾಸಗಿ ಶಾಲೆಗಳಿಗಿಂತ ಸಕರ್ಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಕರನ್ನು ಹೊಂದಿದ್ದು ಸಮಾಜ ಶಿಕ್ಷಕರ ಮೇಲೆ ಅಪಾರ ನಂಬಿಕೆ ಇಟ್ಟಿದೆ, ಶಿಕ್ಷಕರು ವಿದ್ಯಾಥರ್ಿಗಳ ಸರ್ವತೋಮುಖ ಅಭಿವೃದ್ದಿಯ ಕಡೆ ಗಮನ ಹರಿಸಿ ಜಿ.ಪಂ.ಸದಸ್ಯೆ ಲೋಹಿತಬಾಯಿ ಮಾತನಾಡಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಶಿಕ್ಷಕರಾಗಿ, ಶಿಕ್ಷಕಣ ತಜ್ಞರಾಗಿ, ರಾಷ್ಟ್ರಪತಿಗಳಾಗಿ ಕರ್ತವ್ಯ ನಿರ್ವಹಿಸಿದ್ದರೂ ತಮ್ಮ ಜನ್ಮದಿನಾಚಾರಣೆ ಬದಲಾಗಿ ಶಿಕ್ಷಕರ ದಿನಾಚಾರಣೆ ಆಚರಿಸುವಂತೆ ಹೇಳಿ ನಮಗೆಲ್ಲರಿಗೂ ಆದರ್ಶಪ್ರಾಯರಾಗಿದ್ದಾರೆ, ಭಾರತದ ಸಂಸ್ಕೃತಿ ಆದರ್ಶಗಳ ಬಗ್ಗೆ ಮಕ್ಕಳಿಗೆ ತಿಳಿಹೇಳಿ ಎಂದ ಅವರು ಮಕ್ಕಳ ಸರಿತಪ್ಪುಗಳನ್ನು ತಿದ್ದುವ ಮೂಲಕ ಮಕ್ಕಳಲ್ಲಿ ಜಾಗೃತಿ ಮೂಡಿಸುವಂತೆ ಸಲಹೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ತಾ.ಪಂ.ಅಧ್ಯಕ್ಷೆ ಲತಾ ಕೇಶವಮೂತರ್ಿ ಮಾತನಾಡಿ ಶಿಕ್ಷಕರು ಮಕ್ಕಳ ಮನಸ್ಸನ್ನು ಅರ್ಥ ಮಾಡಿಕೊಂಡು ಪಾಠ ಹೇಳುವ ಮೂಲಕ ಮಕ್ಕಳ ಸವರ್ಾಂಗೀಣ ಅಭಿವೃದ್ದಿಗೆ ಶ್ರಮಿಸುವಂತೆ ಸಲಹೆ ನೀಡಿದರು.
ಮಾಜಿ ಶಾಸಕ ಬಿ.ಲಕ್ಕಪ್ಪ ಮಾತನಾಡಿ ಶಿಕ್ಷಕರು ತಮ್ಮ ಜವಬ್ದಾರಿಯನ್ನು ಅರಿತು ಕರ್ತವ್ಯ ನಿರ್ವಹಿಸಿ, ಸರಿಯಾಗಿ ಕರ್ತವ್ಯ ನಿಭಾಯಿಸದೆ ಹೋದರೆ ಮಕ್ಕಳಿಗೆ ದ್ರೋಹ ಮಾಡಿದಂತಾಗುತ್ತದಲ್ಲದೆ ಸಮಾಜದಲ್ಲಿರುವ ಮೂಢನಂಬಿಕೆಗಳನ್ನು ತೊಡೆದು ಹಾಕುವುದು ಶಿಕ್ಷಕರ ಕರ್ತವ್ಯ ಎಂದರು.
ಪುರಸಭಾಧ್ಯಕ್ಷೆ ಪುಷ್ಟ.ಟಿ.ರಾಮಯ್ಯ ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಜಿ.ಪಂ.ಸದಸ್ಯೆ ಜಾನಮ್ಮರಾಮಚಂದ್ರಯ್ಯ, ತಾ.ಪಂ.ಸದಸ್ಯೆ ಹೇಮಾವತಿ, ಪುರಸಭಾ ಉಪಾಧ್ಯಕ್ಷೆ ನೇತ್ರಾವತಿ, ಜಿ.ಪ್ರಾ.ಶಾ.ಶಿ.ಸಂಘದ ಅದ್ಯಕ್ಷ ಆರ್.ಪರಶಿವಮೂತರ್ಿ, ದೈ.ಶಿ.ಸಂಘದ ಅಧ್ಯಕ್ಷ ಚಿ.ನಾ.ಪುರುಷೋತ್ತಮ್, ಸಿಡಿಪಿಓ ಅನೀಸ್ಖೈಸರ್, ತಾ.ಮು.ಶಿ.ಸಂಘದ ಅಧ್ಯಕ್ಷ ಜಿ.ಕೃಷ್ಣಯ್ಯ, ಶಿಕ್ಷಕರಾದ ಹೆಚ್.ಎಂ.ಸುರೇಶ್, ತಿಮ್ಮರಾಯಪ್ಪ, ತಹಶೀಲ್ದಾರ್ ಕಾಮಾಕ್ಷಮ್ಮ, ಇ.ಓ ಕೃಷ್ಣಮೂತರ್ಿ ಮತ್ತಿತರರು ಉಪಸ್ಥಿತರಿದ್ದರು.
ಬಿ.ಇ.ಓ ಸಾ.ಚಿ.ನಾಗೇಶ್ ಸ್ವಾಗತಿಸಿದರೆ ಎಸ್.ಸಿ. ನಟರಾಜ್ ನಿರೂಪಿಸಿದರು. ಕೃಷ್ಣಯ್ಯ ವಂದಿಸಿದರು.
ತಾಲ್ಲೂಕು ಪ್ರವಾಸಿ ಮಂದಿರದಿಂದ ಹೊರಟ ಸರ್ವಪಲ್ಲಿ ರಾಧಾಕೃಷ್ಣನ್ರವರ ಭಾವಚಿತ್ರದ ಮೆರವಣಿಗೆ ವಿವಿಧ ಕಲಾತಂಡಗಳೊಂದಿಗೆ ಬಿ.ಹೆಚ್.ರಸ್ತೆ ನೆಹರು ವೃತ್ತದ ಮೂಲಕ ಕಾರ್ಯಕ್ರಮ ಹಮ್ಮಿಕೊಂಡಿದ್ದ ಸಕರ್ಾರಿ ಪ್ರೌಢಶಾಲಾ ಆವರಣಕ್ಕೆ ತೆರಳಿತು.
ಸಮಾರಂಭದಲ್ಲಿ ನಿವೃತ್ತಿ ಹೊಂದಿದ 33 ಶಿಕ್ಷಕರನ್ನು ಹಾಗೂ 13ಮಂದಿ ಶಿಕ್ಷಕರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ, ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ 26ಜನ ಶಿಕ್ಷಕರನ್ನು ಸನ್ಮಾನಿಸಲಾಯಿತು.

ರೈತರ ನೆರವಿಗೆ ಡಿ.ಸಿ.ಸಿ.ಬ್ಯಾಂಕ್ನಿಂದ ನೂತನ ಯೋಜನೆ: ಸಿಂಗದಹಳ್ಳಿ ರಾಜ್ಕುಮಾರ್
ಚಿಕ್ಕನಾಯಕನಹಳ್ಳಿ,ಸೆ.05 : ಸಹಕಾರ ಸಂಘಗಳಲ್ಲಿ ಸಾಲ ಪಡೆದ ರೈತರು ಆಕಸ್ಮಿಕವಾಗಿ ಅಥವಾ ಅಪಘಾತದಲ್ಲಿ ಸಾವನ್ನಪ್ಪಿದರೆ ಅವರ ಕುಟುಂಬಕ್ಕೆ ನೆರವಾಗಲು ಸಾಲ ನೀಡಿದ ಸಹಕಾರ ಸಂಸ್ಥೆಗಳಿಗೆ ಡಿಸಿಸಿ ಬ್ಯಾಂಕ್ ವತಿಯಿಂದ ಒಂದು ಲಕ್ಷ ರೂಗಳನ್ನು ತುಂಬಿ ಕೊಡುವ ಯೋಜನೆಯನ್ನು ಪ್ರಾರಂಭಿಸಲಾಗಿದೆ ಎಂದು ಜಿಲ್ಲಾ ಡಿಸಿಸಿ ಬ್ಯಾಂಕ್ ನಿದರ್ೇಶಕ ಸಿಂಗದಹಳ್ಳಿ ರಾಜ್ಕುಮಾರ್ ಹೇಳಿದರು.
ತಾಲ್ಲೂಕಿನ ಮತಿಘಟ್ಟದ ಪ್ರಾಥಮಿಕ ಕೃಷಿ ಸಹಕಾರ ಸಂಘದಲ್ಲಿ ಸ್ತ್ರೀಶಕ್ತಿ ಹಾಗೂ ಸ್ವಸಹಾಯ ಸಂಘಗಳಿಗೆ ಸಾಲ ಸೌಲಭ್ಯದ ವಿತರಣಾ ಕಾರ್ಯಕ್ರಮದಲ್ಲಿ  ಮಾತನಾಡಿದ ಅವರು, ಕಳೆದೆರಡು ದಿನಗಳ ಹಿಂದೆ ಜಿಲ್ಲಾ ಡಿಸಿಸಿ ಬ್ಯಾಂಕ್ನ ಸಭೆಯಲ್ಲಿ ಈ ನಿರ್ಣಯವನ್ನು ಕೈಗೊಳ್ಳಲಾಗಿದ್ದು ಯೋಜನೆಯೂ ಈ ವರ್ಷದಿಂದಲೇ ಆರಂಭವಾಗಲಿದೆ, ಡಿಸಿಸಿ ಬ್ಯಾಂಕ್ ಹಾಗೂ ಸಹಕಾರ ಸಂಘದ ಸದಸ್ಯರುಗಳ ಮಕ್ಕಳು ಎಸ್.ಎಸ್.ಎಲ್.ಸಿ, ಪಿಯುಸಿಯಲ್ಲಿ ಅತಿ ಹೆಚ್ಚಿನ ಅಂಕ ಪಡೆದ ವಿದ್ಯಾಥರ್ಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ, ಇದೇ ಸೆಪ್ಟಂಬರ್ 10ನೇ ತಾರೀಖಿನೊಳಗೆ ಹೆಚ್ಚಿನ ಅಂಕ ಪಡೆದ ಸದಸ್ಯರ ಮಕ್ಕಳು ಪ್ರತಿಭಾ ಪುರಸ್ಕಾರಕ್ಕೆ ಅಜರ್ಿ ಸಲ್ಲಿಸುವಂತೆ ತಿಳಿಸಿದರು.
ಸ್ತ್ರೀಶಕ್ತಿ ಸಂಘ, ಸ್ವಸಹಾಯ ಸಂಘಗಳಿಗೆ ಮಾತ್ರ ಸಾಲ ನೀಡುತ್ತಿದ್ದ ಡಿಸಿಸಿ ಬ್ಯಾಂಕ್, ಆರಂಭಿಸಿರುವ ಯೋಜನೆಯಲ್ಲಿ ಜಂಟಿ ಭದ್ರತಾ ಯೋಜನೆಯೂ ಒಂದಾಗಿದ್ದು ವ್ಯಾಪಾರ ಮಾಡುತ್ತಿರುವವರು ಸಂಘ ರಚಿಸಿಕೊಂಡರೆ ಅವರಿಗೂ ಸಾಲದ ನೆರವು ನೀಡುವ ಮೂಲಕ ವ್ಯಾಪಾರಸ್ಥರ ಏಳಿಗೆಗೂ ಮುಂದಾಗುತ್ತಿದೆ ಎಂದರು.
ಡಿಸಿಸಿ ಬ್ಯಾಂಕ್ ವತಿಯಿಂದ ರೈತರಿಗಾಗಿ ಕಿಸಾನ್ ಕ್ರೆಡಿಟ್ ಸಾಲವನ್ನು ಶೂನ್ಯ ಬಡ್ಡಿ ದರದಲ್ಲಿ ಸಾಲವನ್ನು ನೀಡಲಾಗುತ್ತಿದೆ ಎಂದರಲ್ಲದೆ ಮತಿಘಟ್ಟ ಸಹಕಾರ ಸಂಘಕ್ಕೆ ಸಾಲವಾಗಿ 12.90ಲಕ್ಷ ರೂ ಸಾಲವನ್ನು ವಿತರಿಸಲಾಗಿದೆ ಎಂದರು. ಹಿಂದಿನಿಂದಲೂ ಮತಿಘಟ್ಟ ಸಹಕಾರ ಸಂಘ ಉತ್ತಮ ರೀತಿಯಲ್ಲಿ ಆಡಳಿತವನ್ನು ನಡೆಸಿಕೊಂಡು ಬಂದಿದ್ದು, ಒಂದಕ್ಕೊಂದು ಸಂಘ ಸಂಸ್ಥೆಗಳು ಸಹಕಾರ ನೀಡಿದಾಗ ಆ ಭಾಗದ ಸಂಘ, ಸಂಸ್ಥೆಗಳು ರೈತರು, ಬಡವರನ್ನು ಆಥರ್ಿಕವಾಗಿ ಮೇಲೆತ್ತಲು ಸಹಾಯ ಮಾಡುತ್ತವೆ ಎಂದರು.
ಮತಿಘಟ್ಟ ಭಾಗದ ಎಲ್ಲಾ ಹಳ್ಳಿಗಳ ರೈತರಿಗೂ ಸಾಲದ ಯೋಜನೆ ಅನುಕೂಲವಾಗಲು ಮುಂದೆಯೂ ಹೊಸ ಸಾಲ ನೀಡಲಾಗುವುದು, ಸಾಲ ಪಡೆದವರು ಮರು ಪಾವತಿ ಮಾಡಿದರೆ ಇನ್ನಷ್ಟು ಸಾಲವನ್ನು ನೀಡಬಹುದು ಎಂದರಲ್ಲದೆ ಹೊಸದಾಗಿ ಬಂದಂತಹ ಸಕರ್ಾರಗಳು ಸಾಲ ಪಡೆದ ರೈತರಿಗೆ ನೆರವಾಗಲೂ ಯೋಜನೆಗಳನ್ನು ಜಾರಿಗೆ ತರುವ ಮೂಲಕ ರೈತರಿಗೆ ನೆರವಾಗುತ್ತಿವೆ, ಅದೇ ರೀತಿ ಪ್ರತಿ ರೈತರಿಗೂ ಬ್ಯಾಂಕ್ ವತಿಯಿಂದ ಸಾಲ ನೀಡಿ ಅವರಿಗೆ ಸಕರ್ಾರದಿಂದ ಸಿಗುವ ಅನುಕೂಲ ನೀಡುವುದು ಬ್ಯಾಂಕಿನ ಗುರಿಯಾಗಿದೆ ಎಂದರಲ್ಲದೆ ಸಾಲ ಪಡೆದವರು ವ್ಯವಸಾಯದ ಜೊತೆ ಉಪಕಸುಬುಗಳನ್ನು ಮಾಡುವಂತೆ ಅದಕ್ಕೆ ಬೇಕಾದ ಸಹಾಯವನ್ನು ಬ್ಯಾಂಕ್ ಹಾಗೂ ಸೊಸೈಟಿಯಿಂದ ನೀಡುವುದಾಗಿಯೂ ತಿಳಿಸಿದರು.
ಮತಿಘಟ್ಟ ಪ್ರಾಥಮಿಕ ಕೃಷಿ ಸಹಕಾರ ಸಂಘದ ಅಧ್ಯಕ್ಷ ನಾಗರಾಜು ಮಾತನಾಡಿ, ರೈತರು ಆಥರ್ಿಕವಾಗಿ ಸದೃಢವಾಗಲು ಜಿಲ್ಲಾ ಬ್ಯಾಂಕ್ ಸಾಲ ಸೌಲಭ್ಯವನ್ನು ನೀಡುತ್ತಿದ್ದು ಸಾಲ ಪಡೆದವರು ಮರುಪಾವತಿ ಮಾಡಿದರೆ ಮತ್ತಷ್ಟು ಹೆಚ್ಚಿನ ಸಾಲ ಪಡೆಯಬಹುದು ಎಂದು ತಿಳಿಸಿದ ಅವರು ಕಾಮಲಾಪುರದಲ್ಲಿ ಸಹಕಾರ ಸಂಘದ ಕಟ್ಟಡ ಕಟ್ಟಿಸುವ ಯೋಜನೆಯಿದ್ದು ಇದಕ್ಕೆ ಡಿ.ಸಿ.ಸಿ.ಬ್ಯಾಂಕ್ನ ಸಹಕಾರದ ಅಗತ್ಯವಿದೆ ಎಂದು ತಿಳಿಸಿದರು.
ತಾ.ಪಂ.ಸದಸ್ಯ ನಿರಂಜನಮೂತರ್ಿ ಮಾತನಾಡಿ ಸಹಕಾರ ಸಂಘಗಳು ಅಕ್ಕಿ, ಗೋಧಿ ಕೊಡಲು ಮಾತ್ರ ಸೀಮಿತವಲ್ಲ, ರೈತರ ಸಂಕಷ್ಟಕ್ಕೆ ನೆರವಾಗಲು ಸಾಲ ಸೌಲಭ್ಯವನ್ನು ನೀಡುತ್ತದೆ, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ನ ಸಹಕಾರದಿಂದ ಮತಿಘಟ್ಟ ಸಹಕಾರ ಸಂಘ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು ಇದರಿಂದ ರೈತರಿಗೆ ಹೆಚ್ಚಿನ ಅನುಕೂಲವಾಗುತ್ತಿದೆ ಎಂದರಲ್ಲದೆ ರೈತರು ರಾಷ್ಟ್ರೀಕೃತ ಬ್ಯಾಂಕ್ಗಳಲ್ಲಿ ಸಾಲ ಪಡೆಯಲು ಪರದಾಡುತ್ತಾರೆ ಆದರೆ ಜಿಲ್ಲಾ ಬ್ಯಾಂಕ್ ಮೂಲಕ ಸಹಕಾರ ಸಂಘಗಳಲ್ಲಿ ಬಡ್ಡಿರಹಿತ ಸಾಲವನ್ನು ಸುಲಭವಾಗಿ ಪಡೆಯತ್ತಿರುವ ಬಗ್ಗೆ ತಿಳಿಸಿದ ಅವರು ಸಾಲ ಪಡೆದಂತೆ ಮರುಪಾವತಿ ಮಾಡುವುದು ರೈತರ ಕರ್ತವ್ಯವಾಗಿದೆ ಎಂದರು.
ರೈತ ಕರಿಯಪ್ಪ ಮಾತನಾಡಿ ಜಿಲ್ಲಾ ಬ್ಯಾಂಕಿನಿಂದ ರೈತರಿಗೆ ಪ್ರತಿ ವರ್ಷ ನೀಡುವ ಸಾಲದ ಯೋಜನೆಯು ವಿಸ್ತಾರವಾಗುತ್ತಿದೆ, ಸಹಕಾರ ಸಂಘಗಳು ನೀಡುತ್ತಿರುವ ಸಾಲದಿಂದ ಹಲವು ಕುಟುಂಬಗಳು ಆಥರ್ಿಕವಾಗಿ ಸದೃಢವಾಗಿವೆ ಎಂದರು.
ಕಾರ್ಯಕ್ರಮದಲ್ಲಿ ಡಿ.ಸಿ.ಸಿ.ಬ್ಯಾಂಕ್ನ  ಮೇಲ್ವಿಚಾರಕ ಎಸ್.ಆರ್.ರಂಗಸ್ವಾಮಿ ಸ್ಥಳೀಯ ಸಹಕಾರ ಬ್ಯಾಂಕಿನ ನಿದರ್ೇಶಕರಾದ ಮಲ್ಲಿಕಣ್ಣ, ಸಿ.ಇ.ಓ ಹನುಮಂತಪ್ಪ, ಮತ್ತಿತರರು ಉಪಸ್ಥಿತರಿದ್ದರು.ಹಾಡುಹಗಲೇ ಮನೆ ಬಾಗಿಲು ಹೊಡೆದು ಮೂರುವರೆ ಲಕ್ಷ ರೂಗಳಿಗೂ ಅಧಿಕ ಮೌಲ್ಯದ ನಗದು ಆಭರಣ ಕಳವು.
ಚಿಕ್ಕನಾಯಕನಹಳ್ಳಿ,ಸೆ.05:  ಪಟ್ಟಣದ ಕೋಟರ್್ ಹಿಂಭಾಗದಲ್ಲಿನ ನಸರ್್ ಮನೆಯೊಂದರಲ್ಲಿ ಹಾಡುಹಗಲೇ ಸುಮಾರು 3.5ಲಕ್ಷಕ್ಕೂ ಅಧಿಕ ಮೌಲ್ಯದ ನಗದು ಹಾಗೂ ಬಂಗಾರದ ಆಭರಣಗಳು ಕಳವಾಗಿರುವ ಪ್ರಕರಣ ನಡೆದಿದೆ.
ಪಟ್ಟಣದ ಸಕರ್ಾರಿ ಆಸ್ಪತ್ರೆಯಲ್ಲಿ ನಸರ್್ ಆಗಿರುವ ವಿಶಾಲಕ್ಷಮ್ಮ ಎಂಬುವರ ಮನೆಯಲ್ಲಿ ಈ ಘಟನೆ ನಡೆದಿದ್ದು, ಅವರು ಸೆ.5ರಂದು ಮಧ್ಯಾಹ್ನ ಸಹದ್ಯೋಗಿಯ ಮಗಳ ನಿಶ್ಚಿಥಾರ್ತಗೆಂದು  ತೆರಳಿದ್ದ ಸಂದರ್ಭದಲ್ಲಿ ಮನೆಯ ಹಿಂಭಾಗಿಲನ್ನು ಬಲವಾದ ಆಯುಧದಿಂದ ಮೀಟಿ ಬಾಗಿಲಿನ ಡೋರ್ ಲಾಕ್ ಹೊಡೆದು ಕೊಠಡಿಯಲ್ಲಿಟ್ಟಿದ್ದ ಬೀರುವಿನಲ್ಲಿದ್ದ ಎರಡುವರೆ ಲಕ್ಷ ರೂ ನಗದು ಹಾಗೂ ನಾಲ್ಕು ಜೊತೆ ಬಂಗಾರದ ಓಲೆಗಳನ್ನು ಕಳವು ಮಾಡಿದ್ದಾರೆ ಎಂದು ಮನೆಯ ಮಾಲೀಕ ಶಿವನಂದಯ್ಯ ತಿಳಿಸಿದರು.
ಈಗಿರುವ ಮನೆಯ ಮಹಡಿ ಮೇಲೆ  ಮೇಲೆ ನೂತನ ಮನೆಯನ್ನು ಕಟ್ಟಲೆಂದು ತಮ್ಮ ಉಳಿತಾಯದ ಹಣವನ್ನು  ನಿನ್ನೆಯಷ್ಟು ತಂದು ಮನೆಯಟ್ಟುಕೊಂಡಿದ್ದಾಗಿ ವಿಶಾಲಮ್ಮ ಹೇಳಿದ್ದರೆ, ಸ್ಥಳಕ್ಕೆ ಸಿ.ಪಿ.ಐ.ಜಯಕುಮಾರ್, ಪಿ.ಎಸ್.ಐ.ಮಹಾಲಕ್ಷ್ಮಮ್ಮ ಹಾಗೂ ಶ್ವಾನ ದಳ ಭೇಟಿ ನೀಡಿತ್ತು. ಚಿ.ನಾ.ಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.